ಶೈಲಶ್ರೀ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಶೈಲಶ್ರೀ | |
---|---|
Occupation | ನಟಿ |
Years active | ೧೯೬೫–ಪ್ರಸ್ತುತ |
Spouse | ಸುದರ್ಶನ್ |
ಶೈಲಶ್ರೀ ೧೯೬೦-೧೯೭೦ರ ದಶಕದ ಕನ್ನಡದ ಜನಪ್ರಿಯ ತಾರೆ.[೧]
ವೃತ್ತಿಜೀವನ
[ಬದಲಾಯಿಸಿ]೧೯೬೬ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಚಿಕ್ಕ ಪಾತ್ರದ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಶೈಲಶ್ರೀ ಮುಂದೆ ಒಂದು ದಶಕದ ಕಾಲ ನಾಯಕಿ, ಪೋಷಕ ನಟಿ, ಹಾಸ್ಯ ನಟಿ, ಖಳನಾಯಕಿ ಹೀಗೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ ಪ್ರಸಿಧ್ಧ ನಟಿ. ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ರಾಜಾಶಂಕರ್, ರಾಜೇಶ್, ಸುದರ್ಶನ್, ರಮೇಶ್, ರಂಗ ಹೀಗೆ ಕನ್ನಡದಲ್ಲಿ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಬಹುತೇಕ ಎಲ್ಲ ನಟರೊಂದಿಗೆ ನಾಯಕಿಯಾಗಿ ಅಭಿನಯಿದ ಕೀರ್ತಿ ಇವರದ್ದು. ತಮಗೆ ಬಂದ ಎಲ್ಲ ತರಹದ ಪಾತ್ರಗಳನ್ನು ನಿಷ್ಠೆಯಿಂದ ನಿರ್ವಹಿಸಿದ ಪ್ರತಿಭಾವಂತ ನಟಿ. ಕನ್ನಡ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಾದ ತಮಿಳು, ಮಲಯಾಳಂ ಮತ್ತು ತೆಲುಗು ಚಿತ್ರಗಳಲ್ಲು ಕಾಣಿಸಿಕೊಂಡಿದ್ದಾರೆ. ತಮಿಳಿನ ಶಿವಾಜಿ ಗಣೇಶನ್ ಅವರ ಚಿತ್ರ ಬದುಕಿನ ಮಹತ್ವದ ಚಿತ್ರವೆಂದೇ ಗುರುತಿಸಲ್ಪಡುವ 'ಮೋಟರ್ ಸುಂದರಂ ಪಿಳ್ಳೈ'ನಲ್ಲಿ ಶಿವಾಜಿಯವರ ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬರಾಗಿ ಜಯಲಲಿತ ಮತ್ತು ಕಾಂಚನಾರೊಂದಿಗೆ ನಟಿಸಿದ್ದರು. ಉತ್ತಮ ನರ್ತಕಿಯೂ ಆಗಿರುವ ಶೈಲಶ್ರೀ ಕೆಲವು ತಮಿಳು ಚಿತ್ರಗಳಲ್ಲಿ ನರ್ತಕಿಯಾಗಿ ಕಾಣಿಸಿಕೊಂಡಿದ್ದಾರೆ. ದರಿಶನಮ್, ತಿರುಮಲೈ ತೇನ್ ಕುಮಾರಿ, ಪಂದ್ಯಂ, ಐಂದು ಲಕ್ಷಂ ಇನ್ನೂ ಅನೇಕ ಚಿತ್ರಗಳಲ್ಲಿ ವಿಭಿನ್ನ ತರಹದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಕಾಡಿನ ರಹಸ್ಯ ಚಿತ್ರೀಕರಣದ ಸಮಯದಲ್ಲಿ ಚಿತ್ರದ ನಾಯಕ ಸುದರ್ಶನ್ ಅವರ ಪ್ರಿತಿಯ ಬಲೆಗೆ ಬಿದ್ದ ಶೈಲಶ್ರೀ ನಾಯಕಿಯಾಗಿ ಬಹಳ ಬೇಡಿಕೆಯಲ್ಲಿದ್ದುದರಿಂದ ಸುಮಾರು ಐದು ವರ್ಷಗಳ ನಂತರ ೧೯೭೩ರ ಅಗಸ್ಟ್ ೩ರಂದು ಸುದರ್ಶನ್ ಅವರನ್ನು ವಿವಾಹವಾದರು. ಮಕ್ಕಳಿಲ್ಲದ ಈ ದಂಪತಿ ವಿವಾಹವಾಗಿ ನಾಲ್ಕು ದಶಕಗಳು ಕಳೆದಿದೆ. ಇಳಿವಯಸ್ಸಿನಲ್ಲೂ ತಮ್ಮ ಪ್ರೇಮದ ದಿನಗಳನ್ನು ಮೆಲುಕು ಹಾಕಿಕೊಂಡು ಸ್ವಾಭಿಮಾನದಿಂದ ಬದುಕುತ್ತಿರುವ ಈ ಕಲಾದಂಪತಿ ಇಂದಿನ ಸಮಾಜಕ್ಕೆ ಆದರ್ಶಪ್ರಾಯರು.[೨]
ಪ್ರಶಸ್ತಿ/ಪುರಸ್ಕಾರ
[ಬದಲಾಯಿಸಿ]- ಜಯಮಾಲ ಎಚ್.ಎಂ.ರಾಮಚಂದ್ರ ಪ್ರಶಸ್ತಿ (ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ, ೨೦೧೫)[೩]
ಶೈಲಶ್ರೀ ನಟಿಸಿದ ಚಿತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಶೈಲಶ್ರೀ, ಚಿಲೋಕ.ಕಾಮ್".
- ↑ "ಮಳೆ ನಿಂತ ಮೇಲೆ". ಕನ್ನಡಪ್ರಭ. Retrieved 20 Feb 2013.
- ↑ "ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರದಾನ". http://www.udayavani.com/. ಉದಯವಾಣಿ.
{{cite web}}
: External link in
(help)|website=
- ↑ "ಶೈಲಶ್ರೀ ಅಭಿನಯದ ಚಿತ್ರಗಳು, ಚಿಲೋಕ.ಕಾಮ್".