ವಿಷಯಕ್ಕೆ ಹೋಗು

ಮಿರಿಯಾಪೊಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹುಪಾದಿಗಳು
Temporal range: Wenlock–Present
ನಾಲ್ಕು ಅಸ್ತಿತ್ವದಲ್ಲಿರುವ ಬಹುಪಾದಿ ವರ್ಗಗಳ ಪ್ರತಿನಿಧಿಗಳು. ಮೇಲೆ ಎಡಕ್ಕಿಂದ ಪ್ರದಕ್ಷಿಣವಾಗಿ: ಕೈಲೊಪೋಡಾ, ಡಿಪ್ಲೊಪೋಡಾ, ಸಿಂಫ಼ೈಲಾ, ಮತ್ತು ಪೌರೊಪೋಡಾ.
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಆರ್ಥ್ರೊಪೋಡಾ
ಏಕಮೂಲ ವರ್ಗ: ಮ್ಯಾಂಡಿಬ್ಯುಲೇಟಾ
ಉಪವಿಭಾಗ: ಮಿರಿಯಾಪೊಡ
Latreille, 1802
ವರ್ಗಗಳು[]
  • ಕೈಲೊಪೋಡಾ
  • ಡಿಪ್ಲೊಪೋಡಾ
  • ಪೌರೊಪೋಡಾ
  • ಸಿಂಫ಼ೈಲಾ

ಮಿರಿಯಾಪೊಡ ಆರ್ತ್ರಾಪೊಡ ವಿಭಾಗಕ್ಕೆ ಸೇರಿದ ಸಂಧಿಪದಿಗಳ ಒಂದು ವರ್ಗ. ಶತಪದಿ, ಜರಿ, ಅಥವಾ ಲಕ್ಷ್ಮಿಚೇಳು (ಸೆಂಟಿಪೀಡ್ಸ್) ಹಾಗೂ ಸಹಸ್ರಪದಿ ಅಥವಾ ಹೆಜ್ಜರಿ (ಮಿಲಿಪೀಡ್ಸ್) ಎಂಬ ಎರಡು ಮುಖ್ಯ ಬಗೆಯ ಪ್ರಾಣಿಗಳನ್ನು ಒಳಗೊಂಡಿದೆ. ಮೊದಲನೆಯ ಬಗೆಯವು ಕೈಲೊಪೊಡ ಎಂಬ ಉಪವರ್ಗಕ್ಕೂ ಎರಡನೆಯ ಬಗೆಯವು ಡಿಪ್ಲೊಪೊಡ ವರ್ಗಕ್ಕೂ ಸೇರಿವೆ.

ದೇಹರಚನೆ

[ಬದಲಾಯಿಸಿ]

ಮಿರಿಯಾಪೊಡ ಗುಂಪಿನ ಪ್ರಾಣಿಗಳ ದೇಹ ಉದ್ದವಾಗಿದ್ದು ಸದೃಶರಚನೆಯ ಅನೇಕ ಖಂಡಗಳಿಂದ ರಚಿತವಾಗಿದೆ. ಖಂಡಗಳ ಸಂಖ್ಯೆ ನಿರ್ದಿಷ್ಟವೂ ಅಲ್ಲ.  ನಿಯಮಿತವೂ ಅಲ್ಲ. ದೇಹವನ್ನು ತಲೆ ಮತ್ತು ಮುಂಡಗಳೆಂದು ವಿಭಾಗಿಸಬಹುದು. ಮುಂಡದಲ್ಲಿ ಎದೆ ಮತ್ತು ಉದರಗಳೆಂಬ ವಿಭಾಗಗಳಿಲ್ಲ. ತಲೆಯ ಭಾಗದಲ್ಲಿ ಒಂದು ಜೊತೆ ಕಣ್ಣುಗಳು, ಒಂದು ಜೊತೆ ಸ್ಪರ್ಶಾಂಗಗಳು ಹಾಗೂ ದವಡೆಗಳುಂಟು. ಉಸಿರಾಡಲು ನೆರವಾಗುವ ಶ್ವಾಸನಳಿಕೆಗಳೂ ತ್ಯಾಜ್ಯ ವಸ್ತುಗಳನ್ನು ದೇಹದಿಂದ ಹೊರಹಾಕಲು ಮ್ಯಾಲ್ಫೀಘಿಯನ್ ನಳಿಕೆಗಳೂ ಇವೆ. ಜೀವನಚರಿತ್ರೆಯಲ್ಲಿ ನಿರ್ದಿಷ್ಟ ರೂಪಪರಿವರ್ತನೆ ಹಂತ ಕಂಡುಬರುವುದಿಲ್ಲ.

ಆವಾಸಸ್ಥಾನ

[ಬದಲಾಯಿಸಿ]

ಇವು ಉಷ್ಣ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ತೇವಭರಿತ ಸ್ಥಳಗಳಲ್ಲಿ ವಾಸಿಸುತ್ತವೆ.

ಶತಪದಿಗಳು

[ಬದಲಾಯಿಸಿ]

ಶತಪದಿಗಳಲ್ಲಿ ಸುಮಾರು 3,000 ಪ್ರಭೇದಗಳಿವೆ. ಇವುಗಳ ಪೈಕಿ ಸ್ಕೋಲೊಪೆಂಡ್ರ ಎಂಬುದು ಸರ್ವೆಸಾಮಾನ್ಯವಾದುದು. ಇದರ ದೇಹ ಚಪ್ಪಟೆಯಾಗಿದೆ.

ಕ್ಯಾಲ್ಸಿಯಮ್ ಲವಣಗಳ ಸಂಗ್ರಹವಿಲ್ಲದ ಕಾರಣ ಮೈಮೇಲಿನ ಕೈಟಿನ್ ಪದರ ಗಡುಸಾಗಿರದೆ ಮೃದುವಾಗಿ ಸ್ಥಿತಿಸ್ಥಾಪಕ ಗುಣಗಳಿಂದ ಕೂಡಿದ್ದು ದೇಹ ಬಾಗಲು ಸಹಾಯಕವಾಗಿದೆ. ಮಾಂಸಾಹಾರಿ, ನಿಶಾಚರಿ ವಿಷಜಂತುಗಳಾದ ಇವು ಎರೆಹುಳು, ಜಿರಲೆ ಇತ್ಯಾದಿ ಕೀಟಗಳನ್ನು ತಿಂದು ಜೀವಿಸುತ್ತವೆ.[][][]ಅಮೆರಿಕದಲ್ಲಿ ಕಾಣಬರುವ 30 ಸೆಂಮೀ ಉದ್ದ ಬೆಳೆಯಬಲ್ಲ ದೈತ್ಯ ಶತಪದಿ ಸ್ಕೋಲೊಪೆಂಡ್ರ ಜೈಗಾಂಟಿಯಾ ಎಂಬುದು ಹಲ್ಲಿ, ಇಲಿ ಇತ್ಯಾದಿ ದೊಡ್ಡ ಪ್ರಾಣಿಗಳನ್ನು ಸುಲಭವಾಗಿ ಹಿಡಿದು ತಿನ್ನುತ್ತದೆ.[] ಶತಪದಿಗಳ ತಲೆಯ ಮೇಲೆ ಅಗಲವಾದ ಫಲಕವುಂಟು. ಪ್ರತಿಯೊಂದು ಖಂಡದಲ್ಲೂ ಒಂದು ಜೊತೆ ಕಾಲುಗಳಿದ್ದು, ಒಟ್ಟು ಕಾಲುಗಳ ಸಂಖ್ಯೆ 15-20 ಜೊತೆಗಳಿರಬಹುದು.[] ಮೊದಲನೆಯ ಜೋಡಿಕಾಲು ವಿಷದ ನಖಗಳಾಗಿ, ರಕ್ಷಣೆಗೂ ಭಕ್ಷಣೆಗೂ ಸಹಾಯಕವಾಗಿವೆ.[] ಜನನೇಂದ್ರಿಯದ್ವಾರ ದೇಹದ ಕೊನೆಯ ಭಾಗದಲ್ಲಿ ಸ್ಥಿತವಾಗಿದೆ. ಕೆಲ ತರದ ಶತಪದಿಗಳಿಗೆ ಸ್ಫುರ ಸಂದೀಪ್ತ ಸಾಮರ್ಥ್ಯವುಂಟು. ಶತಪದಿಗಳು ಭಿನ್ನಲಿಂಗಿಗಳು; ಮೊಟ್ಟೆಗಳನ್ನು ನೆಲದ ಬಿಲಗಳಲ್ಲಿಡುತ್ತವೆ.

ಸಹಸ್ರಪದಿಗಳು

[ಬದಲಾಯಿಸಿ]

ಸಹಸ್ರಪದಿಗಳಲ್ಲಿ ಸುಮಾರು 8,000 ಪ್ರಭೇದಗಳಿವೆ. ಇವುಗಳ ಪೈಕಿ ಸುಮಾರು 300 ಪ್ರಭೇದಗಳನ್ನು ಭಾರತದಲ್ಲಿ ಕಾಣಬಹುದು. ಸತ್ತ ಎಲೆ ಇತ್ಯಾದಿ ಕೊಳೆಯುತ್ತಿರುವ ಜೀವವಸ್ತುಗಳನ್ನು ತಿಂದು ಇವುಗಳಲ್ಲಿರುವ ಪೋಷಣಾಂಶಗಳನ್ನು ಮಣ್ಣಿಗೆ ಹಿಂದಿರುಗಿಸುವ ಕಾರ್ಯದಲ್ಲಿ ಸಹಾಯಕವಾಗಿದ್ದು ಉಪಯುಕ್ತವೆನಿಸಿಕೊಂಡಿದೆ.[] ಕೆಲವೊಮ್ಮೆ ಆಹಾರದ ಅಭಾವ ಇದ್ದಾಗ ಗಿಡಗಳನ್ನು ತಿಂದು ಹಾನಿಕಾರಕವಾಗುತ್ತವೆ. ಸಹಸ್ರಪದಿಗಳ ದೇಹ ಉರುಟಾಗಿ, ಉದ್ದವಾದ ಕೊಳವೆಯಂತಿದೆ. ದೇಹದ ಪ್ರತಿಯೊಂದು ಖಂಡ ಎರಡು ಖಂಡಗಳ ಸಮ್ಮಿಲನದಿಂದ ರೂಪಿತವಾಗಿದ್ದಂತೆ ತೋರುತ್ತದೆ. ಇದರಿಂದಾಗಿ ಪ್ರತಿಯೊಂದು ಖಂಡದಲ್ಲೂ ಎರಡು ಜೊತೆ ಕಾಲು, ಎರಡು ಜೊತೆ ಸ್ಟಿಗ್ಮೆಟ (ಶ್ವಾಸನಾಳರಂಧ್ರ) ಇತ್ಯಾದಿ ಇವೆ.[] ಹೆಸರಿಗೆ ಸಹಸ್ರಪದಿಗಳಾದರೂ ಕಾಲುಗಳ ಸಂಖ್ಯೆ 200 ಅಥವಾ 250ಕ್ಕಿಂತ ಹೆಚ್ಚಾಗಿರದು. ಬಹುಪಾಲು ಸಹಸ್ರಪದಿಗಳು ಅಪಾಯ ಸನ್ನಿಹಿತವಾದಾಗ ತಮ್ಮ ದೇಹವನ್ನು ಸುರುಳಿಯಾಗಿ ಚೆಂಡಿನಂತೆ ಸುತ್ತಿಕೊಂಡು ಬೀಳುವ ಗುಣವನ್ನು ತೋರುತ್ತದೆ.[೧೦] ದೇಹದ ಇಕ್ಕೆಡೆಗಳಲ್ಲಿ ಸಾಲಾಗಿ ಕಂಡುಬರುವ ಸ್ಟಿಂಕ್ ಗ್ರಂಥಿಗಳಿಂದ ಹೊರಸೂಸುವ ದ್ರವ ಪದಾರ್ಥ ಚಿಕ್ಕಪುಟ್ಟ ಪ್ರಾಣಿಗಳಿಗೆ ವಿಷಕಾರಿಯಾಗಿ ಕೆಲಸ ಮಾಡುವುದು. ಭಿನ್ನಲಿಂಗಿಗಳಾದ ಈ ಪ್ರಾಣಿಗಳಲ್ಲಿ ಜನನೇಂದ್ರಿಯ ದ್ವಾರ ದೇಹದ ಕೊನೆಯ ಭಾಗದಲ್ಲಿದೆ.  ದೇಹದ ಮುಂಭಾಗದಲ್ಲಿದೆ. ಇವುಗಳ ಆಯಸ್ಸು ಸಾಧಾರಣವಾಗಿ 1 ರಿಂದ 2 ವರ್ಷಗಳಾದರೂ ಕೆಲವು ಬಗೆಗಳು 7 ವರ್ಷಕಾಲ ಬದುಕಿರುವ ನಿದರ್ಶನಗಳಿವೆ.

ಉಲ್ಲೇಖಗಳು

[ಬದಲಾಯಿಸಿ]
  1. "Myriapoda". Integrated Taxonomic Information System.
  2. P.G. Guizze1, Samuel; Knysak1, Irene; C. Barbaro, Katia; Karam-Gemael, Manoela; Chagas-Jr, Amazonas (2016-11-26). "Predatory behavior of three centipede species of the order Scolopendromorpha (Arthropoda: Myriapoda: Chilopoda)". Zoologia. 33 (6): e20160026. doi:10.1590/S1984-4689zool-20160026.{{cite journal}}: CS1 maint: numeric names: authors list (link)
  3. Klarner, Bernhard; Winkelmann, Helge; Krashevska, Valentyna; Maraun, Mark; Widyastuti, Rahayu; Scheu, Stefan (2017-08-01). "Trophic niches, diversity and community composition of invertebrate top predators (Chilopoda) as affected by conversion of tropical lowland rainforest in Sumatra (Indonesia)". PLOS ONE. 12 (8): e0180915. Bibcode:2017PLoSO..1280915K. doi:10.1371/journal.pone.0180915. ISSN 1932-6203. PMC 5538669. PMID 28763453.
  4. Hasan, Shadi; Hassan, Kamal (2004-12-15). "Proteinuria associated with centipede bite". Pediatric Nephrology. 20 (4): 550–551. doi:10.1007/s00467-004-1685-8. ISSN 0931-041X. PMID 15599772. S2CID 3120582.
  5. Molinari, Jesús; Gutiérrez, Eliécer E.; de Ascenção, Antonio A.; et al. (2005). "Predation by giant centipedes, Scolopendra gigantea, on three species of bats in a Venezuelan cave" (PDF). Caribbean Journal of Science. 4 (2): 340–346. Archived from the original (PDF) on 2010-10-09. Retrieved 2011-02-20.
  6. Shelley, Rowland M. (1999). "Centipedes and millipedes with emphasis on North American fauna". The Kansas School Naturalist. 45 (3): 1–16. Archived from the original on 2016-11-12. Retrieved 2013-10-14.
  7. Barnes, Robert D. (1982). Invertebrate Zoology. Philadelphia, Pennsylvania: Holt-Saunders International. pp. 810–816. ISBN 978-0-03-056747-6.
  8. Ruppert, Edward E.; Fox, Richard, S.; Barnes, Robert D. (2004). Invertebrate Zoology, 7th edition. Cengage Learning. pp. 711–717. ISBN 978-81-315-0104-7.{{cite book}}: CS1 maint: multiple names: authors list (link)
  9. Shelley, Rowland M. (1999). "Centipedes and millipedes with emphasis on North American fauna". The Kansas School Naturalist. 45 (3): 1–16. Archived from the original on 2016-11-12. Retrieved 2013-10-14.
  10. Animals: The International Wildlife Magazine. Nigel-Sitwell. 1964. p. 21.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: