ವಿಷಯಕ್ಕೆ ಹೋಗು

ರತ್ನದ ಕಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಸುತ್ತುವ ಉರುಳೆಯಲ್ಲಿ ಅಪಘರ್ಷಕ ಒರಟು ಮರಳುಗಲ್ಲಿನೊಂದಿಗೆ ಒರಟಾದ ಬಂಡೆಯನ್ನು ಉರುಳು ಪೀಪಾಯಿಯಲ್ಲಿ ಸುತ್ತಿಸುವ ಮೂಲಕ ರತ್ನದ ಕಲ್ಲಿನ ಶಿಲಾಸ್ಫಟಿಕಗಳ ಒಂದು ಆಯ್ಕೆಯನ್ನು ರೂಪಿಸಿರುವುದು.ಇಲ್ಲಿರುವ ಅತಿದೊಡ್ಡ ಶಿಲಾಸ್ಫಟಿಕವು 40 ಮಿ.ಮೀ.ನಷ್ಟು ಉದ್ದವಿದೆ (1.6 ಇಂಚುಗಳು).

ರತ್ನದ ಕಲ್ಲು ಅಥವಾ ರತ್ನ (ಇದನ್ನೊಂದು ಪ್ರಶಸ್ತ ಅಥವಾ ಅರೆ-ಪ್ರಶಸ್ತ ಶಿಲೆ , ಅಥವಾ ಅನರ್ಘ್ಯ ರತ್ನ ಎಂದೂ ಕರೆಯಲಾಗುತ್ತದೆ) ಎಂಬುದು ಆಕರ್ಷಕ ಖನಿಜದ ಒಂದು ತುಣುಕಾಗಿದ್ದು, ಇದನ್ನು ಯಥೋಚಿತವಾದ ರೀತಿಯಲ್ಲಿ ಕತ್ತರಿಸಿ ಹೊಳಪು ನೀಡಿ ರತ್ನಾಭರಣಗಳು ಅಥವಾ ಇತರ ಅಲಂಕರಣಗಳನ್ನು ತಯಾರಿಸಲು ಬಳಸಲಾಗುತ್ತದೆ.[] ಆದಾಗ್ಯೂ ಕೆಲವೊಂದು ಬಂಡೆಗಳು, (ಲೇಪಿಸ್‌-ಲಝುಲಿಯಂಥವು) ಮತ್ತು ಕಾರ್ಬನಿಕ ಮೂಲದ್ರವ್ಯಗಳು (ಪಳೆಯುಳಿಕೆ ರಾಳ ಅಥವಾ ಕಲ್ಲಿದ್ದಲಿನ ರೀತಿಯವು) ಖನಿಜಗಳಲ್ಲದಿದ್ದರೂ ಸಹ, ಅವನ್ನು ರತ್ನಾಭರಣಗಳಿಗಾಗಿ ಬಳಸಲಾಗುತ್ತದೆ, ಮತ್ತು ಈ ಕಾರಣದಿಂದಾಗಿ ಅವನ್ನೂ ಸಹ ರತ್ನದ ಕಲ್ಲುಗಳೆಂದು ಪರಿಗಣಿಸಲಾಗುತ್ತದೆ. ಬಹುಪಾಲು ರತ್ನದ ಕಲ್ಲುಗಳು ಗಡುಸಾಗಿರುತ್ತವೆ, ಆದರೆ ಕೆಲವೊಂದು ಮೃದುವಾದ ಖನಿಜಗಳನ್ನು ರತ್ನಾಭರಣಗಳಲ್ಲಿ ಬಳಸಲಾಗುತ್ತದೆ. ಈ ಮೃದುವಾದ ಖನಿಜಗಳು ಹೊಂದಿರುವ ಹೊಳಪು ಮತ್ತು ಸೌಂದರ್ಯ ಪ್ರಜ್ಞೆಯ ಮೌಲ್ಯವನ್ನುಳ್ಳ ಇತರ ಭೌತಿಕ ಗುಣಗಳೇ ಈ ಬಳಕೆಗೆ ಕಾರಣವೆನ್ನಬಹುದು. ರತ್ನದ ಕಲ್ಲಿನ ವಿರಳತೆ ಅಥವಾ ಅಪೂರ್ವತೆಯೂ ಸಹ ಮತ್ತೊಂದು ವಿಶಿಷ್ಟ ಲಕ್ಷಣವಾಗಿದ್ದು, ಅದು ರತ್ನದ ಕಲ್ಲಿಗೆ ಮೌಲ್ಯವನ್ನು ತಂದುಕೊಡುತ್ತದೆ. ರತ್ನಾಭರಣಗಳನ್ನು ಹೊರತುಪಡಿಸಿ, ಬಹಳ ಮುಂಚಿನ ಪ್ರಾಚೀನತೆಯಿಂದ ಮೊದಲ್ಗೊಂಡು 19ನೇ ಶತಮಾನದವರೆಗೆ ಅಲಂಕಾರಿಕ ಬಟ್ಟಲಿನಂಥ ಕೆತ್ತಲಾದ ರತ್ನಗಳು ಮತ್ತು ಗಡಸುಕಲ್ಲು ಕೆತ್ತನೆಗಳು ಸುಖವಿಲಾಸದ ಅಥವಾ ವೈಭವೋಪೇತವಾದ ಪ್ರಮುಖ ಕಲಾಸ್ವರೂಪಗಳಾಗಿದ್ದವು; ಕಾರ್ಲ್‌ ಫೆಬರ್ಜ್‌‌‌‌ನ ಕೆತ್ತನೆಗಳು ಈ ಸಂಪ್ರದಾಯದಲ್ಲಿ ಕೊನೆಯ ಗಮನಾರ್ಹ ಕೃತಿಗಳಾಗಿದ್ದವು.

ವಿಶಿಷ್ಟ ಲಕ್ಷಣಗಳು ಮತ್ತು ವರ್ಗೀಕರಣ

[ಬದಲಾಯಿಸಿ]
ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಲ್ಲಿರುವ ಸ್ಪ್ಯಾನಿಷ್‌ ಪಚ್ಚೆ ಮತ್ತು ಚಿನ್ನದ ಪೆಂಡೆಂಟ್.

ಪ್ರಾಚೀನ ಗ್ರೀಕರವರೆಗಿನಷ್ಟು ಹಿಂದಕ್ಕೆ ಸಾಗುವ, ಪಶ್ಚಿಮದಲ್ಲಿನ ಸಾಂಪ್ರದಾಯಿಕ ವರ್ಗೀಕರಣವು ಪ್ರಶಸ್ತ ಮತ್ತು ಅರೆ-ಪ್ರಶಸ್ತ ಶಿಲೆಗಳ ನಡುವಿನ ಒಂದು ವೈಲಕ್ಷಣ್ಯದೊಂದಿಗೆ ಪ್ರಾರಂಭವಾಗುತ್ತದೆ; ಇದೇ ಬಗೆಯ ವೈಲಕ್ಷಣ್ಯಗಳು ಇತರ ಸಂಸ್ಕೃತಿಗಳಲ್ಲಿಯೂ ಮಾಡಲ್ಪಟ್ಟಿವೆ. ಆಧುನಿಕ ಬಳಕೆಯಲ್ಲಿನ ಪ್ರಶಸ್ತ ಕಲ್ಲುಗಳಲ್ಲಿ ವಜ್ರ, ಮಾಣಿಕ್ಯ, ಪಚ್ಚೆ ಮತ್ತು ನೀಲಮಣಿ ಸೇರಿಕೊಂಡಿದ್ದು, ಉಳಿದೆಲ್ಲಾ ರತ್ನದ ಕಲ್ಲುಗಳು ಅರೆ-ಪ್ರಶಸ್ತ ರತ್ನದ ಕಲ್ಲುಗಳಾಗಿವೆ.[] ಈ ವೈಲಕ್ಷಣ್ಯವು ಅವೈಜ್ಞಾನಿಕವಾಗಿದ್ದು, ಪ್ರಾಚೀನ ಕಾಲದಲ್ಲಿನ ಸಂಬಂಧಿತ ಕಲ್ಲುಗಳ ವಿರಳತೆಯನ್ನಷ್ಟೇ ಅಲ್ಲದೇ ಅವುಗಳ ಗುಣಮಟ್ಟವನ್ನು ಇದು ಪ್ರತಿಬಿಂಬಿಸುತ್ತದೆ: ಬಣ್ಣರಹಿತ ವಜ್ರವನ್ನು ಹೊರತುಪಡಿಸಿ, ಎಲ್ಲಾ ಕಲ್ಲುಗಳೂ ತಮ್ಮ ಪರಿಶುದ್ಧವಾದ ಸ್ವರೂಪಗಳಲ್ಲಿ ಉತ್ತಮವಾದ ಬಣ್ಣದೊಂದಿಗೆ ಅರೆಪಾರದರ್ಶಕವಾದ ಲಕ್ಷಣವನ್ನು ಹೊಂದಿದ್ದು, ಮೊಹ್ಸ್‌ ಮಾಪಕದ ಮೇಲೆ 8-10ರವರೆಗಿನ ಗಡಸುತನಗಳನ್ನು ದಾಖಲಿಸುವ ಮೂಲಕ ಅತ್ಯಂತ ಗಡಸು[] ಎನಿಸಿಕೊಂಡಿವೆ. ಇತರ ಕಲ್ಲುಗಳು ತಮ್ಮ ಬಣ್ಣ, ಅರೆಪಾರದರ್ಶಕತೆ ಮತ್ತು ಗಡಸುತನದಿಂದಾಗಿ ವರ್ಗೀಕರಿಸಲ್ಪಟ್ಟಿವೆ. ಸಾಂಪ್ರದಾಯಿಕ ವೈಲಕ್ಷಣ್ಯವು ಆಧುನಿಕ ಮೌಲ್ಯಗಳನ್ನು ಅತ್ಯಾವಶ್ಯಕವಾಗಿ ಪ್ರತಿಬಿಂಬಿಸಬೇಕು ಎಂದೇನೂ ಇಲ್ಲ. ಉದಾಹರಣೆಗೆ, ಪದ್ಮರಾಗಗಳು ತುಲನಾತ್ಮಕವಾಗಿ ಸಾಕಷ್ಟು ಅಗ್ಗದ್ದಾಗಿರುವ ಸಂದರ್ಭದಲ್ಲಿಯೇ, ಟ್ಸಾವೊರೈಟ್‌ ಎಂದು ಕರೆಯಲ್ಪಡುವ ಒಂದು ಹಸಿರು ಪದ್ಮರಾಗವು ಒಂದು ಮಧ್ಯಮ-ಗುಣಮಟ್ಟದ ಪಚ್ಚೆಗಿಂತ ತುಂಬಾ ಹೆಚ್ಚು ಮೌಲ್ಯಯುತವಾಗಿರಲು ಸಾಧ್ಯವಿದೆ.[] ಅರೆ-ಪ್ರಶಸ್ತ ರತ್ನದ ಕಲ್ಲುಗಳಿಗೆ ಸಂಬಂಧಿಸಿದಂತೆ ಗಡಸು ಕಲ್ಲು ಎಂಬ ಪದವು ಕಲಾ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರದಲ್ಲಿ ಬಳಸಲಾಗಿರುವ ಮತ್ತೊಂದು ಅವೈಜ್ಞಾನಿಕ ಪದವಾಗಿದೆ. ಒಂದು ವ್ಯಾಪಾರೀ ಅಥವಾ ವಾಣಿಜ್ಯೋದ್ದೇಶದ ಸಂದರ್ಭದಲ್ಲಿ 'ಪ್ರಶಸ್ತ' ಮತ್ತು 'ಅರೆ-ಪ್ರಶಸ್ತ' ಎಂಬ ಪದಗಳನ್ನು ಬಳಸುವುದು ಚರ್ಚಾಸ್ಪದವಾದ ರೀತಿಯಲ್ಲಿ ತಪ್ಪುಗ್ರಹಿಕೆಗೆ ಎಡೆಮಾಡಿಕೊಡುತ್ತದೆ. ಏಕೆಂದರೆ, ಕೆಲವೊಂದು ಕಲ್ಲುಗಳು ಇತರ ಕಲ್ಲುಗಳಿಗಿಂತ ಸ್ವರೂಪಗತವಾಗಿ ಹೆಚ್ಚು ಮೌಲ್ಯಯುತವಾಗಿವೆ ಎಂದು ಇದು ತಪ್ಪುದಾರಿಗೆಳೆಯುವಂತೆ ಸೂಚಿಸುವಂತಿದ್ದು, ಇದು ನಿಜವಾದ ಸಂಗತಿಯಲ್ಲ.

ಆಧುನಿಕ ದಿನಗಳಲ್ಲಿ ರತ್ನದ ಕಲ್ಲುಗಳು ರತ್ನಶಾಸ್ತ್ರಜ್ಞರಿಂದ ಗುರುತಿಸಲ್ಪಡುತ್ತವೆ. ರತ್ನಶಾಸ್ತ್ರದ ಕ್ಷೇತ್ರಕ್ಕೆ ನಿರ್ದಿಷ್ಟವಾಗಿರುವ ತಾಂತ್ರಿಕ ಪರಿಭಾಷೆಯನ್ನು ಬಳಸಿ ರತ್ನಗಳು ಹಾಗೂ ಅವುಗಳ ವಿಶಿಷ್ಟ ಲಕ್ಷಣಗಳನ್ನು ಈ ರತ್ನಶಾಸ್ತ್ರಜ್ಞರು ವಿವರಿಸುತ್ತಾರೆ. ಒಂದು ರತ್ನದ ಕಲ್ಲನ್ನು ಗುರುತಿಸಲು ಓರ್ವ ರತ್ನಶಾಸ್ತ್ರಜ್ಞನು ಬಳಸುವ ಮೊಟ್ಟಮೊದಲ ವಿಶಿಷ್ಟ ಲಕ್ಷಣವೆಂದರೆ ಅದರ ರಾಸಾಯನಿಕ ಸಂಯೋಜನೆ. ಉದಾಹರಣೆಗೆ, ವಜ್ರಗಳು ಇಂಗಾಲದಿಂದ (C) ಮತ್ತು ಮಾಣಿಕ್ಯಗಳು ಅಲ್ಯೂಮಿನಿಯಂ ಆಕ್ಸೈಡ್‌‌ನಿಂದ (Al2O3) ಮಾಡಲ್ಪಟ್ಟಿವೆ. ನಂತರ, ಅನೇಕ ರತ್ನಗಳು ಹರಳುಗಳಾಗಿದ್ದು, ಘನಾಕೃತಿಯ ಅಥವಾ ತ್ರಿಕೋನೀಯ ಅಥವಾ ಏಕನತವಾಗಿರುವ ತಮ್ಮ ಹರಳು ವ್ಯವಸ್ಥೆಯಿಂದ ಅವು ವರ್ಗೀಕರಿಸಲ್ಪಡುತ್ತವೆ. ಬೆಳೆಯುವ ಸ್ವಭಾವ ಎಂಬ ಪರಿಭಾಷೆಯನ್ನೂ ಸಹ ಈ ನಿಟ್ಟಿನಲ್ಲಿ ಬಳಸಲಾಗುತ್ತದೆ. ಇದು ರತ್ನವು ಸಾಮಾನ್ಯವಾಗಿ ಕಂಡುಬಂದ ಸ್ವರೂಪವಾಗಿರುತ್ತದೆ. ಉದಾಹರಣೆಗೆ, ಒಂದು ಘನಾಕೃತಿಯ ಹರಳು-ವ್ಯವಸ್ಥೆಯನ್ನು ಹೊಂದಿರುವ ವಜ್ರಗಳು ಅಷ್ಟಮುಖಿಗಳಾಗಿ ಹಲವುಬಾರಿ ಕಂಡುಬರುತ್ತವೆ.

ಬಗೆಬಗೆಯ ಗುಂಪುಗಳು , ಜಾತಿಗಳು , ಮತ್ತು ಪ್ರಭೇದಗಳಾಗಿ ರತ್ನದ ಕಲ್ಲುಗಳು ವರ್ಗೀಕರಿಸಲ್ಪಟ್ಟಿವೆ. ಉದಾಹರಣೆಗೆ, ಮಾಣಿಕ್ಯವು ಕುರಂಗದ ಕಲ್ಲಿನ ಜಾತಿಯ ಕೆಂಪು ಪ್ರಭೇದವಾಗಿದ್ದರೆ, ಕುರಂಗದ ಕಲ್ಲಿನ ಬೇರಾವುದೇ ಬಣ್ಣವನ್ನು ನೀಲಮಣಿ ಎಂದು ಪರಿಗಣಿಸಲಾಗುತ್ತದೆ. ಪಚ್ಚೆ (ಹಸಿರು), ಕಡಲು ನೀಲಿ (ನೀಲಿ), ಬಿಕ್ಸ್‌ಬೈಟ್‌ (ಕೆಂಪು), ಗೋಶೆನೈಟ್‌ (ಬಣ್ಣರಹಿತ), ಹೀಲಿಯೋಡಾರ್‌ (ಹಳದಿ), ಮತ್ತು ಮಾರ್ಗನೈಟ್‌ (ನಸುಗೆಂಪು) ಮೊದಲಾದವುಗಳು ಬೆರಿಲ್‌ ಖನಿಜ ಜಾತಿಯ ಪ್ರಭೇದಗಳಾಗಿವೆ.

ವಕ್ರೀಕರಣ ಸೂಚಿ, ಹರಡಿಕೆ, ವಿಶಿಷ್ಟ ಗುರುತ್ವ, ಗಡಸುತನ, ಛೇದನ ವಿಧಾನ, ಭಂಜಿತ ಮುಖ, ಮತ್ತು ಹೊಳಪು ಇವೇ ಮೊದಲಾದ ಪರಿಭಾಷೆಗಳಲ್ಲಿ ರತ್ನಗಳ ಸ್ವಭಾವ-ಲಕ್ಷಣಗಳು ನಿರೂಪಿಸಲ್ಪಡುತ್ತವೆ. ಅವು ಬಹುವರ್ಣಕತೆ ಅಥವಾ ಜೋಡಿ ವಕ್ರೀಕರಣವನ್ನು ಪ್ರದರ್ಶಿಸಬಹುದು. ಅವು ದೀಪ್ತಿಯನ್ನು ಮತ್ತು ಒಂದು ವಿಶಿಷ್ಟವಾದ ಹೀರಿಕೆಯ ರೋಹಿತವನ್ನು ಹೊಂದಿರಬಹುದು.

ಕಲ್ಲೊಂದರೊಳಗಡೆ ಇರುವ ಮೂಲದ್ರವ್ಯ ಅಥವಾ ನ್ಯೂನತೆಗಳು ಒಳಗೂಡಿಸುವಿಕೆಗಳ ರೂಪದಲ್ಲಿರಬಹುದು.

ರತ್ನದ ಕಲ್ಲುಗಳ ಮೌಲ್ಯ

[ಬದಲಾಯಿಸಿ]
ಪಳೆಯುಳಿಕೆ ರಾಳದಿಂದ ಮಾಡಲಾದ ರತ್ನಾಭರಣಗಳು.

ಬಿಳಿ (ಬಣ್ಣರಹಿತ) ವಜ್ರವನ್ನು ಹೊರತುಪಡಿಸಿ, ಬೇರಾವುದೇ ರತ್ನದ ಕಲ್ಲಿಗೆ ಸಂಬಂಧಿಸಿದಂತೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ವರ್ಗೀಕರಿಸುವಿಕೆಯ ಪದ್ಧತಿಗಳು ಆಸ್ತಿತ್ವದಲ್ಲಿಲ್ಲ. 1950ರ ದಶಕದ ಆರಂಭದಲ್ಲಿ ಜೆಮಾಲಜಿಕಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಮೆರಿಕಾ (GIA) ಸಂಸ್ಥೆಯಿಂದ ಅಭಿವೃದ್ಧಿಪಡಿಸಲ್ಪಟ್ಟ ಒಂದು ಪದ್ಧತಿಯನ್ನು ಬಳಸಿಕೊಂಡು ವಜ್ರಗಳನ್ನು ವರ್ಗೀಕರಿಸಲಾಗುತ್ತದೆ. ಐತಿಹಾಸಿಕವಾಗಿ ಎಲ್ಲಾ ರತ್ನದ ಕಲ್ಲುಗಳನ್ನು ಬರಿಗಣ್ಣುಗಳಿಂದ ನೋಡುವ ಮೂಲಕ ವರ್ಗೀಕರಿಸಲಾಗುತ್ತಿತ್ತು. GIA ಪದ್ಧತಿಯು ವರ್ಗೀಕರಣಕ್ಕೆ ಒಂದು ಪ್ರಮುಖ ನೂತನ ಪರಿಪಾಠವನ್ನು ಸೇರಿಸಿದೆ. ವರ್ಗೀಕರಿಸುವಿಕೆಯ ಸ್ಫುಟತೆಗೆ ಸಂಬಂಧಿಸಿದಂತೆ 10x ವರ್ಧನವನ್ನು ಒಂದು ಮಾನದಂಡವಾಗಿ ಪರಿಚಯಿಸಿರುವುದು ಆ ನೂತನ ಪರಿಪಾಠವಾಗಿದೆ. ಇತರ ರತ್ನದ ಕಲ್ಲುಗಳನ್ನು ಈಗಲೂ ಕೇವಲ ಬರಿಗಣ್ಣುಗಳನ್ನು ಬಳಸಿಕೊಂಡು (20/20 ದೃಷ್ಟಿ ಉಪಕರಣವನ್ನು ಧರಿಸಿಕೊಂಡು) ವರ್ಗೀಕರಿಸಲಾಗುತ್ತಿದೆ.[]

ವಜ್ರವೊಂದನ್ನು ವರ್ಗೀಕರಿಸಲು ಬಳಸಲಾಗುವ ಅಂಶಗಳನ್ನು ಬಳಕೆದಾರನು ಅರ್ಥಮಾಡಿಕೊಳ್ಳುವಲ್ಲಿ ನೆರವಾಗಲು ಒಂದು ಜ್ಞಾಪಕ ಸಾಧನವನ್ನು ಪರಿಚಯಿಸಲಾಗಿದೆ. ವಜ್ರದ ಬಣ್ಣ (color), ಕತ್ತರಿಸಿದ ನಮೂನೆ (cut), ಸ್ಫುಟತೆ (clarity) ಮತ್ತು ಕ್ಯಾರಟ್‌ (carat) ಇವೇ ಆ ನಾಲ್ಕು ಅಂಶಗಳಾಗಿದ್ದು, ಇವನ್ನು ಒಟ್ಟಾರೆಯಾಗಿ "ನಾಲ್ಕು Cಗಳು" ಎಂದು ಕರೆಯಲಾಗುತ್ತದೆ.[] ಮಾರ್ಪಾಡಿನೊಂದಿಗೆ ಈ ವರ್ಗಗಳು ಎಲ್ಲಾ ರತ್ನದ ಕಲ್ಲುಗಳ ವರ್ಗೀಕರಿಸುವಿಕೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಉಪಯುಕ್ತವಾಗಬಹುದಾಗಿವೆ. ಈ ನಾಲ್ಕು ಮಾನದಂಡಗಳು, ತಾವು ಅನ್ವಯಿಸಲ್ಪಡುತ್ತಿರುವುದು ಬಣ್ಣದ ರತ್ನದ ಕಲ್ಲುಗಳಿಗೋ ಅಥವಾ ಬಣ್ಣರಹಿತ ವಜ್ರಕ್ಕೋ ಎಂಬುದನ್ನು ಅವಲಂಬಿಸಿ, ಬಗೆಬಗೆಯ ಪ್ರಭಾವವನ್ನು ತಮ್ಮೊಂದಿಗೆ ಹೊತ್ತೊಯ್ಯುತ್ತವೆ. ವಜ್ರಗಳಲ್ಲಿ, ಕತ್ತರಿಸಿದ ಮಾದರಿಯು ಮೌಲ್ಯದ ಪ್ರಧಾನ ನಿರ್ಣಾಯಕ ಅಂಶವಾದರೆ, ನಂತರದ ಸ್ಥಾನವನ್ನು ಸ್ಫುಟತೆ ಮತ್ತು ಬಣ್ಣಗಳು ಅಲಂಕರಿಸುತ್ತವೆ. ಮಿನುಗುವಿಕೆಯು ವಜ್ರಗಳ ಮೂಲಭೂತ ಲಕ್ಷಣವಾಗಿದೆ. ಬೆಳಕನ್ನು ಅದರ ಘಟಕಗಳಾದ ಕಾಮನಬಿಲ್ಲಿನ ಬಣ್ಣಗಳಿಗೆ ವಿಭಜಿಸುವುದು (ಹರಡಿಕೆ), ಉಜ್ಜ್ವಲವಾದ ಪುಟ್ಟಪುಟ್ಟ ತುಣುಕುಗಳಲ್ಲಿ ಅದನ್ನು ಕಾಣಿಸುವುದು (ಮಿನುಗುವಿಕೆ) ಮತ್ತು ಅದನ್ನು ಕಣ್ಣಿಗೆ ತಲುಪಿಸುವುದು (ಉಜ್ಜ್ವಲ ಕಾಂತಿ) ಇವು ವಜ್ರದ ಗುಣಲಕ್ಷಣಗಳಾಗಿವೆ.

ತನ್ನ ಒರಟಾದ ಸ್ಫಟಿಕದಂಥ ಸ್ವರೂಪದಲ್ಲಿ, ವಜ್ರವೊಂದು ಈ ಗುಣಲಕ್ಷಣಗಳ ಪೈಕಿ ಯಾವುದನ್ನೂ ಹೊರಹೊಮ್ಮಿಸುವುದಿಲ್ಲ. ಇವೆಲ್ಲಾ ಹೊರಹೊಮ್ಮಲು ಅದಕ್ಕೆ ಸೂಕ್ತವಾದ ಆಕಾರಕೊಡುವಿಕೆಯು ಅಗತ್ಯವಾಗಿದ್ದು, ಇದನ್ನು "ಕತ್ತರಿಸಿದ ಮಾದರಿ" ಎಂದು ಕರೆಯಲಾಗುತ್ತದೆ. ಬಣ್ಣದ ವಜ್ರಗಳನ್ನು ಒಳಗೊಂಡಂತೆ, ಬಣ್ಣವನ್ನು ಹೊಂದಿರುವ ರತ್ನದ ಕಲ್ಲುಗಳಲ್ಲಿ, ಆ ಬಣ್ಣದ ಪರಿಶುದ್ಧತೆ ಮತ್ತು ಸೌಂದರ್ಯವು ಗುಣಮಟ್ಟದ ಪ್ರಧಾನ ನಿರ್ಣಾಯಕ ಅಂಶವಾಗಿರುತ್ತದೆ.

ಬಣ್ಣದ ಕಲ್ಲೊಂದನ್ನು ಮೌಲ್ಯಯುತವಾಗಿಸುವ ವಿಶಿಷ್ಟ ಭೌತಿಕ ಲಕ್ಷಣಗಳೆಂದರೆ, ಬಣ್ಣ, ಕೊಂಚಮಟ್ಟಿಗಿನ ಸ್ಫುಟತೆ (ಪಚ್ಚೆಗಳು ಯಾವಾಗಲೂ ಒಂದು ಅನೇಕ ಒಳಗೂಡಿಸುವಿಕೆಗಳನ್ನು ಹೊಂದಿರುತ್ತವೆ), ಕತ್ತರಿಸಿದ ಮಾದರಿ, ಕಲ್ಲಿನೊಳಗಿರುವ ಬಣ್ಣ ವಲಯ ರಚನೆಯಂಥ ಅಸಾಮಾನ್ಯವಾದ ದ್ಯುತಿ ವಿದ್ಯಮಾನ, ಮತ್ತು ಆಸ್ಟರಿಯಾ (ನಕ್ಷತ್ರ ಪರಿಣಾಮಗಳು). ಉದಾಹರಣೆಗೆ, ಒಂದು ಶಕ್ತಿಶಾಲಿಯಾದ ಪ್ರೇಮದ ಸ್ವರೂಪವಾಗಿ ಪರಿಗಣಿಸಲ್ಪಟ್ಟಿದ್ದ ರತ್ನದ ಕಲ್ಲುಗಳಲ್ಲಿನ ಆಸ್ಟರಿಯಾಕ್ಕೆ ಗ್ರೀಕರು ಅತೀವವಾದ ಮೌಲ್ಯವನ್ನು ನೀಡಿದ್ದರು, ಮತ್ತು ಟ್ರಾಯ್‌ನ ಹೆಲೆನ್‌ ನಕ್ಷತ್ರದ-ಕುರಂಗದ ಕಲ್ಲನ್ನು ಧರಿಸಿದ್ದಳು ಎಂಬುದು ಪ್ರಸಿದ್ಧ ಸಂಗತಿಯಾಗಿತ್ತು.[]

ರತ್ನದ ಕಲ್ಲುಗಳು ಐತಿಹಾಸಿಕವಾಗಿ ಪ್ರಶಸ್ತ ಕಲ್ಲುಗಳು ಮತ್ತು ಅರೆ-ಪ್ರಶಸ್ತ ಶಿಲೆಗಳು ಎಂಬುದಾಗಿ ವರ್ಗೀಕರಿಸಲ್ಪಟ್ಟಿದ್ದವು. ಇಂಥದೊಂದು ವ್ಯಾಖ್ಯಾನವು ಕಾಲಕ್ಕನುಗುಣವಾಗಿ ಬದಲಾಗುವುದರ ಜೊತೆಗೆ ಸಂಸ್ಕೃತಿಗನುಗುಣವಾಗಿ ವ್ಯತ್ಯಯವಾಗುತ್ತದೆಯಾದ್ದರಿಂದ, ಪ್ರಶಸ್ತ ಕಲ್ಲುಗಳು ಎನಿಸಿಕೊಳ್ಳಲು ಇರಬೇಕಾದ ಅಗತ್ಯ ಅಂಶಗಳೇನು ಎಂಬುದನ್ನು ನಿರ್ಣಯಿಸುವುದು ಎಲ್ಲ ಸಮಯಗಳಲ್ಲೂ ಒಂದು ಕಷ್ಟಕರ ಸಂಗತಿಯಾಗಿ ಪರಿಣಮಿಸಿದೆ.[]

ವಜ್ರವು ಮಾತ್ರವೇ ಅಲ್ಲದೇ, ಮಾಣಿಕ್ಯ, ನೀಲಮಣಿ, ಪಚ್ಚೆ, ಮುತ್ತು (ನಿಷ್ಕೃಷ್ಟವಾಗಿ ಹೇಳುವುದಾದರೆ ಇದೊಂದು ರತ್ನದ ಕಲ್ಲಲ್ಲ) ಮತ್ತು ಕ್ಷೀರಸ್ಫಟಿಕ[] ಮೊದಲಾವುಗಳೂ ಸಹ ಪ್ರಶಸ್ತವಾದ ರತ್ನಗಳೆಂದು ಪರಿಗಣಿಸಲ್ಪಟ್ಟಿವೆ. 19ನೇ ಶತಮಾನದಲ್ಲಿ ಬ್ರೆಜಿಲ್‌ನಲ್ಲಿ ಭಾರೀ ಪ್ರಮಾಣದ ಪದ್ಮರಾಗದ ಆವಿಷ್ಕಾರಗಳಾಗುವವರೆಗೂ, ಪ್ರಾಚೀನ ಗ್ರೀಸ್‌ನ ಕಾಲದಿಂದಲೂ ಪದ್ಮರಾಗವೂ ಸಹ ಒಂದು ಪ್ರಶಸ್ತ ಕಲ್ಲು ಎಂದು ಪರಿಗಣಿಸಲ್ಪಟ್ಟಿತ್ತು. ಕಳೆದ ಶತಮಾನದಲ್ಲೂ ಸಹ ಕಡಲು ನೀಲಿ, ವಿಶಿಷ್ಟ ಪಚ್ಚೆಮಣಿ ಮತ್ತು ಕ್ಯಾಟ್‌'ಸ್‌ ಐನಂಥ ಕೆಲವೊಂದು ಕಲ್ಲುಗಳು ಜನಪ್ರಿಯವಾಗಿದ್ದವು ಮತ್ತು ಈ ಕಾರಣದಿಂದ ಅವು ಪ್ರಶಸ್ತವಾದ ಕಲ್ಲುಗಳೆಂದು ಪರಿಗಣಿಸಲ್ಪಟ್ಟಿದ್ದವು.

ಈ ಆಧುನಿಕ ಯುಗದಲ್ಲಿ ಇಂಥದೊಂದು ವೈಲಕ್ಷಣ್ಯವು ವ್ಯಾಪಾರಿ ವಲಯದಿಂದ ಮಾಡಲ್ಪಡುತ್ತಿಲ್ಲ.[] ವಿನ್ಯಾಸಕರ ಬ್ರಾಂಡ್‌ ಹೆಸರು, ಫ್ಯಾಷನ್‌ ಪ್ರವೃತ್ತಿಗಳು, ಮಾರುಕಟ್ಟೆ ಪೂರೈಕೆ, ಸಂಸ್ಕರಣೆಗಳು ಇತ್ಯಾದಿಗಳನ್ನು ಅವಲಂಬಿಸಿ, ಅನೇಕ ರತ್ನದ ಕಲ್ಲುಗಳು ಅತ್ಯಂತ ದುಬಾರಿಯಾದ ರತ್ನಾಭರಣಗಳಲ್ಲಿಯೂ ಬಳಸಲ್ಪಡುತ್ತಿವೆ. ಅದೇನೇ ಇದ್ದರೂ, ವಜ್ರಗಳು, ಮಾಣಿಕ್ಯಗಳು, ನೀಲಮಣಿಗಳು ಮತ್ತು ಪಚ್ಚೆಗಳು ಈಗಲೂ ಕೂಡ ಒಂದು ಪ್ರತಿಷ್ಠೆಯನ್ನು ಉಳಿಸಿಕೊಂಡಿದ್ದು, ಅದು ಇತರ ರತ್ನದ ಕಲ್ಲುಗಳ ಪ್ರತಿಷ್ಠೆಗಳನ್ನು ಮೀರಿಸುತ್ತದೆ.

ರತ್ನದ ಅಭಿಜ್ಞರನ್ನು ಹೊರತುಪಡಿಸಿ ಗಣನೆಗೆ ಬಾರದಷ್ಟು ಪರಿಚಿತವಾಗಿರುವ, ರತ್ನದ ಗುಣಮಟ್ಟದಲ್ಲಿ ಅತ್ಯಂತ ಅಪರೂಪವಾಗಿ ಸಂಭವಿಸುವಂಥ ರತ್ನದ ಕಲ್ಲುಗಳನ್ನು ಒಳಗೊಳ್ಳುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗುವ ಅಪರೂಪದ ಅಥವಾ ಅಸಾಮಾನ್ಯವಾದ ರತ್ನದ ಕಲ್ಲುಗಳಲ್ಲಿ, 0}ಆಂಡಲ್ಯುಸೈಟ್‌, ಆಕ್ಸಿನೈಟ್‌, ಕ್ಯಾಸಿಟರೈಟ್‌, ಕ್ಲಿನೋಹ್ಯೂಮೈಟ್‌ ಮತ್ತು ಬಿಕ್ಸ್‌ಬೈಟ್‌ ಸೇರಿವೆ.

ರತ್ನಗಳ ಬೆಲೆಗಳು ಅಗಾಧವಾಗಿ ಏರಿಳಿಯಬಹುದು (ಟ್ಯಾಂಜನೈಟ್‌ ಬೆಲೆಯು ವರ್ಷಗಳಿಂದಲೂ ಇರುವಂತೆ) ಅಥವಾ ಸಾಕಷ್ಟು ಸ್ಥಿರವಾಗಿಯೂ ಇರಬಹುದು (ವಜ್ರಗಳ ಬೆಲೆಗಳು ಇರುವಂತೆ). ಸಾಮಾನ್ಯವಾಗಿ ಹೇಳುವುದಾದರೆ, ದೊಡ್ಡದಾದ ಕಲ್ಲುಗಳ ಪ್ರತಿ ಕ್ಯಾರಟ್‌ನ‌ ಬೆಲೆಗಳು ಸಣ್ಣದಾಗಿರುವ ಕಲ್ಲುಗಳ ಪ್ರತಿ ಕ್ಯಾರಟ್‌ನ ಬೆಲೆಗಳಿಗಿಂತ ಹೆಚ್ಚಿನದಾಗಿವೆ, ಆದರೆ ನಿರ್ದಿಷ್ಟ ಗಾತ್ರಗಳ ಕಲ್ಲಿನ ಜನಪ್ರಿಯತೆಯು ಬೆಲೆಗಳ ಮೇಲೆ ಪರಿಣಾಮ ಬೀರಬಹುದು. ವಿಶಿಷ್ಟವೆನಿಸುವಂತೆ, ಒಂದು ಸಾಮಾನ್ಯ ಪದ್ಮರಾಗಕ್ಕಾಗಿರುವ ಬೆಲೆಗಳು, ಪ್ರತಿ ಕ್ಯಾರಟ್‌ಗೆ 1USDನಷ್ಟು ಇರುವುದರಿಂದ ಮೊದಲ್ಗೊಂಡು, ಓರ್ವ ಸಂಗ್ರಾಹಕನ ಮೂರು ಕ್ಯಾರಟ್‌‌ನ, ಪಾರಿವಾಳದ-ರಕ್ತದ ಬಣ್ಣದಲ್ಲಿರುವ ಹೆಚ್ಚೂಕಮ್ಮಿ "ನಿಖರವಾದ" ಮಾಣಿಕ್ಯಕ್ಕಾಗಿರುವ 20,000-50,000USDವರೆಗೆ ಬೆಲೆಯವರೆಗೆ ತನ್ನ ಶ್ರೇಣಿಯನ್ನು ಹೊಂದಿರಲು ಸಾಧ್ಯವಿದೆ.

ವರ್ಗೀಕರಿಸುವಿಕೆ

[ಬದಲಾಯಿಸಿ]

ಕಳೆದ ಎರಡು ದಶಕಗಳಲ್ಲಿ, ರತ್ನದ ಕಲ್ಲುಗಳಿಗೆ ಸಂಬಂಧಿಸಿದ ಪ್ರಮಾಣೀಕರಣದ ಒಂದು ಸಂಖ್ಯಾಹೆಚ್ಚಳವು ಕಂಡುಬಂದಿದೆ. ವಜ್ರಗಳ ಕುರಿತಾದ ವರ್ಗೀಕರಣವನ್ನು ಮಾಡಿ, ವರದಿಗಳನ್ನು ಒದಗಿಸುವ ಹಲವಾರು[] ಪ್ರಯೋಗಾಲಯಗಳು ಅಸ್ತಿತ್ವದಲ್ಲಿವೆ. ಬಣ್ಣದ ರತ್ನದ ಕಲ್ಲುಗಳಿಗೆ ಸಂಬಂಧಿಸಿದಂತೆ ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ವರ್ಗೀಕರಿಸುವಿಕೆ ಪದ್ಧತಿಯು ಅಸ್ತಿತ್ವದಲ್ಲಿಲ್ಲವಾದ್ದರಿಂದ, AGL (ಕೆಳಗೆ ನೋಡಿ) ಎಂಬ ಒಂದೇ ಒಂದು ಪ್ರಯೋಗಾಲಯವು ಸ್ವತಃ ತಾನೇ ಅಭಿವೃದ್ಧಿಪಡಿಸಿರುವ ಒಂದು ಸ್ವಂತ ಸ್ವಾಮ್ಯದ ಪದ್ಧತಿಯನ್ನು ಬಳಸಿಕೊಂಡು ಗುಣಮಟ್ಟಕ್ಕಾಗಿ ರತ್ನದ ಕಲ್ಲುಗಳನ್ನು ವರ್ಗೀಕರಿಸುತ್ತದೆ.

  • ಇಂಟರ್‌ನ್ಯಾಷನಲ್‌ ಜೆಮಾಲಜಿಕಲ್‌ ಇನ್‌ಸ್ಟಿಟ್ಯೂಟ್ Archived 2009-07-06 ವೇಬ್ಯಾಕ್ ಮೆಷಿನ್ ನಲ್ಲಿ. (IGI) ಎಂಬ ಸಂಸ್ಥೆಯು ವಜ್ರಗಳು, ರತ್ನಾಭರಣ ಮತ್ತು ಬಣ್ಣದ ಕಲ್ಲುಗಳ ವರ್ಗೀಕರಿಸುವಿಕೆ ಮತ್ತು ಮೌಲ್ಯಮಾಪನಕ್ಕೆ ಮೀಸಲಾಗಿರುವ ಒಂದು ಸ್ವತಂತ್ರ ಪ್ರಯೋಗಾಲಯವಾಗಿದೆ.
  • ಜೆಮಾಲಜಿಕಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಮೆರಿಕಾ (GIA) ಎಂಬ ಸಂಸ್ಥೆಯು ಶಿಕ್ಷಣ ಸೇವೆಗಳು ಹಾಗೂ ವಜ್ರದ ವರ್ಗೀಕರಿಸುವಿಕೆಯ ವರದಿಗಳನ್ನು ಒದಗಿಸುವ ಪ್ರಮುಖ ಘಟಕವಾಗಿದೆ.
  • ಅಮೆರಿಕನ್‌ ಜೆಮಾಲಜಿಕಲ್‌ ಸೊಸೈಟಿ (AGS) ಸಂಸ್ಥೆಯು GIA ಸಂಸ್ಥೆಯಷ್ಟು ಹಳೆಯದೂ ಅಲ್ಲ ಮತ್ತು ಅದರಷ್ಟು ವ್ಯಾಪಕವಾಗಿ ಗುರುತಿಸಲ್ಪಟ್ಟೂ ಇಲ್ಲ.
  • ಅಮೆರಿಕನ್‌ ಜೆಮ್‌ ಟ್ರೇಡ್‌ ಲ್ಯಾಬರೇಟರಿಯು, ಆಭರಣ ವ್ಯಾಪಾರಿಗಳು ಮತ್ತು ಬಣ್ಣದ ಕಲ್ಲುಗಳ ಮಾರಾಟಗಾರರ ಒಂದು ವ್ಯಾಪಾರ ಸಂಘಟನೆಯಾದ ಅಮೆರಿಕನ್‌ ಜೆಮ್‌ ಟ್ರೇಡ್‌ ಅಸೋಸಿಯೇಷನ್‌‌‌ನ (AGTA) ಭಾಗವಾಗಿದೆ.
  • NASDAQನಲ್ಲಿ ಪಟ್ಟೀಕರಣಕ್ಕೆ ಒಳಗಾಗಿರುವ ಒಂದು ಕಂಪನಿಯಾದ "ಕಲೆಕ್ಟರ್‌'ಸ್‌ ಯೂನಿವರ್ಸ್‌"ನಿಂದ ಅಮೆರಿಕನ್‌ ಜೆಮಾಲಜಿಕಲ್‌ ಲ್ಯಾಬರೇಟರೀಸ್ (AGL) ಸಂಸ್ಥೆಯು ಸ್ವಾಧೀನಕ್ಕೊಳಗಾಗಿದೆ. ನಾಣ್ಯಗಳು ಮತ್ತು ಅಂಚೆಚೀಟಿಗಳಂಥ ಸಂಗ್ರಹಯೋಗ್ಯ ವಸ್ತುಗಳ ಪ್ರಮಾಣೀಕರಣದಲ್ಲಿ ಕಲೆಕ್ಟರ್‌'ಸ್‌ ಯೂನಿವರ್ಸ್ ಕಂಪನಿಯು ಪರಿಣತಿಯನ್ನು ಪಡೆದಿದೆ.
  • ಯುರೋಪಿಯನ್‌ ಜೆಮಾಲಜಿಕಲ್‌ ಲ್ಯಾಬರೇಟರಿಯು (EGL) 1974ರಲ್ಲಿ ಗಯ್‌ ಮಾರ್ಗೆಲ್‌ ಎಂಬಾತನಿಂದ ಬೆಲ್ಜಿಯಂನಲ್ಲಿ ಸ್ಥಾಪಿಸಲ್ಪಟ್ಟಿತು.
  • ಜೆಮಾಲಜಿಕಲ್‌ ಅಸೋಸಿಯೇಷನ್‌ ಆಫ್‌ ಆಲ್‌ ಜಪಾನ್ Archived 2020-02-12 ವೇಬ್ಯಾಕ್ ಮೆಷಿನ್ ನಲ್ಲಿ. (GAAJ-ZENHOKYO) ಸಂಸ್ಥೆಯು ಜಪಾನ್‌ನ ಝೆಂಹೊಕ್ಯೊ ಎಂಬಲ್ಲಿದ್ದು‌‌, ಇದು ರತ್ನಶಾಸ್ತ್ರೀಯ ಸಂಶೋಧನೆಯಲ್ಲಿ ಸಕ್ರಿಯವಾಗಿದೆ.
  • ಜೆಮಾಲಜಿಕಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಥೈಲೆಂಡ್‌ (GIT) ಸಂಸ್ಥೆಯು ಚುಲಾಲೊಂಗ್‌ಕಾರ್ನ್‌ ವಿಶ್ವವಿದ್ಯಾಲಯದೊಂದಿಗೆ ನಿಕಟವಾದ ಸಂಬಂಧವನ್ನು ಹೊಂದಿದೆ.
  • ಆಗ್ನೇಯ ಏಷ್ಯಾದಲ್ಲಿರುವ ಅತ್ಯಂತ ಹಳೆಯ ರತ್ನಶಾಸ್ತ್ರೀಯ ಸಂಸ್ಥೆಯಾದ ಏಷ್ಯನ್‌ ಇನ್‌‌ಸ್ಟಿಟ್ಯೂಟ್‌ ಆಫ್‌ ಜೆಮಾಲಜಿಕಲ್‌ ಸೈನ್ಸಸ್‌ (AIGS), ರತ್ನಶಾಸ್ತ್ರೀಯ ಶಿಕ್ಷಣ ಹಾಗೂ ರತ್ನಪರೀಕ್ಷೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
  • ಪ್ರೊಫೆಸರ್‌ ಹೆನ್ರಿ ಹ್ಯಾನ್ನಿ ಎಂಬಾತನಿಂದ ಸ್ಥಾಪಿಸಲ್ಪಟ್ಟ ಸ್ವಿಸ್‌ ಜೆಮಾಲಜಿಕಲ್‌ ಇನ್‌ಸ್ಟಿಟ್ಯೂಟ್‌ (SSEF), ಬಣ್ಣದ ರತ್ನದ ಕಲ್ಲುಗಳು ಮತ್ತು ನೈಸರ್ಗಿಕ ಮುತ್ತುಗಳ ಗುರುತಿಸುವಿಕೆಯ ಕಡೆಗೆ ಗಮನಹರಿಸುತ್ತಿದೆ.
  • ಡಾ. ಎಡ್ವರ್ಡ್‌ ಗ್ಯುಬೆಲಿನ್ ಎಂಬ ಸುಪ್ರಸಿದ್ಧ ವ್ಯಕ್ತಿಯಿಂದ ಗ್ಯುಬೆಲಿನ್‌ ಜೆಮ್‌ ಲ್ಯಾಬ್ ಎಂಬ ಸಾಂಪ್ರದಾಯಿಕ ಸ್ವಿಸ್‌ ಪ್ರಯೋಗಾಲಯವು ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯು ನೀಡುವ ವರದಿಗಳು ಉನ್ನತ-ವರ್ಗದ ಮುತ್ತುಗಳು, ಬಣ್ಣದ ರತ್ನದ ಕಲ್ಲುಗಳು ಹಾಗೂ ವಜ್ರಗಳ ಕುರಿತಾದ ಅಂತಿಮ ತೀರ್ಮಾನವಾಗಿ ವ್ಯಾಪಕವಾಗಿ ಪರಿಗಣಿಸಲ್ಪಡುತ್ತಿವೆ.

ರತ್ನದ ಕಲ್ಲುಗಳ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಪ್ರಯೋಗಾಲಯವೂ ತನ್ನದೇ ಆದ ಕಾರ್ಯವಿಧಾನವನ್ನು ಹೊಂದಿದೆ. ಇದರ ಪರಿಣಾಮವಾಗಿ ಕಲ್ಲೊಂದನ್ನು ಒಂದು ಪ್ರಯೋಗಾಲಯವು "ನಸುಗೆಂಪು" ಕರೆದರೆ, ಮತ್ತೊಂದು ಪ್ರಯೋಗಾಲಯವು ಅದನ್ನು "ಕುರಂದ ವರ್ಣ" ಎಂದು ಕರೆಯುತ್ತದೆ. ಒಂದು ಪ್ರಯೋಗಾಲಯವು ಕಲ್ಲೊಂದನ್ನು ಕುರಿತು ಅದು ಸಂಸ್ಕರಿಸಲ್ಪಡದಿರುವುದು ಎಂಬ ತೀರ್ಮಾನಕ್ಕೆ ಬಂದರೆ, ಮತ್ತೊಂದು ಪ್ರಯೋಗಾಲಯವು ಅದು ಬಿಸಿಯಿಂದ ಸಂಸ್ಕರಿಸಲ್ಪಟ್ಟಿದೆ ಎಂಬ ತೀರ್ಮಾನಕ್ಕೆ ಬರುತ್ತದೆ.[] ಇಂಥ ವ್ಯತ್ಯಾಸಗಳನ್ನು ತಗ್ಗಿಸುವ ಸಲುವಾಗಿ, ಏಳು ಅತ್ಯಂತ ಗೌರವಾನ್ವಿತ ಪ್ರಯೋಗಾಲಯಗಳಾದ AGTA-GTL (ನ್ಯೂಯಾರ್ಕ್‌), CISGEM (ಮಿಲಾನೊ), GAAJ-ZENHOKYO (ಟೋಕಿಯೋ), GIA (ಕಾರ್ಲ್ಸ್‌ಬಾದ್‌‌), GIT (ಬ್ಯಾಂಗ್‌ಕಾಕ್‌), ಗ್ಯುಬೆಲಿನ್‌ (ಲ್ಯೂಸೆರಿನ್‌) ಮತ್ತು SSEF (ಬಸೆಲ್‌), ಲ್ಯಾಬರೇಟರಿ ಮ್ಯಾನ್ಯುಯೆಲ್‌ ಹಾರ್ಮೊನೈಸೇಷನ್‌ ಕಮಿಟಿಯನ್ನು (LMHC) ಸ್ಥಾಪಿಸಿವೆ. ವರದಿಗಳು ಮತ್ತು ಕೆಲವೊಂದು ವಿಶ್ಲೇಷಣಾತ್ಮಕ ವಿಧಾನಗಳ ಕುರಿತಾದ ಮಾತಿನ ಅಭಿವ್ಯಕ್ತಿಯ ಮೇಲೆ ಮತ್ತು ಫಲಿತಾಂಶಗಳ ವಿವರಣೆಯನ್ನು ಆಧರಿಸಿ ಮಾನಕೀಕರಣವನ್ನು ನೀಡುವುದರ ಕಡೆಗೆ ಈ ಕಮಿಟಿಯು ಗುರಿಯಿಟ್ಟುಕೊಂಡಿದೆ. ಹೊಸ ತಾಣಗಳ ನಿರಂತರ ಆವಿಷ್ಕಾರದ ಕಾರಣದಿಂದಾಗಿ, ಮೂಲದ ದೇಶವನ್ನು ಕುರಿತಾದ ಒಮ್ಮತಾಭಿಪ್ರಾಯಕ್ಕೆ ಬರುವುದು ಕೆಲವೊಮ್ಮೆ ಕಷ್ಟಕರವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, "ಮೂಲದ ಒಂದು ದೇಶವನ್ನು" ನಿರ್ಣಯಿಸುವುದು ರತ್ನವೊಂದರ ಇತರ ನಿರ್ಣಾಯಕ ಅಂಶಗಳನ್ನು (ಅಂದರೆ ಕತ್ತರಿಸಿದ ಮಾದರಿ, ಸ್ಫುಟತೆ ಇತ್ಯಾದಿ) ನಿರ್ಣಯಿಸುವುದಕ್ಕಿಂತ ಕಷ್ಟಕರವಾಗಿ ಪರಿಣಮಿಸಿದೆ.[೧೦]

ರತ್ನ ಪ್ರಯೋಗಾಲಯಗಳು ನೀಡುವ ವರದಿಗಳಲ್ಲಿ ಕಂಡುಬರುವ ವ್ಯತ್ಯಾಸಗಳ ಕುರಿತು ರತ್ನ ಮಾರಾಟಗಾರರು ಅರಿತಿದ್ದಾರೆ. ಆದ್ದರಿಂದ ಆದಷ್ಟೂ ಅತ್ಯುತ್ತಮವಾದ ಪ್ರಮಾಣಪತ್ರವನ್ನು ಪಡೆದುಕೊಳ್ಳುವ ದೃಷ್ಟಿಯಿಂದ ವ್ಯತ್ಯಾಸಗಳನ್ನು ಅಥವಾ ತಾಳೆ ಬೀಳದಿರುವಿಕೆಗಳನ್ನು ಬಳಕೆಮಾಡಿಕೊಳ್ಳುವ ವಿಧಾನಕ್ಕೆ ಅವರು ಮೊರೆಹೋಗುತ್ತಾರೆ.[]

ಕತ್ತರಿಸುವಿಕೆ ಮತ್ತು ಹೊಳಪು ನೀಡುವಿಕೆ

[ಬದಲಾಯಿಸಿ]
ಕಚ್ಚಾ ರತ್ನದ ಕಲ್ಲುಗಳು.
ಗ್ರಾಮೀಣ ಪ್ರದೇಶದ ಒಂದು ಥಾಯ್‌ ರತ್ನ ಕತ್ತರಿಸುವ ಸಲಕರಣೆ.

ಕೆಲವೇ ರತ್ನದ ಕಲ್ಲುಗಳನ್ನು ಹರಳಿನ ರೂಪದಲ್ಲಿನ ರತ್ನಗಳಾಗಿ ಅಥವಾ ಅವು ಕಂಡುಬಂದ ಇತರ ಸ್ವರೂಪದಲ್ಲಿನ ರತ್ನಗಳಾಗಿ ಬಳಸಲಾಗುತ್ತದೆ. ಆದಾಗ್ಯೂ, ರತ್ನಾಭರಣಗಳಾಗಿ ಬಳಸಲ್ಪಡಲು ಬಹುತೇಕ ರತ್ನಗಳನ್ನು ಕತ್ತರಿಸಲಾಗುತ್ತದೆ ಮತ್ತು ಹೊಳಪುನೀಡಲಾಗುತ್ತದೆ. ಎಡಭಾಗದಲ್ಲಿ ನೀಡಲಾಗಿರುವ ಚಿತ್ರವು, ಥೈಲೆಂಡ್‌ನಲ್ಲಿನ ಒಂದು ಗ್ರಾಮೀಣ ಪ್ರದೇಶದಲ್ಲಿರುವ ವಾಣಿಜ್ಯೋದ್ದೇಶದ ರತ್ನ ಕತ್ತರಿಸುವಿಕೆ ಕಾರ್ಯಾಚರಣೆಗೆ ಸಂಬಂಧಪಟ್ಟಿದೆ. ಈ ಸಣ್ಣ ಕಾರ್ಖಾನೆಯು ಪ್ರತಿ ವರ್ಷವೂ ಸಾವಿರಾರು ಕ್ಯಾರಟ್‌‌ಗಳಷ್ಟು ನೀಲಮಣಿಯನ್ನು ಕತ್ತರಿಸುತ್ತದೆ. ಇಲ್ಲಿ ಎರಡು ಮುಖ್ಯ ವರ್ಗೀಕರಣಗಳು ಕಂಡುಬರುತ್ತವೆ. ನಯವಾಗಿ, ಗುಮ್ಮಟದ ಆಕಾರದ ಕಲ್ಲುಗಳಾಗಿ ಕೆತ್ತಲ್ಪಟ್ಟ ಕಲ್ಲುಗಳು ಹೊಳಪುಕೊಟ್ಟ, ಆದರೆ ಪಟ್ಟೆಹೊಡೆದಿಲ್ಲದ ರತ್ನಗಳು ಎನಿಸಿಕೊಳ್ಳುವುದು ಒಂದು ವರ್ಗಕ್ಕೆ ಸೇರುತ್ತವೆ; ಕರಾರುವಾಕ್ಕಾದ ಕೋನಗಳಲ್ಲಿ ನಿಯತ ಅಂತರಗಳಲ್ಲಿ, ಮುಖಗಳು ಎಂದು ಕರೆಯಲ್ಪಡುವ ಸಣ್ಣ ಚಪ್ಪಟೆಯಾದ ಕಿಂಡಿಗಳಿಂದ ಹೊಳಪು ನೀಡಲ್ಪಡುವ ಮೂಲಕ ಒಂದು ಮುಖಕಡೆಯುವ ಯಂತ್ರದಿಂದ ಕತ್ತರಿಸಲ್ಪಟ್ಟ ಕಲ್ಲುಗಳು ಮತ್ತೊಂದು ವರ್ಗಕ್ಕೆ ಸೇರುತ್ತವೆ.

ಕ್ಷೀರಸ್ಫಟಿಕ, ವಿಶಿಷ್ಟ ವೈಢೂರ್ಯ, ವೇರಿಸೈಟ್‌ ಇತ್ಯಾದಿಗಳಂತೆ ಅಪಾರದರ್ಶಕವಾಗಿರುವ ಕಲ್ಲುಗಳು, ಹೊಳಪುಕೊಡಲ್ಪಟ್ಟ ಆದರೆ ಪಟ್ಟೆಹೊಡೆದಿಲ್ಲದ ರತ್ನಗಳ ರೀತಿಯಲ್ಲಿ ಕತ್ತರಿಸಲ್ಪಡುತ್ತವೆ. ಕ್ಷೀರಸ್ಫಟಿಕ ಮತ್ತು ನಕ್ಷತ್ರ ನೀಲಮಣಿಗಳಲ್ಲಿರುವಂತೆ ಕಲ್ಲುಗಳ ಬಣ್ಣ ಅಥವಾ ಮೇಲ್ಮೈ ಗುಣಲಕ್ಷಣಗಳನ್ನು ತೋರಿಸಲು ಈ ರತ್ನಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಕಲ್ಲುಗಳನ್ನು ಸಾಣೆಹಿಡಿಯಲು, ಅವುಗಳಿಗೆ ಆಕಾರನೀಡಲು ಮತ್ತು ಅವುಗಳ ನಯವಾದ ಗುಮ್ಮಟದಂಥ ಆಕಾರಕ್ಕೆ ಹೊಳಪು ನೀಡಲು ಸಾಣೆಹಿಡಿಯುವ ಚಕ್ರಗಳು ಮತ್ತು ಹೊಳಪು ನೀಡುವ ವಸ್ತುಗಳನ್ನು ಬಳಸಲಾಗುತ್ತದೆ.[೧೧]

ಪಾರದರ್ಶಕವಾಗಿರುವ ರತ್ನಗಳನ್ನು ಸಾಮಾನ್ಯವಾಗಿ ಮುಖಕಡೆಯುವಿಕೆಗೆ ಒಳಪಡಿಸಲಾಗುತ್ತದೆ. ಈ ವಿಧಾನವನ್ನು ಅನುಸರಿಸುವುದರಿಂದ ಕಲ್ಲಿನ ಒಳಭಾಗದಲ್ಲಿರುವ ದೃಗ್ವೈಜ್ಞಾನಿಕ ಗುಣಗಳು ಸದರಿ ಕಲ್ಲಿಗೆ ಅತಿಹೆಚ್ಚು ಪ್ರಯೋಜನಕಾರಿಯಾಗುವ ರೀತಿಯಲ್ಲಿ ತೋರಿಸಲ್ಪಡುತ್ತವೆ. ಪ್ರತಿಫಲಿತವಾದ ಬೆಳಕನ್ನು ಗರಿಷ್ಟಗೊಳಿಸುವ ಮೂಲಕ ಇದು ನೆರವೇರಿಸಲ್ಪಡುತ್ತದೆ ಮತ್ತು ಇದನ್ನೇ ಓರ್ವ ವೀಕ್ಷಕನು ಸದರಿ ಕಲ್ಲಿನ ಮಿನುಗು ಸ್ವಭಾವವಾಗಿ ಗ್ರಹಿಸುತ್ತಾನೆ. ಮುಖ ಕಡೆಯಲ್ಪಟ್ಟ ಕಲ್ಲುಗಳಿಗೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಬಳಸಲಾಗುವ ಅನೇಕ ಆಕಾರಗಳು ಅಸ್ತಿತ್ವದಲ್ಲಿವೆ. ಯಥೋಚಿತವಾದ ಕೋನಗಳಲ್ಲಿ ಮುಖಗಳನ್ನು ಕತ್ತರಿಸುವುದು ಅತ್ಯಾವಶ್ಯಕವಾಗಿದ್ದು, ಈ ಕೋನಗಳು ರತ್ನದ ದೃಗ್ವೈಜ್ಞಾನಿಕ ಗುಣಗಳನ್ನು ಅವಲಂಬಿಸಿ ಬದಲಾಗುತ್ತಾ ಹೋಗುತ್ತವೆ. ಒಂದು ವೇಳೆ ಕೋನಗಳು ತುಂಬಾ ಕಡಿದಾಗಿದ್ದರೆ ಅಥವಾ ತುಂಬಾ ಕಡಿಮೆ ಆಳದ್ದಾಗಿದ್ದರೆ, ಬೆಳಕು ಅವುಗಳ ಮೂಲಕ ಹಾದುಹೋಗುವುದಿಲ್ಲ ಮತ್ತು ವೀಕ್ಷಕನೆಡೆಗೆ ಮರಳಿ ಪ್ರತಿಫಲಿಸಲ್ಪಡುವುದಿಲ್ಲ. ಚಪ್ಪಟೆಯಾದ ಮುಖಗಳನ್ನು ಕತ್ತರಿಸುವುದಕ್ಕಾಗಿ ಮತ್ತು ಹೊಳಪು ನೀಡುವುದಕ್ಕಾಗಿ, ಕಲ್ಲನ್ನು ಒಂದು ಚಪ್ಪಟೆಯಾದ ಸಾಣೆಬಿಲ್ಲೆಯ ಮೇಲೆ ಹಿಡಿದಿಡಲು ಮುಖಕಡೆಯುವ ಯಂತ್ರವನ್ನು ಬಳಸಲಾಗುತ್ತದೆ.

ಬಾಗಿದ ಮುಖಗಳನ್ನು ಕತ್ತರಿಸಲು ಮತ್ತು ಹೊಳಪುನೀಡಲು, ಕತ್ತರಿಸುವ ಕೆಲಸದಲ್ಲಿ ತೊಡಗಿಸಿಕೊಂಡ ಕೆಲವೊಬ್ಬ ಕುಶಲಕರ್ಮಿಗಳು ಅಪರೂಪಕ್ಕೆಂಬಂತೆ ಬಾಗಿಸಲ್ಪಟ್ಟಿರುವ ವಿಶೇಷವಾದ ಸಾಣೆಬಿಲ್ಲೆಗಳನ್ನು ಬಳಸುತ್ತಾರೆ.

ರತ್ನದ ಕಲ್ಲಿನ ಬಣ್ಣ

[ಬದಲಾಯಿಸಿ]

ಬಣ್ಣ ಎಂಬುದು ರತ್ನದ ಕಲ್ಲುಗಳ ಅತ್ಯಂತ ಸ್ಪಷ್ಟ ಹಾಗೂ ಆಕರ್ಷಕವಾದ ಲಕ್ಷಣವಾಗಿದೆ. ಯಾವುದೇ ಮೂಲದ್ರವ್ಯ ಅಥವಾ ಸಾಮಗ್ರಿಯ ಬಣ್ಣವು ಸ್ವತಃ ಬೆಳಕಿನ ಸ್ವಭಾವದಿಂದ ಬಂದುದೇ ಆಗಿರುತ್ತದೆ. ಅನೇಕ ವೇಳೆ ಬಿಳಿಯ ಬೆಳಕು ಎಂದು ಕರೆಯಲ್ಪಡುವ ದಿನದ ಬೆಳಕು ವಾಸ್ತವವಾಗಿ ಬೆಳಕಿನ ಬಗೆಬಗೆಯ ಬಣ್ಣಗಳ ಒಂದು ಮಿಶ್ರಣವಾಗಿದೆ. ಬೆಳಕು ಒಂದು ಮೂಲದ್ರವ್ಯದ ಮೂಲಕ ಹಾದುಹೋಗುವಾಗ, ಬೆಳಕಿನ ಕೆಲಭಾಗವು ಹೀರುವಿಕೆಗೆ ಒಳಗಾಗಬಹುದು ಮತ್ತು ಉಳಿದ ಭಾಗವು ಅದರಿಂದ ಆಚೆಗೆ ಹಾದುಹೋಗುತ್ತದೆ. ಹೀರುವಿಕೆಗೆ ಒಳಗಾಗದ ಬೆಳಕಿನ ಭಾಗವು, ಹೀರಲ್ಪಟ್ಟ ಬಣ್ಣವನ್ನು ಕಳೆದುಕೊಂಡಿರುವ ಬಿಳಿಯ ಬೆಳಕಾಗಿ ವೀಕ್ಷಕರ ಕಣ್ಣುಗಳನ್ನು ತಲುಪುತ್ತವೆ. ಒಂದು ಮಾಣಿಕ್ಯವು ಕೆಂಪು ಬಣ್ಣವನ್ನು ಹೊರತುಪಡಿಸಿ ಬಿಳಿಯ ಬೆಳಕಿನ ಇತರೆಲ್ಲಾ ಬಣ್ಣಗಳನ್ನು (ಅಂದರೆ ನೀಲಿ, ಹಳದಿ, ಹಸಿರು, ಇತ್ಯಾದಿ) ಹೀರಿಕೊಳ್ಳುವುದರಿಂದ ಅದು ಕೆಂಪಾಗಿ ಕಾಣಿಸುತ್ತದೆ.

ಅದೇ ಮೂಲದ್ರವ್ಯವು ಬಗೆಬಗೆಯ ಬಣ್ಣಗಳನ್ನು ಪ್ರದರ್ಶಿಸಬಲ್ಲದು. ಉದಾಹರಣೆಗೆ, ಮಾಣಿಕ್ಯ ಮತ್ತು ನೀಲಮಣಿ ಒಂದೇ ಬಗೆಯ ರಾಸಾಯನಿಕ ಸಂಯೋಜನೆಯನ್ನು (ಎರಡೂ ಸಹ ಕುರಂಗದ ಕಲ್ಲು ಆಗಿವೆ) ಹೊಂದಿವೆಯಾದರೂ ಬಗೆಬಗೆಯ ಬಣ್ಣಗಳನ್ನು ಅವು ಪ್ರದರ್ಶಿಸುತ್ತವೆ. ಒಂದೇ ರತ್ನದ ಕಲ್ಲು ಅನೇಕ ವೈವಿಧ್ಯಮಯ ಬಣ್ಣಗಳಲ್ಲಿಯೂ ಕಾಣಿಸಿಕೊಳ್ಳಬಲ್ಲದು: ನೀಲಮಣಿಗಳು ನೀಲಿ ಮತ್ತು ನಸುಗೆಂಪಿನ ಬಗೆಬಗೆಯ ಛಾಯೆಗಳನ್ನು ತೋರಿಸುತ್ತವೆ ಮತ್ತು "ಅಲಂಕಾರಿಕ ನೀಲಮಣಿಗಳು" ಹಳದಿಯಿಂದ ಮೊದಲ್ಗೊಂಡು ಕಿತ್ತಳೆ-ನಸುಗೆಂಪಿನವರೆಗಿನ ಇತರ ಬಣ್ಣಗಳ ಒಂದು ಸಮಗ್ರ ಶ್ರೇಣಿಯನ್ನು ಪ್ರದರ್ಶಿಸುತ್ತವೆ. ಇವುಗಳ ಪೈಕಿ ನಸುಗೆಂಪಿನ ನೀಲಮಣಿಯನ್ನು "ಕುರಂದ ನೀಲಮಣಿ" ಎಂದು ಕರೆಯಲಾಗುತ್ತದೆ.

ಬಣ್ಣದಲ್ಲಿನ ಈ ವ್ಯತ್ಯಾಸವು ಕಲ್ಲಿನ ಅಣುರಚನೆಯನ್ನು ಆಧರಿಸಿದೆ. ಬಗೆಬಗೆಯ ಕಲ್ಲುಗಳು ಔಪಚಾರಿಕವಾಗಿ ಒಂದೇ ಬಗೆಯ ರಾಸಾಯನಿಕ ಸಂಯೋಜನೆಯನ್ನು ಹೊಂದಿರುತ್ತವೆಯಾದರೂ, ನಿಖರವಾಗಿ ಅವು ಒಂದೇ ಆಗಿರುವುದಿಲ್ಲ. ಸಂಪೂರ್ಣವಾಗಿ ಭಿನ್ನವಾಗಿರುವ ಒಂದು ಅಣುವಿನಿಂದ ಒಂದು ಅಣುವು ಪದೇಪದೇ ಪಲ್ಲಟಗೊಳಿಸಲ್ಪಡುತ್ತಲೇ ಇರುತ್ತದೆ (ಮತ್ತು ಇದು ಒಂದು ದಶಲಕ್ಷ ಪರಮಾಣುಗಳಲ್ಲಿ ಒಂದೆಂಬಷ್ಟರ ಮಟ್ಟಿಗಿನ ಅಲ್ಪ ಸಂಖ್ಯೆಯಲ್ಲಿರಬಹುದು). ಅಶುದ್ಧತೆಗಳು ಎಂದು ಕರೆಯಲ್ಪಡುವ ಈ ಅಂಶಗಳು ನಿರ್ದಿಷ್ಟ ಬಣ್ಣಗಳನ್ನು ಹೀರಿಕೊಳ್ಳುವಷ್ಟರಮಟ್ಟಿಗಿದ್ದು, ಉಳಿದ ಬಣ್ಣಗಳನ್ನು ಯಾವುದೇ ಬಾಧಕವಿಲ್ಲದೆ ಬಿಡುತ್ತವೆ.

ಉದಾಹರಣೆಗೆ, ತನ್ನ ಅಪ್ಪಟ ಖನಿಜ ಸ್ವರೂಪದಲ್ಲಿ ಬಣ್ಣರಹಿತವಾಗಿರುವ ಬೆರಿಲ್‌, ಕ್ರೋಮಿಯಂ ಅಶುದ್ಧತೆಗಳೊಂದಿಗೆ ಸೇರಿಕೊಂಡು ಪಚ್ಚೆಯಾಗುತ್ತದೆ. ಒಂದು ವೇಳೆ ಕ್ರೋಮಿಯಂಗೆ ಬದಲಾಗಿ ನೀವು ಮ್ಯಾಂಗನೀಸ್‌‌ನ್ನು ಸೇರಿಸಿದರೆ, ಬೆರಿಲ್‌ ಒಂದು ನಸುಗೆಂಪು ಮಾರ್ಗನೈಟ್‌ ಆಗಿ ಮಾರ್ಪಡುತ್ತದೆ. ಕಬ್ಬಿಣದೊಂದಿಗೆ ಸೇರಿಕೊಂಡು ಅದು ಕಡಲು ನೀಲಿಯಾಗುತ್ತದೆ.

ಈ ಅಶುದ್ಧತೆಗಳು "ಕುಶಲತೆಯಿಂದ ಬಳಸಲ್ಪಟ್ಟರೆ" ಅದು ರತ್ನದ ಬಣ್ಣವನ್ನು ಬದಲಾಯಿಸಬಲ್ಲದು ಎಂಬ ಅಂಶವನ್ನು ರತ್ನದ ಕಲ್ಲುಗಳಿಗೆ ಸಂಬಂಧಿಸಿದ ಕೆಲವೊಂದು ಸಂಸ್ಕರಣೆಗಳು ಅಥವಾ ಸಂಸ್ಕರಣೆಗಳು ಉಪಯೋಗಿಸಿಕೊಳ್ಳುತ್ತವೆ.

ರತ್ನದ ಕಲ್ಲುಗಳಿಗೆ ಅನ್ವಯಿಸಲಾಗುವ ಸಂಸ್ಕರಣೆಗಳು

[ಬದಲಾಯಿಸಿ]

ಕಲ್ಲಿನ ಬಣ್ಣ ಅಥವಾ ಸ್ಫುಟತೆಯನ್ನು ವರ್ಧಿಸುವ ಸಲುವಾಗಿ ರತ್ನದ ಕಲ್ಲುಗಳನ್ನು ಅನೇಕ ವೇಳೆ ಸಂಸ್ಕರಿಸಲಾಗುತ್ತದೆ. ಸಂಸ್ಕರಣದ ಬಗೆ ಹಾಗೂ ವ್ಯಾಪ್ತಿಯನ್ನು ಅವಲಂಬಿಸಿ, ಅವು ಕಲ್ಲಿನ ಮೌಲ್ಯದ ಮೇಲೆ ಪರಿಣಾಮವನ್ನು ಬೀರಬಲ್ಲವು. ಅಂತಿಮವಾಗಿ ಹೊರಹೊಮ್ಮುವ ರತ್ನವು ಸ್ಥಿರವಾಗಿರುತ್ತದೆ ಎಂಬ ಕಾರಣದಿಂದ ಕೆಲವೊಂದು ಸಂಸ್ಕರಣಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇತರ ಕೆಲವೊಂದು ಸಂಸ್ಕರಣಗಳು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟಿಲ್ಲ. ರತ್ನದ ಬಣ್ಣವು ಅಸ್ಥಿರವಾಗಿರುವುದರಿಂದ ಬಣ್ಣದ ಮೂಲಛಾಯೆಗೆ ಇದು ಹಿಂದಕ್ಕೆ ಮರಳುವ ಸಾಧ್ಯತೆಯಿರುವುದು ಇದಕ್ಕೆ ಕಾರಣ.[೧೨]

ಅಂತಿಮವಾಗಿ ಹೊರಹೊಮ್ಮುವ ರತ್ನವು ಸ್ಥಿರವಾಗಿರುತ್ತದೆ ಎಂಬ ಕಾರಣದಿಂದ ಕೆಲವೊಂದು ಸಂಸ್ಕರಣಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಇತರ ಕೆಲವೊಂದು ಸಂಸ್ಕರಣಗಳು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟಿಲ್ಲ. ರತ್ನದ ಬಣ್ಣವು ಅಸ್ಥಿರವಾಗಿರುವುದರಿಂದ ಬಣ್ಣದ ಮೂಲಛಾಯೆಗೆ ಇದು ಹಿಂದಕ್ಕೆ ಮರಳುವ ಸಾಧ್ಯತೆಯಿರುವುದು ಇದಕ್ಕೆ ಕಾರಣ.[೧೨]

ಬಿಸಿಮಾಡುವಿಕೆ

[ಬದಲಾಯಿಸಿ]
ರತ್ನದ ಕಲ್ಲುಗಳೊಂದಿಗಿನ ಒಂದು ತಾರಸ್ವರದ ಸ್ಥಾಯಿ ಸಂಕೇತ.

ಬಿಸಿಮಾಡುವಿಕೆಯು ರತ್ನದ ಕಲ್ಲಿನ ಬಣ್ಣ ಅಥವಾ ಸ್ಫುಟತೆಯನ್ನು ಸುಧಾರಿಸಬಲ್ಲದು. ಬಿಸಿಮಾಡುವಿಕೆಯ ಪ್ರಕ್ರಿಯೆಯು ಶತಮಾನಗಳಿಂದಲೂ ರತ್ನದ ಗಣಿಗಾರರಿಗೆ ಮತ್ತು ರತ್ನವನ್ನು ಕತ್ತರಿಸುವವರಿಗೆ ಚಿರಪರಿಚಿತವಾಗಿದ್ದು, ಕಲ್ಲಿನ ಅನೇಕ ಬಗೆಗಳಲ್ಲಿ ಬಿಸಿಮಾಡುವಿಕೆಯು ಒಂದು ಸಾಮಾನ್ಯ ಪರಿಪಾಠವಾಗಿದೆ. ಪದ್ಮರಾಗದ ಬಿಸಿಮಾಡುವಿಕೆಯಿಂದ ಬಹುಪಾಲು ಹಳದಿ ಬೆಣಚುಕಲ್ಲು ರೂಪಿಸಲ್ಪಡುತ್ತದೆ, ಮತ್ತು ಒಂದು ಬಲವಾದ ತಾಪದೊಂದಿಗೆ ಆಂಶಿಕವಾಗಿ ಬಿಸಿಮಾಡುವಿಕೆಯಿಂದ ಅಮೆಟ್ರೀನ್‌ ಎಂಬ ಕಲ್ಲು ರೂಪುಗೊಳ್ಳುತ್ತದೆ. ಇದು ಭಾಗಶಃ ಪದ್ಮರಾಗ ಮತ್ತು ಭಾಗಶಃ ಹಳದಿ ಬೆಣಚುಕಲ್ಲು ಎಂದು ಕರೆಸಿಕೊಳ್ಳುತ್ತದೆ. ಹೆಚ್ಚಿನಂಶದ ಕಡಲು ನೀಲಿ ಕಲ್ಲಿನಲ್ಲಿರುವ ಹಳದಿ ಛಾಯೆಗಳನ್ನು ತೆಗೆದುಹಾಕಲು ಮತ್ತು ಹೆಚ್ಚು ಬಯಸುವ ನೀಲಿ ಬಣ್ಣವಾಗಿ ಹಸಿರು ಬಣ್ಣವನ್ನು ಬದಲಾಯಿಸಲು ಅಥವಾ ಹಾಲಿಯಿರುವ ಅದರ ನೀಲಿ ಬಣ್ಣವನ್ನು ಒಂದು ಅಪ್ಪಟವಾದ ನೀಲಿ ಬಣ್ಣಕ್ಕೆ ವರ್ಧಿಸಲು ಕಡಲು ನೀಲಿ ಕಲ್ಲನ್ನು ಬಿಸಿಯ ಸಂಸ್ಕರಣಕ್ಕೆ ಈಡುಮಾಡಲಾಗುತ್ತದೆ.[೧೩]

ಟ್ಯಾಂಜನೈಟ್‌ನಲ್ಲಿರುವ ಕಂದು ತೆಳುಬಣ್ಣಗಳನ್ನು ತೆಗೆದುಹಾಕಲು ಮತ್ತು ಅತಿ ಹೆಚ್ಚು ಬಯಸುವ ನೀಲಿ/ನೇರಳೆ ಬಣ್ಣವನ್ನು ಅದಕ್ಕೆ ನೀಡಲು, ಸರಿಸುಮಾರಾಗಿ ಎಲ್ಲಾ ಟ್ಯಾಂಜನೈಟ್‌ನ್ನು ಕಡಿಮೆ ತಾಪಮಾನದಲ್ಲಿ ಬಿಸಿಮಾಡುವ ಸಂಸ್ಕರಣೆಗೆ ಈಡುಮಾಡಲಾಗುತ್ತದೆ. ನೀಲಮಣಿ ಮತ್ತು ಮಾಣಿಕ್ಯಗಳ ಒಂದು ಗಮನಾರ್ಹವಾದ ಪ್ರಮಾಣವನ್ನು ಬಿಸಿ ಸಂಸ್ಕರಣಗಳ ಒಂದು ಬಗೆಗೆ ಈಡುಮಾಡಿ ಬಣ್ಣ ಹಾಗೂ ಸ್ಫುಟತೆಗಳೆರಡನ್ನೂ ಸುಧಾರಿಸಲಾಗುತ್ತದೆ.

ವಜ್ರಗಳನ್ನು ಅಳವಡಿಸಿರುವ ರತ್ನಾಭರಣಗಳನ್ನು (ದುರಸ್ತಿಗಳಿಗಾಗಿ) ಬಿಸಿಮಾಡುವಾಗ, ವಜ್ರವನ್ನು ಬೊರಾಸಿಕ್‌ ಆಮ್ಲದೊಂದಿಗೆ ಸಂರಕ್ಷಿಸಬೇಕು; ಇಲ್ಲದಿದ್ದಲ್ಲಿ (ಅಪ್ಟಟ ಇಂಗಾಲವಾಗಿರುವ) ವಜ್ರದ ಮೇಲ್ಮೈ ಸುಟ್ಟುಹೋಗಬಹುದು ಅಥವಾ ವಜ್ರವು ಸಂಪೂರ್ಣವಾಗಿಯೂ ಸುಟ್ಟುಹೋಗಬಹುದು. ನೀಲಮಣಿಗಳು ಅಥವಾ ಮಾಣಿಕ್ಯಗಳನ್ನು ಅಳವಡಿಸಿರುವ ರತ್ನಾಭರಣಗಳನ್ನು (ದುರಸ್ತಿಗಳಿಗಾಗಿ) ಬಿಸಿಮಾಡುವಾಗ, ಅವುಗಳಿಗೆ ಬೊರಾಸಿಕ್‌ ಆಮ್ಲವನ್ನಾಗಲೀ ಅಥವಾ ಇನ್ನಾವುದೇ ವಸ್ತುವಿನ ಲೇಪವನ್ನಾಗಲೀ ಲೇಪಿಸಬಾರದು. ಹೀಗೆ ಮಾಡುವುದರಿಂದ ಅವುಗಳ ಮೇಲ್ಮೈಯು ತರಚಿಹೋಗುತ್ತದೆ; ಅಲ್ಲದೇ ಒಂದು ವಜ್ರದಂತೆ ಇವನ್ನು “ಸಂರಕ್ಷಿಸುವ” ಅಗತ್ಯ ಕಂಡುಬರುವುದಿಲ್ಲ.

ವಿಕಿರಣ

[ಬದಲಾಯಿಸಿ]

ವಸ್ತುತಃ ಎಲ್ಲಾ ನೀಲಿ ಗೋಮೇಧಿಕಗಳು, "ಲಂಡನ್‌" ನೀಲಿಯಂಥ ಲಘುವಾದ ಮತ್ತು ಗಾಢವಾದ ನೀಲಿ ಛಾಯೆಗಳೆರಡೂ, ಬಿಳಿಬಣ್ಣದಿಂದ ನೀಲಿಬಣ್ಣಕ್ಕೆ ಬಣ್ಣವನ್ನು ಬದಲಾಯಿಸಲು ವಿಕಿರಣಕ್ಕೆ ಒಳಗಾಗಿವೆ. ಹಸಿರುಬಣ್ಣಕ್ಕೆ ತಿರುಗಿರುವ ಬಹುಪಾಲು ಬೆಣಚು ಕಲ್ಲೂ (ಓರೋ ವರ್ಡೆ) ಸಹ ಹಳದಿ-ಹಸಿರು ಬಣ್ಣವನ್ನು ಪಡೆಯುವುದಕ್ಕಾಗಿ ವಿಕಿರಣಕ್ಕೆ ಒಳಗಾಗಿದೆ.

ಮೇಣ ಲೇಪಿಸುವಿಕೆ/ತೈಲ ಲೇಪಿಸುವಿಕೆ

[ಬದಲಾಯಿಸಿ]

ಪಚ್ಚೆಗಳಲ್ಲಿರುವ ನೈಸರ್ಗಿಕ ಬಿರುಕುಗಳನ್ನು ನರೆಮಾಚುವ ದೃಷ್ಟಿಯಿಂದ ಅಂಥ ಪಚ್ಚೆಗಳನ್ನು ಕೆಲವೊಮ್ಮೆ ಮೇಣ ಅಥವಾ ತೈಲದಿಂದ ತುಂಬಿಸಲಾಗುತ್ತದೆ. ಪಚ್ಚೆಯು ಉತ್ತಮವಾದ ಬಣ್ಣವಷ್ಟೇ ಅಲ್ಲದೇ ಸ್ಫುಟತೆಯೊಂದಿಗೆ ಕಾಣಿಸಲು, ಈ ಮೇಣ ಅಥವಾ ತೈಲಕ್ಕೆ ಬಣ್ಣವನ್ನೂ ಹಾಕಲಾಗುತ್ತದೆ. ವಿಶಿಷ್ಟ ವೈಢೂರ್ಯವನ್ನೂ (ಟಾರ್ಕ್ವೈಸ್‌) ಸಹ ಇದೇ ಬಗೆಯ ವಿಧಾನದಲ್ಲಿ ಸಾಮಾನ್ಯವಾಗಿ ಸಂಸ್ಕರಿಸಲಾಗುತ್ತದೆ.

ಭಂಜಿತ ಮುಖವನ್ನು ತುಂಬುವಿಕೆ

[ಬದಲಾಯಿಸಿ]

ಭಂಜಿತ ಮುಖವನ್ನು ತುಂಬಿಸುವ ಪ್ರಕ್ರಿಯೆಯು ವಜ್ರಗಳು, ಪಚ್ಚೆಗಳು ಮತ್ತು ನೀಲಮಣಿಗಳಂಥ ಬಗೆಬಗೆಯ ರತ್ನದ ಕಲ್ಲುಗಳೊಂದಿಗೆ ಬಳಕೆಯಲ್ಲಿದೆ. 2006ರಲ್ಲಿ, "ಗಾಜು ತುಂಬಿಸಿದ ಮಾಣಿಕ್ಯಗಳು" ಸಾಕಷ್ಟು ಪ್ರಚಾರವನ್ನು ಗಿಟ್ಟಿಸಿದವು. ದೊಡ್ಡದಾದ ಭಂಜಿತ ಮುಖಗಳೊಂದಿಗಿನ, 10 ಕ್ಯಾರಟ್‌‌ಗೂ (2 ಗ್ರಾಂ) ಹೆಚ್ಚು ತೂಕದ ಮಾಣಿಕ್ಯಗಳನ್ನು ಸೀಸದ ಗಾಜಿನಿಂದ ತುಂಬಿಸುವುದರ ಮೂಲಕ, ಅವುಗಳ (ನಿರ್ದಿಷ್ಟವಾಗಿ ಹೇಳುವುದಾದರೆ ದೊಡ್ಡಗಾತ್ರದ ಮಾಣಿಕ್ಯಗಳ) ಚಹರೆಯನ್ನು ಆಕರ್ಷಕವಾದ ರೀತಿಯಲ್ಲಿ ಸುಧಾರಿಸಲಾಗಿತ್ತು. ಇಂಥ ಸಂಸ್ಕರಣಗಳನ್ನು ಪತ್ತೆಹಚ್ಚುವುದು ವಾಸ್ತವವಾಗಿ ಸುಲಭ.

ಸಂಶ್ಲೇಷಿತ ಮತ್ತು ಕೃತಕ ರತ್ನದ ಕಲ್ಲುಗಳು

[ಬದಲಾಯಿಸಿ]

ಇತರ ರತ್ನದ ಕಲ್ಲುಗಳನ್ನು ಅನುಕರಣೆ ಮಾಡುವುದಕ್ಕಾಗಿ ಕೆಲವೊಂದು ರತ್ನದ ಕಲ್ಲುಗಳನ್ನು ತಯಾರಿಸಲಾಗುತ್ತದೆ. ಉದಾಹರಣೆಗೆ, ಘನಾಕೃತಿಯ ಜಿರ್ಕೋನಿಯಾವು ಒಂದು ಸಂಶ್ಲೇಷಿತ ವಜ್ರದ ಅನುರೂಪಕವಾಗಿದ್ದು, ಜಿರ್ಕೋನಿಯಂ ಆಕ್ಸೈಡ್‌ನಿಂದ ಅದು ಮಾಡಲ್ಪಟ್ಟಿದೆ. ‌ಮಾಯ್ಸನೈಟ್ ಎಂಬುದು ಮತ್ತೊಂದು ಉದಾಹರಣೆಯಾಗಿದೆ. ವಾಸ್ತವಿಕ ಕಲ್ಲಿನ ನೋಟ ಮತ್ತು ಬಣ್ಣವನ್ನು ಅನುಕರಣೆಗಳು ನಕಲುಮಾಡುತ್ತವೆಯಾದರೂ, ವಾಸ್ತವಿಕ ಕಲ್ಲಿನ ರಾಸಾಯನಿಕ ವಿಶಿಷ್ಟ ಲಕ್ಷಣಗಳನ್ನಾಗಲೀ ಅಥವಾ ಭೌತಿಕ ವಿಶಿಷ್ಟ ಲಕ್ಷಣಗಳನ್ನಾಗಲೀ ಅವು ಹೊಂದುವುದಿಲ್ಲ. ಮಾಯ್ಸನೈಟ್‌ ಕಲ್ಲು ವಜ್ರಕ್ಕಿಂತ ಉನ್ನತವಾಗಿರುವ ಒಂದು ವಕ್ರೀಕರಣ ಸೂಚಿಯನ್ನು ಹೊಂದಿದ್ದು, ಸಮಾನಗಾತ್ರದ ಮತ್ತು ಕತ್ತರಿಸಿದ ಮಾದರಿಯೊಂದಿಗಿನ ವಜ್ರದ ಪಕ್ಕದಲ್ಲಿ ಅದನ್ನು ಸಾದರಪಡಿಸಿದಾಗ, ವಜ್ರಕ್ಕಿಂತಲೂ ಹೆಚ್ಚಿನ "ಕಾಂತಿಯನ್ನು" ಅದು ಹೊಮ್ಮಿಸುತ್ತದೆ.

ಆದಾಗ್ಯೂ, ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟ ರತ್ನದ ಕಲ್ಲುಗಳು ಅನುಕರಣೆಗಳಾಗಿರುವುದಿಲ್ಲ. ಉದಾಹರಣೆಗೆ, ನೈಸರ್ಗಿಕವಾಗಿ ಸಂಭವಿಸುವ ಪ್ರಭೇದವನ್ನು ಹೋಲುವಂತಿರುವ ರಾಸಾಯನಿಕ ಮತ್ತು ಭೌತಿಕ ವಿಶಿಷ್ಟ ಲಕ್ಷಣಗಳನ್ನು ಒಳಗೊಳ್ಳುವಂತೆ ವಜ್ರಗಳು, ಮಾಣಿಕ್ಯ, ನೀಲಮಣಿಗಳು ಮತ್ತು ಪಚ್ಚೆಗಳನ್ನು ಪ್ರಯೋಗಾಲಯಗಳಲ್ಲಿ ತಯಾರಿಸುತ್ತಾ ಬರಲಾಗಿದೆ. ಮಾಣಿಕ್ಯ ಮತ್ತು ನೀಲಮಣಿಯನ್ನು ಒಳಗೊಂಡಂತೆ, ಸಂಶ್ಲೇಷಿತ (ಪ್ರಯೋಗಾಲಯದಲ್ಲಿ ಸೃಷ್ಟಿಸಿದ) ಕುರಂಗದ ಕಲ್ಲುಗಳು ಅತ್ಯಂತ ಸಾಮಾನ್ಯವಾಗಿವೆ ಮತ್ತು ನೈಸರ್ಗಿಕ ಕಲ್ಲುಗಳಿಗೆ ಹೋಲಿಸಿದಾಗ ಅವುಗಳ ಬೆಲೆಯು ಅತ್ಯಲ್ಪವಾಗಿರುತ್ತದೆ. ಚಿಕ್ಕಗಾತ್ರದ ಸಂಶ್ಲೇಷಿತ ವಜ್ರಗಳನ್ನು ಕೈಗಾರಿಕಾ ಅಪಘರ್ಷಕಗಳಾಗಿ ಬೃಹತ್‌ ಪ್ರಮಾಣದಲ್ಲಿ ತಯಾರಿಸಿಕೊಂಡು ಬರಲಾಗಿದೆ.

ರತ್ನದ ಕಲ್ಲೊಂದು ನೈಸರ್ಗಿಕ ಕಲ್ಲಾಗಿರಲಿ ಅಥವಾ ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟ ಒಂದು (ಸಂಶ್ಲೇಷಿತ) ಕಲ್ಲಾಗಿರಲಿ, ಪ್ರತಿಯೊಂದರ ವಿಶಿಷ್ಟ ಲಕ್ಷಣಗಳು ಒಂದೇ ಆಗಿರುತ್ತವೆ. ಪ್ರಯೋಗಾಲಯವೊಂದರಲ್ಲಿ ಅಶುದ್ಧತೆಗಳು ಇರುವುದಿಲ್ಲವಾದ್ದರಿಂದ, ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟ ಕಲ್ಲುಗಳು ತಾವು ಒಂದು ಹೆಚ್ಚು ವೈವಿಧ್ಯಮಯ ಬಣ್ಣವನ್ನು ಹೊಂದುವ ಪ್ರವೃತ್ತಿಯನ್ನು ತೋರಿಸುತ್ತವೆ. ಆದ್ದರಿಂದ ಕಲ್ಲಿನ ಸ್ಫುಟತೆ ಅಥವಾ ಬಣ್ಣದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

ಮಿಶ್ರಜಾತಿ ರತ್ನದ ಕಲ್ಲುಗಳು

[ಬದಲಾಯಿಸಿ]

ಸಂಶ್ಲೇಷಿತ, ನೈಸರ್ಗಿಕ, ಕೃತಕ, ಮತ್ತು ಅನುಕರಣೆ ಅನುಕರಣೆ ಎಂಬೆಲ್ಲಾ ಪಾರಿಭಾಷಿಕ ಪದಗಳನ್ನು ರತ್ನಶಾಸ್ತ್ರಜ್ಞರು ಅತ್ಯುತ್ತಮವಾಗಿ ಅರ್ಥೈಸಿಕೊಳ್ಳುತ್ತಾರೆ. ಆದಾಗ್ಯೂ, ರತ್ನಶಾಸ್ತ್ರದಲ್ಲಿ ಅನ್ವಯಿಸಲಾಗಿರುವ ಈ ಪದಗಳನ್ನು ಉದ್ಯಮದೊಳಗಿನ ಮತ್ತು ಹೊರಗಿನ ಈ ಎರಡೂ ವರ್ಗದವರಿಗೆ ರತ್ನಶಾಸ್ತ್ರಜ್ಞರು ನಿರಂತರವಾಗಿ ವಿವರಿಸುತ್ತಲೇ ಇರಬೇಕಾಗುತ್ತದೆ. ಏಕೆಂದರೆ, ನಿರ್ದಿಷ್ಟವಾಗಿ ಸಂಶ್ಲೇಷಿತ ಎಂಬ ಪದವನ್ನು ಬಗೆಬಗೆಯ ಕ್ಷೇತ್ರಗಳಿಗೆ ಅನ್ವಯಿಸಿದಾಗ ಬಗೆಬಗೆಯ ವ್ಯಾಖ್ಯಾನಗಳನ್ನು ಅದು ನೀಡುತ್ತದೆ.

ಖಚಿತವಾಗಿ ಇದು ಹೀಗೇಕಾಗುತ್ತದೆಯೆಂದರೆ, ಕೆಲವೊಂದು ಹೊಸ ರತ್ನದ ಸಂಸ್ಕರಣಗಳು ಮಿಶ್ರಜಾತಿ ಎಂಬ ಪದವನ್ನು ಸೂಚಿಸಲ್ಪಟ್ಟಿರುವುದಕ್ಕಿಂತ ಒಂದು ರತ್ನ ವರ್ಗವನ್ನು ಹೆಚ್ಚಾಗಿ ಅತಿಕ್ರಮಿಸುತ್ತವೆ. ಈ ಮೂಲದ್ರವ್ಯಗಳು ಒಂದು ಮೂಲ ನೈಸರ್ಗಿಕ ಮೂಲದ್ರವ್ಯವನ್ನು ಒಳಗೊಂಡಿದ್ದು, ನೈಸರ್ಗಿಕ ಎಂಬ ಪದವು ಮತ್ತೆಂದು ಅನ್ವಯಿಸಲಾಗದಷ್ಟರ ಮಟ್ಟಿಗೆ ಅದು ಗಣನೀಯವಾಗಿ ಸೇರಿಸಲ್ಪಟ್ಟಿರುತ್ತದೆ. ಮಿಶ್ರಜಾತಿ ರತ್ನಗಳು ಕೃತಕ ಮೂಲದ್ರವ್ಯದ ಜೊತೆಯಲ್ಲಿ ನೈಸರ್ಗಿಕ ಮೂಲದ್ರವ್ಯವನ್ನು ಒಳಗೊಂಡಿರುತ್ತವೆ, ಈ ಕೃತಕ ಮೂಲದ್ರವ್ಯವು ಸಂಶ್ಲೇಷಿತ ಬೆಳವಣಿಗೆಯಾಗಿರಬಹುದು ಅಥವಾ ಪಾಲಿಮರ್‌‌ಗಳಾಗಿರಬಹುದು ಅಥವಾ ಗಾಜುಗಳಾಗಿರಬಹುದು.

ಕೃತಕ ಘಟಕಗಳಿಂದ ನೈಸರ್ಗಿಕ ಘಟಕಗಳನ್ನು ಪ್ರತ್ಯೇಕಿಸುವ ಯಾವುದೇ ಸುಲಭವಾದ ವಿಧಾನಗಳನ್ನು ಒಳಗೊಂಡಿರದ ರತ್ನದ ಮೂಲದ್ರವ್ಯಗಳನ್ನು ಮಿಶ್ರಜಾತಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಒಂದು ಜೋಡಿ ಅಥವಾ ಒಂದು ಮುಕ್ಕೂಟದೊಂದಿಗೆ ನೈಸರ್ಗಿಕ ಮೂಲದ್ರವ್ಯವನ್ನು ಪ್ರತ್ಯೇಕಿಸಬಹುದು, ಗುರುತಿಸಬಹುದು - ಮತ್ತು ಎಲ್ಲದರಿಂದ ಸೈದ್ಧಾಂತಿಕವಾಗಿ ಮರುಸಂಪಾದಿಸಬಹುದು ಎಂಬ ನಿಟ್ಟಿನಲ್ಲಿ ಇದು ಪ್ರಮುಖವಾಗಿದೆ. ಜೋಡಣೆಗೊಂಡ ಪ್ರಭೇದದೊಂದಿಗೆ ಮಿಶ್ರಜಾತಿಯನ್ನು ಸಮೀಕರಿಸಿ ಗೊಂದಲಕ್ಕೀಡಾಗಬಾರದು. ಆದರೆ ಇದು ಮರುರೂಪಿಸಲ್ಪಟ್ಟ ಮೂಲದ್ರವ್ಯಗಳನ್ನಷ್ಟೇ ಅಲ್ಲದೇ B-ಜೇಡ್‌ ರತ್ನಗಳನ್ನು ಒಳಗೊಳ್ಳುತ್ತದೆ.

ಪಚ್ಚೆಯ ಸಾಂಪ್ರದಾಯಿಕ ತೈಲ ಲೇಪಿಸುವಿಕೆಗೆ ಮತ್ತು ಅನೇಕ ಮೋಂಗ್‌ ಹ್ಸು ಮಾಣಿಕ್ಯಗಳಲ್ಲಿ ಕಂಡುಬರುವಂತೆ (ತುಲನಾತ್ಮಕವಾಗಿ ಕಿರುಗಾತ್ರದ) ಭಂಜಿತ ಮುಖದ ವಾಸಿಯಾಗುವಿಕೆಗೆ ಮಿಶ್ರಜಾತಿಯು ಅನ್ವಯಿಸುವುದಿಲ್ಲ; ಹೋಲಿಕೆಯಲ್ಲಿ ಈ ಸಂಸ್ಕರಣಗಳು ಮುಖ್ಯವಲ್ಲದ್ದಾಗಿವೆ ಮತ್ತು ಬಹುತೇಕ ನಿದರ್ಶನಗಳಲ್ಲಿ ಒಟ್ಟಾರೆ ರಾಶಿಯ 5%ಗಿಂತ ಕಡಿಮೆಯ ಪ್ರಮಾಣದಲ್ಲಿ ಸಂಯೋಜನೀಯ ದ್ರವ್ಯಗಳಿರುತ್ತವೆ. ಆದರೆ ಈ ವರ್ಗಗಳಲ್ಲಿನ ಕೆಲವೊಂದು ಅತೀವವಾಗಿ ಸಂಸ್ಕರಿಸಲ್ಪಟ್ಟ ಕಲ್ಲುಗಳು ಮಿಶ್ರಜಾತಿ ಕಲ್ಲುಗಳಾಗಿ ಅರ್ಹತೆಯನ್ನು ಪಡೆಯಬಹುದಾದ ಸಾಧ್ಯತೆಯೂ ಇಲ್ಲಿ ಉಳಿಯುತ್ತದೆ.

ಈ ಹೊಸ ಮೇಲ್ಮಟ್ಟದ ವರ್ಗದ ಅಗತ್ಯವಿದೆಯೆಂಬುದು ಉದ್ಯಮದ ಪ್ರಮುಖ ಬೋಧಕರ, ಮಾರಾಟಗಾರರ, ಮತ್ತು ವ್ಯಾಪಾರ ಸಂಘಟನೆಗಳ ಅರಿವಿಗೆ ಬಂದಿದೆ. ಒಂದು ರೀತಿಯಲ್ಲಿ ಇದು ರತ್ನಶಾಸ್ತ್ರೀಯ ಪದಗಳಿಗೆ ಮಾಡಲಾದ ಒಂದು ನಾಟಕೀಯ ಸೇರ್ಪಡೆಯಾದರೂ ಸಹ, ಆಧುನಿಕ ಸಂಸ್ಕರಣ ವಿಧಾನಗಳ ಕಾರಣದಿಂದಾಗಿ ಇದೊಂದು ಕೇವಲ ಸ್ವಾಭಾವಿಕ ವಿಕಸನವಾಗಿದೆ.

ಟಿಪ್ಪಣಿಗಳು

[ಬದಲಾಯಿಸಿ]
  1. ದಿ ಆಕ್ಸ್‌ಫರ್ಡ್‌ ಡಿಕ್ಷ್‌ನರಿ ಆನ್‌ಲೈನ್‌ Archived 2007-06-05 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ವೆಬ್‌ಸ್ಟೆರ್‌‌ ಆನ್‌ಲೈನ್‌ ಡಿಕ್ಷ್‌ನರಿ Archived 2007-06-03 ವೇಬ್ಯಾಕ್ ಮೆಷಿನ್ ನಲ್ಲಿ.
  2. ಪ್ರೆಷಸ್‌ ಸ್ಟೋನ್ಸ್‌ , ಮ್ಯಾಕ್ಸ್‌ ಬ್ಯೂಯೆರ್‌‌, ಪುಟ 2
  3. ಪ್ರೆಷಸ್‌ ಜೆಮ್‌ಸ್ಟೋನ್ ರತ್ನಾಭರಣಗಳುದ ಶಬ್ದಸಂಗ್ರಹ
  4. ‌ವೈಸ್, R. W., 2006, ಸೀಕ್ರೆಟ್ಸ್‌ ಆಫ್‌ ದಿ ಜೆಮ್‌ ಟ್ರೇಡ್‌, ದಿ ಕಾನಸರ್‌'ಸ್‌ ಗೈಡ್‌ ಟು ಪ್ರೆಷಸ್‌ ಜೆಮ್‌ಸ್ಟೋನ್ಸ್‌, ಬ್ರನ್ಸ್‌ವಿಕ್‌ ಹೌಸ್‌ ಪ್ರೆಸ್‌, ಪುಟಗಳು 3-8 ISBN 0972822380
  5. ವೈಸ್‌, R. W., 2006, ಸೀಕ್ರೆಟ್ಸ್‌ ಆಫ್‌ ದಿ ಜೆಮ್‌ ಟ್ರೇಡ್‌, ದಿ ಕಾನಸರ್‌'ಸ್‌ ಗೈಡ್‌ ಟು ಪ್ರೆಷಸ್‌ ಜೆಮ್‌ಸ್ಟೋನ್ಸ್, ಬ್ರನ್ಸ್‌ವಿಕ್‌ ಹೌಸ್‌ ಪ್ರೆಸ್‌‌‌, ಪುಟ 36 ISBN 0972822380
  6. ವೈಸ್‌, R. W., 2006, ಸೀಕ್ರೆಟ್ಸ್‌ ಆಫ್‌ ದಿ ಜೆಮ್‌ ಟ್ರೇಡ್‌, ದಿ ಕಾನಸರ್‌'ಸ್‌ ಗೈಡ್‌ ಟು ಪ್ರೆಷಸ್‌ ಜೆಮ್‌ಸ್ಟೋನ್ಸ್, ಬ್ರನ್ಸ್‌ವಿಕ್‌ ಹೌಸ್‌ ಪ್ರೆಸ್‌‌‌, ಪುಟ 15
  7. Burnham, S.M. (1868). Precious Stones in Nature, Art and Literature. Bradlee Whidden. ಪುಟ 251
  8. ೮.೦ ೮.೧ Church, A.H. (Professor at Royal Academy of Arts in London) (1905). Precious Stones considered in their scientific and artistic relations. His Majesty's Stationary Office, Wyman & Sons. ಅಧ್ಯಾಯ 1, ಪುಟ 9: ಡೆಫನಿಷನ್‌ ಆಫ್‌ ಜೆಮ್‌ಸ್ಟೋನ್ಸ್‌ URL: ಡೆಫನಿಷನ್‌ ಆಫ್‌ ಜೆಮ್‌ಸ್ಟೋನ್ಸ್‌ Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ.
  9. ೯.೦ ೯.೧ ೯.೨ ೯.೩ ಸೀಕ್ರೆಟ್ಸ್‌ ಆಫ್‌ ದಿ ಜೆಮ್‌ ಟ್ರೇಡ್‌, ದಿ ಕಾನಸರ್‌'ಸ್‌ ಗೈಡ್‌ ಟು ಪ್ರೆಷಸ್‌ ಜೆಮ್‌ಸ್ಟೋನ್ಸ್ ರಿಚರ್ಡ್‌ W ವೈಸ್‌, ಬ್ರನ್ಸ್‌ವಿಕ್‌ ಹೌಸ್‌ ಪ್ರೆಸ್‌, ಲೆನಾಕ್ಸ್‌, ಮ್ಯಾಸಚೂಸೆಟ್ಸ್‌., 2003
  10. ರಾಪಪೋರ್ಟ್‌ ರಿಪೋರ್ಟ್‌ ಆಫ್‌ ICA ಜೆಮ್‌ಸ್ಟೋನ್‌ ಕಾನ್ಫರೆನ್ಸ್‌ ಇನ್‌ ದುಬೈ
  11. ಪಾನ್ಸಿ D. ಕ್ರೌಸ್‌., ಇಂಟ್ರಡಕ್ಷನ್ ಟು ಲ್ಯಾಪಿಡರಿ
  12. ೧೨.೦ ೧೨.೧ ಕರ್ಟ್‌ ನಸ್ಸಾವು., ಜೆಮ್‌ಸ್ಟೋನ್‌ ಎನ್‌ರಿಚ್‌ಮೆಂಟ್‌: ಹಿಸ್ಟರಿ, ಸೈನ್ಸ್‌ ಅಂಡ್‌ ಸ್ಟೇಟ್‌ ಆಫ್‌ ದಿ ಆರ್ಟ್‌
  13. Nassau, Kurt (1994). Gem Enhancements. Butterworth Heineman.


ಬಾಹ್ಯ ಕೊಂಡಿಗಳು

[ಬದಲಾಯಿಸಿ]