ವಿಷಯಕ್ಕೆ ಹೋಗು

ಸಂಯುಕ್ತ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಕ್ಷೆಯು ಈಗಿರುವ ಸಂಯುಕ್ತ ದೇಶಗಳನ್ನು ತೋರಿಸುತ್ತಿದೆ (ಹಸಿರು ಬಣ್ಣದಲ್ಲಿ).

ಸಂಯುಕ್ತ ವ್ಯವಸ್ಥೆ ಯು ಸರ್ಕಾರ ರಚನೆಯಲ್ಲಿನ ಒಂದು ರಾಜಕೀಯ ಪ್ರಕಾರವಾಗಿದೆ. ಅದರಲ್ಲಿ ಸಾರ್ವಭೌಮತ್ವವು ಸಾಂವಿಧಾನಿಕಕವಾಗಿ ಒಬ್ಬ ಕೇಂದ್ರ ಆಡಳಿತ ಅಧಿಕಾರಿ ಮತ್ತು ಸಂವಿಧಾನಾತ್ಮಕ ರಾಜಕೀಯ ಘಟಕಗಳ (ರಾಜ್ಯಗಳಂತೆ ಅಥವಾ ಪ್ರಾಂಗಳಂತೆ) ನಡುವೆ ವಿಭಾಗಿಸಲ್ಪಟ್ಟಿದೆ. ಸಂಯುಕ್ತ ವ್ಯವಸ್ಥೆಯು ಅಧಿಕಾರವನ್ನು ನಡೆಸುವ ಬಲವು ರಾಷ್ಟ್ರೀಯ ಮತ್ತು ಪ್ರಾಂತೀಯ/ರಾಜ್ಯ ಸರ್ಕಾರಗಳ ನಡುವೆ ಹಂಚಿಕೊಳ್ಳಲ್ಪಟ್ಟಿರುತ್ತದೆ, ಅದು ಅನೇಕ ವೇಳೆ ಒಂದು ಸಂಯುಕ್ತಗೊಳ್ಳುವಿಕೆ (ಮೈತ್ರಿಕೂಟ) ಎಂದು ಕರೆಯಲ್ಪಡುವ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಪ್ರತಿವಾದಿಗಳು ಅನೇಕ ವೇಳೆ ಸಂಯುಕ್ತತಾವಾದಿಗಳು ಎಂದು ಕರೆಯಲ್ಪಡುತ್ತಾರೆ.

ಯುರೋಪ್‌ನಲ್ಲಿ, "ಸಂಯುಕ್ತತಾವಾದಿ" ಶಬ್ದವು ಕೆಲವು ವೆಳೆ ಪ್ರಾಂತೀಯ, ರಾಷ್ಟ್ರೀಯ ಮತ್ತು ಅಧಿರಾಷ್ಟ್ರೀಯ ಹಂತಗಳಲ್ಲಿ ವಿಂಗಡಿತ ಅಧಿಕಾರದ ಜೊತೆಗೆ ಒಂದು ಸಾಮಾನ್ಯ ಸಂಯುಕ್ತ ಸರ್ಕಾರವನ್ನು ಬೆಂಬಲಿಸುವ ಜನರಿಗೆ ಉಲ್ಲೇಖಿಸಲ್ಪಡುತ್ತದೆ. ಹೆಚ್ಚಿನ ಯುರೋಪಿನ ಸಂಯುಕ್ತತಾವಾದಿಗಳು ಈ ಬೆಳವಣಿಗೆಯನ್ನು ಯುರೋಪಿಯನ್ ಒಕ್ಕೂಟದ ಒಳಗೆ ಅನವರತವಾಗಿ ಮುಂದುವರೆಯುವುದನ್ನು ಬಯಸುತ್ತಾರೆ. ಯುರೋಪಿನ ಸಂಯುಕ್ತ ವ್ಯವಸ್ಥೆಯು ಯುರೋಪ್‌ನ ಯುದ್ಧದ-ನಂತರದಲ್ಲಿ ಪ್ರಾರಂಭವಾಗಲ್ಪಟ್ಟಿತು; 1946 ರಲ್ಲಿ ಜೂರಿಕ್‌ನಲ್ಲಿನ ವಿನ್‌ಸ್ಟನ್ ಚರ್ಚಿಲ್‌ರ ಭಾಷಣವು ಅತ್ಯಂತ ಪ್ರಮುಖವಾದ ಪ್ರವರ್ತನ ಶಕ್ತಿಗಳಲ್ಲಿ ಒಂದಾಗಿತ್ತು.[]

ಕೆನಡಾದಲ್ಲಿ, ಸಂಯುಕ್ತ ವ್ಯವಸ್ಥೆಯು ವಿಶಿಷ್ಟವಾಗಿ ಸಾರ್ವಭೌಮತ್ವ ಚಳುವಳಿಗಳಿಗೆ (ಹೆಚ್ಚು ಸಾಮಾನ್ಯವಾಗಿ ಕ್ಯೂಬೆಕ್ ವಿಭಜನತ್ವಕ್ಕೆ ಉಲ್ಲೇಖಿಸಲ್ಪಡುತ್ತದೆ) ವಿರೋಧ ಎಂಬುದಕ್ಕೆ ಅನ್ವಯಿಸಲ್ಪಡುತ್ತವೆ. ಇದು ಅಮೆರಿಕ ಸಂಯುಕ್ತ ಸಂಸ್ಥಾನಗಳ (ಯುನೈಟೆಡ್ ಸ್ಟೇಟ್ಸ್) ವಿಷಯದಲ್ಲಿ ಐತಿಹಾಸಿಕವಾಗಿ ಸತ್ಯವಾಗಿದೆ.. ಒಂದು ಅತ್ಯಂತ ಚಿಕ್ಕ ಸಂಯುಕ್ತ ಸರ್ಕಾರ ಮತ್ತು ಶಕ್ತಿಯುತವಾದ ರಾಜ್ಯ ಸರ್ಕಾರಗಳ ವಕೀಲರುಗಳು ಸಾಮಾನ್ಯವಾಗಿ ಒಕ್ಕೂಟ ಮಾಡುವುದರಲ್ಲಿ ಬೆಂಬಲವನ್ನು ನೀಡುವವರಾಗಿರುತ್ತಾರೆ, ಅನೇಕ ವೇಳೆ ಮುಂಚಿನ "ಸಂಯುಕ್ತತಾವಾದಿ-ವಿರೋಧಿಗಳು" ಮತ್ತು ನಂತರದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಒಕ್ಕೂಟಗಾರರಾಗಿರುತ್ತಾರೆ.

ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಭಾರತ ಮತ್ತು ಮಲೇಷಿಯಾ ಇವುಗಳೂ ಕೂಡ ಸಂಯುಕ್ತ ದೇಶಗಳಾಗಿವೆ.

ಸಂಯುಕ್ತ ವ್ಯವಸ್ಥೆಯು ಬೆಲ್ಜಿಯಮ್ ಅಥವಾ ಬೋಸ್ನಿಯಾ ಮತ್ತು ಹೆರ್ಜೆಗೋವಿನಾದಲ್ಲಿನ ದೃಷ್ಟಾಂತಗಳಂತೆ ಕಡಿಮೆ ಅಂದರೆ ಎರಡು ಅಥವಾ ಮೂರು ಆಂತರಿಕ ವಿಭಾಗಗಳನ್ನು ಒಳಗೊಳ್ಳಬಹುದು.

ಮತಬೋಧಕ ಮತ್ತು ಮತಧರ್ಮಶಾಸ್ತ್ರದ ಸಂಯುಕ್ತ ವ್ಯವಸ್ಥೆಯೂ ಕೂಡ ಕೆಲವು ಕ್ರಿಶ್ಚಿಯನ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದೆ.

ಸಾಮಾನ್ಯವಾಗಿ, ಸಂಯುಕ್ತ ವ್ಯವಸ್ಥೆಗಳ ಎರಡು ಅತಿರೇಕಗಳು ವಿಂಗಡಿಸಲ್ಪಡುತ್ತವೆ.[clarification needed] ಆದಾಗ್ಯೂ, ಆಚರಣೆಯಲ್ಲಿ ಈ ಎರಡರ ಮಿಶ್ರಣವು ಕಂಡುಬರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಸಂಯುಕ್ತ ವ್ಯವಸ್ಥೆಯ ಉದಾಹರಣೆಗಳು

[ಬದಲಾಯಿಸಿ]

ಯುರೋಪ್‌ನಲ್ಲಿ ಸಂಯುಕ್ತ ವ್ಯವಸ್ಥೆ

[ಬದಲಾಯಿಸಿ]

ಸ್ವಿಟ್ಜರ್‌ಲೆಂಡ್, ಆಸ್ಟ್ರಿಯಾ, ಜರ್ಮನಿ, ಬೆಲ್ಜಿಯಮ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ ಮತ್ತು ಯುರೋಪಿನ ಒಕ್ಕೂಟಗಳಂತೆ ಯುರೋಪ್‌ನಲ್ಲಿ ಹಲವಾರು ಸಂಯುಕ್ತ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ. ಮೇಲ್ಮಟ್ಟದ ಸಂಯುಕ್ತ ವಿಭಾಗಗಳ ಸದಸ್ಯರುಗಳು (ಬಂದೆಸ್ರಾಟ್ ಮತ್ತು ಮಂಡಳಿ)ಚುನಾಯಿಸಲ್ಪಟ್ಟಿರದಿದ್ದ ಅಥವಾ ನೇಮಕಗೊಳ್ಳಲ್ಪಟ್ಟಿರದ ಸಂದರ್ಭದಲ್ಲಿ, ಅದರೆ ಅವರ ಚುನಾವಣಾ ಕ್ಷೇತ್ರಗಳ ಸರ್ಕಾರಗಳಿಂದ ಸಂಯೋಜನಗೊಳ್ಳಲ್ಪಟ್ಟಿದ್ದರೆ ಅಂತಹ ಜಗತ್ತಿನಲ್ಲಿ ಜರ್ಮನಿ ಮತ್ತು ಯುರೋಪಿನ ಒಕ್ಕೂಟಗಳು ಕೇವಲ ಉದಾಹರಣೆಗಳಾಗಿವೆ.

ಜರ್ಮನಿಯಲ್ಲಿ, ಸಂಯುಕ್ತ ವ್ಯವಸ್ಥೆಯು ನಾಜಿನೀತಿಯ (1933–1945) ಸಮಯದಲ್ಲಿಯೇ ನಿರ್ಮೂಲನಗೊಳ್ಳಲ್ಪಟ್ಟಿತ್ತು ಮತ್ತು ಪೂರ್ವ ಜರ್ಮನಿಯಲ್ಲಿ ಹೆಚ್ಚಿನ ಪಾಲು ನಾಜಿನೀತಿಯ ಅಸ್ತಿತ್ವದ (1952–1990) ಸಮಯದಲ್ಲಿಯೇ ನಿರ್ಮೂಲನಗೊಳ್ಳಲ್ಪಟ್ಟಿತ್ತು. ಅಡಾಲ್ಫ್ ಹಿಟ್ಲರ್‌ನು ಸಂಯುಕ್ತ ವ್ಯವಸ್ಥೆಯನ್ನು ತನ್ನ ಉದ್ದೇಶಗಳಿಗೆ ಇರುವ ಅಡ್ಡಿಗಳು ಎಂಬಂತೆ ಭಾವಿಸಿದನು. ಅವನು ತನ್ನ ಮೈನ್ ಕ್ಯಾಂಫ್‌ ನಲ್ಲಿ ಬರೆದಂತೆ, "ರಾಷ್ಟ್ರೀಯ ಸಮಾಜವಾದಿತ್ವವು ತನ್ನ ಮೂಲತತ್ವಗಳನ್ನು ಎಲ್ಲಿಯವರೆಗೆ ಸಂಯುಕ್ತ ರಾಜ್ಯಗಳ ಸೀಮೆಯು ಬರುತ್ತದೆ ಎಂಬುದರ ಹೊರತಾಗಿಯೂ ಪೂರ್ತಿ ಜರ್ಮನ್ ದೇಶದಲ್ಲಿ ವಿಧಿಸುವ ಹಕ್ಕನ್ನು ಹೊಂದಿರಬೇಕು."[page needed] ಆದ್ದರಿಂದ ಒಂದು ಶಕ್ತಿಯುತವಾದ, ಕೇಂದ್ರೀಕೃತ ಸರ್ಕಾರದ ಕಲ್ಪನೆಯು ಜರ್ಮನಿಯ ರಾಜಕೀಯದ ಮೇಲೆ ನಕರಾತ್ಮಕ ಸಂಘಟನೆಗಳನ್ನು ಹೊಂದಿತ್ತು, ಆದಾಗ್ಯೂ 1919 ಕ್ಕೂ ಮುಂಚೆ ಅಥವಾ 1933ಕ್ಕೂ ಮುಂಚೆ ಹಲವಾರು ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು ಮತ್ತು ಪ್ರಗತಿಪರರು ಮೂಲತತ್ವದಲ್ಲಿ ಕೇಂದ್ರೀಕರಣವನ್ನು ಬೆಂಬಲಿಸಿದರು.[ಸೂಕ್ತ ಉಲ್ಲೇಖನ ಬೇಕು]

ಬ್ರಿಟೇನ್‌ನಲ್ಲಿ, ಸಂಯುಕ್ತ ವ್ಯವಸ್ಥೆಯು "ಐರಿಷ್ ಸಮಸ್ಯೆ"ಗೆ ಮತ್ತು ಅದರ ನಂತರದಲ್ಲಿ "ಪಶ್ಚಿಮ ಲೋಥಿಯನ್ ಪ್ರಶ್ನೆ"ಗೆ ಒಂದು ಪರಿಹಾರ ಎಂಬುದಾಗಿ ಪ್ರತಿಪಾದಿಸಲ್ಪಟ್ಟಿತ್ತು.[]

ಯೂರೋಪ್‌ ಒಕ್ಕೂಟ

[ಬದಲಾಯಿಸಿ]

II ನೆಯ ಜಾಗತಿಕ ಯುದ್ಧದ ಕೊನೆಯ ಸಮಯದಲ್ಲಿ, ಯುರೋಪ್‌ನ ಸಂಯುಕ್ತತೆಯನ್ನು ಹಲವಾರು ಚಳುವಳಿಗಳು ಪ್ರತಿಪಾದಿಸಲು ಪ್ರಾರಂಭಿಸಿದವು, ಅಂದರೆ ಯುರೋಪಿನ ಸಂಯುಕ್ತತಾವಾದಿಗಳ ಒಕ್ಕೂಟ ಅಥವಾ 1948 ರಲ್ಲಿ ಸ್ಥಾಪನೆಗೊಂಡ ಯುರೋಪಿನ ಚಳುವಳಿಗಳು ಪ್ರತಿಪಾದಿಸುವುದಕ್ಕೆ ಪ್ರಾರಂಭಿಸಿದವು. ಆ ಸಂಘಟನೆಗಳು ಯುರೋಪ್‌ನ ಏಕೀಕರಣ ಪ್ರಕ್ರಿಯೆಯಲ್ಲಿ ಪ್ರಭಾವವನ್ನು ಬೀರುವಂತವಾಗಿದ್ದವು, ಆದರೆ ಯಾವತ್ತಿಗೂ ಕೂಡ ಒಂದು ನಿರ್ಣಯಾತ್ಮಕ ಮಾರ್ಗದಲ್ಲಿ ಪ್ರಭಾವವನ್ನು ಬೀರುವಂತವಾಗಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಆದಾಗ್ಯೂ ಸಂಯುಕ್ತ ವ್ಯವಸ್ಥೆಯು ಮಾಸ್ಟ್ರಿಕ್ಟ್ ಒಡಂಬಡಿಕೆ ಮತ್ತು ಯುರೋಪ್‌ಗೆ ಒಂದು ಸಂವಿಧಾನವನ್ನು ಸ್ಥಾಪಿಸುವ ಒಡಂಬಂಡಿಕೆ ಈ ಎರಡರ ಕರಡು ಪ್ರತಿಗಳಲ್ಲಿ ನಮೂದಿಸಲ್ಪಟ್ಟಿತ್ತು, ಇದು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳಿಂದ ಯಾವತ್ತಿಗೂ ಕೂಡ ಅನುಮೋದಿಸಲ್ಪಡಲಿಲ್ಲ. ಯುರೋಪ್‌ನ ಸಂಯುಕ್ತ ವ್ಯವಸ್ಥೆಯ ಅತ್ಯಂತ ಶಕ್ತಿಶಾಲಿ ವಕೀಲರುಗಳು ಜರ್ಮನಿ, ಇಟಲಿ, ಬೆಲ್ಜಿಯಮ್, ಮತ್ತು ಲಕ್ಸೆಂಬರ್ಗ್‌ನವರಾಗಿದ್ದರು, ಹಾಗೆಯೇ ಐತಿಹಾಸಿಕವಾಗಿ ಹೆಚ್ಚು ಶಕ್ತಿಯುತವಾಗಿ ಅದನ್ನು ವಿರೋಧಿಸಿದವರೆಂದರೆ ಯುನೈಟೆಡ್ ಕಿಂಗ್‌ಡಮ್ ಮತ್ತು ಫ್ರಾನ್ಸ್‌ನ ವಕೀಲರುಗಳಾಗಿದ್ದರು; ಹಾಗೆಯೇ ಯುರೋಪ್‌ನಲ್ಲಿ ಯವುದೇ ಒಂದು ನಿರ್ದಿಷ್ಟ ಅಧಿಕಾರ ಅಥವಾ ಸರ್ಕಾರಕ್ಕಾಗಿ ಯಾವತ್ತಿಗೂ ಚಳುವಳಿಗಳನ್ನು ನಡೆಸದ ಇತರ ದೇಶಗಳು ಸಂಯುಕ್ತತಾವಾದಿಗಳು ಎಂಬುದಾಗಿ ಪರಿಗಣಿಸಲ್ಪಟ್ಟವು.[ಸೂಕ್ತ ಉಲ್ಲೇಖನ ಬೇಕು] ಕೆಲವರು ಇದನ್ನು ಸ್ಪೇನ್, ಪೋರ್ತುಗಲ್, ಗ್ರೀಸ್, ಮತ್ತು ಹಂಗೇರಿಯಂತಹ ದೇಶಗಳ ಜೊತೆಗಿನ ದೃಷ್ಟಾಂತ ಎಂಬುದಾಗಿ ಪರಿಗಣಿಸಿದರು. ಇತ್ತಿಚಿನ ಸಮಯಗಳಲ್ಲಿ ಫ್ರೆಂಚ್ ಸರ್ಕಾರವು ಗಣನೀಯ ಪ್ರಮಾಣದಲ್ಲಿ ಪ್ರೋ-ಯುರೋಪಿಯನ್ ಒಕ್ಕೂಟವಾಗಿ ಬದಲಾಗುತ್ತಿದೆ ಎಂಬ ಅಂಶವೂ ಕೂಡ ಗಮನಾರ್ಹವಾದ ವಿಷಯವಾಗಿದೆ, ಹಾಗೆಯೇ ಪೋಲಂಡ್ ಅಥವಾ ಜೆಕ್ (ಜೆಕೋಸ್ಲಾವಾಕಿಯಾ) ಗಣರಾಜ್ಯಗಳಂತಹ ದೇಶಗಳು ಶಕ್ತಿಶಾಲಿ ಯುರೋಪ್ ಒಕ್ಕೂಟಕ್ಕೆ ಪ್ರಾಥಮಿಕ ವಿರೋಧಿಗಳಾಗಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿವೆ.[ಸೂಕ್ತ ಉಲ್ಲೇಖನ ಬೇಕು]

Those uncomfortable using the “F” word in the EU context should feel free to refer to it as a quasi-federal or federal-like system. Nevertheless, for the purposes of the analysis here, the EU has the necessary attributes of a federal system. It is striking that while many scholars of the EU continue to resist analyzing it as a federation, most contemporary students of federalism view the EU as a federal system (See for instance, Bednar, Filippov et al., McKay, Kelemen, Defigueido and Weingast).(R. Daniel Kelemen)

ಆಸ್ಟ್ರೇಲಿಯಾ

[ಬದಲಾಯಿಸಿ]
ಆಸ್ಟ್ರೇಲಿಯಾದ ರಾಜ್ಯಗಳು ಮತ್ತು ಭೂಪ್ರದೇಶಗಳು, ದಿ ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿ (ಕೆಂಪು), ನ್ಯೂ ಸೌತ್ ವೇಲ್ಸ್ (ಗುಲಾಬಿ), ನಾರ್ದರ್ನ್ ಟೆರಿಟರಿ(ಹಳದಿ, ಮೇಲೆ), ಕ್ವೀನ್‌ಲ್ಯಾಂಡ್ (ನೀಲಿ), ಸೌತ್ ಆಸ್ಟ್ರೇಲಿಯ (ನೇರಳೆ ಬಣ್ಣ), ಟಸ್ಮಾನಿಯಾ (ಹಳದಿ, ಕೆಳಗೆ), ವಿಕ್ಟೋರಿಯಾ (ಹಸಿರು), ಮತ್ತು ವೆಸ್ಟರ್ನ್ ಆಸ್ಟ್ರೇಲಿಯ (ಕಿತ್ತಳೆ ಬಣ್ಣ).

1 ಜನವರಿ 1901 ರಂದು ಆಸ್ಟ್ರೇಲಿಯಾ ದೇಶವು ಒಂದು ಸಂಯುಕ್ತ ರಾಷ್ಟ್ರವಾಗಿ ಬೆಳಕಿಗೆ ಬಂದಿತು. ಆಸ್ಟ್ರೇಲಿಯಾ ಖಂಡವು 1788 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಿಂದ ವಸಾಹತೀಕರಣಗೊಳ್ಳಲ್ಪಟ್ಟಿತ್ತು, ಕಾಲನಂತರದಲ್ಲಿ ಯುನೈಟೆಡ್ ಕಿಂಗ್‌ಡಮ್‌ ಅಲ್ಲಿ ಆರು ಸ್ವಯಂ-ನಿರ್ವಹಣ ವಸಾಹತುಗಳನ್ನು ಸ್ಥಾಪಿಸಿತ್ತು. 1890 ರ ದಶಕದ ಸಮಯದಲ್ಲಿ ಈ ವಸಾಹತುಗಳ ಸರ್ಕಾರಗಳು ಒಂದು ಏಕೀಕೃತ, ಸ್ವತಂತ್ರ ದೇಶವಾಗಿ ಬದಲಾಗುವುದಕ್ಕೆ ಜನಮತಸಂಗ್ರಹವನ್ನು ನಡೆಸಿದವು. ಎಲ್ಲಾ ವಸಾಹತುಗಳು ಸಂಯುಕ್ತೀಕರಣದ ಪರವಾಗಿ ಮತ ನೀಡಿದ ಸಂದರ್ಭದಲ್ಲಿ, ಆಸ್ಟ್ರೇಲಿಯಾದ ಸಂಯುಕ್ತೀಕರಣವು ಪ್ರಾರಂಭವಾಗಲ್ಪಟ್ಟಿತು, ಅದು 1901 ರಲ್ಲಿ ಆಸ್ಟ್ರೇಲಿಯಾದ ಕಾಮನ್‌ವೆಲ್ತ್‌ನ ಸ್ಥಾಪನೆಗೆ ಕಾರಣವಾಯಿತು. ಆಸ್ಟ್ರೇಲಿಯಾದ ಸಂಯುಕ್ತ ವ್ಯವಸ್ಥೆಯ ಮಾದರಿಯು ಒಂದು ವೆಸ್ಟ್‌ಮಿನಿಸ್ಟರ್ ವ್ಯವಸ್ಥೆಯ ಮೂಲಕವಾಗಿದ್ದರೂ ಕೂಡ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮೂಲ ಮಾದರಿಗೆ ಸನಿಹವಾಗಿದೆ.

ಬ್ರೆಜಿಲ್‌

[ಬದಲಾಯಿಸಿ]

1889 ರಲ್ಲಿ ಒಂದು ಸೈನಿಕ ಕೌಪ್ ಡಿ’ಎಟಾಟ್‌ ನ ಮೂಲಕ ಉಂಟಾದ ಬ್ರೆಜಿಲ್‌ನ ರಾಜಪ್ರಭುತ್ವದ ಅವನತಿಯು ಡೀಯೋಡೊರೊ ದಾ ಫೊನೆಕಾರಿಂದ ಮುಖಂಡತ್ವವನ್ನು ವಹಿಸಿಕೊಳ್ಳಲ್ಪಟ್ಟ ಅಧ್ಯಕ್ಷೀಯ ವ್ಯವಸ್ಥೆಗೆ ಕಾರಣವಾಯಿತು. ಪ್ರಮುಖ ನ್ಯಾಯಶಸ್ತ್ರಜ್ಞ ರುಯ್ ಬಾರ್ಬೋಸಾನ ನೆರವು ಪಡೆದುಕೊಂಡ ಫೊನ್ಸೆಕಾ ಇವರು ಬ್ರೆಜಿಲ್‌ನಲ್ಲಿ ವಿಧಿವತ್ತಾಗಿ ತೀರ್ಪು ಕೊಡುವ ಮೂಲಕ ಸಂಯುಕ್ತ ವ್ಯವಸ್ಥೆಯನ್ನು ಸ್ಥಾಪಿಸಿದರು, ಆದರೆ ಸರ್ಕಾರದ ಈ ವ್ಯವಸ್ಥೆಯು 1891 ರ ನಂತರದಿಂದ ಪ್ರತಿ ಬ್ರೆಜಿಲ್‌ನ ಸಂವಿಧಾನದಿಂದ ಧೃಢಪಡಬೇಕಾಗಿದೆ, ಆದಾಗ್ಯೂ ಅದರಲ್ಲಿ ಕೆಲವು ಕೆಲವು ಸಂಯುಕ್ತೀಕರಣದ ಮೂಲತತ್ವಗಳನ್ನು ತಪ್ಪಾಗಿ ನಿರೂಪಿಸುತ್ತವೆ. ಉದಾಹರಣೆಗೆ 1937 ರ ಸಂವಿಧಾನವು ಸಂಯುಕ್ತ ಸರ್ಕಾರಕ್ಕೆ ಸ್ಟೇಟ್ ಗವರ್ನರ್‌ಗಳನ್ನು (ಇಂಟರ್‌ವೆಂಟರ್ ಎಂದು ಕರೆಯಲ್ಪಟ್ಟ)ನೇಮಕ ಮಾಡುವ ಅಧಿಕಾರವನ್ನು ನೀಡಿತು, ಆ ಮೂಲಕ ಅದು ಅಧ್ಯಕ್ಷ ಗೆಟ್ಯುಲಿಯೋ ವರ್ಗಾಸ್‌ರ ಕೈಯಲ್ಲಿ ಅಧಿಕಾರವನ್ನು ಕೇಂದ್ರೀಕೃತವಾಗುವಂತೆ ಮಾಡಿತು. ಬೆರ್ಜಿಲ್ ವ್ಯಾಪಾರವನ್ನು ನಿಯಂತ್ರಿಸುವುದಕ್ಕೆ ಫೊನ್ಸೆಕಾ ವ್ಯವಸ್ಥೆಯನ್ನೂ ಕೂಡ ಬಳಸಿಕೊಳ್ಳುತ್ತದೆ.

1988 ರ ಬೆರ್ಜಿಲ್‌ನ ಸಂವಿಧಾನವು ಸ್ಥಳೀಯ ಸರ್ಕಾರಗಳನ್ನು ಸಂಯುಕ್ತ ಘಟಕಗಳಾಗಿ ಒಳಗೊಂಡು ಸಂಯುಕ್ತ ವ್ಯವಸ್ಥೆಯ ಕಲ್ಪನೆಗೆ ಒಂದು ಹೊಸ ಅಂಶವನ್ನು ಪರಿಚಯಿಸಿತು. ಬ್ರೆಜಿಲ್‌ನ ನಗರಗಳು ಪ್ರಸ್ತುತದಲ್ಲಿ ಸಂಯುಕ್ತ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ರಾಜ್ಯಗಳಿಗೆ ನೀಡಲ್ಪಟ್ಟ ಸಾಂಪ್ರದಾಯಿಕ ಅಧಿಕಾರಗಳ ಜೊತೆಗೆ ಕಾರ್ಯನಿರ್ವಹಿಸುತ್ತಿವೆ, ಮತ್ತು ಆದಾಗ್ಯೂ ಅವುಗಳು ಒಂದು ಸಂವಿಧಾನವನ್ನು ಹೊಂದುವುದಕ್ಕೆ ಅನುಮತಿಯನ್ನು ನೀಡಲ್ಪಟ್ಟಿಲ್ಲ, ಅವು ಒಂದು ಸುಸಂಘಟಿತ ಕಾನೂನಿನ (ಶಾಸನ) ಮೂಲಕ ವಿನ್ಯಾಸಗೊಳಿಸಲ್ಪಟ್ಟಿವೆ.

ಕೆನಡಾ

[ಬದಲಾಯಿಸಿ]
ಕೆನಡಾವನ್ನು 10 ಪ್ರತ್ಯೇಕ ಪ್ರಾಂತವನ್ನಾಗಿಯೂ, 3 ಭೂಪ್ರದೇಶವನ್ನಾಗಿಯೂ ವಿಭಾಗಿಸಲಾಗಿದೆ.

ಕೆನಡಾದಲ್ಲಿ, ಸಂಯುಕ್ತ ವ್ಯವಸ್ಥೆಯನ್ನು ಸಂಯುಕ್ತ ಸಂಸತ್ತು ಮತ್ತು ದೇಶದ ಪ್ರಾಂತೀಯ ಸರ್ಕಾರಗಳ ನಡುವಿನ ಅಧಿಕಾರ ವಿಭಾಗದಿಂದ ವಿವರಿಸ್ಪಟ್ಟಿದೆ. 1867ರ ಸಂವಿಧಾನಾತ್ಮಕ ಕಾಯಿದೆ (ಮೊದಲಿಗೆ ಬ್ರಿಟಿಶ್ ನಾರ್ತ್ ಅಮೆರಿಕಾ ಆ‍ಯ್‌ಕ್ಟ್ ಎಂದು ಕರೆಯಲಾಗುತ್ತಿತ್ತು)ಯಡಿಯಲ್ಲಿ ,ವಿಶೇಷವಾದ ಕಾನೂನಿನ ಅಧಿಕಾರವನ್ನು ನೀಡಲಾಗಿದೆ. ಸಂವಿಧಾದ ಪರಿಚ್ಛೇದ 91 ಕಾನೂನಿಗೆ ಹೆಚ್ಚಿನ ಸಂಯುಕ್ತ ಅಧಿಕಾರವನ್ನು, ಹಾಗೆಯೇ ಪರಿಚ್ಛೇದ 92 ಹೆಚ್ಚಿನ ಪ್ರಾಂತೀಯ ಅಧಿಕಾರವನ್ನು ನೀಡುತ್ತದೆ.

ಈ ವಿಷಯವು ನೇರವಾಗಿ ಸಂವಿಧಾನದಿಂದ ವ್ಯವಹರಿಸಲ್ಪಡುವುದಿಲ್ಲ, ಸಂಯುಕ್ತ ಸರ್ಕಾರವು ಉಳಿದ ಅಧಿಕಾರವನ್ನು ತನ್ನಲ್ಲಿಯೇ ಇಟ್ಟುಕೊಳ್ಳುತ್ತದೆ, ಹೀಗಿದ್ದರೂ ಎರಡು ಮಟ್ಟಗಳ ಸರ್ಕಾರಗಳ ನಡುವೆ ಕಾನೂನಿನ ನ್ಯಾಯವ್ಯಾಪ್ತಿ ಯಾವ ಮಟ್ಟದಲ್ಲಿ ಬರುತ್ತದೆ ಎಂಬುದು ದೀರ್ಘಕಾಲದಿಂದ ಸಂಘರ್ಷದಲ್ಲಿದೆ ಮತ್ತು ರೂಪಿತಗೊಳ್ಳುತ್ತಿರುವ ವಿಷಯವಾಗಿದೆ. ಕಾನೂನಿನ ವ್ಯಾಜ್ಯ ಒಳಗೊಂಡಿರುವ ಪ್ರದೇಶಗಳು ಆರ್ಥಿಕ ನಿಬಂಧನೆ, ತೆರಿಗೆ ಪದ್ಧತಿ, ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಗೌರವಿಸಬೇಕು.

ಮಾರ್ಚ್ 2009ರಿಂದ ಭಾರತೀಯ ರಾಜ್ಯ ಸರ್ಕಾರಗಳು ಹಲವಾರು ರಾಜಕೀಯ ಪಕ್ಷಗಳೊಂಗಿಗೆ ನಡೆಯುತ್ತಿವೆ.

ಭಾರತಯ ಸಂವಿಧಾನದಿಂದ ಭಾರತ ಸರ್ಕಾರ(ಒಕ್ಕೂಟ ಸರ್ಕಾರ ಎಂದು ಉಲ್ಲೇಖಿಸಲಾಗಿದೆ) ಸ್ಥಾಪಿಸಲ್ಪಟ್ಟಿದೆ , ಒಕ್ಕೂಟ ಸರ್ಕಾರ ವು 28 ರಾಜ್ಯಗಳ ಮತ್ತು 7 ಕೇಂದ್ರಾಡಳಿತ ಪ್ರದೇಶಗಳ ಆಡಳಿತ ನಿರ್ವಹಿಸುವ ಸರ್ಕಾರವಾಗಿದೆ.

ಭಾರತದ ಆಡಳಿತವು ಶ್ರೇಣಿಕೃತ ವ್ಯವಸ್ಥೆಯ ಮೇಲೆ ಆಧಾರವಾಗಿದೆ, ಭಾರತಯ ಸಂವಿಧಾನವು ಪ್ರತಿಯೊಂದು ಶೇಣಿಯ ಸರ್ಕಾರಕ್ಕೂ ಸೂಕ್ತವಾದ ಕಾರ್ಯಾಂಗ ಅಧಿಕಾರ ನೀಡಿದೆ. ಯೂನಿಯನ್ ಲಿಸ್ಟ್, ಸ್ಟೇಟ್ ಲಿಸ್ಟ್, ಕಾನ್ಕರೆಂಟ್ ಲಿಸ್ಟ್‌ನಲ್ಲಿರುವ ವಿಷಯಗಳನ್ನು ಪರಿಮಿತಿಗೊಳಿಸಲು ಸಂವಿಧಾನದಲ್ಲಿ ಈ ಮೂರು ವರ್ಗಗಳಡಿಯಲ್ಲಿ ಏಳನೇಯ ಅನುಸೂಚಿಯನ್ನು ಬಳಸಿಕೊಳ್ಳಲಾಗುತ್ತದೆ.

ಅಸಮವಾದ ಸಂಯುಕ್ತ ವ್ಯವಸ್ಥೆ

[ಬದಲಾಯಿಸಿ]

ಭಾರತದ ಸಂಯುಕ್ತ ವ್ಯವಸ್ಥೆಯು ಇತರೆ ಹಲವಾರು ವಿಧವಾದ ಸಂಯುಕ್ತ ವ್ಯವಸ್ಥೆ ತರಹ ಇಲ್ಲದೆ ಅದಕ್ಕಿಂತ ಭಿನ್ನವಾಗಿದ್ದು, ಅಸಮವಾಗಿದೆ.[] ವಿಲೀನಪತ್ರದ ಪ್ರಕಾರ ಅನುಚ್ಛೇದ 370 ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷವಾದ ಸೌಲಭ್ಯ ನೀಡುತ್ತದೆ. ಅನುಚ್ಛೇದ 371ರ ಪ್ರಕಾರ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಗೋವಾ, ಮಿಜೋರಾಂ, ಮಣಿಪುರ್, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಇವುಗಳ ವಿಲೀನ ಅಥವಾ ರಾಜ್ಯವೆಂದು ಪರಿಗಣಿಸಿ ರಾಜ್ಯಗಳಿಗೆ ವಿಶೇಷ ಸೌಲಭ್ಯ ಒದಗಿಸಿದೆ. ಭಾರತದ ಸಂಯುಕ್ತ ವ್ಯವಸ್ಥೆಯ ಇನ್ನೊಂದು ಅಂಶವೆನೆಂದರೆ ರಾಷ್ಟ್ರಪತಿ ಆಡಳಿತ ಪದ್ಧತಿ. ಕೇಂದ್ರ ಸರ್ಕಾರವು (ನಿಯೋಜಿತಗೊಂಡ ರಾಜ್ಯಪಾಲಕರ ಮೂಲಕ) ರಾಜ್ಯದಲ್ಲಿ ಯಾವುದೇ ಪಕ್ಷವು ಸರ್ಕಾರ ರಚಿಸಲು ಸಾಧ್ಯವಾಗದಿದ್ದಾಗ ಅಥವಾ ಹಿಂಸೆ ಗಲಭೆ ಉಂಟಾದಾಗ ಕೆಲವು ತಿಂಗಳವರೆಗೆ ರಾಜ್ಯದ ಆಡಳಿತದ ನಿಯಂತ್ರಣ ತೆಗೆದುಕೊಂಡು ಆಡಳಿತ ನಡೆಸುತ್ತದೆ.

ಸಮ್ಮಿಶ್ರಣ ರಾಜಕೀಯ

[ಬದಲಾಯಿಸಿ]

ಸಂವಿಧಾನವು ಇದನ್ನು ಎದುರು ನೋಡದಿದ್ದರೂ, ಈಗ ಭಾರತವು ಬಹು-ಭಾಷಾ ಸಂಯುಕ್ತ ರಾಷ್ಟ್ರವಾಗಿದೆ.[] ಭಾರತವು ಬಹುವಿಧ ಪಕ್ಷ ವ್ಯವಸ್ಥೆ ಹೊಂದಿದ್ದು ರಾಜಕೀಯ ನಿಷ್ಠೆಯು ಭಾಷೆಯ ಮೇಲೆ ನಿಂತಿದ್ದು, ಪ್ರಾಂತೀಯ ಮತ್ತು ಜಾತಿ ಗುರುತುಗಳು,[] ಸಮ್ಮಿಶ್ರ ರಾಜಕೀಯವನ್ನು ಅಗತ್ಯವಾಗಿಸಿದೆ, ಮುಖ್ಯವಾಗಿ ಕೇಂದ್ರಿಯ ಮಟ್ಟದಲ್ಲಿ.

ರಷ್ಯನ್‌ ಒಕ್ಕೂಟ

[ಬದಲಾಯಿಸಿ]

ಸಾಮ್ರಾಜ್ಯಶಾಹಿ ಆಡಳಿತ ಕೊನೆಗೊಂಡ ನಂತರದ ಸಮಯದಲ್ಲಿ ರಷ್ಯಾ ಸರ್ಕಾರದ ಉಪವಿಭಾಗೀಯ ಆಡಳಿತವು ಸಾಮಾನ್ಯ ಸ್ವಾಯುತ್ತ ಮಾದರಿಗೆ ಬದಲಾಯಿತು. ಇದು ಯು ಎಸ್‌ಎಸ್‍ಆರ್ ರಚನೆಯೊಂದಿಗೆ ಪ್ರಾರಂಭವಾಯಿತು.(ಇದರಲ್ಲಿ ರಷ್ಯಾವನ್ನು ಒಂದು ಭಾಗವಾಗಿ ಪರಿಗಣಿಸಲಾಯಿತು.) ಇದನ್ನು ಸೋವಿಯತ್ ಒಕ್ಕೂಟ ರಚನೆಗೊಂಡ ನಂತರದಲ್ಲಿ ಸ್ವತಂತ್ರ್ಯಗೊಳಿಸಲಾಯಿತು. ಬೊರಿಸ್ ಯೆಲ್ಸಿನ್‌ ಹೆಚ್ಚಿನ ಸೋವಿಯತ್ ಮಾದರಿಯನ್ನು ಉಳಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಹೆಚ್ಚಿನ ಸ್ವಾತಂತ್ರ್ಯವನ್ನು ಕೊಡುವ ರೀತಿಯಲ್ಲಿ ರಚನೆ ಮಾಡಿದನು. (ಚೆಚೆನ್ ಪ್ರತ್ಯೇಕತಾವಾದಿ ಬಂಡುಕೋರರ ಚೆಚೆನ್ ಯುದ್ಧದ ಸಮಯದಲ್ಲಿ ಸಂಘರ್ಷ ಇದರಿಂದ ಉಂಟಾಗಿತ್ತು.) ಯೆಲ್ಸ್ಟಿನ್ ಮಾಡಿದ ಕೆಲವು ಸುಧಾರಣೆಗಳನ್ನು ವ್ಲಾಡಿಮಿರ್ ಪುಟಿನ್ ಮರು ಪರಿಶೀಲನೆಗೊಳಪಡಿಸಿದರು.

ರಷ್ಯಾದ ಎಲ್ಲ ಉಪವಿಭಾಗಗಳನ್ನೂ ಒಂದು ಭಾಗ ಎಂದು ಕರೆಯಲಾಗುತ್ತಿತ್ತು. ಈ ಭಾಗಗಳಲ್ಲಿ ರಷ್ಯೇತರ ಸಂಪ್ರದಾಯಗಳನ್ನು ಹೊಂದಿದ್ದ ಕೆಲ ಅಲ್ಪಸಂಖ್ಯಾತ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಸಣ್ಣ ವಿಭಾಗಗಳಿಗೆ ಹೆಚ್ಚಿನ ಸ್ವಾಯುತ್ತತ್ತತೆಯನ್ನು ಅನುಭವಿಸುತ್ತಿದ್ದವು.

ಅಮೆರಿಕ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]
ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಹಲವಾರು ಸಂಖ್ಯೆಯ ಪ್ರತ್ಯೇಕ ರಾಜ್ಯಗಳನ್ನಾಗಿ ವಿಭಾಗ ಮಾಡಲಾಗಿದೆ. ಪ್ರತಿಯೊಂದು ಕೂಡಾ ಸರ್ಕಾರ ಮತ್ತು ಅದರ ಅಧಿಕಾರವನ್ನು ವಿವಿಧ ಸ್ಥರಗಳಲ್ಲಿ ಹೊಂದಿದಂತವುಗಳಾಗಿವೆ.

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಸಂಯುಕ್ತ ವ್ಯವಸ್ಥೆಯು ರಾಜ್ಯ ಸರ್ಕಾರಗಳು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಸಂಯುಕ್ತ ಸರ್ಕಾರಗಳ ನಡುವಿನ ಸಂಬಂಧದ ಆಧಾರದ ಮೇಲೆ ರೂಪುಗೊಂಡಿದೆ. ಅಮೇರಿಕಾ ಸರ್ಕಾರವು ದ್ವಿಸಂಯುಕ್ತ ವ್ಯವಸ್ಥೆಯಿಂದ ಆರಂಭವಾಗಿದ್ದು ಸಹಕಾರಿ ಸಂಯುಕ್ತವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. "ಫೆಡರಲಿಸ್ಟ್ ನಂ. 46,"ನಲ್ಲಿ ಜೇಮ್ಸ್ ಮ್ಯಾಡಿಸನ್‌ ಪ್ರತಿಪಾದಿಸುವಂತೆ ರಾಜ್ಯ ಮತ್ತು ರಾಷ್ಟ್ರದ ಸರ್ಕಾರಗಳು " ನೈಜವಾಗಿ ಇವು ಬೇರೆ ಬೇರೆ ಪ್ರಾತಿನಿಧಿತ್ವವನ್ನು ಹೊಂದಿವೆ. ಅಲ್ಲದೆ ಬೇರೆ ಬೇರೆ ಪ್ರತಿನಿಧಿಗಳ ಒಂದು ಗುಂಪಿಗೆ ವಿವಿಧ ಅಧಿಕಾರವನ್ನು ನೀಡುವ ಮೂಲಕ ಒಂದೆಡೆ ಕಲೆಹಾಕಲಾಗಿರುತ್ತದೆ." ಅಲೆಕ್ಸಾಂಡರ್ ಹ್ಯಾಮಿಲ್ಟನ್‌,‍ "ಫೆಡರಲಿಸ್ಟ್ ನಂ. 28,"ರಲ್ಲಿ ಬರೆದಿರುವ ಪ್ರಕಾರ "ಎರಡೂ ಹಂತದ ಸರ್ಕಾರವೂ ಅಧಿಕಾರವನ್ನು ಜನರ ಒಳಿತಿಗಾಗಿ ಹಾಗೂ ಉತ್ತಮ ಆಡಳಿತಕ್ಕಾಗಿ ಬಳಸಿಕೊಳ್ಳುತ್ತಾರೆ. ಒಂದು ವೇಳೆ ತಮ್ಮ ಅಧಿಕಾರಕ್ಕೆ ಸಮರ್ಪಕವಾದ ಅವಕಾಶ ಉನ್ನತ ಸರ್ಕಾರದಿಂದ ದೊರೆಯದ ಪಕ್ಷದಲ್ಲಿ ಉಳಿದವರನ್ನು ಪ್ರತಿಭಟನೆಗಾಗಿ ಬಳಸಿಕೊಳ್ಳಬಹುದಾಗಿದೆ." (http://www.learner.org/courses/democracyinamerica/dia_3/dia_3_topic.html Archived 2010-05-02 ವೇಬ್ಯಾಕ್ ಮೆಷಿನ್ ನಲ್ಲಿ.)

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿದ್ದ ರಾಜ್ಯಗಳು ಮೊದಲೇ ರಚನೆಗೊಂಡಿದ್ದ ರಾಜಕೀಯ ಪ್ರಾಂತ್ಯಗಳಾಗಿದ್ದರಿಂದ ಯಾವುದೇ ವಿಭಾಗಕ್ಕೂ ಅಮೇರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನವು ಸಂಯುಕ್ತ ವ್ಯವಸ್ಥೆಯ ಕುರಿತಾದ ವಿವರಣೆ ನೀಡುವ ಅಗತ್ಯ ಕಂಡುಬರಲಿಲ್ಲ.ಅದೇನೆ ಇದ್ದರೂ, ಇದು ಸಂಯುಕ್ತ ಸರ್ಕಾರದಲ್ಲಿಯ ರಾಜ್ಯ ಸರ್ಕಾರಗಳ ಹಾಗೂ ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ ಮತ್ತು ಹಕ್ಕುಗಳ ಕುರಿತಾದ ಉಲ್ಲೇಖಗಳನ್ನು ಹೊಂದಿದೆ. ಸಂಯುಕ್ತ ಸರ್ಕಾರವು ಚಲಾಯಿಸಬಹುದಾದ ಕೆಲವು ಅಧಿಕಾರ ವನ್ನು (ಇದನ್ನು ಪಟ್ಟಿಮಾಡಲಾದ ಅಧಿಕಾರ ಗಳು ಎಂದು ಕೂಡಾ ಕರೆಯಲಾಗುತ್ತದೆ) ಹೊಂದಿದ್ದು ಅದನ್ನು ಸಂವಿಧಾನದಲ್ಲಿ ಲಿಖಿತವಾಗಿ ಹೇಳಲಾಗಿದೆ. ಇವುಗಳಲ್ಲಿ ತೆರಿಗೆ ವಸೂಲಿ, ಯುದ್ಧ ಘೋಷಣೆ, ವಿದೇಶಿ ವಾಣಿಜ್ಯವನ್ನು ನಿಯಂತ್ರಿಸುವ ಹಕ್ಕುಗಳನ್ನು ಉದಾಹರಿಸಬಹುದಾಗಿದೆ. ಇದಲ್ಲದೆ ಸಂವಿಧಾನದಲ್ಲಿಯ ಅಗತ್ಯ ಮತ್ತು ಸಮಂಜಸವಾದ ಅಧಿನಿಯಮಗಳು (Necessary and Proper Clause) ಸಂಯುಕ್ತ ಸರ್ಕಾರವು ಕಾನೂನುಗಳನ್ನು ಜಾರಿಗೆ ತರಲು ಸಮರ್ಪಕವಾದ ಸೂಚಿತ ಅಧಿಕಾರ ವನ್ನೊದಗಿಸುತ್ತದೆ. ಸಂವಿಧಾನವು ಸಂಯುಕ್ತ ಸರ್ಕಾರಕ್ಕೆ ನಿಯೋಜಿಸಿಲ್ಲದ ಅಥವಾ ರಾಜ್ಯಕ್ಕೆ ನಿಷೇದಿಸಿದ ಮೀಸಲಾದ ಅಧಿಕಾರ ವು—ಜನರಿಗೆ ಅಥವಾ ರಾಜ್ಯಕ್ಕೆ ಮೀಸಲಾಗಿರುತ್ತದೆ.[] ಮ್ಯಾಕ್‌ಕುಲ್ಲೊಚ್ ವಿ. ಮೆರಿಲ್ಯಾಂಡ್ನ (1819)ಸರ್ವೋಚ್ಛ ನ್ಯಾಯಾಲಯದ ತೀರ್ಪಿನಲ್ಲಿ ಸಂಯುಕ್ತ ಸರ್ಕಾರಕ್ಕೆ ನಿಯೋಜಿಸಿದ ಅಧಿಕಾರಗಳನ್ನು ಹೇಳಲಾಗಿದೆ ಅಲ್ಲದೆ. ರಾಜ್ಯಗಳು ಸಂಯುಕ್ತ ಸರ್ಕಾರದ ಅಂತಿಮ ವಿಧಿಸುವಿಕೆಗೊಳಗಾಗುವ ಅಂತರ್ಯುದ್ಧದ ಸಂವಿಧಾನದ ತಿದ್ದುಪಡಿಗಳು ಮತ್ತು ನಂತರದ ಎಲ್ಲವೂ ಅಂತರ್ಯುದ್ಧದ ಕುರಿತಾದ ತಿದ್ದುಪಡಿಗಳಲ್ಲಿ ವಿಸ್ತರಿಸಲಾಗಿದೆ.

ಅಮೆರಿಕ ಸಂಯುಕ್ತ ಸಂಸ್ಥಾನಗಳ ಫೆಡರಲಿಸ್ಟ್‌ ಪಾರ್ಟಿಯು 1824ರಲ್ಲಿ ವಿಸರ್ಜಿತವಾಯಿತು. ಪಕ್ಷವು ಡೆಮಾಕ್ರಟಿಕ್-ರಿಪಬ್ಲಿಕನ್ಸ್‌ರಿಂದ ಮತ್ತು ಪ್ರಭಾವೀ ವ್ಯಕ್ತಿಯಾದ ಥಾಮಸ್ ಜೆಫರ್ಸನ್‌ರಿಂದ ಭಾರಿ ವಿರೋಧಕ್ಕೊಳಗಾಯಿತು. ಡೆಮಾಕ್ರಟಿಕ್-ರಿಪಬ್ಲಿಕನ್ಸ್‌ ಹೆಚ್ಚಾಗಿ ಇದನ್ನು ನಂಬಿತ್ತು:

a) ಶಾಸನ ಸಭೆಯು ಹೆಚ್ಚಿನ ಅಧಿಕಾರವನ್ನು ಹೊಂದಿದ್ದು ಅವುಗಳನ್ನು ಪರಿಶೀಲಿಸಿಲ್ಲ (ಮುಖ್ಯವಾಗಿ ಅಗತ್ಯ ಮತ್ತು ಸಮಂಜಸ ಅಧಿನಿಯಮಗಳು.)

b)ಕಾರ್ಯಾಂಗದ ವಿಭಾಗವು ಹೆಚ್ಚಿನ ಅಧಿಕಾರವನ್ನು ಹೊಂದಿದ್ದು, ಅವರ ಮೇಲೆ ಯಾವುದೇ ಪರಿಶೀಲನೆ ನಡೆಸುತ್ತಿಲ್ಲ. ಆಗ ಸರ್ವಾಧಿಕಾರಿ ಹುಟ್ಟಿಕೊಳ್ಳುತ್ತಾನೆ.

c)ಸಂವಿಧಾನದಲ್ಲಿ ಹಕ್ಕುಗಳ ಮಸೂದೆಯು ಸರ್ವಧಿಕಾರಿಯು ಪ್ರಜೆಗಳನ್ನು ಶೋಷಿಸುವುದನ್ನು ತಡೆಯುವಂತಿರಬೇಕು (ಕೊನೆಗೆ ಅಧ್ಯಕ್ಷರ ಮೇಲೆ ನಂಬಿಕೆಯಿಡಬೇಕು). ಸಂಯುಕ್ತವಾದಿಗಳ ವಾದವೆಂದರೆ ಮಸೂದೆಯಲಿಲ್ಲದ ಹಕ್ಕುಗಳನ್ನು ಪಟ್ಟಿ ಮಾಡಲಾಗುವುದಿಲ್ಲ ಆದರೆ ವ್ಯವಹಾರಿಕ ಹಕ್ಕುಗಳ ಮಸೂದೆಯಲ್ಲಿರದ ಕಾರಣದಿಂದ ಗಮನಹರಿಸಬೇಕಾಗಿರುತ್ತದೆ. ನಿರ್ಧಿಷ್ಟ ಸಂದರ್ಭದಲ್ಲಿ ಹಕ್ಕುಗಳನ್ನು ನ್ಯಾಯಾಲಯದ ನ್ಯಾಯಾಂಗವ್ಯವಸ್ಥೆಯಲ್ಲಿ ನಿರ್ಧರಿಸಲಾಗುವುದು.

ಅಂತರ್ಯುದ್ಧವಾದ ದಶಕಗಳ ನಂತರ, ಸಂಯುಕ್ತ ಸರ್ಕಾರದ ಗಾತ್ರ, ಪ್ರಭಾವ ಮತ್ತು ದಿನನಿತ್ಯದ ಜೀವನದಲ್ಲಿ ಅದರ ಪ್ರಭಾವವು ಹೆಚ್ಚಾಯಿತು. ರಾಜ್ಯದ ಗಡಿಯನ್ನು ಮೀರಿದ ವ್ಯವಹಾರ ಮತ್ತು ಕೈಗಾರಿಕೆಯನ್ನು ನಾಗರೀಕ ಹಕ್ಕುಗಳನ್ನು ರಕ್ಷಿಸಲು ಮತ್ತು ಸಾಮಾಜಿಕ ಸೇವೆಯನ್ನೊದಗಿಸಲು ನಿಯಂತ್ರಿಸುವ ಅಗತ್ಯವಿತ್ತು, ಇದು ಅದರ ಪ್ರಭಾವ ಹೆಚ್ಚಲು ಕಾರಣವಾಗುತ್ತದೆ. ಸಂಯುಕ್ತ ಸರ್ಕಾರವು ಮಿನ್ನಿಸೊಟ ರಾಜ್ಯ ಮತ್ತು ನಾರ್ತನ್ ಸೆಕ್ಯುರಿಟಿ ಕಂಪನಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಶೆರ್ಮನ್ ಆ‍ಯ್‌೦ಟಿ ಟ್ರಸ್ಟ್ ಆ‍ಯ್‌ಕ್ಟ್ ಸಮ್ಮತಿ ಪಡೆಯುವವರೆಗೂ ಹೆಚ್ಚಿನ ಅಧಿಕಾರವನ್ನು ಹೊಂದಿರಲಿಲ್ಲ.

ಅನೇಕ ಜನರ ನಂಬಿಕೆಯ ಪ್ರಕಾರ ಸಂಯುಕ್ತ ಸರ್ಕಾರವು ನೀಡಿದ ಅಧಿಕಾರದ ಮಿತಿಯನ್ನು ಮೀರಿ ಬೆಳೆದಿದೆ. 1938ರಿಂದ 1995ರ ವರೆಗೂ, ಯು.ಎಸ್‌ ಸರ್ವೋಚ್ಛ ನ್ಯಾಯಾಲಯ ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಲೊಪೆಜ್ ಮೊಕದ್ದಮೆಯಲ್ಲಿ ವಾಣಿಜ್ಯ ವಾಕ್ಯಭಾಗದಡಿಯಲ್ಲಿ ಸಂಯುಕ್ತ ಸರ್ಕಾರವನ್ನು ಬೀಳಿಸುವವರೆಗೂ ಐವತ್ತು ವಷಗಳ ಕಾಲ ಯಾವುದೇ ಸಂಯುಕ್ತ ಶಾಸನವು ಕಾಂಗ್ರೆಸ್‌ನ ಅಧಿಕಾರವನ್ನು ಮೀರಿರಲಿಲ್ಲ(ಗನ್ ಫ್ರೀ ಸ್ಕೂಲ್ ಝೋನ್ ಆ‍ಯ್‌ಕ್ಟ್‌ಗೆ ಸವಾಲುಹಾಕುತ್ತಿರುವುದು). ಸಂಯುಕ್ತ ಸರ್ಕಾರದ ಹೆಚ್ಚಿನ ಕಾರ್ಯಗಳಲ್ಲಿ ನೀಡಿದ ಅಧಿಕಾರಗಳಲ್ಲಿ ನ್ಯಾಯಸಮ್ಮತವಾದ ಬೆಂಬಲವನ್ನು ಕಾಣಬಹುದು, ಅದೆಂದರೆ ವಾಣಿಜ್ಯ ವಾಕ್ಯಭಾಗ. ಕಾಂಗ್ರೆಸ್‌ನಿಂದ ಕೆಲವು ಸಂಯುಕ್ತ ಕನೂನನ್ನು ಸಮರ್ಥಿಸಲು ವಾಣಿಜ್ಯ ವಾಕ್ಯಭಾಗವನ್ನು ಬಳಸಲಾಯಿತು, ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ಇದರ ಅನ್ವಯಿಕಗಳನ್ನು ಕಡಿಮೆಗೊಳಿಸಿತು. ಉದಾ: ಸರ್ವೋಚ್ಛ ನ್ಯಾಯಾಲಯವು ಹಿಂದೆ ಸೂಚಿಸಿದ ಲೊಪೆಜ್ ಮೊಕದ್ದಮೆಯ ತೀರ್ಪಿನಲ್ಲಿ ಗನ್ ಫ್ರೀ ಸ್ಕೂಲ್ ಝೋನ್ ಆ‍ಯ್‌ಕ್ಟ್‌‌ನ್ನು ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಮೋರಿಸನ್ ತೀರ್ಪಿನಲ್ಲಿ 1994ರ ವಾಯಲೆನ್ಸ್ ಎಗೆನೆಸ್ಟ್ ವುಮೆನ್ ಆ‍ಯ್‌ಕ್ಟ್‌ನಲ್ಲಿನ ಸಾಮಾಜಿಕ ಪರಿಹಾರದ ಭಾಗವನ್ನು ತಿರಸ್ಕರಿಸಿತು. ಇತ್ತೀಚಿನ ವಾಣಿಜ್ಯ ವಾಕ್ಯಭಾಗವು ಗೋಂಜಲೇಸ್ ಮತ್ತು ರೈಚ್ ತೀರ್ಪಿನಲ್ಲಿ ಮರಿಜುಆನಾ ಕಾನೂನನ್ನು ಮಾಡಲಾಗಿದೆಯೆಂದು ವ್ಯಾಖ್ಯಾನಿಸಲಾಯಿತು.

ದ್ವಿ ಸಂಯುಕ್ತ ವ್ಯವಸ್ಥೆಯು ಸಂಯುಕ್ತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಮನಾಗಿದೆ ಮತ್ತು ಸಮನಾದ ಸಾರ್ವಭೌಮತೆಯನ್ನು ಹೊಂದಿರುವಂತೆ ನೋಡಿಕೊಳ್ಳುತ್ತದೆ. ಸಂವಿಧಾನದ ಭಾಗಗಳನ್ನು ಸಂಕುಚಿತವಾಗಿ ವ್ಯಾಖ್ಯಾನಿಸಲಾಗಿದೆ ಅದೆಂದರೆ ಹತ್ತನೇ ತಿದ್ದುಪಡಿ, ಶ್ರೇಷ್ಠತೆಯ ವಾಕ್ಯಭಾಗ, ಅಗತ್ಯ ಮತ್ತು ಸಮಂಜಸ ಅಧಿನಿಯಮಗಳು ಮತ್ತು ವಾಣಿಜ್ಯ ಅಧಿನಿಯಮಗಳು. ಸಂಕುಚಿತವಾದ ವ್ಯಾಖ್ಯಾನದಡಿಯಲ್ಲಿ ಸಂವಿಧಾನವು ಸ್ಪಷ್ಟವಾಗಿ ಅನುದಾನ ನೀಡಿದರೆ ಮಾತ್ರ ಸಂಯುಕ್ತ ಸರ್ಕಾರವು ಸರಹದ್ದನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿ ರಾಜ್ಯ ಮತ್ತು ಜನರಿಗೆ ಸಂಬಂಧಪಟ್ಟ ಅನೇಕ ಅಧಿಕಾರಗಳಿದ್ದರೂ ಸಂಯುಕ್ತ ಸರ್ಕಾರವು ಸಂವಿಧಾನದಲ್ಲಿ ಪಟ್ಟಿ ಮಾಡಿದ ಅಧಿಕಾರಗಳಿಗೆ ಮಾತ್ರ ಸೀಮಿತವಾಗಿರುತ್ತದೆ.[]

ಅಂತರ್ಯುದ್ಧದ ಕಾಲದಲ್ಲಿ ರಾಷ್ಟ್ರೀಯ ನ್ಯಾಯಾಲಯಗಳು ಸಂಯುಕ್ತ ವ್ಯವಸ್ಥೆಯಲ್ಲಿ ಸಂಯುಕ್ತ ಸರ್ಕಾರದ ಅಧಿಕಾರಗಳಿಗೆ ಸರ್ಕಾರವೇ ಅಂತಿಮ ನ್ಯಾಯಾದೀಶನಾಗಿರುತ್ತದೆಂದು ಕೆಲವೊಮ್ಮೆ ವ್ಯಾಖ್ಯಾನಿಸುತ್ತವೆ. ಮೂಲ ಅಮೇರಿಕಾದ ಸರ್ಕಾರಗಳು (ರಾಜ್ಯ ಮತ್ತು ಸಂಯುಕ್ತ ಸರ್ಕಾರದಿಂದ ಪ್ರತ್ಯೇಕ ಮತ್ತು ವಿಭಿನ್ನವಾದ)"ದ್ವಿ-ಸಂಯುಕ್ತ ವ್ಯವಸ್ಥೆ"ಯ ಪರಿಕಲ್ಪನೆಯನ್ನೊದಗಿಸಿದ ಸೀಮಿತವಾದ ಸಾರ್ವಭೌಮತೆಯನ್ನನುಭವಿಸುತ್ತದೆ.

ಎರಡು ಆಧಾರಭೂತವಾದ ಅಂಶಗಳೊಂದಿಗೆ ಸಂಯುಕ್ತ ವ್ಯವಸ್ಥೆ

[ಬದಲಾಯಿಸಿ]

ಬೆಲ್ಜಿಯಂ

[ಬದಲಾಯಿಸಿ]
ಮುಖ್ಯ ಅನುಚ್ಛೇದಗಳು: ಬೆಲ್ಜಿಯಾದ ಸಂಯುಕ್ತ ಸರ್ಕಾರ , ಬೆಲ್ಜಿಯಾದ ಸಂಯುಕ್ತ ಸಂಸತ್ತು ಮತ್ತು ಸಮುದಾಯಗಳು, ಧರ್ಮಗಳು ಮತ್ತು ಬೆಲ್ಜಿಯಾದ ಭಾಷೆಗಳು

ಬೆಲ್ಜಿಯಂ ರಾಜ್ಯದಲ್ಲಿನ ಸಂಯುಕ್ತ ವ್ಯವಸ್ಥೆಯು ಅಭಿವೃದ್ದಿಯಾಗುತ್ತಿರುವ ವ್ಯವಸ್ಥೆಯಾಗಿದೆ. ಬೆಲ್ಜಿಯಾದ ಸಂಯುಕ್ತ ವ್ಯವಸ್ಥೆಯು ಭಾಷಾವಾರು ಸಮುದಾಯಗಳು (ಫ್ರೆಂಚ್ ಮತ್ತು ಡಚ್, ಮತ್ತು ಸ್ವಲ್ಪ ಪ್ರಮಾಣದ ಜರ್ಮನ್) ಮತ್ತು ಆರ್ಥಿಕ ವಲಯ(ಬ್ರುಸೆಲ್ಸ್, ಫ್ಲಂಡರ್ಸ್ ಮತ್ತು ವಾಲೋನಿಯಾ)ಗಳೆರಡನ್ನೂ ಪ್ರತಿನಿಧಿಸುತ್ತದೆ. ಇವುಗಳು ಬೆಲ್ಜಿಯಂನಲ್ಲಿನ ಭಾಷಾವಾರು ಪ್ರದೇಶಗಳನ್ನು ಹೋಲುತ್ತದೆ. ವ್ಯವಹಾರಿಕವಾಗಿ ನಾಲ್ಕು ಭಾಷಾ ಪ್ರದೇಶಗಳಿದ್ದರೂ ಪ್ರಾಯೋಗಿಕ ಉದ್ದೇಶಗಳಲ್ಲಿ ಡಚ್ ಮತ್ತು ಫ್ರೆಂಚ್‌ ಅನ್ನು ಮಾತ್ರ ಬಳಸಲಾಗುತ್ತದೆ:

  • ಬ್ರುಸೆಲ್ಸ್ ವ್ಯವಹಾರಿಕವಾಗಿ ದ್ವಿಭಾಷೀ ಪ್ರದೇಶವಾದೂ ಫ್ರೆಂಚ್-ಮಾತನಾಡುವ ಹೆಚ್ಚು ಜನರನ್ನು ಹೊಂದಿದೆ.[]
  • ಪ್ಲಂಡರ್ಸ್ ಬೆಲ್ಜಿಯಂನ ಡಚ್‌-ಮಾತನಾಡುವ ಜನರು ಹೆಚ್ಚಾಗಿರುವ ಪ್ರದೇಶವಾಗಿದೆ, i.e ಫ್ಲೆಮಿಶ್ ಸಮುದಾಯ.
  • ಜರ್ಮನ್ ಮಾತನಾಡುವ ಸಮುದಾಯವು ಅದರ ಚಿಕ್ಕ ಗಾತ್ರದಿಂದಾಗಿ(ಸುಮಾರು ಒಂದು ಪ್ರತಿಶತ) ಬೆಲ್ಜಿಯಂ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಪ್ರಭಾವವನ್ನು ಹೊಂದಿಲ್ಲ.
  • ವಾಲೋನಿಯಾವು ಪೂರ್ವ ಕಾಂಟೂನ್ಸ್‌ನ್ನು ಹೊರತುಪಡಿಸಿ ಫ್ರೆಂಚ್‌-ಮಾತನಾಡುವ ಪ್ರದೇಶವಾಗಿದೆ. ಡಚ್‌ನ ನಂತರ ಫ್ರೆಂಚ್ ಎರಡನೇ ಅತ್ಯಂತ ಹೆಚ್ಚು ಮಾತನಾಡುವ ಬೆಲ್ಜಿಯಂನ ಮೊದಲ ಭಾಷೆಯಾಗಿದೆ. ಬೆಲ್ಜಿಯಂನ ಫ್ರೆಂಚ್‌-ಮಾತನಾಡುವ ಸಮುದಾಯದಲ್ಲಿ, ವಾಲೋನಿಯಾ ಮತ್ತು ಬ್ರುಸೆಲ್ಸ್‌ನ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿಗಾಗಿ ಭೌಗೋಳಿಕವಾದ ಮತ್ತು ರಾಜಕೀಯವಾದ ಭಿನ್ನತೆಗಳಿವೆ.[]

ಬೆಲ್ಜಿಯಾದ ರಾಜಕೀಯ ವಾತಾವರಣವು ಸಾಮಾನ್ಯವಾಗಿ ಎರಡು ಘಟಕಗಳನ್ನು ಹೊಂದಿದೆ: ಡಚ್‌-ಮಾತನಾಡುವ ಜನರನ್ನು ಪ್ರತಿನಿಧಿಸುವ ಡಚ್‌-ಭಾಷೆಯ ರಾಜಕೀಯ ಪಕ್ಷಗಳು, ಮತ್ತು ವಾಲೋನಿಯಾ ಮತ್ತು ಬ್ರುಸೆಲ್ಸ್‌ನಲ್ಲಿ ಹೆಚ್ಚಾಗಿರುವ ಜನಸಂಖ್ಯೆಯನ್ನು ಪ್ರತಿನಿಧಿಸುವ ಫ್ರೆಂಚ್‌-ಮಾತನಾಡುವ ಪಕ್ಷಗಳು. ಬ್ರುಸೆಲ್ಸ್ ಪ್ರದೇಶವು ಮೂರನೆ ಘಟಕವಾಗಿ ಹೊರಹೊಮ್ಮುತ್ತದೆ.[೧೦] ಬ್ರುಸೆಲ್ಸ್‌ನ ವಿಶೇಷ ಸ್ಥಾನವನ್ನೊಳಗೊಂಡಿದ್ದಕ್ಕಾಗಿ ಈ ನಿರ್ಧಿಷ್ಟ ದ್ವಿಸಂಯುಕ್ತ ವ್ಯವಸ್ಥೆಯು, ಚಿಕ್ಕದಾಗಿದ್ದರೂ ಸಹ ಕೆಲವು ರಾಜಕೀಯ ವಿದ್ಯಮಾನಗಳನ್ನೊಳಗೊಂಡಿದೆ ಅವು ಡಚ್‌/ಫ್ರೆಂಚ್‌-ಭಾಷೆಯ ರಾಜಕೀಯ ವಿಭಾಗಗಳಲ್ಲಿ ಹೋರಾಟವನ್ನುಂಟು ಮಾಡುತ್ತದೆ. ಈ ಚಿಕ್ಕ ವಿದ್ಯಮಾನಗಳೊಂದಿಗೆ ಕೊನೆಯ ತೀರ್ಮಾನವನ್ನು ತೆಗೆದುಕೊಳ್ಳುವಾಗ ಒಪ್ಪಂದದ ಮೂಲಕ ಮಾತ್ರ ಸಾಧ್ಯವಾಗುತ್ತದೆ. ದ್ವಿ ಸಂಯುಕ್ತ ವ್ಯವಸ್ಥೆ ಮಾದರಿಯು ಕೆಲವು ವಿಶೇಷ ಲಕ್ಷಣಗಳನ್ನು ಹೊಂದಿದ್ದು ಸಾಮಾನ್ಯವಾಗಿ ಸಾರ್ವಭೌಮ ಸಂಯುಕ್ತವ್ಯವಸ್ಥೆಯನ್ನು ಹುಟ್ಟುಹಾಕುತ್ತದೆ. ಮತ್ತು ಬೆಲ್ಜಿಯಾದ ಸಂಯುಕ್ತ ವ್ಯವಸ್ಥೆಯ ಭವಿಷ್ಯವನ್ನು ವಿವಾದಾತ್ಮಕವಾಗಿಸುತ್ತದೆ.[೧೧][೧೨]

ಇನ್ನೊಂದು ರೀತಿಯಲ್ಲಿ ಬೆಲ್ಜಿಯಾದ ಸಂಯುಕ್ತ ವ್ಯವಸ್ಥೆಯು ಮೂರು ಘಟಕಗಳಿಂದ ಸಂಯುಕ್ತಗೊಂಡಿದೆ. ವಾಲೋನಿಯಾ ಮತ್ತು ಬ್ರುಸೆಲ್ಸ್ ಸಂಸತ್ತಿನಲ್ಲಿ ಸಂಯುಕ್ತ ವ್ಯವಸ್ಥೆಯಲ್ಲಿನ ಬ್ರುಸೆಲ್ಸ್‌ನ ಸ್ಥಳದ ಬಗೆಗಿನ ಸರಿಯಾದ ಗೊತ್ತುವಳಿಯು ಅಂಗೀಕೃತವಾಯಿತು.[೧೩][೧೪] ಗೊತ್ತುವಳಿಯು ಸಂಯುಕ್ತ ವ್ಯವಸ್ಥೆಯ ಪರವಾಗಿರುವ ಎರಡು ಘಟಕಗಳ ಡಚ್ ಮಾತನಾಡುವ ಜನರ ಪಕ್ಷದ ವಿರುದ್ಧವಾಗಿ ಜಾರಿಯಾಯಿತು (i.e.ಬೆಲ್ಜಿಯಂನ ಡಚ್‌ ಮತ್ತು ಫ್ರೆಂಚ್‌ ಸಮುದಾಯಗಳು). ಆದಾಗ್ಯೂಒಂದು ಪಕ್ಷದ ಹೊರತಾಗಿ ಬ್ರುಸೆಲ್ಸ್ ರಾಜಧಾನಿ ಪ್ರದೇಶದ ಸಂಸತ್ತಿನ ಫ್ಲೆಮಿಶ್ ಪ್ರತಿನಿಧಿಗಳು ಬ್ರುಸೆಲ್ಸ್ ಗೊತ್ತುವಳಿಯ ಪರವಾಗಿ ಮತ ಚಲಾಯಿಸಿದರು. ವಲೂನ್‌ ಸಂಸತ್ತಿನ ಸಭಾದ್ಯಕ್ಷ ಜುಲೈ 17, 2008 ರಂದು ಹೀಗೆ ಹೇಳಿದನು, "ಬ್ರುಸೆಲ್ಸ್ ಒಂದು ಮನೋಭಾವವನ್ನು ಹೊಂದಬೇಕು ".[೧೫] ಬ್ರುಸೆಲ್ಸ್' ಸಂಸತ್ತು ಗೊತ್ತುವಳಿಯನ್ನು ಜುಲೈ 18, 2008ರಂದು ಅಂಗೀಕರಿಸಿತು:

ಬ್ರುಸೆಲ್ಸ್-ರಾಜಧಾನಿ ಪ್ರದೇಶದ ಸಂಸತ್ತು ಬ್ರುಸೆಲ್ಸ್‌ನ ಬೆಲ್ಜಿಯಾ ರಾಜ್ಯದ ಸುಧಾರಣೆಯ ಮಾತುಕತೆಯಲ್ಲಿ ತನ್ನ ಅಸ್ಥಿತ್ವದ ಹಕ್ಕುಕೇಳಿಕೆಯ ಗೊತ್ತುವಳಿಯನ್ನು ಹೆಚ್ಚು ಬಹುಮತದೊಂದಿಗೆ ಅಂಗೀಕರಿಸಿತು. [೧೪] ಜುಲೈ 18, 2008

ಬೆಲ್ಜಿಯಾದ ಸಂಯುಕ್ತ ವ್ಯವಸ್ಥೆಯ ಈ ದೃಷ್ಟಿಕೋನವು ವಿಭಜನೆಯಲ್ಲುಂಟಾಗುವ ಕಷ್ಟಗಳನ್ನು ವಿವರಿಲು ಸಹಕಾರಿಯಾಗಿದೆ; ಬ್ರುಸೆಲ್ಸ್ ತನ್ನ ಪ್ರಾಮುಖ್ಯತೆಯೊಂದಿಗೆ ವಾಲೋನಿಯಾ ಮತ್ತು ಫ್ಲಂಡರ್ಸ್ ಮತ್ತು ಪರಸ್ಪರ ಒಂದಕ್ಕೊಂದು ಸಂಪರ್ಕ ಹೊಂದಿದೆ. ಬೆಲ್ಜಿಯಾ ವ್ಯವಸ್ಥೆಯಲ್ಲಿನ ಸಾರ್ವಭೌಮ ಒಕ್ಕೂಟದಲ್ಲಿನ ಈ ವಿಶೇಷ ಲಕ್ಷಣಗಳನ್ನು ಇದು ಅಳಿಸಿಹಾಕುವುದಿಲ್ಲ.

ಇತರ ಉದಾಹರಣೆಗಳು

[ಬದಲಾಯಿಸಿ]
ಇರಾಕಿ ಕರ್ದಿಸ್ತಾನ್ ರೇಶಿಯೋದ ಆಧೀಕೃತ ಧ್ವಜದ ಅನುಪಾತ: 2:3

ದ್ವಿಮುಖ ಸಂಯುಕ್ತ ವ್ಯವಸ್ಥೆಯ ಪ್ರಚಲಿತ ಉದಾಹರಣೆಗಳು:

ದ್ವಿಮುಖ ಸಂಯುಕ್ತ ವ್ಯವಸ್ಥೆಯ ಐತಿಹಾಸಿಕ ಉದಾಹರಣೆಗಳು ಯಾವುವೆಂದರೆ:

ಝೆಕಸ್ಲೊವಾಕಿಯ, 1993ರಲ್ಲಿ ಝೆಕ್ ರಿಪಬ್ಲಿಕ್ ಮತ್ತು ಸ್ಲೊವಾಕಿಯ ಬೇರೆಯಾಗುವವರೆಗೆ.

ಯುಗೊಸ್ಲಾವಿಯದ ಸಂಯುಕ್ತ ಗಣರಾಜ್ಯ, 1992 ರಿಂದ 2003 ಆಗ ಇದು ಸೆರ್ಬಿಯ ಮತ್ತು ಮೊಂಟೆನಿಗ್ರೊಗಳ ರಾಜ್ಯ ಒಕ್ಕೂಟ ಎನ್ನುವ ಹೆಸರಿನ ಒಂದು ಮಹಾಒಕ್ಕೂಟವಾಯಿತು.

ಮೊಂಟೆನಿಗ್ರೊ ಇದರ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿದ್ದರಿಂದ ಈ ಮಹಾಒಕ್ಕೂಟ 2006ರಲ್ಲಿ ಅಂತ್ಯವಾಯಿತು.

1960ರ ಸಿಪ್ರಸ್‌ನ ಸಂವಿಧಾನ ಇದೇ ರೀತಿಯ ವಿಚಾರಗಳ ಮೇಲೆ ಆಧಾರವಾಗಿತ್ತು, ಆದರೆ ಗ್ರೀಕರು ಮತ್ತು ಟರ್ಕಿಯರ ಒಕ್ಕೂಟ ವಿಫಲವಾಯಿತು.

ಇದೇ ರೀತಿ ತಾಂಜೆನಿಯ, ಇದು ತಾಂಜೆನಿಕ ಮತ್ತು ಝಾಂಝೀಬಾರ್‌ಗಳ ಒಕ್ಕೂಟವಾಗಿದೆ.

2005, ಅಕ್ಟೋಬರ್ 15ರಂದು ಇರಾಕ್ ಸಂಯುಕ್ತ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು, ಮತ್ತು ದೇಶದ ಮೊದಲ ಮತ್ತು ಈಗಿನ ಏಕೈಕ ಸಂಯುಕ್ತ ವ್ಯವಸ್ಥೆಯ ಪ್ರದೇಶವಾಗಿ ಇರಾಕಿನ ಕುರ್ದಿಸ್ತಾನ್ ಪ್ರದೇಶ ವಿಧ್ಯುಕ್ತವಾಗಿ ಗುರುತಿಸಲ್ಪಟ್ಟಿದೆ.

ಸಂಯುಕ್ತ ಘಟಕಗಳನ್ನು ಸ್ಥಾಪಿಸುವ ಇರಾಕಿನ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇರಾಕಿನ ಸಂವಿಧಾನವನ್ನು ನೋಡಿ.

ಕ್ರಿಶ್ಚಿಯನ್ ಚರ್ಚ್

[ಬದಲಾಯಿಸಿ]

ಸಂಯುಕ್ತ ವ್ಯವಸ್ಥೆ ಶಿಲ್ಪಶಾಸ್ತ್ರದ (ಚರ್ಚ್‌ನ ಬೋಧನೆ) ಭಾವಸಂಕೇತಗಳಲ್ಲಿ ಸಹ ಕಾಣಬಹುದು.

ಉದಾಹರಣೆಗೆ, ಪ್ರೆಸ್‌ಬಿಟೆರಿಯನ್ ಚರ್ಚ್‌ನ ಆಡಳಿತ ಸಂಸತ್ತಿನ ಸಂಬಂಧದ ಗಣತಂತ್ರವಾದವನ್ನು (ರಾಜಕೀಯ ಸಂಯುಕ್ತ ತತ್ವ ದ ಒಂದು ರೂಪ) ಹೋಲುತ್ತದೆ.

ಪ್ರೆಸ್‌ಬಿಟೆರಿಯನ್‌ ಗುಂಪುಗಳಲ್ಲಿ, ಚುನಾಯಿತ ಹಿರಿಯ ಜನರಿಂದ ಸ್ಥಳೀಯ ಚರ್ಚಿನ ಆಡಳಿತ ನಡೆಯುತ್ತದೆ, ಇವರಲ್ಲಿ ಕೆಲವರು ಸಚಿವ ಸಂಪುಟಕ್ಕೆ ಸಂಬಂಧಿಸಿದವರಾಗಿರುತ್ತಾರೆ

ನಂತರ ಪ್ರತಿ ಚರ್ಚುಗಳು ಪ್ರತಿನಿಧಿಗಳನ್ನು ಅಥವಾ ಆಯುಕ್ತರುಗಳನ್ನು ಮೊದಲು ಪ್ರೆಸ್‌ಬಿಟರಿಗಳಿಗೆ ಮತ್ತು ನಂತರ ಶಾಸನ ಸಭೆಗೆ ಕಳುಹಿಸುತ್ತವೆ.

ಶಾಸನ ಸಭೆಯ ಪ್ರತಿ ಉನ್ನತ ಸ್ತರಗಳು ಇವುಗಳ ಕ್ಷೇತ್ರದ ಸದಸ್ಯರ ಮೇಲೆ ಆಡಳಿತ ಮಾಡುವ ಅಧಿಕಾರವನ್ನು ಹೊಂದಿರುತ್ತವೆ. ಈ ಸರಕಾರೀ ರಚನೆಯಲ್ಲಿ, ಪ್ರತಿ ಘಟಕ ತನ್ನಷ್ಟಕ್ಕೆ ಪ್ರಭುತ್ವದ ಕೆಲವು ಹಂತಗಳನ್ನು ಹೊಂದಿರುತ್ತದೆ. ರಾಜಕೀಯ ಸಂಯುಕ್ತ ವಾದ ದಲ್ಲಿರುವಂತೆ ಪ್ರೆಸ್ಬಿಟೇರಿಯನ್ ಶಿಲಾಶಾಸನದಲ್ಲಿ ಹಂಚಿಕೆಯ ಪ್ರಭುತ್ವವಿದೆ.

ಇತರೇ ಶಿಲಾಶಾಸನಗಳೂ ಕೂಡ ಸಂಯುಕ್ತವಾದದ ಮೂಲಗಳಿರುವ ಕೆಲವು ಅಂಶಗಳನ್ನು ಹೊಂದಿವೆ. ಇದು ಕೆಲವು ಅತಾರ್ಕಿಕವಾದ ಒಟ್ಟೂಗೂಡಿರುವ ಶಿಲಾಶಾಸನಗಳಲ್ಲೂ ಕಂಡುಬರುತ್ತದೆ. ಮತ್ತು ಇದು ಕೆಲವು ಚಿತ್ರಿತ ಶಿಲಾಶಾಸನಗಳಲ್ಲಿ ಅಧಿಕಾರ ವರ್ಗೀಕರಣದ ರೀತಿಯಲ್ಲೂ ಕಂಡುಬಂದಿದೆ.

ರಾಜಕೀಯ ಸಂಯುಕ್ತ ವ್ಯವಸ್ಥೆಯ (ಮಾನವ ಪ್ರತಿಷ್ಥಾಪನೆಗಳಲ್ಲಿರುವ ಸಂಯುಕ್ತ ವಾದ; ಧರ್ಮ ಶಾಸ್ತ್ರೀಯ ಸಂಯುಕ್ತ ವ್ಯವಸ್ಥೆಗೆ ವಿರುದ್ಧವಾದ) ಮೊದಲ ಮೂಲ ಬೈಬಲ್‌ನಲ್ಲಿ ಕಂಡುಬಂದ ಕ್ರೈಸ್ತಪಾದ್ರಿಗಳ ಸಂಯುಕ್ತ ವ್ಯವಸ್ಥೆಯಾಗಿದೆ ಎಂದು ಕೆಲವು ಕ್ರಿಶ್ಚಿಯನ್ನರು ವಾದಿಸುತ್ತಾರೆ. ಹೊಸ ಒಡಂಬಡಿಕೆಯಲ್ಲಿ ವಿವರಿಸಿದಂತೆ (ಮತ್ತು ಬಹಳಷ್ಟನ್ನು ಆದೇಶಿಸಲಾಗಿದೆ) ಮುಂಚಿನ ಕ್ರಿಶ್ಚಿಯನ್ ಚರ್ಚುಗಳ ರಚನೆಯನ್ನು ಅವರು ಉಲ್ಲೇಖಿಸುತ್ತಾರೆ. ಇದನ್ನು ನಿರ್ದಿಷ್ಟವಾಗಿ ಜೆರುಸಲೇಮ್‌ನ ಸಮಿತಿಯಲ್ಲಿ ಪ್ರದರ್ಶಿಸಲಾಯಿತು, ಕಾಯಿದೆಗಳ 15 ನೇ ಅಧ್ಯಾಯದಲ್ಲಿ ವಿವರಿಸಲಾಯಿತು, ಇಲ್ಲಿ ಚರ್ಚಿನ ಆಡಳಿತ ನಡೆಸಲು ಧರ್ಮ ಪ್ರಚಾರಕರು ಮತ್ತು ಹಿರಿಯರು ಒಂದು ಕಡೆ ಸೇರುತ್ತಾರೆ; ಧರ್ಮ ಪ್ರಚಾರಕರು ಸಾರ್ವತ್ರಿಕ ಚರ್ಚುಗಳನ್ನು ಪ್ರತಿನಿಧಿಸುತ್ತಾರೆ, ಮತ್ತು ಹಿರಿಯರು ಸ್ಥಳೀಯ ಚರ್ಚುಗಳ ಪ್ರತಿನಿಧಿಗಳಾಗಿರುತ್ತಾರೆ. ಈ ದಿನದಲ್ಲಿ ಸಂಯುಕ್ತ ವ್ಯವಸ್ಥೆಯ ಘಟಕಗಳನ್ನು ಸುಮಾರು ಎಲ್ಲ ಕ್ರಿಶ್ಚಿಯನ್ ಗುಂಪುಗಳಲ್ಲಿ ಕಾಣಬಹುದು, ಇತರರಿಗಿಂತ ಸ್ವಲ್ಪ ಹೆಚ್ಚು; ಆದಾಗ್ಯೂ, ರೋಮನ್ ಕ್ಯಾಥೊಲಿಕ್ ಚರ್ಚ್ ಸಂಪೂರ್ಣವಾಗಿ ಈ ಮಾದರಿಯನ್ನು ತಿರಸ್ಕರಿಸಿದೆ ಬದಲಾಗಿ ಪೋಪನ ಸಂಪೂರ್ಣ ಆಡಳಿತ ಮತ್ತು ಹೆಚ್ಚು ಕೇಂದ್ರೀಕೃತ, ಮೇಲಿನಿಂದ ಕೆಳಗಿನ ಆಡಳಿತ ರಚನೆಯ ಬಗ್ಗೆ ಹೆಚ್ಚಿನ ಒಲವು ತೋರಿದೆ.

ಇವನ್ನೂ ನೋಡಿ

[ಬದಲಾಯಿಸಿ]
  • ಅಸಮವಾದ ಸಂಯುಕ್ತ ವ್ಯವಸ್ಥೆ
  • ಸಂಯುಕ್ತ ವ್ಯವಸ್ಥೆ
  • ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸಂಯುಕ್ತ ವ್ಯವಸ್ಥೆ
  • ಪ್ರತಿ-ಸಂಯುಕ್ತ ವ್ಯವಸ್ಥೆ
  • ಯೂರೋಪ್‌ ಒಕ್ಕೂಟ
  • ಸಂಯುಕ್ತ ರಾಷ್ಟ್ರದ ಒಕ್ಕೂಟ
  • ಮಹಾಒಕ್ಕೂಟ
  • Consociationalism
  • ಸಂಯುಕ್ತವಾದಿ
  • ಸಂಯುಕ್ತವಾದಿ ಸಮಾಜ
  • ಒಕ್ಕೂಟ
  • ವರ್ಗೀಕರಣ (ಪಿಲ್ಲರೈಸೇಶನ್)
  • ಪೂರಕ ತತ್ವಗಳು
  • ಪದರು ಸಂಯುಕ್ತ ವ್ಯವಸ್ಥೆ
  • ರಾಜ್ಯಗಳ ಹಕ್ಕುಗಳು
  • ಸಹಕಾರಿ ಸಂಯುಕ್ತ ವ್ಯವಸ್ಥೆ
  • ಪ್ರಜಾಪ್ರಭುತ್ವ ವಿಶ್ವ ಸಂಯುಕ್ತವಾದಿಗಳು, ಒಂದು ಪ್ರಜಾಪ್ರಭುತ್ವ ಸಂಯುಕ್ತ ರಾಷ್ಟ್ರದ ವಿಶ್ವ ಸರ್ಕಾರಕ್ಕಾಗಿ ವಾದಿಸುವ ಒಂದು ಸಾರ್ವಜನಿಕ ಪ್ರಜೆಗಳ ಸಂಸ್ಥೆ.

ಉಲ್ಲೇಖಗಳು

[ಬದಲಾಯಿಸಿ]
  1. "1946ರಲ್ಲಿ ವಿನ್ಸಟನ್ ಚರ್ಚಿಲ್ ಅವರ ಭಾಷಣ". Archived from the original on 2010-08-20. Retrieved 2010-10-29.
  2. "UK Politics: Talking Politics The West Lothian Question". BBC News. 1998-06-01. Retrieved 2008-02-07.
  3. ಇಂಡಿಯನ್ ಕಾನ್ಸ್ಟಿಟ್ಯೂಶನಲ್ ವರ್ಕ್ ದಿ ಫಿಲಾಸಫಿ ಆಫ್ ದಿ ಕಾನ್ಸ್ಟಿಟ್ಯೂಶನ್ , ಎನ್‌ಸಿಇಆರ್‌ಟಿ, ಪುಟ. 232.
  4. ಇಂಡಿಯನ್ ಕಾನ್ಸ್ಟಿಟ್ಯೂಶನಲ್ ವರ್ಕ್ [೧] ದಿ ಫಿಲಾಸಫಿ ಆಫ್ ದಿ ಕಾನ್ಸ್ಟಿಟ್ಯೂಶನ್ , ಎನ್‌ಸಿಇಆರ್‌ಟಿ, ಪುಟ. 233.
  5. ಜಾನ್ಸನ್, ಎ "ಸಂಯುಕ್ತ ವ್ಯವಸ್ಥೆ: ದಿ ಇಂಡಿಯನ್ ಎಕ್ಸ್‌ಪೀರಿಯನ್ಸ್ ", ಎಚ್ಎಸ್‌ಆರ್‌ಸಿ‌ ಪ್ರೆಸ್ ,1996, ಪುಟ 3, ISBN 0796916993
  6. "THE CONSTITUTION OF THE UNITED STATES OF AMERICA With Explanatory Notes". U.S. Department of State's Bureau of International Information Programs. Archived from the original on 2008-03-16. Retrieved 2008-02-07.
  7. "Constitutional Topic: Federalism". The U.S. Constitution Online. Retrieved 2008-02-07.
  8. (Dutch)”Taalgebruik in Brussel en de plaats van het Nederlands. Enkele recente bevindingen”, ರುಡಿ ಜಾನ್ಸೆನ್ಸ್, ಬ್ರುಸೆಲ್ಸ್ ಸ್ಟಡೀಸ್, ನವೆಂಬರ್ 13, 7 ಜನವರಿ 2008 (ಪುಟ 4ನ್ನು ನೋಡಿ).
  9. ಚಾರಿತ್ರಿಕವಾಗಿ, ವಲೂನ್‌ಗಳು ಮೂರು ಭಾಗಗಳನ್ನು ಹೊಂದಿದ ಸಂಯುಕ್ತ ವ್ಯವಸ್ಥೆ ಹೊಂದಿದ್ದರು ಮತ್ತು ಪ್ಲೆಮಿಂಗ್‌(ಫ್ಲಾಂಡರ್ಸ್‌ನ ನಿವಾಸಿ)ಗಳು ಎರಡು ಭಾಗಗಳನ್ನು ಹೊಂದಿದ ಸಂಯುಕ್ತ ವ್ಯವಸ್ಥೆ ಹೊಂದಿದ್ದರು. (ನೋಡಿ: Witte, Els & Craeybeckx, Jan. Politieke geschiedenis van België. Antwerpen, SWU, ಪುಪು. 455, 459-460.) ಈ ಭಿನ್ನತೆಯು ಒಂದು ಮುಖ್ಯ ಅಂಶವಾಗಿದ್ದು ಇದು ಬೆಲ್ಜಿಯಂನ ವಿಷಯವನ್ನು ಸಂಕೀರ್ಣಗೊಳಿಸಿದೆ. ವಲೂನ್‍ಗಳು ತಮ್ಮ ಆರ್ಥಿಕತೆಯನ್ನು ರಕ್ಷಿಸಿಕೊಳ್ಳಲು ಬಯಸಿದರೆ ಫ್ಲೆಮಿಂಗರು ತಮ್ಮ ಭಾಷೆಯನ್ನು ರಕ್ಷಿಸಿಕೊಳ್ಳಲು ಬಯಸಿದರು: ವಲೂನ್‌ ಚಳುವಳಿಯಲ್ಲಿ, ವಾಲೋನಿಯಾ ಫ್ರೆಂಚ್‌ ಸಾಂಸ್ಕೃತಿಕ ಪ್ರದೇಶ ಎಂದು ದೃಢವಾಗಿ ಹೇಳುವುದನ್ನು ನಿಲ್ಲಿಸಲಿಲ್ಲ. ಆದರೆ ಮೊದಲ ಆದ್ಯತೆ ಸಾಂಸ್ಕೃತಿಕ ಸಂಘರ್ಷವಾಗಿರದೇ, ರಾಜಕೀಯ ಅಲ್ಪಸಂಖ್ಯಾತತೆ ಮತ್ತು ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಡಲು ಮಾತ್ರ ಹೆಚ್ಚು ಆಸಕ್ತಿ ವಹಿಸಿದ್ದರು. (ವಾಲೋನಿಯಾ ಟುಡೆ - ದಿ ಸರ್ಚ್ ಫಾರ್ ಆ‍ಯ್‌ನ್ ಐಡೆಂಟಿಟಿ ವಿದೌಟ್ ನ್ಯಾಶನಾಲಿಸ್ಟ್ ಮೇನಿಯಾ - (1995)
  10. ಬ್ರುಸೆಲ್ಸ್-ಕ್ಯಾಪಿಟಲ್ ರೀಜನ್‌ನ ಸಚಿವ-ಅಧ್ಯಕ್ಷರಾದ ಚಾರ್ಲ್ಸ್ ಪಿಕ್, 2008ರ ಸೆಪ್ಟೆಂಬರ್‌ನಲ್ಲಿ ನಮೂರ್ ಎಟ್ ದಿ ನ್ಯಾಷನಲ್ ವಲೂನ್‌ ಫಿಸ್ಟ್ ಸಂದರ್ಭದಲ್ಲಿ ಈ ರೀತಿ ಹೇಳಿದ್ದಾರೆ: ಬ್ರುಸೆಲ್ಸ್‌ನ ಹೊರತಾಗಿ ಬೆಲ್ಜಿಯಂ ದೇಶದ ಭವಿಷ್ಯದ ಸಂಸ್ಥೆಗಳ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ. (ಫ್ರೆಂಚ್‌ Il n'est d'ailleurs, pas question d'imaginejtr un débat institutionnel dont Bruxelles serait exclu. [೨]) ಬೆಲ್ಜಿಯಂ ದೇಶದ ಸಮಾಲೋಚನೆಯಲ್ಲಿ ಬ್ರುಸೆಲ್ಸ್-ಕ್ಯಾಪಿಟಲ್ ರೀಜನ್ ಸುಧಾರಣೆಯ ಬಗ್ಗೆ ವಿಶೇಷವಾದ ಹಕ್ಕನ್ನು ಮತ್ತು ಸ್ಥಾನವನ್ನು ಪಡೆದುಕೊಂಡಿದೆ. (French‌ Pendant 18 ans, Bruxelles est demeurée sans statut (...) L'absence de statut pour Bruxelles s'expliquait par la différence de vision que partis flamands et partis francophones en avaient: [les partis flamands étaient] allergiques à la notion de Région (...) les francophones (...) considéraient que Bruxelles devait devenir une Région à part entière (...) Les partis flamands ont accepté [en 1988] la création d'une troisième Région et l'exercice par celle-ci des mêmes compétences que celles des deux autres... ಸಿ.ಇ. ಲಾಗಾಸ್, Les nouvelles institutions politiques de la Belgique et de l'Europe , ಎರಸ್ಮ್, ನಮೂರ್, 2003, ಪುಪು. 177- 178 ISBN 2-87127-783-4)
  11. "Brussels". Encyclopædia Britannica. Archived from the original on 2013-08-12. Retrieved 2010-10-29.
  12. "Bruxelles dans l'oeil du cyclone" (in French). France 2. 2007-11-14. Archived from the original on 2009-02-01. Retrieved 2010-10-29.{{cite web}}: CS1 maint: unrecognized language (link)
  13. La Libre Belgique 17 juillet 2008
  14. ೧೪.೦ ೧೪.೧ La Libre Belgique, 19 juillet 2008
  15. "Le Vif". Archived from the original on 2008-09-30. Retrieved 2010-10-29.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Autonomous types of first-tier administration