ಶ್ರೀ ಜೈಮಾತಾ ಕಂಬೈನ್ಸ್
ಶ್ರೀ ಜೈಮಾತಾ ಕಂಬೈನ್ಸ್ ಒಂದು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಣ ಸಂಸ್ಥೆ ಆಗಿದೆ. 2003 ರಲ್ಲಿ ಸಿನಿಮಾ ನಿರ್ಮಾಣವನ್ನು ಪ್ರಾರಂಭ ಮಾಡಿತು ಮತ್ತು ಕಂಪನಿಯು 2010 ರಲ್ಲಿ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿತು. ಪ್ರಕಾಶ್ ಜಯರಾಮ್ ಅವರು ತಮ್ಮ ತಾಯಿ ಶ್ರೀಮತಿ ಜೆ.ಜಯಮ್ಮ ಅವರೊಂದಿಗೆ ಶ್ರೀ ಜೈಮಾತಾ ಕಂಬೈನ್ಸ್ ಅನ್ನು ಪ್ರಾರಂಭಿಸಿದರು.
ಸಂಸ್ಥೆಯ ಪ್ರಕಾರ | ಖಾಸಗಿ |
---|---|
ಜಾತಿ | ಮನೋರಂಜನೆ |
ಸ್ಥಾಪನೆ | 2003 |
ಸಂಸ್ಥಾಪಕ(ರು) | ಪ್ರಕಾಶ್ ಜಯರಾಮ್ & ಜೆ.ಜಯಮ್ಮ |
ಮುಖ್ಯ ಕಾರ್ಯಾಲಯ | ಬೆಂಗಳೂರು, ಭಾರತ |
ಉದ್ಯಮ | ನಿರ್ಮಾಣ |
ಉತ್ಪನ್ನ | ಚಲನಚಿತ್ರಗಳು ಧಾರಾವಾಹಿಗಳು |
ಸೇವೆಗಳು | ಚಲನಚಿತ್ರ ನಿರ್ಮಾಣ ಧಾರಾವಾಹಿ ನಿರ್ಮಾಣ |
ಜಾಲತಾಣ | www |
ಸ್ಥಾಪನೆ
[ಬದಲಾಯಿಸಿ]ಶ್ರೀ ಜಯಮಾತಾ ಕಂಬೈನ್ಸ್ 2003 ರಲ್ಲಿ ಚಲನಚಿತ್ರಗಳನ್ನು ನಿರ್ಮಾಣ ಮಾಡಲು ಪ್ರಾರಂಭ ಮಾಡಿತು. ಸಂಸ್ಥೆಯು 2010 ರಲ್ಲಿ ದೂರದರ್ಶನದಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡಲು ಪ್ರಾರಂಭಿಸಿತು.
ಪ್ರಕಾಶ್ ಜಯರಾಮ್ 80 ಮತ್ತು 90 ರ ದಶಕದಲ್ಲಿ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ ಸಿ.ಜಯರಾಮ್ ಅವರ ಪುತ್ರರಾಗಿದ್ದರು. ಲಂಡನ್ನಿಂದ ಎಂಬಿಎ ಪದವಿ ಪಡೆದು, ಕಾರ್ಪೊರೇಟ್ ಜಗತ್ತಿನಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದ ಪ್ರಕಾಶ್ ಜಯರಾಮ್ ಅವರು ತಮ್ಮ ತಾಯಿ ಶ್ರೀಮತಿ ಜೆ ಜಯಮ್ಮ ಅವರೊಂದಿಗೆ ಶ್ರೀ ಜೈಮಾತಾ ಕಂಬೈನ್ಸ್ ಅನ್ನು ಪ್ರಾರಂಭಿಸಿದರು. ಅವರು ಆರಂಭದಲ್ಲಿ ಖುಷಿ ಚಿತ್ರವನ್ನು ನಿರ್ಮಿಸಲು ಹೊರಟರು, ಆದರೆ ಅಂತಿಮವಾಗಿ ಅದನ್ನು ಅವರೇ ನಿರ್ದೇಶಿಸಿದರು. ಖುಷಿ ಚಲನಚಿತ್ರವನ್ನು ಭರ್ಜರಿ ಯಶಸ್ಸನ್ನು ಕಂಡಿತು ಮತ್ತು ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿತು.
ರಿಷಿ, ಮಿಲನ, ವಂಶಿ ಮತ್ತು ತಾರಕ್ ಚಿತ್ರಗಳೊಂದಿಗೆ ಯಶಸ್ಸು ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಮುಂದುವರಿಯಿತು. ಮಿಲನ ಸುಮಾರು ೪೫೦ ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಲಕುಮಿ ಧಾರಾವಾಹಿ ಮೂಲಕ ದೂರದರ್ಶನ ನಿರ್ಮಾಣಕ್ಕೆ ಈ ಸಂಸ್ಥೆಯು ಕಾಲ್ಟಿತ್ತು.
ಕಂಪೆನಿಯ ಇತಿಹಾಸ
[ಬದಲಾಯಿಸಿ]ಈ ಕಂಪನಿಯು ಶ್ರೀ ಸಿ.ಜಯರಾಮ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ ಸಪ್ತಸ್ವರ ಮೂವಿ ಮೇಕರ್ಸ್ ನ ವಿಸ್ತರಣೆಯಾಗಿದೆ. ಅವರು ಈ ಕೆಳಗಿನ ಚಿತ್ರಗಳನ್ನು ನಿರ್ಮಿಸಿದ್ದಾರೆ.
ವರ್ಷ | ಚಲನಚಿತ್ರ(ಗಳು) | ಕಲಾವಿದರು | ಇತರೆ ಟಿಪ್ಪಣಿಗಳು |
---|---|---|---|
1977 | ಪಾವನ ಗಂಗಾ | ಶ್ರೀನಾಥ್, ಅಶೋಕ್ ಮತ್ತು ಆರತಿ | |
1977 | ಗಲಾಟೆ ಸಂಸಾರ | ರಜನಿಕಾಂತ್, ವಿಷ್ಣುವರ್ಧನ್ ಮತ್ತು ಮಂಜುಳಾ | |
1979 | ನಾ ನಿನ್ನ ಬಿಡಲಾರೆ | ಆನಂತ್ ನಾಗ್ ಮತ್ತು ಲಕ್ಷ್ಮೀ | |
1980 | ಆಟೋ ರಾಜ | ಶಂಕರ್ ನಾಗ್, ಗಾಯತ್ರಿ ಮತ್ತು ತೂಗುದೀಪ ಶ್ರೀನಿವಾಸ್ | |
1981 | ಅನುಪಮ | ಅನಂತ್ ನಾಗ್ ಮತ್ತು ಮಾಧವಿ | |
1983 | ಕಾಮನಬಿಲ್ಲು | ಡಾ.ರಾಜ್‌ಕುಮಾರ್ ಮತ್ತು ಸರಿತಾ | |
1984 | ರಾಮಪುರದ ರಾವಣ | ಅನಂತ್ ನಾಗ್ ಮತ್ತು ಗೀತಾ | |
? | ರುದ್ರ ತಾಂಡವ | ಬಾಲರಾಜ್ |
ನಿರ್ಮಾಣದ ಚಲನಚಿತ್ರಗಳು
[ಬದಲಾಯಿಸಿ]† | ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ವರ್ಷ | ಚಲನಚಿತ್ರ(ಗಳು) | ನಿರ್ದೇಶಕ | ಕಲಾವಿದರು | ಇತರೆ ಟಿಪ್ಪಣಿಗಳು | Ref. |
---|---|---|---|---|---|
2003 | ಖುಷಿ | ವಿಜಯ ರಾಘವೇಂದ್ರ, ಸಿಂಧೂ ಮೆನನ್ | |||
2005 | ರಿಷಿ | ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಕುಮಾರಸ್ವಾಮಿ | |||
2007 | ಮಿಲನ | ಪುನೀತ್ ರಾಜ್‌ಕುಮಾರ್ ಮತ್ತು ಪಾರ್ವತಿ | |||
2009 | ಗೋಕುಲ | ಯಶ್, ವಿಜಯ್ ರಾಘವೇಂದ್ರ ಮತ್ತು ಪೂಜಾ ಗಾಂಧಿ | |||
2017 | ತಾರಕ್ | ದರ್ಶನ್ ತೂಗುದೀಪ್ ಶ್ರೀನಿವಾಸ್, ಶ್ರುತಿ ಹರಿಹರನ್, ಶಾನ್ವಿ ಶ್ರೀವಾಸ್ತವ ಮತ್ತು ದೇವರಾಜ್ | [೧] |
ನಿರ್ಮಾಣದ ಧಾರಾವಾಹಿಗಳು
[ಬದಲಾಯಿಸಿ]† | ಇನ್ನೂ ಪ್ರಸಾರವಾಗದ ಧಾರಾವಾಹಿಗಳನ್ನುಸೂಚಿಸುತ್ತದೆ |
ವರ್ಷ | ಧಾರಾವಾಹಿ(ಗಳು) | ನಿರ್ದೇಶಕ | ಕಲಾವಿದರು | ವಾಹಿನಿ | ಇತರೆ ಟಿಪ್ಪಣಿಗಳು | Ref. |
---|---|---|---|---|---|---|
2010-2012 | ಲಕುಮಿ | ಸುವರ್ಣ | ||||
2010-2011 | ಬೊಂಬೆವಾಟವಯ್ಯ | ಸುವರ್ಣ | [೨] | |||
2012-2013 | ಚುಕ್ಕಿ | ಸುವರ್ಣ | [೩] | |||
ಕನಕ | ಝೀ ಕನ್ನಡ | |||||
2013-2020 | ಲಕ್ಷ್ಮೀ ಬಾರಮ್ಮ | ಕಲರ್ಸ್ ಕನ್ನಡ (ಈ ಟಿವಿ ಕನ್ನಡ) | [೪] [೫] | |||
2014 | ಕುಲವಧು | ಕಲರ್ಸ್ ಕನ್ನಡ (ಈ-ಟಿವಿ ಕನ್ನಡ) | ||||
2019-2022 | ನಮ್ಮನೇ ಯುವರಾಣಿ | ಕಲರ್ಸ್ ಕನ್ನಡ | ||||
2020 - 2023 | ಕನ್ನಡತಿ | ರಂಜನಿ ರಾಘವನ್, ಕಿರಣ್ ರಾಜ್, ಸಾರಾ ಅಣ್ಣಯ್ಯ ಮತ್ತು ಚಿತ್ತಕಲಾ ಬಿರದಾರ್ | ಕಲರ್ಸ್ ಕನ್ನಡ | [೬] | ||
2021 - 2022 | ದೊರೆಸಾನಿ | ಕಲರ್ಸ್ ಕನ್ನಡ | ||||
2022 - ಪ್ರಸ್ತುತ | ಭಾಗ್ಯಲಕ್ಷ್ಮೀ | ಸುಷ್ಮಾ ಕೆ. ರಾವ್, ಪದ್ಮಜಾ ರಾವ್ ಮತ್ತು ಸುದರ್ಶನ್ ರಂಗ ಪ್ರಸಾದ್ | ಕಲರ್ಸ್ ಕನ್ನಡ | [೭] [೮] [೯] | ||
2023 - ಪ್ರಸ್ತುತ | ಲಕ್ಷ್ಮೀ ಬಾರಮ್ಮ ೨ | ಕಲರ್ಸ್ ಕನ್ನಡ | ||||
2023 - 2024 | ನಮ್ಮ ಲಚ್ಚಿ | ವಿಜಯ್ ಸೂರ್ಯ, ನೇಹಾ ಗೌಡ | ಸ್ಟಾರ್ ಸುವರ್ಣ | |||
2024-2024 |
ಲಕ್ಷ್ಮೀ ಟಿಫಿನ್ ರೂಮ್ |
ಸ್ಟಾರ್ ಸುವರ್ಣ | [೧೦] |
ಪ್ರಶಸ್ತಿಗಳು
[ಬದಲಾಯಿಸಿ]- ರಿಷಿ 2004-05: ಅತ್ಯುತ್ತಮ ನಿರ್ದೇಶಕ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು - ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಧ್ವನಿ ರೆಕಾರ್ಡಿಂಗ್.
- ಮಿಲನಾ 2007: ಫಿಲ್ಮ್ ಫೇರ್ ಪ್ರಶಸ್ತಿಗಳು ದಕ್ಷಿಣ - ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಿನ್ನೆಲೆ ಗಾಯಕ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ - ಅತ್ಯುತ್ತಮ ನಟ.
- ತಾರಕ್: ಫಿಲ್ಮ್ಫೇರ್ ಪ್ರಶಸ್ತಿಗಳು(2018) - ಅತ್ಯುತ್ತಮ ನಟ
ಸಾಧನೆಗಳು
[ಬದಲಾಯಿಸಿ]- ಲಕ್ಷ್ಮೀ ಬಾರಮ್ಮ ಧಾರಾವಾಹಿ ಏಳು ವರ್ಷಗಳ ಪ್ರಸಾರವಾಗಿತ್ತು.
- ಕುಲವಧು ಐದು ವರ್ಷಗಳ ಪ್ರಸಾರವಾಗಿತ್ತು
ಉಲ್ಲೇಖಗಳು
[ಬದಲಾಯಿಸಿ]- ↑ "Darshan to play the title role 'tarak' in Prakash Jayaram's next". The New Indian Express. 16 February 2017.
- ↑ "Bombeyatavayya New Mega Serial on Suvarna TV from 13 Dec". Indiatvinfo. Retrieved 2021-09-11.
- ↑ "Chukki – New Fiction Show Of Suvarna Starting From 16th April". Indiatvinfo. 2012-04-11. Retrieved 2021-09-12.
- ↑ "ETV Kannada serial Lakshmi Baramma".
- ↑ "'Lakshmi Baramma' crosses 2000 episodes; the cast celebrates by cutting a cake". Times of India.
- ↑ "Kannadathi to be premiered on January 27 - Times of India". The Times of India. Retrieved 2021-07-22.
- ↑ "ಹೊಸ ಧಾರಾವಾಹಿ, ಭಾಗ್ಯಲಕ್ಷ್ಮೀಯಾಗಿ ಬಾಗಿಲು ತೆರೆಯಲಿದ್ದಾಳೆ". ಪ್ರಜಾವಾಣಿ. Retrieved 7 ಅಕ್ಟೋಬರ್ 2022.
- ↑ "ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‍ನ ನಿಜವಾದ ಪತ್ನಿ ಯಾರು". Retrieved November 4, 2022.
- ↑ "ಮಹೇಶನ ಕೈಯಲ್ಲಿ ಚಿತ್ರಾನ್ನ ಆಯ್ತು ತಾಂಡವ್ ಲೈಫು!". ಸುವರ್ಣ ನ್ಯೂಸ್. Retrieved 24 August 2023.
- ↑ "ಕಿರುತೆರೆಗೆ ಕಾಲಿಟ್ಟ ಹಾಸ್ಯ ನಟ ಟೆನ್ನಿಸ್ ಕೃಷ್ಣ". ಪಬ್ಲಿಕ್ ಟಿವಿ. Retrieved 2 ಮಾರ್ಚ್ 2024.