ಮಹಾ ಬಿರುಕು ಕಣಿವೆ
ಗೋಚರ
ಮಹಾ ಬಿರುಕು ಕಣಿವೆ ಸುಮಾರು ೬,೦೦೦ ಕಿ.ಮಿ.ಗಳಷ್ಟು ಉದ್ದವಾಗಿರುವ ಒಂದು ಭೌಗೋಳಿಕ ಲಕ್ಷಣ. ಇದು ಪಶ್ಚಿಮ ಏಷ್ಯಾದಲ್ಲಿರುವ ಸಿರಿಯಾದ ಉತ್ತರ ಭಾಗದಿಂದ ಪೂರ್ವ ಆಫ್ರಿಕಾದ ಮೊಜಾಂಬಿಕ್ವರೆಗೆ ಹಬ್ಬಿದೆ. ಬಿರುಕು ಕಣಿವೆಗಳು ಹಲವಾರು ಟೆಕ್ಟಾನಿಕ್ ತಟ್ಟೆಗಳು ಸೇರುವ ಜಾಗವಾಗಿದ್ದು, ಈ ಕಣಿವೆ ೩೦ರಿಂದ ೧೦೦ ಕಿ.ಮಿ.ಗಳಷ್ಟು ಅಗಲ ಹೊಂದಿದ್ದು, ಸಹಸ್ರಾರು ಮೀಟರ್ಗಳಷ್ಟರವರೆಗೆ ಆಳವಾಗಿದೆ.