ವಿಷಯಕ್ಕೆ ಹೋಗು

ಸದಸ್ಯ:Ramya gulvadi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೃಷಿ ಮತ್ತು ಪೇಟೆಂಟ್ : ೬. ಪೇಟೆಂಟ್ ಕುರಿತ ಗೊಂದಲಗಳು ಈ ಅಧ್ಯಾಯವನ್ನು ಹೆಸರಿಸುವಲ್ಲಿ ಪೇಟೆಂಟ್ ಪದವನ್ನು ಸಾಮಾನ್ಯವಾಗಿ ಬೌದ್ಧಿಕ ಹಕ್ಕುಗಳನ್ನು ಸೆಮೀಕರಿಸಿ ಬಳಸಲಾಗಿದೆ ಬೌದ್ಧಿಕ ಹಕ್ಕುಗಳಲ್ಲಿ ಪ್ರಮುಖವಾಗಿ ಪೇಟೆಂಟ್ ಹೊಸ ನಿಯಮಗಳಲ್ಲಿ ಹೆಚ್ಚು ಬದಲಾವಣೆಯನ್ನು ಹೊಂದಿರುವುದು ಇದಕ್ಕೆ ಮತ್ತಷ್ಟು ಮಹತ್ವವನ್ನು ತಂದು ಕೊಟ್ಟಿದೆ. ಹಾಗಾಗಿ ಇದರಲ್ಲಿ ಕಂಡುಬರುವ ವಿಚಾರಗಳು ಚರ್ಚಾರ್ಹ, ಈ ಹಿಂದೆ ಪ್ರಸ್ತಾಪಿಸಿರುವಂತೆ ಬೌದ್ಧಿಕ ಹಕ್ಕುಗಳನ್ನು ವ್ಯಾಪಾರದೊಳಗೆ ವಿಮರ್ಶಿಸುವಂತೆ, ಒಪ್ಪಂದ ಮಾಡಿ, ಹೊಸ ನಿಯಮಗಳನ್ನು ವಿಕಾಸಗೊಳಿಸಲಾಗಿದೆ. ಇದಕ್ಕೂ ಮೊದಲು ಬೌದ್ಧಿಕ ಹಕ್ಕುಗಳೇನು ಅಷ್ಟಾಗಿ ವ್ಯಾಪಾರೀಕರಣಗೊಂಡಿರಲಿಲ್ಲ. ಬಹಳ ಮುಖ್ಯವಾಗಿ ಜೈವಿಕ ವಿಚಾರಗಳು ಬೌದ್ಧಿಕ ಹಕ್ಕುಗಳ ಒಳಗೆ ಚರ್ಚಿತವಾಗುವ ಈ ಸಂದರ್ಭದಲ್ಲಿ ಇವು ಗೊಂದಲಗಳನ್ನು, ವಿಚಿತ್ರಗಳನ್ನು ದಾಖಲಿಸುತ್ತವೆ. ಪೇಟೆಂಟ್ ಮಾಡುವುದು ಎಂದರೇನೇ, ಒಂದರ್ಥದಲ್ಲಿ ಏಕಸ್ವಾಮ್ಯ ಮಾಡಿಕೊಂಡಂತೆ ಎಂಬರ್ಥ ಪ್ರಚಲಿತವಿದೆ. ಈ ಅರ್ಥದಲ್ಲಿ ಜ್ಞಾನವನ್ನು ಪೇಟೆಂಟ್ ಮಾಡಿಕೊಂಡಿದ್ದಾರೆ ಎಂದರೆ ಯಾರಿಗೇನು ಹೇಳುವುದು ಎಂಬಂತಹ ಸನ್ನಿವೇಶವಾಗಿ ಅರ್ಥೈಸಿದ್ದಾರೆ. ಅದರಲ್ಲೂ ವಿಜ್ಞಾನದಲ್ಲಿ ಬೌದ್ಧಿಕ ಹಕ್ಕನ್ನು ಒಂದು ಆಸ್ತಿ ಹಕ್ಕಾಗಿ ನೋಡುವುದನ್ನು ಅವರ ಅನ್ವೇಷಣೆಗೆ ಸಂಬಂಧಿಸಿದಂತೆ ತೀರ ಭಿನ್ನವಾಗಿ ನೋಡಲಾಗುವುದು. ಅದರಲ್ಲೂ ವಿಜ್ಞಾನಿಗಳನ್ನು ಸ್ವಲ್ಪ ಗುಮಾನಿಯಿಂದಲೇ ನೋಡುವರು. ಪೇಟೆಂಟ್ ಎನ್ನುವುದು ಕೇವಲ ವಿಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ ಇನ್ನುವುದು ಈಗೀಗ ಎಲ್ಲರಿಗೂ ತಿಳಿಯುತ್ತಿರುವ ವಿಚಾರ. ಬೌದ್ಧಿಕ ಆಸ್ತಿ ಹಕ್ಕುಗಳು ವಿವಿಧ ಪ್ರಕಾರಗಳಲ್ಲಿ ವಹಿವಾಟಿಗೆ ಬರುತ್ತಿವೆ ಎಂಬುದು ಈಗ ಜನಜನಿತವಾಗುತ್ತದೆ. ಅನ್ವೇಷಣೆಗಳೆಲ್ಲವೂ ತಮ್ಮ ಅನುಕೂಲಕ್ಕೆ ಲಾಭಕ್ಕೆ ಎಂಬ ಗುಮಾನಿಗಳು ಅರೆತಿಳುವಳಿಕೆಯಿಂದ ಹರಡುತ್ತಿವೆ ಅಥವಾ ಹರಡಿವೆ. ಎಲ್ಲಾ ತಮ್ಮ ಹಿತಕ್ಕೆ, ಲಾಭಕ್ಕೆ ಮಾಡಿಕೊಳ್ಳುವ ಈ ಗುಂಪು ಜನಹಿತಕ್ಕೆ ಅಪಾಯಕಾರಿ ಎಂಬಂಥಹ ಗುಮಾನಿಗಳನ್ನು ವಿಜ್ಞಾನಿಗಳ ಕುರಿತು ಆಡುವುದೂ ಉಂಟು. ಈ ನಿಟ್ಟಿನಲ್ಲಿ ವಿಜ್ಞಾನವನ್ನು ಜನಪರ ಅಲ್ಲವೆಂಬ ಹಾಗೂ ತನ್ಮೂಲಕ ವಿಜ್ಞಾನಿಗಳನ್ನು ಖಳನಾಯಕರ ತರಹ ನೋಡುವ, ವಾದಿಸುವ ಅನೇಕ ಸಂದರ್ಭಗಳನ್ನು ಕಾಣಬಹುದು. ಬೌದ್ಧಿಕ ಹಕ್ಕುಗಳಲ್ಲಿ ಪ್ರಮುಖವಾಗಿ ಪೇಟೆಂಟ್ ನಿಯಮಾವಳಿಗಳ ಬದಲಾವಣೆಗಳಿಂದ ಮತ್ತು ಅಂತಾರಾಷ್ಟ್ರೀಯ ಒಡಂಬಡಿಕೆಗಳಿಂದ ಈ ಗೊಂದಲಗಳು ಮತ್ತು ಕೆಲವು ಭಯಗಳೂ ಜನಸಾಮಾನ್ಯರಲ್ಲಿ ಉದ್ಭವವಾಗಿವೆ. ಅದಕ್ಕೆ ಮುಖ್ಯ ಕಾರಣ ಮುಂದಿನ ದಿನಗಳಲ್ಲಿ ಹಲವಾರು ಔಷಧಿಗಳು ಪದಾರ್ಥಗಳೂ ದುಬಾರಿಯಾಗಲಿವೆ ಎಂಬ ಚಿಂತೆ ಒಂದಾದರೆ, ರೈತರಲ್ಲಿ ಮತ್ತೊಂದು ಬಗೆಯದು. ಅದೇನೆಂದರೆ ಬದಲಾದ ನಿಯಮದಡಿ ಇನ್ನು ಮುಂದೆ ಯಾವುದೇ ಬೀಜವನ್ನು ಕೊಂಡು ತಂದೇ ಬಿತ್ತಬೇಕಲ್ಲ ಯಾಗೂ ಯಾರಿಗೂ ಕೊಡುವ ಹಂಚುವ ಹಕ್ಕಿಲ್ಲವಲ್ಲ ಎಂಬುದಾಗಿದೆ. ಜತೆಯಲ್ಲಿ ಒಂದು ವೇಳೇ ತಾವು ಕೊಂಡು ತಂದೇ ಬೆಳೆದ ಬೀಜದ ಗುಣ ಅರಿಯದೇ ತಮ್ಮ ಮತ್ತೊಂದು ಅದೇ ಜಾತಿಯ ಗಿಡದಲ್ಲಿ ಉಳಿದು ಬಿಟ್ಟರೆ ಅದಕ್ಕೂ ದಂಡ ತರಬೇಕೆಂಬ ಭಯವೂ ಅವರನ್ನು ಕಾಡುತ್ತದೆ. ಇವಕ್ಕೆ ಉತ್ತರಿಸುವ ಸಮಾಧಾನದ ಪ್ರಯತ್ನವನ್ನು ಮುಂದಿನ ಭಾಗದಲ್ಲಿ ಅರಿಯೋಣ. ರೈತರು ಮತ್ತು ಇತರೆ ಸಾಮಾನ್ಯ ಜನರನ್ನು ಜತೆಯಲ್ಲಿ ಇತರರನ್ನೂ ಗೊಂದಲಕ್ಕೀಡುಮಾಡುವಲ್ಲಿ ನಿಯಮಾವಳಿಗಳ ಗಾತ್ರ ಮತ್ತು ಅವನ್ನು ವಿಮರ್ಶಿಸುವ ಮತ್ತು ಜಾರಿ ಮಾಡುವ ಕ್ರಮದಿಂದ ಉದ್ಭವಿಸಲಿದೆ. ಇಡೀ ಗ್ಯಾಟ್‌ ಒಪ್ಪಂದದ ಒಟ್ಟು ಪುಟಗಳು ಸುಮಾರು ೨೬,೦೦೦ ಅಂದಮೇಲೆ ಇದನ್ನೆಲ್ಲಾ ನಿಭಾಯಿಸುವ ಸಂಕೀರ್ಣತೆಯನ್ನು ಇದರಲ್ಲಿ ವಿವರಿಸುವುದಾದರೂ ಹೇಗೆ? ಇಲ್ಲಿ ಕೆಲವೊಂದು ಉದಾಹರಣೆಗಳನ್ನು ನೋಡೋಣ. ಈ ಹಿಂದೆಲ್ಲಾ ಇಡೀ ಜೀವರಾಶಿ ಮನುಕುಲದ ಆಸ್ತಿ ಎಂದು ಭಾವಿಸಲಾಗಿತ್ತು. ಇನ್ನು ಮುಂದೆ ಹಾಗಾಗುತ್ತಿಲ್ಲ. ಏಕೆಂದರೆ ಅವನ್ನು ಗ್ಯಾಟ್‌ನಿಯಮಾವಳಿಯಂತೆ ಅವನ್ನು ಕೆಲವೊಂದು ಅನುವಂಶಿಕ ಬದಲಾವಣೆಗಳೊಂದಿಗೆ ಬೌದ್ಧಿಕ ಆಸ್ತಿಹಕ್ಕಿನಡಿ ತರಬಹುದಾಗಿದೆ. ಇವುಗಳ ಹೊಸತನವು ಹೊಸ ಆಯಾಮವನ್ನು ಹುಟ್ಟಿಹಾಕಿದೆ. ಅದರಿಂದಾಗಿ ಇವನ್ನು ಓರ್ವ ಅನ್ವೇಷಕ ಅಥವಾ ಕಂಪನಿಗಳು ಒಡೆತನ ಹೊಂದಬಹುದಾಗಿದೆ. ಅಲ್ಲದೆ “ಸುಯೀ ಜನರಸ್‌” ತಮ್ಮದೇ ಆಧ ನಿಯಮಾವಳಿಗೂ ಅವಕಾಶವಿತ್ತದೆ. ಅಲ್ಲದೆ ಮತ್ತೊಂದು ಮಹತ್ವದ ಒಪ್ಪಂದವಾದ “ಜೈವಿಕ ವೈವಿಧ್ಯ ಒಪ್ಪಂದ”ದ ಪ್ರಕಾರ ಎಲ್ಲಾ ಜೀವ ರಾಶಿಯು ಆಯಾ ಮೂಲ ತವರಿನ ಆಸ್ತಿ ಮತ್ತು ಅವುಗಳನ್ನು ಕಾಪಾಡಿಕೊಂಡು ಬಂದ ಸಮುದಾಯವು ಅದರ ಲಾಭದ ಪಾಲನ್ನು ಅನುಭವಿಸಬಹುದು. ಇವನ್ನು ಸೆಮಿಕರಿಸಿ ನೋಡಿದರೆ ಒಂದನ್ನೊಂದು ವಿರೋಧಿಸುವಂತೆ ಅಥವಾ ಒಪ್ಪದಂತೆ ಮೇಲುನೋಟಕ್ಕಾದರೂ ಅಥವಾ ಸಾಮಾನ್ಯ ಅರಿವಿಗೆ ಅನ್ನಿಸದಿರದು. ಇದರಿಂದಾಗಿಯೇ ಗೊಂದಲಗಳು ಬಗೆ ಬಗೆಯಲ್ಲಿ ವಿಕಾಸಗೊಳ್ಳಬಹುದಾಗಿದೆ. ಜೀವರಾಶಿಯ ಮೇಲೆ ಬೌದ್ಧಿಕ ಹಕ್ಕು ಸಾಧ್ಯವಾದರೆ – ಅವನ್ನು ತವರಿನ ಆಸ್ತಿಯನ್ನಾಗಿ ಮಾಡುವುದು ಹೇಗೆ? ಅಲ್ಲದೆ ತವರಿನ ಆಸ್ತಿ ಎನ್ನುವಾಗ ಯಾವ ಮೂಲವನ್ನು ಗಣನೆಗೆ ತೆಗೆದು ಕೊಳ್ಳಬೇಕು? ಉದಾಹರಣೆಗೆ ಮೆಣಸಿನಕಾಯಿಯನ್ನೇ ನೋಡೋಣ. ಮೆಣಸಿನಕಾಯಿಯ ಮೂಲ ತವರು ದಕ್ಷಿಣ ಅಮೇರಿಕಾ. ಅಂದಹಾಗೆ ಜೈವಿಕ ಒಪ್ಪಂದದ ಸಾಮಾನ್ಯ ಒಪ್ಪಿಗೆಗೆ ಅದರ ಲಾಭ ಇತ್ಯಾದಿಯನ್ನು ನೇರವಾಗಿ ದಕ್ಷಿಣ ಅಮೇರಿಕಾಕ್ಕೆ ನೀಡಬೇಕಲ್ಲವೆ? ಆದರೆ “ಬ್ಯಾಡಗಿ” “ದ್ಯಾವನೂರು” ತಳಿಗಳನ್ನು ಅಭಿವೃದ್ಧಿಪಡಿಸಿ ಇಲ್ಲಿಯವರೆಗೂ ಕಾಪಾಡಿಕೊಂಡು ಬಂದ ನಮ್ಮ ರೈತರಿಗೆ ಅದರ ಹಕ್ಕಿಲ್ಲವೇ? ಇವನ್ನು ಈ ಒಪ್ಪಂದಗಳು ಸಮರ್ಪಕವಾಗಿ ನಿರ್ವಹಿಸಲಾರವು. ಇವು ಕೇವಲ ಸ್ಯಾಂಪಲ್‌ಗಳಷ್ಟೇ. ಇದಲ್ಲದೆ ಇಡೀ ಜೈವಿಕ ಸಂಚಾರ ಖಂಡಾಂತರವಾಗಿದ್ದು ಕೊಲಂಬಸ್‌ನಂತರ ಆಯಾಮಗಳಿಂದ. ಹಾಗಾದರೆ ಇವನ್ನು ನಿಭಾಯಿಸುವುದಿಲ್ಲವೆ? ಇದರಿಂದಾಗಿಯೇ ಇಂತಹ ವಿಚಾರದಲ್ಲಿ ಪಾರಂಪಾರಿಕ ಜ್ಞಾನದ ಸಂರಕ್ಷಣೆಯ ಮತ್ತು ಜೈವಿಕ ವೈವಿಧ್ಯ ಕಾಪಾಡಿದ ಮೂಲ ತವರು ರಾಷ್ಟ್ರಗಳಿಗೂ ಅದರ ಲಾಭಪಡೆಯಲು ೧೯೮೨ರ ಬ್ರೆಜಿಲ್‌ನ ರಿಯೊ ಡಿ ಜನೈರೋ ಸಮ್ಮೇಳನ ಅವಕಾಶ ಒದಗಿಸಿದೆ. ಜತೆಗೆ ಇಂತಹ ವಿಚಾರದಲ್ಲಿ ವಿವಿಧ ದೇಶಗಳಿಂದ ಖಂಡಾಂತರಗೊಂಡ ಬೇಳೆಗಳು ಅನೇಕ ಉದಾಹರಣೆಗಳಿವೆ. ನಮ್ಮ ಆಹಾರದಲ್ಲಿ ಎಥೇಚ್ಚವಾಗಿ ಬಳಸುತ್ತಿರುವ ಟೊಮ್ಯಾಟೊ, ಹಸಿಮೆಣಸು, ಮುಸುಕಿನ ಜೋಳ, ಇತ್ಯಾದಿ ಯಾವವೂ ನಮ್ಮವಲ್ಲ. ಆದರೆ ಈ ಬೆಳೆಗಳಲ್ಲಿ ನಮ್ಮ ದೇಶದವೇ ಎನ್ನುವಂತಹ ಬದಲಾವಣೆ ಹಾಗೂ ತಳಿಗಳನ್ನು ಅನ್ವೇಷಕರೂ ರೈತರೂ ಕಾಪಾಡಿಕೊಂಡು ಬಂದಿದ್ದಾರೆ. ಇಂತಹ ಸನ್ನಿವೇಶದಲ್ಲಿ ಈ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ವಿವರಿಸುವ ಇಡಿ ಸಮಗ್ರ ದೇಶದ ಸುಮುದಾಯಗಳನ್ನು ಸಮಾಧಾನ ಪಡಿಸುವುದು ಹೇಗೆ? ನಮ್ಮ ದೇಸೀ ಪರಂಪರಾಗತ ಜ್ಞಾನ ಬಹುಪಾಲು ಜೀವರಾಶಿಯ ಮೂಲದ್ದು. ಆದ್ದರಿಂದ ಇದರ ಕಾಳಜಿ ಇನ್ನಷ್ಟು ಹೆಚ್ಚು. ಈ ಹಿಂದೆ ಈ ಭೂಮಿಯ ಸಕಲ ಜೀವರಾಶಿಗಳು ಇಡೀ ಮನುಕುಲಕ್ಕೇ ಸೇರಿದ್ದು ಎಂಬ ಭಾವನೆ ಇತ್ತು. ಆಗ ದೇಶದಿಂದ ದೇಶಕ್ಕೆ ಸಸ್ಯ ಮತ್ತು ಪ್ರಾಣಿಗಳು ಅನೇಕ ಕಾರಣಗಳಿಂದ ವಲಸೆ ಬಂದಿವೆ. ಬಂದು ಹೊಸ ಜಾಗೆಯಲ್ಲು ನೆಲಸಿ ಮತ್ತಷ್ಟು ವಿಶೇಷವಾಗಿ ರೂಪುತಳೆದು ಮೂಲ ತವರಿಗಿಂತಲೂ ಭಿನ್ನವಾದ ರೂಪವನ್ನು ಪಡೆದಿವೆ. ಅಲ್ಲದೆ ಅದನ್ನು ಉಳಿಸಿಕೊಂಡು ಹೋಗಲು ಬೇಕಾದ ಎಲ್ಲ ತಯಾರಿಯನ್ನು ವಿಕಾಸಗೊಂಡ ದೇಶ ಅಥವಾ ಸ್ಥಳದಲ್ಲಿ ಪಡೆದುಕೊಂಡಿವೆ. ಅಂತಹ ವಾತವರಣವನ್ನು ಮೂಲ ತವರೂ ಮತ್ತು ಹೊಸ ನೆಲ ಎರಡರಲ್ಲೂ ಕಂಡುಕೊಂಡು ಜೈವಿಕ ಪರಂಪರೆಯ ಮಹತ್ವವನ್ನು ಹೆಚ್ಚಿಸಿವೆ. ಈ ಬಗೆಯ ಸಂಕೀರ್ಣತೆಯನ್ನು ಮೂಲ ತವರು ಮತ್ತು ಆಯಾಜೀವಿಯ ಹೊಸ ನೆಲ ಕೊಟ್ಟ ಕೊಡುಗೆಯನ್ನು ಅದರ ಲಾಭದಲ್ಲಿ ಪಾಲುದಾರಿಕೆ ಮಾಡುವ ಹೊಸ ಜಾಗತೀಕರಣದ ನೀತಿಯಲ್ಲಿ ಸಾಧ್ಯವಾಗುವುದೇ? ಜೈವಿಕ ವೈವಿಧ್ಯಕ್ಕೆ ಕಾಪಾಡುವ ಇಡೀ ಹೊಣೆಗಾರಿಕೆಯನ್ನು ಹೇಗೆ ಹೊರಬೇಕು? ಗೊಂದಲಗಳೂ ಮತ್ತು ಸಂಕೀರ್ಣತೆಗಳೂ ವಿಕಾಸಗೊಳ್ಳುತ್ತಾ ವಿಸ್ತಾರಗೊಳ್ಳುತ್ತಾ ಬೆಳೆಯುತ್ತವೇನೋ? ಇಲ್ಲಿ ಮತ್ತಷ್ಟು ಬಗೆಯ ವಿವರಗಳನ್ನು ನೋಡೋಣ. ಈಗಾಗಲೆ ಹಿಂದೆ ಅರಿತಂತೆ ಜ್ಞಾನವನ್ನು ಉತ್ಪಾದಕ ನಿಯಮದಡಿ ತಂದು ಬೌದ್ಧಿಕ ಹಕ್ಕಾಗಿ ಬಳಸುವ ಪೈಪೋಟಿ ಹೆಚ್ಚುತ್ತಾ ಬರುತ್ತಿದೆ. ಮುಕ್ತ ಮಾರುಕಟ್ಟೆಯಿಂದಾಗಿ ನಾವೆಂದೂ ಅರಿಯದಂತಹ ವಸ್ತುಗಳೂ, ವಿಚಿತ್ರ ಬೆಲೆಗೆ ಸಿಗುತ್ತವೆ. ಕೆಲವು ಅತ್ಯಂತ ಕಡಿಮೆ ಬೆಲೆಗೆ ದೊರಕುತ್ತಿದ್ದರೆ ಮತ್ತೆ ಕೆಲವು ವಿಚಿತ್ರವಾದ ಬೆಲೆಗೆ ಕೊಳ್ಳಬೇಕಾಗಿದೆ. ಅದನ್ನು ವ್ಯವಸ್ಥಿತವಾಗಿ ವಿಕಾಸಪಡಿಸಿ ನಿರ್ವಹಣಾ ವ್ಯವಸ್ಥೆಗಳೆಂಬಂತೆ ಮಾರುಕಟ್ಟೆಗಳಡಿ ನೋಡಿಕೊಳ್ಳಲಾಗುತ್ತಿದೆ. ಜಾಗತಿಕರಣದ ಮುಕ್ತ ಮಾರುಕಟ್ಟೆಯ ಎಲ್ಲ ವಹಿವಾಟಿಗೆ ಅನೂಕೂಲಕರವಾದ ವಾತಾವರಣವನ್ನು ನಾವು ಕಲ್ಪಿಸಿಕೊಡಬೇಕಾಗಿದ್ದು ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ. ಇದರಿಂದ ಈಗ ಬಹಳ ಪ್ರಮುಖವಾದ ಬದಲಾದ ಸನ್ನಿವೇಶಗಳನ್ನು ನೋಡುತ್ತಿದ್ದೇವೆ. ಜಾಗತಿಕ ಮಾರುಕಟ್ಟೆಯ ನಿಯಮಗಳು ಕೇವಲ ಎಲ್ಲಾ ಉತ್ಪನ್ನಗಳಿಗೆ ಮಾತ್ರ ಅಲ್ಲ ಆಯಾ ಉತ್ಪನ್ನಗಳ ಮೂಲ ದ್ರವ್ಯ ಜ್ಞಾನವನ್ನೂ ಅವಲಂಬಿಸಿವೆ. ಇದರಿಂದ ಇಲ್ಲಿನ ದೇಸಿ ಅಥವಾ ಪಾರಂಪರಿಕ ಜ್ಞಾನಕ್ಕೂ ಸಮಕಾಲೀನ ಸಂಗತಿಗೂ ಸಮೀಕರಿಸಿ ನೋಡಬೇಕಾಗಿದೆ. ಈ ಬಗೆಯ ಜ್ಞಾನವು ಈ ಹೊಸ ಬೌದ್ಧಿಕ ಆಸ್ತಿ ಹಕ್ಕುಗಳ ನಿಯಮದಡಿ ಕಂಪನಿಗಳ ಸ್ವತ್ತಾಗಬಲ್ಲದು. ಭಾರತೀಯ ಸಂಸ್ಕೃತಿಯ ಸಂದರ್ಭದಲ್ಲಿ ಅರಿಶಿಣದ ಮಹತ್ವ ಎಲ್ಲರಿಗೂ ತಿಳಿದದ್ದೇ. ಅರಿಶಿಣದ ಔಷಧಿ ಗುಣಗಳನ್ನು ಅಮೇರಿಕೆಯಲ್ಲಿ ಭಾರತೀಯ ಮೂಲದ ವಿಜ್ಞಾನಿಯೊರ್ವರಿಂದ ಪೇಟೆಂಟ್ ಪಡೆದುದ್ದನ್ನು ವಿರೋಧಿಸಿದ್ದು ಈಗಾಗಲೇ ಜನಜನಿತ. ಅದಕ್ಕಾಗಿ ನಾವು ಪಟ್ಟ ಪಾಡು ಎಷ್ಟು? ಸಾಧ್ಯವಿದ್ದ ಎಲ್ಲಾ ದಾಖಲೆಗಳನ್ನೂ ಒಟ್ಟು ಮಾಡಿ ಸಾದರಪಡಿಸಲಾಯಿತು. ಇದಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡ ಬೇಕಾಯಿತು. ಅದಕ್ಕಾಗಿ ಭಾರತೀಯ ವೈಜ್ಞಾನಿಕ ಮತ್ತು ಕೈಗಾರಿಕಾ ಪರಿಷತ್‌, ಭಾರತ ಸರ್ಕಾರದ ಪರವಾಗಿ ಮತ್ತು ಅನೇಕ ಜನಪರ ಸಂಘಟನೆಗಳು ಸೇರಿ ಹೋರಾಟ ನಡೆಸಿದವು. ಇದರ ಫಲವಾಗಿ ಗೆಲುವು ಸಿಕ್ಕಿತು. ಅದಕ್ಕೂ ಸಾಲದೆಂಬಂತೆ ಅಮೇರಿಕಾದ ರೈಸ್‌ಟೆಕ್‌ ಕಂಪನಿಯು ಇಲ್ಲಿನ ಬಾಸಮತಿ ಅಕ್ಕಿಗೆ ಗಂಟು ಬಿತ್ತು. ಅದರ ಸುಗಂಧ ಬರಿತ ಮೂಲದ ತಳಿ ಗುಣವನ್ನು ಬೇರ್ಪಡಿಸಿ ವರ್ಗಾಯಿಸುವ ಪೇಟೆಂಟು ಪಡೆಯಿತು. ಹೋರಾಟ ಮತ್ತೆ ಆರಂಭವಾಯಿತು. ಅದಕ್ಕೆಂದೇ ದಾಖಲೆಯೊಂದು ಇತಿಹಾಸದ ಪುಟಗಳಲ್ಲಿ ಇತ್ತು. ಅಕ್ಬರನ ಜೀವನ ಚರಿತ್ರೆಯನ್ನು ಬರೆದ ಅಬುಲ್‌ಫಜಲ್‌ನ ದಾಖಲೆಯು ಅದಾಗಿತ್ತು. ಅದೇ “ಅಕ್ಬರ ನಾಮ” ಅದರಲ್ಲಿ ಬಾಸುಮತಿಯ ಚಿತ್ರ ಸಹಿತ ವರ್ಣನೆಯಿತ್ತು. ಮತ್ತೆ ಕೇಸನ್ನು ಗೆಲ್ಲಲು ಇದು ಸಹಾಯಕವಾಯಿತು. ಈ ಎರಡೂ ವಿಚಾರಗಳನ್ನು ಬಹಳ ಸರಳವಾಗಿ ಹೇಳಿದ್ದರೂ ಇವುಗಳ ಹಿಂದೆ ವರ್ಷಗಟ್ಟಲೆಯ ಹೋರಾಟದ ಹಿನ್ನೆಲೆ ಇದೆ. ಈ ದೀರ್ಘಹೋರಾಟ ಇದರ ಸಂಕೀರ್ಣತೆಯನ್ನು ತಿಳಿಸುತ್ತದೆ. ಅದೇನು ಅಷ್ಟು ಸುಲಭವಾಗಿ ಮತ್ತು ಸರಳವಾಗಿ ಹೇಳಿಬಿಡುವ ಮಾತಲ್ಲ. ಹೀಗೆ ಸಣ್ಣ ಪುಟ್ಟ ಅಡುಗೆ ಮನೆಯ ವಿಚಾರಗಳೂ ಅಂತಾರಾಷ್ಟ್ರೀಯ ಕಟಕಟೆಯಲ್ಲಿ ಭಾಗವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದೇನೊ ಎನ್ನುವ ಗೊಂದಲಗಳನ್ನು ಈಗ ಕಾಣಬೇಕಾಗಿದೆ. ಏಕೆಂದರೆ ಈಗೀಗ ಈ ಅಡುಗೆಯ ಪದಾರ್ಥಗಳು ಉತ್ಪನ್ನಗಳಾಗಿ ನಾವಿನ್ನು ನಮ್ಮ ಉಪ್ಪಿನಕಾಯಿ ಹಾಕುವ ಬಳಸುವ ತಂತ್ರಜ್ಞಾನವನ್ನೂ ಬೌದ್ಧಿಕ ಹಕ್ಕಾಗಿ ಕಾಪಾಡುವ ಹೊಣೆಯನ್ನು ಹೊರಬೇಕಿದೆ. ಆಹಾರ ಸಂಸ್ಕರಣೆಯು ಮುಂದೆ ಒಂದು ದೊಡ್ಡ ಉದ್ಯಮವಾಗಿ ಎಳೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಕೃಷಿಯಲ್ಲಿ ಅಪಾರ ಜೈವಿಕ ಕೀಟನಾಶಕಗಳು ನಮ್ಮ ಪಾರಂಪರಿಕ ಜ್ಞಾನದಲ್ಲಿ ಹಾಸು ಹೊಕ್ಕಾಗಿವೆ. ಉದಾಹರಣೆಗೆ ಬೇವಿನ ಉಪಯೋಗ ಈಗಾಗಲೆ ಹತ್ತಾರು ಕಂಪನಿಗಳು ಬೇವಿನ ಕೀಟನಾಶಕ ತಯಾರಿಗೆ ಪೇಟೆಂಟ್ ಪಡೆದಿವೆ. ಭಾರತದಲ್ಲೇ ಇದು ನಡೆದಿದೆ ಅಂದ ಮೇಲೆ ಇತರೆ ರಾಷ್ಟ್ರಗಳಲ್ಲಿ ಮತ್ತೂ ಹೆಚ್ಚಿರಬಹುದಲ್ಲವೆ? ಅದರಲ್ಲೂ ಇತ್ತೀಚೆಗೆ ಕೃಷಿಯಲ್ಲಿ ಪರ್ಯಾಯದ ಗಾಳಿ ಬೀಸತೊಡಗಿದೆ. ಕೃಷಿಯನ್ನು ಈಗ ಆಧುನೀಕತೆಯ ರಸಾಯನಿಕಗಳಿಂದ ಮುಕ್ತಗೊಳಿಸುವ ದೆಸೆಯಲ್ಲಿ ಸಾವಯವ ಕೃಷಿಗೆ ಮೊದಲಾಗಿರುವುದರಿಂದ ಈ ಪರ್ಯಾಯದ ಚಿಂತನೆಗೆ ಹಚ್ಚಿದೆ. ಹಾಗಾಗಿ ನಮ್ಮಲ್ಲಿರುವ ಪಾರಂಪರಿಕ ಕೀಟನಾಶಕಗಳ ಬಗ್ಗೆ ಹುಡುಕಾಟ ಆರಂಭವಾಗಿದೆ. ಕೀಟಗಳ ಹತೋಟಿಗೆ ಪರಿಸರ ಸ್ನೇಹಿ ಪದಾರ್ಥಗಳ ಆಸಕ್ತಿಯು ಹೊಸ ಹೊಸ ಕಂಪನಿಗಳ ಹುಟ್ಟುಹಾಕುವಲ್ಲಿ ಮೊದಲಾಗಿದೆ. ಜೊತೆಗೆ ಈಗಾಗಲೇ ಕೃಷಿಯ ಅಗತ್ಯಗಳನ್ನು ಪೂರೈಸುವ ಕಂಪನಿಗಳಲ್ಲೂ ಈ ಬಗೆಯ ಅಗತ್ಯಗಳನ್ನು ಪೂರಯಸುವ ಜಿಜ್ಞಾಸೆಗೆ ಮೊದಲಾಗಿದ್ದು ಬದಲಾವಣೆಯು ಮಾರುಕಟ್ಟೆಗಳಿಗೆ ಅನುಗುಣವಾಗಿ ಬೆಳೆಯುತ್ತಿದೆ. ಜತೆಗೆ ಈಗ ಬಳಕೆಯಲ್ಲಿರುವ ರಾಸಾಯನಿಕಗಳ ಪ್ರತಿಕೂಲ ಪರಿಣಾಮದಿಂದಾಗಿ ಇದರೆ ಆಸಕ್ತಿಯು ಅಧಿಕವಾಗಿದೆ. ಆದ್ದರಿಂದ ಇತ್ತೀಚೆಗೆ ಈ ಉತ್ಪನ್ನಗಳ ಪೇಟೆಂಟುಗಳು ಹೆಚ್ಚತೊಡಗಿವೆ. ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರದ ತಂತ್ರಜ್ಞಾನ, ಮಾಹಿತಿ, ಅಂದಾಜೀಕರಣ ಮತ್ತು ಮೌಲ್ಯಮಾಪನ ಪರಿಷತ್ತಿನ ಪೇಟೆಂಟುಗಳ ಸೌಲಭ್ಯ ಕೇಂದ್ರವು ಜೈವಿಕ ಕೀಟನಾಶಕಗಳ ಕುರಿತು ಸಮಗ್ರವಾದ ಅಧ್ಯಯನ ನಡೆಸಿದೆ. ಅದರಂತೆ ಕೃಷಿಯಲ್ಲಿ ಕೀಟಗಳ ನಿರ್ವಹಣೆಗೆಂದೇ ರೂಪಿಸಿದ ಜೈವಿಕ ಕೀಟನಾಶಕಗಳು ಶೇಕಡಾ ೭೨ರಷ್ಟಾಗಿವೆ. ಅದರಲ್ಲಿ ಬಿಟಿ, ಎನ್‌ಪಿವಿ ಇತ್ಯಾದಿಗಳೂ ಸೇರಿವೆ. ಜೊತೆಯಲ್ಲಿ ಬೇವು ಮುಂತಾದ ಸಸ್ಯಗಳ ಬಳಕೆಯೂ ಸಹ ಸೇರಿ ಇದನ್ನು ರೂಪಿಸಿವೆ. ಇಂತಹ ಪರಿಸ್ಥಿತಿಯನ್ನು ಈಗಿನ ಕೃಷಿಯು ಎದುರಿಸುತ್ತಿದ್ದು ಮುಂದೆ ಅವೆಲ್ಲಾ ಕೃಷಿಯ ಬೆಳವಣಿಗೆಯನ್ನು ನಿರ್ದರಿಸಲಿವೆ. ಗ್ಯಾಟ್‌ನ ನಿರ್ಧಾರದಿಂದಾಗಿ ಮತ್ತು ಬದಲಾದ ಮಾರುಕಟ್‌ಎಯ ನೀತಿಗಳು ಕೃಷಿಯ ಈ ಬಗೆಯ ಅಗತ್ಯಗಳಿಂದಲೂ ಬದಲಾವಣೆಗಳನ್ನು ತರಲಿವೆ.