ವಿಷಯಕ್ಕೆ ಹೋಗು

ಸದಸ್ಯ:Charanraj Yadady/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಲಾಯುಗದ ಗೀಚುಬರಹ ಚಿಹ್ನೆಗಳು

[ಬದಲಾಯಿಸಿ]

ಶಿಲಾಯುಗದ ಗುರುತುಗಳು, ಶಿಲಾಯುಗದ ಗೀಚುಬರಹ ಗುರುತುಗಳು, ಶಿಲಾಯುಗದ ಚಿಹ್ನೆಗಳು ಅಥವಾ ಬ್ರಾಹ್ಮಿಯೇತರ ಚಿಹ್ನೆಗಳು ಕಬ್ಬಿಣಶಿಲಾಯುಗದ ಅವಧಿಯಲ್ಲಿ ದಖ್ಖನ್ ಪ್ರಸ್ಥಭೂಮಿ, ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಬಹುತೇಕ ಮಡಕೆಗಳ ಮೇಲೆ ಕಂಡುಬರುವ ಗುರುತುಗಳನ್ನು ವಿವರಿಸಲು ಬಳಸಲಾಗುವ ಪದಗಳಾಗಿವೆ. ಅವು ಸಾಮಾನ್ಯವಾಗಿ ಸಮಾಧಿ ಸ್ಥಳಗಳಲ್ಲಿ ಕಂಡುಬರುತ್ತವೆ ಆದರೆ ವಾಸಸ್ಥಳಗಳಲ್ಲಿಯೂ ಕಂಡುಬರುತ್ತಿವೆ. ಅವುಗಳನ್ನು ತಾತ್ಕಾಲಿಕವಾಗಿ ಸಾಮಾನ್ಯ ಪೂರ್ವ ಯುಗ 1000 ದಿಂದ ಸಾಮಾನ್ಯಯುಗ 300 ವರೆಗೆ ಪ್ರಾಗಿತಿಹಾಸ ಕಾಲದ ಪೂರ್ವ-ಐತಿಹಾಸಿಕ ಅವಧಿಯ ಪರಿವರ್ತನೆಯನ್ನು ದಕ್ಷಿಣ ಏಷ್ಯಾದ ಐತಿಹಾಸಿಕ ಅವಧಿಗೆ ಗುರುತಿಸಲಾಗಿದೆ. ಸಾ.ಯು.1878 ರಿಂದ ಹಲವಾರು ವಿದ್ವಾಂಸರು ಚಿಹ್ನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಮತ್ತು ಪ್ರಸ್ತುತ ಅವುಗಳು ಯಾವುದೇ ಪಠ್ಯಕ್ರಮ ಅಥವಾ ವರ್ಣಮಾಲೆಯ ಅರ್ಥವಿಲ್ಲದ ಅಸಂಕೇತೀಕರಣದ ಬರವಣಿಗೆ ಅಥವಾ ಗೀಚುಬರಹ ಅಥವಾ ಚಿಹ್ನೆಗಳನ್ನು ರೂಪಿಸುತ್ತವೆಯೇ ಎಂಬ ಬಗ್ಗೆ ಯಾವುದೇ ಒಮ್ಮತವಿಲ್ಲ.


1960 ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞ ಬಿ.ಬಿ.ಲಾಲ್ ಅವರು ತಮ್ಮ ಸಮೀಕ್ಷೆಯಲ್ಲಿ 89% ಶಿಲಾಯುಗದ ಚಿಹ್ನೆಗಳು ಮತ್ತು ಸಿಂಧೂ ಲಿಪಿಯ ನಡುವೆ ಪ್ರತಿರೂಪಗಳನ್ನು ಹೊಂದಿವೆ ಎಂದು ಕಂಡುಹಿಡಿದರು. ಸಿಂಧೂ ಕಣಿವೆ ನಾಗರಿಕತೆ ಮತ್ತು ನಂತರದ ಶಿಲಾಯುಗದ[] ಅವಧಿಯ ನಡುವೆ ಸಂಸ್ಕೃತಿಯ ಸಾಮ್ಯತೆ ಇತ್ತು ಎಂದು ಅವರು ತೀರ್ಮಾನಿಸಿದರು. 2019 ರಲ್ಲಿ, ತಮಿಳುನಾಡಿನ ಪುರಾತತ್ವಶಾಸ್ತ್ರಜ್ಞರು ಸಿಂಧೂ ಲಿಪಿಯ ಚಿಹ್ನೆಗಳನ್ನು ಹತ್ತಿರದಿಂದ ಹೋಲುವ[] ಗೀಚುಬರಹದೊಂದಿಗೆ ಕೀಲಾಡಿಯಲ್ಲಿ ಮತ್ತಷ್ಟು ಮಡಕೆ ಚೂರುಗಳನ್ನು ಉತ್ಖನನ ಮಾಡಿದರು.


ಪುರಾತತ್ತ್ವ ಶಾಸ್ತ್ರದ ಸ್ತರಶಾಸ್ತ್ರ ವಿಭಾಗ ತಿಳಿಸುವಂತೆ ಚಿಹ್ನೆಗಳನ್ನು ಹೊಂದಿರುವ ಮತ್ತು ಇಲ್ಲದಿರುವ ಮಡಕೆ ಚೂರುಗಳು ಸಾಮಾನ್ಯವಾಗಿ ಕೆಳಮಟ್ಟದಲ್ಲಿ ಕಂಡುಬರುತ್ತವೆ, ನಂತರದ ಹಂತದಲ್ಲಿ ಮಿಶ್ರ ಚಿಹ್ನೆಗಳು ಮತ್ತು ಬ್ರಾಹ್ಮಿ ಅಥವಾ ತಮಿಳು ಬ್ರಾಹ್ಮಿ ಮತ್ತು ಅಂತಿಮವಾಗಿ ಉನ್ನತ ಮಟ್ಟದಲ್ಲಿ ಮಡಕೆ ಚೂರುಗಳು ಬ್ರಾಹ್ಮಿ ಅಥವಾ ತಮಿಳು ಬ್ರಾಹ್ಮಿ ಗುರುತುಗಳೊಂದಿಗೆ ಮಾತ್ರ ಕಂಡುಬರುತ್ತವೆ. ಸುಮಾರು ಸಾ.ಯು 300 ದಿಂದ, ಇವುಗಳು ಸಮಾಧಿ ಸ್ಥಳಗಳಿಂದ[] ಕಣ್ಮರೆಯಾಗುತ್ತವೆ. ಐರಾವತಂ ಮಹಾದೇವನ್‌ರಂತಹ ವಿದ್ವಾಂಸರು ಸಂಕೇತಗಳನ್ನು ನೇರವಾಗಿ ಸಿಂಧೂ ಕಣಿವೆಯ ಲಿಪಿಗೆ ಜೋಡಿಸಲು ಪ್ರಯತ್ನಿಸಿದ್ದಾರೆ ಅಥವಾ ದೀರ್ಘಕಾಲೀನ ಪ್ರಭಾವದಿಂದ ಈ ಹೋಲಿಕೆ ಪಡೆದಂತಿದೆ. ಆದರೆ ಕೆ. ರಾಜನ್‌ರಂತಹ ಇತರರು ಚಿಹ್ನೆಗಳನ್ನು ಉತ್ತರಬ್ರಾಹ್ಮಿ ಲಿಪಿಯ ಮೂಲವೆಂದು ಗುರುತಿಸುತ್ತಾರೆ. ಇನ್ನೂ ಅನೇಕರು ಸಾಮಾಜಿಕ-ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುವ ಗೀಚುಬರಹ ಚಿಹ್ನೆಗಳಾಗಿ ಮಾತ್ರ ಕಾಣುತ್ತಿವೆ, ಯಾವುದೇ ನಿರ್ದಿಷ್ಟ ವರ್ಣಮಾಲೆಯ ಮೌಲ್ಯ ಕಾಣುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರಾಮರ್ಶನೆ

[ಬದಲಾಯಿಸಿ]
  1. B.B, Lal. From the Megalithic to Harappa: Tracing back the graffiti on the pottery (1962 ed.). Ancient India: Bulletin of the Archaeology Survey of India. p. 16: 21–24.
  2. Keezhadi, An urban settlement of sangam age on the banks of the river Vaigai. Government of Tamil Nadu. 2019. p. p60-62. {{cite book}}: |first1= missing |last1= (help); |page= has extra text (help)
  3. K, Rajan (2008). "Situating the Beginning of Early Historic Times in Tamil Nadu: Some Issues and Reflections". Social Scientist. p. 36 (1/2): 40–78. {{cite book}}: |access-date= requires |url= (help)