ವಿಷಯಕ್ಕೆ ಹೋಗು

ಹಿಸಾರ್ (ನಗರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಸರ್ ಮಾಂಟೇಜ್

ಹಿಸಾರ್ ಹರಿಯಾಣ ರಾಜ್ಯದ ಪಟ್ಟಣ. ಇದು ನವದೆಹಲಿಯ ಪಶ‍್ಚಿಮಕ್ಕೆ ೧೬೪ ಕಿ.ಮೀ. ದೂರದಲ್ಲಿದೆ. ಕ್ರಿಸ್ತ ಪೂರ್ವ ೩ನೇ ಶತಮಾನದಲ್ಲಿ ಮೌರ್ಯರು, ೧೪ನೇ ಶತಮಾನದಲ್ಲಿ ತುಘಲಕ್,೧೬ನೇ ಶತಮಾನದಲ್ಲಿ ಮುಘಲರು ಮತ್ತು ೧೯ನೇ ಶತಮಾನದಲ್ಲಿ ಬ್ರಿಟೀಷರು ಸೇರಿದಂತೆ ಹಲವಾರು ಸಾಮ್ರಾಟರು ಮತ್ತು ಅಧಿಕಾರಿಗಳು ಈ ನಗರವನ್ನು ಆಳಿದ್ದಾರೆ.[] ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ ಹಿಸಾರ್ ಪಂಜಾಬ್ ರಾಜ್ಯದೊಂದಿಗೆ ಏಕೀಕರಿಸಲ್ಪಟ್ಟಿತ್ತು. ೧೯೬೬ರಲ್ಲಿ ಪಂಜಾಬ್ ವಿಭಾಜನೆಯಾದಾಗ, ಹಿಸಾರ್ ಹರಿಯಾಣದ ಭಾಗವಾಯಿತು.

ಇತಿಹಾಸ

[ಬದಲಾಯಿಸಿ]

ಹತ್ತಿರದ ಸ್ಥಳಗಳಾದ ರಾಖಿಗಢಿ, ಸಿಸ್ವಾಲ್ ಮತ್ತು ಲೋಹರಿ ರಾಘೋಗಳಲ್ಲಿ ಪುರಾತತ್ತ್ವ ಶಾಸ್ತ್ರಉತ್ಖನನಗಳು ಹರಪ್ಪನ ಪೂರ್ವದಿಂದ ಮಾನವನ ಇರುವಿಕೆಯನ್ನು ಸೂಚಿಸುತ್ತದೆ. ನಂತರ ಆರ್ಯ ಜನರು ದ್ರಿಶದ್ವತಿ ನದಿ ಸುತ್ತಲೂ ನೆಲೆಸಿದರು. ಜೈನ ಸಾಹಿತ್ಯ ಉತ್ತರಾಧಾಯನ ಸೂತ್ರವು ಹಿಸಾರ್ ಪ್ರದೇಶವನ್ನು ಕುರು ದೇಶದ ಇಸುಕಾರ ಪಟ್ಟಣ ಎಂದು ಉಲ್ಲೇಖಿಸಿದೆ.[] ಆದ್ದರಿಂದ ಇಸುಕಾರ ಎಂಬುದು ಹಿಸಾರ್ ನ ಹಿಂದಿನ ಹೆಸರೆಂದು ನಂಬಲಾಗಿದೆ.[]

ತುಘಲಕ್ ಆಳ್ವಿಕೆ

[ಬದಲಾಯಿಸಿ]

ಫಿರೋಜ್ ಷಾ ತುಘಲಕ್ ದೆಹಲಿಯ ಸುಲ್ತಾನರ ಮೇಲೆ ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ಹಿಸಾರ್ ನಗರವನ್ನು ಕಂಡುಹಿಡಿದನು. ಈ ನಗರವನ್ನು ಮೊದಲು ಹಿಸಾರ್-ಎ-ಫಿರೋಜ ಎಂದು ಕರೆಯುತ್ತಿದ್ದರು.[] ಪೂರ್ವದಲ್ಲಿ ದೆಹಲಿ ಗೇಟ್ ಮತ್ತು ಮೋರಿ ಗೇಟ್, ದಕ್ಷಿಣದಲ್ಲಿ ನಾಗೋರಿ ಗೇಟ್, ಪಶ್ಚಿಮದಲ್ಲಿ ತಲಾಕಿ ಗೇಟ್, ಹೀಗೆ ಗೋಡೆಯ ರೀತಿಯ ಕೋಟೆಯನ್ನು ನಿರ್ಮಿಸಿ ನಾಲ್ಕು ಬಾಗಿಲನ್ನು ಮಾಡಿದ್ದರು. ಈ ಕೋಟೆಯ ನಿರ್ಮಾಣವು ಕ್ರಿ.ಶ ೧೩೫೪ರಲ್ಲಿ ಆರಂಭಗೊಂಡು ೧೩೫೬ರಲ್ಲಿ ಪೂರ್ಣಗೊಂಡಿತು. ಕೋಟೆಯ ಮಧ್ಯದಲ್ಲಿ ಫಿರೋಜ್ ಷಾನ ಅರಮನೆಯನ್ನು ಮಾಡಲಾಗಿತ್ತು. [] ತೈಮೂರ್ ಲಂಗ್ ಕ್ರಿ. ಶ ೧೩೯೮ರಲ್ಲಿ ಕೋಟೆಗೆ ಬೆಂಕಿಯನ್ನು ಹಚ್ಚಿ ಆ ನಗರವನ್ನು ವಶಪಡಿಸಿಕೊಂಡಿದ್ದನು. ಒಂದನೆಯ ಪಾಣಿಪತ್ ಯುದ್ಧದಲ್ಲಿ ಬಾಬರ್, ಇಬ್ರಾಯಿಮ್ ಲೋದಿಯನ್ನು ಸೋಲಿಸುವ ಮೊದಲು ಈ ನಗರವು ಸಯ್ಯದ್ ಹಾಗೂ ಲೋದಿ ವಂಶದ ಆಳ್ವಿಕೆಗೆ ಒಳಪಟ್ಟಿತ್ತು.[]

ಮುಘಲ್ ಆಳ್ವಿಕೆ

[ಬದಲಾಯಿಸಿ]

೧೫೨೪ - ೧೫೨೬ರಲ್ಲಿ ಬಾಬರ್ ಭಾರತವನ್ನು ಆಕ್ರಮಿಸಿದ್ದಾಗ ಹಿಸಾರ್ ಇಬ್ರಾಯಿಮ್ ಲೋದಿಯ ಸಾಮ್ರಾಜ್ಯದ ಭಾಗವಾಗಿತ್ತು. ೧೫೨೬ರಲ್ಲಿ ನಡೆದ ಪಾಣಿಪತ್ ಯುದ್ಧದಲ್ಲಿ ಹುಮಾಯೂನ್‌, ಇಬ್ರಾಯಿಮ್ ಲೋದಿಯನ್ನು ಸೋಲಿಸಿ ಹಿಸಾರ್ ನಗರವನ್ನು ವಶಪಡಿಸಿಕೊಂಡನು. ಬಾಬರ್, ಹಿಸಾರ್ ನಗರವನ್ನು ಯುದ್ಧದ ಯಶಸ್ಸಿನ ಪ್ರತಿಫಲವಾಗಿ ಹುಮಾಯೂನ್‌ ಗೆ ಹಸ್ತಾಂತರಿಸಿದನು. ೧೫೪೦ ರಲ್ಲಿ ಶೇರ್ ಷಾ ಸೂರಿ ಹುಮಾಯೂನ್‌ ನನ್ನು ಸೋಲಿಸಿ ಹಿಸಾರ್ ನಗರವನ್ನು ವಶಪಡಿಸಿಕೊಂಡನು. ೧೫೫೫ರಲ್ಲಿ ಹುಮಾಯೂನ್‌ ಹಿಸಾರ್ ನಗರವನ್ನು ಹಿಂದಕ್ಕೆ ಪಡೆದುಕೊಂಡು ಅಕ್ಬರ್ ಗೆ ವಹಿಸಿದನು. ಈ ನಗರವು ೧೭೬೦ರವರೆಗೆ ಮುಘಲರ ಆಳ್ವಿಕೆಯಲ್ಲಿತ್ತು.

ಬ್ರಿಟೀಷ್ ಆಳ್ವಿಕೆ

[ಬದಲಾಯಿಸಿ]

೧೭೯೮ರಲ್ಲಿ ಹಿಸಾರ್ ನಗರವನ್ನು ಜಾರ್ಜ್ ಥಾಮಸ್ ಎಂಬ ಐರಿಶ್ ಸಾಹಸಿಗನೊಬ್ಬ ಆಕ್ರಮಿಸಿಕೊಂಡನು. ಈ ಪ್ರದೇಶವು ೧೮೦೩ರಲ್ಲಿ ಈಸ್ಟ್‌ ಇಂಡಿಯ ಕಂಪನಿಯ ಆಡಳಿತಕ್ಕೆ ಒಳಪಟ್ಟಿತ್ತು. ಸ್ವಾತಂತ್ರ್ಯದ ನಂತರ ಈ ಪ್ರದೇಶವು ಪಂಜಾಬಿನ ಭಾಗವಾಗಿತ್ತು. ಇಂದು ಈ ನಗರವು ಹರಿಯಾಣದ ೬ ಆಡಳಿತ ಕೇಂದ್ರಗಳಲ್ಲಿ ಒಂದಾಗಿದೆ.[]

ಆರ್ಥಿಕತೆ

[ಬದಲಾಯಿಸಿ]

ಹಿಸಾರ್ ನಗರದಲ್ಲಿ ಹೆಚ್ಚು ಉಕ್ಕಿನ ಕಾರ್ಖಾನೆಗಳಿವೆ. ಆದ್ದರಿಂದ ಇದನ್ನು 'ಸಿಟಿ ಆಫ್ ಸ್ಟೀಲ್' ಎಂದು ಕರೆಯಲಾಗುತ್ತದೆ.[] ಜೂನ್ ೨೦೧೨ರಲ್ಲಿ ಹಿಸಾರ್ ಭಾರತದ ಅತಿದೊಡ್ಡ ಕಲಾಯಿ ಕಬ್ಬಿಣದ ಉತ್ಪಾದಕ ನಗರವಾಗಿತ್ತು. ಜವಳಿ ಮತ್ತು ವಾಹನ ಉದ್ಯಮವು ನಗರದ ಆರ್ಥಿಕತೆಗೆ ಪ್ರಮುಖ ಕೊಡುಗೆಯಾಗಿದೆ. ವಿಶ್ವದ ಹತ್ತನೇ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ರವರ ಜಿಂದಾಲ್ ಗ್ರೂಪ್ ಹಿಸಾರ್ ನಲ್ಲಿದೆ. ಜಿಂದಾಲ್ ಸ್ಟೇನ್‌ಲೆಸ್ ಸ್ಟೀಲ್ ಭಾರತದ ಅತಿದೊಡ್ಡ ನಾಣ್ಯ ಉತ್ಪಾದಕರು. ರೇಜರ್ ಬ್ಲೇಡ್ ಗಳಿಗೆ ಬೇಕಾದ ಸ್ಟೇನ್‌ಲೆಸ್ ಸ್ಟೀಲ್ ಸ್ಟ್ರಿಪ್ ಗಳನ್ನು ಉತ್ಪಾದಿಸುವುದರಲ್ಲಿ ಜಿಂದಾಲ್ ವಿಶ್ವದಲ್ಲಿಯೇ ಅತಿದೊಡ್ಡ ಸ್ಥಾನದಲ್ಲಿದೆ.[]ಹಿಸಾರ್ ನಗರ ಹರಿಯಾಣದ ಕೌಂಟರ್ ಮ್ಯಾಗ್ನೆಟ್ ನಗರವೆಂದು ಕರೆಯುತ್ತಾರೆ. ಎಸ್ಸೆಲ್ ಗ್ರೂಪ್ ಮತ್ತು ಜೀ ಎಂಟರ್‌ಟೈನ್‌ಮೆಂಟ್ ಎಂಟರ್ ಪ್ರೈಸಸ್ನ ಸ್ಥಾಪಕ ಸುಭಾಷ್ ಚಂದ್ರ ಹಿಸಾರ್ ಮೂಲದವರು.

ಕ್ರೀಡೆ

[ಬದಲಾಯಿಸಿ]

ಹಿಸಾರ್ ನ ಕ್ರೀಡಾಪಟುಗಳು: ಚಾಂದಗಿ ರಾಮ್, ಗೀತಿಕ ಜಾಕರ್. ಕೃಷ್ಣಾ ಪೂನಿಯಾ, ಮನ್ವಿಂದರ್ ಬಿಸ್ಲಾ, ನಿರ್ಮಲಾ ದೇವಿ, ಉದಯ್ ಚಂದ್, ವಿಕಾಸ್ ಕ್ರಿಶನ್ ಯಾದವ್, ಪಿಂಕಿ ಜಂಗ್ರಾ, ಮನಂದೀಪ್ ಸಿಂಗ್.

ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]

ಬಾಲ್ಸಮಂಡ್, ಸಿಸ್ವಾಲ್, ಬನವಾಲಿ, ಕನ್ವಾರಿ ಮತ್ತು ರಾಖಿಗಢಿ ಸಿಂಧೂ ನಾಗರೀಕತೆಯ ಕೆಲವು ತಾಣಗಳಾಗಿವೆ. ಇಲ್ಲಿ ಬ್ಲೂ ಬರ್ಡ್ ಲೇಕ್ ಎಂಬ ಕೃತಕ ಸರೋವರವು ಇದೆ.[೧೦] ಜಿಂಕೆ ಉದ್ಯಾನವನ ಮತ್ತು ಶತಾವರ್ ವಾಟಿಕ ಹರ್ಬಲ್ ಪಾರ್ಕ್ ನಗರದ ಹೊರವಲಯದಲ್ಲಿದೆ.[೧೧] ಇದನ್ನು ಹರಿಯಾಣ ರಾಜ್ಯದ ಅರಣ್ಯ ಇಲಾಖೆಯು ನಿರ್ವಹಿಸುತ್ತಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "History | District Hisar, Government of Haryana | India". Retrieved 8 January 2020.
  2. "Imperial Gazetteer2 of India, Volume 13, page 145 -- Imperial Gazetteer of India -- Digital South Asia Library". dsal.uchicago.edu. Retrieved 7 January 2020.
  3. "Wayback Machine" (PDF). web.archive.org. 1 May 2014. Archived from the original on 1 ಮೇ 2014. Retrieved 7 January 2020.{{cite news}}: CS1 maint: bot: original URL status unknown (link)
  4. "History | District Hisar, Government of Haryana | India". Retrieved 8 January 2020.
  5. "Culture & Heritage | District Hisar, Government of Haryana | India". Retrieved 8 January 2020.
  6. "hisar history". web.archive.org. Archived from the original on 4 ಫೆಬ್ರವರಿ 2012. Retrieved 7 January 2020.{{cite news}}: CS1 maint: bot: original URL status unknown (link)
  7. "Hisar | India". Encyclopedia Britannica. Retrieved 8 January 2020. {{cite news}}: Cite has empty unknown parameter: |1= (help)
  8. "Wayback Machine" (PDF). web.archive.org. 13 April 2016. Archived from the original on 13 ಏಪ್ರಿಲ್ 2016. Retrieved 7 January 2020.{{cite news}}: CS1 maint: bot: original URL status unknown (link)
  9. "Jindal Stainless (Hisar) History | Jindal Stainless (Hisar) Information - The Economic Times". economictimes.indiatimes.com. Retrieved 7 January 2020.
  10. "Blue Bird (Hisar)". web.archive.org. 11 October 2011. Archived from the original on 11 ಅಕ್ಟೋಬರ್ 2011. Retrieved 7 January 2020.{{cite news}}: CS1 maint: bot: original URL status unknown (link)
  11. "Deer Park Hisar". web.archive.org. 20 April 2013. Archived from the original on 20 ಏಪ್ರಿಲ್ 2013. Retrieved 7 January 2020.{{cite news}}: CS1 maint: bot: original URL status unknown (link)