ಮಲ್ಟಿಮೀಡಿಯಾ
ಮಲ್ಟಿಮೀಡಿಯಾ ಎಂಬುದು ವೈವಿಧ್ಯಮಯ ಹುರುಳಿನ ನಮೂನೆಗಳ ಒಂದು ಸಂಯೋಜನೆಯನ್ನು ಬಳಸುವ ಮಾಧ್ಯಮ ಮತ್ತು ಹುರುಳು ಆಗಿದೆ. ಈ ಪದವನ್ನು ಒಂದು ನಾಮವಾಚಕವಾಗಿ (ಬಹು ಹುರುಳಿನ ನಮೂನೆಗಳೊಂದಿಗಿನ ಒಂದು ಮಾಧ್ಯಮ) ಅಥವಾ ಬಹು ಹುರುಳಿನ ನಮೂನೆಗಳನ್ನು ಹೊಂದಿರುವ ಮಾಧ್ಯಮವೊಂದನ್ನು ವಿವರಿಸುವ ಒಂದು ಗುಣವಾಚಕವಾಗಿ ಬಳಸಬಹುದು. ಮುದ್ರಿತ ಅಥವಾ ಕರ-ನಿರ್ಮಿತ ಸಾಮಗ್ರಿಯ ಸಾಂಪ್ರದಾಯಿಕ ನಮೂನೆಗಳನ್ನು ಮಾತ್ರವೇ ಬಳಸುವ ಮಾಧ್ಯಮ ಎಂಬ ಪದಕ್ಕೆ ಪ್ರತಿಯಾಗಿ ಈ ಪದವನ್ನು ಬಳಸಲಾಗುತ್ತದೆ. ಪಠ್ಯ, ಶ್ರವ್ಯಾಂಶ, ಸ್ಥಿರ ಬಿಂಬಗಳು, ಅನಿಮೇಷನ್, ವಿಡಿಯೋ, ಮತ್ತು ಪ್ರಭಾವಿ ಕ್ರಿಯಾಶಕ್ತಿಯ ಹುರುಳಿನ ನಮೂನೆಗಳ ಒಂದು ಸಂಯೋಜನೆಯನ್ನು ಮಲ್ಟಿಮೀಡಿಯಾ ಒಳಗೊಳ್ಳುತ್ತದೆ. ಗಣಕೀಕೃತ ಮತ್ತು ವಿದ್ಯುನ್ಮಾನ ಸಾಧನಗಳಂಥ, ಮಾಹಿತಿಯ ಹುರುಳನ್ನು ಸಂಸ್ಕರಿಸುವ ಸಾಧನಗಳಿಂದ ಮಲ್ಟಿಮೀಡಿಯಾವು ಸಾಮಾನ್ಯವಾಗಿ ಧ್ವನಿಮುದ್ರಿಸಲ್ಪಡುತ್ತದೆ ಮತ್ತು ಚಾಲಿಸಲ್ಪಡುತ್ತದೆ, ಪ್ರದರ್ಶಿಸಲ್ಪಡುತ್ತದೆ ಅಥವಾ ಪ್ರವೇಶಿಸಲ್ಪಡುತ್ತದೆಯಾದರೂ, ಇದು ಪ್ರತ್ಯಕ್ಷ ಪ್ರದರ್ಶನವೊಂದರ ಒಂದು ಭಾಗವಾಗಿರಲೂ ಸಾಧ್ಯವಿದೆ. ಮಲ್ಟಿಮೀಡಿಯಾದ ಹುರುಳನ್ನು ಶೇಖರಿಸಲು ಹಾಗೂ ಅನುಭವಕ್ಕೆ ತಂದುಕೊಳ್ಳಲು ಬಳಸುವ ವಿದ್ಯುನ್ಮಾನ ಮಾಧ್ಯಮದ ಸಾಧನಗಳನ್ನೂ ಸಹ ಮಲ್ಟಿಮೀಡಿಯಾ ವು (ಒಂದು ಗುಣವಾಚಕವಾಗಿ) ವಿವರಿಸುತ್ತದೆ. ಲಲಿತಕಲೆಯಲ್ಲಿನ ಮಿಶ್ರಿತ ಮಾಧ್ಯಮದಿಂದ ಮಲ್ಟಿಮೀಡಿಯಾವು ಪ್ರತ್ಯೇಕವಾಗಿ ನಿಲ್ಲುತ್ತದೆ; ಉದಾಹರಣೆಗೆ ಶ್ರವ್ಯಾಂಶವನ್ನು ಒಳಗೊಳ್ಳುವ ಮೂಲಕ ಇದು ಒಂದು ವಿಸ್ತೃತ ವ್ಯಾಪ್ತಿಯನ್ನು ಹೊಂದಿದೆ. ಪ್ರಭಾವಶಾಲಿ ಮಲ್ಟಿಮೀಡಿಯಾಕ್ಕೆ "ಸಮೃದ್ಧ ಮಾಧ್ಯಮ" ಎಂಬ ಪದವು ಪರ್ಯಾಯ ಪದವಾಗಿದೆ. ಅಧಿಕಮಾಧ್ಯಮವನ್ನು ಒಂದು ನಿರ್ದಿಷ್ಟ ಮಲ್ಟಿಮೀಡಿಯಾ ಅನ್ವಯಿಕೆಯಾಗಿ
ಮಲ್ಟಿಮೀಡಿಯಾದಲ್ಲಿ ಸಂಯೋಜಿಸಲ್ಪಟ್ಟಿರುವ ಪ್ರತ್ಯೇಕ ಹುರುಳಿನ ನಮೂನೆಗಳ ಉದಾಹರಣೆಗಳು ಇಂತಿವೆ:
Text | Audio | Still Images |
ಅನಿಮೇಷನ್ | Video Footage | Interactivity |
ಮಲ್ಟಿಮೀಡಿಯಾದ ವರ್ಗೀಕರಣ
[ಬದಲಾಯಿಸಿ]ರೇಖಾತ್ಮಕ (ಲೀನಿಯರ‍್) ಮತ್ತು ರೇಖಾತ್ಮಕವಲ್ಲದ (ನಾನ್-ಲೀನಿಯರ‍್) ವರ್ಗಗಳು ಎಂಬುದಾಗಿ ಮಲ್ಟಿಮೀಡಿಯಾವನ್ನು ಸ್ಥೂಲವಾಗಿ ವಿಭಜಿಸಬಹುದು. ಚಲನಚಿತ್ರದ ಪ್ರಸ್ತುತಿಯೊಂದರಂತೆ ವೀಕ್ಷಕನಿಗೆ ಯಾವುದೇ ನಿರ್ದೇಶನಾತ್ಮಕ ನಿಯಂತ್ರಣದ ಅವಕಾಶವಿಲ್ಲದೆಯೇ ರೇಖಾತ್ಮಕ ಕ್ರಿಯಾಶೀಲ ಹುರುಳು ಮುಂದುವರಿಯುತ್ತದೆ. ಕಂಪ್ಯೂಟರ್ ಆಟವೊಂದರಲ್ಲಿ ಬಳಕೆಯಾದಂತೆ ಅಥವಾ ಸ್ವಯಂ-ವೇಗದ ಕಂಪ್ಯೂಟರ್ ಆಧರಿತ ತರಬೇತಿಗಳಲ್ಲಿ ಬಳಕೆಯಾಗುವ ರೀತಿಯಲ್ಲಿ ಮುನ್ನಡೆಯನ್ನು ನಿಯಂತ್ರಿಸಲು, ಬಳಕೆದಾರ ಪ್ರಭಾವಿ ಕ್ರಿಯಾಶಕ್ತಿಯನ್ನು ರೇಖಾತ್ಮಕವಲ್ಲದ ಹುರುಳು ಒದಗಿಸುತ್ತದೆ. ರೇಖಾತ್ಮಕವಲ್ಲದ ಹುರುಳಿಗೆ ಅಧಿಕಮಾಧ್ಯಮವು ಒಂದು ಉದಾಹರಣೆಯಾಗಿದೆ.
ಮಲ್ಟಿಮೀಡಿಯಾ ಪ್ರಸ್ತುತಿಗಳು ಪ್ರತ್ಯಕ್ಷ ಸ್ವರೂಪದಲ್ಲಿರಬಹುದು ಅಥವಾ ಧ್ವನಿಮುದ್ರಿತ ಸ್ವರೂಪದಲ್ಲಿರಬಹುದು. ಧ್ವನಿಮುದ್ರಿತ ಪ್ರಸ್ತುತಿಯೊಂದು ದಿಗ್ದರ್ಶನ ಪದ್ಧತಿಯೊಂದರ ಮೂಲಕ ಪ್ರಭಾವಿ ಕ್ರಿಯಾಶಕ್ತಿಗೆ ಅವಕಾಶ ಮಾಡಿಕೊಡಬಹುದು. ಪ್ರತ್ಯಕ್ಷ ಮಲ್ಟಿಮೀಡಿಯಾ ಪ್ರಸ್ತುತಿಯೊಂದು ಪ್ರಸ್ತುತಿಗಾರ ಅಥವಾ ನಿರ್ವಾಹಕನೊಂದಿಗಿನ ಪರಸ್ಪರ ಕ್ರಿಯೆಯೊಂದರ ಮೂಲಕ ಪ್ರಭಾವಿ ಕ್ರಿಯಾಶಕ್ತಿಗೆ ಅವಕಾಶ ಮಾಡಿಕೊಡಬಹುದು.
ಮಲ್ಟಿಮೀಡಿಯಾದ ಪ್ರಮುಖ ಗುಣಲಕ್ಷಣಗಳು
[ಬದಲಾಯಿಸಿ]ಸಂಗೀತ ಸಾಧನವೊಂದರ ಅಂದರೆ, ಮೀಡಿಯಾ ಪ್ಲೇಯರ‍್ನ ನೆರವಿನೊಂದಿಗೆ ಸ್ಥಳೀಯವಾಗಿ, ಬಿಂಬಿಸುವ, ಪ್ರಸಾರ ಮಾಡುವ, ಅಥವಾ ಚಾಲನೆ ನೀಡುವ ಮೂಲಕ ಮಲ್ಟಿಮೀಡಿಯಾ ಪ್ರಸ್ತುತಿಗಳನ್ನು ವೇದಿಕೆಯೊಂದರ ಮೇಲೆ ಖುದ್ದಾಗಿ ವೀಕ್ಷಿಸಬಹುದು. ಸದರಿ ಪ್ರಸರಣವು ಒಂದು ಪ್ರತ್ಯಕ್ಷ ಅಥವಾ ಧ್ವನಿಮುದ್ರಿತ ಮಲ್ಟಿಮೀಡಿಯಾ ಪ್ರಸ್ತುತಿಯಾಗಿರಬಹುದು. ಪ್ರಸರಣಗಳು ಹಾಗೂ ಧ್ವನಿಮುದ್ರಣಗಳು ಸದೃಶಿ (ಅನಲಾಗ್) ಸ್ವರೂಪದಲ್ಲಿರಬಹುದು ಅಥವಾ ಅಂಕೀಯ (ಡಿಜಿಟಲ್) ವಿದ್ಯುನ್ಮಾನ ಮಾಧ್ಯಮ ತಂತ್ರಜ್ಞಾನದ ಸ್ವರೂಪದಲ್ಲಿರಬಹುದು. ಅಂಕೀಯ ಆನ್‌ಲೈನ್ ಮಲ್ಟಿಮೀಡಿಯಾವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರವಹಿಸಲು ಅನುವು ಮಾಡಬಹುದು. ಪ್ರವಹಿಸುವ ಮಲ್ಟಿಮೀಡಿಯಾವು ಪ್ರತ್ಯಕ್ಷ ಸ್ವರೂಪದಲ್ಲಿರಬಹುದು ಅಥವಾ ಕೋರಿಕೆಯ-ಮೇರೆಗೆ ಬರಬಹುದು.
ಮಲ್ಟಿಮೀಡಿಯಾ ಆಟಗಳು ಮತ್ತು ಅನುಕರಣಗಳನ್ನು ವಿಶೇಷ ಪರಿಣಾಮಗಳೊಂದಿಗಿನ ಪ್ರಾಕೃತಿಕ ಪರಿಸರವೊಂದರಲ್ಲಿ, ಆನ್‌ಲೈನ್ ಒಂದರಲ್ಲಿನ ಬಹು ಬಳಕೆದಾರರೊಂದಿಗೆ ಬಳಸಬಹುದು.
ಪರಿಭಾಷೆ
[ಬದಲಾಯಿಸಿ]ಪದದ ಇತಿಹಾಸ
[ಬದಲಾಯಿಸಿ]"ಮಲ್ಟಿಮೀಡಿಯಾ" ಎಂಬ ಪದವನ್ನು ರೂಪಿಸಿದ್ದು[ಸಾಕ್ಷ್ಯಾಧಾರ ಬೇಕಾಗಿದೆ] ಬಾಬ್ ಗೋಲ್ಡ್‌ಸ್ಟೀನ್ (ನಂತರ ಈತ 'ಬಾಬ್ಬ್ ಗೋಲ್ಡ್‌ಸ್ಟೀನ್ನ್' ಎನಿಸಿಕೊಂಡ). ಲಾಂಗ್ ಐಲೆಂಡ್‌ನ ಸೌಥಾಂಪ್ಟನ್‌ನಲ್ಲಿ 1966ರ ಜುಲೈ ತಿಂಗಳಲ್ಲಿ ನಡೆದ "ಲೈಟ್‌ವರ್ಕ್ಸ್ ಅಟ್ ಎಲ್’ಅವರ್‌ಸಿನ್" ಎಂಬ ಪ್ರದರ್ಶನದ ಪ್ರಾರಂಭೋತ್ಸವವನ್ನು ಉತ್ತೇಜಿಸಲು ಅಥವಾ ಪ್ರವರ್ತಿಸಲು ಆತ ಇದನ್ನು ರೂಪಿಸಿದ.
1966ರ ಆಗಸ್ಟ್ 10ರಂದು, ವೆರೈಟಿಯ ರಿಚರ್ಡ್ ಆಲ್ಬೇರಿನೋ ಎಂಬಾತ ಸದರಿ ಪರಿಭಾಷೆಯನ್ನು ಎರವಲು ಪಡೆಯುವುದರ ಜೊತೆಗೆ, “ಗೀತಬರಹಗಾರ-ಹಾಸ್ಯಗಾರ ಬಾಬ್ (‘ವಾಷಿಂಗ್ಟನ್ ಸ್ಕ್ವೇರ್’) ಗೋಲ್ಡ್‌ಸ್ಟೀನ್‌ನ ಮಿದುಳಿನ ಕೂಸಾಗಿರುವ ’ಲೈಟ್‌ವರ್ಕ್ಸ್’ ಪ್ರದರ್ಶನವು ಡಿಸ್ಕೋಥೆಕ್ ಕಾರ್ಯಕ್ರಮದಂತೆ ಮೊದಲ ಪರಿಚಯವಾಗುವಲ್ಲಿನ ವಿನೂತನ ಬಹು-ಮಾಧ್ಯಮ ಸಂಗೀತ-ಹಾಗೂ-ದೃಷ್ಟಿಗೋಚರ ಪ್ರದರ್ಶನವಾಗಿದೆ" ಎಂದು ವರದಿಮಾಡಿದ.[೧]. ಎರಡು ವರ್ಷಗಳ ನಂತರ, 1968ರಲ್ಲಿ, “ಮಲ್ಟಿಮೀಡಿಯಾ” ಎಂಬ ಪದವನ್ನು, ಓರ್ವ ರಾಜಕೀಯ ಸಲಹೆಗಾರ ಹಾಗೂ ಎಲ್’ಅವರ್‌ಸಿನ್‌ನಲ್ಲಿನ ಗೋಲ್ಡ್‌ಸ್ಟೀನ್‌ನ ನಿರ್ಮಾಪಕರಲ್ಲಿ ಒಬ್ಬರಾದ ಐರಿಸ್ ಸಾಯರ್ ಎಂಬಾಕೆಯ ಪತಿಯಾದ ಡೇವಿಡ್ ಸಾಯ್‌ನ ಕೆಲಸಗಳನ್ನು ವಿವರಿಸಲು ಮರು-ಬಳಕೆ ಮಾಡಲಾಯಿತು.
ನಡುವೆ ಬಂದ ನಲವತ್ತು ವರ್ಷಗಳ ಅವಧಿಯಲ್ಲಿ ಸದರಿ ಪದವು ವೈವಿಧ್ಯಮಯ ಅರ್ಥಗಳನ್ನು ತನ್ನದಾಗಿಸಿಕೊಂಡಿದೆ. 1970ರ ದಶಕದ ಅಂತ್ಯದ ವೇಳೆಗೆ, ಶ್ರವ್ಯಾಂಶದ ಧ್ವನಿಪಥವೊಂದರೊಂದಿಗೆ ಹೊಂದಿಕೊಂಡಿರುವ ಬಹು-ಪ್ರಕ್ಷೇಪಕ ಚಿತ್ರಫಲಕ (ಮಲ್ಟಿ-ಪ್ರೊಜೆಕ್ಟರ‍್ ಸ್ಲೈಡ್) ಪ್ರದರ್ಶನಗಳನ್ನು ಒಳಗೊಂಡ ಪ್ರಸ್ತುತಿಗಳನ್ನು ವಿವರಿಸಲು ಈ ಪದವನ್ನು ಬಳಸಲಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ] ಆದಾಗ್ಯೂ, 1990ರ ದಶಕದ ವೇಳೆಗೆ 'ಮಲ್ಟಿಮೀಡಿಯಾ'ವು ಅದರ ಈಗಿನ ಅರ್ಥವನ್ನು ಪಡೆದುಕೊಂಡಿತು. 1990ರ ದಶಕದಲ್ಲಿ Gesellschaft fur deutsche Sprachgebrauch ಎಂಬ ಜರ್ಮನ್ ಭಾಷಾ ಬಳಕೆಯ ಸಮಾಜವು ಪದದ ಪ್ರಾಮುಖ್ಯತೆಯನ್ನು ಹಾಗೂ ಸರ್ವತ್ರ ಅಸ್ತಿತ್ವವನ್ನು ಗುರುತಿಸಲು ನಿರ್ಧರಿಸಿತು ಹಾಗೂ 1995ರಲ್ಲಿ ಇದಕ್ಕೆ ’ವರ್ಷದ ಪದ’ ಎಂಬ ಬಿರುದನ್ನು ನೀಡಿತು. "ಅದ್ಭುತವಾದ ಹೊಸ ಮಾಧ್ಯಮಪ್ರಪಂಚದಲ್ಲಿ ಮಲ್ಟಿಮೀಡಿಯಾವು ಒಂದು ಪ್ರಧಾನ ಪದವಾಗಿ ಮಾರ್ಪಟ್ಟಿದೆ" ಎಂದು ಹೇಳುವ ಮೂಲಕ ಸಂಸ್ಥೆಯು ಇದರ ತಾರ್ಕಿಕ ವಿವರಣೆಯ ಸಾರಸಂಗ್ರಹರೂಪವನ್ನು ನೀಡಿತು.[೨]
ಸಾಮಾನ್ಯ ಬಳಕೆಯಲ್ಲಿ, ಮಲ್ಟಿಮೀಡಿಯಾ ಎಂಬ ಪದವು ವಿದ್ಯುನ್ಮಾನೀಯವಾಗಿ ಸಾದರಪಡಿಸಲಾದ ಮಾಧ್ಯಮ ಸಂಯೋಜನೆಯೊಂದನ್ನು ಉಲ್ಲೇಖಿಸುತ್ತದೆ. ಈ ಸಂಯೋಜನೆಯು ವಿಡಿಯೋ, ಸ್ಥಿರ ಬಿಂಬಗಳು, ಶ್ರವ್ಯಾಂಶ, ಪಠ್ಯ ಇವೇ ಮೊದಲಾದ ಅಂಶಗಳನ್ನು ಒಳಗೊಂಡಿದ್ದು ಅವನ್ನು ಪ್ರಭಾವಶಾಲಿ ವಿಧಾನದಲ್ಲಿ ತಲುಪಬಹುದಾಗಿದೆ. ಇಂದು ವೆಬ್ ತಾಣಗಳಲ್ಲಿರುವ ಹುರುಳಿನ ಬಹುಪಾಲು ಭಾಗವು ಲಕ್ಷಾಂತರ ಜನರಿಂದ ಗ್ರಹಿಸಲ್ಪಟ್ಟಿರುವಂತೆ ಈ ವ್ಯಾಖ್ಯಾನದ ಪರಿಮಿತಿಯೊಳಗೆ ಬರುತ್ತದೆ. 1990ರ ದಶಕದಲ್ಲಿ ಮಾರುಕಟ್ಟೆ ಮಾಡಲಾದ ಕೆಲವೊಂದು ಕಂಪ್ಯೂಟರ್‌ಗಳನ್ನು "ಮಲ್ಟಿಮೀಡಿಯಾ" ಕಂಪ್ಯೂಟರ್‌ಗಳೆಂದೇ ಕರೆಯಲಾಗಿತ್ತು. ಏಕೆಂದರೆ, ಹಲವು ನೂರು ಮೆಗಾಬೈಟ್‌ಗಳಷ್ಟು ವಿಡಿಯೋ, ಚಿತ್ರ, ಮತ್ತು ಶ್ರವ್ಯಾಂಶ ದತ್ತಾಂಶದ ವಿತರಣೆಗೆ ಅಥವಾ ನೀಡಿಕೆಗೆ ಇವುಗಳಲ್ಲಿ ಸಂಯೋಜಿಸಲಾಗಿದ್ದ CD-ROM ಡ್ರೈವ್ ಅವಕಾಶ ಮಾಡಿಕೊಟ್ಟಿತ್ತು.
ಪದದ ಬಳಕೆ ಮತ್ತು ಸಂದರ್ಭ
[ಬದಲಾಯಿಸಿ]ಮಾಧ್ಯಮಗಳು (ಮೀಡಿಯಾ) ಎಂಬುದು ಮಾಧ್ಯಮ (ಮೀಡಿಯಂ) ಎಂಬುದರ ಬಹುವಚನವಾಗಿರುವುದರಿಂದ, ಶ್ರವ್ಯ CDಗಳ ಒಂದು ಸಂಗ್ರಹದಂಥ ಮಾಧ್ಯಮಗಳ ಕೇವಲ ಒಂದು ಸ್ವರೂಪದ ಬಹು-ಸಂಭವಿಸುವಿಕೆಯನ್ನು ವಿವರಿಸಲು "ಬಹು" ಎಂಬ ಪದವನ್ನು ಬಳಸಿದರೆ, "ಮಲ್ಟಿಮೀಡಿಯಾ" ಎಂಬುದು ಒಂದು ಶಬ್ದಾಧಿಕ್ಯವಾಗಿ ಪರಿಣಮಿಸುತ್ತದೆ. ಆದ್ದರಿಂದ ಮಾಧ್ಯಮ ಮತ್ತು ಹುರುಳಿನ ಬಹು ನಮೂನೆಗಳನ್ನು ವಿವರಿಸಲು "ಮಲ್ಟಿಮೀಡಿಯಾ" ಎಂಬ ಪದವನ್ನು ಏಕಮಾತ್ರವಾಗಿ ಅಥವಾ ಪ್ರತ್ಯೇಕವಾಗಿ ಬಳಸುವುದು ಮುಖ್ಯವಾಗಿರುತ್ತದೆ.
"ಮಲ್ಟಿಮೀಡಿಯಾ" ಎಂಬ ಪದವು ಇಬ್ಬಗೆಯ ಸ್ವರೂಪವನ್ನೂ ಹೊಂದಿದೆ. ಒಂದು ವೇಳೆ ಸ್ಥಿರ ಹುರುಳಿನಲ್ಲಿ (ಒಂದು ಕಾಗದದ ಪುಸ್ತಕದಂಥದು) ಚಿತ್ರಗಳು ಮತ್ತು ಪಠ್ಯ ಇವೆರಡೂ ಸೇರಿಕೊಂಡಿದ್ದರೆ, ಅದನ್ನು ಮಲ್ಟಿಮೀಡಿಯಾ ಎಂದು ಪರಿಗಣಿಸಬಹುದು, ಅಥವಾ ಬಳಕೆದಾರನು ತನ್ನ ಇಚ್ಛಾನುಸಾರ ಪುಟಗಳನ್ನು ತಿರುಗಿಸುವ ಮೂಲಕ ಪರಸ್ಪರ ಪ್ರಭಾವ ಬೀರಿದಲ್ಲಿ, ಅದನ್ನು ಪ್ರಭಾವಶಾಲಿ ಎಂದು ಪರಿಗಣಿಸಬಹುದು. ಪುಸ್ತಕಗಳ ಪುಟಗಳನ್ನು ಅನುಕ್ರಮವಾಗಿಲ್ಲದ ರೀತಿಯಲ್ಲಿ ಓದಲು ಅವಕಾಶವಾದರೆ, ಪುಸ್ತಕಗಳನ್ನೂ ಸಹ ರೇಖಾತ್ಮಕವಲ್ಲದ್ದು ಎಂದು ಪರಿಗಣಿಸಬಹುದು. ಒಂದು ವೇಳೆ, "ವಿಡಿಯೋ" ಎಂಬ ಪದವನ್ನು ಚಲನ ಛಾಯಾಚಿತ್ರಣವನ್ನು ವಿವರಿಸಲು ಪ್ರತ್ಯೇಕವಾಗಿ ಬಳಸದಿದ್ದರೆ, ಅದು ಮಲ್ಟಿಮೀಡಿಯಾ ಪರಿಭಾಷೆಯಲ್ಲಿ ಇಬ್ಬಗೆಯ ಸ್ವರೂಪದ್ದಾಗಿರುತ್ತದೆ. "ಫೂಟೇಜು" ಎಂಬುದರ ಬದಲಿಗೆ ಕಡತ ಕ್ರಮವ್ಯವಸ್ಥೆ, ವಿತರಣಾ ಕ್ರಮವ್ಯವಸ್ಥೆ, ಅಥವಾ ಪ್ರಸ್ತುತಿ ಕ್ರಮವ್ಯವಸ್ಥೆಯನ್ನು ವಿವರಿಸಲು ವಿಡಿಯೋ ಎಂಬ ಪದವನ್ನು ಅನೇಕವೇಳೆ ಬಳಸಲಾಗುತ್ತದೆ. ಪ್ರದರ್ಶಿಸಿದ ಚಲನಶೀಲ ಚಿತ್ರಣಗಳ "ಅನಿಮೇಷನ್" ನಿಂದ (ಚಲನ ವ್ಯಂಗ್ಯಚಿತ್ರದ ತಯಾರಿಕಾ ಕ್ರಮಕ್ಕೆ ಅನಿಮೇಷನ್ ಎನ್ನುತ್ತಾರೆ) ಚಲನ ಛಾಯಾಚಿತ್ರಣವನ್ನು ಪ್ರತ್ಯೇಕಿಸಲು ಫೂಟೇಜು ಎಂಬ ಪದವನ್ನು ಬಳಸಲಾಗುತ್ತದೆ.
ಮಾಹಿತಿಯ ಹುರುಳಿನ ಬಹು ನಮೂನೆಗಳನ್ನು ಶ್ರವ್ಯ ಅಥವಾ ದೃಶ್ಯ ಸ್ವರೂಪದಂಥ ಪ್ರಸ್ತುತಿಯ ಆಧುನಿಕ ನಮೂನೆಗಳೆಂದು ಹೆಚ್ಚಿನ ವೇಳೆ ಪರಿಗಣಿಸಲಾಗುವುದಿಲ್ಲ. ಇದೇ ರೀತಿಯಲ್ಲಿ, ಮಾಹಿತಿ ಸಂಸ್ಕರಣೆಯ (ಉದಾಹರಣೆಗೆ, ಪ್ರಭಾವಶಾಲಿಯಲ್ಲದ ಶ್ರವ್ಯಾಂಶ) ಏಕ ವಿಧಾನಗಳೊಂದಿಗಿನ ಮಾಹಿತಿಯ ಹುರುಳಿನ ಏಕ ನಮೂನೆಗಳನ್ನು ಮಲ್ಟಿಮೀಡಿಯಾ ಎಂದು ಅನೇಕ ವೇಳೆ ಕರೆಯಲಾಗುತ್ತದೆ. ಪ್ರಾಯಶಃ ಇದು ಕ್ರಿಯಾಶೀಲ ಮಾಧ್ಯಮದಿಂದ ಸ್ಥಿರ ಮಾಧ್ಯಮವನ್ನು ಪ್ರತ್ಯೇಕಿಸುವುದಕ್ಕಾಗಿರಬಹುದು. ಉದಾಹರಣೆಗೆ, ಲಲಿತಕಲೆಗಳ ವಿಷಯದಲ್ಲಿ, ಲೆಡಾ ಲಸ್ ಲೂಕೆನ್‌ರ ಮೋಡಲ್ ಆರ್ಟ್ ಸ್ವರೂಪವು ವರ್ಣಚಿತ್ರ ರಚನೆಯ ಪ್ರಪಂಚದೊಳಗೆ ಸಂಗೀತಮಯ ಸಂಯೋಜನೆ ಮತ್ತು ಚಲನಚಿತ್ರದ ಎರಡು ಪ್ರಮುಖ ಘಟಕಗಳನ್ನು ತರುತ್ತದೆ. ಇದು ಚಿತ್ರವೊಂದರ ಮತ್ತು ಚಿತ್ರವೊಂದರೊಳಗಿನ ಒಂದು ವಿಷಯ ಮತ್ತು ಚಲನೆಯ ಮಾರ್ಪಾಡಾಗಿದ್ದು, ಅದು ಮೋಡಲ್ ಆರ್ಟ್ ನ್ನು ಕಲೆಯ ಒಂದು ಪ್ರಭಾವಶಾಲಿ ಮಲ್ಟಿಮೀಡಿಯಾ ನಮೂನೆಯನ್ನಾಗಿಸುತ್ತದೆ. ನಿರ್ವಾಹಕರು ಮತ್ತು ರಂಗಪರಿಕರಗಳು, ಹುರುಳು ಮತ್ತು ಮಾಧ್ಯಮ ಈ ಎರಡರ ಬಹು ನಮೂನೆಗಳಾಗಿವೆ ಎಂದು ಪರಿಗಣಿಸುವ ಮೂಲಕ ಪ್ರದರ್ಶನ ಕಲೆಗಳನ್ನು ಕೂಡಾ ಮಲ್ಟಿಮೀಡಿಯಾ ಎಂದು ಪರಿಗಣಿಸಬಹುದು.
ಬಳಕೆ
[ಬದಲಾಯಿಸಿ]ಮಲ್ಟಿಮೀಡಿಯಾವು ತನ್ನ ಅನ್ವಯಿಕೆಯನ್ನು ಈ ಕೆಳಗಿನ ಹಲವಾರು ಕ್ಷೇತ್ರಗಳಲ್ಲಿ ಕಂಡುಕೊಂಡಿದೆಯಾದರೂ, ಕೇವಲ ಅಷ್ಟಕ್ಕೇ ಅದು ಸೀಮಿತಗೊಂಡಿಲ್ಲ. ಅಂಥ ಕೆಲವು ಕ್ಷೇತ್ರಗಳೆಂದರೆ ಜಾಹೀರಾತುಗಳು, ಕಲೆ, ಶಿಕ್ಷಣ, ಮನರಂಜನೆ, ಎಂಜಿನಿಯರಿಂಗ್, ವೈದ್ಯಶಾಸ್ತ್ರ, ಗಣಿತಶಾಸ್ತ್ರ, ವ್ಯವಹಾರ, ವೈಜ್ಞಾನಿಕ ಸಂಶೋಧನೆ ಮತ್ತು ಪ್ರದೇಶದ ಪ್ರಾಪಂಚಿಕ ಅನ್ವಯಿಕೆಗಳು, ನೋಡಿ ಬ್ಯಾನರ್ಜಿ & ಘೋಷ್ (2010). ಹಲವಾರು ಉದಾಹರಣೆಗಳು ಈ ಕೆಳಕಂಡಂತಿವೆ:
ಸೃಜನಶೀಲ ಉದ್ಯಮಗಳಲ್ಲಿನ ಬಳಕೆ
[ಬದಲಾಯಿಸಿ]ಸೃಜನಶೀಲ ಉದ್ಯಮಗಳು ಮಲ್ಟಿಮೀಡಿಯಾವನ್ನು ವೈವಿಧ್ಯಮಯ ಉದ್ದೇಶಗಳಿಗಾಗಿ ಬಳಸುತ್ತವೆ. ಲಲಿತಕಲೆಗಳಿಂದ ಮನರಂಜನೆಯವರೆಗೆ, ಮನರಂಜನೆಯಿಂದ ವಾಣಿಜ್ಯ ಕಲೆಯವರೆಗೆ, ವಾಣಿಜ್ಯ ಕಲೆಯಿಂದ ಪತ್ರಿಕೋದ್ಯಮದವರೆಗೆ, ಪತ್ರಿಕೋದ್ಯಮದಿಂದ ಮಾಧ್ಯಮ ಮತ್ತು ತಂತ್ರಾಂಶ ಸೇವೆಗಳವರೆಗಿನ, ಈ ಕೆಳಗೆ ಪಟ್ಟಿ ಮಾಡಲಾದ ಉದ್ಯಮಗಳ ಪೈಕಿ ಯಾವುದಕ್ಕಾದರೂ ಮಲ್ಟಿಮೀಡಿಯಾದ ಬಳಕೆಯಾಗುತ್ತದೆ. ಸ್ವತಂತ್ರ ಅಥವಾ ಪ್ರತ್ಯೇಕ ಮಲ್ಟಿಮೀಡಿಯಾ ವಿನ್ಯಾಸಗಾರನೊಬ್ಬ ತನ್ನ ವೃತ್ತಿಜೀವನದಾದ್ಯಂತ ತನ್ನ ಕ್ಷೇತ್ರದ ಹಲವು ವಲಯಗಳಿಗೆ ವ್ಯಾಪಿಸಿಕೊಳ್ಳಬಹುದು. ತಾಂತ್ರಿಕ ವಿಷಯದಿಂದ ಮೊದಲ್ಗೊಂಡು ವಿಶ್ಲೇಷಣಾತ್ಮಕ ವಿಷಯದವರೆಗೆ, ಅಲ್ಲಿಂದ ಸೃಜನಶೀಲ ವಿಷಯದವರೆಗೆ ಅವರ ಕುಶಲತೆಗಳಿಗೆ ಸಂಬಂಧಿಸಿದ ಮನವಿಯು ಇರಬಹುದು.
ವಾಣಿಜ್ಯ ಬಳಕೆ
[ಬದಲಾಯಿಸಿ]ವಾಣಿಜ್ಯ ಕಲಾವಿದರಿಂದ ಬಳಸಲ್ಪಡುತ್ತಿರುವ ವಿದ್ಯುನ್ಮಾನದ ಹಳೆಯ ಮತ್ತು ಹೊಸ ಮಾಧ್ಯಮಗಳ ಪೈಕಿ ಬಹುಪಾಲು ಮಲ್ಟಿಮೀಡಿಯಾವೇ ಆಗಿದೆ. ಜಾಹೀರಾತು ನೀಡಿಕೆಯಲ್ಲಿ ಫಕ್ಕನೆ ಸೆಳೆದುಕೊಳ್ಳಲು ಹಾಗೂ ಗಮನವನ್ನು ಇಡಲು ರೋಮಾಂಚಕ ಪ್ರಸ್ತುತಿಗಳನ್ನು ಬಳಸಲಾಗುತ್ತದೆ. ವ್ಯವಹಾರದಿಂದ ವ್ಯವಹಾರಕ್ಕೆ ನಡೆಯುವ ಸಂವಹನೆಗಳು, ಮತ್ತು ಅಂತರ ಕಚೇರಿಯ ಸಂವಹನೆಗಳು ಬಹುಪಾಲು ಸೃಜನಶೀಲ ಸೇವೆಗಳ ಸಂಸ್ಥೆಗಳಿಂದ ಅಭಿವೃದ್ಧಿಗೊಳಿಸಲ್ಪಡುತ್ತವೆ. ಪರಿಕಲ್ಪನೆಗಳನ್ನು ಮಾರಾಟ ಮಾಡಲು ಅಥವಾ ತರಬೇತಿ ಕಾರ್ಯಕ್ರಮದಲ್ಲಿ ಹುರುಪು ತುಂಬಲು, ಕೇವಲ ಸರಳವಾದ ಚಿತ್ರಫಲಕ (ಸ್ಲೈಡ್) ಪ್ರದರ್ಶನಗಳಿಗೆ ಬದಲಾಗಿ ತಾಂತ್ರಿಕವಾಗಿ ಮುಂದುವರಿದ ಮಲ್ಟಿಮೀಡಿಯಾ ಪ್ರಸ್ತುತಿಗಳನ್ನು ಬಳಸುವುದು ಇಲ್ಲಿನ ವಿಶೇಷವೆನ್ನಬಹುದು.
ವಾಣಿಜ್ಯ ಮಲ್ಟಿಮೀಡಿಯಾದ ಅಭಿವರ್ಧಕರನ್ನು (ಡೆವಲಪರ್ಸ್) ಸರ್ಕಾರಿ ಸೇವೆಗಳು ಮತ್ತು ಲಾಭೋದ್ದೇಶವಿಲ್ಲದ ಸೇವೆಗಳ ಅನ್ವಯಿಕೆಗಳ ವಿನ್ಯಾಸಕಾರ್ಯಕ್ಕಾಗಿ ಹಣದಂತೆ ಎರವಲು ಪಡೆಯಬಹುದು.
ಮನರಂಜನೆ ಮತ್ತು ಲಲಿತಕಲೆಗಳಲ್ಲಿನ ಬಳಕೆ
[ಬದಲಾಯಿಸಿ]ಇದರ ಜೊತೆಗೆ, ಮಲ್ಟಿಮೀಡಿಯಾವು ಮನರಂಜನಾ ಉದ್ಯಮದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಚಲನಚಿತ್ರಗಳು ಮತ್ತು ಅನಿಮೇಷನ್‌ಗಳಲ್ಲಿನ ವಿಶೇಷ ಪರಿಣಾಮಗಳನ್ನು ಅಭಿವೃದ್ಧಿಪಡಿಸಲು ಮಲ್ಟಿಮೀಡಿಯಾವನ್ನು ಹೆಚ್ಚು ಹೆಚ್ಚು ಬಳಸಲಾಗುತ್ತದೆ.
ಮಲ್ಟಿಮೀಡಿಯಾ ಆಟಗಳು ಒಂದು ಜನಪ್ರಿಯ ವಿಹಾರ-ಕಾಲಕ್ಷೇಪದ ಸ್ವರೂಪಗಳಾಗಿದ್ದು, ಅವು CD-ROMಗಳ ಸ್ವರೂಪದಲ್ಲಿ ಇಲ್ಲವೇ ಆನ್‌ಲೈನ್ ವಿಧಾನದಲ್ಲಿ ದೊರೆಯುವ ತಂತ್ರಾಂಶದ ಯೋಜನಗಳಾಗಿವೆ. ಕೆಲವೊಂದು ವಿಡಿಯೋ ಆಟಗಳು ಮಲ್ಟಿಮೀಡಿಯಾದ ಗುಣಲಕ್ಷಣಗಳನ್ನೂ ಬಳಸುತ್ತವೆ.
ಚಟುವಟಿಕೆಯಿಲ್ಲದೆ ಅಥವಾ ಜಡರೀತಿಯಲ್ಲಿ ಕೇವಲ ಮಾಹಿತಿಯನ್ನು ಸ್ವೀಕರಿಸುವವರಂತೆ ಬಳಕೆದಾರರು ಕುಳಿತುಕೊಳ್ಳುವ ಬದಲು, ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವಲ್ಲಿ ಅನುವು ಮಾಡಿಕೊಡುವ ಮಲ್ಟಿಮೀಡಿಯಾ ಅನ್ವಯಿಕೆಗಳನ್ನು ಪ್ರಭಾವಶಾಲಿ ಮಲ್ಟಿಮೀಡಿಯಾ ಎಂದು ಕರೆಯಲಾಗುತ್ತದೆ.
ಕಲಾಪ್ರಕಾರಗಳಲ್ಲಿ ಮಲ್ಟಿಮೀಡಿಯಾ ಕಲಾವಿದರುಗಳಿದ್ದು, ಅವರ ಮನಸ್ಸುಗಳು ವಿಭಿನ್ನ ಮಾಧ್ಯಮಗಳನ್ನು ಬಳಸಿ ಕೌಶಲಗಳನ್ನು ಹದವಾಗಿ ಮಿಳಿತಗೊಳಿಸುವಷ್ಟು ಸಮರ್ಥವಾಗಿರುತ್ತವೆ. ಇದರಿಂದಾಗಿ ವೀಕ್ಷಕರ ಮೇಲೆ ಅತೀವವಾದ ಪ್ರಭಾವ ಬೀರಲು ಸಾಧ್ಯವಾಗುತ್ತದೆ.
ಇಂಥವುಗಳ ಪೈಕಿ ಒಂದು ಅತ್ಯಂತ ಸಮಂಜಸವಾದ ಉದಾಹರಣೆಯೆಂದರೆ ಪೀಟರ್ ಗ್ರೀನವೇ ಎಂಬಾತನದು ಎನ್ನಬಹುದು. ಈತ ಗೀತನಾಟಕ ಮತ್ತು ಎಲ್ಲಾ ಬಗೆಯ ಅಂಕೀಯ ಮಾಧ್ಯಮಗಳೊಂದಿಗೆ ಚಲನಚಿತ್ರವನ್ನು ಒಗ್ಗೂಡಿಸುತ್ತಿದ್ದಾನೆ.
ಒಂದು ಕಲಾ ಚಿತ್ರಶಾಲೆಯಂಥ ಸಾಂಪ್ರದಾಯಿಕ ಲಲಿತಕಲೆಗಳ ಕ್ಷೇತ್ರವೊಂದರಲ್ಲಿ ಪ್ರದರ್ಶಿಸಬಹುದಾದ ಮಲ್ಟಿಮೀಡಿಯಾದ ಸೃಷ್ಟಿಯನ್ನು ಮತ್ತೊಂದು ವಿಧಾನವು ನಿಷ್ಕರ್ಷಿಸುತ್ತದೆ. ಮಲ್ಟಿಮೀಡಿಯಾ ಪ್ರದರ್ಶನಾ ಸಾಮಗ್ರಿಯು ಕ್ಷಣಿಕ ಅಥವಾ ಅಸ್ಥಿರವಾಗಿರಬಹುದಾದರೂ, ಅದರ ಹುರುಳಿನ ಉಳಿಕೆ ಅಥವಾ ಅಸ್ತಿತ್ವವು ಸಾಂಪ್ರದಾಯಿಕ ಮಾಧ್ಯಮದಷ್ಟೇ ಬಲವಾಗಿರುತ್ತದೆ. ಅಂಕೀಯ ಧ್ವನಿಮುದ್ರಿಸುವಿಕೆಯ ಸಾಮಗ್ರಿಯು ಇದರಂತೆಯೇ ಬಾಳಿಕೆಯನ್ನು ಹೊಂದಿರಬಹುದು ಮತ್ತು ಪ್ರತಿಸಲವೂ ನಿಖರವಾದ ಪ್ರತಿಗಳನ್ನು ನೀಡುವುದರೊಂದಿಗೆ ಅಪಾರಪ್ರಮಾಣದಲ್ಲಿ ನಕಲು ತೆಗೆಯಬಹುದಾದ ಸಾಮರ್ಥ್ಯವನ್ನು ಹೊಂದಿರಬಹುದು.
ಶಿಕ್ಷಣದಲ್ಲಿನ ಬಳಕೆ
[ಬದಲಾಯಿಸಿ]ಶಿಕ್ಷಣ ಕ್ಷೇತ್ರದಲ್ಲಿ, ಕಂಪ್ಯೂಟರ್-ಆಧರಿತ ತರಬೇತಿ ಶಿಕ್ಷಣಕ್ರಮಗಳು (ಕಂಪ್ಯೂಟರ್ ಬೇಸ್ಡ್ ಟ್ರೇನಿಂಗ್ ಕೋರ್ಸಸ್ ಅಥವಾ CBTಗಳೆಂದೇ ಇವು ಜನಪ್ರಿಯ) ಮತ್ತು ವಿಶ್ವಕೋಶ ಹಾಗೂ ಪಂಚಾಂಗಗಳಂಥ ಪರಾಮರ್ಶನ ಪುಸ್ತಕಗಳನ್ನು ತಯಾರಿಸಲು ಮಲ್ಟಿಮೀಡಿಯಾವನ್ನು ಬಳಸಲಾಗುತ್ತದೆ. ವೈವಿಧ್ಯಮಯ ಮಾಹಿತಿ ಕ್ರಮವ್ಯವಸ್ಥೆಗಳಲ್ಲಿನ ಪ್ರಸ್ತುತಿಗಳ ಒಂದು ಸರಣಿ, ನಿರ್ದಿಷ್ಟ ವಿಷಯವೊಂದರ ಕುರಿತಾದ ಪಠ್ಯ, ಮತ್ತು ಸಂಬಂಧಿಸಿದ ಚಿತ್ರಸರಣಿಗಳ ಮೂಲಕ ಬಳಕೆದಾರನು ಅವಲೋಕನವನ್ನು ಮಾಡಲು CBTಯೊಂದು ಅವಕಾಶ ಮಾಡಿಕೊಡುತ್ತದೆ. ಶಿಕ್ಷಣವನ್ನು ಮನರಂಜನೆಯೊಂದಿಗೆ ಸಂಯೋಜಿಸುವುದನ್ನು, ಅದರಲ್ಲೂ ವಿಶೇಷವಾಗಿ ಮಲ್ಟಿಮೀಡಿಯಾ ಮನರಂಜನೆಯನ್ನು ವಿವರಿಸಲು ಶಿಕ್ಷಣರಂಜನೆ ಎಂಬ ಅನೌಪಚಾರಿಕ ಪದವನ್ನು ಬಳಸಲಾಗುತ್ತದೆ.
ಮಲ್ಟಿಮೀಡಿಯಾದ ಪರಿಚಯವಾದ ಕಾರಣದಿಂದಾಗಿ ಕಳೆದ ದಶಕದಲ್ಲಿನ ಕಲಿಕಾ ಸಿದ್ಧಾಂತವು ನಾಟಕೀಯವಾಗಿ ವಿಸ್ತರಿಸಲ್ಪಟ್ಟಿದೆ. ಸಂಶೋಧನೆಯ ಹಲವು ಮಾರ್ಗಗಳು ವಿಕಸನಗೊಂಡಿವೆ (ಉದಾಹರಣೆಗೆ, ಅರಿವಿನ ಹೊರೆ, ಮಲ್ಟಿಮೀಡಿಯಾ ಕಲಿಕೆ, ಮತ್ತು ಪಟ್ಟಿಯು ಹೀಗೇ ಮುಂದುವರಿಯುತ್ತದೆ). ಕಲಿಕೆ ಮತ್ತು ಬೋಧನೆಗಿರುವ ಸಾಧ್ಯತೆಗಳಿಗೆ ಕೊನೆಯೇ ಇಲ್ಲವೆನ್ನಬಹುದು.
ಮಾಧ್ಯಮದ ಅಭಿಗಮನದ ಪರಿಕಲ್ಪನೆಯೂ ಸಹ ಶಿಕ್ಷಣದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಉನ್ನತ ಶಿಕ್ಷಣದಲ್ಲಿ ಒಂದು ಪ್ರಮುಖ ಅಂಶವಾಗಿ ರೂಪುಗೊಳ್ಳುತ್ತಿದೆ. ಈಗ ಸಂಪನ್ಮೂಲಗಳನ್ನು ಹಂಚಿಕೊಳ್ಳುವ ಮತ್ತು ಪಾರಸ್ಪರಿಕವಾಗಿ ಕಾರ್ಯನಡೆಸುವ ಧ್ವನಿ (ಮತ್ತು ದೂರವಾಣಿ ವ್ಯವಸ್ಥೆಯ ಗುಣಲಕ್ಷಣಗಳು), ದತ್ತಾಂಶ (ಮತ್ತು ಉತ್ಪಾದನಾಶೀಲ ಅನ್ವಯಿಕೆಗಳು) ಮತ್ತು ವಿಡಿಯೋದಂಥ ಪ್ರತ್ಯೇಕ ತಂತ್ರಜ್ಞಾನಗಳಾಗಿ ವ್ಯಾಖ್ಯಾನಿಸಲ್ಪಟ್ಟಿರುವ ಮತ್ತು ಸಹಕ್ರಿಯೆಯ ಸ್ವರೂಪದಲ್ಲಿ ಹೊಸ ಸಾಮರ್ಥ್ಯಗಳನ್ನು ಸೃಷ್ಟಿಸುತ್ತಿರುವ ಮಾಧ್ಯಮ ಅಭಿಗಮನವು, ಪ್ರಪಂಚದಾದ್ಯಂತದ ವಿಶ್ವವಿದ್ಯಾಲಯಗಳಲ್ಲಿನ ಪಠ್ಯಕ್ರಮವನ್ನು ಕ್ಷಿಪ್ರರೀತಿಯಲ್ಲಿ ಬದಲಾಯಿಸುತ್ತಿದೆ.
ಅದೇ ರೀತಿಯಲ್ಲಿ, ಈ ಸೂಕ್ಷ್ಮಮತಿತ್ವದ ತಂತ್ರಜ್ಞಾನದ ಕುಶಲತೆಯ ಅವಶ್ಯಕತೆಯನ್ನು ಹೊಂದಿರುವ ಕೆಲಸಗಳ ಲಭ್ಯತೆಯನ್ನು, ಅಥವಾ ಅದರ ಕೊರತೆಯನ್ನು ಇದು ಬದಲಾಯಿಸುತ್ತಿದೆ.
ಎಲ್ಲೆಡೆಯ ವೃತ್ತಪತ್ರಿಕಾ ಕಂಪನಿಗಳೂ ಸಹ ತಮ್ಮ ಕಾರ್ಯಕ್ಷೇತ್ರದಲ್ಲಿ ಇದರ ಪರಿಪಾಠಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೊಸ ವಿದ್ಯಮಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿವೆ. ಈ ವಲಯವನ್ನು ತಲುಪಲು ಇಂಥ ಕೆಲವೊಂದು ಕಂಪನಿಗಳು ಇನ್ನೂ ನಿಧಾನಗತಿಯನ್ನು ಅನುಸರಿಸಿದ್ದರೂ ಸಹ, ನ್ಯೂಯಾರ್ಕ್ ಟೈಮ್ಸ್, USA ಟುಡೆ ಮತ್ತು ದಿ ವಾಷಿಂಗ್ಟನ್ ಪೋಸ್ಟ್‌ನಂಥ ಇತರ ಪ್ರಮುಖ ವೃತ್ತಪತ್ರಿಕೆಗಳು ಜಾಗತೀಕರಣಗೊಂಡ ಪ್ರಪಂಚವೊಂದರಲ್ಲಿನ ವೃತ್ತಪತ್ರಿಕಾ ಉದ್ಯಮದ ಸ್ಥಾನವನ್ನು ನಿರ್ಧರಿಸುವುದಕ್ಕಾಗಿ ಪೂರ್ವನಿದರ್ಶನವನ್ನು ಸ್ಥಾಪಿಸುತ್ತಿವೆ.
ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಬಳಕೆ
[ಬದಲಾಯಿಸಿ]ಮನರಂಜನೆಯಿಂದ ಮೊದಲ್ಗೊಂಡು ಸೇನಾ ಅಥವಾ ಕೈಗಾರಿಕಾ ತರಬೇತಿಯಂಥ ತರಬೇತಿಯವರೆಗಿನ ಯಾವುದೇ ಕ್ಷೇತ್ರಕ್ಕಾಗಿರುವ ಕಂಪ್ಯೂಟರ್ ಅನುಕರಣಗಳಲ್ಲಿ ಮಲ್ಟಿಮೀಡಿಯಾವನ್ನು ಸಾಫ್ಟ್‌ವೇರ‍್ ಎಂಜಿನಿಯರುಗಳು ಬಳಸಬಹುದು. ತಂತ್ರಾಂಶ ಅಂತರವಸ್ತುಗಳಿಗಾಗಿರುವ (ಅಂದರೆ, ಸಾಫ್ಟ್‌ವೇರ‍್ ಇಂಟರ್‌ಫೇಸ್‌ಗಳಿಗಾಗಿರುವ) ಮಲ್ಟಿಮೀಡಿಯಾವನ್ನು ಸೃಜನಶೀಲ ಕಸುಬುದಾರರುಗಳು ಮತ್ತು ಸಾಫ್ಟ್‌ವೇರ‍್ ಎಂಜಿನಿಯರುಗಳ ನಡುವಿನ ಒಂದು ಸಹೋದ್ಯಮವಾಗಿ ಬಹುಪಾಲು ಮಾಡಲಾಗುತ್ತದೆ.
ಉದ್ಯಮದಲ್ಲಿನ ಬಳಕೆ
[ಬದಲಾಯಿಸಿ]ಔದ್ಯಮಿಕ ವಲಯದಲ್ಲಿ, ಷೇರುದಾರರು, ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ಮಾಹಿತಿಯನ್ನು ಸಾದರಪಡಿಸುವಲ್ಲಿ ನೆರವಾಗುವ ಒಂದು ಮಾರ್ಗವಾಗಿ ಮಲ್ಟಿಮೀಡಿಯಾವನ್ನು ಬಳಸಲಾಗುತ್ತದೆ. ವಸ್ತುತಃ ಸೀಮೆಯಿಲ್ಲದ ವೆಬ್-ಆಧರಿತ ತಂತ್ರಜ್ಞಾನದ ಮೂಲಕ ಪ್ರಪಂಚದಾದ್ಯಂತ ನೌಕರರಿಗೆ ತರಬೇತಿ ನೀಡಲು, ಜಾಹೀರಾತು ನೀಡಿಕೆಗೆ ಅನುವು ಮಾಡಲು ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡಲೂ ಸಹ ಮಲ್ಟಿಮೀಡಿಯಾವು ಸಹಾಯಕಾರಿಯಾಗಿದೆ.
ಗಣಿತೀಯ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿನ ಬಳಕೆ
[ಬದಲಾಯಿಸಿ]ಗಣಿತೀಯ ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ, ಮಾದರಿ ನಿರೂಪಣೆ ಮತ್ತು ಅನುಕರಣ ಕಾರ್ಯಕ್ಕಾಗಿ ಮಲ್ಟಿಮೀಡಿಯಾವು ಮುಖ್ಯವಾಗಿ ಬಳಕೆಯಾಗುತ್ತದೆ. ಉದಾಹರಣೆಗೆ, ಒಬ್ಬ ವಿಜ್ಞಾನಿಯು ನಿರ್ದಿಷ್ಟ ವಸ್ತುವೊಂದರ ಆಣ್ವಿಕ ಮಾದರಿಯೊಂದರ ಕಡೆಗೆ ಗಮನ ಹರಿಸಬಹುದು ಮತ್ತು ಹೊಸ ವಸ್ತುವೊಂದನ್ನು ರೂಪಿಸುವ ನಿಟ್ಟಿನಲ್ಲಿ ಅದನ್ನು ಮಾರ್ಪಡಿಸಬಹುದು. ಜರ್ನಲ್ ಆಫ್ ಮಲ್ಟಿಮೀಡಿಯಾದಂಥ ನಿಯತಕಾಲಿಕಗಳಲ್ಲಿ ಪ್ರಾತಿನಿಧಿಕ ಸಂಶೋಧನೆಯನ್ನು ಕಾಣಬಹುದು.
ಔಷಧದಲ್ಲಿನ ಬಳಕೆ
[ಬದಲಾಯಿಸಿ]ವೈದ್ಯಶಾಸ್ತ್ರದಲ್ಲಿ, ವೈದ್ಯರು ವಸ್ತುತಃ ಶಸ್ತ್ರಚಿಕಿತ್ಸೆಯೊಂದರ ಕಡೆಗೆ ಗಮನಹರಿಸುವ ಮೂಲಕ ತರಬೇತಿಯನ್ನು ಪಡೆಯಬಹುದು ಅಥವಾ ವೈರಾಣುಗಳು ಹಾಗೂ ಬ್ಯಾಕ್ಟೀರಿಯಾದಿಂದ ಹರಡಲ್ಪಟ್ಟ ಕಾಯಿಲೆಗಳಿಂದ ಮಾನವ ಶರೀರವು ಹೇಗೆ ಸೋಂಕಿಗೀಡಾಗುತ್ತದೆ ಎಂಬುದನ್ನು ಅನುಕರಣೆ ಮಾಡಬಹುದು ಮತ್ತು ನಂತರದಲ್ಲಿ ಅದನ್ನು ತಡೆಯುವ ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು.
ದಸ್ತಾವೇಜು ಚಿತ್ರಿಸುವಿಕೆಯಲ್ಲಿನ ಬಳಕೆ
[ಬದಲಾಯಿಸಿ]ದಸ್ತಾವೇಜು ಚಿತ್ರಿಸುವಿಕೆ ಎಂಬುದೊಂದು ಕೌಶಲವಾಗಿದ್ದು, ಒಂದು ಬಿಂಬ/ದಸ್ತಾವೇಜಿನ ಶಾಶ್ವತಪ್ರತಿಯನ್ನು ಇದು ತೆಗೆದು, ಅದನ್ನೊಂದು ಅಂಕೀಯ ಕ್ರಮವ್ಯವಸ್ಥೆಯಾಗಿ ಮಾರ್ಪಡಿಸುತ್ತದೆ.
ಇತರೆ
[ಬದಲಾಯಿಸಿ]ಯುರೋಪ್‌ನಲ್ಲಿ, ಯುರೋಪಿಯನ್ ಮಲ್ಟಿಮೀಡಿಯಾ ಅಸೋಸಿಯೇಷನ್ಸ್ ಕನ್ವೆನ್ಷನ್ (EMMAC) ಎಂಬುದು ಮಲ್ಟಿಮೀಡಿಯಾ ಉದ್ಯಮಕ್ಕಾಗಿರುವ ಒಂದು ಆಕರ ಸಂಘಟನೆಯಾಗಿದೆ.
ಮಲ್ಟಿಮೀಡಿಯಾ ಸ್ವರೂಪವೊಂದರಲ್ಲಿ ಮಾಹಿತಿಯನ್ನು ರೂಪಿಸುವುದು
[ಬದಲಾಯಿಸಿ]ಪಠ್ಯ, ಚಿತ್ರಗಳು, ವಿಡಿಯೋ ಮತ್ತು ಧ್ವನಿಯನ್ನು ಒಂದು ಏಕಸ್ವರೂಪ ಅಥವಾ ನಮೂನೆಯೊಳಗೆ ಅಭಿಗಮನ ಮಾಡುವುದನ್ನು ಮಲ್ಟಿಮೀಡಿಯಾ ಪ್ರತಿನಿಧಿಸುತ್ತದೆ. ಮಲ್ಟಿಮೀಡಿಯಾ ಮತ್ತು ಅಂತರ್ಜಾಲದ ಶಕ್ತಿಯು, ಮಾಹಿತಿಯು ಸಂಪರ್ಕಹೊಂದಿರುವ ರೀತಿಯಲ್ಲಿ ಇರುತ್ತದೆ.
ಬರೆಯುವುದರೆಡೆಗಿನ ಒಂದು ಸಂಪೂರ್ಣ ಹೊಸ ವಿಧಾನವು ಮಲ್ಟಿಮೀಡಿಯಾ ಮತ್ತು ಅಂತರ್ಜಾಲಕ್ಕೆ ಅಗತ್ಯವಿರುತ್ತದೆ. 'ಆನ್-ಲೈನ್ ಪ್ರಪಂಚ'ಕ್ಕೆ ಸೂಕ್ತವಾಗುವಂತಿರುವ ಬರಹದ ಶೈಲಿಯು ಅಧಿಕವಾಗಿ ಪ್ರಶಸ್ತವಾಗಿಸಲ್ಪಟ್ಟಿದೆ ಮತ್ತು ಓದುಗರಿಂದ ಕ್ಷಿಪ್ರವಾಗಿ ಅವಲೋಕನಕ್ಕೆ ಒಳಗಾಗುವಂತೆ ವಿನ್ಯಾಸಗೊಳಿಸಲ್ಪಟ್ಟಿದೆ.[೩]
ಒಂದು ಉತ್ತಮವಾದ ವೆಬ್‌ತಾಣವನ್ನು ಒಂದು ನಿರ್ದಿಷ್ಟ ಉದ್ದೇಶವನ್ನು ಮನಸ್ಸಿನಲ್ಲಿರಿಸಿಕೊಂಡು ರೂಪಿಸಬೇಕಾಗುತ್ತದೆ ಮತ್ತು ಉತ್ತಮ ಪ್ರಭಾವಿ ಕ್ರಿಯಾಶಕ್ತಿ ಹಾಗೂ ಹೊಸ ತಂತ್ರಜ್ಞಾನದೊಂದಿಗಿನ ಒಂದು ವೆಬ್‌ತಾಣವು ಸಂದರ್ಶಕರನ್ನು ಆಕರ್ಷಿಸುವುದಕ್ಕಾಗಿ ಪ್ರಯೋಜನಕಾರಿಯಾಗಿಯೂ ಇರಬಲ್ಲುದಾಗಿರುತ್ತದೆ.
ವೆಬ್‌ತಾಣವು ಆಕರ್ಷಕವಾದ ಹಾಗೂ ನಾವೀನ್ಯತೆಯಿಂದ ಕೂಡಿದ ವಿನ್ಯಾಸವನ್ನು ಹೊಂದಿರಬೇಕಾಗುತ್ತದೆ, ತನ್ನ ಉದ್ದೇಶಕ್ಕೆ ತಕ್ಕಂತೆ ಕಾರ್ಯವೈಖರಿಯನ್ನು ಹೊಂದಿರಬೇಕಾಗುತ್ತದೆ, ಅದರಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುವುದು ಸುಲಭಸಾಧ್ಯವಾಗಿರಬೇಕಾಗುತ್ತದೆ, ಅದು ಆಗಿಂದಾಗ್ಗೆ ಪರಿಷ್ಕರಣೆಗೆ ಒಳಗಾಗಬೇಕಾಗುತ್ತದೆ ಹಾಗೂ ವೇಗವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಅನುವುಮಾಡಿಕೊಡುವಷ್ಟು ಅದು ವೇಗವಾಗಿರಬೇಕಾಗುತ್ತದೆ.[೪]
ಬಳಕೆದಾರರು ಪುಟವೊಂದನ್ನು ನೋಡುವಾಗ, ಒಮ್ಮೆಗೆ ಅವರು ಕೇವಲ ಒಂದು ಪುಟವನ್ನು ಮಾತ್ರ ನೋಡಲು ಸಾಧ್ಯವಿರುತ್ತದೆ. ಇದರ ಪರಿಣಾಮವಾಗಿ, ಮಲ್ಟಿಮೀಡಿಯಾ ಬಳಕೆದಾರರು ‘ಮಾಹಿತಿ ಸಂರಚನೆಯ ಒಂದು ಮಾನಸಿಕ ಮಾದರಿ’ಯನ್ನು ಸೃಷ್ಟಿಸಬೇಕಾಗುತ್ತದೆ.[೫]
ಯೇಲ್ ವಿಶ್ವವಿದ್ಯಾಲಯದ ವೆಬ್ ಶೈಲಿ ಕೈಪಿಡಿಯ ಲೇಖಕನಾದ ಪ್ಯಾಟ್ರಿಕ್ ಲಿಂಚ್ ಎಂಬಾತ ಹೇಳುವ ಪ್ರಕಾರ, ಮಲ್ಟಿಮೀಡಿಯಾ ನಿರ್ಮಾಣದ ವೈವಿಧ್ಯಮಯ ಅಂಗಗಳು ಹಾಗೂ ಉಪ-ವಿಭಾಗಗಳ ನಡುವಿನ ಸ್ಪಷ್ಟವಾದ ಕಾರ್ಯರೂಪದ ಮತ್ತು ಗ್ರಾಫಿಕ್ ಸ್ವರೂಪದ ನಿರಂತರತೆಯೊಂದಿಗಿನ ಮುಂಗಾಣುವಿಕೆ ಮತ್ತು ಸಂರಚನೆಯು ಅಗತ್ಯ ಬಳಕೆದಾರರಿಗಿರುತ್ತದೆ. ಈ ರೀತಿಯಲ್ಲಿ, ಯಾವುದೇ ಮಲ್ಟಿಮೀಡಿಯಾ ನಿರ್ಮಾಣದ ’ಹೋಂಪೇಜ್’ ಎಂಬುದು ಯಾವಾಗಲೂ ಒಂದು ಹೆಗ್ಗುರುತಾಗಿರುವುದು ಅವಶ್ಯವಿದ್ದು, ಒಂದು ಮಲ್ಟಿಮೀಡಿಯಾ ತುಣುಕಿನೊಳಗಡೆಯ ಯಾವುದೇ ಭಾಗದಿಂದ ಅದನ್ನು ಪ್ರವೇಶಿಸುವಷ್ಟು ಸಮರ್ಥವಾಗಿರಬೇಕು.
ಐಹಿಲ್
ಸಮಾವೇಶಗಳು
[ಬದಲಾಯಿಸಿ]ಮಲ್ಟಿಮೀಡಿಯಾ ಸಮಾವೇಶಗಳು ದೊಡ್ಡ ಸಂಖ್ಯೆಯಲ್ಲಿದ್ದು, ಅವುಗಳ ಪೈಕಿ ಎರಡು ಪ್ರಮುಖ ವಿದ್ವತ್ಪೂರ್ಣ ವೈಜ್ಞಾನಿಕ ಸಮಾವೇಶಗಳೆಂದರೆ:
- ACM ಮಲ್ಟಿಮೀಡಿಯಾ;
- IEEE ICME, ಮಲ್ಟಿಮೀಡಿಯಾ & ಮೇಳದ ಕುರಿತಾದ ಅಂತರರಾಷ್ಟ್ರೀಯ ಸಮಾವೇಶ.
ಇದನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]ಅಶೋಕ್ ಬ್ಯಾನರ್ಜಿ & ಆನಂದ ಮೋಹನ್ ಘೋಷ್ ಬರೆದಿರುವ ಮಲ್ಟಿಮೀಡಿಯಾ ಟೆಕ್ನಾಲಜೀಸ್, ಟಾಟಾ ಮೆಕ್‌ಗ್ರಾ ಹಿಲ್, 2010, ISBN(13) 978-0-07-066923-9. ಕಲಿಕಾ ಕೇಂದ್ರ: [೧]
- ↑ ರಿಚರ್ಡ್ ಆಲ್‌ಬೇರಿನೋ, "ಗೋಲ್ಡ್‌ಸ್ಟೀನ್’ಸ್ ಲೈಟ್‌ವರ್ಕ್ಸ್ ಅಟ್ ಸೌತ್‌ಹ್ಯಾಂಪ್ಟನ್," ವೆರೈಟಿ , ಆಗಸ್ಟ್ 10, 1966. ಸಂಪುಟ 213, ಸಂಖ್ಯೆ 12.
- ↑ ವೆರೈಟಿ , ಜನವರಿ 1-7, 1996.
- ↑ ಸ್ಟೀವರ್ಟ್, ಸಿ ಮತ್ತು ಕೋವಲ್ಜ್‌ಕೆ, ಎ. 1997, ಮೀಡಿಯಾ: ನ್ಯೂ ವೇಸ್ ಅಂಡ್ ಮೀನಿಂಗ್ಸ್ (ಎರಡನೇ ಆವೃತ್ತಿ), JACARANDa, ಮಿಲ್ಟನ್, ಸಿಡ್ನಿ. ಪುಟಗಳು 102.
- ↑ ಜೆನ್ನಿಫರ‍್ ಸ್ಟೋರಿ, ನೆಕ್ಸ್ಟ್ ಆನ್‌ಲೈನ್‌ನಿಂದ,2002.
- ↑ ಲಿಂಚ್ ಪಿ., ಯೇಲ್ ವಿಶ್ವವಿದ್ಯಾಲಯದ ವೆಬ್‌ಸ್ಟೈಲ್ ಕೈಪಿಡಿ, Http://info.med.yale.edu/caim/ಕೈಪಿಡಿ/sites/site_structure.heml.