ವಿಷಯಕ್ಕೆ ಹೋಗು

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರ್ಕಾರಿ ಹಿ. ಪ್ರಾ. ಶಾಲೆ, ಕಾಸರಗೋಡು, ಕೊಡುಗೆ: ರಾಮಣ್ಣ ರೈ
ಸಿನಿಮಾ ಪೋಸ್ಟರ್
ನಿರ್ದೇಶನರಿಷಬ್ ಶೆಟ್ಟಿ
ನಿರ್ಮಾಪಕರಿಷಬ್ ಶೆಟ್ಟಿ
ಲೇಖಕರಿಷಬ್ ಶೆಟ್ಟಿ
ಸಂಭಾಷಣೆ:
ಅಭಿಜಿತ್ ಮಹೇಶ್
ರಾಜ್ ಬಿ. ಶೆಟ್ಟಿ
ಚಿತ್ರಕಥೆರಿಷಬ್ ಶೆಟ್ಟಿ
ಕಥೆರಿಷಬ್ ಶೆಟ್ಟಿ
ಪಾತ್ರವರ್ಗಅನಂತ್ ನಾಗ್
ರಂಜನ್
ಸಂಪತ್
ಪ್ರಮೋದ್ ಶೆಟ್ಟಿ
ಸಪ್ತಾ ಪಾವೂರ್
ಮಹೇಂದ್ರ
ಸೋಹನ್ ಶೆಟ್ಟಿ
ಪ್ರಕಾಶ್ ತೂಮಿನಾಡು
ಮನೀಶ್ ಹೇರೂರ್
ಸಂಗೀತವಾಸುಕಿ ವೈಭವ್
ಹಿನ್ನೆಲೆ ಸಂಗೀತ:
ಬಿ.ಅಜನೀಶ್ ಲೋಕನಾಥ್
ಛಾಯಾಗ್ರಹಣಎ. ವೆಂಕಟೇಶ್
ಸಂಕಲನಪ್ರದೀಪ್ ರಾವ್
ಪ್ರತೀಕ್ ಶೆಟ್ಟಿ
ಸ್ಟುಡಿಯೋರಿಷಬ್ ಶೆಟ್ಟಿ ಫಿಲ್ಮ್ಸ್
ವಿತರಕರುಜಯಣ್ಣ ಫಿಲ್ಮ್ಸ್ ಮೂಲಕ ರಿಷಬ್ ಶೆಟ್ಟಿ ಫಿಲ್ಮ್ಸ್
ಬಿಡುಗಡೆಯಾಗಿದ್ದು
  • ಆಗಸ್ಟ್ 24, 2018 (2018-08-24)
ದೇಶಭಾರತ
ಭಾಷೆಕನ್ನಡ
ಬಂಡವಾಳ2 ಕೋಟಿ
ಬಾಕ್ಸ್ ಆಫೀಸ್ಸುಮಾರು 35 ಕೋಟಿ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು : ಕೊಡುಗೆ ರಾಮಣ್ಣ ರೈ ಚಿತ್ರವನ್ನು ರಿಷಭ್ ಶೆಟ್ಟಿ ಅವರು ನಿರ್ಮಿಸಿ, ಬರೆದು, ನಿರ್ದೇಶಿಸಿದ್ದಾರೆ.[೧][೨][೩][೪][೫] ಈ ಚಿತ್ರದಲ್ಲಿ ಗಡಿನಾಡಿನಲ್ಲಿರುವ ಕನ್ನಡ ಶಾಲೆಗಳ ಪರಿಸ್ಥತಿ ಮತ್ತು ಅಲ್ಲಿ ಕನ್ನಡಿಗರಿಗೆ ಉಂಟಾಗುವ ತೊಂದರೆಗಳನ್ನೂ ಈ ಚಿತ್ರದಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಚಿತ್ರದ ಹೆಚ್ಚಿನ ಚಿತ್ರೀಕರಣ ಕಾಸರಗೋಡು , ಮಂಗಳೂರು , ಸುಳ್ಯ ಪರಿಸರದಲ್ಲಿ ನಡೆದಿದ್ದು, ಕೆಲವು ಭಾಗಗಳು ಮಡಿಕೇರಿ ಮತ್ತು ಮೈಸೂರಿನಲ್ಲಿ ನಡೆದಿವೆ.. 


ತಾರಾಗಣ[ಬದಲಾಯಿಸಿ]

  • ಅನಂತ್ ನಾಗ್ :ಅನಂತ ಪದ್ಮನಾಭ. ಪಿ ( ಪಿ ಫಾರ್ ಪಿಕಾಕ್ ) ,  ನಿವೃತ್ತ ಕ್ರಿಮಿನಲ್ ಅಧ್ಯಾಪಕ, ಸ್ವಯಂ ಘೋಷಿತ ಸಾಮಜಿಕ ಕಾರ್ಯಕರ್ತ. 
  • ರಂಜನ್:  7 ನೇ ಗ್ರೇಡ್ ಮೂರು ಬಾರಿ ವಿಫಲವಾದ ವಿದ್ಯಾರ್ಥಿ ಪ್ರವೀಣ ಕುಮಾರ್
  • ಸಂಪತ್ ಕುಮಾರ್: 6 ನೇ ದರ್ಜೆಯ ವಿದ್ಯಾರ್ಥಿ ಮಮ್ಮೊಟ್ಟಿ
  • ಪ್ರಮೋದ್ ಶೆಟ್ಟಿಶಾಂತರಾಮ ಉಪಾಧ್ಯಾಯ , ಒಬ್ಬ ಪ್ರಸಿದ್ಧ ಯಕ್ಷಗಾನ ಕಲಾವಿದ ಮತ್ತು ಕನ್ನಡಪರ ಕಾರ್ಯಕರ್ತ
  • ಸುಪೀತಾ ಶೆಟ್ಟಿ: ಉಪಾಧ್ಯಾಯ ಪತ್ನಿ ವಸಂತ ಉಪಾಧ್ಯಾಯ
  • ಸಪ್ತಾ ಪಾವೂರ್:ಪಲ್ಲವಿ, ಉಪಾಧ್ಯಯನ ಪುತ್ರಿ ಮತ್ತು 7 ನೇ ತರಗತಿಯ ವಿದ್ಯಾರ್ಥಿನಿ
  • ಮಹೇಂದ್ರ ಪ್ರಸಾದ್: ಮಹೇಂದ್ರ , 7 ನೇ ತರಗತಿಯ ವಿದ್ಯಾರ್ಥಿ ಮತ್ತು ಪ್ರವೀಣನ ಅತ್ಯುತ್ತಮ ಸ್ನೇಹಿತ
  • ಮನೀಶ್ ಹೆರೂರ್: 7 ನೇ ತರಗತಿಯ ವಿದ್ಯಾರ್ಥಿ ಮತ್ತು ಪ್ರವೀಣನ ಸ್ನೇಹಿತ
  • ಡೆಮೊಕ್ರಸಿ ಸೋಹನ್ ಶೆಟ್ಟಿ: 7 ನೇ ದರ್ಜೆಯ ವಿದ್ಯಾರ್ಥಿಯ ಸತೀಶ
  • ಪ್ರಕಾಶ ತೂಮಿನಾಡ್ ಭುಜಂಗ : ಅಧಿಕಪ್ರಸಂಗಿ, ಹೊಟ್ಟೆಬಾಕ, ಊರೆಲ್ಲಾ ಖಾಲಿ ಬಿದ್ದುಕೊಂಡು ಇರುವವ
  • ರಮೇಶ್ ಭಟ್ : ಅನಂತ ಪದ್ಮನಾಭ ಸ್ವಾಮೀ ಎಮ್ ( ಎಂ ಫಾರ್ ಮ್ಯಾಚ್ ಫಿಕ್ಸಿಂಗ್ ) ಸಾಮಾಜಿಕ ಕಾರ್ಯಕರ್ತ ಮತ್ತು ಅನಂತ ಪದ್ಮನಾಭ ಸ್ವಾಮೀ ಪಿ ಅವರ ನೆರೆಹೊರೆಯ ವ್ಯಕ್ತಿ
  • ರಿಷಬ್ ಶೆಟ್ಟಿ  : ಮೈಸೂರು ಪೋಲಿಸ್ ಇನ್ಸ್ಪೆಕ್ಟರ್
  • ಶನಿಲ್ ಗುರು: ರಘು , ಉಪಾಧ್ಯಾಯನ ಮನೆಯಲ್ಲಿ ಅಡುಗೆ ಸಹಾಯಕ
  • ಬಾಲಕೃಷ್ಣ ಪಣಿಕ್ಕರ್:  ಕಾಸರಗೋಡು ಸಹಾಯಕ ಶಿಕ್ಷಣ ಅಧಿಕಾರಿ
  • ರಾಧಾಕೃಷ್ಣ : ಸೆಬಾಸ್ಟಿಯನ್, ಕುಡುಕ, ದುಬೈ ನಲ್ಲಿರುವ ಏನ್ ಆರ್ ಐ ಅವರ ಮನೆಯ ಕಾವಲುಗಾರ

ಚಿತ್ರೀಕರಣ [ಬದಲಾಯಿಸಿ]

ಚಿತ್ರೀಕರಣವನ್ನು ಸುಮಾರು 55 ದಿನಗಳ ಕಾಲ ನಡೆಸಲಾಗಿತ್ತು. ಇದನ್ನು ಕಾಸರಗೋಡು, ಕುಂಬ್ಳೆ, ಬೇಕಲಕೋಟೆ, ಅನಂತಪುರ, ಸುಳ್ಯ, ಮಡಿಕೇರಿ, ಮೈಸೂರಿನಲ್ಲಿ ನಡೆಸಲಾಗಿತ್ತು. ಈ ಚಿತ್ರದ ಕೊನೆಯ ಕೋರ್ಟ್ ಸೀನ್ ಅನ್ನು ಕೇವಲ ಸಿಂಗಲ್ ಶಾಟ್ ನಲ್ಲಿ ತೆಗೆಯಲಾಗಿತ್ತು. ಈ ಸೀನ್ ನಲ್ಲಿನ ಅಭಿನಯಕ್ಕೆ ಅನಂತ್ ನಾಗ್ ಅವರನ್ನು ಜನರು ಮೆಚ್ಚಿಕೊಂಡಿದ್ದಾರೆ.[೬]

ಹಾಡುಗಳು[ಬದಲಾಯಿಸಿ]

ಹಿನ್ನಲೆ ಸಂಗೀತವನ್ನು ಬಿ.ಅಜನೀಶ್ ಲೋಕನಾಥ್ ಅವರು ನಿರ್ದೇಶಿಸಿದ್ದಾರೆ. ಹಾಡುಗಳನ್ನು ವಾಸುಕಿ ವೈಭವ್ ಅವರು ಸಂಯೋಜಿಸಿದ್ದಾರೆ. [೭]

Track list
ಸಂ.ಹಾಡುಸಾಹಿತ್ಯಗಾಯಕರುಸಮಯ
1."ಅರೆರೆ ಅವಳ ನಗುವ"ತ್ರಿಲೋಕ್ ತ್ರಿವಿಕ್ರಮವಾಸುಕಿ ವೈಭವ್03:28
2."ನೂರಾರು ಬಣ್ಣಗಳು"ಕೆ. ಕಲ್ಯಾಣ್ಮಾಧುರಿ ಶೇಷಾದ್ರಿ02:51
3."ಹೇ ಶಾರದೆ"ಕೆ. ಕಲ್ಯಾಣ್ಆಶಾ, ಸುನಿಧಿ03:00
4."ದಡ್ಡ ಪ್ರವೀಣ"ತ್ರಿಲೋಕ್ ತ್ರಿವಿಕ್ರಮವಾಸುಕಿ ವೈಭವ್02:53
5."ಬಲೂನ್ ಸಾಂಗ್"ವೀರೇಶ್ ಶಿವಮೂರ್ತಿ, ತ್ರಿಲೋಕ್ ತ್ರಿವಿಕ್ರಮ, ಗೋಕುಲ್ ಅಭಿಶೇಕ್ಜ್ಞಾನೇಶ್ವರ್03:29
6."ಅಲೆಯೋ ಅಲೆಗೆ ಈಗ"ವಾಸುಕಿ ವೈಭವ್ವೆಂಕಟೇಶ್ ಡಿ ಸಿ03:22

ಉಲ್ಲೇಖಗಳು[ಬದಲಾಯಿಸಿ]

  1. Desai, Dhwani (5 July 2018). "A government school plays a pivotal role in Rishab Shetty's". The Times of India. Retrieved 20 March 2019.
  2. "When film titles are sentences". The Hindu.
  3. "It's destination Kasargod for Rishab Shetty's next film". Times of India.
  4. "Meet the life of the sarkari shaale". Times of India.
  5. "What is Kirik Party director up to now?". Times of India.
  6. "Shooting a children's film was a beautiful experience': Rishab Shetty". The New Indian Express.
  7. "A prayer song for kids, sung by kids". Times of India.