ಪ್ರೇಮಾ
ಪ್ರೇಮಾ | |
---|---|
Born | ನೆರವಂಡ ಚೆಟ್ಟಿಚ ಪ್ರೇಮಾ ೬ ಜನವರಿ ೧೯೭೭ |
Occupation | ನಟಿ |
Years active | ೧೯೯೫–ಈವರೆಗೆ |
Parent(s) | ಚೆಟ್ಟಿಚ(ತಂದೆ) ಕಾವೇರಿ(ತಾಯಿ) |
ನೆರವಂಡ ಚೆಟ್ಟಿಚ ಪ್ರೇಮಾ (ಜನವರಿ ೬, ೧೯೭೭), ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸುವ ದಕ್ಷಿಣ ಭಾರತದ ನಟಿ. ಕನ್ನಡದ ೧೯೯೫ರಲ್ಲಿ ಬಂದ ಸವ್ಯಸಾಚಿ ಪ್ರೇಮಾ ಅವರ ಮೊದಲ ಚಿತ್ರ. ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಅವರು ೨೦೧೭ ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದಲ್ಲಿ ಭಾಗವಹಿಸಿದ್ದರು.[೧]
ವೈಯಕ್ತಿಕ ಜೀವನ
[ಬದಲಾಯಿಸಿ]ಪ್ರೇಮಾ ಬೆಂಗಳೂರಿನಲ್ಲಿ ಜನಿಸಿದರು. ಇವರು ಕೊಡವ ಜನಾಂಗಕ್ಕೆ ಸೇರಿದ್ದು, ನೆರವಂಡ ಮನೆತನದವರು. ಬೆಂಗಳೂರಿನ ಮಹಿಳಾ ಸೇವಾ ಸಮಾಜ ಪ್ರೌಢಶಾಲೆಯ ಬಳಿಕ ಪಿಯುಸಿ ಯನ್ನು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಉತ್ತೀರ್ಣರಾದರು. ಇವರು ರಾಷ್ಟ್ರಮಟ್ಟದಲ್ಲಿ ಹೈ ಜಂಪ್ ಮತ್ತು ವಾಲಿಬಾಲ್ ಆಟದಲ್ಲಿ ಭಾಗವಹಿಸಿದ್ದಾರೆ. ಆಕೆಯ ಕಿರಿಯ ಸಹೋದರ ನೆರವಂಡ ಅಯ್ಯಪ್ಪ ಅವರು ರಣಜಿ ಟ್ರೋಫಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕ್ರಿಕೆಟ್ ಆಟಗಾರರಾಗಿದ್ದರು. ಆಕೆಯ ತಂಗಿ ಇಂದು ಎನ್.ಸಿ ದುಬೈನಲ್ಲಿ ವಾಸಿಸುತ್ತಿದ್ದಾರೆ.[೨]
ಪ್ರೇಮಾ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರನ್ನು ಜುಲೈ ೬, ೨೦೦೬ರಲ್ಲಿ ವಿವಾಹವಾದರು. ಅವರು ಮಾರ್ಚ್ ೨೦೧೬ ರಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದರು.[೨][೩]
ವೃತ್ತಿ
[ಬದಲಾಯಿಸಿ]ಪ್ರೇಮಾ ೧೯೯೫ ರಲ್ಲಿ ರಾಜ್‌ಕುಮಾರ್ ಶಿಬಿರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, ಇವರು ಸವ್ಯಸಾಚಿಯಲ್ಲಿ ಶಿವರಾಜ್‌ಕುಮಾರ್ ಮತ್ತು ಆಟ ಹುಡುಗಾಟದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ನಟಿಸಿದರು. ಇವರಿಗೆ ಉಪೇಂದ್ರ ನಿರ್ದೇಶನದ ಮತ್ತೊಂದು ಶಿವರಾಜಕುಮಾರ್ ಅಭಿನಯದ ಓಂ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಲಾಯಿತು. ಈ ಚಿತ್ರವು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು ಮತ್ತು ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದರು.
೧೯೯೬ ರಲ್ಲಿ ಇವರು ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ನಮ್ಮೂರ ಮಂದಾರ ಹೂವೆ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ರಮೇಶ್ ಅರವಿಂದ್ ಜೊತೆ ನಟಿಸಿದರು. ಭಾಷಾ ಚಿತ್ರದ ಯಶಸ್ಸಿನ ನಂತರ ತಮಿಳಿನ ನಿರ್ದೇಶಕ ಸುರೇಶ್ ಕ್ರಿಸ್ನಾ ನಿರ್ದೇಶಿಸಿದ ಮೋಹನ್ ಲಾಲ್ ಜೊತೆಗಿನ ದಿ ಪ್ರಿನ್ಸ್ ಚಿತ್ರದ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡಿದರು. ಅದೇ ವರ್ಷ, ಅವರು ಧರ್ಮ ಚಕ್ರಂ ಮೂಲಕ ತೆಲುಗಿಗೂ ಪಾದಾರ್ಪಣೆ ಮಾಡಿದರು. ಕನ್ನಡದಲ್ಲಿ ಚಂದ್ರಮುಖಿ ಪ್ರಾಣಸಖಿ, ವಿ.ರವಿಚಂದ್ರನ್ ಅವರ ನಾನು ನನ್ನ ಹೆಂಡ್ತಿರು ಮತ್ತು ತೆಲುಗು ಭಾಷೆಯ ಚಿತ್ರ ದೇವಿ ರೂ. ಬಾಕ್ಸ್ ಆಫೀಸ್‌ನಲ್ಲಿ ೧೮ ಕೋಟಿ ಗಳಿಕೆ ಮಾಡಿ ಹಿಂದಿಗೂ ಡಬ್ ಆಗಿತ್ತು.
ಯಜಮಾನ, ಆಪ್ತಮಿತ್ರ, ಜಮಿಂದಾರು, ಕ್ಷಣ ಕ್ಷಣ, ಏಕದಂತ, ಪರ್ವ, ಮತ್ತು ಎಲ್ಲರಲ್ಲಿ ನನ್ನ ಗಂಡ ಎಂಬ ಏಳು ಚಿತ್ರಗಳಲ್ಲಿ ಅವರು ವಿಷ್ಣುವರ್ಧನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.
೨೦೦೬ ರಲ್ಲಿ ಮದುವೆಯಾದ ನಂತರ, ಪ್ರೇಮಾ ಅವರು ತಮ್ಮ ಚಲನಚಿತ್ರ ಕಾರ್ಯಗಳನ್ನು ಕಡಿಮೆ ಮಾಡಿದರು. ವಿರಾಮ ತೆಗೆದುಕೊಳ್ಳುವ ಮೊದಲು ೨೦೦೯ ರಲ್ಲಿ ಅವರ ಕೊನೆಯ ಬಿಡುಗಡೆ ಶಿಶಿರಾ. ೨೦೧೭ ರಲ್ಲಿ ಅವರು ಉಪೇಂದ್ರ ಮತ್ತೆ ಬಾ ಚಿತ್ರದ ಮೂಲಕ ಪುನರಾಗಮನ ಮಾಡಿದರು. ಅವರು ಇಲ್ಲಿಯವರೆಗೆ, ಕನ್ನಡದಲ್ಲಿ ೭೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮತ್ತು ತೆಲುಗಿನಲ್ಲಿ ೨೮ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು
[ಬದಲಾಯಿಸಿ]ಕನ್ನಡ
[ಬದಲಾಯಿಸಿ]ಚಿತ್ರದ ಹೆಸರು | ನಾಯಕ ನಟ | ನಿರ್ದೇಶಕ | ಬಿಡುಗಡೆಯ ವರ್ಷ | |
---|---|---|---|---|
ಸವ್ಯಸಾಚಿ | ಶಿವರಾಜ್ ಕುಮಾರ್ | ಎಮ್ ಎನ್ ರಾಜಶೇಖರ್ | ೧೯೯೫ | |
ಆಟ-ಹುಡುಗಾಟ | ರಾಘವೇಂದ್ರ ರಾಜಕುಮಾರ್ | ಬಿ ರಾಮ ಮೂರ್ತಿ | ೧೯೯೫ | |
ಓಂ | ಶಿವರಾಜ್ ಕುಮಾರ್ | ಉಪೇಂದ್ರ | ೧೯೯೫ | |
ನಮ್ಮೂರ ಮಂದಾರ ಹೂವೇ | ಶಿವರಾಜ್ ಕುಮಾರ್, ರಮೇಶ್ | ಸುನೀಲ್ ಕುಮಾರ್ ದೇಸಾಯಿ | ೧೯೯೭ | |
ಕೌರವ | ಬಿ ಸಿ ಪಾಟೀಲ್ | ಎಸ್ ಮಹೇಂದರ್ | ೧೯೯೮ | |
ಉಪೇಂದ್ರ | ಉಪೇಂದ್ರ | ಉಪೇಂದ್ರ | ೧೯೯೯ | |
ಚಂದ್ರಮುಖೀ ಪ್ರಾಣಸಖೀ | ರಮೇಶ್ ಅರವಿಂದ್ | ಸೀತಾರಾಮ ಕಾರಂತ | ೧೯೯೯ | |
ಯಜಮಾನ | ವಿಷ್ಣುವರ್ಧನ | ಪಿ ಶೇಷಾದ್ರಿ, ರಾಧಾಭಾರತಿ | ೨೦೦೦ | |
ನಾಗದೇವತೆ | ಸಾಯಿಕುಮಾರ್ | ಸಾಯಿಪ್ರಕಾಶ್ | ೨೦೦೦ | |
ಪ್ರೇಮಿ ನಂಬರ್ ೧ | ರಮೇಶ್ ಅರವಿಂದ್ | ೨೦೦೧ | ||
ಕನಸುಗಾರ | ರವಿಚಂದ್ರನ್ | ರವಿಚಂದ್ರನ್ | ೨೦೦೧ | |
ಮರ್ಮ | ಆನಂದ್ | ಸುನೀಲ್ ಕುಮಾರ್ ದೇಸಾಯಿ | ೨೦೦೨ | |
ಕಂಬಲಹಳ್ಳಿ | ದೇವರಾಜ್ | ಸೆಂತಿಲ್ ನಾದನ್ | ೨೦೦೨ | |
ಸಿಂಗಾರವ್ವ | ಅವಿನಾಶ್ | ಟಿ ಎಸ್ ನಾಗಾಭರಣ | ೨೦೦೩ | |
ಆಪ್ತಮಿತ್ರ | ವಿಷ್ಣುವರ್ಧನ, ರಮೇಶ್ | ಪಿ ವಾಸು | ೨೦೦೪ | |
ನಾನೂ, ನನ್ನ ಹೆಂಡತೀರೂ | ರವಿಚಂದ್ರನ್ | ೧೯೯೯ | ||
ನವಶಕ್ತಿ ವೈಭವ | ರಾಮ್ ಕುಮಾರ್ | ಸಾಯಿಪ್ರಕಾಶ್ | ೨೦೦೮ | |
ಶಿಶಿರ | ಯಶಸ್ ಸೂರ್ಯ | ಮಂಜು ಸ್ವರಾಜ್ಯ | ೨೦೦೯ | |
ಎಲ್ಲರಂಥಲ್ಲ ನನ್ನ ಗಂಡ | ಡಾ.ವಿಷ್ಣುವರ್ಧನ್ | ೧೯೯೭ |
ಇತರ ಭಾಷೆಗಳಲ್ಲಿ
[ಬದಲಾಯಿಸಿ]- ದ ಪ್ರಿನ್ಸ್ - ಮೋಹನ್ ಲಾಲ್ - ಮಲೆಯಾಳಮ್
- ದೈವತಿಂಟೆ ಮಗನ್ - ಮಲೆಯಾಳಮ್
- ದೇವಿ - ತೆಲುಗು
- ದೇವಿ ಅಭಯಮ್ - ತೆಲುಗು
- ಅಮ್ಮ ನಾಗಮ್ಮ - ತೆಲುಗು
- ಧರ್ಮಚಕ್ರಮ್ - ತೆಲುಗು
- ಮಾ ಆವಿದ ಕಲೆಕ್ಟರ್ - ತೆಲುಗು - ಜಗಪತಿಬಾಬು - ಕೋಡಿ ರಾಮಕೃಷ್ಣ - ೧೯೯೮
ಪ್ರಶಸ್ತಿಗಳು
[ಬದಲಾಯಿಸಿ]- ಓಂ ಚಿತ್ರಕ್ಕೆ ೧೯೯೫ರ ಅತ್ಯುತ್ತಮ ನಟಿಯೆಂದು ರಾಜ್ಯ ಪ್ರಶಸ್ತಿ.[೪]
- ಕನಸುಗಾರ ಚಿತ್ರಕ್ಕೆ ೨೦೦೧ರ ಅತ್ಯುತ್ತಮ ನಟಿಯೆಂದು ಫಿಲ್ಮ್ ಫೇರ್ ಪ್ರಶಸ್ತಿ.[೫]
- ಸ್ಕ್ರೀನ್ ವಿಡಿಯೊಕಾನ್ ಪ್ರಶಸ್ತಿ.
- ಉದಯ ಟಿ ವಿ ಪ್ರಶಸ್ತಿ.
- ದೇವಿಕಾರಾಣಿ ಪ್ರಶಸ್ತಿ.
- ಚಿತ್ರಪ್ರೇಮಿಗಳ ಸಂಘದ ಪ್ರಶಸ್ತಿ.
- ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿ.
ಉಲ್ಲೇಖಗಳು
[ಬದಲಾಯಿಸಿ]- ↑ "Upendra, Prema combination back after 17 years". The New Indian Express. Retrieved 5 April 2021.
- ↑ ೨.೦ ೨.೧ "Prema weds Jeevan!". Sify. 24 March 2006. Archived from the original on 24 September 2015. Retrieved 30 August 2015.
- ↑ "Actress Prema files for divorce". ManoramaOnline. Retrieved 2016-05-12.
- ↑ "Shivarajkumar sets a new record!". The Times of India. 9 March 2015. Archived from the original on 13 March 2015. Retrieved 8 April 2017.
- ↑ "Nuvvu Nenu wins 4 Filmfare awards". The Times of India. 6 April 2002. Archived from the original on 21 September 2012.