ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Nimitha s 13

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಗಳೂರು ನಮ್ಮ ಹೆಮ್ಮೆಯ ನಗರ. ನಮ್ಮ ಈ ನಗರವು ಬಹು ಧರ್ಮಗಳ, ಬಹು ಭಾಷೆಗಳ ಒಂದು ಸುಂದರ ಸಮ್ಮಿಲನ. ಈ ವೈವಿಧ್ಯತೆಯು ನಮ್ಮ ನಗರದ ನಾಮಕರಣದಲ್ಲೂ ಎದು ಕಾಣುತಿದೆ. ಇಲ್ಲಿನ ಪ್ರತಿಯೊಂದು ಭಾಷಿಗರೂ ತಮ್ಮದೇಆದ ಹೆಸರನ್ನು ನಮ್ಮ ನಗರಕ್ಕೆ ನೀಡಿದ್ದಾರೆ. ನಮ್ಮ ಈ ನಗರವು ಕನ್ನಡದಲ್ಲಿ ಮಂಗಳೂರು, ಆಂಗ್ಲ ಭಾಷೆಯಲ್ಲಿ Mangalore, ತುಳುವಿನಲ್ಲಿ ಕುಡ್ಲ, ಕೊಂಕಣಿಯಲ್ಲಿ ಕೊಡಿಯಾಲ, ಬ್ಯಾರಿ ಭಾಷೆಯಲ್ಲಿ ಮೈಕಲ, ಮಲಯಾಳಂನಲ್ಲಿ ಮಂಗಲಾಪುರಂ, ಉರ್ದು ಭಾಷೆಯಲ್ಲಿ ಕೌಡಾಲ್ ಮತ್ತು ಅರೇಬಿಕ್ ಭಾಷೆಯಲ್ಲಿ ಮಂಜುರುರ್ ಅಥವಾ ಮಂಜರುನ್ ಎಂದು ಬಹು ನಾಮಗಳಿಂದ ಗುರುತಿಸಲ್ಪಡುತಿದೆ. ಮಂಗಳೂರು ಎಂಬುದು ಅಧಿಕೃತ ಹೆಸರು. ಇಷ್ಟೆಲ್ಲಾ ಹೆಸರುಗಳಿದ್ದರೂ ಮಂಗಳೂರು ಎಂಬ ಹೆಸರಿನ ನಗರ ಇಡೀ ಪ್ರಪಂಚದಲ್ಲಿ ನಮ್ಮದೊಂದೇ ಎಂಬ ಒಂದು ತಪ್ಪು ಕಲ್ಪನೆಯಲ್ಲಿ ನಾನಿದ್ದೆನು. ನನ್ನ ಈ ತಿಳುವಳಿಕೆ ತಪ್ಪು ಎಂದು ನನಗೆ ದೂರದ ಡೆಹ್ರಾಡೂನ್ ನಗರದಲ್ಲಿ ೧೯೯೧ನೇ ಇಸವಿಯಲ್ಲಿ ಅರಿವಿಗೆ ಬಂತು.

ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂವಿಜ್ಞಾನ ವಿಭಾಗದ ಎರಡನೇ ವರ್ಷದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಾದ ನಾವು ಶೈಕ್ಷಣಿಕ ಪ್ರವಾಸದ ಅಂಗವಾಗಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ ಕೇಂದ್ರ ಕಛೇರಿ ಇರುವ ದೂರದ ಡೆಹ್ರಾಡೂನ್ ನಗರಕ್ಕೆ ಭೇಟಿ ನೀಡಿದ್ದೆವು. ದಿನದಲ್ಲಿ ONGC ಪ್ರಯೋಗಾಲಯ ಮತ್ತು ಇತರ ಸೌಕರ್ಯಗಳ ಭೇಟಿಯ ಬಳಿಕ ನಾವು ಡೆಹ್ರಾಡೂನ್ ನಗರ ವೀಕ್ಷಣೆಗೆ ತೆರಳಿದೆವು. ಈ ಸಮಯದಲ್ಲಿ ಅಲ್ಲಿನ ಸ್ಥಳೀಯರ ಜೊತೆಗೆ ಮಾತುಕತೆಯ ಸಂದರ್ಭದಲ್ಲಿ ನಾವು ಮಂಗಳೂರಿನಿಂದ ಬಂದವರು ಎಂದು ತಿಳಿಸಿದಾಗ, ಅವರು ಅಲ್ಲಿ ಹತ್ತಿರದಲ್ಲೇ ಒಂದು ಮಂಗಳೂರು ಎಂಬ ಊರು ಇರುವ ವಿಷಯ ನಮ್ಮ ಗಮನಕ್ಕೆ ತಂದರು. ಇಡೀ ಪ್ರಪಂಚದಲ್ಲಿ ಮಂಗಳೂರು ಹೆಸರಿನ ನಗರ ನಮ್ಮದೊಂದೇ ಎಂಬ ತಪ್ಪು ತಿಳುವಳಿಕೆಯ ಬಲಿಪಶುವಾಗಿದ್ದ ನನಗೆ ಇದು ಒಂದು ನಂಬಲಸಾಧ್ಯವಾದ ಮಾತಾಗಿತ್ತು, ಆದ್ದರಿಂದ ಈ ವಿಷಯ ಖಚಿತ ಪಡಿಸಲು ಅವರಿಗೆ ಇನ್ನಷ್ಟು ಪ್ರಶ್ನೆಗಳನ್ನು ಕೇಳಿದೆನು.

ಇದರಿಂದ ತಿಳಿದುಬಂದ ವಿಚಾರವೆಂದರೆ ಡೆಹ್ರಾಡೂನ್ ನಗರದಿಂದ ಸುಮಾರು ೭೯ ಕಿ.ಮೀ ಗಳಷ್ಟು ದೂರದಲ್ಲಿ ಮಂಗ್ಲೋರ್ ಎಂಬ ಸಣ್ಣ ಪಟ್ಟಣವಿದೆ. ಇದು ಈಗಿನ ಉತ್ತರಾಖಂಡ್ ರಾಜ್ಯದ ಹರಿದ್ವಾರ ಜಿಲ್ಲೆಯಲ್ಲಿದ್ದು ರೂರ್ಕಿ ನಗರದಿಂದ ಸುಮಾರು ೭ ಕಿ.ಮೀ ದೂರದಲ್ಲಿದೆ. ಇದರ ಜನಸಂಖ್ಯೆ ೫೯,೯೭೧ (೨೦೧೧ ನೇ ಜನಗಣತಿಯ ಪ್ರಕಾರ).ಇದು ಒಂದು ಅಸೆಂಬ್ಲಿ ಕ್ಷೇತ್ರವಾಗಿದೆ. ೨೦೧೨ನೇ ಇಸವಿಯಲ್ಲಿ ನಡೆದ ಉತ್ತರಖಂಡ್ ರಾಜ್ಯ ಅಸೆಂಬ್ಲಿ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಗೆದ್ದು ಬಂದಿರುತ್ತಾರೆ.

ಕೆ.ರಾಜೇಶ್ ಶೆಟ್ಟಿ ಅಧೀಕ್ಷಕರು ಕೇಂದ್ರೀಯ ಅಬಕಾರಿ, ಸೇವಾ ತೆರಿಗೆ ಮತ್ತು ಸೀಮಾ ಶುಲ್ಕ

Start a discussion with Nimitha s 13

Start a discussion