ವಿಷಯಕ್ಕೆ ಹೋಗು

ಲಿನಕ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಿನಕ್ಸ್
ಟಕ್ಸ್ - ಟಕ್ಸ್ ಪೆಂಗ್ವಿನ್‌‌ ಹಕ್ಕಿ, ಲಿನಕ್ಸ್ ನ ಶುಭಚಿಹ್ನೆ[]
ಗಣಕಯಂತ್ರದ ಕಾರ್ಯನಿರ್ವಹಣ ಸಾಧನದ ವರ್ಗUnix-like
Working stateCurrent
Source modelಮುಕ್ತ ತಂತ್ರಾಂಶ
ಆಧಾರಿತ ವೇದಿಕೆIA-32, MIPS, x86-64, SPARC, DEC Alpha, Itanium, PowerPC, ARM, m68k, PA-RISC, s390, SuperH, M32R and more
ಕರ್ನೆಲ್ ಶ್ರೇಣಿMonolithic
UserlandGNU and others.
ಲೈಸನ್ಸು Various including GNU General Public License, BSD License, Apache License, and others []
ಟಕ್ಸ್ - ಲಿನಕ್ಸ್ ನ ಮ್ಯಾಸ್ಕಾಟ್
ubuntu

ಲಿನಕ್ಸ್ ಗಣಕಯಂತ್ರಕಾರ್ಯನಿರ್ವಹಣ ಸಾಧನ (Operating System) ಹಾಗೂ ಅದರ ಕರ್ನೆಲ್ (Kernel). ಇದು ಮುಕ್ತ ತಂತ್ರಾಂಶ, ಮುಕ್ತ ಆಕರ ವಿಕಸನೆಯ ಒಂದು ಉತ್ತಮ ಉದಾಹರಣೆ. ಮೂಲವಾಗಿ ಲಿನಕ್ಸ್ ಎಂದಾಗ ಲಿನಕ್ಸ್ 'ಕರ್ನೆಲ್'ಅನ್ನು ಉದ್ದೇಶಿಸಿ ಮಾತನಾಡಲಾಗುತ್ತದೆ. ಅದರೆ ಸಾಮಾನ್ಯವಾಗಿ ಲಿನಕ್ಸ್ 'ಕರ್ನೆಲ್'ಅನ್ನು ಬಳಸಿಕೊಂಡ ಯುನಿಕ್ಸ್ ತರಹದ (ಗ್ನು/ಲಿನಕ್ಸ್ ಎಂದೂ ಶೃತವಾದ) ಆಪರೇಟಿಂಗ್ ಸಿಸ್ಟಮ್ ಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಲಿನಕ್ಸ್ ವಿತರಣೆಗಳು ಮೂಲತಃ ರಚನೆಯ ಜೊತೆಗೆ ಸಾಧಾರಣವಾಗಿ ಹಲವು ವಿಭಿನ್ನ ತಂತ್ರಾಂಶಗಳನ್ನೊಳಗೊಂಡು ಹೊರಬರುತ್ತವೆ. ಫೆಡೊರಾ ಕೋರ್, ಮ್ಯಾಂಡ್ರೇಕ್, ಉಬುಂಟು ಮುಂತಾದವು ಬಹು ಜನಪ್ರಿಯ ಲಿನಕ್ಸ್ ವಿತರಣೆಗಳಲ್ಲಿ ಕೆಲವು. ಮೂಲತಃ ಇಂಟೆಲ್ 386 ಮೈಕ್ರೊಪ್ರಾಸೆಸರ್ ಗಳಿಗೆ ವಿಕಸಿತಗೊಳಿಸಲಾದ ಲಿನಕ್ಸ್ ಈಗ ಹಲವು ಗಣಕ ವಾಸ್ತುಶಿಲ್ಪಗಳಿಗೆ ಅಧಾರ ನೀಡುತ್ತದೆ. ಸ್ವಕೀಯ ಗಣಕ ಯಂತ್ರಗಳಿಂದ ಹಿಡಿದು ಸೂಪರ್ ಕಂಪ್ಯೂಟರ್ ಗಳವರೆಗೂ (Super Computer = ಅತ್ಯುತ್ಕೃಷ್ಟ ಗಣಕ ಯಂತ್ರ) ಇದರ ಉಪಯೋಗ ಪಡೆಯಬಹುದಾಗಿದೆ. ಇದಲ್ಲದೇ, ಮೊಬೈಲ್ ಫೋನ್ ಗಳು, ಸ್ವಕೀಯ ವೀಡಿಯೋ ರೆಕಾರ್ಡರ್ ಗಳಂತಹ ಎಮ್ಬೆಡ್ಡೆಡ್ (Embedded) ರಚನೆಗಳಲ್ಲೂ ಉಪಯೋಗಿಸಲಾಗುತ್ತಿದೆ.

ಸ್ವಯಂ ಸೇವಕರು, ಉತ್ಸಾಹಿಗಳಿಂದ ಬಹುವಾಗಿ ವಿಕಸಿತಗೊಳಿಸಲ್ಪಟ್ಟ, ಬಳಸಲ್ಪಟ್ಟ ಲಿನಕ್ಸ್, ಕಾಲಕ್ರಮೇಣ ಐಟಿ ದೈತ್ಯರಾದ ಐ.ಬಿ.ಎಮ್, ಹಿವ್ಲೆಟ್ ಪ್ಯಾಕರ್ಡ್ ನಂತಹ ಕಂಪೆನಿಗಳ ಬೆಂಬಲವನ್ನು ಪಡೆದು, ಸರ್ವರ್ ಮಾರುಕಟ್ಟೆಯಲ್ಲಿ ಇತರೆ ಖಾಸಗಿ ಕಂಪೆನಿಗಳ ಒಡೆತನದ ಯುನಿಕ್ಸ್ ಆವೃತ್ತಿಗಳನ್ನು ಹಾಗೂ ಮೈಕ್ರೊಸಾಫ್ಟ್ ವಿಂಡೋಸ್ ತಂತ್ರಾಂಶವನ್ನು ಸದೆಬಡಿಯುತ್ತಿದೆ. ತತ್ವ ಪ್ರತಿಪಾದಕರು, ಹಾಗೂ ಹಲವು ವಿಶ್ಲೇಷಕರು ಈ ಯಶಸ್ಸಿಗೆ 'ಲಿನಕ್ಸ್'ನ ಸ್ವಾತಂತ್ರ್ಯ, ನಿರ್ವಹಣೆಯ ವೆಚ್ಚ, ಭದ್ರತೆ, ಹಾಗೂ ಭರವಸೆಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಿನಕ್ಸ್ ಇತಿಹಾಸ

[ಬದಲಾಯಿಸಿ]

೧೯೯೧ರಲ್ಲಿ ಫಿನ್ಲಂಡ್ಲೈನಸ್ ಟೋರ್ವಾಲ್ಡ್ಸ್ ಎಂಬ ಗಣಕಶಾಸ್ತ್ರ ಛಾತ್ರನು ಹವ್ಯಾಸವಾಗಿ ಲಿನಕ್ಸ್ ಕರ್ನಲ್ ಬರೆಯಲು ಪ್ರಾರಂಭಿಸಿದನು. ತನ್ನ ಗಣಕಯಂತ್ರಲ್ಲಿದ್ದ ಮಿನಿಕ್ಸ್ ಕಾರ್ಯನಿರ್ವಹಣ ಸಾಧನವು(OS) ಕೆಲವು ಮಿತಿಗಳನ್ನು ಹೊಂದಿದ್ದರಿಂದ, ಅವುಗಳನ್ನು ವಿಸ್ತರಿಸಲೆಂದು ಪ್ರಾರಂಭವಾದ ಹವ್ಯಾಸವು ಆಧುನಿಕ ಆಪರೇಟಿಂಗ್ ಸಿಸ್ಟಮ್ ಗಳಿಗಿಂತ ಬಹುಮುಖ ಸಾಮರ್ಥ್ಯ ಹೊಂದಿದ ಆಪರೇಟಿಂಗ್ ಸಿಸ್ಟಮ್ ಒಂದರ ರಚನೆಗೆ ನಾಂದಿಯಾಗಬಹುದೆಂದು ಸ್ವತಃ ಲೈನಸ್ ಕೂಡ ಆಲೋಚಿಸಿರಲಿಲ್ಲವಂತೆ. ಲಿನಕ್ಸ್ ನ ಹೆಚ್ಚಿನ ಬೆಳವಣಿಗೆಗೆ ಅದರ 'ಮುಕ್ತ ತಂತ್ರಾಂಶ' ನೀತಿಯೇ ಕಾರಣವೆಂದು ಸಾಮಾನ್ಯ ಅಭಿಪ್ರಾಯ. ತಾನು ಬರೆದ ತಂತ್ರಾಂಶವನ್ನು ಎಲ್ಲರೂ ಸ್ವತಂತ್ರವಾಗಿ ಬಳಸಲಿ ಹಾಗೂ ಮುಕ್ತವಾಗಿ ಬೆಳೆಸಲಿ ಎಂದು ಲೈನಸ್ ತನ್ನ ಆಕರವನ್ನು ಸೆಪ್ಟೆಂಬರ್ ೧೯೯೧ರಲ್ಲಿ ಅಂತರ್ಜಾಲದಲ್ಲಿ(Internet) ಮುಕ್ತವಾಗಿ ವಿತರಿಸಿದನು . ಕೆಲವೇ ತಿಂಗಳಲ್ಲಿ ಜಗತ್ತಿನ ಎಲ್ಲೆಡೆಗಳಿಂದ ಹವ್ಯಾಸೀ ಪ್ರೊಗ್ರಾಮರ್ ಗಳು ಅದಕ್ಕೆ ತಮ್ಮ ಜೋಡಣೆಗಳನ್ನು ಸೇರಿಸುತ್ತಾ ಬಂದು ಅದಕ್ಕೆ ಒಂದು ಪರಿಪೂರ್ಣ ರೂಪ ತಂದುಕೊಟ್ಟರು. ಇಂದಿಗೂ ಈ ಪ್ರಗತಿಯು ಸಾಗಿದ್ದು, ಪ್ರತಿಯೊಂದು ಕಾರ್ಯಕ್ಕೆ, ಪ್ರತಿಯೊಬ್ಬರ ಅಭಿರುಚಿಗನುಗುಣವಾಗಿ ಹಲವಾರು ವಿತರಣೆಗಳ ರೂಪದಲ್ಲಿ ಲಿನಕ್ಸ್ ದೊರೆಯುತ್ತಿದೆ. ಕೆಳಗಿನ ಲಿನಕ್ಸ್ ವಿತರಣೆಗಳ ಪಟ್ಟಿಯು ಈ ತತ್ವಕ್ಕೆ ಆಧಾರವಾಗಿರುತ್ತದೆ.

ಲಿನಕ್ಸ್ನ ಉದಾಹರಣೆ
ಲಿನಕ್ಸ್ ವಿತರಣೆಗಳು
ಲಿನಕ್ಸಿನಲ್ಲಿ ಕನ್ನಡ ಮೆನು ಇತ್ಯಾದಿ

ಲಿನಕ್ಸ್ ವಿತರಣೆಗಳು

[ಬದಲಾಯಿಸಿ]

ಪ್ರಮುಖ ಲಿನಕ್ಸ್ ವಿತರಣೆಗಳನ್ನು (linux distributions (distros)) ದರ್ಶಿಸುವ ಚಿತ್ರವು ಬಲಕ್ಕಿದೆ. ವಿತರಣೆಗಳು ವಿವಿಧ ಗುಂಪುಗಳಿಂದ ತಯಾರಿಸಲಾಗಿದ್ದು ತಮ್ಮ ತಮ್ಮ ಆಚಾರಣೆಗಳು, ಮತ್ತು ಉಪಯೋಗಗಳಿಂದಾಗಿ ಬಿನ್ನವಾಗಿವೆ .

ಆರ್ಚ್ ಲಿನಕ್ಸ್ ವಿತರಣೆಯು ಐದು ತತ್ವಗಳಿಗೆ ಬದ್ಧವಾಗಿದೆ. ಈ ತತ್ವಗಳು ಸರಳತೆ, ಆಧುನಿಕತೆ, ವಾಸ್ತವಿಕವಾದ, ಬಳಕೆದಾರ ಕೇಂದ್ರೀಕರಣ, ಹಾಗು ಬಹುಮುಖತೆ.

  • ಮಂಜಾರೋ

ಆರ್ಚ್ ಲಿನಕ್ಸ್ ಆಧಾರಿತವಾದುದು. ಸರಳ ಮತ್ತು ಪ್ರೊಗ್ರಾಮಿಂಗ್ ಕೆಲಸಕ್ಕೆ ಸೂಕ್ತ

ಮಂಜಾರೋ ಲಿನ‍ಕ್ಸ್ ಎಕ್ಸ್ ಎಫ್ ಸೀ ಈ
ಮಂಜಾರೋ ಲಿನ‍ಕ್ಸ್ ಎಕ್ಸ್ ಎಫ್ ಸೀ ಈ

ಮ್ಯಾಂಡ್ರಿವ (ಮ್ಯಾಂಡ್ರೇಕ್ + ಕನೆಕ್ಟಿವ) ವಸ್ತುಶಃ ಅತಿ ಸುಲಭವಾದ ಹಾಗೂ ಲಿನಕ್ಸ್ ಉಪಯೋಗಿಸುವ ಹೊಸಬರಲ್ಲಿ ಬಹಳ ಜನಪ್ರಿಯವಾದ ವಿತರಣೆ.

ರೆಡ್ ಹ್ಯಾಟ್ ರವರಿಂದ ಪ್ರಾಯೋಜನೆ ಮಾಡಲಾಗಿ ಪ್ರಾರಂಭವಾದ ಫೆಡೊರಾ ಕೋರ್, ಇಂದು ಸರ್ವವ್ಯಾಪಿ ಕಾರ್ಯ ನಿರ್ವಹಣ ಸಾಧನವನ್ನು ತಯಾರಿಸುವ ಧ್ಯೇಯವನ್ನು ಹೊಂದಿದೆ.

ರೆಡ್ ಹ್ಯಾಟ್ ಇತರ ಲಿನಕ್ಸ್ ವಿತರಣೆಗಳಿಗಿಂತ ಅತಿ ಹೆಚ್ಚಾಗಿ ಬಳಕೆಯಲ್ಲಿದೆ.

ಉಬುಂಟು, ಡೆಬಿಯನ್ ಆಧರಿಸಿ ತಯಾರಿಸಲಾದ ಒಂದು ವಿತರಣೆ. ಬಹಳಷ್ಟು ಜನರ ಪ್ರಶಂಸೆಗೆ ಒಳಗಾದ ಇದು, ಸದ್ಯದ ಸ್ಥಿತಿಯಲ್ಲಿ ಕನ್ನಡ ಚೆನ್ನಾಗಿ ಮೂಡಿ ಬರುವ ವಿತರಣೆಗಳಲ್ಲೊಂದು.

ಡೆಬಿಯನ್ ವಿತರಣೆಯು ಯುನಿಕ್ಸ್ ಮತ್ತು ಮುಕ್ತ ತಂತ್ರಾಂಶಗಳ ಮಾದರಿಯಾಗಿ ಬೆಳೆದು ಬಂದಿದೆ. "ವಿಶ್ವ ವ್ಯಾಪಿ ಕಾರ್ಯ ನಿರ್ವಹಣ ಸಾಧನ" ತತ್ವವನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆಯು ಅತಿ ಹೆಚ್ಚಿನ ಉಪಕರಣಗಳಲ್ಲಿ ತಮ್ಮ ನಿರ್ವಹಣ ಸಾಧನವನ್ನು ನಿರ್ವಹಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಸುಸೇ ವಿತರಣೆಯುನೊವೆಲ್ ಇನ್ಕ್ ರವರದಾಗಿದ್ದು ಜರ್ಮನಿಯಲ್ಲಿ ತಯಾರಿಸಲಾಗುತ್ತದೆ.

ಜೆಂಟೂ ಲಿನಕ್ಸ್ ಜೆಂಟೂ ಪ್ರತಿಷ್ಠಾನದವರದಾಗಿದ್ದು ಇದು ಬಳಕೆದಾರರ ಕೆಲಸವನ್ನು ಸಾಧ್ಯವಾದಷ್ಟು ಆಪ್ಯಾಯಮಾನವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡುವ ತತ್ವಕ್ಕೆ ಬದ್ಧವಾಗಿದೆ.

ಲಿನ್ಸ್ಪೈರ್ ವಿತರಣೆಯು ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ . ಮನೆಯಲ್ಲಿ ಉಪಯೋಗಿಸಲೆಂದು ಮಾರುಕಟ್ಟೆಮಾಡಲಾಗುತ್ತಿರುವ ಈ ವಿಸ್ತರಣೆಯು ಲಿನಕ್ಸ್ applicationsಗಳ ಸುಲಭ download ಮತ್ತು ಉಪಯುಕ್ತತೆ ಯನ್ನು ದೊರಕಿಸಿಕೊಡುವ ಧ್ಯೇಯವನ್ನು ಹೊಂದಿದೆ.

ಸ್ಲೆಕ್ವೇರ್ ಇತರ ವಿಸ್ತರಣೆಗಳಿಗಿಂತ ಹೆಚ್ಚು ಯುನಿಕ್ಸ್ (UNIX)ಅನ್ನು ಹೋಲುತ್ತದೆ. ಸ್ಲೆಕ್ವೇರ್ ತನ್ನ ವಿಸ್ತರಣೆಯಲ್ಲಿ ಕೇವಲ ಸ್ಥಾಯಿ ಗಳ್ನ್ನುಅಳವಡಿಸುತದೆ.

೨೦೦೧ ರಲ್ಲಿ ನ್ಯೂ ಯೋರ್ಕ್ ಮತ್ತು ಒಟ್ಟಾವ(ಒಂಟರಿಒ)ದಲ್ಲಿ ಪ್ರಾರಂಭವಾದ ಝಾಂದ್ರೊಸ್ ಕಂಪನಿಯು ಕೋರೆಲ್ ಲಿನಕ್ಸ್ ಎಂಬ ಇನ್ನೊಂದು ವಿಸ್ತರಣೆಯನ್ನಾಧಾರಿಸಿದೆ. ವಿನ್ಡೋಸ್ OSಅನ್ನು ಹೋಲು ವ ಈ ವಿಸ್ತರಣೆಯು ಮನೆ ಮತ್ತು ವ್ಯಾಪಾರ ಎಂಬ ಎರಡು ವಿನ್ಯಾಸಗಳಲ್ಲಿ ಮಾರಲಾಗುತ್ತದೆ.

ರೆಡ್ಮನ್ಡ್ ಲಿನಕ್ಸ್ ಕೊರ್ಪ್ ಎಂದು ೨೦೦೦ ದಲ್ಲಿ ಶುರುವಾದ ಲೈಕೋರಿಸ್ ವಿತರಣೆಯು ಸರ್ವರೂ ಸುಲಭವಾಗಿ ಉಪಯೊಗಿಸಲಾಗುವಂತಹ OS ಅನ್ನು ಮಾಡುವ ಧ್ಯೆಯ ಹೊಂದಿತ್ತು . ಇದರ ಲೈಕೋರಿಸ್ ಡೆಸ್ಕ್ಟೊಪ್ ಬಹಳ ಹೆಸರುವಾಸಿಯಾಗಿದೆ. ಲೈಕೋರಿಸ್ ಸಂಸ್ಥೆಯು ಮೆಪಲ್ ವೆಲಿ, ವಾಶಿಂಗ್ಟನ್, ಅಮೆರಿಕದಲ್ಲಿದೆ.

ಮೆಪಿಸ್ ಕೆ.ಡಿ.ಇ ಡೆಸ್ಕ್ಟೊಪ್ ಅನ್ನು ಬಳಸುವ ಲಿನಕ್ಸ್ ವಿತರಣೆ. ಇದೂ ಕೂಡ ಡೆಬಿಯನ್ ವಿಸ್ತರಣೆಯನ್ನು ಆಧಾರವಾಗಿರಿಸಿಕೊಂಡಿದೆ .

ತಿರುಚಿರಾಪಳ್ಳಿಯ ವಿದ್ಯಾರ್ಥಿ ಶ್ರೀರಾಮ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಮೊದಲ ವರ್ಷದ ಡಿಪ್ಲೊಮಾ ಓದುತ್ತಿದ್ದ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಅವರ ಮಲ ಮಗಳು ಹರಿತಾಳ ಮದುವೆಯನ್ನು ತವರುಮನೆಯಲ್ಲಿ ಮಾಡಲಾಗಿತ್ತು. ಕೈಲಾಸಪುರದ ಮದುವೆ ಮಂಟಪದಲ್ಲಿ ಮದುವೆಯ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ, "ಅವನು ಕಾಲೇಜಿನಲ್ಲಿ ಓದುವುದಿಲ್ಲ, ಶಾಲೆಯಲ್ಲಿ ಮಾತ್ರ ಓದುತ್ತಾನೆ" ಎಂದು ಹೇಳಿದರೆ, ಅದೇ ಕಾಲೇಜಿನಲ್ಲಿ ಅದೇ ವಿಭಾಗದ ವಿದ್ಯಾರ್ಥಿ ಸಾಯಿನಾಥ್ ಅವಳನ್ನು "ಖಾಲಿ" ಎಂದು ಕರೆದರು. 2 ನೇ ವರ್ಷಕ್ಕೆ ಪ್ರವೇಶಿಸಿದ ನಂತರ, ಕಂಪ್ಯೂಟರ್ ಲ್ಯಾಬ್‌ನಲ್ಲಿ ಶಿಕ್ಷಕರು ಕಾಲೇಜಿನಲ್ಲಿ ಲಿನಕ್ಸ್ ಅವಧಿಯಲ್ಲಿ ಕಂಪ್ಯೂಟರ್‌ನಲ್ಲಿ ಕುಳಿತುಕೊಳ್ಳುವಂತೆ ಮಾಡಲಿಲ್ಲ. ಲಿನಕ್ಸ್‌ನ ಹಲವಾರು ವಿತರಣೆಗಳು ಇರುವುದರಿಂದ ಮತ್ತು ಯಾವುದು ಒಳ್ಳೆಯದು ಎಂದು ಅವನಿಗೆ ತಿಳಿದಿಲ್ಲದ ಕಾರಣ, ಅವನ ಮನಸ್ಸು ಪ್ರಭಾವಿತವಾಗಿರುತ್ತದೆ. ಹೀಗಾಗಿ ವಿಷ ಕುಡಿದು ಸಾಯಲು ನಿರ್ಧರಿಸಿದ್ದಾರೆ. ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು ಬದುಕುಳಿದಿದ್ದಾರೆ. ಆದ್ದರಿಂದ ಅವರು ಲಿನಕ್ಸ್ ಅನ್ನು ಮರೆತಿದ್ದಾರೆ. 3 ವರ್ಷಗಳ ನಂತರ ಅವರು Q4OS ಅನ್ನು ಕಂಡುಕೊಂಡರು. ಈ ವೇದಿಕೆ ಅವರ ಬದುಕನ್ನೇ ಬದಲಿಸಿತು. ಪ್ರತಿ ಮಂಗಳವಾರ ದೇವಸ್ಥಾನದಲ್ಲಿ ಕಾಲ ಭೈರವನ ಮಾಲೆ ಹಾಕುವುದು ವಾಡಿಕೆ. ಮಂಗಳವಾರ, ಜುಲೈ 4, 2023 ರಂದು, Q4OS ನ ಮೊದಲ ಆವೃತ್ತಿಯನ್ನು ಬಿಡುಗಡೆ ಮಾಡಿದ 10 ವರ್ಷಗಳ ನಂತರ, ಕಾಲ ಭೈರವ ನಿಂಬೆ ಮರಕ್ಕೆ ಮಾಲೆ ಹಾಕಲು ದೇವಾಲಯಕ್ಕೆ ಬಂದರು ಮತ್ತು Q4OS ನಿಂದ ಪ್ರಯೋಜನ ಪಡೆದರು. ಒಬ್ಬ ಹುಡುಗಿ ದೇವಸ್ಥಾನಕ್ಕೆ ಬಂದಳು. ಅವಳ ಹುಟ್ಟುಹಬ್ಬವಾದ್ದರಿಂದ ದೇವಸ್ಥಾನದ ಅರ್ಚಕರಿಗೆ ಮಿಠಾಯಿ ಕೊಟ್ಟಳು. ಅವಳು ಕೊಟ್ಟ ಮಿಠಾಯಿಯನ್ನು ತಟ್ಟೆಗೆ ಹಾಕಿದನು. ಶ್ರೀರಾಮನು ತಟ್ಟೆಯಲ್ಲಿದ್ದ ಮಿಠಾಯಿಯನ್ನು ನೋಡಿದನು. ಅವನು ತಟ್ಟೆಯಲ್ಲಿದ್ದ ಮಿಠಾಯಿಯನ್ನು ನೋಡಿ ಪಾದ್ರಿಯನ್ನು ಕೇಳಿದನು, "ನಾನು ತಟ್ಟೆಯಲ್ಲಿರುವ ಮಿಠಾಯಿಯನ್ನು ತೆಗೆದುಕೊಳ್ಳಬಹುದೇ?" ಎಂದು ಕೇಳಿದರು. ಪುರೋಹಿತರು, "ಇದನ್ನು ತೆಗೆದುಕೊಳ್ಳಿ, ಈ ಮಿಠಾಯಿ ನಿನಗಾಗಿ" ಎಂದು ಹೇಳಿದರು. ಅವನು ತಟ್ಟೆಯಿಂದ ಕ್ಯಾಂಡಿ ತೆಗೆದುಕೊಂಡನು. ‘ತಟ್ಟೆಯಲ್ಲಿರುವ ಮಿಠಾಯಿ ದೇವಸ್ಥಾನಕ್ಕೆ ಬಂದ ಹುಡುಗಿಯ ಹುಟ್ಟುಹಬ್ಬವಲ್ಲ, ಅದು ದೇವರ ಕೊಡುಗೆ’ ಎಂದರು. ಅವರ ಪ್ರಕಾರ, Q4OS ಒಂದು ದೈವದತ್ತವಾಗಿದೆ.

ಗಮನಿಸಿ: ಫಕಿಂಗ್ ವಿಕಿಪೀಡಿಯಾ ನಿರ್ವಾಹಕರು ನಿಯೋಶೈನ್ ಪ್ರಯತ್ನಗಳ ಕಥೆಯನ್ನು ತೆಗೆದುಹಾಕಬಾರದು. ಫಕಿಂಗ್ ವಿಕಿಪೀಡಿಯ ನಿರ್ವಾಹಕರು ನಾನ್ಸೆನ್ಸ್.

ವಿಸ್ತರಣೆ

[ಬದಲಾಯಿಸಿ]
A summarized history of Unix-like operating systems showing Linux's origins. Note that despite similar architectural designs and concepts being shared as part of the POSIX standard, Linux does not share any non-free source code with the original Unix or Minix.

ಆಧಾರಗಳು

[ಬದಲಾಯಿಸಿ]
  1. Linux Online (2008). "Linux Logos and Mascots". Archived from the original on 2004-04-01. Retrieved 2009-08-11.
  2. "Debian GNU/Linux Licenses – Ohloh". ohloh.net. Archived from the original on 2012-06-07. Retrieved 2009-03-27.


ಇತರ ತಾಣಗಳು

[ಬದಲಾಯಿಸಿ]
"https://kn.wikipedia.org/w/index.php?title=ಲಿನಕ್ಸ್&oldid=1241260" ಇಂದ ಪಡೆಯಲ್ಪಟ್ಟಿದೆ