ಪ್ರವೀಣ್ ತೇಜ್
ಪ್ರವೀಣ್ ತೇಜ್ | |
---|---|
Born | |
Occupation | ನಟ |
Years active | ೨೦೦೯ - ಪ್ರಸ್ತುತ |
Spouse |
ದೀಪಿಕಾ ನಜ಼್ರೆ (ವಿವಾಹ:2014) |
ಪ್ರವೀಣ್ ತೇಜ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ, ಕನ್ನಡದಲ್ಲಿ ಅವರ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. [೧] ಪ್ರವೀಣ್ ಕನ್ನಡ ಚಲನಚಿತ್ರೋದ್ಯಮದಲ್ಲಿ ಜಾಲಿ ಡೇಸ್ (2009) ಚಿತ್ರದ ಮೂಲಕ ತಮ್ಮ ಮೊದಲ ಚಲನಚಿತ್ರವನ್ನು ಮಾಡಿದರು. [೨] ಅವರು ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ (2016) ಮತ್ತು ಮುಂದಿನ ನಿಲ್ದಾಣ (2019) ದಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. [೩] [೪] [೫]
ಆರಂಭಿಕ ಜೀವನ
[ಬದಲಾಯಿಸಿ]ಪ್ರವೀಣ್ ತೇಜ್ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ 3 ಡಿಸೆಂಬರ್ 1984 ರಂದು ಲಕ್ಷ್ಮಣ ಗೌಡ ಮತ್ತು ಪದ್ಮಾವತಿ ದಂಪತಿಗೆ ಜನಿಸಿದರು.
ವೃತ್ತಿ
[ಬದಲಾಯಿಸಿ]ಅವರು ಜಾಲಿ ಡೇಸ್ (2009) ಚಲನಚಿತ್ರದೊಂದಿಗೆ ಕನ್ನಡ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು, ಅಲ್ಲಿ ಅವರು ಪ್ರಮುಖ ಪಾತ್ರಗಳಲ್ಲಿ ಒಂದಾದ "ಪ್ರವೀಣ" ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸುವರ್ಣ ಟಿವಿಯಲ್ಲಿ ಪ್ರಸಾರವಾದ ಪ್ಯಾಟೆ ಮಂದಿ ಕಾಡಿಗೆ ಬಂದ್ರು (೨೦೧೦) ಕನ್ನಡ ರಿಯಾಲಿಟಿ ಶೋನ ಭಾಗವಾಗಿದ್ದರು. [೬]
ಅವರು ಟಿವಿ ಧಾರಾವಾಹಿ ರಾಧಾ ಕಲ್ಯಾಣ (2012)ದಲ್ಲಿ ನಟಿಸಿದರು, [೭]ಇದು ಜೀ ಕನ್ನಡದಲ್ಲಿ ಪ್ರಸಾರವಾಯಿತು.
ಪ್ರವೀಣ್ ನಂತರ ಅನ್ನಿ ಸಂತೋಷ್ ಗೌಡ ನಿರ್ದೇಶನದ ಆಂತರ್ಯ (2013) ಚಿತ್ರದಲ್ಲಿ ಕೃಷ್ಣನಾಗಿ ನಟಿಸಿದರು. ಅವರು ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ (2016) ಚಿತ್ರದಲ್ಲಿ ಕುಶ್ ಪಾತ್ರವನ್ನು ನಿರ್ವಹಿಸಿದ್ದಾರೆ, ಇದು ಕನ್ನಡದ ಹಿಟ್ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿಯ ಮುಂದುವರಿದ ಭಾಗವಾಗಿದೆ. ಅವರ ಇತರ ಚಿತ್ರಗಳು 5ಜಿ (2017), [೮] ಕುಚಿಕು ಕುಚಿಕು (2018).
ಅವರ ಮುಂದಿನ ಚಲನಚಿತ್ರವು 2018 ರಲ್ಲಿ ಕ್ರೈಮ್ ಥ್ರಿಲ್ಲರ್ ಚೂರಿಕಟ್ಟೆ ಆಗಿತ್ತು. [೯]ನಂತರ ಅವರು ಸ್ಟ್ರೈಕರ್ (2019) ಚಿತ್ರದಲ್ಲಿ ನಟಿಸಿದರು. [೧೦] ಅವರ ಮುಂದಿನ ಚಿತ್ರ, ಮುಂದಿನ ನಿಲ್ದಾಣ (2019) [೧೧] ಹಿಟ್ ಆಗಿತ್ತು.
ವೈಯಕ್ತಿಕ ಜೀವನ
[ಬದಲಾಯಿಸಿ]ಪ್ರವೀಣ್ 2014 ರಲ್ಲಿ ದೀಪಿಕಾ ನಜ್ರೆ ಅವರನ್ನು ವಿವಾಹವಾದರು,ಇವರಿಗೆ ಒಬ್ಬ ಮಗನಿದ್ದಾನೆ. [೧೨]
ಫಿಲ್ಮೋಗ್ರಫಿ
[ಬದಲಾಯಿಸಿ]ಚಲನಚಿತ್ರ | ಪಾತ್ರ | ಟಿಪ್ಪಣಿಗಳು | |
---|---|---|---|
2009 | ಜಾಲಿ ಡೇಸ್ | ಪ್ರವೀಣ್ | |
2013 | ಆಂತರ್ಯ | ಕೃಷ್ಣ | |
2016 | ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ | ಕುಶ | |
2017 | 5ಜಿ | ಜೈ | |
2018 | ಕೂಚಿಕು ಕುಚಿಕು | ದತ್ತ | |
ಚೂರಿಕಟ್ಟೆ | ಆದಿ | ||
ಹೀಗೊಂದು ದಿನ | |||
2019 | ಸ್ಟ್ರೈಕರ್ | ಸಿದ್ದು | |
ಮುಂದಿನ ನಿಲ್ದಾಣ | ಪಾರ್ಥ | [೧೩] [೧೪] | |
2023 | ಹೊಂದಿಸಿ ಬರೆಯಿರಿ | ಜಗನ್ | |
2024 | ಓ2 | ದೇವ್ | [೧೫] |
ದೂರದರ್ಶನ
[ಬದಲಾಯಿಸಿ]ಶೀರ್ಷಿಕೆ | ಪಾತ್ರ | ಟಿಪ್ಪಣಿಗಳು | |
---|---|---|---|
2011 | ಪ್ಯಾಟೆ ಮಂದಿ ಕಾಡಿಗೆ ಬಂದ್ರು | (ಸ್ವಯಂ) | ರಿಯಾಲಿಟಿ ಶೋ |
2014 | ರಾಧಾ ಕಲ್ಯಾಣ | ವಿಶಾಲ್ | ಧಾರಾವಾಹಿ |
ಉಲ್ಲೇಖಗಳು
[ಬದಲಾಯಿಸಿ]- ↑ "Praveen Tej's next is a sci-fi thriller backed by Puneeth Rajkumar- The Times of India". The Times of India. 2 October 2020.
- ↑ "Jolly Days for Praveen- DECCAN CHRONICLE". DECCAN CHRONICLE. 23 August 2017.
- ↑ "The recognition I got for Mundina Nildana is completely new for me -The Times of India". The Times of India. 26 November 2019.
- ↑ "Did you know Praveen Tej lost 13 kg for 'Mundina Nildana'? -The Times of India". The Times of India. 28 November 2019.
- ↑ "Praveen Tej took time off to sport a fit avatar -The Times of India". The Times of India. 7 February 2019.
- ↑ "Grand finale of Pyate Mandi Kadige Bandru - The New Indian Express". The New Indian Express. 6 January 2011.
- ↑ "Radha Kalyana completes 1,000 episodes - The Times of India". The Times of India. 20 March 2015.
- ↑ "Praveen Tej gets street-smart in his next Kannada film - The Times of India". The Times of India. 30 July 2016.
- ↑ "I dreaded holding a gun during making of 'Churikatte', says actor Praveen Tej -The New Indian Express". The New Indian Express. 24 January 2018.
- ↑ "'Striker' features character with psychological disorde -Deccan Herald". Deccan Herald. 22 February 2019.
- ↑ "Praveen Tej's next big stop -DECCAN CHRONICLE". DECCAN CHRONICLE. 20 November 2019.
- ↑ "Metrolife:Praveen Tej likes comforts of family life -DECCAN HERALD". DECCAN HERALD. 19 April 2018.
- ↑ "Praveen Tej extends support to Vasuki Vaibhav - The Times of India". The Times of India. 31 January 2020.
- ↑ "These actors have inspired Praveen Tej's fitness journey - The Times of India". The Times of India. 11 June 2020.
- ↑ "It's a wrap for Praveen-Ashika starrer O2". The Times of India. 2022-09-19. ISSN 0971-8257. Retrieved 2024-04-01.