ಹೆಲಿಯೋಡೋರಸ್ ಗರುಡಗಂಬ
ಹೆಲಿಯೋಡೋರಸ್ ಗರುಡಗಂಬವು ಕ್ರಿ.ಪೂ. ೧೧೩ ರ ಸುಮಾರಿಗೆ ಮಧ್ಯ ಭಾರತ [೧] ದ ವಿದಿಶಾದ ಇಂದಿನ ಬೆಸ್ನಗರದ ಹತ್ತಿರ , ಶುಂಗ ದೊರೆ ಭಾಗಭದ್ರನ ಆಸ್ಥಾನದಲ್ಲಿನ ಇಂಡೋ-ಗ್ರೀಕ್ ದೊರೆಯಾದ ಅಂತಲಿಕಿತ ಅಥವಾ ಆಂಟಿಯಾಲ್ಕಿಡಾಸ್ ನ ರಾಯಭಾರಿ ಹೆಲಿಯೋಡೋರಸ್ ಎಂಬಾತನು ಸ್ಥಾಪಿಸಿದ ಕಲ್ಲಿನ ಕಂಬವಾಗಿದೆ. ಈ ಜಾಗವು ಸಾಂಚಿಯ ಬೌದ್ಧ ಸ್ತೂಪದಿಂದ ಕೇವಲ ಐದು ಮೈಲಿಗಳ ಅಂತರದಲ್ಲಿದೆ.
ಕಂಬದ ಮೇಲುಗಡೆ ಗರುಡನ ಕೆತ್ತನೆ ಇದ್ದು , ಇದನ್ನು ಹೆಲಿಯೋಡೋರಸ್ ನು ದೇವನಾದ ವಾಸುದೇವ ನಿಗೆ ಅರ್ಪಿಸಿದ್ದಾನೆ . ಇದು ವಾಸುದೇವ ಮಂದಿರದ ಮುಂದುಗಡೆ ಇದೆ.
ಶಾಸನಗಳು
[ಬದಲಾಯಿಸಿ]ಕಂಬದ ಮೇಲೆ ಎರಡು ಶಾಸನಗಳಿವೆ .
ಮೊದಲ ಬರಹವು ಬ್ರಾಹ್ಮಿ ಲಿಪಿಯಲ್ಲಿದ್ದು ಹೆಲಿಯೋಡೋರಸ್ , ಇಂಡೋ-ಗ್ರೀಕ್ ರಾಜ್ಯ , ಮತ್ತು ಶುಂಗ ಸಾಮ್ರಾಜ್ಯದೊಂದಿಗಿನ ಅವನ ಸಂಬಂಧದ ಕುರಿತಾಗಿದೆ.
" ದೇವದೇವಸ ವಾಸುದೇವಸ ಗರುಡಧ್ವಜೋ ಅಯಂ
ಕರಿತೊ ಹೋಲಿಯೋದರೇಣ ಭಾಗ-
ವತೇನ ದಿಯಸ್ಯ ಪುತ್ರೇಣ ತಾಖಶಿಲಕೇನ
ಯೋನದತೇನ ಆಗತೇನ ಮಹಾರಾಜಸ
ಅಂತಲಿಕಸ ಉಪತಾ ಸಂಕಾಸಂ-ರಣೋ
ಕಾಶೀಪುತ್ರಸ ಭಾಗಭದ್ರಸ ತ್ರಾತಾರಸ
ವಸೇನ ಚತುರ್ದಶೇನ ರಾಜೇನ ವಧಮಾನಸ ''— ಮೂಲಬರಹ
ತನ್ನ ಆಳಿಕೆಯ ಹದಿನಾಲ್ಕನೇ ವರ್ಷದಲ್ಲಿ ವರ್ಧಮಾನನಾಗಿರುವ ತ್ರಾತಾರನಾದ ಕಾಶೀಪುತ್ರ ಭಾಗಭದ್ರ ರಾಜನೆಡೆಗೆ ಅಂಟಾಲಿಕಿಡಾಸ್ ಮಹಾರಾಜನಿಂದ ಪ್ರೇಷಿತನಾಗಿ ಯವನದೂತನಾಗಿ ಬಂದ, ಡಿಯಾನ್ ಎಂಬವನ ಪುತ್ರನಾದ, ತಕ್ಷಶಿಲೆಯ ನಿವಾಸಿಯಾದ, ಭಾಗವತನಾದ ಹೆಲಿಯೋಡೋರ್ ನಿಂದ ದೇವದೇವನಾದ ವಾಸುದೇವನಿಗೆ ಈ ಗರುಡಧ್ವಜವು ಸ್ಥಾಪಿಸಲ್ಪಟ್ಟಿತು.
ಇಲ್ಲಿ ಸ್ಪಷ್ಟವಾಗಿರದಿದ್ದರೂ ಕೂಡ ಈ ಶಾಸನವು , ಹೆಲಿಯೋಡೋರಸ್ ನು ಒಬ್ಬ ಭಾಗವತ ಅಂದರೆ 'ಭಗವಂತನ ಭಕ್ತ'ನು ಎಂದು ಸೂಚಿಸುತ್ತದೆ.
ಕಂಬದ ಮೇಲಿನ ಎರಡನೇ ಶಾಸನವು ಹೆಲಿಯೋಡೋರಸ್ ನ ನಂಬುಗೆಯ ಧರ್ಮದ ಆಧ್ಯಾತ್ಮಿಕ ತಿರುಳನ್ನು ವಿಸ್ತಾರವಾಗಿ ವಿವರಿಸುತ್ತದೆ.
" ತ್ರೀಣಿ ಅಮೃತಪದಾನಿ (ಸು)ಅನುಸ್ಥಿತಾನಿ
ನಯಂತಿ ಸ್ವಗೋ ಧಮೋ ಅಪ್ರಮದೋ
— ಮೂಲಬರಹ
ದಮ, ತ್ಯಾಗ, ಅಪ್ರಮಾದ - ಈ ಮೂರು ಅಮೃತಪದಗಳು ಅನುಷ್ಠಿತವಾದರೆ - ಅವು (ಅನುಷ್ಠಾನ ಮಾಡಿದವನನ್ನು ) ಸ್ವರ್ಗಕ್ಕೆ ಒಯ್ಯುತ್ತವೆ
ಮಹತ್ವ
[ಬದಲಾಯಿಸಿ]ಹೆಲಿಯೋಡೋರಸ್ ಮತ್ತು ಸಮಕಾಲೀನ ಅಗತೋಕ್ಲಸ್ ಇವರುಗಳು ಹಿಂದೂಧರ್ಮ ದ ವೈಷ್ಣವ ಪಂಥಕ್ಕೆ ದಾಖಲಾದ ಅತಿಮೊದಲಿನ ಮತಾಂತರಿಗಳು ಎನ್ನಬಹುದು. ಕೆಲ ವಿದ್ವಾಂಸರ ಅಬಿಪ್ರಾಯದಂತೆ ಅವನನ್ನು ಇವತ್ತಿಗೂ ಇರುವ ಶಿಲಾಸ್ತಂಭವೊಂದ ಸ್ಥಾಪಕನಾಗಿರುವನಾದರೂ ಭಾಗವತ-ಕೃಷ್ಣ ಪಂಥಕ್ಕೆ ಮೊದಲ ಮತಾಂತರಿ ಎನ್ನಲಾಗದು. ಅವನನ್ನು ರಾಯಭಾರಿಯನ್ನಾಗಿ ಕಳಿಸಿದ ರಾಜನೂ ಸೇರಿ ಅನೇಕ ಜನರು ಕೂಡ ಭಾಗವತ ಸಂಪ್ರದಾಯದ ಅನುಯಾಯಿಗಳೇ.
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]