ವಿಷಯಕ್ಕೆ ಹೋಗು

ಭಾವನಾ ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾವನಾ ರಾವ್
ಟೈಗರ್ ಗಲ್ಲಿ ಚಿತ್ರದಲ್ಲಿ ಭಾವನಾ ರಾವ್
Born೬ ಜೂನ್ ೧೯೮೯
Other namesಶಿಖಾ []
Occupation(s)ನಟಿ, ಭರತನಾಟ್ಯ ಕಲಾವಿದೆ
Years active೨೦೦೮–ಇಲ್ಲಿಯವರೆಗೆ

ವೃತ್ತಿ ಜೀವನ

[ಬದಲಾಯಿಸಿ]

ಭಾವನಾ ರಾವ್ ಭಾರತೀಯ ಚಲನಚಿತ್ರ ನಟಿ. ಗಾಳಿಪಟ ಚಲನಚಿತ್ರದ ಮೂಲಕ ೨೦೦೮ರಲ್ಲಿ ಇವರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೋಲಾ ಕೊಲಯ ಮುಂಧರಿಕಾ ಮತ್ತು ವಿನ್‌ಮೀಂಗಲ್‌ಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ಅವರು ಜನಮನ್ನಣೆಯನ್ನು ಗಳಿಸಿದರು. [] [] [] [] ಅವರು ಭರತನಾಟ್ಯ ನರ್ತಕಿ ಮತ್ತು ಪ್ರಮುಖ ಚಲನಚಿತ್ರ ನಟಿಯಾಗುವ ಮೊದಲು ವಿವಿಧ ದೂರದರ್ಶನ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದಾರೆ [] .


ಭಾವನಾ ರಾವ್ ಅವರು ಕನ್ನಡ ಚಿತ್ರಗಳಲ್ಲದೇ ತಮಿಳು ಚಲನಚಿತ್ರಗಳಾದ "ವಿನ್ಮೀಂಗಲ್"(೨೦೧೨), "ಮನಯುದ್ಧಮ್"(೨೦೧೩) ಗಳಲ್ಲಿ ನಟಿಸಿದ್ದಾರೆ. ಇವರು "ಅಟ್ಟಹಾಸ"(೨೦೧೩), ಮಹಾ ಭಕ್ತ ಸಿರಿಯಾಲ (೨೦೧೪), ಪರಪಂಚ (೨೦೧೬), ಸತ್ಯಹರಿಶ್ಚಂದ್ರ (೨೦೧೭) ಮತ್ತು "ದಯವಿಟ್ಟು ಗಮನಿಸಿ" (2017)ಗಳಲ್ಲಿ ನಟಿಸಿದ್ದಾರೆ. ೨೦೧೭ ರಲ್ಲಿ ಭಾವನಾ ಅವರು ಸತೀಶ್ ನೀನಾಸಂ ಮತ್ತು ರೋಶ್ನಿ ಪ್ರಕಾಶ್ ಜೊತೆಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ಅವರ "ಟೈಗರ್ ಗಲ್ಲಿ" ಚಿತ್ರದಲ್ಲಿ ನಟಿಸಿದ್ದರು. []

ಭಾವನಾ ರಾವ್ ಮತ್ತು ಬಿಗ್ ಬಾಸ್-೫

[ಬದಲಾಯಿಸಿ]

ಭಾವನಾ ರಾವ್ ಅವರು ೨೦೧೭ರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ರಿಯಾಲಿಟಿ ಶೋನ ಐದನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು []

ಭಾವನಾ ರಾವ್ ಅವರ ಅಭಿನಯದ ಚಿತ್ರಗಳು

[ಬದಲಾಯಿಸಿ]
Key
ಇನ್ನೂ ಬಿಡುಗಡೆಯಾಗದ ಚಿತ್ರಗಳನ್ನು ತೋರಿಸುತ್ತದೆ
ವರ್ಷ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿಗಳು
೨೦೦೮ ಗಾಳಿಪಟ [೧೦] ಪಾವನಿ ಕನ್ನಡ ನಾಮನಿರ್ದೇಶಿತ, ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ಕನ್ನಡ
೨೦೧೧ ಕೋಲ ಕೋಲಯ ಮುಂಧರಿಕ ವೇಣಿ ತಮಿಳು
ವಾರೆ ವಾಹ್ [೧೧] ರೂಪ ಕನ್ನಡ
ವಿನ್ಮೀಂಗಲ್ ಮೀರಾ ತಮಿಳು
೨೦೧೩ ವನ ಯುದ್ಧಮ್ ಚಾಂದಿನಿ ತಮಿಳು ಇಲ್ಲಿ ಶಿಖಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. [೧೨]
ಅಟ್ಟಹಾಸ [೧೩] ಚಾಂದಿನಿ ಕನ್ನಡ
ಮನಿ ಹನಿ ಶನಿ [೧೪] ಕಾಮಾಕ್ಷಿ
೨೦೧೪ ಬಹುಪರಾಕ್ [೧೫] ಅವಳೇ ಅತಿಥಿ ಪಾತ್ರ
೨೦೧೬ ಪರಪಂಚ [೧೬]
೨೦೧೭ ಸತ್ಯ ಹರಿಶ್ಚಂದ್ರ [೧೭] ಜಯಲಕ್ಷ್ಮಿ ಪೋಷಕ ಪಾತ್ರದಲ್ಲಿ (ಮಹಿಳೆ) ಅತ್ಯುತ್ತಮ ನಟನೆಗಾಗಿ SIIMA ಪ್ರಶಸ್ತಿ - ಕನ್ನಡ
ದಯವಿಟ್ಟು ಗಮನಿಸಿ [೧೮]
ಟೈಗರ್ ಗಲ್ಲಿ [೧೯]
೨೦೧೮ ರಾಂಬೋ ೨ ಅವಳೇ ಹಾಡಿನಲ್ಲಿ ವಿಶೇಷ ಪಾತ್ರ
ದಿ ವಿಲನ್
೨೦೧೯ ಬೈಪಾಸ್ ರೋಡ್ [೨೦] ಸೋನಿಯಾ ಹಿಂದಿ ಹಿಂದಿಯಲ್ಲಿನ ಚೊಚ್ಚಲ ಚಿತ್ರ
ಮಥನಂ [೨೧] ತೆಲುಗು
೨೦೨೧ † ತುರ್ತು ನಿರ್ಗಮನ [೨೨] ಕನ್ನಡ ಈ ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನೂ ಪ್ರದರ್ಶನ ಕಂಡಿಲ್ಲ

ಉಲ್ಲೇಖಗಳು

[ಬದಲಾಯಿಸಿ]
  1. ಸಿನಿಪೋಸ್ಟ್ ತಾಣದಲ್ಲಿ ಭಾವನಾ ರಾವ್ ಅವರ ಜನ್ಮದಿನದ ಮಾಹಿತಿ
  2. ಭಾವನಾ ರಾವ್ ಅವರು ಕನ್ನಡೇತರ ಭಾಷೆಗಳಲ್ಲಿ ಶಿಖಾ ಎಂಬ ಹೆಸರಿನಿಂದ ಕರೆಯಲ್ಪಡುವ ಬಗ್ಗೆ
  3. Sunayana Suresh (2012-03-10). "Bhavana Rao's next releasing this week". The Times of India. Archived from the original on 2012-07-16. Retrieved 2012-08-06.
  4. "Shika's triple delight - Telugu Movie News". IndiaGlitz. 2012-03-16. Archived from the original on 24 September 2015. Retrieved 2012-08-06.
  5. TNN (2008-12-22). "'I won't succumb to the casting couch'". The Times of India. Archived from the original on 2012-07-07. Retrieved 2012-08-06.
  6. "Benign and beaming Bhavana Rao". IndiaGlitz. 2007-08-08. Archived from the original on 31 March 2012. Retrieved 2012-08-06.
  7. "Bhavana Rao rechristens her name to 'Shikha' |". News.cinespot.net. 2012-03-28. Archived from the original on 8 February 2013. Retrieved 2013-05-22.
  8. "Bhavana Rao Also Known As Shikha". funnymela.in. 2018-07-13. Archived from the original on 16 September 2018. Retrieved 2018-07-13.
  9. ಬಿಗ್ ಬಾಸ್ನಲ್ಲಿ ಭಾವನಾ| IMDB ಮಾಹಿತಿ
  10. IMDB ಅಲ್ಲಿ ಗಾಳಿಪಟ ಚಿತ್ರದ ಮಾಹಿತಿ
  11. IMDB ಅಲ್ಲಿ ವಾರೆ ವಾಹ್ ಚಿತ್ರದ ಮಾಹಿತಿ
  12. ಭಾವನಾ ರಾವ್ ಅವರು ಕನ್ನಡೇತರ ಭಾಷೆಗಳಲ್ಲಿ ಶಿಖಾ ಎಂಬ ಹೆಸರಿನಿಂದ ಕರೆಯಲ್ಪಡುವ ಬಗ್ಗೆ
  13. IMDB ಅಲ್ಲಿ ಅಟ್ಟಹಾಸ ಚಿತ್ರದ ಮಾಹಿತಿ
  14. IMDB ಅಲ್ಲಿ "ಮನಿ ಹನಿ ಶನಿ" ಚಿತ್ರದ ಮಾಹಿತಿ
  15. IMDB ಅಲ್ಲಿ ಬಹುಪರಾಕ್ ಚಿತ್ರದ ಮಾಹಿತಿ
  16. IMDB ಅಲ್ಲಿ ಪರಪಂಚ ಚಿತ್ರದ ಮಾಹಿತಿ
  17. IMDB ಅಲ್ಲಿ ಸತ್ಯ ಹರಿಶ್ಚಂದ್ರ ಚಿತ್ರದ ಮಾಹಿತಿ
  18. IMDB ಅಲ್ಲಿ ದಯವಿಟ್ಟು ಗಮನಿಸಿ ಚಿತ್ರದ ಮಾಹಿತಿ
  19. IMDB ಅಲ್ಲಿ ಟೈಗರ್ ಗಲ್ಲಿ ಚಿತ್ರದ ಮಾಹಿತಿ
  20. IMDB ಅಲ್ಲಿ ಬೈಪಾಸ್ ರೋಡ್ ಚಿತ್ರದ ಮಾಹಿತಿ
  21. IMDB ಅಲ್ಲಿನ ಮಥನಂ ಚಿತ್ರದ ಮಾಹಿತಿ
  22. IMDB ಅಲ್ಲಿನ ತುರ್ತು ನಿರ್ಗಮನ ಚಿತ್ರದ ಮಾಹಿತಿ


ಬಾಹ್ಯ ಕೊಂಡಿಗಳು

[ಬದಲಾಯಿಸಿ]