ವಿಷಯಕ್ಕೆ ಹೋಗು

ಮಾಧವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಧವಿ
Born
ವಿಜಯಲಕ್ಶ್ಮಿ

Other namesMaadhavi
Madhvi
SpouseRalph Sharma
ChildrenTiffany Sharma
Evelyn Sharma
Priscilla Sharma


ಮಾಧವಿ ದಕ್ಷಿಣ ಭಾರತದ ಚಿತ್ರನಟಿ. ಇವರು ೧೭ ವರ್ಷಗಳ ಅವಧಿಯಲ್ಲಿ ತೆಲುಗು, ತಮಿಳು, ಕನ್ನಡ , ಬೆಂಗಾಲಿ, ಮಲಯಾಳಂ, ಒರಿಯಾ ಮತ್ತು ಹಿಂದಿ - ಈ ಏಳು ಭಾಷೆಗಳಲ್ಲಿ ನಾಯಕಿಯ ಪಾತ್ರ ಮಾಡಿದ್ದಾರೆ. ಅವರು ಈವರೆಗೆ ೩೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಇವರು ಹುಟ್ಟಿದ್ದು ಆಂಧ್ರಪ್ರದೇಶಹೈದರಾಬಾದ್ ನಲ್ಲಿ. ಬಾಲ್ಯದಲ್ಲೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಹದಿಹರೆಯದಲ್ಲಿ ಇವರಿಗೆ ದಾಸರಿ ನಾರಾಯಣರಾವ್ ರವರು ತೆಲುಗು ಚಿತ್ರವೊಂದರಲ್ಲಿ ಪೋಷಕ ಪಾತ್ರವನ್ನು ಕೊಟ್ಟರು. ಅದು ತುಂಬ ಯಶಸ್ವಿ ಆಯಿತು . ನಂತರ ಕೆ. ಬಾಲಚಂದರ್ ೧೯೭೯ರಲ್ಲಿ ಮರೋಚರಿತ್ರ ಚಿತ್ರದಲ್ಲಿ ಕಮಲಹಾಸನ್ ಜತೆಗೆ ಪ್ರಮುಖಪಾತ್ರವೊಂದನ್ನು ಕೊಟ್ಟರು. ಅದ್ಭುತ ಯಶಸ್ಸು ಕಂಡ ಈ ಚಿತ್ರ ಹಿಂದಿಯಲ್ಲಿ 'ಏಕ್ ದೂಜೆ ಕೇ ಲಿಯೆ' ಹೆಸರಿನಲ್ಲಿ ತಯಾರಾಗಿ ಅಲ್ಲಿಯೂ ಭಾರೀ ಯಶ ಪಡೆಯಿತು.

ಮಾಧವಿಯವರು ಅಮಿತಾಭ್ ಬಚ್ಚನ್ ಜತೆ ಅಗ್ನಿಪಥ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕಮಲಹಾಸನ್ ಜತೆಗೆ ರಾಜಪಾರ್ವೈ ಮತ್ತು ಟಿಕ್ ಟಿಕ್ ಟಿಕ್ ಮುಖ್ಯ ಛಿತ್ರಗಳು . ತೆಲುಗು ನಟ ಚಿರಂಜೀವಿ ಜತೆ ಅವರ ಅನೇಕ ಚಿತ್ರಗಳಿವೆ.

ಕನ್ನಡದಲ್ಲೂ ಅವರು ಅನೇಕ ಯಶಸ್ವೀ ಚಿತ್ರಗಳಲ್ಲಿ ರಾಜಕುಮಾರ್ , ವಿಷ್ಣುವರ್ಧನ್ , ಅಂಬರೀಶ್ , ಅನಂತನಾಗ್ ಜತೆಗೆ ನಾಯಕಿಯಾಗಿ ಅಭಿನಯಿಸಿದ್ದಾರೆ ಮಲೆಯಾಳಂ ನಲ್ಲಿ ಮಮ್ಮೂಟಿ ಮತ್ತು ಮೋಹನಲಾಲ್ ಜತೆ ಅವರ ಅನೇಕ ಚಿತ್ರಗಳಿವೆ.

ಮಾಧವಿ ಅಭಿನಯದ ಕೆಲವು ಚಿತ್ರಗಳು

[ಬದಲಾಯಿಸಿ]

ಕನ್ನಡ

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೧ ಅನುಪಮ ರೇಣುಕಾ ಶರ್ಮ ಅನಂತ್ ನಾಗ್
೧೯೮೧ ಘರ್ಜನೆ ಸಿ.ವಿ.ರಾಜೇಂದ್ರನ್ ರಜನಿಕಾಂತ್, ಗೀತಾ
೧೯೮೧ ಹಣಬಲವೋ ಜನಬಲವೋ ವಿಜಯ್ ಶಂಕರ್ ನಾಗ್
೧೯೮೨ ಗರುಡರೇಖೆ ಪಿ.ಎಸ್.ಪ್ರಕಾಶ್ ಶ್ರೀನಾಥ್, ಅಂಬಿಕಾ
೧೯೮೨ ಹಾಲುಜೇನು ಸಿಂಗೀತಂ ಶ್ರೀನಿವಾಸ್ ರಾವ್ ಡಾ.ರಾಜ್ ಕುಮಾರ್, ರೂಪಾದೇವಿ
೧೯೮೩ ಒಂದೇ ಗುರಿ ಭಾರ್ಗವ ವಿಷ್ಣುವರ್ಧನ್, ಸಾಹುಕಾರ್ ಜಾನಕಿ
೧೯೮೩ ಗಂಡುಗಲಿ ರಾಮ ಭಾರ್ಗವ ವಿಷ್ಣುವರ್ಧನ್
೧೯೮೩ ಗೆದ್ದಮಗ ಎಸ್.ಎ.ಚಂದ್ರಶೇಖರ್ ಶಂಕರ್ ನಾಗ್, ಆರತಿ
೧೯೮೩ ಚಿನ್ನದಂಥ ಮಗ ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ಕೆ.ಆರ್.ವಿಜಯಾ
೧೯೮೪ ಖೈದಿ ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ಆರತಿ
೧೯೮೪ ಚಾಣಕ್ಯ ವಿ.ಸೋಮಶೇಖರ್ ವಿಷ್ಣುವರ್ಧನ್
೧೯೮೪ ರುದ್ರನಾಗ ಕೆ.ಮಣಿಮುರುಗನ್ ವಿಷ್ಣುವರ್ಧನ್, ಬಿ.ಸರೋಜಾದೇವಿ
೧೯೮೪ ಶಿವಕನ್ಯೆ ಹುಣಸೂರು ಕೃಷ್ಣಮೂರ್ತಿ ರಾಮಕೃಷ್ಣ, ರೂಪಾದೇವಿ
೧೯೮೫ ಅಮರ ಜ್ಯೋತಿ ಬಿ.ಸುಬ್ಬರಾವ್ ಅಂಬರೀಶ್, ಜೈಜಗದೀಶ್
೧೯೮೬ ಅನುರಾಗ ಅರಳಿತು ಎಂ.ಎಸ್.ರಾಜಶೇಖರ್ ಡಾ.ರಾಜ್ ಕುಮಾರ್, ಗೀತಾ
೧೯೮೬ ಭಾಗ್ಯದ ಲಕ್ಷ್ಮಿ ಬಾರಮ್ಮ ಸಿಂಗೀತಂ ಶ್ರೀನಿವಾಸ್ ರಾವ್ ಡಾ.ರಾಜ್ ಕುಮಾರ್
೧೯೮೬ ಮತ್ತೊಂದು ಚರಿತ್ರೆ ಬಿ.ಮಲ್ಲೇಶ್ ಅಂಬರೀಶ್
೧೯೮೬ ಮಲಯ ಮಾರುತ ಕೆ.ಎಸ್.ಎಲ್.ಸ್ವಾಮಿ ವಿಷ್ಣುವರ್ಧನ್, ಸರಿತಾ
೧೯೮೭ ಶ್ರುತಿ ಸೇರಿದಾಗ ಚಿ.ದತ್ತರಾಜ್ ಡಾ.ರಾಜ್ ಕುಮಾರ್, ಗೀತಾ
೧೯೮೮ ರಾಮಣ್ಣ ಶಾಮಣ್ಣ ಬಿ.ಸುಬ್ಬರಾವ್ ಅಂಬರೀಶ್, ರವಿಚಂದ್ರನ್, ಗೀತಾ
೧೯೯೨ ಜೀವನ ಚೈತ್ರ ದೊರೈ-ಭಗವಾನ್ ಡಾ.ರಾಜ್ ಕುಮಾರ್
೧೯೯೩ ಆಕಸ್ಮಿಕ ಟಿ.ಎಸ್.ನಾಗಾಭರಣ ಡಾ.ರಾಜ್ ಕುಮಾರ್, ಗೀತಾ
೧೯೯೪ ಒಡಹುಟ್ಟಿದವರು ದೊರೈ-ಭಗವಾನ್ ಡಾ.ರಾಜ್ ಕುಮಾರ್, ಅಂಬರೀಶ್, ಶ್ರೀಶಾಂತಿ
೧೯೯೭ ಶ್ರೀಮತಿ ಕೆ.ಹರಿಪ್ರಸಾದ್ ಶ್ರೀಧರ್

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಮಾಧವಿ&oldid=1224712" ಇಂದ ಪಡೆಯಲ್ಪಟ್ಟಿದೆ