ಸದಸ್ಯ:Rohithkr9900/ನನ್ನ ಪ್ರಯೋಗಪುಟ
ಮಾರಾಟ ಪ್ರಚಾರ
ಮಾರಾಟ ಪ್ರಚಾರವೆಂಬುದು ಮಾರ್ಕೆಟಿಂಗ್ ಚಟುವಟಿಕೆಗಳಲ್ಲೊಂದು.ಮಾರಾಟ ಪ್ರಚಾರವನ್ನು ಕಂಪನಿಯು ತನ್ನ ಉತ್ಪನ್ನಗಳ ಮಾರಾಟ ಹಚ್ಚಿಸಲು ಬಳಸುತ್ತಾರೆ. ಮಾರಾಟ ಪ್ರಚಾರವು ಪ್ರಚಾರ ಮಿಶ್ರಣದಲ್ಲಿರುವ ಐದು ಅಂಶಗಳಲ್ಲಿ ಒಂದು. ಪ್ರಚಾರ ಮಿಶ್ರಣದ ಇತರ ೪ ಭಾಗಗಳು ಜಾಹೀರಾತು, ವೈಯಕ್ತಿಕ ಮಾರಾಟ, ನೇರ ವ್ಯಾಪಾರೋದ್ಯಮ ಮತ್ತು ಪ್ರಚಾರ/ಸಾರ್ವಜನಿಕ ಬಾಂಧವ್ಯಗಳು. ಮಾಧ್ಯಮ ಮತ್ತು ಇತರ ಮಾರ್ಕೆಟಿಂಗಗಳನ್ನು ಗ್ರಾಹಕರ ಬೇಡಿಕೆ ಹೆಚ್ಚಿಸಲು ಅಥವಾ ಮಾರುಕಟ್ಟೆ ಬೇಡಿಕೆ ಉತ್ತೇಜಿಸಲು ಸೀಮಿತವಾಗಿ ಬಳಸಲಾಗುತ್ತದೆ ಅಥವಾ ಉತ್ಪನ್ನದ ಲಭ್ಯತಯನ್ನು ಸುಧಾರಿಸಲು ಬಳಸಲಾಗುತ್ತದೆ ಊದಾಹರಣೆ:- ಸ್ಪರ್ಧೆಗಳು, ಕೂಪನ್ನಗಳು, ಕೊಡುಗೆಗಳು, ಕಂತುಗಳು, ಬಹುಮಾನಗಳು, ರಿಯಾಯಿತಿಗಳು ಇತ್ಯಾದಿ. ಮಾರಾಟ ಪ್ರಚಾರವನ್ನು ಎರಡು ರೀತಿಯಾಗಿ ವಿಂಗಡಿಸಲಾಗುತ್ತದೆ. ಗ್ರಾಹಕರನ್ನು ಗುರಿಯಾಗಿಸಿಕೊಂಡರೆ ಮಾರಾಟ ಪ್ರಚಾರ ಮಾಡಿದರೆ ಅದನ್ನು ಗ್ರಾಹಕ ಮಾರಾಟ ಪ್ರಚಾರ, ಚಿಲ್ಲರೆ ವ್ಯಾಪಾರ ಮತ್ತು ಹೋಲ್ ಸೇಲರ್ಸ್ ಗುರಿಯಾಗಿಸಿಕೊಂಡರೆ ಅದನ್ನು ವ್ಯಾಪಾರ ಮಾರಾಟ ಪ್ರಚಾರಗಳೆಂದು ಕರೆಯುತ್ತಾರೆ. ಮಾರಾಟ ಪ್ರಚಾರವನ್ನು ಹೊಸ ಗ್ರಾಹಕರನ್ನು ಆಕರ್ಷಿಸಲು ಬಳಸಬಹುದು ಮತ್ತು ಪ್ರಸ್ತುತ ಗ್ರಾಹಕರನ್ನು ಹಿಡಿದಿರಲು ಮತ್ತು ಕಂಪನಿ ಮಾರಾಟವನ್ನು ಹೆಚ್ಚಸಲು ಬಳಸಲಾಗುತ್ತದೆ. ಮಾರಾಟ ಪ್ರಚಾರಗಳು ಸಾಮಾನ್ಯವಾಗಿ ರಿಯಾಯಿತಿಗಳ ರೂಪದಲ್ಲಿ ಬರುತ್ತವೆ. ಎರಡು ರೀತಿಯ ರಿಯಾಯಿತಿಗಳೆಂದರೆ ಬೆಲೆ ರಿಯಾಯಿತಿ (ಮಾರಾಟ ಮಾಡುವ ವಸ್ತುಗಳ ಮೇಲೆ) ಮತ್ತು ಬೋನಸ್ ಪ್ಯಾಕ್ (ಸಗಟು ವಸ್ತುಗಳ ಮೇಲೆ).
ಗ್ರಾಹಕ ಮಾರಾಟ ಪ್ರಚಾರದ ರೀತಿಗಳು
[ಬದಲಾಯಿಸಿ]- ೧) ಬೆಲೆಯ ವ್ಯವಹಾರ - ಬೆಲೆಯನ್ನು ತಾತ್ಕಾಲಿಕವಾಗಿ ಕಡಿತಮಾಡುವುದು (೫೦% ಆಫ಼್).
- ೨) ಲಾಯಲ್ ರಿವಾರ್ಡ್ ಪ್ರೋಗ್ರಾಂ - ಗ್ರಾಹಕರು ತಾವು ಮಾಡಿದ ಖರೀದಿಗೆ ಅಂಕಗಳನ್ನು ಪಡೆಯುತ್ತಾರೆ. ನಂತರ ಅದನ್ನು ಉಪಯೋಗಿಸಿಕೊಂಡು ಪ್ರತಿಫಲ ಪಡೆದುಕೊಳ್ಳುತ್ತಾರೆ.
- ೩) ಬೆಲೆ ಪ್ಯಾಕ್ ಅಥವಾ ಬೋನಸ್ ಪ್ಯಾಕ್ ಡೀಲ್ - ಇದರಿಂದ ಗ್ರಾಹಕರಿಗೆ ಅದೆ ಬೆಲೆಗೆ ಹೆಚ್ಚಿನ ಉತ್ಪನ್ನವನ್ನು ನೀಡಲಾಗುತ್ತದೆ (೨೫% ರಷ್ಟು ಹೆಚ್ಚುವರಿ). ಒಂದು ಕಂಪನಿಯು ತಮ್ಮ ಗ್ರಾಹಕರಿಗೆ ಹೆಚ್ಚಿನ ಉತ್ಪನ್ನವನ್ನು ಒಂದು ಉತ್ಪನ್ನದ ಬೆಲೆಗೆ ಕೊಡಲಾಗುತ್ತದೆ, ಅದನ್ನು ಬೋನಸ್ ಪ್ಯಾಕ್ ಯೆಂದು ಕರೆಯುತ್ತಾರೆ.
- ೪) ಕೂಪನ್ - ಕೂಪನ್ಗಳು ಮಾರಾಟ ಪ್ರಚಾರದ ಒಂದು ನಿಗದಿತವಾದ ಯಾಂತ್ರಿಕವಾಗಿ ಮಾರ್ಪಟ್ಟಿವೆ.
- ೫) ಲಾಸ್ ಲೀಡರ್(ನಷ್ಟದ ಬಿಕರಿ) - ಜನಪ್ರಿಯವಾದ ಉತ್ಪನ್ನದ ಬೆಲೆಯನ್ನು ತಾತ್ಕಾಲಿಕವಾಗಿ ಕಡಿಮೆಗೊಳಿಸುವುದರಿಂದ ಬೇರೆ ಉತ್ಪನ್ನದ ಲಾಭವನ್ನು ಹೆಚ್ಚಿಸಬಹುದು.
- ೬) ಫ಼್ರೀ ಸ್ಟಾಂಡಿಂಗ್ ಇನ್ಸರ್ಟ್(FRI) - ಒಂದು ಕೂಪನ್ ಬುಕ್ಲೆಟನ್ನು ವಿತರಿಸುವ ಸಲುವಾಗಿ ಸ್ಥಳಿಯ ಪತ್ರಿಕೆಯ ಜೊತೆಗೆ ಅಳವಡಿಸುವುದು.
- ೭) ಚೆಕ್ ಔಟ್ Dispensers - ಗ್ರಾಹಕರು ಚೆಕ್ ಔಟ್ ಆಗುವ ಸಮಯದಲ್ಲಿ ಅವರು ಖರೀದಿಸಿದ ಉತ್ಪನ್ನಗಳನ್ನು ಆಧರಿಸಿ ಕೂಪನ್ಗಳನ್ನು ನೀಡಲಾಗುತ್ತದೆ.
- ೮) ಮೊಬೈಲ್ ಕೂಪನಿಂಗ್ - ಗ್ರಾಹಕರ ಮೊಬೈಲ್ ಫೋನ್ ಕೂಪನ್ಗಳನ್ನು ಕಳಿಸಲಾಗುವುದು, ಈ ಕೂಪನ್ಗಳನ್ನು ಗ್ರಾಹಕರು ಮಾರಾಟ ಪ್ರತಿನಿಧಿಗೆ ತೋರಿಸಿ ಅದರ ಪ್ರತಿಫಲವನ್ನು ಪಡೆಯಬೇಕು.
- ೯) ರಿಯಾಯಿತಿ - ಗ್ರಾಹಕರು ತಾವು ಖರೀದಿಸಿದ ಉತ್ಪನ್ನದ ರಸೀದಿಯನ್ನು ನಿರ್ಮಾಪಕರಿಗೆ ಅಂಚೆ ವ್ಯವಸ್ಥೆ ಮಾಡಿದರೆ, ಅವರು ಗ್ರಾಹಕರಿಗೆ ತಾವು ಖರ್ಚುಮಾಡಿ ಪಡೆದ ಉತ್ಪನ್ನದ ಸ್ವಲ್ಪ ಬೆಲೆಯನ್ನು ಹಿಂದಿರುಗಿಸುತ್ತಾರೆ.
- ೧೦) ಸ್ಪರ್ಧೆಗಳು/ಪಂದ್ಯಗಳು/ಆಟಗಳು - ಒಂದು ಪ್ರತ್ಯೇಕ ಉತ್ಪನ್ನವನ್ನು ಖರೀದಿಸಿದಾಗ ಗ್ರಾಹಕರು ಸ್ವಯಂಚಾಲಿತವಾಗಿ ಆಟದ ಕ್ರಿಯೆಯಲ್ಲಿ ಭಾಗವಹಿಸಿಬಹುದು.
- ೧೧) ಮಾದರಿ - ಉಚಿತವಾಗಿ ಉತ್ಪನ್ನವನ್ನು ಗ್ರಾಹಕರಿಗೆ ನೀಡುವುದು.
ಆನ್-ಲೈನ್ ವ್ಯವಹಾರ v/s ಮಳಿಗೆಯ ವ್ಯವಹಾರ
[ಬದಲಾಯಿಸಿ]ಆನ್-ಲೈನ್ ಮತ್ತು ಮಳಿಗೆಯಲ್ಲಿ ವಿಧವಿಧವಾದ ರಿಯಾಯಿತಿಗಳು ದೊರೆಯುತ್ತವೆ. ಆನ್-ಶೆಲ್ಫ್ ಕೂಪನ್ಗಳು - ಕೂಪನ್ಗಳನ್ನು ಉತ್ಪನ್ನವಿರುವ ಶೆಲ್ಫ್ ಹತ್ತಿರ ಇರುತ್ತದೆ. ಆನ್-ಲೈನ್ ಕೂಪನ್ಗಳು -ಕೂಪನ್ಗಳು ಆನ್-ಲೈನನಲ್ಲಿ ಲಭ್ಯವಿರುತ್ತದೆ. ಇಂದಿನ ದಿನದಲ್ಲಿ ಗ್ರಾಹಕರು ಆನ್-ಲೈನ್ ಹೆಚ್ಚಾಗಿ ಉತ್ಪನ್ನಗಳನ್ನು ಖರೀದಿಸುತ್ತಾರೆ, ಏಕೆಂದರೆ ಗ್ರಾಹಕರು ಹಲವಾರು ಜಾಲತಾಣ ಗಳಿಗೆ ತೆರಳಿ ತಮಗೆ ಬೇಕಾದ ಉತ್ಪನ್ನವನ್ನು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಇದರಿಂದ ಗ್ರಾಹಕರು ಸ್ವಲ್ಪ ಸಮಯವನ್ನು ಉಳಿಸುತ್ತಾರೆ. ಆದ್ದರಿಂದ ಗ್ರಾಹಕರು ದೈಹಿಕವಾಗಿ ಅಂಗಡಿಗೆ ತೆರಳಿ ಉತ್ಪನ್ನಗಳನ್ನು ಖರೀದಿಸುವವರು ಸ್ವಲ್ಪ ಕಡಿಮೆ. ಆದರೆ ಗ್ರಾಹಕರು ಆನ್-ಲೈನ್ ನಲ್ಲಿ ಖರೀದಿಸಿದರೆ, ಅದಕ್ಕಾಗಿ ಅವರು ಪಾವತಿ ಪ್ರಕ್ರಿಯೆ, ಶಿಪ್ಪಿಂಗ್ ಮತ್ತು ನಿರ್ವಹಣೆ ಶುಲ್ಕವನ್ನು ಕೊಡಬೇಕು ಮತ್ತು ಉತ್ಪನ್ನಗಳು ಆಗಮನಕ್ಕೂ ಕಾಯುತ್ತಿರಬೇಕು. ಆದರೆ ಅಂಗಡಿಗಳಲ್ಲಿ ಗ್ರಾಹಕರು ನೇರವಾಗಿ ಮತ್ತು ವಿಳಂಬವಿಲ್ಲದೆ ಉತ್ಪನ್ನಗಳನ್ನು ಖರೀದಿಸಬಹುದು.
ಟ್ರೇಡ್ ಮಾರಾಟದ ಪ್ರಚಾರ ತಂತ್ರಗಳು
[ಬದಲಾಯಿಸಿ]- ೧) ಟ್ರೇಡ್ ಅಲೋಯೆನ್ಸಸ್
- ೨) ಡೀಲರ್ ಲೋಡರ್
- ೩) ಟ್ರೇಡ್ ಸ್ಪರ್ಧೆ
- ೪) ಪಾಯಿಂಟ್ ಆಫ಼್ ಪರ್ಚೇಸ್ ಪ್ರದರ್ಶನ
- ೫) ತರಬೇತಿ ಕಾರ್ಯಕ್ರಮಗಳು
- ೬) ಪುಶ್ ಮನಿ
ರಿಟೈಲ್ ಮೆಕ್ಯಾನಿಕ್ಸ್
[ಬದಲಾಯಿಸಿ]- ೧) 'X'ನ್ನು ಕೊಂಡರೆ 'Y' ಉಚಿತ, ಅಂದರೆ ಒಂದನ್ನು ಕೊಂಡರೆ ಮತ್ತೊಂದು ಉಚಿತ.
- ೨) Three for 2.
- ೩) ಒಂದು ಪ್ರಮಾಣವನ್ನು (quantity) ಕಡಿಮೆ ಬೆಲೆಗೆ ಖರೀದಿಸಿ.
- ೪) ವಾರದ ರಿಯಾಯಿತಿ X% ಪಡೆಯಿರಿ.
- ೫) ಖರೀದಿಯೊಂದಿಗೆ ಉಚಿತ ಕೊಡುಗೆ.
ಗ್ರಾಹಕ ಚಿಂತನೆ ಪ್ರಕ್ರಿಯೆ
[ಬದಲಾಯಿಸಿ]ಅರ್ಥಪೂರ್ಣ ಉಳಿತಾಯ: ಏರಿಕೆ ಅಥವಾ ಇಳಿಕೆ (Meaningful Savings: Gain or Loss)
[ಬದಲಾಯಿಸಿ]ಗ್ರಾಹಕರು ತಾವು ಖರೀದಿಮಾಡವ ಮೊದಲು ಅವರು ಯೋಚನೆಮಾಡಬೇಕು, ಯಾಕೆಂದರೆ ಅವರಿಗೆ ಆ ಉತ್ಪನ್ನದಿಂದ ಲಾಭ ಅಥವಾ ನಷ್ಟವಾಗುತ್ತದೆಯೊ (ಏರಿಕೆ ಅಥವಾ ಇಳಿಕೆ) ಮೊದಲೆ ಯೋಚಿಸಿ ನಂತರ ಖರೀದಿಮಾಡಬೇಕು. ಉದಾಹರಣೆ- ಏರಿಕೆ ದೃಷ್ಟಿಕೋನದಿಂದ ನೋಡಿದರೆ buy-one-get-one-half-off discount, ಇದು ಗ್ರಾಹಕರಿಗೆ ಲಾಭದಾಯಕವಾಗುವುದು. ಅದೇ ಉದಾಹರಣೆಯನ್ನು ಇಳಿಕೆಯ ದೃಷ್ಟಿಕೋನದಿಂದ ನೋಡಿದರೆ ಗ್ರಾಹಕರು ಯಾವುದೆ ಅವಕಾಶ ತೆಗೆದುಕೊಳ್ಳಲು ಹೋಗುವುದಿಲ್ಲ. ನಷ್ಟ ಸಂವೇದನಿ ಮೌಲ್ಯಕ್ಕೆ ಗಳಿಕೆ ಸಂವೇದನೆಯು ೨.೫ಪಟ್ಟು ಹೆಚ್ಚಿಸುತ್ತದೆ. ನಿರ್ದಿಷ್ಟವಾಗಿ, ಗ್ರಾಹಕರು ತಮ್ಮ ಆಯ್ಕೆಯನ್ನು ಪರಿಗಣಿಸುತ್ತಾರೆ.
ಹಠಾತ್ ಕೊಳ್ಳುವಿಕೆ (Impulse Buying)
[ಬದಲಾಯಿಸಿ]ಹಠಾತ್ ಕೊಳ್ಳುವಿಕೆಯೆಂದರೆ ವ್ಯಾಪಾರಿಯು ಖರೀದಿ ಮಾಡುವಾಗ ಯಾವುದೆ ಯೋಚನೆಯಿಲ್ಲದೆ, ತಕ್ಷಣವಾಗಿ ಖರೀದಿಮಾಡುವುದನ್ನು ಹಠಾತ್ ಕೊಳ್ಳುವಿಕೆಯೆಂದು ಕರೆಯುತ್ತಾರೆ. ಉದಾಹರಣೆ- ಒಬ್ಬ ಗ್ರಾಹಕ, ಒಂದು ಅಂಗಡಿಗೆ ಪ್ರವೇಶಿಸುವ ಮೊದಲು ಯೋಚಿಸಬೇಕು, ಆದರೆ ಅದರ ಬಗ್ಗೆ ಯಾವುದೆ ಮುಂದಾಲೋಚನೆಯಿಲ್ಲದೆ ವಸ್ತುವನ್ನು ಖರೀದಿಸಿದಾಗ ಅದನ್ನು ಹಠಾತ್ ಕೊಳ್ಳುವಿಕೆ. ಅದಕ್ಕಾಗಿ ಉತ್ಪನ್ನದ ತಯಾರಿಕರು ಹೆಚ್ಚಾಗಿ ಪ್ರಚಾರ ಮಾಡುತ್ತಾರೆ ಮತ್ತು ಗ್ರಾಹಕರಿಗೆ ಖರೀದಿ ಮಾಡುವುದಕ್ಕೆ ಪ್ರಚೋದಿಸುತ್ತಾರೆ.
ಬೆಲೆಗಳನ್ನು ಹೋಲಿಸುವುದು (Comparing Prices)
[ಬದಲಾಯಿಸಿ]ಅನೇಕ ಗ್ರಾಹಕರು ಎಡದಿಂದ ಬಲಕ್ಕೆ ಓದುತ್ತಾರೆ. ಅದೇ ರೀತಿಯಲ್ಲಿ ಬೆಲೆಗಳನ್ನು ಸಹ ಹೋಲಿಕೆ ಮಾಡುತ್ತಾರೆ. ಉದಾಹರಣೆ'- ಒಂದು ಉತ್ಪನ್ನದ ಬೆಲೆ ₹೯೩ ಮತ್ತು ಮಾರಾಟದ ಬೆಲೆ ₹೭೯. ಜನರು ಈ ಸಮಯದಲ್ಲಿ ಮೊದಲು ಎಡ ಅಂಕಗಳನ್ನು ಹೋಲಿಕೆ ಮಾಡುತ್ತಾರೆ (೯ ಮತ್ತು ೭) ಮತ್ತು ಅದರ ವ್ಯತ್ಯಾಸ ಗಮನಿಸುತ್ತಾರೆ. ನಂತರ ಗ್ರಾಹಕರು ೯೩ರ ಮತ್ತು ೭೯ರ ನಡುವೆ (₹೧೪) ವ್ಯತ್ಯಾಸವಿದೆ. ಈ ವ್ಯತ್ಯಾಸವು ₹೮೯ ಮತ್ತು ₹೭೫ರ ನಡುವೆಯಿರುವ (₹೧೪)ಕ್ಕಿಂತ ದೊಡ್ಡದೆಂದು ತಪ್ಪಾಗಿ ಗ್ರಹಿಸುತ್ತಾರೆ. ಆದ್ದರಿಂದ ಗ್ರಾಹಕರು ಸಾಮಾನ್ಯವಾಗಿ ಎಡ ಅಂಕಗಳನ್ನು ಆಧರಿಸಿ ಮೊದಲ ಬೆಲೆಯ ಸೆಟ್ ಉತ್ತಮವೆಂದು ನಂಬುತ್ತಾರೆ, ಆದರೆ ಅದು ತಪ್ಪು. ಇದರಿಂದ ಕಂಪನಿಗಳು ಹೆಚ್ಚಾಗಿ ಮಾರಾಟ ಹೆಚ್ಚಿಸುವುದಕ್ಕಿಂತ, ಮಾರಾಟ ಬೆಲೆಯ ತಂತ್ರದ ಲಾಭವನ್ನು ಬಳಸಿಕೊಳ್ಳುತ್ತಾರೆ.
ರೈಟ್ ಡಿಜಿಟ್ ಪರಿಣಾಮ (Right Digit Effect)
[ಬದಲಾಯಿಸಿ]ಒಂದು ಪ್ರತ್ಯೇಕ ಬೆಲೆಯಲ್ಲಿ, ಎಡಭಾಗದ ಅಂಕಗಳು ಒಂದೆಯಿದ್ದರೆ, ಆಗ ರೈಟ್ ಡಿಜಿಟ್ ಪರಿಣಾಮವು ಬಲಭಾಗದಲ್ಲಿರುವ ಅಂಕಗಳ ಮೇಲೆ ಗಮನ ಹರಿಸುತ್ತದೆ. ಈ ಬೆಲೆಯಲ್ಲಿ ಅಂದರೆ ₹45 ಮತ್ತು ₹42ರಲ್ಲಿ ಗ್ರಾಹಕರು ಬಲ ಭಾಗದ ಅಂಕಗಳು ಅಂದರೆ ( ೨ ಮತ್ತು ೫) ರ ವ್ಯತ್ಯಾಸ ನೋಡಿ ರಿಯಾಯಿತಿಯನ್ನು ನಿರ್ಧರಿಸುತ್ತಾರೆ. ಕಂಪನಿಗಳು ಯಾವಾಗಲು ಈ ರೀತಿಯ ಅಂದರೆ ಕಡಿಮೆ ಬಲ ಅಂಕಿಯಗಳನ್ನು ಬಳಸಿ ಇದರಿಂದ ಗ್ರಾಹಕರು ಉತ್ತಮ ಒಪ್ಪಂದ ಮತ್ತು ಲಾಭ ಪಡೆಯಬಹುದೆಂದು ಗ್ರಾಹಕರಿಗೆ ನಂಬಿಸಿ ಅವರಿಗೆ ಮೋಸಮಾಡುತ್ತಾರೆ.
ರೂಪಿಸುವ ಪರಿಣಾಮ (Framing Effect)
[ಬದಲಾಯಿಸಿ]ಈ ರೂಪಿಸುವ ಪರಿಣಾಮ ಯಾವಾಗ ಬರುತ್ತೆಂದರೆ ಒಬ್ಬ ವ್ಯಕ್ತಿಯ ಆದ್ಯತೆಗಳು ಬದಲಾದಾಗ ಈ ಪರಿಣಾಮವು ಉಂಟಾಗುತ್ತದೆ. ಈ ಸಿದ್ಧಾಂತವು ಮೂರು ಉಪವರ್ಗಗಳನ್ನು ಒಳಗೊಂಡಿದೆ: ಅಪಾಯಕಾರಿ ಆಯ್ಕೆ ಫ್ರೇಮಿಂಗ್, ಗುಣಲಕ್ಷಣ ಫ್ರೇಮಿಂಗ್ ಮತ್ತು ಗುರಿ ಫ್ರೇಮಿಂಗ್.
ಹೊರಗಿನ ಶಕ್ತಿಗಳು (Outside Forces)
[ಬದಲಾಯಿಸಿ]ಗ್ರಾಹಕರ ಶಾಪಿಂಗ್ ಮಾಡುವ ಸಮಯದಲ್ಲಿ ಅವರ ನಿರ್ಧಾರದ ಮೇಲೆ ಹಲವಾರು ಹೊರಗಿನ ಅಂಶಗಳು ಪ್ರಭಾವ ಬೀರುತ್ತವೆ. ಉದಾಹರಣೆ- ಒಂದು ಉತ್ಪನ್ನದ ಬೆಲೆಗೆ ರಿಯಾಯಿತಿ ಇದ್ದರು ಸಹ ಆ ಉತ್ಪನ್ನದ ಗುಣಮಟ್ಟವು ಗ್ರಾಹಕರು ಐಟಂ ಖರೀದಿಮಾಡಲು ತಡೆಯಬಹುದು. ಒಂದು ಉತ್ಪನ್ನದ ಮೇಲೆ ಗ್ರಾಹಕರು ಕೆಟ್ಟ ವಿಮರ್ಶೆ ಕೊಟ್ಟಿದ್ದರೆ ಅಥವಾ ಕಡಿಮೆ ಆಯಸ್ಸು ಹೊಂದಿದ್ದರೆ ಗ್ರಾಹಕರು ಖರೀದಿಸುವುದಿಲ್ಲ, ಒಂದು ಉತ್ಪನ್ನದ ಮೇಲೆ ಗ್ರಾಹಕರು ಹಿಂದೆ ಕೆಟ್ಟ ಅನುಭವಗಳನ್ನು ಮತ್ತು ನಿರೀಕ್ಷೆಗಳನ್ನು ಹೊಂದ್ದಿದರು ಸಹ ಅದನ್ನು ಖರೀದಿಸುವುದಿಲ್ಲ.[೧][೨]
ಉಲ್ಲೇಖಗಳು
[ಬದಲಾಯಿಸಿ]