ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ. ಸ್ವರಗಳ ಸಹಾವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ. ಉದಾ : ಕ್+ಅ=ಕ. ವ್ಯಂಜನ ಸಂಜ್ಞೆಗಳಲ್ಲಿ ‘ಕ್’ಕಾರದಿಂದ ‘ಮ್’ಕಾರದವರೆಗೆ ಒಟ್ಟು 25 ಅಕ್ಷರಗಳಿವೆ.[೧] ವ್ಯಂಜನದ ಒಳವರ್ಗಗಳಿದ್ದು ಅವುಗಳನ್ನು ವರ್ಗೀಕರಿಸಲು ಸಾಧ್ಯ. ಹೀಗೆ ವರ್ಗೀಕರಿಸಲು ಸಾಧ್ಯವಾಗುವ ಅಕ್ಷರಗಳನ್ನು ವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ, ವರ್ಗೀಯ ವ್ಯಂಜನಗಳನ್ನು ಹೇಗೆ ಬೇಕಾದರೂ ವರ್ಗೀಕರಿಸಲು ಸಾಧ್ಯ.
ಈ ವರ್ಗಾಕ್ಷರಗಳಲ್ಲಿ ಪ್ರತಿ ವರ್ಗದ ಪ್ರಥಮ, ತೃತೀಯ ವರ್ಗದ ಕ್, ಚ್ , ಟ್ , ತ್ , ಪ್, ಗ್ , ಜ್ , ಡ್ , ದ್ , ಬ್ ಅಕ್ಷರಗಳನ್ನು ‘ಅಲ್ಪಪ್ರಾಣ’ ಅಥವಾ ಸರಳವೆಂದು ಕರೆಯುತ್ತಾರೆ.
ಅಲ್ಪ ಉಸಿರಾಟದಲ್ಲಿ ಉಚ್ಚರಿಸುವ ವ್ಯಂಜನಗಳು.