ವಿಷಯಕ್ಕೆ ಹೋಗು

ಭಾರತದಲ್ಲಿ ಕೃಷಿಯಲ್ಲಿ ಮಹಿಳೆಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀಲ್ ಪಾಮರ್ (ಸಿಐಎಟಿ)ಅವರ ಚಿತ್ರ. ಭಾರತದ ಹಿಮಾಚಲ ಪ್ರದೇಶದ ಕುಲ್ಲು ಪಟ್ಟಣದ ಬಳಿ ತಮ್ಮ ತರಕಾರಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ರೈತರು.ಹಿಂದೆ ಈ ಪ್ರದೇಶವು ಹೆಚ್ಚಿನ ಮೌಲ್ಯದ ಸೇಬುಗಳ ಪ್ರಮುಖ ಉತ್ಪಾದಕವಾಗಿತ್ತು, ಆದರೆ ಕಳೆದ ಕೆಲವು ದಶಕಗಳಲ್ಲಿ ಹೆಚ್ಚುತ್ತಿರುವ ತಾಪಮಾನವು ಅಲ್ಲಿನ ಬಹುತೇಕ ಎಲ್ಲಾ ಸೇಬು ಉತ್ಪಾದಕರು ತಮ್ಮ ಬೆಳೆಯನ್ನು ತ್ಯಜಿಸುವಂತೆ ಮಾಡಿದೆ. ಈ ರೈತರು ತರಕಾರಿ ಉತ್ಪಾದನೆಗೆ ಬಂದಿರುವುದರಿಂದ ಆದಾಯ ಮತ್ತು ಜೀವನೋಪಾಯದಲ್ಲಿ ಪ್ರಮುಖ ಏರಿಕೆ ಕಂಡುಬಂದಿದೆ,ಇದು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಹೆಚ್ಚು ಲಾಭದಾಯಕವಾಗಬಹುದು ಎಂಬುದನ್ನು ವಿವರಿಸುತ್ತದೆ.
ನೀಲ್ ಪಾಮರ್ (ಸಿಐಎಟಿ) ಅವರ ಚಿತ್ರ. ಭಾರತದ ಹಿಮಾಚಲ ಪ್ರದೇಶದ ಕುಲ್ಲು ಪಟ್ಟಣದ ಬಳಿ ತಮ್ಮ ತರಕಾರಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ರೈತರು. ಹಿಂದೆ ಈ ಪ್ರದೇಶವು ಹೆಚ್ಚಿನ ಮೌಲ್ಯದ ಸೇಬುಗಳ ಪ್ರಮುಖ ಉತ್ಪಾದಕವಾಗಿತ್ತು, ಆದರೆ ಕಳೆದ ಕೆಲವು ದಶಕಗಳಲ್ಲಿ ಹೆಚ್ಚುತ್ತಿರುವ ತಾಪಮಾನವು ಅಲ್ಲಿನ ಬಹುತೇಕ ಎಲ್ಲಾ ಸೇಬು ಉತ್ಪಾದಕರಿಗೆ ತಮ್ಮ ಬೆಳೆಯನ್ನು ತ್ಯಜಿಸುವಂತೆ ಮಾಡಿದೆ. ಈ ರೈತರು ತರಕಾರಿ ಉತ್ಪಾದನೆಗೆ ಬಂದಿರುವುದರಿಂದ ಆದಾಯ ಮತ್ತು ಜೀವನೋಪಾಯದಲ್ಲಿ ಪ್ರಮುಖ ಏರಿಕೆ ಕಂಡುಬಂದಿದೆ, ಇದು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವುದು ಹೆಚ್ಚು ಲಾಭದಾಯಕವಾಗಬಹುದು ಎಂಬುದನ್ನು ವಿವರಿಸುತ್ತದೆ.

ಭಾರತವು ತನ್ನ ಐತಿಹಾಸಿಕ ಕೃಷಿ ಸಂಪ್ರದಾಯಕ್ಕೆ ತಕ್ಕವಾದ ಆರ್ಥಿಕತೆಯನ್ನು ಹೊಂದಿದೆ. ಉತ್ತರದಲ್ಲಿ, ಸಿಂಧೂ ಕಣಿವೆ ಮತ್ತು ಬ್ರಹ್ಮಪುತ್ರ ಪ್ರದೇಶಗಳು, ಗಂಗಾ ಮತ್ತು ಮಾನ್ಸೂನ್‌ನಿಂದ ನೀರು ಸರಬರಾಜು ಮಾಡುವ ನಿರ್ಣಾಯಕ ಕೃಷಿ ಪ್ರದೇಶಗಳಾಗಿವೆ. ಭಾರತದ ಬಹುಪಾಲು ಜನಸಂಖ್ಯೆಗೆ ಕೃಷಿ ಒಂದು ಜೀವನ ಆಧಾರವಾಗಿದೆ; 2011 ರ ವಿಶ್ವಬ್ಯಾಂಕ್ ದತ್ತಾಂಶದ ಆಧಾರದ ಪ್ರಕಾರ, ಭಾರತದ ಒಟ್ಟು ದೇಶೀಯ ಉತ್ಪನ್ನದ (GDP) ಕೇವಲ 17.5% ಮಾತ್ರ ಕೃಷಿ ಉತ್ಪಾದನೆಯಿಂದ ಕೂಡಿದೆ ಎಂದು ತಿಳಿದುಬಂದಿದೆ. ಭಾರತದ ಕೃಷಿ ಉತ್ಪಾದನೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ ಆದರೆ ಅವರು ಹೆಚ್ಚಾಗಿ ಸಮಾಜದಿಂದ ಕಡೆಗಣಿಸಲ್ಪಡುತ್ತಾರೆ. ಕೃಷಿ ಸಮುದಾಯಗಳಲ್ಲಿನ ಅನೇಕ ಮಹಿಳೆಯರು ಬಡತನ ಮತ್ತು ಲಿಂಗ ಅಸಮಾನತೆಯ ಸಮಸ್ಯೆಗಳನ್ನು ಅನುಭವಿಸುತ್ತಾರೆ.[][]

ಭಾರತೀಯ ಕೃಷಿ

[ಬದಲಾಯಿಸಿ]

2012ರ ದತ್ತಾಂಶದ ಆಧಾರದ ಪ್ರಕಾರ, ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಕೃಷಿ ವಲಯದ ನೆಲೆಯಾಗಿದೆ. ಭಾರತವು ಅಂದಾಜು 180 ಲಕ್ಷ ಹೆಕ್ಟೇರ್ ಕೃಷಿಭೂಮಿಯನ್ನು ಹೊಂದಿದ್ದು, ಅದರಲ್ಲಿ 140 ಲಕ್ಷ ಕೃಷಿಭೂಮಿಯನ್ನು ಬಳಸಲಾಗುತ್ತದೆ ಮತ್ತು ಕೃಷಿ ಮಾಡಲಾಗುತ್ತದೆ. ಆದರೆ 1960ರ ನಂತರದ ಹಸಿರು ಕ್ರಾಂತಿ ನೀತಿಯು ಭಾರತದ ಕೃಷಿಯ ಮೇಲೆ ಅಧಿಕ ಒತ್ತಡ ಬೀರಿತು.

ಹಸಿರು ಕ್ರಾಂತಿಯು, ನೀರಾವರಿ ವ್ಯವಸ್ಥೆಗಳು, ಕೀಟನಾಶಕ ಮತ್ತು ಕೀಟನಾಶಕ ಬಳಕೆ ಮತ್ತು ಹಲವಾರು ಭೂ ಸುಧಾರಣೆಗಳನ್ನು ಸೇರಿಸುವ ಮೂಲಕ ಕೃಷಿಗೆ ಆಧುನಿಕ ವಿಧಾನವನ್ನು ತಂದಿತು ಜೊತೆಗೆ ಸ್ಫೋಟಕ ಪರಿಣಾಮವನ್ನು ಬೀರಿತು, ಭಾರತಕ್ಕೆ ಅಭೂತಪೂರ್ವ ಕೃಷಿ ಉತ್ಪಾದಕತೆಯನ್ನು ಒದಗಿಸಿತು ಮತ್ತು ದೇಶವನ್ನು ಆಹಾರ ಆಮದುದಾರರಿಂದ ರಫ್ತುದಾರನನ್ನಾಗಿ ಪರಿವರ್ತಿಸಿತು. ಆದರೂ ಹಸಿರು ಕ್ರಾಂತಿಯು ಕೃಷಿ ಬೆಲೆಗಳು ಕುಸಿಯಲು ಕಾರಣವಾಯಿತು, ಇದು ಭಾರತದ ಸಣ್ಣ ರೈತರಿಗೆ ಹಾನಿ ಮಾಡಿತು.[][]

ಭಾರತದ ಕೃಷಿ ವಲಯವು ಇಂದಿಗೂ ದಕ್ಷತೆಯ ಸಮಸ್ಯೆಗಳನ್ನು ಎದುರಿಸುತ್ತಿದೆ ಏಕೆಂದರೆ ಇದಕ್ಕೆ ರೈತರ ಕಳಪೆ ಸ್ಥಿತಿಗಳು ಮತ್ತು ಯಾಂತ್ರೀಕರಣದ ಕೊರತೆಯು ಮೂಲ ಕಾರಣವಾಗಿದೆ. ಭಾರತದಲ್ಲಿ, ಸಾಂಪ್ರದಾಯಿಕ ಕೃಷಿ ಇನ್ನೂ ಪ್ರಬಲವಾಗಿದೆ ಏಕೆಂದರೆ ಅನೇಕ ರೈತರು ಬೆಳೆ ಉತ್ಪಾದನೆಯಲ್ಲಿ ಜಾನುವಾರುಗಳನ್ನು ಅವಲಂಬಿಸಿರುತ್ತಾರೆ, ಗೊಬ್ಬರ ಮತ್ತು ಪ್ರಾಣಿ-ಚಾಲಿತ ನೇಗಿಲುಗಳ ಬಳಕೆಯನ್ನು ಅವಲಂಬಿಸಿರುತ್ತಾರೆ. 2011 ರ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಸರಾಸರಿ ಕೃಷಿ ಸುಮಾರು 1.5 ಎಕರೆಗಳಷ್ಟಿದೆ, ಫ್ರಾನ್ಸ್‌ನಲ್ಲಿ ಸರಾಸರಿ 50 ಹೆಕ್ಟೇರ್‌ಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ 178 ಹೆಕ್ಟೇರ್‌ಗಳು ಮತ್ತು ಕೆನಡಾದಲ್ಲಿ 273 ಹೆಕ್ಟೇರ್‌ಗಳಿವೆ. ಇವುಗಳಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ.[]

ಹಿಂದಿನ ಪೀಳಿಗೆಯಿಂದ ಪುರುಷ ಉತ್ತರಾಧಿಕಾರಿಗಳ ನಡುವೆ ಭೂಮಿಯನ್ನು ಹಂಚಲಾಗುತಿತ್ತು. ಈ ಕಾನೂನುಗಳು ಕೃಷಿ ಭೂಮಿಗೆ ಮಿತಿಗೊಳಿಸುವುದಲ್ಲದೆ, ಮಹಿಳೆಯರು ಮಾಲೀಕತ್ವ ಅಥವಾ ಅನುವಂಶಿಕತೆಯಿಂದ ದೂರವಿರುತ್ತಾರೆ. ಇದಲ್ಲದೆ, ಸಣ್ಣ ರೈತರು ದೊಡ್ಡ ಕೃಷಿ ಕಾರ್ಯಾಚರಣೆಗಳೊಂದಿಗೆ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ, ಹೆಚ್ಚಿನ ಸಂಖ್ಯೆಯ ಪುರುಷರು ಹೆಚ್ಚಿನ ವೇತನ ಮತ್ತು ಉದ್ಯೋಗಕ್ಕಾಗಿ ನಗರ ಕೇಂದ್ರಗಳಿಗೆ ವಲಸೆ ಹೋಗುತ್ತಾರೆ. ಕುಟುಂಬ ಸಾಗಿಸಲು ಮತ್ತು ಸಣ್ಣ ಕೃಷಿ ಜೀವನಶೈಲಿಯನ್ನು ಬೆಂಬಲಿಸಲು ಮಹಿಳೆಯರು ಊರಲ್ಲೇ ಇರುತ್ತಾರೆ. 2011 ರಲ್ಲಿ, ಉಪಖಂಡದಲ್ಲಿ ಕೃಷಿ ವಲಯದ ಕಾರ್ಯಪಡೆಯು 75 % ಮಹಿಳೆಯರಾಗಿತ್ತು.[]

ಭಾರತೀಯ ಕೃಷಿಯಲ್ಲಿ ಸ್ತ್ರೀಯರು

[ಬದಲಾಯಿಸಿ]

ಹಸಿರು ಕ್ರಾಂತಿ ಮತ್ತು ನಂತರ ಉದಾರೀಕರಣದ ಆಗಮನದೊಂದಿಗೆ, ಪುರುಷ ಕಾರ್ಮಿಕರು ನಗರ ಕೇಂದ್ರಗಳತ್ತ ಹೆಚ್ಚು ಆಕರ್ಷಿತರಾದರು, ಇದು ಕೃಷಿ ಕಾರ್ಮಿಕರಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಯಿತು.[]

ದತ್ತಾಂಶಗಳು

[ಬದಲಾಯಿಸಿ]

ಗ್ರಾಮೀಣ ಭಾರತದಲ್ಲಿ, ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವ ಮಹಿಳೆಯರ ಶೇಕಡಾವಾರು ಪ್ರಮಾಣ 84% ರಷ್ಟಿದೆ. ಮಹಿಳೆಯರು ಸುಮಾರು 33% ಕೃಷಿಕರು ಮತ್ತು ಸುಮಾರು 47% ಕೃಷಿ ಕಾರ್ಮಿಕರಾಗಿದ್ದಾರೆ. 2009 ರಲ್ಲಿ, ಬೆಳೆ ಕೃಷಿಯಲ್ಲಿ 94% ಮಹಿಳಾ ಕೃಷಿ ಕಾರ್ಮಿಕ ಬಲವು ಧಾನ್ಯ ಉತ್ಪಾದನೆಯಲ್ಲಿದ್ದರೆ, 1.4% ತರಕಾರಿ ಉತ್ಪಾದನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು 3.72% ಹಣ್ಣುಗಳು, ಬೀಜಗಳು, ಪಾನೀಯಗಳು ಮತ್ತು ಮಸಾಲೆ ಬೆಳೆಗಳಲ್ಲಿ ತೊಡಗಿಸಿಕೊಂಡಿದ್ದರು[]

ಕೃಷಿ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣವು ಚಹಾ ತೋಟಗಳಲ್ಲಿ ಸುಮಾರು 47%, ಹತ್ತಿ ಕೃಷಿಯಲ್ಲಿ 46.84%, ಎಣ್ಣೆ ಬೀಜಗಳನ್ನು ಬೆಳೆಯುವಲ್ಲಿ 45.43% ಮತ್ತು ತರಕಾರಿ ಉತ್ಪಾದನೆಯಲ್ಲಿ 39.13% ಆಗಿದೆ

ಭಾರತದಲ್ಲಿ ಮಹಿಳೆಯರು ಕಾರ್ಮಿಕ ಶಕ್ತಿ ಹೊಂದಿದ್ದರೂ, ವೇತನ, ಭೂ ಹಕ್ಕುಗಳು ಮತ್ತು ಸ್ಥಳೀಯ ರೈತ ಸಂಘಟನೆಗಳಲ್ಲಿ ಪ್ರಾತಿನಿಧ್ಯದ ವಿಷಯದಲ್ಲಿ ಇನ್ನೂ ತೀವ್ರ ಅಸಮಾನತೆಯನ್ನು ಎದುರಿಸುತ್ತಿದ್ದಾರೆ.

ಕೃಷಿ ಕಾರ್ಮಿಕರ ಲಿಂಗ ಆಧಾರಿತ ವಿಭಜನೆ

[ಬದಲಾಯಿಸಿ]

ಭಾರತದಲ್ಲಿ, ಮಹಿಳಾ ಕೃಷಿ ಕಾರ್ಮಿಕರು ಅಥವಾ ಕೃಷಿಕರ ಕೆಲಸವು ಬೀಜ ಬಿತ್ತನೆ, ನಾಟಿ, ಕಳೆ ಕೀಳುವುದು ಮತ್ತು ಕೊಯ್ಲು ಮಾಡುವಂತಹ ಕಡಿಮೆ ಕೌಶಲ್ಯದ ಕೆಲಸಗಳಾಗಿವೆ, ಯಾಕೆಂದರೆ ಇವು ಹೆಚ್ಚಾಗಿ ದೇಶೀಯ ಜೀವನ ಮತ್ತು ಮಕ್ಕಳ ಪಾಲನೆಯ ಚೌಕಟ್ಟಿನೊಳಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಅನೇಕ ಮಹಿಳೆಯರು ಕೃಷಿ ಕೆಲಸದಲ್ಲಿ ವೇತನವಿಲ್ಲದೆ ಜೀವನಾಧಾರ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಭಾರತೀಯ ಮಹಿಳೆಯರಲ್ಲಿ ಕೇವಲ 32.8% ಮಾತ್ರ ಔಪಚಾರಿಕವಾಗಿ ಕಾರ್ಮಿಕ ಕೆಲಸದಲ್ಲಿ ಭಾಗವಹಿಸುತ್ತಾರೆ, ಇದರಲ್ಲಿ ಪುರುಷರು 81.1% ರಷ್ಟಿದ್ದಾರೆ.

ಕೃಷಿ ಸಮುದಾಯಗಳಲ್ಲಿ ಮಹಿಳೆಯರಲ್ಲಿ ಸಾಕ್ಷರತೆ

[ಬದಲಾಯಿಸಿ]

ಕೃಷಿಯಲ್ಲಿ ತೊಡಗಿರುವ ಭಾರತೀಯ ಮಹಿಳೆಯರಲ್ಲಿ ಅಂದಾಜು 52–75% ರಷ್ಟು ಅನಕ್ಷರಸ್ಥರು, ಇದು ಶಿಕ್ಷಣದ ಕೊರತೆಯಾಗಿದ್ದು ಮಹಿಳೆಯರನ್ನು ಹೆಚ್ಚು ಕೌಶಲ್ಯಪೂರ್ಣ ಕಾರ್ಮಿಕ ಕ್ಷೇತ್ರಗಳಲ್ಲಿ ಭಾಗವಹಿಸುವುದನ್ನು ತಡೆಯುತ್ತದೆ. ಕರ್ನಾಟಕದ ಕೆಲವು ಜಿಲ್ಲಾ ಸರ್ಕಾರಗಳು ಮಹಿಳೆಯರಿಗೆ ಸ್ವ-ಸಹಾಯ ಗುಂಪುಗಳನ್ನು ಸ್ಥಾಪಿಸುವ ಬಗ್ಗೆ ಯೋಚಿಸುತ್ತಿವೆ, ಇದರಿಂದಾಗಿ ಮಹಿಳೆಯರು ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡಬಹುದು, ಕಡಿಮೆ ಸಾಕ್ಷರತಾ ದರಗಳನ್ನು ತಪ್ಪಿಸಬಹುದು. ಎಲ್ಲಾ ಚಟುವಟಿಕೆಗಳಲ್ಲಿ, ಲಿಂಗ ವೇತನ ಅಸಮಾನತೆಯಿದೆ , ಮಹಿಳೆಯರು ಪುರುಷರ ವೇತನದ ಕೇವಲ 70 ಪ್ರತಿಶತವನ್ನು ಗಳಿಸುತ್ತಾರೆ.[]

ಸಮಯ ಹಂಚಿಕೆ

[ಬದಲಾಯಿಸಿ]

ಕಡಿಮೆ ಮೌಲ್ಯಯುತ ಮತ್ತು ಕಡಿಮೆ ವೇತನ ಪಡೆಯುವ ಕಠಿಣ ಕೃಷಿ ಕೆಲಸದ ಜೊತೆಗೆ, ಮಹಿಳೆಯರು ಮನೆಯ ಯೋಗಕ್ಷೇಮಕ್ಕೂ ಜವಾಬ್ದಾರರಾಗಿರುತ್ತಾರೆ. ಅವರು ತಮ್ಮ ಮಕ್ಕಳನ್ನು ನೋಡಿಕೊಳ್ಳುತ್ತಾರೆ, ಪೋಷಣೆಯನ್ನು ಒದಗಿಸುತ್ತಾರೆ ಅಥವಾ ಸಾಮಾನ್ಯವಾಗಿ ಜೀವನಾಧಾರವಾದ ಕೃಷಿ ಕೆಲಸದಲ್ಲೂ ಭಾಗವಹಿಸುತ್ತಾರೆ ಮತ್ತು ಮನೆಯ ಕೆಲಸಗಳನ್ನು ಮಾಡುತ್ತಾರೆ. ಅಧ್ಯಯನಗಳ ಆಧಾರದ ಮೇಲೆ, ಭಾರತೀಯ ಮಹಿಳೆಯರು ವಾರದಲ್ಲಿ ಸುಮಾರು 25 ಗಂಟೆಗಳ ಕಾಲ ಮನೆಕೆಲಸಗಳನ್ನು ಮತ್ತು ಐದು ಗಂಟೆಗಳ ಕಾಲ ಮನೆಯವರ ಆರೈಕೆ ಮತ್ತು ಇತರ ಕೆಲಸದಲ್ಲಿ ಕಳೆಯುತ್ತಾರೆ.[೧೦]

30 ಗಂಟೆಗಳ ವೇತನವಿಲ್ಲದ ಕೆಲಸದ ಜೊತೆಗೆ, ಮಹಿಳೆಯರು ಕೃಷಿ ಕೆಲಸದಲ್ಲಿ ಪುರುಷರಷ್ಟೇ ಸಮಯವನ್ನು ಕಳೆಯುತ್ತಾರೆ. ಹುಡುಗಿಯರು ಹುಡುಗರಿಗಿಂತ ಗಮನಾರ್ಹವಾಗಿ ಹೆಚ್ಚು ಮನೆಕೆಲಸ ಮಾಡುತ್ತಾರೆ, ಇದು ಅವರ ಶಾಲಾ ಶಿಕ್ಷಣವನ್ನು ಅಪಾಯಕ್ಕೆ ಸಿಲುಕಿಸುತ್ತದೆ.[೧೦]

ಭೂಮಿ ಮತ್ತು ಸಂಪನ್ಮೂಲದ ಹಕ್ಕುಗಳು

[ಬದಲಾಯಿಸಿ]

ಭೂಮಿಯಂತಹ ನಿರ್ಣಾಯಕ ಸಂಪನ್ಮೂಲಗಳು ಲಿಂಗದಿಂದಲೂ ಅಸಮಾನವಾಗಿ ವಿತರಿಸಲ್ಪಡುತ್ತವೆ. ಮಹಿಳೆಯರು ತಮ್ಮ ಹೆಸರಿನಲ್ಲಿ ನೇರವಾಗಿ ಆಸ್ತಿ ಮಾಲೀಕತ್ವದ ಹಕ್ಕುಗಳನ್ನು ಅನುಭವಿಸುವುದು ಅಪರೂಪ. ಭೂಮಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಅಧಿಕಾರ ಅವರಿಗೆ ಕಡಿಮೆ ಇರುತ್ತದೆ. ಅವರ ಹೆಸರಿನಲ್ಲಿ ಭೂಮಿ ಇದ್ದರೂ ಸಹ, ಬೆಳೆ ಮಾದರಿಗಳು, ಮಾರಾಟ, ಅಡಮಾನ ಮತ್ತು ಭೂಮಿ ಖರೀದಿಯ ವಿಷಯದಲ್ಲಿ ಅವರಿಗೆ ನಿಜವಾದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ. ಭಾರತದಲ್ಲಿ, ಕೇವಲ 14.9% ಮನೆಗಳು ಮಹಿಳೆಯರ ಹೆಸರಿನಲ್ಲಿದೆ. ಸಾಲ ಪಡೆಯಲು ಮಹಿಳೆಯರಿಗೆ ಆಸ್ತಿ ಅಥವಾ ಆಸ್ತಿಯ ಮಾಲೀಕತ್ವದಂತಹ ಸಾಲ ನೀಡಲು ಹಲವು ಪೂರ್ವಾಪೇಕ್ಷಿತಗಳ ಕೊರತೆಯಿರುವುದರಿಂದ ಸಾಲ ಪಡೆಯುವುದು ಕಷ್ಟಕರವಾಗಿದೆ.[೧೧]

2005 ರ ವೈವಾಹಿಕ ಹಿಂಸೆ ಮತ್ತು ಆಸ್ತಿ ಮಾಲೀಕತ್ವದ ಅಧ್ಯಯನದ ಪ್ರಕಾರ, ಆಸ್ತಿಯಿಲ್ಲದ ಮಹಿಳೆಯರಲ್ಲಿ 49% ರಷ್ಟು ದೈಹಿಕ ಹಿಂಸೆಯನ್ನು ಅನುಭವಿಸುತ್ತಾರೆ ಮತ್ತು 84% ರಷ್ಟು ಜನರು ಮಾನಸಿಕ ಕಿರುಕುಳವನ್ನು ಅನುಭವಿಸುತ್ತಾರೆ.[೧೨]

ಮಹಿಳಾ ರೈತರು ಮತ್ತು ಪರಿಸರ

[ಬದಲಾಯಿಸಿ]

ಭಾರತದಲ್ಲಿ ಜೀವವೈವಿಧ್ಯತೆಯ ನಷ್ಟ , ವಿಶೇಷವಾಗಿ ಆಹಾರ ಬೆಳೆಗಳ ನಷ್ಟವು ಭಾರತದಲ್ಲಿ ಕೃಷಿ ಕ್ಷೇತ್ರದ ಆಹಾರ ಭದ್ರತೆ ಮತ್ತು ಸುಸ್ಥಿರತೆಯ ಗಂಭೀರ ಚಿಂತೆಯಾಗಿದೆ. ಭೂಮಿ ಮತ್ತು ಮಹಿಳೆಯರ ಸಂಬಂಧವೂ ನಿಕಟವಾಗಿದೆ. ದೇಶದ ವಿವಿಧ ಭಾಗಗಳಲ್ಲಿನ ಆಚರಣೆಗಳು ಮತ್ತು ಸಮಾರಂಭಗಳು ಈ ನಿಕಟ ಸಂಬಂಧವನ್ನು ತೋರಿಸುತ್ತವೆ. ಪಂಜಾಬ್‌ಸುಗ್ಗಿ ಹಬ್ಬ ಅಥವಾ ನವಧಾನ್ಯ ಪೂಜೆಯಾದ ಲೋಹ್ರಿ, ಇದು ಒಂಬತ್ತು ಧಾನ್ಯಗಳ ಪೂಜೆಯಾಗಿದೆ, ದಕ್ಷಿಣ ಭಾರತದಲ್ಲಿ ನಡೆಯುವ ಆಚರಣೆಗಳಲ್ಲಿ ಸಹ ಮಹಿಳೆಯರ ಪಾತ್ರ ಮಹತ್ವವಾದದ್ದು ಇದರಲ್ಲಿ ಮೇಲಿನ ಎರಡೂ ಸಮಾರಂಭಗಳು ಕೃಷಿಯಲ್ಲಿ ಮಹಿಳೆಯರ ಪಾತ್ರ ಮತ್ತು ಫಲವತ್ತತೆ ಮತ್ತು ಪರಿಸರ ಮತ್ತು ಜೀವವೈವಿಧ್ಯದ ಮಹತ್ವವನ್ನು ತಿಳಿಸುತ್ತದೆ.[೧೩][೧೪]

ಸಹಕಾರಿ ಸಂಸ್ಥೆಗಳು

[ಬದಲಾಯಿಸಿ]

ಸಹಕಾರಿ ಸಂಘಗಳನ್ನು ಬಹಳ ಹಿಂದಿನಿಂದಲೂ ಮಹಿಳಾ ರೈತರಿಗೆ ಪಾಲುದಾರಿಕೆ, ಒಗ್ಗಟ್ಟು ಮತ್ತು ಸಂಪನ್ಮೂಲಗಳನ್ನು ಒದಗಿಸುವ ಜೊತೆಗೆ ಲಿಂಗ ಅಸಮಾನತೆಯನ್ನು ನಿಭಾಯಿಸುವ ಸಾಮಾಜಿಕ ಸಂಸ್ಥೆಯಾಗಿ ನೋಡಲಾಗುತ್ತಿದೆ. ಭಾರತದಲ್ಲಿ ಅವು ಸಾಕಷ್ಟು ಯಶಸ್ಸನ್ನು ಕಂಡಿವೆ. ಮಹಿಳೆಯರ ಭಾಗವಹಿಸುವಿಕೆಯನ್ನು ನಿಷೇಧಿಸಲಾಗಿರುವ ಅನೇಕ ಸಂದರ್ಭಗಳಲ್ಲಿ, ಮಹಿಳಾ ಸಹಕಾರಿಗಳು ಸಬಲೀಕರಣ ಮತ್ತು ಶಿಕ್ಷಣ ನೀಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದರೂ ಸಹಕಾರಿ ಸಂಘಗಳಲ್ಲಿ ಮಹಿಳಾ ಭಾಗವಹಿಸುವಿಕೆ ಇನ್ನೂ ತುಲನಾತ್ಮಕವಾಗಿ ಕಡಿಮೆಯಾಗಿದೆ.92.5% ಪುರುಷರಿಗೆ ಹೋಲಿಸಿದರೆ ಕೇವಲ 7.5% ಮಹಿಳೆಯರು ಸಹಕಾರಿ ಸಂಘಗಳಲ್ಲಿ ಭಾಗವಹಿಸುತ್ತಾರೆ.ಭಾರತದಲ್ಲಿ, ಸಹಕಾರಿ ಸಂಸ್ಥೆಗಳು ಸೇರಿದಂತೆ ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಒಳಗೊಳ್ಳುವ ಉದ್ದೇಶದಿಂದ, 33% ಪ್ರಾತಿನಿಧ್ಯವನ್ನು ಸ್ಥಾಪಿಸಲಾಗಿದೆ ಮತ್ತು ಹಲವಾರು ರಾಜ್ಯಗಳಲ್ಲಿ ಎಲ್ಲಾ ನಿರ್ದೇಶಕರ ಮಂಡಳಿಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ. ಸ್ವಯಂ ಉದ್ಯೋಗಿ ಮಹಿಳಾ ಸಂಘ (SEWA) ನಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಭಾರತದಲ್ಲಿ 1.24 ಮಿಲಿಯನ್ ಮಹಿಳೆಯರ ಸದಸ್ಯತ್ವವನ್ನು ರೂಪಿಸಲು ಪಾಲುದಾರರೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಐವತ್ತನಾಲ್ಕು ಪ್ರತಿಶತ ಸದಸ್ಯರು ಕೃಷಿ ಕಾರ್ಮಿಕರು.[೧೫][೧೬]

ಭಾರತ-ಯೂರೋಪ್ ಮುಕ್ತ ವ್ಯಾಪಾರ ಒಪ್ಪಂದ

[ಬದಲಾಯಿಸಿ]

2007 ರಿಂದ, ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಎರಡು ಸಂಸ್ಥೆಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿವೆ. ಮುಕ್ತ ವ್ಯಾಪಾರ ಒಪ್ಪಂದವು ಮಹಿಳೆಯರು ಸಾಮಾನ್ಯವಾಗಿ ತೊಡಗಿಸಿಕೊಂಡಿರುವ ಉತ್ಪನ್ನಗಳಾದ ಧಾನ್ಯ ಉತ್ಪಾದನೆ, ಚಹಾ ಅಥವಾ ಕಾಫಿ, ಮಿಠಾಯಿಗಳು ಮತ್ತು ಎಣ್ಣೆ ಬೀಜಗಳ ಆಮದು ಹೆಚ್ಚಳಕ್ಕೆ ಕಾರಣವಾಗಬಹುದು. ಯೂರೋಪ್ ನ ಸ್ಪರ್ಧಾತ್ಮಕ ಪ್ರಯೋಜನಗಳು ಈ ವಲಯಗಳಲ್ಲಿ ಕೆಲಸ ಮಾಡುವ ಹಲವಾರು ಮಹಿಳಾ ರೈತರು ಮತ್ತು ಕಾರ್ಮಿಕರಿಗೆ ಹಾನಿ ಮಾಡುತ್ತದೆ. ಉದಾಹರಣೆಗೆ, ಯೂರೋಪ್ ನಲ್ಲಿ ಹೆಚ್ಚು ಸಂರಕ್ಷಿತ ಉದ್ಯಮವಾದ ಯೂರೋಪ್ ಡೈರಿ ಉತ್ಪನ್ನಗಳು, ನಿರ್ದಿಷ್ಟವಾಗಿ ಮಹಿಳೆಯರಿಗೆ ಲಗತ್ತಿಸಲಾದ ಸಣ್ಣ ಪಶುಸಂಗೋಪನಾ ಉತ್ಪಾದನಾ ವಿಧಾನಗಳೊಂದಿಗೆ ಸ್ಪರ್ಧಿಸುವ ಮೂಲಕ ಭಾರತೀಯ ಮಾರುಕಟ್ಟೆಗಳನ್ನು ಪ್ರವೇಶಿಸುವ ಸಾಧ್ಯತೆಯಿದೆ. ಸ್ಪರ್ಧೆಯು ಮಹಿಳೆಯರು ಮತ್ತು ಅವರ ಕುಟುಂಬಗಳ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡಬಹುದು ಮತ್ತು ಆಹಾರ ಭದ್ರತೆಯ ಸಮಸ್ಯೆಗಳನ್ನು ಸೃಷ್ಟಿಸಬಹುದು ಮತ್ತು ಹುಡುಗಿಯರು ಮತ್ತು ಮಹಿಳೆಯರ ಸಾಮರ್ಥ್ಯಗಳ ವಿಸ್ತರಣೆಯನ್ನು ಹತ್ತಿಕ್ಕುವ ಮೂಲಕ ಲಿಂಗ ಅಸಮಾನತೆಯನ್ನು ಹೆಚ್ಚಿಸಬಹುದು.[೧೭]

ಉಲ್ಲೇಖಗಳು

[ಬದಲಾಯಿಸಿ]
  1. Patil, Sheetal; Reidsma, Pytrik; Shah, Pratik; Purushothaman, Seema; Wolf, Joost (March 2014). "Comparing conventional and organic agriculture in Karnataka, India: Where and when can organic farming be sustainable?". Land Use Policy (in ಇಂಗ್ಲಿಷ್). 37: 40–51. doi:10.1016/j.landusepol.2012.01.006.
  2. Altenbuchner, Christine; Vogel, Stefan; Larcher, Manuela (September 2017). "Effects of organic farming on the empowerment of women: A case study on the perception of female farmers in Odisha, India". Women's Studies International Forum (in ಇಂಗ್ಲಿಷ್). 64: 28–33. doi:10.1016/j.wsif.2017.09.001.
  3. Hazareesingh, Sandip (May 2021). "'Our Grandmother Used to Sing Whilst Weeding': Oral histories, millet food culture, and farming rituals among women smallholders in Ramanagara district, Karnataka". Modern Asian Studies (in ಇಂಗ್ಲಿಷ್). 55 (3): 938–972. doi:10.1017/S0026749X20000190. ISSN 0026-749X.
  4. Vinaya Kumar, H. M.; Shivamurthy, M.; Govinda Gowda, V.; Biradar, G. S. (May 2017). "Assessing decision-making and economic performance of farmers to manage climate-induced crisis in Coastal Karnataka (India)". Climatic Change (in ಇಂಗ್ಲಿಷ್). 142 (1–2): 143–153. doi:10.1007/s10584-017-1928-x. ISSN 0165-0009.
  5. June 25, 2011."Farm Size and Productivity: Understanding the Strength of Smallholders and Improving Their Livelihoods."
  6. Singh, Roopam; Sengupta, Ranja (2009). "EU FTA and the Likely Impact on Indian Women Executive Summary." Centre for Trade and Development and Heinrich Boell Foundation.
  7. Pattnaik, Itishree; Lahiri-Dutt, Kuntala (2022-04-16). "Do women like to farm? Evidence of growing burdens of farming on women in rural India". The Journal of Peasant Studies (in ಇಂಗ್ಲಿಷ್). 49 (3): 629–651. doi:10.1080/03066150.2020.1867540. hdl:1885/220400. ISSN 0306-6150.
  8. Rao, E. Krishna (2006). "Role of Women in Agriculture: A Micro Level Study."
  9. Govil, Richa; Rana, Garima; Govil, Richa; Rana, Garima (2017). "Demand for Agricultural Information among Women Farmers: A Survey from Karnataka, India" (in ಇಂಗ್ಲಿಷ್). doi:10.22004/AG.ECON.308363. {{cite journal}}: Cite journal requires |journal= (help)
  10. ೧೦.೦ ೧೦.೧ TNN, "Pay Parity Sought for Women in Agriculture." The Times of India. April 24, 2012.
  11. Rives, Janet; Yousefi, Mahmood (1997-08-26). Economic Dimensions of Gender Inequality: A Global Perspective (in ಇಂಗ್ಲಿಷ್). Bloomsbury Academic. ISBN 978-0-275-95618-9.
  12. Indian Council if Agricultural Research. “Women in Agriculture”: DARE/ICAR Annual Report." 2003-04. http://www.icar.org.in/files/ar0304/12-WOMEN%20IN%20AGRICULTURE.pdf
  13. "Agricultural in India: Both Weak and Strong." http://www.momagri.org/UK/focus-on-issues/Agriculture-in-India-Both-Weak-and-Strong_249.html Archived 2019-06-18 ವೇಬ್ಯಾಕ್ ಮೆಷಿನ್ ನಲ್ಲಿ.
  14. "Inequality Deepens Climate Challenge for India's Women Farmers." http://www.trust.org/alertnet/news/inequality-deepens-climate-challenge-for-indias-women-farmers/ Archived 2012-11-01 ವೇಬ್ಯಾಕ್ ಮೆಷಿನ್ ನಲ್ಲಿ.
  15. Daman Prakash. "Rural Women, Food Security, and Agricultural Cooperatives." 2003.
  16. Self-Employed Women's Association. (2011) http://www.sewa.org/
  17. "Germany voices support for FTA between India and EU". 11 April 2013.