ಸರ್ರೆ
Surrey | |
---|---|
150px | |
Motto of county council: Making Surrey a better place | |
Geography | |
Status | Ceremonial & Non-metropolitan county |
Origin | Historic |
Region | South East England |
Area - Total - Admin. council |
Ranked 35th 1,663 km2 (642 sq mi) Ranked 25th |
Admin HQ | Kingston (extraterritorially) |
ISO 3166-2 | GB-SRY |
ONS code | 43 |
NUTS 3 | UKJ23 |
Demography | |
Population - Total (ಟೆಂಪ್ಲೇಟು:English statistics year) - Density - Admin. council |
Ranked 12th 1,135,500 683/km2 (1,770/sq mi) [[List of non-metropolitan counties of England by population|Ranked ಟೆಂಪ್ಲೇಟು:English admin counties]] |
Ethnicity | 95.0% White 2.2% S. Asian |
Politics | |
ಚಿತ್ರ:SurreyCC.png http://www.surreycc.gov.uk/ | |
Executive | Conservative |
Members of Parliament | |
Districts | |
ಸರ್ರೆ /ˈsʌri/ ಎಂಬುದು ಇಂಗ್ಲೆಂಡ್‌ನ ಆಗ್ನೇಯ ಭಾಗದಲ್ಲಿರುವ ಒಂದು ಕೌಂಟಿಯಾಗಿದೆ ಮತ್ತು ಇದು ತವರು ಕೌಂಟಿಗಳ ಪೈಕಿ ಒಂದೆನಿಸಿದೆ. ವ್ಯಾಪಕವಾದ ಲಂಡನ್, ಕೆಂಟ್, ಪೂರ್ವ ಸಸೆಕ್ಸ್, ಪಶ್ಚಿಮ ಸಸೆಕ್ಸ್, ಹ್ಯಾಂಪ್‌ಷೈರ್ ಮತ್ತು ಬರ್ಕ್‌ಷೈರ್ ಮೊದಲಾದವುಗಳಿಗೆ ಸದರಿ ಕೌಂಟಿಯು ಗಡಿಯಾಗಿ ಪರಿಣಮಿಸಿದೆ. ಗಿಲ್ಡ್‌ಫೋರ್ಡ್ ಎಂಬುದು ಐತಿಹಾಸಿಕ ಕೌಂಟಿ ಪಟ್ಟಣವೆನಿಸಿಕೊಂಡಿದೆ.[೧] ಸರ್ರೆ ಕೌಂಟಿಯ ಪರಿಷತ್ತು ಥೇಮ್ಸ್ ದಡದ ಮೇಲಿನ ಕಿಂಗ್ಸ್‌ಟನ್‌ನಲ್ಲಿ ನೆಲೆಗೊಂಡಿದೆಯಾದರೂ, ಇದು 1965ರಿಂದಲೂ ವ್ಯಾಪಕವಾದ ಲಂಡನ್‌ನ ಭಾಗವೆನಿಸಿಕೊಂಡಿದೆ.
ಸರ್ರೆಯು ೧೧ ಆಡಳಿತ ಪ್ರದೇಶಗಳು ಮತ್ತು ಜಿಲ್ಲೆಗಳಾಗಿ ವಿಭಜಿಸಲ್ಪಟ್ಟಿದೆ. ಅವುಗಳೆಂದರೆ: ಎಲ್ಮ್‌ಬ್ರಿಜ್, ಎಪ್ಸಮ್ ಮತ್ತು ಎವೆಲ್, ಗಿಲ್ಡ್‌ಫೋರ್ಡ್, ಮೋಲ್ ಕಣಿವೆ, ರೀಗೇಟ್ ಮತ್ತು ಬಾನ್‌ಸ್ಟೆಡ್, ರನ್ನಿಮೀಡ್, ಸ್ಪೆಲ್‌ಥಾರ್ನ್, ಸರ್ರೆ ಹೀತ್, ಟ್ಯಾನ್‌ಡ್ರಿಜ್, ವೇವರ್ಲಿ, ವೋಕಿಂಗ್. ೨೦೦೮ರ ಮೇ ೧ ರಂದು ನಡೆದ ಚುನಾವಣೆಗಳ ನಂತರ, ಸರ್ರೆಯಲ್ಲಿನ ೧೧ ಪರಿಷತ್ತುಗಳ ಪೈಕಿ ೧೦ ಪರಿಷತ್ತುಗಳ ಮೇಲೆ ಕನ್ಸರ್ವೆಟಿವ್ ಪಕ್ಷದವರು ಹಿಡಿತವನ್ನು ಸಾಧಿಸಿದ್ದರೆ, ಎಪ್ಸಮ್ ಮತ್ತು ಎವೆಲ್ ಪರಿಷತ್ತು ರೆಸಿಡೆಂಟ್ಸ್ ಅಸೋಸಿಯೇಷನ್ ಹಿಡಿತದಲ್ಲಿದೆ. ಕೌಂಟಿಯ ಗಡಿಗಳ ವ್ಯಾಪ್ತಿಯೊಳಗಿನ ಎಲ್ಲಾ ೧೧ ಸಂಸದೀಯ ಚುನಾವಣಾ ಕ್ಷೇತ್ರಗಳ ಮೇಲೆ ಕನ್ಸರ್ವೆಟಿವ್ ಪಕ್ಷದವರು ಹಿಡಿತವನ್ನು ಹೊಂದಿದ್ದಾರೆ.
ಭೌಗೋಳಿಕತೆ
[ಬದಲಾಯಿಸಿ]ಪೂರ್ವದಿಂದ ಪಶ್ಚಿಮದೆಡೆಗೆ ಸಾಗುವ ನಾರ್ತ್ ಡೌನ್ಸ್‌ನ ಸೀಮೆಸುಣ್ಣ ಸ್ತರದ ಏಣಿನಿಂದಾಗಿ ಸರ್ರೆ ಕೌಂಟಿಯು ಎರಡಾಗಿ ವಿಭಜಿಸಲ್ಪಟ್ಟಿದೆ. ವೇಯ್ ಮತ್ತು ಮೋಲ್ ಎಂಬ ಸರ್ರೆಯ ಪ್ರಧಾನ ನದಿಗಳು ಸದರಿ ಏಣನ್ನು ಕೊರೆದು ದಾರಿಮಾಡಿಕೊಂಡು ಮುಂದೆ ನುಗ್ಗುತ್ತವೆ ಹಾಗೂ ಇವು ಥೇಮ್ಸ್ ನದಿಯ ಉಪನದಿಗಳಾಗಿವೆ; ಸ್ಥಳೀಯ ಸರ್ಕಾರದ ಆಧುನಿಕ ಮರುಸಂಘಟನೆಗಳಿಗೆ ಮುಂಚಿತವಾಗಿ ಥೇಮ್ಸ್ ನದಿಯು ಸದರಿ ಕೌಂಟಿಯ ಉತ್ತರದ ಗಡಿಯನ್ನು ರೂಪಿಸಿತ್ತು. ಡೌನ್ಸ್‌ನ ಸ್ತರದ ಉತ್ತರ ಭಾಗಕ್ಕಿರುವ ಭೂಮಿಯು ಬಹುತೇಕವಾಗಿ ಸಮತಟ್ಟಾಗಿದ್ದು, ಥೇಮ್ಸ್ ನದಿಯ ಜಲಾನಯನ ಭೂಮಿಯ ಒಂದು ಭಾಗವನ್ನು ರೂಪಿಸುತ್ತದೆ. ಈ ಪ್ರದೇಶದ ಭೂವೈಜ್ಞಾನಿಕ ಲಕ್ಷಣವು ವಿಶಿಷ್ಟವಾಗಿದ್ದು, ಪೂರ್ವ ಭಾಗದಲ್ಲಿ ಲಂಡನ್ ಜೇಡಿಯ ರಚನೆಯಿದ್ದರೆ, ಪಶ್ಚಿಮ ಭಾಗದಲ್ಲಿ ಬ್ಯಾಗ್‌ಷಾಟ್ ಮರಳುದಿಣ್ಣೆಯಿದೆ ಹಾಗೂ ನದಿಗಳ ಇಕ್ಕೆಲಗಳಲ್ಲಿಯೂ ಮೆಕ್ಕಲು ಮಣ್ಣಿನ ಸಂಚಯಗಳು ಕಂಡುಬರುತ್ತವೆ. ಸದರಿ ಕೌಂಟಿಯ ಪಶ್ಚಿಮದ ಭಾಗದಲ್ಲಿ, ಡೌನ್ಸ್ ಸ್ತರದ ದಕ್ಷಿಣದ ಕಡೆಗೆ ಮರಳುಗಲ್ಲಿನ ಸರ್ರೆ ಬೆಟ್ಟಗಳು ಇದ್ದರೆ, ಮತ್ತಷ್ಟು ಪೂರ್ವಕ್ಕೆ ಸಾಗಿದಾಗ ತಗ್ಗಿನ ವನಾಂತರ ಪ್ರದೇಶದ ಸಮತಲದ ಭೂಮಿಯು ಕಂಡುಬರುತ್ತದೆ; ಇದು ಉನ್ನತವಾದ ವನಾಂತರ ಪ್ರದೇಶದ ಬೆಟ್ಟಗಳ ಅಂಚಿಗೆ ಅತ್ಯಂತ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ. ಡೌನ್ಸ್ ಸ್ತರ ಹಾಗೂ ದಕ್ಷಿಣಕ್ಕಿರುವ ಪ್ರದೇಶಗಳು ಭೂವೈಜ್ಞಾನಿಕ ಸಂಚಯಗಳ ಒಂದು ಸಮಾನಕೇಂದ್ರಕ ಮಾದರಿಯ ಒಂದು ಭಾಗವನ್ನು ರೂಪಿಸುತ್ತವೆ; ದಕ್ಷಿಣದ ಕೆಂಟ್ ಮತ್ತು ಸಸೆಕ್ಸ್‌ನ ಬಹುತೇಕ ಭಾಗದಾದ್ಯಂತ ವಿಸ್ತರಿಸುವ ಈ ಭೂವೈಜ್ಞಾನಿಕ ಸಂಚಯಗಳು ಸೀಮೆಸುಣ್ಣದ ಸ್ತರಪಂಕ್ತಿಯ ಜೇಡಿಯ ರಚನೆ, ಕೆಳಗಿನ ಹಸಿರು ಮರಳುಗಲ್ಲಿನ ಸ್ತರ ಮತ್ತು ಡೌನ್ಸ್‌ನ ಸೀಮೆಸುಣ್ಣದ ಸ್ತರದಿಂದ ಪ್ರಧಾನವಾಗಿ ಮಾಡಲ್ಪಟ್ಟಿದೆ.
ಸರ್ರೆಯ ಬಹುತೇಕ ಭಾಗವು ಮಹಾನಗರ ಪ್ರದೇಶದ ಹಸಿರು ಪಟ್ಟಿಯಲ್ಲಿದೆ. ಒಂದು ದೊಡ್ಡ ಪ್ರಮಾಣದಲ್ಲಿರುವ ಪಕ್ವವಾದ ಕಾಡುಪ್ರದೇಶವನ್ನು ಇದು ಒಳಗೊಂಡಿದೆ (ಪರಸ್ಪರ ಹೆಣೆದುಕೊಂಡಿರುವ ಒಂದು ಜೋಡಿ ಓಕ್ ಎಲೆಗಳ ರೂಪದಲ್ಲಿ ಚಿತ್ರಿಸಲ್ಪಟ್ಟಿರುವ ಸರ್ರೆ ಕೌಂಟಿ ಪರಿಷತ್ತಿನ ಅಧಿಕೃತ ಲಾಂಛನದಲ್ಲಿ ಇದು ಪ್ರತಿಬಿಂಬಿತವಾಗಿದೆ). ಗಮನಾರ್ಹವಾಗಿರುವ ಇದರ ಅನೇಕ ಸೌಂದರ್ಯ ತಾಣಗಳಲ್ಲಿ ಬಾಕ್ಸ್ ಬೆಟ್ಟ, ಲೀತ್ ಬೆಟ್ಟ, ಫ್ರೆನ್‌ಶಾಮ್ ಕೊಳಗಳು, ನ್ಯೂಲ್ಯಾಂಡ್ಸ್ ಕಾರ್ನರ್ ಮತ್ತು ಪಟೆನ್‌ಹ್ಯಾಂ ಮತ್ತು ಕ್ರೂಕ್ಸ್‌ಬರಿ ಗೋಮಾಳಗಳು ಸೇರಿವೆ. ಇಂಗ್ಲೆಂಡ್‌ನಲ್ಲಿ, ಸರ್ರೆಯು ಅತೀವವಾಗಿ ಗಿಡಮರ ತುಂಬಿಕೊಂಡಿರುವ ಕೌಂಟಿ ಎನಿಸಿಕೊಂಡಿದ್ದು, 11.8%ನಷ್ಟಿರುವ[೨] ಒಂದು ರಾಷ್ಟ್ರೀಯ ಸರಾಸರಿಗೆ ಹೋಲಿಸಿದಾಗ ಇದರ ವ್ಯಾಪ್ತಿಯು 22.4%ನಷ್ಟಿದೆ; ಅಂತೆಯೇ ತಮ್ಮ ಕಾರ್ಯತಂತ್ರದ ಯೋಜನೆಗಳಲ್ಲಿ ಹೊಸ ಕಾಡುಪ್ರದೇಶಗಳನ್ನು ಸೇರಿಸಿಕೊಳ್ಳದ ಕೆಲವೇ ಕೌಂಟಿಗಳ ಪೈಕಿ ಇದು ಒಂದೆನಿಸಿಕೊಂಡಿದೆ. ಬಾಕ್ಸ್ ಬೆಟ್ಟವು UKಯಲ್ಲಿನ ಸ್ವಾಭಾವಿಕ ಕಾಡುಪ್ರದೇಶದ ಅತಿಹಳೆಯ ಹೊಕ್ಕುಬಳಸದ ಪ್ರದೇಶವನ್ನು ಹೊಂದಿದ್ದು, ಇದು ಯುರೋಪ್‌ನಲ್ಲಿನ ಅತಿಹಳೆಯ ಪ್ರದೇಶಗಳಲ್ಲಿ ಒಂದೆನಿಸಿದೆ. ಸರ್ರೆಯು ತನ್ನ ಪಶ್ಚಿಮ ಭಾಗದಲ್ಲಿನ ಮರಳಿನಂಥ ಮಣ್ಣುಗಳ ಮೇಲೆ ಇಂಗ್ಲೆಂಡ್‌ನ ತಗ್ಗಿನ ಪ್ರದೇಶ ಹೀತ್‌ನ ಪ್ರಧಾನ ಕೇಂದ್ರೀಕರಣವನ್ನು ಹೊಂದಿದೆ.
ವ್ಯವಸಾಯವು ಸಾಂದ್ರೀಕೃತವಾಗಿಲ್ಲದ ಕಾರಣದಿಂದಾಗಿ, ಇಲ್ಲಿ ಅನೇಕ ಗೋಮಾಳಗಳು ಮತ್ತು ಸುಲಭ ಗಮ್ಯತೆಯ ಜಮೀನುಗಳು ಕಂಡುಬರುತ್ತವೆ; ಇವುಗಳೊಂದಿಗೆ ಪಾದಚಾರಿ ಹಾದಿಗಳು ಮತ್ತು ಅಶ್ವಪಥಗಳ ಒಂದು ವ್ಯಾಪಕ ಜಾಲವನ್ನು ಇಲ್ಲಿ ಕಾಣಬಹುದು. ಒಂದು ಚಿತ್ರವತ್ತಾದ ಸುದೀರ್ಘ-ಅಂತರದ ಪಥವೆನಿಸಿಕೊಂಡಿರುವ ನಾರ್ತ್ ಡೌನ್ಸ್ ಮಾರ್ಗವು ಇದಕ್ಕೊಂದು ನಿದರ್ಶನ. ಅಂತೆಯೇ, ಒಂದು ಅತ್ಯಂತ ದೊಡ್ಡ ಕುದುರೆ ಸಮುದಾಯವನ್ನು ಹೊಂದುವುದರೊಂದಿಗೆ, ಗ್ರಾಮೀಣ ಪ್ರದೇಶದ ಬಿಡುವಿನ ಚಟುವಟಿಕೆಗಳಿಗೆ ಸರ್ರೆ ಕೌಂಟಿಯು ಬಹುಪಾಲು ಕೊಡುಗೆಯನ್ನು ನೀಡುತ್ತದೆ.
ಡೋರ್ಕಿಂಗ್ ಸಮೀಪವಿರುವ ಲೀತ್ ಬೆಟ್ಟವು ಸರ್ರೆಯಲ್ಲಿನ ಅತಿ ಎತ್ತರದ ಉನ್ನತಿ ಎನಿಸಿಕೊಂಡಿದೆ. ಇದು ಸಮುದ್ರ ಮಟ್ಟದಿಂದ ಮೇಲಕ್ಕೆ 293,[೩] 294[೪] ಅಥವಾ 295[೫] ಮೀಟರುಗಳಷ್ಟು (961, 965 ಅಥವಾ 968 ಅಡಿ) ಎತ್ತರವಿದೆ ಮತ್ತು ಪಶ್ಚಿಮ ಬರ್ಕ್‌ಷೈರ್‌ನಲ್ಲಿರುವ ವಾಲ್‌ಬರಿ ಬೆಟ್ಟದ 297 metres (974 ft) ನಂತರ ಇಂಗ್ಲೆಂಡ್‌ನ ಆಗ್ನೇಯ ಭಾಗದಲ್ಲಿರುವ ಅತಿ ಎತ್ತರದ ಎರಡನೇ ತಾಣ ಎನಿಸಿಕೊಂಡಿದೆ.
ವಸಾಹತುಗಳು
[ಬದಲಾಯಿಸಿ]- ಇದನ್ನೂ ನೋಡಿ: ಸರ್ರೆಯಲ್ಲಿನ ಸ್ಥಳಗಳ ಪಟ್ಟಿ.
ಸರ್ರೆಯ ಜನಸಂಖ್ಯೆಯು ಸರಿಸುಮಾರಾಗಿ 1.1 ದಶಲಕ್ಷದಷ್ಟಿದೆ.[೬] ಗಿಲ್ಡ್‌ಫೋರ್ಡ್ ಎಂಬುದು ಇದರ ಅತಿದೊಡ್ಡ ಪಟ್ಟಣವಾಗಿದ್ದು ಇದರ ಜನಸಂಖ್ಯೆಯು 66,773ರಷ್ಟಿದೆ; 62,796ರಷ್ಟು ಜನಸಂಖ್ಯೆಯನ್ನು ಹೊಂದಿರುವ ವೋಕಿಂಗ್ ನಂತರದ ನಿಕಟ ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ಎವೆಲ್ ಮತ್ತು ಕೇಂಬರ್ಲಿ ಆಕ್ರಮಿಸಿಕೊಂಡಿದ್ದು, ಇವುಗಳ ಜನಸಂಖ್ಯೆಯು ಕ್ರಮವಾಗಿ 39,994 ಮತ್ತು 30,155ರಷ್ಟಿದೆ. ೨೫೦೦೦ ಮತ್ತು ೩೦೦೦೦ ನಿವಾಸಿಗಳ ನಡುವಿನ ಜನಸಂಖ್ಯೆಯನ್ನು ಹೊಂದಿರುವ ಪಟ್ಟಣಗಳಲ್ಲಿ ಆಶ್‌ಫೋರ್ಡ್, ಎಪ್ಸಮ್, ಫರ್ನ್‌ಹ್ಯಾಂ, ಸ್ಟೇಯ್ನ್ಸ್ ಮತ್ತು ರೆಡ್‌ಹಿಲ್ ಸೇರಿವೆ.[೭] ಗಿಲ್ಡ್‌ಫೋರ್ಡ್ ಐತಿಹಾಸಿಕ ಕೌಂಟಿ ಪಟ್ಟಣವಾಗಿದ್ದರೂ ಸಹ, ಕೌಂಟಿ ಆಡಳಿತವು 1791ರಲ್ಲಿ ನೆವಿಂಗ್ಟನ್‌ಗೆ ಹಾಗೂ 1893ರಲ್ಲಿ ಥೇಮ್ಸ್ ಮೇಲೆ ನೆಲೆಗೊಂಡಿರುವ ಕಿಂಗ್ಸ್‌ಟನ್‌ಗೆ ವರ್ಗಾಯಿಸಲ್ಪಟ್ಟಿತು. 1965ರ ಏಪ್ರಿಲ್ 1ರಿಂದ ಕೌಂಟಿ ಪರಿಷತ್ತಿನ ಕೇಂದ್ರ ಕಾರ್ಯಾಲಯಗಳು ಕೌಂಟಿಯ ಗಡಿರೇಖೆಗಳ ಹೊರಗಡೆ ನೆಲೆಗೊಂಡಿವೆ; ಲಂಡನ್ ಸರ್ಕಾರದ 1963ರ ಕಾಯಿದೆಯ ದೆಸೆಯಿಂದ ವ್ಯಾಪಕವಾದ ಲಂಡನ್ ವ್ಯಾಪ್ತಿಯೊಳಗೆ ಕಿಂಗ್ಸ್‌ಟನ್ ಮತ್ತು ಇತರ ಪ್ರದೇಶಗಳು ಸೇರಿಸಲ್ಪಟ್ಟಾಗಿನಿಂದ ಇದು ಜಾರಿಗೆ ಬಂದಿತು.[೮] ವೋಕಿಂಗ್‌ನಲ್ಲಿನ ಹೊಸ ತಾಣವೊಂದಕ್ಕೆ ಕಚೇರಿಗಳನ್ನು ಬದಲಾಯಿಸಲು ಹಮ್ಮಿಕೊಳ್ಳಲಾಗಿದ್ದ ಇತ್ತೀಚಿನ ಯೋಜನೆಗಳನ್ನು ಈಗ ಕೈಬಿಡಲಾಗಿದೆ.[೯] ಸರ್ರೆಯು ಲಂಡನ್‌ಗೆ ಸಮೀಪದಲ್ಲಿರುವ ಕಾರಣದಿಂದಾಗಿ, ಸರ್ರೆಯಲ್ಲಿ ನಿತ್ಯ ಪ್ರಯಾಣದ ಅನೇಕ ಪಟ್ಟಣಗಳು ಮತ್ತು ಹಳ್ಳಿಗಳು ಕಂಡುಬರುತ್ತವೆ; ಅಷ್ಟೇ ಅಲ್ಲ, ಈ ಸಾಮೀಪ್ಯತೆಯ ಕಾರಣದಿಂದಾಗಿ ಸರ್ರೆಯಲ್ಲಿ ಜನಸಂಖ್ಯೆಯ ಸಾಂದ್ರತೆಯು ಉನ್ನತ ಮಟ್ಟದಲ್ಲಿದೆ ಹಾಗೂ ಈ ಪ್ರದೇಶವು UKಯ ಸಂಪದ್ಭರಿತ ಭಾಗಗಳಲ್ಲಿ ಒಂದೆನಿಸಿಕೊಂಡಿದೆ. ವ್ಯಾಪಕವಾದ ಲಂಡನ್, ಮಹಾನಗರ ಪ್ರದೇಶದ ಕೌಂಟಿಗಳು ಮತ್ತು ಬ್ರಿಸ್ಟಲ್ ಇವುಗಳನ್ನು ಹೊರತುಪಡಿಸಿದರೆ, ಸರ್ರೆಯು ಬ್ರಿಟನ್‌ನ ಅತ್ಯಂತ ದಟ್ಟ ಜನಸಂಖ್ಯೆಯ ಕೌಂಟಿಯಾಗಿದೆ. ಸದರಿ ಕೌಂಟಿಯ ಈಶಾನ್ಯ ಪ್ರದೇಶದ ಬಹುತೇಕ ಭಾಗವು ಒಂದು ನಗರದ ಪ್ರದೇಶವಾಗಿದ್ದು, ಅದು ವ್ಯಾಪಕವಾದ ಲಂಡನ್‌ಗೆ ಹೊಂದಿಕೊಂಡಿರುವಂತಿದೆ. ಪಶ್ಚಿಮ ಭಾಗದಲ್ಲೊಂದು ನಗರಕೂಟವಿದ್ದು, ಸರ್ರೆ ಕೇಂಬರ್ಲಿ ಮತ್ತು ಫರ್ನ್‌ಹ್ಯಾಂನಲ್ಲಿನ ಗಡಿಯೂ ಸೇರಿದಂತೆ ಹ್ಯಾಂಪ್‌ಷೈರ್/ಸರ್ರೆ ಗಡಿಯ ಮೇಲೆ ಈ ನಗರಕೂಟವು ಸವಾರಿ ಮಾಡುತ್ತದೆ.
ಇತಿಹಾಸ
[ಬದಲಾಯಿಸಿ]ಬ್ರಿಟಿಷ್ ಮತ್ತು ರೋಮನ್ ಸರ್ರೆ
[ಬದಲಾಯಿಸಿ]ರೋಮನ್ನರ ಕಾಲಕ್ಕೂ ಮುಂಚಿತವಾಗಿ, ಇಂದು ಸರ್ರೆ ಎಂಬುದಾಗಿ ಕರೆಯಲ್ಪಡುತ್ತಿರುವ ಪ್ರದೇಶವು ಪ್ರಾಯಶಃ ಅಟ್ರೆಬೇಟ್ಸ್ ಬುಡಕಟ್ಟಿನಿಂದ ಆಕ್ರಮಿಸಲ್ಪಟ್ಟಿತ್ತು; ವರ್ತಮಾನದ ಹ್ಯಾಂಪ್‌ಷೈರ್ ಕೌಂಟಿಯಲ್ಲಿನ ಕ್ಯಾಲೆವಾ ಆಟ್ರೆಬೇಟಮ್‌ನಲ್ಲಿ ಈ ಬುಡಕಟ್ಟು ಕೇಂದ್ರೀಕರಿಸಲ್ಪಟ್ಟಿತ್ತು. ಈ ಬುಡಕಟ್ಟು ಹಾಗೂ ಉತ್ತರ ದಡದ ಮೇಲಿನ ಶಕ್ತಿಯುತ ಕ್ಯಾಟುವೆಲ್ಲೌನಿ ಬುಡಕಟ್ಟಿನ ನಡುವಿನ ಸಂಬಂಧಗಳನ್ನು ವಿವರಿಸುವ ರೋಮನ್ ಪಠ್ಯಗಳಿಂದ ತಿಳಿದುಬರುವ ಪ್ರಕಾರ, ಅಟ್ರೆಬೇಟ್ಸ್ ಬುಡಕಟ್ಟು ಜನರು ಥೇಮ್ಸ್ ನದಿಯ ದಕ್ಷಿಣದ ದಡವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಸುಮಾರು 42ADಯ ಅವಧಿಯಲ್ಲಿ, ಕ್ಯಾಟುವೆಲ್ಲೌನಿಯ ರಾಜ ಕ್ಯುನೊಬೆಲಿನಸ್ (ವೆಲ್ಷ್ : ಸಿನ್‌ಫೆಲಿನ್ ಅಪ್ ಟೆಗ್‌ಫಾನ್) ಮರಣಿಸಿದ ಹಾಗೂ ಅವನ ಗಂಡುಮಕ್ಕಳು ಮತ್ತು ಅಟ್ರೆಬೇಟ್ಸ್‌ನ ರಾಜ ವೆರಿಕಾ ನಡುವೆ ಯುದ್ಧವು ಪ್ರಾರಂಭವಾಯಿತು. ಸದರಿ ಘರ್ಷಣೆಯಲ್ಲಿ ಅಟ್ರೆಬೇಟ್ಸ್ ಬುಡಕಟ್ಟಿನವರು ಸೋಲಿಸಲ್ಪಟ್ಟರು, ಅವರ ರಾಜಧಾನಿಯನ್ನು ವಶಮಾಡಿಕೊಳ್ಳಲಾಯಿತು ಮತ್ತು ಅವರ ಜಮೀನುಗಳು ಕ್ಯಾಟುವೆಲ್ಲೌನಿ ಬುಡಕಟ್ಟಿನ ಅಧೀನಕ್ಕೆ ಒಳಪಟ್ಟಿತು; ಕ್ಯಾಮ್ಯುಲೊಡ್ಯೂನಮ್‌ನಿಂದ ಆಳುತ್ತಿದ್ದ ಟೋಗೊಡ್ಯೂಮ್ನಸ್ ಎಂಬಾತ ಈಗ ಇದರ ನೇತೃತ್ವವನ್ನು ವಹಿಸಿದ್ದ. ಗೌಲ್‌ಗೆ ಪಲಾಯನ ಮಾಡಿದ ವೆರಿಕಾ ನೆರವಿಗಾಗಿ ರೋಮನ್ನರಿಗೆ ಮನವಿ ಸಲ್ಲಿಸಿದ. 43ADಯ ಅವಧಿಯಲ್ಲಿ ಬ್ರಿಟನ್ ಮೇಲೆ ನಡೆದಿದ್ದ ತಮ್ಮ ಆಕ್ರಮಣದ ಸಂದರ್ಭದಲ್ಲಿ ಅಟ್ರೆಬೇಟ್ಸ್ ಬುಡಕಟ್ಟಿನವರು ರೋಮ್ ಜೊತೆಗೆ ಮಿತ್ರರಾಗಿದ್ದರು. ಸ್ಟೇನ್ ಬೀದಿ ಮತ್ತು ಕಡಿಮೆ ಪರಿಚಿತವಾಗಿರುವ ಇತರ ರೋಮನ್ ರಸ್ತೆಗಳು ಸರ್ರೆ ಪ್ರದೇಶದಲ್ಲಿ ಹಾದುಹೋಗಿದ್ದನ್ನು ಕಾಣಬಹುದಾಗಿತ್ತು. ಫಾರ್ಲೆ ಹೀತ್‌ನಲ್ಲಿ ಮತ್ತು ವ್ಯಾನ್‌ಬರೊ ಸಮೀಪದಲ್ಲಿ ರೋಮನ್ನರ ದೇವಾಲಯಗಳಿದ್ದವು.
ಸ್ಯಾಕ್ಸನ್ ಬುಡಕಟ್ಟುಗಳು ಮತ್ತು ಅಧೀನ-ರಾಜ್ಯ
[ಬದಲಾಯಿಸಿ]5ನೇ ಮತ್ತು 6ನೇ ಶತಮಾನಗಳ ಅವಧಿಯಲ್ಲಿ, ಸರ್ರೆಯನ್ನು ಸ್ಯಾಕ್ಸನ್ನರು ಗೆದ್ದುಕೊಂಡರು ಮತ್ತು ಅಲ್ಲಿ ನೆಲೆಗೊಂಡರು. ಈ ಕಾಲಾವಧಿಯಲ್ಲಿ ಸರ್ರೆಯ ವಿಭಿನ್ನ ಭಾಗಗಳಲ್ಲಿ ವಾಸಮಾಡಿರಬಹುದಾದ ಹಲವಾರು ಸ್ಯಾಕ್ಸನ್ ಬುಡಕಟ್ಟುಗಳ ಹೆಸರುಗಳನ್ನು ಸ್ಥಳದ ಹೆಸರುಗಳ ಆಧಾರದ ಮೇಲೆ ಊಹಿಸಲಾಗಿದೆ. ಇವುಗಳಲ್ಲಿ ಗೋಧೆಲ್ಮಿಂಗಾಸ್ (ಗೋದಲ್ಮಿಂಗ್ ಸುತ್ತಲಿನವು), ಟೆಟಿಂಗಾಸ್ (ಟೂಟಿಂಗ್ ಸುತ್ತಲಿನವು) ಮತ್ತು ವೊಸಿಂಗಾಸ್ (ಬರ್ಕ್‌ಷೈರ್‌ನಲ್ಲಿನ ವೋಕಿಂಗ್ ಮತ್ತು ವೋಕಿಂಗ್‌ಹ್ಯಾಂ ನಡುವೆ ಇರುವಂಥವು) ಸೇರಿವೆ. ಮರ್ಸಿಯಾದ ಬುಡಕಟ್ಟಿನ ಹೈಡೇಜ್‌ನಲ್ಲಿ ಪಟ್ಟಿಮಾಡಲಾಗಿರುವ ನೋಕ್ಸ್ ಗಾಗಾ ಮತ್ತು ಓಹ್ಟ್ ಗಾಗಾ ಬುಡಕಟ್ಟುಗಳು, ಸರ್ರೆಯಲ್ಲಿ ವಾಸಿಸುತ್ತಿರುವ ಎರಡು ವಿಭಿನ್ನ ಗುಂಪುಗಳಿಗೆ ಉಲ್ಲೇಖಿಸುತ್ತವೆ ಎಂದೂ ಸಹ ಊಹಿಸಲಾಗಿದೆ. ಒಟ್ಟಾಗಿ ಅವರು 7,000 ಹೈಡ್‌ಗಳಷ್ಟು ಪ್ರದೇಶದಲ್ಲಿ ನೆಲೆಗೊಂಡಿದ್ದರು ಎಂದು ಲೆಕ್ಕಾಚಾರ ಮಾಡಲಾಗಿದೆ. ಒಂದು ದೊಡ್ಡದಾದ ಮಧ್ಯದ ಸ್ಯಾಕ್ಸನ್ ರಾಜ್ಯದ ಭಾಗವಾಗಿ ಸರ್ರೆಯು ರೂಪುಗೊಂಡಿರಬಹುದು ಅಥವಾ ಅದು ಥೇಮ್ಸ್‌ನ ಉತ್ತರ ಭಾಗದ ಪ್ರದೇಶಗಳನ್ನೂ ಒಳಗೊಂಡಿರುವ ಕೂಟದ ಭಾಗವಾಗಿರಬಹುದು. ಸರ್ರೆ ಎಂಬ ಹೆಸರು ಸಥ್ರೀಜ್ ಎಂಬುದರಿಂದ ಜನ್ಯವಾಗಿದೆ; ಸಥ್ರೀಜ್ ಎಂದರೆ "ದಕ್ಷಿಣದ ಪ್ರದೇಶ" ಎಂದರ್ಥ. ಮಧ್ಯದ ಸ್ಯಾಕ್ಸನ್ ಭೂಪ್ರದೇಶದ ದಕ್ಷಿಣದ ಅರ್ಧಭಾಗವಾಗಿರುವ ತನ್ನ ಸ್ಥಾನಮಾನದಿಂದ ಇದು ಪ್ರಾಯಶಃ ಹುಟ್ಟಿಕೊಂಡಿರಬಹುದು.
ಒಂದು ವೇಳೆ ಇದು ಅಸ್ತಿತ್ವದಲ್ಲಿ ಇದ್ದುದೇ ಆಗಿದ್ದರೆ, ಮಧ್ಯದ ಸ್ಯಾಕ್ಸನ್ ರಾಜ್ಯವು ೭ನೇ ಶತಮಾನದ ವೇಳೆಗೆ ಕಣ್ಮರೆಯಾಗಿತ್ತು, ಮತ್ತು ಸರ್ರೆಯು 825ರಲ್ಲಿ ವೆಸೆಕ್ಸ್ ವತಿಯಿಂದ ಕಾಯಮ್ಮಾಗಿ ಒಳಸೇರಿಸಿಕೊಳ್ಳಲ್ಪಡುವವರೆಗೆ ಕೆಂಟ್, ಎಸೆಕ್ಸ್, ಸಸೆಕ್ಸ್, ವೆಸೆಕ್ಸ್ ಮತ್ತು ಮೆರಿಕಾ ರಾಜ್ಯಗಳ ನಡುವಿನ ಒಂದು ವಿವಾದಿತ ಗಡಿನಾಡು ಪ್ರದೇಶವಾಗಿ ಹೊರಹೊಮ್ಮಿತ್ತು. ಈ ಅಸ್ಥಿರತೆಯ ಸನ್ನಿವೇಶದ ಹೊರತಾಗಿಯೂ, ಪರಸ್ಪರ ಹೊಂದಿಕೊಂಡಿರುವ ಒಂದು ಪ್ರಾದೇಶಿಕ ಘಟಕವಾಗಿ ಇದು ತನ್ನ ಗುರುತನ್ನು ಉಳಿಸಿಕೊಂಡಿತು. ೭ನೇ ಶತಮಾನದ ಅವಧಿಯಲ್ಲಿ, ಸರ್ರೆಯು ಕ್ರೈಸ್ತಮತೀಯವಾಯಿತು ಮತ್ತು ಲಂಡನ್ ಡಯೋಸಿಸ್‌ನ ಪೂರ್ವ ಸ್ಯಾಕ್ಸನ್ ವಲಯದ ಭಾಗವನ್ನು ಆರಂಭದಲ್ಲಿ ರೂಪಿಸಿತು; ಆ ಸಮಯದಲ್ಲಿ ಅದು ಪೂರ್ವ ಸ್ಯಾಕ್ಸನ್ ಆಳ್ವಿಕೆಯ ಅಡಿಯಲ್ಲಿತ್ತು ಎಂಬುದನ್ನು ಇದು ಸೂಚಿಸುತ್ತದೆ. ಆದರೆ ಕಾಲಾನಂತರದಲ್ಲಿ ವಿಂಚೆಸ್ಟರ್ ಡಯೋಸಿಸ್‌ನ ಪಶ್ಚಿಮ ಸ್ಯಾಕ್ಸನ್ ವಲಯಕ್ಕೆ ಅದು ವರ್ಗಾಯಿಸಲ್ಪಟ್ಟಿತು. ಆಂಗ್ಲ-ಸ್ಯಾಕ್ಸನ್ ಕಾಲಾವಧಿಯ ಉದ್ದಕ್ಕೂ ಮತ್ತು ಅದರಾಚೆಗೂ ಇದರ ಅತ್ಯಂತ ಪ್ರಮುಖ ಧಾರ್ಮಿಕ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾದ ಚೆರ್ಟ್‌ಸೆ ಚರ್ಚು ೬೬೬ರಲ್ಲಿ ಸಂಸ್ಥಾಪಿಸಲ್ಪಟ್ಟಿತು. ಕೆಂಟ್‌ನ ರಾಜ ಎಗ್‌ಬರ್ಟ್‌ನ ಆಶ್ರಯದ ಅಡಿಯಲ್ಲಿ ಸದರಿ ಚರ್ಚು ಸಂಸ್ಥಾಪಿಸಲ್ಪಟ್ಟಿತಾದ್ದರಿಂದ, ಈ ಘಟ್ಟದಲ್ಲಿ ಸರ್ರೆಯು ಸ್ಪಷ್ಟವಾಗಿ ಕೆಂಟ್ ಪ್ರದೇಶದ ಪ್ರಾಬಲ್ಯದ ಅಡಿಯಲ್ಲಿತ್ತು. ಆದಾಗ್ಯೂ, ಕೆಲವು ವರ್ಷಗಳ ನಂತರ ಕನಿಷ್ಟಪಕ್ಷ ಅದರ ಕೆಲ ಭಾಗವು ಮೆರಿಕಾದ ಅಧೀನಕ್ಕೆ ಒಳಪಟ್ಟಿತು; 673-5ರ ಅವಧಿಯಲ್ಲಿ ಮತ್ತಷ್ಟು ಭೂಪ್ರದೇಶಗಳನ್ನು ಫ್ರಿಥುವಾಲ್ಡ್ ಎಂಬ ರಾಜ ಚೆರ್ಟ್‌ಸೆ ಚರ್ಚಿಗೆ ನೀಡಿದ್ದರಿಂದ ಈ ಸನ್ನಿವೇಶವು ರೂಪುಗೊಂಡಿತು. ಫ್ರಿಥುವಾಲ್ಡ್ ಎಂಬಾತ ಓರ್ವ ಸ್ಥಳೀಯ ಅಧೀನ-ರಾಜನಾಗಿದ್ದು (ಸಬ್ರೆಗ್ಯೂಲಸ್ ), ಮೆರಿಕಾದ ವುಲ್ಫ್‌ಹೆರೆಯ ಸಾರ್ವಭೌಮತ್ವದ ಅಡಿಯಲ್ಲಿ ಆತ ಆಳ್ವಿಕೆ ನಡೆಸುತ್ತಿದ್ದ. ಒಂದು ದಶಕದ ನಂತರ, ವೆಸೆಕ್ಸ್‌ನ ರಾಜ ಕೇಡ್‌ವಾಲಾನ ವಶಕ್ಕೆ ಸರ್ರೆಯು ವರ್ಗಾಯಿಸಲ್ಪಟ್ಟಿತು. ಈತ ಕೆಂಟ್ ಮತ್ತು ಸಸೆಕ್ಸ್‌ಗಳನ್ನೂ ಗೆದ್ದುಕೊಂಡ ಮತ್ತು 686ರಲ್ಲಿ ಫರ್ನ್‌ಹ್ಯಾಂನಲ್ಲಿ ಒಂದು ವಿರಕ್ತಗೃಹವನ್ನು ಸಂಸ್ಥಾಪಿಸಿದ. ಇದು 8ನೇ ಶತಮಾನದ ಆರಂಭಿಕ ಭಾಗದಲ್ಲಿ ಪ್ರವರ್ಧಮಾನಕ್ಕೆ ಬಂದ ಐನ್ ಎಂಬ, ಕೇಡ್‌ವಾಲಾನ ಉತ್ತರಾಧಿಕಾರಿಯ ನಿಯಂತ್ರಣದ ಅಡಿಯಲ್ಲಿ ಉಳಿದುಕೊಂಡಿತು. 8ನೇ ಶತಮಾನದ ಬಹುತೇಕ ಅವಧಿಗೆ ಸಂಬಂಧಿಸಿದಂತೆ ಇದರ ರಾಜಕೀಯ ಇತಿಹಾಸವು ಅಸ್ಪಷ್ಟವಾಗಿದೆ. 722ರ ಆಸುಪಾಸಿಗೆ ಇದು ದಕ್ಷಿಣ ಸ್ಯಾಕ್ಸನ್ ನಿಯಂತ್ರಣದ ಅಡಿಯಲ್ಲಿದ್ದಿರಬಹುದಾದರೂ, 784-5ರ ವೇಳೆಗೆ ಇದು ಮೆರಿಕಾದ ರಾಜ ಓಫಾನ ವಶಕ್ಕೆ ವರ್ಗಾವಣೆಗೊಂಡಿತ್ತು. ಮರ್ಸಿಯಾದ ಆಳ್ವಿಕೆಯು 825ರ ವರೆಗೆ ಮುಂದುವರಿಯಿತು. ನಂತರದಲ್ಲಿ ಆಶ್‌ಡೌನ್‌ನ ಕದನದಲ್ಲಿ ವೆಸೆಕ್ಸ್‌ನ ರಾಜ ಎಗ್‌ಬರ್ಟ್ ಮರ್ಸಿಯನ್ನರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ನಂತರ, ಸಸೆಕ್ಸ್, ಕೆಂಟ್ ಮತ್ತು ಎಸೆಕ್ಸ್‌ಗಳ ಜೊತೆಜೊತೆಗೆ ಸರ್ರೆಯ ನಿಯಂತ್ರಣವನ್ನೂ ತನ್ನ ವಶಕ್ಕೆ ತೆಗೆದುಕೊಂಡ. ಒಂದು ಷೈರು ಪ್ರದೇಶವಾಗಿ ಇದು ವೆಸೆಕ್ಸ್‌ನೊಳಗೆ ಸಂಯೋಜಿಸಲ್ಪಟ್ಟಿತು ಮತ್ತು ಅದಾದ ನಂತರದಲ್ಲಿ ಪಶ್ಚಿಮ ಸ್ಯಾಕ್ಸನ್ ರಾಜರ ಆಳ್ವಿಕೆಯ ಅಡಿಯಲ್ಲಿ ಮುಂದುವರಿಯಿತು. ಈ ರಾಜರೇ ಅಂತಿಮವಾಗಿ ಸಮಗ್ರ ಇಂಗ್ಲೆಂಡ್‌ನ ರಾಜರಾದರು.
ಸರ್ರೆಯ ಗುರುತಿಸಲ್ಪಟ್ಟ ಅಧೀನ-ರಾಜರು
- ಫ್ರಿಥುವೊಲ್ಡ್ (ಸುಮಾರು 673 - 675)
- ಫ್ರಿಥುರಿಕ್? (675 - ಸುಮಾರು 686)
ಪಶ್ಚಿಮ ಸ್ಯಾಕ್ಸನ್ ಮತ್ತು ಇಂಗ್ಲಿಷ್ ಷೈರು
[ಬದಲಾಯಿಸಿ]9ನೇ ಶತಮಾನದಲ್ಲಿ, ವಾಯವ್ಯ ಭಾಗದ ಯುರೋಪ್‌ನ ಇತರ ಪ್ರದೇಶಗಳ ಜೊತೆಗೆ ಇಂಗ್ಲೆಂಡ್ ಕೂಡಾ ಸ್ಕ್ಯಾಂಡಿನೇವಿಯಾದ ಕಡಲ್ಗಳ್ಳರ ದಾಳಿಗಳಿಗೆ ಈಡಾಯಿತು. ಸರ್ರೆಯ ತೀರಪ್ರದೇಶವು ದಾಳಿಗೊಳಗಾಗದಂತೆ ಅದರ ಒಳನಾಡಿನ ಸ್ಥಾನವು ಅದನ್ನು ರಕ್ಷಿಸಿತು. ಅತಿದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಸ್ಕ್ಯಾಂಡಿನೇವಿಯಾದ ಸೈನಿಕರಿಂದ ಆದ ದಾಳಿಯನ್ನು ಹೊರತುಪಡಿಸಿದರೆ, ಇದು ಸಾಮಾನ್ಯವಾಗಿ ತೊಂದರೆಗೊಳಗಾಗಲಿಲ್ಲ. 851ರಲ್ಲಿ, ಅಸಾಧಾರಣವಾದ ರೀತಿಯಲ್ಲಿ ದೊಡ್ಡದಾಗಿದ್ದ ಡೇನರ ಆಕ್ರಮಣ ಪಡೆಯು ಸುಮಾರು 350 ಹಡಗುಗಳ ಒಂದು ನೌಕಾತಂಡದೊಂದಿಗೆ ಥೇಮ್ಸ್ ನದಿಯ ಮುಖದ ಬಳಿ ಆಗಮಿಸಿತು. ಈ ಹಡಗುಗಳು 15,000ಕ್ಕೂ ಹೆಚ್ಚಿನ ಜನರನ್ನು ಸಾಗಿಸಿಕೊಂಡು ಬಂದಿದ್ದವು. ಕ್ಯಾಂಟರ್‌ಬರಿ ಮತ್ತು ಲಂಡನ್‌ಗಳನ್ನು ಕೊಳ್ಳೆಹೊಡೆದ ಹಾಗೂ ಕದನದಲ್ಲಿ ಮೆರಿಕಾದ ರಾಜ ಬಿಯೋರ್‌ಟ್ವಲ್ಫ್‌ನನ್ನು ಸೋಲಿಸಿದ ಡೇನರು, ಥೇಮ್ಸ್ ನದಿಯನ್ನು ದಾಟಿಕೊಂಡು ಸರ್ರೆಯೊಳಗೆ ಬಂದಿಳಿದರು. ಆದರೆ, ಅಕ್ಲಿಯಾದ ಕದನದಲ್ಲಿ ವೆಸೆಕ್ಸ್‌ನ ರಾಜ ಏಥೆಲ್‌ವುಲ್ಫ್ ನೇತೃತ್ವದ ಪಶ್ಚಿಮ ಸ್ಯಾಕ್ಸನ್ ಸೇನೆಯೊಂದರಿಂದ ಅವರು ಕತ್ತರಿಸಿಹಾಕಲ್ಪಟ್ಟಿದ್ದರಿಂದ, ಸದರಿ ಆಕ್ರಮಣವು ಕೊನೆಗೊಂಡಿತು. 892ರಲ್ಲಿ, ಮತ್ತೊಂದು ಮುಖ್ಯವಾದ ಕದನಕ್ಕೆ ಸರ್ರೆಯು ರಂಗಸ್ಥಳವಾಗಿ ಪರಿಣಮಿಸಿತು. 200, 250 ಮತ್ತು 350 ಹಡಗು-ಹೊರೆಗಳನ್ನು ಹೊಂದಿತ್ತು ಎಂಬುದಾಗಿ ಬಗೆಬಗೆಯಾಗಿ ವರದಿ ಮಾಡಲ್ಪಟ್ಟ ಡೇನರ ದೊಡ್ಡ ಸೇನೆಯೊಂದು ಈ ಸಂದರ್ಭದಲ್ಲಿ ಕೆಂಟ್‌ನಲ್ಲಿನ ತನ್ನ ಶಿಬಿರದಿಂದ ಪಶ್ಚಿಮದೆಡೆಗೆ ಸಾಗಿತ್ತು. ಆಲ್‌ಫ್ರೆಡ್ ಮಹಾಶಯನ ಮಗ ಮತ್ತು ರಾಜ ಹಿರಿಯ ಎಡ್ವರ್ಡ್ ಎಂದೇ ಭವಿಷ್ಯದಲ್ಲಿ ಕರೆಯಲ್ಪಟ್ಟ ಎಡ್ವರ್ಡ್ ನೇತೃತ್ವದ ಸೇನೆಯೊಂದರಿಂದ ಇದು ಫರ್ನ್‌ಹ್ಯಾಂನಲ್ಲಿ ಪ್ರತಿಬಂಧಿಸಲ್ಪಟ್ಟಿತು ಮತ್ತು ಸೋಲಿಸಲ್ಪಟ್ಟಿತು. ಹೀಗಾಗಿ ಸದರಿ ಡೇನರ ಸೇನೆಯು ಥೇಮ್ಸ್ ನದಿಯನ್ನು ದಾಟಿಕೊಂಡು ಎಸೆಕ್ಸ್ ಕಡೆಗೆ ಪಲಾಯನ ಮಾಡಬೇಕಾಗಿ ಬಂತು.
ಅದು ನೆಲೆಗೊಂಡಿದ್ದ ತಾಣ ಮತ್ತು ಪಶ್ಚಿಮ ಸ್ಯಾಕ್ಸನ್‌ನ, ನಂತರದಲ್ಲಿ ಇಂಗ್ಲಿಷ್‌ನ ಬೆಳೆಯುತ್ತಿರುವ ಶಕ್ತಿಯಿಂದಾಗಿ, ಅದಾದ ನಂತರದ ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯವರೆಗೆ ರಾಜ್ಯವು ಸರ್ರೆಯನ್ನು ದಾಳಿಗೊಳಗಾಗದಂತೆ ಸುರಕ್ಷಿತವಾಗಿರಿಸಿತು. 924ರಲ್ಲಿ ನಡೆದ ಏಥೆಲ್ಸ್ಟಾನ್‌ನ ಪಟ್ಟಾಭಿಷೇಕ ಮತ್ತು 978ರಲ್ಲಿ ನಡೆದ ದುಡುಕು ಬುದ್ಧಿಯ ಏಥೆಲ್‌ರೆಡ್‌ನ ಪಟ್ಟಾಭಿಷೇಕಕ್ಕೆ ಸಂಬಂಧಿಸಿದಂತೆ ಕಿಂಗ್ಸ್‌ಟನ್ ರಂಗಸ್ಥಳವಾಗಿ ಪರಿಣಮಿಸಿತ್ತು; ಅಷ್ಟೇ ಅಲ್ಲ, ನಂತರದ ಸಂಪ್ರದಾಯಕ್ಕೆ ಅನುಸಾರವಾಗಿ, ಹತ್ತನೇ ಶತಮಾನದ ಇಂಗ್ಲೆಂಡ್‌ನ ಇತರ ರಾಜರ ಪಟ್ಟಾಭಿಷೇಕಕ್ಕೂ ಅದು ಸಾಕ್ಷಿಯಾಗಿತ್ತು. ಏಥೆಲ್‌ರೆಡ್‌ನ ವಿಪತ್ಕಾರಕ ಆಳ್ವಿಕೆಯ ಅವಧಿಯಲ್ಲಿ ಹೊಸದಾಗಿ ಆರಂಭಗೊಂಡ ಡೇನರ ದಾಳಿಗಳು, ಎತ್ತರದ ಥೋರ್ಕೆಲ್‌ನ ಸೇನೆಯಿಂದಾದ ಸರ್ರೆಯ ಹಾಳುಗೆಡಹುವಿಕೆಗೆ ಕಾರಣವಾದವು. ಈ ಸೇನೆಯು 1009-11ರಲ್ಲಿ ಇಂಗ್ಲೆಂಡ್‌ನ ಆಗ್ನೇಯ ಭಾಗದ ಎಲ್ಲಾ ಪ್ರದೇಶಗಳನ್ನೂ ಧ್ವಂಸಮಾಡಿತು. ಈ ದಾಳಿಗಳ ಅಲೆಯ ಪರಾಕಾಷ್ಠೆಯು 1016ರಲ್ಲಿ ಕಂಡುಬಂದಿತು. ಈ ಅವಧಿಯಲ್ಲಿ, ರಾಜ ಎಡ್ಮಂಡ್ ಐರನ್‌ಸೈಡ್ ಮತ್ತು ಡೇನರ ರಾಜ ಕ್ನಟ್‌ನ ಪಡೆಗಳ ನಡುವೆ ಒಂದು ಸುದೀರ್ಘವಾದ ಹೋರಾಟ ನಡೆಯಿತು; ಈ ಸಂದರ್ಭದಲ್ಲಿ, ಸರ್ರೆಯ ಈಶಾನ್ಯ ಭಾಗದಲ್ಲಿ ಎಲ್ಲೋ ಒಂದುಕಡೆ ಡೇನರ ಮೇಲೆ ಇಂಗ್ಲಿಷರು ವಿಜಯ ಸಾಧಿಸಿದರಾದರೂ, ಡೇನರು ಇಂಗ್ಲೆಂಡ್‌ನ್ನು ಗೆದ್ದುಕೊಂಡು, ಕ್ನಟ್‌ನನ್ನು ರಾಜನಾಗಿ ಪ್ರತಿಷ್ಠಾಪಿಸುವಲ್ಲಿಗೆ ಹೋರಾಟವು ಕೊನೆಗೊಂಡಿತು.
1035ರಲ್ಲಿ ಕ್ನಟ್‌ನ ಮರಣವು ಸಂಭವಿಸಿದ ನಂತರ ಅವನ ಗಂಡುಮಕ್ಕಳ ನಡುವೆ ಅನುಕ್ರಮ ಉತ್ತರಾಧಿಕಾರದ ವಿವಾದವು ಹೊಗೆಯಾಡಲು ಪ್ರಾರಂಭಿಸಿದ್ದರಿಂದ, ರಾಜಕೀಯ ಅನಿಶ್ಚಿತತೆಯ ಒಂದು ಕಾಲಾವಧಿಯು ಕಂಡುಬಂತು. ದುಡುಕು ಬುದ್ಧಿಯ ಏಥೆಲ್‌ರೆಡ್‌ನ ಮಗನಾದ ಆಲ್‌ಫ್ರೆಡ್ 1036ರಲ್ಲಿ ನೋರ್ಮ್ಯಾಂಡಿಯಿಂದ ಹಿಂದಿರುಗಿದ; ರಾಜ ಕ್ನಟ್ ಇಂಗ್ಲೆಂಡನ್ನು ಗೆದ್ದುಕೊಳ್ಳುವ ಸಮಯದಲ್ಲಿ ಮಗುವಾಗಿದ್ದ ಅವನನ್ನು ಸುರಕ್ಷಿತತೆಯ ಕಾರಣಗಳಿಗಾಗಿ ಅಲ್ಲಿಂದ ನೋರ್ಮ್ಯಾಂಡಿಗೆ ಒಯ್ಯಲಾಗಿತ್ತು. ಅವನ ಆಶಯಗಳು ಏನಿದ್ದವು ಎಂಬುದು ಅನಿಶ್ಚಿತವಾಗಿದೆಯಾದರೂ, ಒಂದು ಸಣ್ಣ ಪರಿವಾರದೊಂದಿಗೆ ಅವನು ಸಸೆಕ್ಸ್‌ನಲ್ಲಿ ಇಳಿದ ನಂತರ, ವೆಸೆಕ್ಸ್‌ನ ಅರ್ಲ್ ಆಗಿದ್ದ ಗಾಡ್ವಿನ್ ಎಂಬಾತ ಅವನನ್ನು ಭೇಟಿಮಾಡಿದ; ಸ್ಪಷ್ಟವಾಗಿ ಸ್ನೇಹಶೀಲವೆಂಬಂತಿದ್ದ ಶೈಲಿಯಲ್ಲಿ ಆತ ಆಲ್‌ಫ್ರೆಡ್‌ಗೆ ಬೆಂಗಾವಲಾಗಿ ನಿಂತು ಗಿಲ್ಡ್‌ಫೋರ್ಡ್‌ಗೆ ಕರೆದುಕೊಂಡು ಹೋದ. ಅಲ್ಲಿ ವಸತಿ ಸೌಕರ್ಯವನ್ನು ಪಡೆದುಕೊಳ್ಳಲಾಯಿತು. ಆದರೆ ಮಲಗಿದ್ದ ಸಮಯದಲ್ಲಿ ಆಲ್‌ಫ್ರೆಡ್‌ನ ಜನರ ಮೇಲೆ ದಾಳಿಮಾಡಿದ ಗಾಡ್‌ವಿನ್‌ನ ಅನುಯಾಯಿಗಳು ಅವರನ್ನು ಕಗ್ಗೊಲೆ ಮಾಡಿದರು; ಸ್ವತಃ ರಾಜಕುಮಾರ ಕುರುಡಾಗಿಸಲ್ಪಟ್ಟ ಮತ್ತು ಬಂಧನದಲ್ಲಿಡಲ್ಪಟ್ಟ. ಅದಾದ ಕೆಲವೇ ದಿನಗಳಲ್ಲಿ ಅವನು ಮರಣಿಸಿದ. 1042ರಲ್ಲಿ ಸಿಂಹಾಸನವನ್ನೇರಿದ ಆಲ್‌ಫ್ರೆಡ್‌ನ ಸೋದರನಾದ, ದಿ ಕನ್‌ಫೆಸರ್ ಎಂದೇ ಕರೆಯಲ್ಪಡುತ್ತಿದ್ದ ಎಡ್ವರ್ಡ್ ಹಾಗೂ ಗಾಡ್‌ವಿನ್ ನಡುವಿನ ಬದ್ಧದ್ವೇಷಕ್ಕೆ ಈ ಕಗ್ಗೊಲೆಗಳು ತಮ್ಮದೇ ಆದ ಕೊಡುಗೆ ನೀಡಿರಬಹುದು ಎನಿಸುತ್ತದೆ. 1066ರಲ್ಲಿ ಇಂಗ್ಲೆಂಡನ್ನು ನಾರ್ಮನ್ನರು ಗೆದ್ದುಕೊಳ್ಳುವಲ್ಲಿ ಈ ಹಗೆತನವು ನಿರ್ಣಾಯಕ ಪ್ರಾಮುಖ್ಯತೆಯನ್ನು ವಹಿಸಿತು.
ಡೋಮ್ಸ್‌ಡೇ ಪುಸ್ತಕವು ದಾಖಲಿಸುವ ಪ್ರಕಾರ, ಎಡ್ವರ್ಡ್‌ನ ಆಳ್ವಿಕೆಯ ಅಂತ್ಯಭಾಗದಲ್ಲಿ ಸರ್ರೆಯಲ್ಲಿದ್ದ ಅತಿದೊಡ್ಡ ಭೂಮಾಲೀಕರ ಪಟ್ಟಿಯಲ್ಲಿ ಚೆರ್ಟ್‌ಸೆ ಚರ್ಚು, ವೆಸೆಕ್ಸ್‌ನ ಅರ್ಲ್ ಹಾಗೂ ನಂತರದಲ್ಲಿ ರಾಜನಾದ ಹೆರಾಲ್ಡ್ ಗಾಡ್‌ವಿನ್ಸನ್, ಮತ್ತು ನಂತರದ ಸ್ಥಾನದಲ್ಲಿ ಸ್ವತಃ ರಾಜ ಎಡ್ವರ್ಡ್‌ನ ಸ್ಥಿರಾಸ್ತಿಗಳು ಸೇರಿದ್ದವು. ಷೈರ್‌ನ ವ್ಯಾಪ್ತಿಯೊಳಗೆ ಬಹುಪಾಲು ಭೂಮಿಯನ್ನು ಹೊಂದಿದ್ದ ಚರ್ಚನ್ನು ಹೊರತುಪಡಿಸಿ, ಸರ್ರೆಯು ಬೇರಾವುದೇ ಪ್ರಮುಖ ಭೂಮಾಲೀಕರ ಹಿಡುವಳಿಗಳ ಪ್ರಧಾನ ಗಮನಕ್ಕೆ ಒಳಗಾಗಿರಲಿಲ್ಲ; ಈ ಪ್ರವೃತ್ತಿವು ನಂತರದ ಕಾಲಾವಧಿಗಳಲ್ಲೂ ಮುಂದುವರಿಯಲಿತ್ತು. ಬೃಹತ್ತಾದ ಮತ್ತು ವ್ಯಾಪಕವಾಗಿ ಹಬ್ಬಿದ ಹಿತಾಸಕ್ತಿಗಳ ಹಾಗೂ ರಾಜಪ್ರಭುತ್ವದ ಮತ್ತು ವೆಸೆಕ್ಸ್‌ನ ಅರ್ಲ್‌ಗಿರಿಯ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪೂರ್ವಾಕ್ರಮಣಗಳ ನಿರ್ದಿಷ್ಟ ಪರಿಸ್ಥಿತಿಯಲ್ಲಿ, ಚೆರ್ಟ್‌ಸೇಯ ಕ್ರೈಸ್ತ ಮಠಾಧಿಪತಿಯು ಸ್ಥಳೀಯ ಗಣ್ಯರಲ್ಲಿ ಪ್ರಾಯಶಃ ಅತ್ಯಂತ ಮುಖ್ಯನಾದ ಶಕ್ತಿಯೆನಿಸಿದ್ದ.
ಷೈರ್‌ನ ಆಂತರಿಕ ವಿಭಜನೆಯು ೧೪ ಹಂಡ್ರಡ್‌ಗಳಾಗಿ ಹೊರಹೊಮ್ಮುವುದನ್ನು ಆಂಗ್ಲ-ಸ್ಯಾಕ್ಸನ್ ಕಾಲಾವಧಿಯು ಕಂಡಿತು. ಇದು ವಿಕ್ಟೋರಿಯಾ ರಾಣಿಯ ಕಾಲಾವಧಿಯವರೆಗೆ ಮುಂದುವರಿಯಿತು. ಸದರಿ ಹಂಡ್ರಡ್‌ಗಳಲ್ಲಿ ಇವು ಸೇರಿದ್ದವು: ಬ್ಲ್ಯಾಕ್‌ಹೀತ್, ಬ್ರಿಕ್ಸ್‌ಟನ್, ಕಾಪ್‌ಥಾರ್ನೆ, ಎಫಿಂಗ್‌ಹ್ಯಾಂ ಹಾಫ್-ಹಂಡ್ರಡ್, ಎಲ್ಮ್‌ಬ್ರಿಜ್, ಫರ್ನ್‌ಹ್ಯಾಂ, ಗೋದಲ್ಮಿಂಗ್, ಗಾಡ್ಲೆ, ಕಿಂಗ್ಸ್‌ಟನ್, ರೀಗೇಟ್, ಟ್ಯಾನ್‌ಡ್ರಿಜ್, ವ್ಯಾಲಿಂಗ್ಟನ್, ವೋಕಿಂಗ್ ಮತ್ತು ವೊಟಾನ್.
ಸರ್ರೆಯ ಗುರುತಿಸಲ್ಪಟ್ಟ ಹಿರಿಯ ಮುತ್ಸದ್ದಿಗಳು
- ವುಲ್ಫ್‌ಹರ್ಡ್ (ಸುಮಾರು 823)
- ಹ್ಯೂಡಾ (? - 853)
- ಏಡೆಲ್‌ವೇರ್ಡ್ (10ನೇ ಶತಮಾನದ ಅಂತ್ಯಭಾಗ)
- ಏಡೆಲ್‌ಮೇರ್ (? - 1016)
ಮಧ್ಯಯುಗದ ನಂತರದ ಸರ್ರೆ
[ಬದಲಾಯಿಸಿ]ಹೇಸ್ಟಿಂಗ್ಸ್ ಕದನದ ನಂತರ, ನಾರ್ಮನ್ ಸೇನೆಯು ಕೆಂಟ್ ಮೂಲಕವಾಗಿ ಸರ್ರೆಯೊಳಗೆ ಮುಂದುವರೆಯಿತು. ಅಲ್ಲಿ ನಾರ್ಮನ್ನರು ಇಂಗ್ಲಿಷ್ ಪಡೆಯೊಂದನ್ನು ಸೋಲಿಸಿದರು. ವಾಯವ್ಯ ಭಾಗದಿಂದ ಲಂಡನ್‌ನ್ನು ತಲುಪಲೆಂದು ಒಂದು ಸುತ್ತುಬಳಸಿನ ಸೇನಾ-ಮಜಲಿನ ಮೇಲೆ ಪಶ್ಚಿಮದ ಕಡೆಗೆ ಮುಂದುವರೆಯುವುದಕ್ಕೆ ಮುಂಚಿತವಾಗಿ, ಸೌತ್‌ವಾರ್ಕ್‌ನಲ್ಲಿ ಈ ಪಡೆಯು ಅವರ ಮೇಲೆ ದಾಳಿಮಾಡಿತ್ತು. ಇಂಗ್ಲೆಂಡ್‌ನಾದ್ಯಂತ ಇದ್ದ ಸನ್ನಿವೇಶವೂ ಇದೇ ಆಗಿದ್ದು, ಸದರಿ ಭೂಪ್ರದೇಶವನ್ನು ನಾರ್ಮನ್ನರು ವಶಪಡಿಸಿಕೊಳ್ಳುವ ಮೂಲಕ ಸರ್ರೆಯ ಸ್ಥಳೀಕ ಆಳುವ ವರ್ಗವನ್ನು ಕಾರ್ಯತಃ ತೆಗೆದುಹಾಕಿದ್ದರು. 1086ರಲ್ಲಿ ಡೋಮ್ಸ್‌ಡೇ ಸಮೀಕ್ಷೆಯು ನಿರ್ವಹಿಸಲ್ಪಡುವ ವೇಳೆಗೆ ಉಳಿದುಕೊಂಡ ಏಕೈಕ ಗಮನಾರ್ಹ ಇಂಗ್ಲಿಷ್ ಭೂಮಾಲೀಕನೆಂದರೆ, ಚೆರ್ಟ್‌ಸೇಯ ಕೊನೆಯ ಇಂಗ್ಲಿಷ್ ಕ್ರೈಸ್ತ ಮಠಾಧಿಪತಿಯ ಸೋದರನಾಗಿದ್ದ. ಆ ಸಮಯದಲ್ಲಿ ದೇಶದ ಇತರ ಅನೇಕ ಭಾಗಗಳಲ್ಲಿದ್ದಂತೆ, ಸರ್ರೆಯಲ್ಲಿನ ಅತಿದೊಡ್ಡ ಭೂಮಿಹಿಡುವಳಿಯು ರಾಜವಂಶದ ವಿಸ್ತರಿಸಲ್ಪಟ್ಟ ಸ್ಥಿರಾಸ್ತಿಯಾಗಿದ್ದರೆ, ಮುಂದಿನ ಅತಿದೊಡ್ಡ ಹಿಡುವಳಿಯು ಡಿ ಕ್ಲಾರೆ ಕುಟುಂಬದ ಸಂಸ್ಥಾಪಕನಾದ ರಿಚರ್ಡ್ ಫಿಟ್ಜ್ ಗಿಲ್ಬರ್ಟ್‌ಗೆ ಸೇರಿತ್ತು.
1088ರಲ್ಲಿ ರಾಜ IIನೇ ವಿಲಿಯಂನು ವಿಲಿಯಂ ಡಿ ವಾರೆನ್ನೆಗೆ ಸರ್ರೆಯ ಅರ್ಲ್‌ನ ಪದವಿಯನ್ನು ನೀಡಿದ. ಇದು Iನೇ ವಿಲಿಯಂನ ಮರಣದ ನಂತರ ಕಂಡುಬಂದ ದಂಗೆಯ ಸಂದರ್ಭದಲ್ಲಿ ವಾರೆನ್ನೆಯು ತೋರಿಸಿದ ಸ್ವಾಮಿನಿಷ್ಠೆಗಾಗಿ ನೀಡಿದ ಒಂದು ಬಹುಮಾನ ಅಥವಾ ಪ್ರತಿಫಲವಾಗಿತ್ತು. 14ನೇ ಶತಮಾನದಲ್ಲಿ ವಾರೆನ್ನೆ ಕುಟುಂಬಸ್ಥರ ಪುರುಷ ಸಂತತಿಯು ನಿರ್ನಾಮವಾದಾಗ, ಅರ್ಲ್‌ಗಿರಿಯ ಉತ್ತರಾಧಿಕಾರಿತ್ವವನ್ನು ಅರುಂಡೇಲ್‌ನ ಅರ್ಲ್‌ಗಳು ಎನಿಸಿಕೊಂಡ ಫಿಟ್ಜ್‌ಅಲನ್ ಅರ್ಲ್‌ಗಳು ಪಡೆದುಕೊಂಡರು. 1415ರಲ್ಲಿ ಸರ್ರೆಯ ಫಿಟ್ಜ್‌ಅಲನ್ ಅರ್ಲ್‌ಗಳ ಶ್ರೇಣಿಯು ನಿರ್ನಾಮವಾಯಿತಾದರೂ, 15ನೇ ಶತಮಾನದ ಅಂತ್ಯಭಾಗದಲ್ಲಿ ಈ ಪದವಿಯು ಪುನರುಜ್ಜೀವನಗೊಂಡಿತು; ಈ ಪುನರುಜ್ಜೀವನವು ಹೋವರ್ಡ್ ಕುಟುಂಬಕ್ಕಾಗಿ ನಡೆಯಿತು ಮತ್ತು ಆ ಕುಟುಂಬದವರು ಸದರಿ ಪದವಿಯನ್ನು ಈಗಲೂ ಉಳಿಸಿಕೊಂಡಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಆದಾಗ್ಯೂ, ಸರ್ರೆಯು ಈ ಯಾವುದೇ ಕುಟುಂಬಗಳ ಹಿತಾಸಕ್ತಿಗಳ ಪ್ರಧಾನ ಗಮನದಲ್ಲಿ ಸೇರಿರಲಿಲ್ಲ.
ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಅಥವಾ ನಿಗ್ರಹಿಸುವ ಪ್ರಕ್ರಿಯೆಯ ಭಾಗವಾಗಿ ನಾರ್ಮನ್ನರಿಂದ ಮೂಲತಃ ಸ್ಥಾಪಿಸಲ್ಪಟ್ಟಿದ್ದ ಅನೇಕ ಸೈನಿಕ ರಕ್ಷಾವರಣಗಳ ಪೈಕಿ ಒಂದೆನಿಸಿದ್ದ ಗಿಲ್ಡ್‌ಫೋರ್ಡ್ ದುರ್ಗವು, ರಾಜವಂಶದ ಒಂದು ಅರಮನೆಯಾಗಿ 12ನೇ ಶತಮಾನದಲ್ಲಿ ಅಭಿವೃದ್ಧಿಪಡಿಸಲ್ಪಟ್ಟಿತು. ವಿಂಚೆಸ್ಟರ್‌ನ ಬಿಷಪ್‌ಗೆ ಮೀಸಲಾದ ಒಂದು ನಿವಾಸವಾಗಿ ಫರ್ನ್‌ಹ್ಯಾಂ ದುರ್ಗವು 12ನೇ ಶತಮಾನದ ಅವಧಿಯಲ್ಲಿ ನಿರ್ಮಿಸಲ್ಪಟ್ಟರೆ, ಬ್ಲೆಚಿಂಗ್ಲೆಯಲ್ಲಿ ಡಿ ಕ್ಲಾರೆ ಕುಟುಂಬಸ್ಥರಿಂದ ಮತ್ತು ರೀಗೇಟ್‌ನಲ್ಲಿ ವಾರೆನ್ನೆ ಕುಟುಂಬಸ್ಥರಿಂದ ಇತರ ಕಲ್ಲಿನ ದುರ್ಗಗಳು ಇದೇ ಕಾಲಾವಧಿಯಲ್ಲಿ ನಿರ್ಮಿಸಲ್ಪಟ್ಟವು. ರಾಜ ಜಾನ್, ಬ್ಯಾರನ್‌ಗಳೊಂದಿಗೆ ನಡೆಸಿದ ಹೋರಾಟದ ಅವಧಿಯಲ್ಲಿ, 1215ರ ಜೂನ್‌ನಲ್ಲಿ ರನ್ನಿಮೀಡ್‌ನಲ್ಲಿ ಮ್ಯಾಗ್ನ ಕಾರ್ಟ (ವೈಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಮಹಾಸನ್ನದು) ಜಾರಿಮಾಡಲ್ಪಟ್ಟಿತು. ಇದರ ಮುಂದಿನ ವರ್ಷದಲ್ಲಿ, ಫ್ರಾನ್ಸ್‌ನ ರಾಜಕುಮಾರ ಲೂಯಿಸ್‌ನನ್ನು ಬೆಂಬಲಿಸುವ ಪಡೆಗಳು ಸರ್ರೆಯ ಮೇಲೆ ಆಕ್ರಮಣ ಮಾಡಿದವು; ಲಂಡನ್‌ನಿಂದ ವಿಂಚೆಸ್ಟರ್‌ವರೆಗಿನ ಮತ್ತು ಅಲ್ಲಿಂದ ಹಿಂದಕ್ಕೆ ಮರಳುವ ಅವರ ಮಾರ್ಗದ ಮೂಲಕ ರಾಜಕುಮಾರ ಲೂಯಿಸ್ ಹಾದುಹೋದ ಹಾಗೂ ಗಿಲ್ಡ್‌ಫೋರ್ಡ್ ಮತ್ತು ರೀಗೇಟ್ ದುರ್ಗಗಳನ್ನು ಆಕ್ರಮಿಸಿದ. ಕಾಲಾನಂತರದಲ್ಲಿ ಗಿಲ್ಡ್‌ಫೋರ್ಡ್ ದುರ್ಗವು ರಾಜ IIIನೇ ಹೆನ್ರಿಯ ಅಚ್ಚುಮೆಚ್ಚಿನ ನಿವಾಸಗಳ ಪೈಕಿ ಒಂದೆನಿಸಿತು; ಆತ ಅಲ್ಲಿ ಅರಮನೆಯನ್ನು ಪರಿಗಣನೀಯವಾಗಿ ವಿಸ್ತರಿಸಿದ. 1264ರಲ್ಲಿ, IIIನೇ ಹೆನ್ರಿಯ ವಿರುದ್ಧದ ಬ್ಯಾರನ್ನರ ಬಂಡಾಯದ ಅವಧಿಯಲ್ಲಿ, ಸೈಮನ್ ಡಿ ಮಾಂಟ್‌ಫೋರ್ಟ್‌ನ ಬಂಡುಕೋರ ಸೇನೆಯು ಸಸೆಕ್ಸ್‌ನಲ್ಲಿನ ಲೆವೆಸ್ ಕದನದೆಡೆಗಿನ ತಮ್ಮ ಮಾರ್ಗದಲ್ಲಿ ಸರ್ರೆಯ ಮೂಲಕ ದಕ್ಷಿಣದ ಕಡೆಗೆ ಹಾದುಹೋದವು. ಬಂಡುಕೋರರು ವಿಜಯಶಾಲಿಗಳಾಗಿ ಹೊರಹೊಮ್ಮಿದರೂ ಸಹ, ಕದನದ ಕೆಲವೇ ಹೊತ್ತಿನಲ್ಲಿ ರಾಜವಂಶದ ಪಡೆಗಳು ಬ್ಲೆಚಿಂಗ್ಲೆ ದುರ್ಗವನ್ನು ಸೆರೆಹಿಡಿದು ನಾಶಪಡಿಸಿದವು; ಬ್ಲೆಚಿಂಗ್ಲೆ ದುರ್ಗದ ಮಾಲೀಕನಾದ ಗಿಲ್ಬರ್ಟ್ ಡಿ ಕ್ಲಾರೆಯು ಡಿ ಮಾಂಟ್‌ಫೋರ್ಟ್‌ನ ಅಗ್ರಗಣ್ಯ ಬೆಂಬಲಿಗರಲ್ಲಿ ಒಬ್ಬನಾಗಿದ್ದ. 14ನೇ ಶತಮಾನದ ವೇಳೆಗೆ ದುರ್ಗಗಳು ಸೇನಾ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವ ಸ್ಥಿತಿಯನ್ನು ತಲುಪಿದ್ದವಾದರೂ, ಸಾಮಾಜಿಕ ಪ್ರತಿಷ್ಠೆಯ ಒಂದು ಗುರುತಾಗಿ ಅವು ಮುಂದುವರಿದವು; ಬೆಚ್‌ವರ್ತ್ ಎಂಬಲ್ಲಿ ಲಾರ್ಡ್ ಕೊಬ್‌ಹ್ಯಾಮ್‌ನಿಂದ ಹಾಗೂ ಲಿಂಗ್‌ಫೀಲ್ಡ್ ಸಮೀಪದ ಸ್ಟಾರ್‌ಬರೊ ಎಂಬಲ್ಲಿ ಜಾನ್ ಫಿಟ್ಜ್‌ಅಲನ್‌ನಿಂದ ದುರ್ಗಗಳು ನಿರ್ಮಾಣವಾಗುವುದಕ್ಕೆ ಅವು ಕಾರಣವಾದವು. ಜಾನ್ ಫಿಟ್ಜ್‌ಅಲನ್ ತಂದೆಯು ಸರ್ರೆಯ ಅರ್ಲ್‌ಗಿರಿಯನ್ನು ಉತ್ತರಾಧಿಕಾರಿತ್ವದ ರೂಪದಲ್ಲಿ ಆಗಷ್ಟೇ ಪಡೆದಿದ್ದ ಎಂಬುದಿಲ್ಲಿ ಗಮನಾರ್ಹ ಅಂಶ.
ಮಧ್ಯಯುಗಗಳಲ್ಲಿ ಸರ್ರೆಯು ಅಲ್ಪ ಪ್ರಮಾಣದ ರಾಜಕೀಯ ಅಥವಾ ಆರ್ಥಿಕ ಪ್ರಾಮುಖ್ಯತೆಯನ್ನು ಹೊಂದಿತ್ತು. ಅದು ಯಾವುದೇ ಪ್ರಮುಖ ಶ್ರೀಮಂತ ಕುಟುಂಬದ ಮುಖ್ಯ ಅಧಿಕಾರ-ಮೂಲವಾಗಿರಲಿಲ್ಲ ಅಥವಾ ಬಿಷಪ್‌ಗಿರಿಯೊಂದರ ಕ್ಷೇತ್ರವಾಗಿರಲಿಲ್ಲ. ಸಾಮಾನ್ಯವಾಗಿ ಕಳಪೆ ಮಟ್ಟದಲ್ಲಿದ್ದ ಅದರ ಮಣ್ಣುಗಳ ಫಲವತ್ತತೆಯಿಂದಾಗಿ ಸರ್ರೆಯ ವ್ಯವಸಾಯದ ಸಂಪತ್ತು ಸೀಮಿತಗೊಳಿಸಲ್ಪಟ್ಟಿತ್ತು. 12ನೇ ಮತ್ತು 13ನೇ ಶತಮಾನಗಳಲ್ಲಿ ಕಂಡುಬಂದ ಜನಸಂಖ್ಯೆಯ ಒತ್ತಡವು, ಹಂತಹಂತದ ಅರಣ್ಯನಾಶದ ಮತ್ತು ವನಾಂತರ ಪ್ರದೇಶವನ್ನು ವ್ಯವಸಾಯಕ್ಕಾಗಿ ಅಭಿವೃದ್ಧಿಪಡಿಸುವ ಪ್ರವೃತ್ತಿಯು ಆರಂಭವಾಗುವುದಕ್ಕೆ ಕಾರಣವಾಯಿತು. ವನಾಂತರ ಪ್ರದೇಶದಲ್ಲಿನ ಗಾಢವಾದ ಜೇಡಿ ಮಣ್ಣಿನಲ್ಲಿ ಒಕ್ಕಲುತನವನ್ನು ನಡೆಸುವುದು ಅಸಾಧಾರಣವೆಂಬಂತೆ ತೊಡಕಿನ ಕ್ರಮವಾಗಿದ್ದರಿಂದ, ಇಂಥ ಪ್ರದೇಶಗಳು ಅಷ್ಟು ಕಾಲದವರೆಗೂ ಗಿಡಮರ ತುಂಬಿಕೊಂಡು ಉಳಿದುಕೊಂಡಿದ್ದವು. ಲಂಡನ್‌ನ ಸೌತ್‌ವಾರ್ಕ್ ಉಪನಗರವನ್ನು ಹೊರತುಪಡಿಸಿದ ನಗರಾಭಿವೃದ್ಧಿಯು, ಲಂಡನ್ ಮತ್ತು ನೆರೆಹೊರೆಯ ಷೈರ್‌ಗಳಲ್ಲಿನ ಪ್ರಮುಖ ಪಟ್ಟಣಗಳ ಮಂಕುಗೊಳಿಸುವ ಮೇಲುಗೈತನದಿಂದ ದುರ್ಬಲಗೊಳಿಸಲ್ಪಟ್ಟಿತ್ತು; ಇವುಗಳ ಪೈಕಿ ಅನೇಕವು ಸಮುದ್ರದೆಡೆಗಿನ ಸುಲಭ ಗಮ್ಯತೆಯಿಂದ ಪ್ರಯೋಜನ ಪಡೆದಿದ್ದವು ಅಥವಾ ರಾಜಕೀಯದ ಅಥವಾ ಚರ್ಚಿನ ಹೆಚ್ಚುಗಾರಿಕೆಯಿಂದ ಪ್ರಯೋಜನ ಪಡೆದಿದ್ದವು. ಆದಾಗ್ಯೂ, ಉಣ್ಣೆಯ ಬಟ್ಟೆಯ ಉತ್ಪಾದನೆಯಲ್ಲಿನ ತನ್ನ ಪಾತ್ರದ ಮೂಲಕ ನಂತರದ ಮಧ್ಯಯುಗಗಳಲ್ಲಿ ಒಂದು ಗಮನಾರ್ಹ ಮಟ್ಟದ ಪ್ರಗತಿಯನ್ನು ಸಾಧಿಸುವಲ್ಲಿ ಸರ್ರೆಯು ಯಶಸ್ವಿಯಾಯಿತು. ಉಣ್ಣೆಯ ಬಟ್ಟೆಯ ಉತ್ಪಾದನೆಯು ಇಂಗ್ಲೆಂಡ್‌ನ ಮುಖ್ಯ ರಫ್ತು ಉದ್ಯಮವಾಗಿದ್ದು, ಸರ್ರೆಯಲ್ಲಿನ ಗಿಲ್ಡ್‌ಫೋರ್ಡ್‌ನಲ್ಲಿ ಈ ಕುರಿತಾಗಿ ಗಮನವನ್ನು ಕೇಂದ್ರೀಕರಿಸಲಾಯಿತು.
ಆ ಅವಧಿಯಲ್ಲಿ ಕಂಡುಬಂದ ನಾನಾಬಗೆಯ ದಂಗೆಗಳು ಮತ್ತು ನಾಗರಿಕ ಯುದ್ಧಗಳಲ್ಲಿ ಗಂಭೀರವಾಗಿ ಹೋರಾಡಲ್ಪಡುವುದನ್ನು ಸರ್ರೆಯು ಬಹುತೇಕವಾಗಿ ತಪ್ಪಿಸಿತು ಎಂಬುದು ಅಸ್ಪಷ್ಟತೆಯ ಒಂದು ಪ್ರಯೋಜನವಾಗಿತ್ತು; ಅಂದರೆ, 1381ರ ರೈತರ ಬಂಡಾಯ, 1450ರಲ್ಲಿ ಕಂಡುಬಂದ ಕೇಡ್‌ನ ದಂಗೆ, ಹಾಗೂ 1460ರಲ್ಲಿ ಕಂಡುಬಂದ ಗುಲಾಬಿ ಲಾಂಛನದ ರಾಜಮನೆತನದ ಒಳಯುದ್ಧಗಳ ಒಂದು ಹಂತದ ಸಂದರ್ಭದಲ್ಲಿ, ಕೆಂಟ್‌ನಿಂದ ಬರುತ್ತಿದ್ದ ಸೈನಿಕರು ಲಂಡನ್ ಕಡೆಗೆ ಮುನ್ನುಗ್ಗುವಾಗ ಆಗಿನ ಸರ್ರೆಯ ಈಶಾನ್ಯ ಭಾಗದ ಮೂಲಕ ಹಾದುಹೋಗುವಾಗಲೂ ಸರ್ರೆಯು ತನ್ನನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳಲಿಲ್ಲ ಎಂಬುದು ಗಮನಾರ್ಹ ಸಂಗತಿ.
ಲಂಡನ್‌ನ ಓರ್ವ ಶ್ರೀಮಂತ ಇಂಗ್ಲಿಷ್ ನಾಗರಿಕನಾದ ಆಲ್ವೈನ್ ಎಂಬಾತ 1082ರಲ್ಲಿ ಬೆರ್ಮಾಂಡ್ಸೆ ಎಂಬಲ್ಲಿ ಒಂದು ಕ್ಲುನಿಯಾಕ್ ಚರ್ಚನ್ನು ಸಂಸ್ಥಾಪಿಸಿದ. ಇಂಗ್ಲೆಂಡ್‌ನಲ್ಲಿನ ಸಿಸ್ಟರ್‌ಷಿಯನ್ ಪಂಥದ ಮೊದಲ ವಿರಕ್ತಗೃಹವಾದ ವೇವರ್ಲಿ ಚರ್ಚು 1128ರಲ್ಲಿ ಸಂಸ್ಥಾಪಿಸಲ್ಪಟ್ಟಿತು. ಮುಂದಿನ ಕಾಲು-ಶತಮಾನದ ಅವಧಿಯಲ್ಲಿ, ಹೊಸ ಮನೆಗಳನ್ನು ಸಂಸ್ಥಾಪಿಸಲೆಂದು ಸಂನ್ಯಾಸಿಗಳು ಇಲ್ಲಿಂದ ಹೊರಗೆ ಹಬ್ಬಿಕೊಂಡರು; ಇದರಿಂದಾಗಿ ವೇವರ್ಲಿಯಿಂದ ಮೊದಲ್ಗೊಂಡು ಇಂಗ್ಲೆಂಡ್‌ನ ದಕ್ಷಿಣದ ಭಾಗ ಮತ್ತು ಮಧ್ಯಭಾಗದಾದ್ಯಂತ ಹನ್ನೆರಡು ವಿರಕ್ತ ಗೃಹಗಳ ಒಂದು ಜಾಲವು ಸೃಷ್ಟಿಯಾಗಲು ಸಾಧ್ಯವಾಯಿತು. 12ನೇ ಶತಮಾನದಲ್ಲಿ ಮತ್ತು 13ನೇ ಶತಮಾನದ ಆರಂಭಿಕ ಭಾಗದಲ್ಲಿಯೂ ಮೆರ್ಟಾನ್, ನೆವಾರ್ಕ್, ಟ್ಯಾನ್‌ಡ್ರಿಜ್, ಸೌತ್‌ವಾರ್ಕ್ ಮತ್ತು ರೀಗೇಟ್‌ಗಳಲ್ಲಿ ಸಂತ ಅಗಸ್ಟಿನ್ನನ ಪ್ರಯರಿಗಳ ಮಠಗಳು ಸ್ಥಾಪನೆಯಾದವು. IIIನೇ ಹೆನ್ರಿಯ ವಿಧವೆಯಾದ ಪ್ರಾವೆನ್ಸ್‌ನ ಎಲಿಯನಾರ್, 1274ರಲ್ಲಿ ಗಿಲ್ಡ್‌ಫೋರ್ಡ್‌ನಲ್ಲಿ ಮರಣಿಸಿದ್ದ ತನ್ನ ಮೊಮ್ಮಗನ ಸ್ಮರಣಾರ್ಥವಾಗಿ ಗಿಲ್ಡ್‌ಫೋರ್ಡ್‌ನಲ್ಲಿ ಸಂತ ಡಾಮಿನಿಕ್ಕಿನ ಫ್ರಯರ್‌ಗಳ ಮಠವೊಂದನ್ನು ಸ್ಥಾಪಿಸಿದಳು. 15ನೇ ಶತಮಾನದಲ್ಲಿ, ರಾಜ Vನೇ ಹೆನ್ರಿಯು ಷೀನ್‌ನಲ್ಲಿ ಬ್ರೂನೋ ಪಂಥದ ಯತಿಯ ಪ್ರಯರನ ಮಠವೊಂದನ್ನು ಸಂಸ್ಥಾಪಿಸಿದ. 16ನೇ-ಶತಮಾನದಲ್ಲಿ ಕಂಡುಬಂದ ವಿರಕ್ತ ಗೃಹಗಳ ವಿಘಟನೆಯಲ್ಲಿ ಇವೆಲ್ಲವೂ ನಾಶವಾದವು. ಇವೆಲ್ಲಕ್ಕಿಂತಲೂ ಇನ್ನೂ ಮುಖ್ಯವಾದ, ಚೆರ್ಟ್‌ಸೇಯ ಬೆನಿಡಿಕ್ಟಿನ್ ಪಂಥದ ಚರ್ಚು ಕೂಡಾ ಈ ಸಂದರ್ಭದಲ್ಲಿ ನಾಶವಾಯಿತು.
ಈಗ ಬಳಕೆ ತಪ್ಪಿದ ಸ್ಥಿತಿಗೆ ತಲುಪಿವೆಯಾದರೂ, ಆಯಾ ಕೌಂಟಿಗೆ ಸೇರಿದ ಜನರಿಗೆ ಸಂಬಂಧಿಸಿದಂತೆ ಕೆಲವೊಂದು ಇಂಗ್ಲಿಷ್ ಕೌಂಟಿಗಳು ಅಡ್ಡಹೆಸರುಗಳನ್ನು ಇಟ್ಟಿದ್ದವು ಅಥವಾ ಹೊಂದಿದ್ದವು; ಯಾರ್ಕ್‌ಷೈರ್‌ಗೆ ಸೇರಿದವನಿಗೆ ಓರ್ವ ಟೈಕ್ ಎನ್ನುವುದು, ಲಿಂಕನ್‌ಷೈರ್‌ಗೆ ಸೇರಿದವನಿಗೆ ಓರ್ವ ಯೆಲ್ಲೊಬೆಲ್ಲಿ ಎನ್ನುವುದು ಇದಕ್ಕೆ ಉದಾಹರಣೆಗಳಾಗಿದ್ದವು; 'ಸರ್ರೆ ಕೆಪಾನ್' ಎಂಬುದು ಸರ್ರೆಯಿಂದ ಬಂದ ಜನರಿಗಾಗಿರುವ ಸಾಂಪ್ರದಾಯಿಕ ಅಡ್ಡಹೆಸರು ಆಗಿದೆ. ಲಂಡನ್‌ನ ಮಾಂಸದ ಮಾರುಕಟ್ಟೆಗಳಿಗಾಗಿ ಕೋಳಿಮರಿಗಳನ್ನು ಕೊಬ್ಬಿಸಲಾಗುತ್ತಿದ್ದ ಕೌಂಟಿ ಎಂಬುದಾಗಿ ಸರ್ರೆಯು ನಂತರದ ಮಧ್ಯಯುಗಗಳಲ್ಲಿ ಚಿರಪರಿಚಿತವಾಗಿದ್ದುದೇ ಇದಕ್ಕೆ ಕಾರಣ.
ಆರಂಭಿಕ ಆಧುನಿಕ ಸರ್ರೆ
[ಬದಲಾಯಿಸಿ]ಆರಂಭದಲ್ಲಿ ಆಳ್ವಿಕೆ ನಡೆಸುತ್ತಿದ್ದ ಟ್ಯುಡಾರ್ ರಾಜರ ನೇತೃತ್ವದಲ್ಲಿ ಸರ್ರೆಯ ಉತ್ತರದ ಭಾಗದಲ್ಲಿ, ಲಂಡನ್‌ನೆಡೆಗಿದ್ದ ಅನುಕೂಲಕರ ಸಾಮೀಪ್ಯದಲ್ಲಿ ಭವ್ಯವಾದ ರಾಜೋಚಿತ ಅರಮನೆಗಳು ನಿರ್ಮಿಸಲ್ಪಟ್ಟವು. ರಿಚ್ಮಂಡ್‌ನಲ್ಲಿ, ಅಸ್ತಿತ್ವದಲ್ಲಿರುವ ರಾಜೋಚಿತ ನಿವಾಸವೊಂದು ರಾಜ VIIನೇ ಹೆನ್ರಿಯ ನೇತೃತ್ವದಲ್ಲಿ ಒಂದು ಭವ್ಯವಾದ ಪ್ರಮಾಣದಲ್ಲಿ ಮರುನಿರ್ಮಿಸಲ್ಪಟ್ಟಿತು. ಈತ ಅದರ ಸಮೀಪದಲ್ಲಿಯೇ ಸಂತ ಫ್ರಾನ್ಸಿಸ್ ಪಂಥದ ಫ್ರಯರ್‌ಗಳ ಮಠವೊಂದನ್ನೂ 1499ರಲ್ಲಿ ಸಂಸ್ಥಾಪಿಸಿದ. ಇದಕ್ಕಿಂತಲೂ ಹೆಚ್ಚು ನಯನ ಮನೋಹರವಾದ ನಾನ್‌ಸಚ್ ಅರಮನೆಯು ಎವೆಲ್ ಸಮೀಪದಲ್ಲಿ VIIIನೇ ಹೆನ್ರಿಗಾಗಿ ನಂತರದಲ್ಲಿ ನಿರ್ಮಿಸಲ್ಪಟ್ಟಿತು. ಗಿಲ್ಡ್‌ಫೋರ್ಡ್ ದುರ್ಗದಲ್ಲಿನ ಅರಮನೆಯು ಬಹಳ ಹಿಂದೆಯೇ ಬಳಕೆ ತಪ್ಪಿದ ಸ್ಥಿತಿಯನ್ನು ತಲುಪಿತ್ತಾದರೂ, ರಾಜೋಚಿತವಾದ ಬೇಟೆಯ ವಸತಿಗೃಹವೊಂದು ಪಟ್ಟಣದಿಂದ ಸ್ವಲ್ಪವೇ ಹೊರಭಾಗದಲ್ಲಿ ನೆಲೆಗೊಂಡಿತ್ತು. ಇವೆಲ್ಲವೂ ಅಲ್ಲಿಂದೀಚೆಗೆ ಕೆಡವಲ್ಪಟ್ಟವು.
1497ರ ಕಾರ್ನ್‌ವಾಲ್ ಪ್ರಾಂತದ ದಂಗೆಯ ಅವಧಿಯಲ್ಲಿ, ಲಂಡನ್ ಕಡೆಗೆ ಮುನ್ನುಗ್ಗುತ್ತಿದ್ದ ಬಂಡುಕೋರರು ಗಿಲ್ಡ್‌ಫೋರ್ಡ್‌ನ್ನು ಸಂಕ್ಷೇಪವಾಗಿ ಆಕ್ರಮಿಸಿದರು ಮತ್ತು ಪಟ್ಟಣದ ಹೊರಗಡೆಯ ಗಿಲ್ಡೌನ್‌ನಲ್ಲಿ ನೆಲೆಗೊಂಡಿದ್ದ ಒಂದು ಸರ್ಕಾರಿ ತುಕಡಿಯೊಂದಿಗೆ ಚಕಮಕಿಯನ್ನು ನಡೆಸಿದರು; ನಂತರ ಅವರು ಕೆಂಟ್‌ನಲ್ಲಿನ ಬ್ಲ್ಯಾಕ್‌ಹೀತ್‌ಗೆ ತೆರಳಿದಾಗ, ರಾಜವಂಶದ ಸೇನೆಯೊಂದರಿಂದ ಅವರು ಸದೆಬಡಿಯಲ್ಪಟ್ಟರು. 1554ರಲ್ಲಿ ನಡೆದ ವೈಯಾಟ್‌ನ ದಂಗೆಯ ಪಡೆಗಳು, ಕೆಂಟ್‌ನಿಂದ ಲಂಡನ್‌ಗೆ ಸಾಗುವ ತಮ್ಮ ಮಾರ್ಗದಲ್ಲಿ ಆಗಿನ ಸರ್ರೆಯ ಈಶಾನ್ಯ ಭಾಗದ ಮೂಲಕ ಹಾದುಹೋಗಿ, ಸೌತ್‌ವಾರ್ಕ್‌ನ್ನು ಸಂಕ್ಷೇಪವಾಗಿ ಆಕ್ರಮಿಸಿದವು ಮತ್ತು ಲಂಡನ್ ಸೇತುವೆಗೆ ಲಗ್ಗೆ ಹಾಕುವ ತಮ್ಮ ಪ್ರಯತ್ನವು ವಿಫಲಗೊಂಡ ನಂತರ, ಕಿಂಗ್ಸ್‌ಟನ್ ಬಳಿಯಲ್ಲಿ ಥೇಮ್ಸ್ ನದಿಯನ್ನು ದಾಟಿಕೊಂಡು ಹೋದವು.
16ನೇ ಶತಮಾನದಲ್ಲಿ ಸರ್ರೆಯ ಬಟ್ಟೆ ಉದ್ಯಮವು ಇಳಿಮುಖವಾಯಿತು ಮತ್ತು 17ನೇ ಶತಮಾನದಲ್ಲಿ ಅದು ಪರಿಣಾಮಕಾರಿಯಾಗಿ ಕುಸಿಯಿತು. 17ನೇ ಶತಮಾನದ ಆರಂಭಿಕ ಭಾಗದಲ್ಲಿ ಹೊಸ ಕುಲುಮೆ ತಂತ್ರಜ್ಞಾನದ ಪರಿಚಯವಾಗಿದ್ದರಿಂದ, ವನಾಂತರ ಪ್ರದೇಶದಲ್ಲಿ ಕಬ್ಬಿಣ ಉದ್ಯಮವು ಒಂದು ವಿಸ್ತರಣೆಯನ್ನು ಕಾಣಲು ಸಾಧ್ಯವಾಯಿತು. ವನಾಂತರ ಪ್ರದೇಶಗಳ ಸಮೃದ್ಧ ನಿಕ್ಷೇಪಗಳು ಇತಿಹಾಸಪೂರ್ವ ಕಾಲದಿಂದಲೂ ಬಳಕೆಯಾಗುತ್ತಾ ಬಂದಿದ್ದವಾದರೂ, ಗಣಿಗಳು ತೋಡಿ ತೋಡಿ ಖಾಲಿಯಾದ ಕಾರಣದಿಂದಾಗಿ ಇದು ವ್ಯವಹಾರದ ಅಳಿವನ್ನು ತೀವ್ರಗೊಳಿಸಿತು. ಆದಾಗ್ಯೂ, ಈ ಅವಧಿಯಲ್ಲಿ ಪ್ರಮುಖ ಹೊಸ ಕೈಗಾರಿಕೆಗಳು ಹೊರಹೊಮ್ಮಿದವು ಮತ್ತು ಅವು ಟಿಲ್ಲಿಂಗ್‌ಬೌರ್ನ್ ಕಣಿವೆಯ ಮೇಲೆ ಕೇಂದ್ರೀಕೃತವಾಗಿದ್ದವು. ಈ ಪ್ರದೇಶದಲ್ಲಿನ ಹಿತ್ತಾಳೆ ಸರಕುಗಳು ಮತ್ತು ತಂತಿಯ ಉತ್ಪಾದನೆಯು ತುಲನಾತ್ಮಕವಾಗಿ ಅಲ್ಪಾವಧಿಯದ್ದಾಗಿತ್ತಾದರೂ, ಕಾಗದ ಮತ್ತು ಕೋವಿಮದ್ದಿನ ತಯಾರಕೆಯು ಹೆಚ್ಚು ಬಾಳಿಕೆ ಬರುವಂಥದ್ದೆಂದು ಸಾಬೀತಾಯಿತು. 17ನೇ ಶತಮಾನದ ಮಧ್ಯಭಾಗದಲ್ಲಿನ ಒಂದು ಅವಧಿಯಲ್ಲಿ, ಸರ್ರೆಯ ಗಿರಣಿಗಳು ಇಂಗ್ಲೆಂಡ್‌ನಲ್ಲಿನ ಕೋವಿಮದ್ದಿನ ಉತ್ಪಾದನೆಯ ಮುಖ್ಯ ಗಿರಣಿಗಳೆನಿಸಿಕೊಂಡಿದ್ದವು. 1653ರಲ್ಲಿ ಪ್ರಾರಂಭವಾದ ವೇ ನೌಕಾಗತಿ ಶಾಸ್ತ್ರವು ಇಂಗ್ಲೆಂಡ್‌ನ ಮೊದಲ ಕಾಲುವೆ ವ್ಯವಸ್ಥೆಗಳ ಪೈಕಿ ಒಂದೆನಿಸಿತ್ತು.
ಗಿಲ್ಡ್‌ಫೋರ್ಡ್‌ನ ಓರ್ವ ಬಟ್ಟೆ ಕೆಲಸಗಾರನ ಮಗನಾದ ಜಾರ್ಜ್ ಅಬಾಟ್, 1611-33ರ ಅವಧಿಯಲ್ಲಿ ಕ್ಯಾಂಟರ್‌ಬರಿಯ ಆರ್ಚ್‌ಬಿಷಪ್ ಆಗಿ ಸೇವೆ ಸಲ್ಲಿಸಿದ. 1619ರಲ್ಲಿ ಅವನು ಅಬಾಟ್'ಸ್ ಹಾಸ್ಪಿಟಲ್‌ನ್ನು ಸಂಸ್ಥಾಪಿಸಿದ. ಇದು ಗಿಲ್ಡ್‌ಫೋರ್ಡ್‌ನಲ್ಲಿನ ಒಂದು ಧರ್ಮಶಾಲೆಯಾಗಿದ್ದು, ಈಗಲೂ ಕಾರ್ಯನಿರ್ವಹಿಸುತ್ತಿದೆ. ರೋಗಗ್ರಸ್ತವಾಗಿದ್ದ ಸ್ಥಳೀಯ ಬಟ್ಟೆ ಉದ್ಯಮವನ್ನು ಪುನಶ್ಚೇತನಗೊಳಿಸುವಲ್ಲಿನ ಅವನ ಪ್ರಯತ್ನಗಳು ಯಶಸ್ವಿಯಾಗುದೇ ಹೋದವು. ಅವನ ಸೋದರರ ಪೈಕಿ ಒಬ್ಬನಾದ ರಾಬರ್ಟ್ ಸ್ಯಾಲಿಸ್‌ಬರಿಯ ಬಿಷಪ್ ಆದರೆ, ಮೌರೀಸ್ ಎಂಬ ಅವನ ಮತ್ತೋರ್ವ ಸೋದರನು ಈಸ್ಟ್ ಇಂಡಿಯಾ ಕಂಪನಿಯ ಓರ್ವ ಸಂಸ್ಥಾಪಕ ಷೇರುದಾರ ಎನಿಸಿಕೊಂಡ. ಅಷ್ಟೇ ಅಲ್ಲ, ಈತ ಕಂಪನಿಯ ಕಾರ್ಯಾಧ್ಯಕ್ಷನೂ ಆದ ಹಾಗೂ ನಂತರದಲ್ಲಿ ಲಂಡನ್‌ನ ಲಾರ್ಡ್ ಮೇಯರ್ ಆದ.
ಅಂದು ಸರ್ರೆಯ ಒಂದು ಭಾಗವಾಗಿದ್ದ, ಸೌತ್‌ವಾರ್ಕ್‌ನಲ್ಲಿನ ಬ್ಯಾಂಕ್‌ಸೈಡ್, ಆರಂಭಿಕ ಆಧುನಿಕ ಲಂಡನ್‌ನ ಪ್ರಧಾನ ಮನರಂಜನಾ ಜಿಲ್ಲೆಯಾಗಿತ್ತು. ಈ ತಾಣವು ಲಂಡನ್‌ನ ನಗರ ಸರ್ಕಾರದ ಅಧಿಕಾರ ವ್ಯಾಪ್ತಿಯ ಹೊರಗಡೆ ಇದ್ದುಕೊಂಡು ಅನುಕೂಲಕರವೆನಿಸಿದ್ದು ಇದಕ್ಕೆ ಕಾರಣವಾಗಿತ್ತು. ಏಕೆಂದರೆ, ಈ ಲಂಡನ್ ಉಪನಗರದ ಮೇಲೆ ಸರ್ರೆಯ ಸ್ಥಳೀಯ ಪ್ರಾಧಿಕಾರಗಳು ಚಲಾಯಿಸುತ್ತಿದ್ದ ಹತೋಟಿಯು, ನಿರ್ಬಂಧಕತೆಯ ವಿಷಯದಲ್ಲಿ ಕಡಿಮೆ ಪರಿಣಾಮಕಾರಿಯಾಗಿದ್ದವು. ಇದರ ಫಲವಾಗಿ, ನಗರದ ರಂಗಭೂಮಿಗಳು ಇಲ್ಲಿ ನೆಲೆಗೊಂಡಿದ್ದವು ಮತ್ತು ಎಲಿಜಬೆತ್ ರಾಣಿಯ ಕಾಲದ ಹಾಗೂ ಜ್ಯಾಕೋಬಿಯನ್ ಕಾಲದ ರಂಗಭೂಮಿಯ ಸುವರ್ಣಯುಗಕ್ಕೆ ಸಂಬಂಧಿಸಿದಂತೆ ಇದೊಂದು ಸನ್ನಿವೇಶವಾಗಿ ಹೊರಹೊಮ್ಮಿತ್ತು; ವಿಲಿಯಂ ಷೇಕ್ಸ್‌ಪಿಯರ್, ಕ್ರಿಸ್ಟೋಫರ್ ಮಾರ್ಲೋ, ಬೆನ್ ಜಾನ್ಸನ್ ಮತ್ತು ಜಾನ್ ವೆಬ್‌ಸ್ಟರ್ ಮೊದಲಾದವರನ್ನು ಒಳಗೊಂಡಂತೆ ಅನೇಕ ನಾಟಕಕಾರರ ಕೃತಿಗಳು, ಥೇಮ್ಸ್ ನದಿಯ ದಕ್ಷಿಣ ದಡದ ಉದ್ದಕ್ಕೂ ನೆಲೆಗೊಂಡಿದ್ದ ರಂಗಮಂದಿರಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದುದು ಇದಕ್ಕೆ ನಿದರ್ಶನವಾಗಿತ್ತು.
ಇಂಗ್ಲಿಷ್ ನಾಗರಿಕ ಯುದ್ಧದ ಮುಖ್ಯ ಘಟ್ಟದ ಸಂದರ್ಭದಲ್ಲಿ, ಹೋರಾಟದ ನೇರ ಪ್ರಭಾವವನ್ನು ಸರ್ರೆಯು ಬಹುತೇಕವಾಗಿ ಸಂಪೂರ್ಣವಾಗಿ ತಪ್ಪಿಸಿಕೊಂಡಿತು. ಸರ್ ರಿಚರ್ಡ್ ಆನ್‌ಸ್ಲೊ ನೇತೃತ್ವವನ್ನು ಹೊಂದಿದ್ದ ಸ್ಥಳೀಯ ಸಂಸದೀಯ ಜನರು, ಯುದ್ಧದ ಹಠಾತ್ ಆರಂಭದ ಕುರಿತಾಗಿ ಯಾವುದೇ ತೊಡಕಿಲ್ಲದೆಯೇ ಕೌಂಟಿಯನ್ನು ರಕ್ಷಿಸುವಲ್ಲಿ ಸಮರ್ಥರಾಗಿದ್ದರು. 1642ರ ಅಂತ್ಯದ ವೇಳೆಗೆ, ಮುಂದುವರೆಯುತ್ತಿದ್ದ ರಾಜಪ್ರಭುತ್ವವಾದಿಗಳಿಂದ ಫರ್ನ್‌ಹ್ಯಾಂ ದುರ್ಗವು ಸಂಕ್ಷೇಪವಾಗಿ ಆಕ್ರಮಿಸಲ್ಪಟ್ಟಿತು, ಆದರೆ ಸರ್ ವಿಲಿಯಂ ವ್ಯಾಲರ್ ನೇತೃತ್ವದ ಅಡಿಯಲ್ಲಿನ ಸಂಸತ್ ಸದಸ್ಯರಿಂದ ಅದು ಸುಲಭವಾಗಿ ಲಗ್ಗೆ ಹಾಕಲ್ಪಟ್ಟಿತು. 1643ರ ಅಂತ್ಯಭಾಗದಲ್ಲಿ ನಡೆದ ರಾಜಪ್ರಭುತ್ವವಾದಿಗಳ ಒಂದು ಹೊಸ ಆಕ್ರಮಣದ ಸಂದರ್ಭದಲ್ಲಿ, ಫರ್ನ್‌ಹ್ಯಾಂ ಸುತ್ತಮುತ್ತ ವ್ಯಾಲರ್‌ನ ಪಡೆಗಳು ಮತ್ತು ರಾಲ್ಫ್ ಹಾಪ್ಟನ್‌ನ ರಾಜಪ್ರಭುತ್ವವಾದಿಗಳ ನಡುವೆ ಚಕಮಕಿಗಳು ನಡೆದವು; ಆದರೆ, ಸರ್ರೆಯ ಪಶ್ಚಿಮದ ಅಂಚುಗಳೊಳಗೆ ಆದ ಈ ಸಂಕ್ಷಿಪ್ತ ಅನಿರೀಕ್ಷಿತ ದಾಳಿಗಳು ಕೌಂಟಿಯನ್ನು ದೃಷ್ಟಿಯಾಗಿಟ್ಟುಕೊಂಡಿದ್ದ ರಾಜಪ್ರಭುತ್ವವಾದಿ ಮುಂದುವರಿಕೆಗಳ ಮಿತಿಗಳನ್ನು ಗುರುತುಮಾಡಿದವು. 1647ರ ಬೇಸಿಗೆಯಲ್ಲಿ ಹೊರಹೊಮ್ಮಿದ ಒಂದು ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಸರ್ ಥಾಮಸ್ ಫೇರ್‌ಫ್ಯಾಕ್ಸ್‌ನ ಸೇನೆಯು ಲಂಡನ್‌ನ್ನು ಆಕ್ರಮಿಸುವುದರೆಡೆಗಿನ ತನ್ನ ಮಾರ್ಗದಲ್ಲಿ ಸರ್ರೆಯ ಮೂಲಕ ಹಾದುಹೋಯಿತು, ಮತ್ತು ತರುವಾಯದಲ್ಲಿ ಸರ್ರೆಯಲ್ಲಿ ಪಡೆಗಳಿಗೆ ವಸತಿ ಒದಗಿಸಬೇಕಾಗಿ ಬಂದಾಗ ಅದು ಪರಿಗಣನೀಯ ಅಸಮಾಧಾನವನ್ನು ಉಂಟುಮಾಡಿತು. 1648ರಲ್ಲಿ ನಡೆದ ಸಂಕ್ಷಿಪ್ತವಾದ ಎರಡನೇ ನಾಗರಿಕ ಯುದ್ಧದಲ್ಲಿ, ರಾಜಪ್ರಭುತ್ವವಾದಿ ಬಂಡಾಯವೊಂದಕ್ಕೆ ಕಾವೇರಿಸುವ ಉದ್ದೇಶದೊಂದಿಗೆ ಹಾಲೆಂಡ್‌ನ ಅರ್ಲ್ ಜುಲೈನಲ್ಲಿ ಸರ್ರೆಯನ್ನು ಪ್ರವೇಶಿಸಿದ. ಕಿಂಗ್ಸ್‌ಟನ್‌ನಲ್ಲಿ ತನ್ನ ಬಂಡಾಯದ ಧ್ವಜವನ್ನು ಎತ್ತಿಹಿಡಿದ ಅವನು ದಕ್ಷಿಣದ ಕಡೆಗೆ ಮುಂದುವರೆದನಾದರೂ, ಅವನಿಗೆ ಅಲ್ಪಪ್ರಮಾಣದ ಬೆಂಬಲವು ದೊರೆಯಿತು. ಸಂಸದೀಯ ಪಡೆಗಳು ಸುತ್ತುವರೆಯಲ್ಪಟ್ಟ ಕಾರಣದಿಂದಾಗಿ ರೀಗೇಟ್ ಮತ್ತು ಡೋರ್ಕಿಂಗ್ ನಡುವೆ ಗೊಂದಲಗೊಂಡ ಕುಟಿಲೋಪಾಯಗಳು ತಲೆದೋರಿದ ನಂತರ, 500 ಜನರನ್ನು ಹೊಂದಿದ್ದ ಅವನ ಪಡೆಯು ಉತ್ತರದ ಕಡೆಗೆ ಪಲಾಯನ ಮಾಡಿತು ಹಾಗೂ ಅದು ಕಿಂಗ್ಸ್‌ಟನ್‌ನಲ್ಲಿ ಬೆನ್ನಟ್ಟುವಿಕೆಗೆ ಒಳಗಾಗಿ ಸದೆಬಡಿಯಲ್ಪಟ್ಟಿತು.
ನಾಗರಿಕ ಯುದ್ಧದಿಂದ ಹಿಡಿತ ಸಡಿಲಿಸಲ್ಪಟ್ಟ ಆಮೂಲಾಗ್ರ ರಾಜಕೀಯ ಆಂದೋಲನಗಳ ಬೆಳವಣಿಗೆಯಲ್ಲಿ ಸರ್ರೆಯು ಒಂದು ಪ್ರಧಾನ ಪಾತ್ರವನ್ನು ವಹಿಸಿತ್ತು. 1647ರ ಅಕ್ಟೋಬರ್‌ನಲ್ಲಿ, ಸಮತಾವಾದಿ ಆಂದೋಲನವೆಂದು ನಂತರದಲ್ಲಿ ಕರೆಯಲ್ಪಟ್ಟ ಆಂದೋಲನದ ಮೊದಲ ಪ್ರಣಾಳಿಕೆಯ ಕರಡು ಗಿಲ್ಡ್‌ಫೋರ್ಡ್‌ನಲ್ಲಿ ತಯಾರಿಸಲ್ಪಟ್ಟಿತು. ದಿ ಕೇಸ್ ಆಫ್ ದಿ ಆರ್ಮಿ ಟ್ರೂಲಿ ಸ್ಟೇಟೆಡ್ ಎಂದು ಕರೆಯಲ್ಪಟ್ಟ ಈ ಕರಡನ್ನು, ನ್ಯೂ ಮಾಡೆಲ್ ಆರ್ಮಿ ತುಕಡಿಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಲಂಡನ್‌ಗೆ ಸೇರಿದ್ದ ನಾಗರಿಕ ತೀವ್ರಗಾಮಿಗಳು ರಚಿಸಿದರು. ಜನಪ್ರಿಯ ಸಾರ್ವಭೌಮತ್ವದ ಆಧಾರದ ಮೇಲೆ, ಸಾಂವಿಧಾನಿಕ ಬದಲಾವಣೆಗೆ ಸಂಬಂಧಿಸಿದ ವ್ಯಾಪಕವಾದ ಬೇಡಿಕೆಗಳೊಂದಿಗೆ ನಿರ್ದಿಷ್ಟ ಕುಂದುಕೊರತೆಗಳ ಪ್ರಸ್ತುತಿಯನ್ನು ಈ ದಸ್ತಾವೇಜು ಸಂಯೋಜಿಸಿತು. ಹೆಚ್ಚು ವ್ಯವಸ್ಥಿತವಾದ ಮತ್ತು ಆಮೂಲಾಗ್ರವಾದ ಜನರ ಒಪ್ಪಂದ ಕ್ಕೆ (ಅಗ್ರಿಮೆಂಟ್ ಆಫ್ ದಿ ಪೀಪಲ್) ಸಂಬಂಧಿಸಿದ ಆಧಾರವನ್ನು ಇದು ರೂಪಿಸಿತು ಮತ್ತು ಇದರ ಕರಡನ್ನು ಅದೇ ಜನರು ಆ ತಿಂಗಳ ಅಂತ್ಯಭಾಗದಲ್ಲಿ ತಯಾರಿಸಿದರು; ಈ ಒಪ್ಪಂದವು ಇದರ ಸಹಿದಾರರು ಮತ್ತು ಸೇನಾ ನಾಯಕತ್ವದ ನಡುವಿನ ಪಟ್ನಿ ಚರ್ಚೆಗಳಿಗೆ ಕಾರಣವಾಯಿತು. 1649ರಲ್ಲಿ, ಗೆರಾರ್ಡ್ ವಿನ್‌ಸ್ಟಾನ್ಲೆ ನೇತೃತ್ವದ ಡಿಗರ್ಸ್ ಸಮೂಹವು, ಸಾಮಾನ್ಯ ಮಾಲೀಕತ್ವದ ಕುರಿತಾದ ತನ್ನ ಸಮಾನತಾವಾದಿ ಆದರ್ಶಗಳನ್ನು ಕಾರ್ಯರೂಪಕ್ಕೆ ತರುವ ದೃಷ್ಟಿಯಿಂದ ಸೇಂಟ್ ಜಾರ್ಜ್'ಸ್ ಹಿಲ್‌ನಲ್ಲಿ ಒಂದು ಸಾಮುದಾಯಿಕ ವಸಾಹತನ್ನು ಸ್ಥಾಪಿಸಿತು; ಆದರೆ ಅಲ್ಲಿನ ಸ್ಥಳೀಯ ಭೂಮಾಲೀಕರು ಹಿಂಸೆ ಮತ್ತು ಖಟ್ಲೆಯ ಮೂಲಕ ಈ ಸಮುದಾಯದವರನ್ನು ಅಂತಿಮವಾಗಿ ಹೊರಗೋಡಿಸಿದರು. ಒಂದು ಸಣ್ಣಗಾತ್ರದ ಡಿಗರ್ ಸಮುದಾಯವು ಕೊಬ್‌ಹ್ಯಾಂ ಸಮೀಪದಲ್ಲಿ ಸ್ಥಾಪಿಸಲ್ಪಟ್ಟಿತಾದರೂ, 1650ರಲ್ಲಿ ಅದಕ್ಕೂ ಇದೇ ಗತಿಯು ಒದಗಿಬಂತು.
ಆಧುನಿಕ ಇತಿಹಾಸ
[ಬದಲಾಯಿಸಿ]18ನೇ ಶತಮಾನದ ಅಂತ್ಯಭಾಗದವರೆಗೂ, ಸರ್ರೆಯು ತನ್ನ ಈಶಾನ್ಯ ಭಾಗದ ಮೂಲೆಯನ್ನು ಹೊರತುಪಡಿಸಿ, ವಿರಳವಾದ ಜನದಟ್ಟಣೆಯನ್ನು ಹೊಂದಿತ್ತು ಮತ್ತು ರಾಜಧಾನಿಗೆ ತಾನು ಹೊಂದಿದ್ದ ಸಾಮೀಪ್ಯತೆಯ ಹೊರತಾಗಿಯೂ ಒಂದು ರೀತಿಯಲ್ಲಿ ಹಳ್ಳಿಗಾಡಿನಂತಿತ್ತು. ಸಂಪರ್ಕಗಳು ಸುಧಾರಿಸಲು ಪ್ರಾರಂಭಿಸಿದವು, ಮತ್ತು ಸುಂಕದ ಕಟ್ಟೆಯ ರಸ್ತೆಗಳು ಮತ್ತು ಒಂದು ಮಜಲುಗಾಡಿ ವ್ಯವಸ್ಥೆಯು ಅಭಿವೃದ್ಧಿ ಹೊಂದುವುದರೊಂದಿಗೆ ಲಂಡನ್‌ನ ಪ್ರಭಾವವು ಹೆಚ್ಚತೊಡಗಿತು. 1830ರ ದಶಕದ ಅಂತ್ಯಭಾಗದಲ್ಲಿ ಆರಂಭಗೊಂಡ, ರೈಲುಮಾರ್ಗಗಳ ಆಗಮನದೊಂದಿಗೆ ತೀರಾ ಗಾಢವಾದ ರೂಪಾಂತರವೊಂದು ಕಂಡುಬಂತು. ಏಳಿಗೆ ಹೊಂದುತ್ತಿರುವ ಲಂಡನ್ ಕೆಲಸಗಾರರು ಸರ್ರೆಯ ಮಾರ್ಗವಾಗಿ ತಮ್ಮ ಮನೆಗಳಿಗೆ ಪ್ರತಿದಿನವೂ ಪ್ರಯಾಣಿಸುವುದಕ್ಕೆ ಕ್ಷಿಪ್ರ ಸಾರಿಗೆಯ ಲಭ್ಯತೆಯು ಅನುವುಮಾಡಿಕೊಟ್ಟಿತು. ನಿತ್ಯಪ್ರಯಾಣದ ಈ ವಿದ್ಯಮಾನವು ಸರ್ರೆಯ ಜನಸಂಖ್ಯೆ ಮತ್ತು ಸಂಪತ್ತು ಭಾರಿ ಎನ್ನಬಹುದಾದ ರೀತಿಯಲ್ಲಿ ಬೆಳೆಯಲು ಕಾರಣವಾಯಿತು, ಹಾಗೂ ಅದರ ಆರ್ಥಿಕತೆ ಮತ್ತು ಸಮಾಜವನ್ನು ಲಂಡನ್‌ನೊಂದಿಗೆ ಬಿಡಿಸಿಕೊಳ್ಳಲಾಗದಂತೆ ಗಂಟುಹಾಕಿತು. ಗಿಲ್ಡ್‌ಫೋರ್ಡ್, ಫರ್ನ್‌ಹ್ಯಾಂನಂಥ ಅಸ್ತಿತ್ವದಲ್ಲಿರುವ ಪಟ್ಟಣಗಳು ಹಾಗೂ ಅತ್ಯಂತ ನಯನ ಮನೋಹರವಾಗಿರುವ ಕ್ರಾಯ್ಡನ್‌ನಂಥ ಪಟ್ಟಣಗಳು ಕ್ಷಿಪ್ರವಾಗಿ ಬೆಳೆದರೆ, ವೋಕಿಂಗ್ ಮತ್ತು ರೆಡ್‌ಹಿಲ್‌ನಂಥ ಹೊಸ ಪಟ್ಟಣಗಳು ರೈಲ್ವೆ ಮಾರ್ಗಗಳ ಪಕ್ಕದಲ್ಲಿ ಹೊರಹೊಮ್ಮಿದವು.
ಈ ಮಧ್ಯೆ, ಸ್ವತಃ ಲಂಡನ್ ನಗರವು ಈಶಾನ್ಯ ಭಾಗದ ಸರ್ರೆಗೆ ಅಡ್ಡಹಾಯುವಂತೆ ಚುರುಕಾಗಿ ಹಬ್ಬಿತು. 1800ರಲ್ಲಿ ಇದು ಕೇವಲ ವೌಕ್ಸ್‌ಹಾಲ್‌ವರೆಗೆ ವಿಸ್ತರಿಸಿತು; ಒಂದು ಶತಮಾನದ ನಂತರ ನಗರವು ಮತ್ತಷ್ಟು ಬೆಳೆದು ಪಟ್ನಿ ಮತ್ತು ಸ್ಟ್ರೀಟ್‌ಹ್ಯಾಂವರೆಗೆ ಮುಟ್ಟಿತು. 1889ರಲ್ಲಿ ಕಂಡುಬಂದ ಲಂಡನ್‌ನ ಕೌಂಟಿಯ ಸೃಷ್ಟಿಯಲ್ಲಿ ಈ ವಿಸ್ತರಣೆಯು ಪ್ರತಿಬಿಂಬಿಸಲ್ಪಟ್ಟಿತು ಮತ್ತು ನಗರದಿಂದ ಅಂತರ್ಗತಗೊಳಿಸಲ್ಪಟ್ಟ ಪ್ರದೇಶಗಳನ್ನು ಸರ್ರೆಯಿಂದ ಬೇರ್ಪಡಿಸುವುದು ಇದರಲ್ಲಿ ಸೇರಿತ್ತು. ಲಂಡನ್‌ನ ವಿಸ್ತರಣೆಯು 20ನೇ ಶತಮಾನದಲ್ಲಿಯೂ ಮುಂದುವರಿಯಿತು, ಮತ್ತು ಕ್ರಾಯ್ಡನ್, ಕಿಂಗ್ಸ್‌ಟನ್ ಹಾಗೂ ಸಣ್ಣಗಾತ್ರದ ಅನೇಕ ವಸಾಹತುಗಳನ್ನು ಅದು ಆವರಿಸಿಕೊಂಡಿತು. ಈ ಕ್ರಮಗಳಿಂದ ವ್ಯಾಪಕವಾದ ಲಂಡನ್ ಸೃಷ್ಟಿಯಾದುದರಿಂದ, 1965ರ ವೇಳೆಗೆ ಸರ್ರೆಯು ಮತ್ತಷ್ಟು ಸಂಕುಚನಗೊಳ್ಳಬೇಕಾಗಿ ಬಂತು.
ಲಂಡನ್‌ನ ಜನಸಂಖ್ಯೆಗೆ ಸೇವೆ ಸಲ್ಲಿಸುವ ಸಲುವಾಗಿ, 1849ರಲ್ಲಿ ವೋಕಿಂಗ್ ಸಮೀಪದಲ್ಲಿ ಬ್ರೂಕ್‌ವುಡ್ ಸ್ಮಶಾನವು ಸ್ಥಾಪಿಸಲ್ಪಟ್ಟಿತು ಹಾಗೂ ತನ್ನದೇ ಆದ ರೈಲ್ವೆ ಸೇವೆಯ ನೆರವಿನೊಂದಿಗೆ ಅದು ರಾಜಧಾನಿಯೊಂದಿಗೆ ಸಂಪರ್ಕವನ್ನು ಹೊಂದಿತು. ಇದು ಕೆಲವೇ ದಿನಗಳಲ್ಲಿ ಪ್ರಪಂಚದಲ್ಲಿನ ಅತಿದೊಡ್ಡ ಹೂಳುಗಾಡಾಗಿ ಅಭಿವೃದ್ಧಿ ಹೊಂದಿತು. 1878ರಲ್ಲಿ ಪ್ರಾರಂಭವಾದ ಬ್ರಿಟನ್‌ನ ಮೊದಲ ದಹನಭೂಮಿಯ ತಾಣವಾಗಿಯೂ ವೋಕಿಂಗ್ ಪರಿಚಿತವಾಯಿತು. 1889ರಲ್ಲಿ ಇದರ ಮೊದಲ ಮಸೀದಿಯು ಸಂಸ್ಥಾಪಿಸಲ್ಪಟ್ಟಿತು. 1881ರಲ್ಲಿ, ಸಾರ್ವಜನಿಕ ವಿದ್ಯುಚ್ಛಕ್ತಿ ಪೂರೈಕೆ ವ್ಯವಸ್ಥೆಯೊಂದನ್ನು ಹೊಂದಿದ ಪ್ರಪಂಚದಲ್ಲಿನ ಮೊದಲ ಪಟ್ಟಣ ಎಂಬ ಕೀರ್ತಿಯನ್ನು ಗೋದಲ್ಮಿಂಗ್ ಪಡೆಯಿತು.
1877ರಲ್ಲಿ ಸರ್ರೆಯ ಪೂರ್ವದ ಭಾಗವು ವಿಂಚೆಸ್ಟರ್‌ನ ಡಯೋಸಿಸ್‌ನಿಂದ ರೋಚೆಸ್ಟರ್‌ನ ಡಯೋಸಿಸ್‌ಗೆ ವರ್ಗಾಯಿಸಲ್ಪಟ್ಟಿತು. ಹೊಸದಾಗಿ ಸೌತ್‌ವಾರ್ಕ್‌ನ ಡಯೋಸಿಸ್ ಒಂದನ್ನು ರಚಿಸಲೆಂದು 1905ರಲ್ಲಿ ಈ ಪ್ರದೇಶವನ್ನು ಬೇರ್ಪಡಿಸಲಾಯಿತು. ಪೂರ್ವದ ಹ್ಯಾಂಪ್‌ಷೈರ್‌ನ ಭಾಗದ ಜೊತೆಗೆ ಕೌಂಟಿಯ ಉಳಿದ ಭಾಗವು 1927ರಲ್ಲಿ ವಿಂಚೆಸ್ಟರ್‌ನಿಂದ ಪ್ರತ್ಯೇಕಿಸಲ್ಪಟ್ಟಿತು; ಗಿಲ್ಡ್‌ಫೋರ್ಡ್‌ನ ಡಯೋಸಿಸ್ ಆಗಲೆಂದು ಈ ಕ್ರಮವನ್ನು ಕೈಗೊಳ್ಳಲಾಯಿತು ಮತ್ತು ಗಿಲ್ಡ್‌ಫೋರ್ಡ್‌ನ ಕೆಥೆಡ್ರಲ್ 1961ರಲ್ಲಿ ಪ್ರತಿಷ್ಠಾಪಿಸಲ್ಪಟ್ಟಿತು.
19ನೇ ಶತಮಾನದ ಅಂತ್ಯಭಾಗದಲ್ಲಿ, ಬ್ರಿಟನ್ ಮತ್ತು ಪ್ರಪಂಚದ ವ್ಯಾಪಕವಾದ ಭಾಗಗಳಲ್ಲಿನ ವಾಸ್ತುಶೈಲಿಯ ಅಭಿವೃದ್ಧಿಯಲ್ಲಿ ಸರ್ರೆಯ ಪಾತ್ರವು ಹೆಚ್ಚೆಚ್ಚು ಮುಖ್ಯವೆನಿಸತೊಡಗಿತು. ಕಲೆ ಮತ್ತು ಕರಕೌಶಲಗಳ ಚಟುವಟಿಕೆಯೊಂದಿಗೆ ನಂಟನ್ನು ಹೊಂದಿದ್ದ ಇಂಗ್ಲಿಷರ ಸಾಮಾನ್ಯ ಕಟ್ಟಡದ ವಾಸ್ತುಶೈಲಿಗೆ ಸಂಬಂಧಿಸಿದಂತೆ ವ್ಯಾಪಕವಾಗಿ ಹಬ್ಬಿದ್ದ ಪ್ರವೃತ್ತಿಗೆ ಆಕಾರ ನೀಡುವಲ್ಲಿ ಇದರ ಸಾಂಪ್ರದಾಯಿಕ ಕಟ್ಟಡದ ಸ್ವರೂಪಗಳು ಆಯಕಟ್ಟಿನ ಮಹತ್ವವನ್ನು ಗಳಿಸಿದ್ದವು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ರಿಚರ್ಡ್ ನಾರ್ಮನ್ ಷಾನ ಕಾರ್ಯವು ಇದರ ಪ್ರಭಾವದ ಹಿಂದಿನ ಪ್ರೇರಣೆಯಾಗಿತ್ತು, ಮತ್ತು ಅದು 20ನೇ ಶತಮಾನದ ಉದ್ದಕ್ಕೂ ಸ್ವದೇಶಿ ಕಟ್ಟಡಗಳಿಗೆ ಆಕಾರ ನೀಡುವ ಪ್ರಕ್ರಿಯೆಯನ್ನು ಮುಂದುವರಿಸಿತು. 1890ರ ದಶಕದಲ್ಲಿ ಸರ್ರೆಯ ವಾಸ್ತುಯೋಜನೆಯ ಪ್ರಸಿದ್ಧಿಯು ಉತ್ತುಂಗಕ್ಕೇರಿತು. ಈ ಅವಧಿಯಲ್ಲಿ ಎಡ್ವಿನ್ ಲುಟ್ಯೆನ್ಸ್ ಮತ್ತು ಚಾರ್ಲ್ಸ್ ವೋಯ್ಸೆರವರ ಆರಂಭಿಕ ಕಾರ್ಯಗಳಿಂದಾಗಿ ಗಮನ ಸೆಳೆದಿದ್ದ ಸರ್ರೆಯು ತನ್ಮೂಲಕ ಜಾಗತಿಕ ಪ್ರಾಮುಖ್ಯತೆಯನ್ನು ಗಳಿಸಿತ್ತು.
19ನೇ ಶತಮಾನದ ಅಂತ್ಯಭಾಗ ಮತ್ತು 20ನೇ ಶತಮಾನದ ಆರಂಭಿಕ ಭಾಗಗಳಲ್ಲಿ, ಕಾಗದ ಮತ್ತು ಕೋವಿಮದ್ದನ್ನು ತಯಾರಿಸುತ್ತಿದ್ದ ಮತ್ತು ಸುದೀರ್ಘ-ಕಾಲದಿಂದಿದ್ದ ಸರ್ರೆಯ ಕೈಗಾರಿಕೆಗಳು ಕಣ್ಮರೆಯಾದವು. ಸರಿಸುಮಾರಾಗಿ ಶತಮಾನದ ಅಂತ್ಯದ ವೇಳೆಗೆ, ಕೌಂಟಿಯ ಬಹುತೇಕ ಕಾಗದದ ಗಿರಣಿಗಳು ಮುಚ್ಚಲ್ಪಟ್ಟವು ಮತ್ತು ಕೊನೆಗೆ ಉಳಿದಂಥವು 1928ರಲ್ಲಿ ಮುಚ್ಚಲ್ಪಟ್ಟವು. ಮೊದಲ ಜಾಗತಿಕ ಸಮರಕ್ಕೆ ಕೋವಿಮದ್ದಿನ ಉತ್ಪಾದನೆಯು ಬಲಿಪಶುವಾಗಬೇಕಾಗಿ ಬಂತು. ಏಕೆಂದರೆ, ಈ ಸಮರವು ಬ್ರಿಟಿಷ್ ಯುದ್ಧಸಾಮಗ್ರಿಗಳ ಉದ್ಯಮದ ಒಂದು ಬೃಹತ್ ವಿಸ್ತರಣೆಗೆ ಅನುವುಮಾಡಿಕೊಟ್ಟಿತು. ಇದರ ನಂತರದಲ್ಲಿ, ಯುದ್ಧವು ಅಂತ್ಯಗೊಂಡಾಗ ತೀವ್ರಸ್ವರೂಪದ ನಿರ್ಬಂಧ ಹಾಗೂ ಬಲವರ್ಧನೆಯು ಕಂಡುಬಂದು, ಅದು ಸರ್ರೆಯ ಮದ್ದಿನ ಗಿರಣಿಗಳ ಮುಚ್ಚುವಿಕೆಗೆ ಕಾರಣವಾಯಿತು. 1895ರಲ್ಲಿ ಗಿಲ್ಡ್‌ಫೋರ್ಡ್‌ನಲ್ಲಿ ಕಂಡುಬಂದ ಹೊಸ ಕೈಗಾರಿಕಾ ಅಭಿವೃದ್ಧಿ ಕಾರ್ಯಗಳಲ್ಲಿ ಡೆನಿಸ್ ಬ್ರದರ್ಸ್ ಎಂಬ ವಾಹನ ತಯಾರಕ ಕಂಪನಿಯ ಸ್ಥಾಪನೆಯು ಸೇರಿತ್ತು. ಬೈಸಿಕಲ್ಲುಗಳ ಓರ್ವ ತಯಾರಕನಾಗಿ ಮತ್ತು ನಂತರದಲ್ಲಿ ಕಾರುಗಳ ಓರ್ವ ತಯಾರಕನಾಗಿ ಆರಂಭಗೊಂಡ ಈ ಸಂಸ್ಥೆಯು ಕೆಲವೇ ದಿನಗಳಲ್ಲಿ ತನ್ನ ಗಮನವನ್ನು ವಾಣಿಜ್ಯ ವಾಹನಗಳು ಮತ್ತು ಸಾರ್ವಜನಿಕ ಉಪಯುಕ್ತತೆಯ ವಾಹನಗಳ ತಯಾರಿಕೆಯ ಕಡೆಗೆ ತಿರುಗಿಸಿತು. ಇದರಿಂದಾಗಿ ಸದರಿ ಸಂಸ್ಥೆಯು ಅಗ್ನಿಶಾಮಕ ಯಂತ್ರ-ವಾಹನಗಳು ಮತ್ತು ಬಸ್ಸುಗಳ ಓರ್ವ ತಯಾರಕನಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆಯನ್ನು ಗಳಿಸಿತು. ಗಾತ್ರದಲ್ಲಿ ಸಾಕಷ್ಟು ತಗ್ಗಿಸಲ್ಪಟ್ಟಿದ್ದರೂ ಮತ್ತು ಮಾಲೀಕತ್ವದಲ್ಲಿನ ಹಲವಾರು ಬದಲಾವಣೆಗಳ ಹೊರತಾಗಿಯೂ, ಈ ವ್ಯವಹಾರವು ಗಿಲ್ಡ್‌ಫೋರ್ಡ್‌ನಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಮುಂದುವರಿಸಿದೆ.
ಎರಡನೇ ಜಾಗತಿಕ ಸಮರದ ಅವಧಿಯಲ್ಲಿ, GHQ ನಿಲುಗಡೆ ರೇಖೆಯ ಒಂದು ವಿಭಾಗವು ನಾರ್ತ್ ಡೌನ್ಸ್ ಉದ್ದಕ್ಕೂ ನಿರ್ಮಿಸಲ್ಪಟ್ಟಿತು; ಇದು ಪುಟ್ಟಕೋಟೆಗಳು, ಬಂದೂಕು ಫಿರಂಗಿ ಜಗಲಿಗಳು, ಟ್ಯಾಂಕ್-ನಿರೋಧಿ ಅಡೆತಡೆಗಳು ಮತ್ತು ಇತರ ರಕ್ಷಣಾ ಸಾಧನಗಳ ಒಂದು ವ್ಯವಸ್ಥೆಯಾಗಿತ್ತು. ಸಾಮರ್‌ಸೆಟ್‌ನಿಂದ ಯಾರ್ಕ್‌ಷೈರ್‌ವರೆಗೆ ಸಾಗುವ ಈ ಮಾರ್ಗವನ್ನು, ಆಕ್ರಮಣದ ಬೆದರಿಕೆಗೆ ಪ್ರತಿಯಾಗಿರುವ ಲಂಡನ್‌ನ ಮತ್ತು ಇಂಗ್ಲೆಂಡ್‌ನ ಕೈಗಾರಿಕಾ ಕೇಂದ್ರದ ಪ್ರಧಾನವಾದ ನಿಶ್ಚಿತ ರಕ್ಷಣೆಯ ಮಾರ್ಗವಾಗಿ ಉದ್ದೇಶಿಸಲಾಗಿತ್ತು. ಈ ಕುರಿತಾಗಿ ಗಮನವಿಟ್ಟು ನೋಡುತ್ತಿದ್ದ ಜರ್ಮನ್ನರ ಆಕ್ರಮಣ ಯೋಜನೆಗಳು, ಒಳನಾಡಿನಲ್ಲಿನ ತಮ್ಮ ಮುಂದುವರಿಯುವಿಕೆಯ ಮುಖ್ಯ ನುಗ್ಗುದಾಳಿಯು ವೇಯ್ ಕಣಿವೆಯಿಂದ ರೂಪಿಸಲ್ಪಟ್ಟಿರುವ ಏಣಿನಲ್ಲಿನ ಅಂತರದಲ್ಲಿ ನಾರ್ತ್ ಡೌನ್ಸ್‌ನ್ನು ಅಡ್ಡಹಾಯುತ್ತದೆ. ಇದರಿಂದಾಗಿ ಗಿಲ್ಡ್‌ಫೋರ್ಡ್ ಸುತ್ತಲೂ ಇರುವ ರಕ್ಷಣೆ ಮಾರ್ಗದೊಂದಿಗೆ ಘರ್ಷಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಿದವು.
ಐತಿಹಾಸಿಕ ವಾಸ್ತುಶೈಲಿ ಮತ್ತು ಸ್ಮಾರಕಗಳು
[ಬದಲಾಯಿಸಿ]ಪ್ರಾಚೀನ ಬ್ರಿಟಿಷ್ ಮತ್ತು ರೋಮನ್ ಕಾಲಾವಧಿಗಳ ಕೆಲವೊಂದು ಕುರುಹುಗಳು ಸರ್ರೆಯಲ್ಲಿ ಉಳಿದುಕೊಂಡಿವೆ. ಅನೇಕ ತಾಣಗಳಲ್ಲಿ ಹಲವಾರು ಸಂಖ್ಯೆಯಲ್ಲಿ ದುಂಡನೆಯ ತಳ್ಳುಗಾಡಿಗಳು ಮತ್ತು ಗಂಟೆಯ ತಳ್ಳುಗಾಡಿಗಳಿದ್ದು, ಇವು ಪ್ರಾಯಶಃ ಕಂಚಿನ ಯುಗಕ್ಕೆ ಸೇರಿವೆ ಎಂದು ಹೇಳಲಾಗುತ್ತದೆ. ಕಬ್ಬಿಣದ ಯುಗದ ಬೆಟ್ಟದ ಕೋಟೆಗಳ ಅವಶೇಷಗಳು ಈ ತಾಣಗಳಲ್ಲಿ ಕಂಡುಬರುತ್ತವೆ: ಹಾಮ್‌ಬರಿ ಬೆಟ್ಟ, ಹ್ಯಾಸ್ಕೋಂಬ್ ಬೆಟ್ಟ, ಆನ್ಸ್ಟೀಬರಿ (ಕೇಪೆಲ್ ಸಮೀಪ), ಡ್ರೈ ಬೆಟ್ಟ (ಲಿಂಗ್‌ಫೀಲ್ಡ್ ಸಮೀಪ), ಚೆರ್ಟ್‌ಸೇಯ ಸೇಂಟ್ ಆನ್‌ನ ಬೆಟ್ಟ ಮತ್ತು ವೇಬ್ರಿಜ್‌ನ ಸೇಂಟ್ ಜಾರ್ಜ್‌ನ ಬೆಟ್ಟ. ಇವುಗಳ ಪೈಕಿಯ ಬಹುತೇಕ ತಾಣಗಳು 1ನೇ ಶತಮಾನದ BCಯ ಅವಧಿಯಲ್ಲಿ ಸೃಷ್ಟಿಸಲ್ಪಟ್ಟವು ಮತ್ತು ಅನೇಕ ತಾಣಗಳು 1ನೇ ಶತಮಾನದ ADಯ ಮಧ್ಯಭಾಗದ ಅವಧಿಯಲ್ಲಿ ಮರು-ಆಕ್ರಮಿಸಲ್ಪಟ್ಟವು.[೧೦] ಕೌಂಟಿಯನ್ನು ಅಡ್ಡಹಾಯ್ದ ರೋಮನ್ ರಸ್ತೆಗಳಾದ ಸ್ಟೇನ್ ಬೀದಿ ಮತ್ತು ಎರ್ಮೈನ್ ಬೀದಿಗಳ ತುಣುಕುಗಳಷ್ಟೇ ಉಳಿದುಕೊಂಡವು.
ಆಂಗ್ಲ-ಸ್ಯಾಕ್ಸನ್ ಅಂಶಗಳು ಸರ್ರೆಯ ಹಲವಾರು ಚರ್ಚುಗಳಲ್ಲಿ ಉಳಿದುಕೊಂಡವು. ಅಂಥ ಗಮನಾರ್ಹ ಚರ್ಚುಗಳಲ್ಲಿ ಗಿಲ್ಡ್‌ಫೋರ್ಡ್ (ಸೇಂಟ್ ಮೇರಿ'ಸ್), ಗೋದಲ್ಮಿಂಗ್ (ಸೇಂಟ್ ಪೀಟರ್ & ಸೇಂಟ್ ಪಾಲ್), ಸ್ಟೋಕ್ ಡಿ'ಅಬೆರ್ನಾನ್, ಥರ್ಸ್‌ಲೆ, ವಿಟ್ಲೆ, ಕಾಂಪ್ಟನ್ ಮತ್ತು ಆಲ್ಬರಿ (ಹಳೆಯ ಚರ್ಚು) ಮೊದಲಾದವು ಸೇರಿವೆ.
ಮಧ್ಯಯುಗದ ಹಲವಾರು ಚರ್ಚುಗಳು ಸರ್ರೆಯಲ್ಲಿ ಅಸ್ತಿತ್ವವನ್ನು ಕಂಡುಕೊಂಡಿವೆಯಾದರೂ, ಕೌಂಟಿಯ ಪಾದ್ರಿ ಹೋಬಳಿಯ ಚರ್ಚುಗಳು ವಿಶಿಷ್ಟವೆಂಬಂತೆ ತುಲನಾತ್ಮಕವಾಗಿ ಸಣ್ಣದಾಗಿವೆ ಮತ್ತು ಸರಳವಾಗಿವೆ; ಅಷ್ಟೇ ಅಲ್ಲ, ನಿರ್ದಿಷ್ಟವಾಗಿ ಹೇಳಬೇಕೆಂದರೆ ವಿಕ್ಟೋರಿಯಾ ರಾಣಿಯ ಕಾಲದಲ್ಲಿ ನಡೆದ ಜೀರ್ಣೋದ್ಧಾರದ ಕಾರ್ಯಗಳಿಗೆ ಅವು ಅತೀವವಾಗಿ ಈಡಾಗಿವೆ. ಮಧ್ಯಯುಗದ ಮುಖ್ಯವಾದ ಚರ್ಚುಗಳ ಒಳಾಂಗಣಗಳನ್ನು ಸ್ಟೋಕ್ ಡಿ'ಅಬೆರ್ನಾನ್, ಕಾಂಪ್ಟನ್, ಚಾಲ್ಡಾನ್, ಡನ್ಸ್‌ಫೋಲ್ಡ್ ಮತ್ತು ಲಿಂಗ್‌ಫೀಲ್ಡ್‌ಗಳಲ್ಲಿ ಕಾಣಬಹುದು. ದೊಡ್ಡದಾದ ಮಠ ವಿಷಯಕ ಚರ್ಚುಗಳ ಸಂಸ್ಥೆಗಳು ವಿಘಟಿಸಲ್ಪಟ್ಟ ನಂತರ, ಆ ಚರ್ಚುಗಳು ವಿನಾಶದ ಹಾದಿಯನ್ನು ಹಿಡಿದವು. ಆದರೂ ಸಹ ವೇವರ್ಲಿ ಮತ್ತು ನೆವಾರ್ಕ್‌ನಲ್ಲಿದ್ದ ಚರ್ಚುಗಳ ಒಂದಷ್ಟು ಅವಶೇಷಗಳು ಈಗಲೂ ಉಳಿದುಕೊಂಡಿದ್ದರೆ, ಸರ್ರೆಯಲ್ಲಿ ಹೆಚ್ಚು ಕಾಲ ಇರದ ಸೌತ್‌ವಾರ್ಕ್ ಪ್ರಯರನ ಮಠವು ಶಿಥಿಲವಾಗಿಲ್ಲದೆ ಒಂದು ಕೆಥೆಡ್ರಲ್ ಆಗಿ ಉಳಿದುಕೊಂಡಿದೆ. ಫರ್ನ್‌ಹ್ಯಾಂ ದುರ್ಗದ ಬಹುಭಾಗವು ಉಳಿದುಕೊಂಡಿದ್ದರೆ, ಗಣನೀಯ ಪ್ರಮಾಣದ ಅವಶೇಷಗಳನ್ನು ಗಿಲ್ಡ್‌ಫೋರ್ಡ್ ದುರ್ಗದಲ್ಲಿ ಕಾಣಬಹುದಾಗಿದೆ; ಮಧ್ಯಯುಗಕ್ಕೆ ಸೇರಿದ ಕೈಬೆರಳೆಣಿಕೆಯಷ್ಟು ಸ್ವದೇಶಿ ಕಟ್ಟಡಗಳು ಉಳಿದುಕೊಂಡಿವೆಯಾದರೂ, ನಂತರದಲ್ಲಿ ಅವು ಪರಿಗಣನೀಯ ಮಾರ್ಪಾಡುಗಳಿಗೆ ಒಳಗಾಗಿವೆ ಎಂಬುದು ಗಮನಾರ್ಹ ಸಂಗತಿ.
ಸರ್ರೆಯಲ್ಲಿನ ವಾಸ್ತುಶೈಲಿಯ ಉಳಿಕೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, 16ನೇ ಶತಮಾನದಷ್ಟು ಪ್ರಾಚೀನ ಕಾಲಕ್ಕೆ ಸೇರಿದ ಒಂದು ಗಣನೀಯ ಗಾತ್ರದಲ್ಲಿರುವ, ಸೇನೆಯದ್ದಲ್ಲದ ತಲೆತಲಾಂತರದ ವಾಸ್ತುಶೈಲಿಯು ಸರ್ರೆಯಲ್ಲಿ ಉಳಿದುಕೊಂಡಿದೆ ಎಂದು ಹೇಳಬಹುದು. ಮುಖ್ಯವಾದ ಉದಾಹರಣೆಗಳಲ್ಲಿ ಮಹಾ ಮಧ್ಯ-ಶತಮಾನಕ್ಕೆ ಸೇರಿದ,
ಲೊಸೆಲೆ ಪಾರ್ಕ್ ಮತ್ತು ಸಟಾನ್ ಪ್ಲೇಸ್‌ನ ಹಳ್ಳಿಯ ಜಮೀನ್ದಾರರ ಮನೆಗಳು, ಹಾಗೂ 1509ರಲ್ಲಿ ಸಂಸ್ಥಾಪಿಸಲ್ಪಟ್ಟ ಗಿಲ್ಡ್‌ಫೋರ್ಡ್‌ನ ರಾಯಲ್ ಗ್ರಾಮರ್ ಸ್ಕೂಲ್‌ನ ಹಳೆಯ ಕಟ್ಟಡ ಇವು ಸೇರಿವೆ. 16ನೇ ಶತಮಾನಕ್ಕೆ ಸೇರಿದ ಒಂದು ಪರಿಗಣನೀಯ ಸಂಖ್ಯೆಯಲ್ಲಿರುವ ಸಾಧಾರಣ ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ಈಗಲೂ ಸಹ ನೆಲೆನಿಂತಿವೆ, ಮತ್ತು 17ನೇ ಶತಮಾನಕ್ಕೆ ಸೇರಿದ, ಇಂಥ ಉಳಿದುಕೊಂಡಿರುವ ಕಟ್ಟಡಗಳ ಸಂಖ್ಯೆಯು ಮತ್ತಷ್ಟು ಬೆಳೆಯುತ್ತಲೇ ಹೋಗುತ್ತದೆ. 1619ರಲ್ಲಿ ಸಂಸ್ಥಾಪಿಸಲ್ಪಟ್ಟ ಅಬಾಟ್'ಸ್ ಹಾಸ್ಪಿಟಲ್, ಅದು ರೂಪುಗೊಂಡ ಅವಧಿಯ ಹೊರತಾಗಿಯೂ ಟ್ಯುಡಾರ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟ ಒಂದು ಮಹಾ ಭವ್ಯಸೌಧ ಎನಿಸಿಕೊಂಡಿದೆ. 17ನೇ-ಶತಮಾನಕ್ಕೆ ಸೇರಿದ, ಹೆಚ್ಚು ವಿಶಿಷ್ಟತೆಯನ್ನು ಹೊಂದಿದ್ದ ಪ್ರಮುಖ ಕಟ್ಟಡಗಳ ಉದಾಹರಣೆಗಳಲ್ಲಿ ಗಿಲ್ಡ್‌ಫೋರ್ಡ್‌ನಲ್ಲಿರುವ ವೃತ್ತಿಸಂಘ ಭವನ, ವೆಸ್ಟ್ ಹಾರ್ಸ್‌ಲೆ ಪ್ಲೇಸ್, ಮತ್ತು ಸ್ಲೈಫೀಲ್ಡ್ ಮ್ಯಾನರ್ ಮಾತ್ರವಲ್ಲದೆ, ಹಿಂದೆ ಸರ್ರೆಯಲ್ಲಿದ್ದರೂ ಈಗ ವ್ಯಾಪಕವಾದ ಲಂಡನ್‌ನಲ್ಲಿರುವ ಹ್ಯಾಮ್ ಹೌಸ್ ಮತ್ತು ಕ್ಯೂ ಅರಮನೆ ಕೂಡಾ ಸೇರಿವೆ.
ಸಾಹಿತ್ಯ
[ಬದಲಾಯಿಸಿ]ಎಲಿಜಬೆತ್ ರಾಣಿಯ ಕಾಲದ ಮತ್ತು ಜ್ಯಾಕೋಬಿಯನ್ ಕಾಲದ ರಂಗಭೂಮಿಯಲ್ಲಿ ಸರ್ರೆಯು ವಹಿಸಿರುವ ಪಾತ್ರದ ಜೊತೆಜೊತೆಗೆ, ಅನೇಕ ಪ್ರಮುಖ ಬರಹಗಾರರು ಸರ್ರೆಯಲ್ಲಿ ವಾಸಿಸಿದ್ದಾರೆ ಮತ್ತು ಕಾರ್ಯನಿರ್ವಹಿಸಿದ್ದಾರೆ.
- ಮಧ್ಯಕಾಲೀನ ಇಂಗ್ಲಿಷ್‌ಗೆ ಸೇರಿದ ಅತ್ಯಂತ ಪ್ರಾಚೀನ ಕವಿತೆಗಳಲ್ಲಿ ಒಂದಾದ ದಿ ಔಲ್ ಅಂಡ್ ದಿ ನೈಟಿಂಗೇಲ್ ಎಂಬ ಕವಿತೆಯು ಗಿಲ್ಡ್‌ಫೋರ್ಡ್‌ನ ನಿಕೋಲಸ್ ಎಂಬ ಓರ್ವನಿಂದ ಬರೆಯಲ್ಪಟ್ಟಿರಬಹುದು ಎಂದು ಭಾವಿಸಲಾಗುತ್ತದೆ ಮತ್ತು ಈತನ ಹೆಸರು ಪಠ್ಯದಲ್ಲಿ ಉಲ್ಲೇಖಿಸಲ್ಪಟ್ಟಿದೆ.
- ಜಾನ್ ಡೋನ್ (1572–1631) ಎಂಬಾತ ತನ್ನ ಜೀವನದ ಬಹುಭಾಗವನ್ನು ಪಿರ್‌ಫೋರ್ಡ್‌ನಲ್ಲಿ ಕಳೆದ ಮತ್ತು ಅಲ್ಲಿ ಕಾರ್ಯನಿರ್ವಹಿಸಿದ.
- ಜಾನ್ ಎವೆಲಿನ್ (1620–1706) ಎಂಬಾತ ವೊಟಾನ್‌ನಲ್ಲಿ ಜನಿಸಿದ ಮತ್ತು ಅಲ್ಲಿಯೇ ತನ್ನ ಜೀವನದ ಬಹುಭಾಗವನ್ನು ಕಳೆದ.
- ಡೇನಿಯೆಲ್ ಡೆಫೊ (1659/61-1731) ಎಂಬಾತ ಡೋರ್ಕಿಂಗ್‌ನಲ್ಲಿ ಶಿಕ್ಷಣ ಪಡೆದ.
- ವಿಲಿಯಂ ಕಾಬೆಟ್ (1763–1835) ಎಂಬಾತ ಫರ್ನ್‌ಹ್ಯಾಂನಲ್ಲಿ ಜನಿಸಿದ. ಮರಣಾನಂತರ ಅವನನ್ನು ಅಲ್ಲಿಯೇ ಸಮಾಧಿ ಮಾಡಲಾಯಿತು; ಆತನ ರೂರಲ್ ರೈಡ್ಸ್ ಎಂಬ ಕೃತಿಯಲ್ಲಿ ಸರ್ರೆಯು ಎದ್ದು ಕಾಣುವಂತೆ ಪ್ರಕಟಗೊಂಡಿದೆ.
- ಬೆಂಜಮಿನ್ ಡಿಸ್ರೇಲಿ (1804–81) ಎಂಬಾತ ಡೋರ್ಕಿಂಗ್‌ನಲ್ಲಿ ವಾಸಿಸುತ್ತಿರುವಾಗ ಕಾನಿಂಗ್ಸ್‌ಬೈ ಎಂಬ ಕೃತಿಯನ್ನು ಬರೆದ.
- ಆಲ್‌ಫ್ರೆಡ್ ಟೆನಿಸನ್ (1809–92) ಎಂಬಾತ ಹಾಸ್ಲೆಮೆರೆಯಲ್ಲಿ ತನ್ನ ಜೀವನದ ಅಂತ್ಯಭಾಗವನ್ನು ಕಳೆದ, ಮತ್ತು ಅಲ್ಲಿಯೇ ಮರಣಿಸಿದ.
- ಚಾರ್ಲ್ಸ್ ಡಿಕನ್ಸ್ (1812–70) ದಿ ಪಿಕ್‌ವಿಕ್ ಪೇಪರ್ಸ್ ಭಾಗವನ್ನು ಡೋರ್ಕಿಂಗ್‌ನಲ್ಲಿ ಬರೆದ, ಮತ್ತು ಕಾದಂಬರಿಯಲ್ಲಿ ಸದರಿ ಪಟ್ಟಣವನ್ನು ಅವನು ಉಲ್ಲೇಖಿಸುತ್ತಾನೆ.
- ರಾಬರ್ಟ್ ಬ್ರೌನಿಂಗ್ (1812–89) ಎಂಬಾತ ಕ್ಯಾಂಬರ್‌ವೆಲ್‌ನಲ್ಲಿ ಜನಿಸಿದ. ಇದು ಅಂದು ಸರ್ರೆಯ ಒಂದು ಭಾಗವಾಗಿತ್ತು.
- ಜಾರ್ಜ್ ಎಲಿಯಟ್ (1819–80) ಎಂಬಾತ ಮಿಡ್ಲ್‌ಮಾರ್ಚ್ ಕೃತಿಯ ಬಹುಭಾಗವನ್ನು ಹಾಸ್ಲೆಮೆರೆಯಲ್ಲಿ ವಾಸಿಸುತ್ತಿರುವಾಗ ಬರೆದ.
- ಜಾರ್ಜ್ ಮೆರೆಡಿತ್ (1828–1909) ಎಂಬಾತ ಬಾಕ್ಸ್ ಬೆಟ್ಟದಲ್ಲಿ ವಾಸಿಸಿದ.
- ಲೂಯಿಸ್ ಕೆರೋಲ್ (1832–98) ಎಂಬಾತ ಗಿಲ್ಡ್‌ಫೋರ್ಡ್‌ನಲ್ಲಿ ಮರಣಿಸಿದ ಮತ್ತು ಅವನನ್ನು ಅಲ್ಲಿಯೇ ಸಮಾಧಿ ಮಾಡಲಾಗಿದೆ. ಈತ ಗಿಲ್ಡ್‌ಫೋರ್ಡ್‌ನಲ್ಲಿನ ತನ್ನ ಸೋದರಿಯರ ಮನೆಯಲ್ಲಿ ಬಹಳಷ್ಟು ಸಮಯವನ್ನು ಕಳೆದಿದ್ದ ಎಂಬುದು ಗಮನಾರ್ಹ ಸಂಗತಿ.
- ಜಾರ್ಜ್ ಬರ್ನಾರ್ಡ್ ಷಾ (1856–1950) ವೋಕಿಂಗ್‌ನಲ್ಲಿ ಹಾಗೂ ನಂತರದಲ್ಲಿ ಹಿಂಡ್‌ಹೆಡ್‌ನಲ್ಲಿ ವಾಸಿಸಿದ; ಹಿಂಡ್‌ಹೆಡ್‌ನಲ್ಲಿ ಆತ ಸೀಸರ್ ಅಂಡ್ ಕ್ಲಿಯೋಪಾತ್ರ ಕೃತಿಯನ್ನು ಬರೆದ.
- ಅರ್ಥರ್ ಕಾನನ್ ಡಾಯ್ಲ್ (1859–1930) ಹಿಂಡ್‌ಹೆಡ್‌ನಲ್ಲಿ ವಾಸಿಸಿದ ಮತ್ತು ತನ್ನ ಅನೇಕ ಪುಸ್ತಕಗಳನ್ನು ಅಲ್ಲಿಯೇ ಬರೆದ. ಸರ್ರೆಯ ಉಪ ಲೆಫ್ಟಿನೆಂಟ್ ಆಗಿಯೂ ಅವನು ಸೇವೆ ಸಲ್ಲಿಸಿದ; ಷರ್ಲಾಕ್ ಹೋಮ್ಸ್ ಕಥೆಗಳ ಪೈಕಿಯ ಅನೇಕ ಕಥೆಗಳಲ್ಲಿ ಸದರಿ ಕೌಂಟಿಯು ಒಂದು ಸನ್ನಿವೇಶವಾಗಿ ರೂಪುಗೊಂಡಿದೆ.
- J.M. ಬ್ಯಾರೀ (1860–1937) ಎಂಬಾತ ಟಿಲ್‌ಫೋರ್ಡ್‌ನಲ್ಲಿ ವಾಸಿಸಿದ ಹಾಗೂ ಇದನ್ನೇ ಆಧರಿಸಿ ದಿ ಬಾಯ್ ಕ್ಯಾಸ್ಟ್‌ಅವೇಸ್ ಕೃತಿಯನ್ನು ರಚಿಸಿದ; ಇದೇ ನಂತರದಲ್ಲಿ ಸಮೀಪದ ಗ್ರಾಮಪ್ರದೇಶದಲ್ಲಿ ಪೀಟರ್ ಪ್ಯಾನ್ ಆಗಿ ವಿಕಸನಗೊಂಡಿತು.
- H.G. ವೆಲ್ಸ್ (1866–1946) ವೋಕಿಂಗ್‌ನಲ್ಲಿ ವಾಸಿಸುತ್ತಿರುವಾಗ ದಿ ವಾರ್ ಆಫ್ ದಿ ವರ್ಲ್ಡ್ಸ್ ಕೃತಿಯನ್ನು ಬರೆದ; ಸದರಿ ಕಥೆಯ ಹರಿವಿನಲ್ಲಿ ಉತ್ತರದ ಸರ್ರೆಯ ಬಹುಭಾಗವನ್ನು ಪಾಳುಭೂಮಿಯಂತೆ ಚಿತ್ರಿಸಲಾಗಿದೆ.
- ಜಾನ್ ಗಾಲ್ಸ್‌ವರ್ದಿ (1867–1933) ಎಂಬಾತ ಕಿಂಗ್ಸ್‌ಟನ್‌ನಲ್ಲಿ ಜನಿಸಿದ; ಅವನ ಫೋರ್‌ಸೈಟ್ ಸ್ಯಾಗಾ ಕೃತಿಯು ಈ ಪ್ರದೇಶದ ಹಿನ್ನೆಲೆ ಅಥವಾ ಪರಿಸರವನ್ನೇ ಹೊಂದಿದೆ.
- E.M. ಫಾಸ್ಟರ್ (1879–1970) ವೇಬ್ರಿಜ್‌ನಲ್ಲಿ ವಾಸಿಸಿದ ಮತ್ತು ಬರೆದ.
- P.G. ವೊಡ್‌ಹೌಸ್ (1881–1975) ಗಿಲ್ಡ್‌ಫೋರ್ಡ್‌ನಲ್ಲಿ ಜನಿಸಿದ. ಅಲ್ಲಿನ ಸೇಂಟ್ ನಿಕೋಲಸ್'ಸ್ ಚರ್ಚಿನಲ್ಲಿ ಅವನನ್ನು ದೀಕ್ಷಾಸ್ನಾನಕ್ಕೆ ಒಳಪಡಿಸಿ ಕ್ರಿಸ್ತೀಕರಿಸಲಾಯಿತು.
- ಆಲ್ಡಸ್ ಹಕ್ಸ್‌ಲೆ (1894–1963) ಎಂಬಾತ ಗೋದಲ್ಮಿಂಗ್‌ನಲ್ಲಿ ಜನಿಸಿದ. ಅವನ ಅವಶೇಷಗಳನ್ನು ಕಾಂಪ್ಟನ್‌ನಲ್ಲಿ ದಫನು ಮಾಡಲಾಗಿದೆ; ಬ್ರೇವ್ ನ್ಯೂ ವರ್ಲ್ಡ್ ಕಥೆಯ ಅಂತ್ಯವು ಸರ್ರೆಯಲ್ಲಿ ಜರುಗುತ್ತದೆ.
ಕಲೆಗಳು ಮತ್ತು ವಿಜ್ಞಾನಗಳು
[ಬದಲಾಯಿಸಿ]- ಓಕ್‌ಹ್ಯಾಂನ ವಿಲಿಯಂ (ಸುಮಾರು1288-ಸುಮಾರು1348): ವಿದ್ವತ್ಪೂರ್ಣ ದಾರ್ಶನಿಕನಾದ ಈತ "ಒಕ್ಯಾಮ್'ಸ್ ರೇಜರ್" ಎಂಬ ತನ್ನ ಸಿದ್ಧಾಂತದಿಂದ ಪ್ರಸಿದ್ಧನಾಗಿದ್ದು, ಈತ ಓಕ್‌ಹ್ಯಾಂಗೆ ಸೇರಿದವನಾಗಿದ್ದ ಎಂಬುದು ಗಮನಾರ್ಹ ಸಂಗತಿ.
- ಜನಸಂಖ್ಯಾಶಾಸ್ತ್ರದ ಪಥನಿರ್ಮಾಪಕನಾದ ಥಾಮಸ್ ಮಾಲ್ಥಸ್ (1766–1834) ವೆಸ್ಟ್‌ಕಾಟ್‌ನಲ್ಲಿ ಜನಿಸಿದ ಮತ್ತು ಬೆಳೆದ, ಹಾಗೂ ನಂತರದಲ್ಲಿ ಆಲ್ಬರಿಯಲ್ಲಿ ವಾಸಿಸಿದ.
- ಅದಾ ಲೊವೆಲೇಸ್ (1815–52) ಎಂಬ ಗಣಿತಶಾಸ್ತ್ರಜ್ಞನು ಪೂರ್ವ ಹಾರ್ಸ್‌ಲೆಯಲ್ಲಿ ವಾಸಿಸಿದ.
- ಗೆಟ್ರೂಡ್ ಜೆಕಿಲ್ (1843–1932) ಎಂಬ ತೋಟದ ವಿನ್ಯಾಸಗಾರ್ತಿಯು ತನ್ನ ಜೀವನದ ಬಹುಭಾಗವನ್ನು ಗೋದಲ್ಮಿಂಗ್ ಸಮೀಪದ ಮನ್‌ಸ್ಟೆಡ್‌ನಲ್ಲಿ ಕಳೆದಳು ಮತ್ತು ಸರ್ರೆಯಲ್ಲಿ ಗಮನಾರ್ಹ ತೋಟಗಳನ್ನು ಸೃಷ್ಟಿಸಿದಳು; ಅವಳನ್ನು ಬಸ್‌ಬ್ರಿಜ್‌ನಲ್ಲಿ ಸಮಾಧಿ ಮಾಡಲಾಗಿದೆ.
- ಎಡ್ವಿನ್ ಲುಟ್ಯೆನ್ಸ್ (1869–1944) ಎಂಬ ವಾಸ್ತುಶಿಲ್ಪಿಯು ಥರ್ಸ್‌ಲೆಯಲ್ಲಿ ಬೆಳೆದ. ಅವನ ಆರಂಭಿಕ ಕೃತಿಗಳ ಪೈಕಿ ಅನೇಕವು ಸರ್ರೆಯಲ್ಲಿ ನಿರ್ಮಿಸಲ್ಪಟ್ಟವು; ಗೆಟ್ರೂಡ್ ಜೆಕಿಲ್ ಜೊತೆಗಿನ ಸಹಯೋಗಗಳೂ ಇದರಲ್ಲಿ ಸೇರಿದ್ದವು.
- ರಾಲ್ಫ್ ವೌಘನ್ ವಿಲಿಯಮ್ಸ್ (1872–1958) ಎಂಬ ಸಂಗೀತ-ಸಂಯೋಜಕನು ಲೀತ್ ಬೆಟ್ಟದಲ್ಲಿ ಬೆಳೆದ ಮತ್ತು ನಂತರದಲ್ಲಿ ಡೋರ್ಕಿಂಗ್‌ನಲ್ಲಿ ವಾಸಿಸಿದ.
- ಲಾರೆನ್ಸ್ ಒಲಿವಿಯರ್ (1907–89) ಎಂಬ ನಟನು ಡೋರ್ಕಿಂಗ್‌ನಲ್ಲಿ ಜನಿಸಿದ.
- ಅಲನ್ ಟ್ಯೂರಿಂಗ್ (1912–54) ಎಂಬ ಗಣಿತಶಾಸ್ತ್ರಜ್ಞ ಮತ್ತು ಕಂಪ್ಯೂಟರ್ ವಿಜ್ಞಾನದ ಪಥನಿರ್ಮಾಪಕನು
ತನ್ನ ಆರಂಭಿಕ ಜೀವನದ ಬಹುಭಾಗವನ್ನು ಗಿಲ್ಡ್‌ಫೋರ್ಡ್‌ನಲ್ಲಿ ಕಳೆದ.
ಜನಪ್ರಿಯ ಸಂಗೀತ
[ಬದಲಾಯಿಸಿ]60ರ ದಶಕದ ಬ್ರಿಟಿಷ್ ಬ್ಲ್ಯೂಸ್ ಚಟುವಟಿಕೆಗಳಲ್ಲಿನ ಅನೇಕ ಸಂಗೀತಗಾರರನ್ನು "ಸರ್ರೆ ಡೆಲ್ಟಾ" ರೂಪಿಸಿತು. ರಿಚ್ಮಂಡ್‌ನಲ್ಲಿರುವ ಕ್ರಾವ್‌ಡ್ಯಾಡಿಯಲ್ಲಿ ರೋಲಿಂಗ್ ಸ್ಟೋನ್ಸ್ ತಂಡವು ತನ್ನ ಸಂಗೀತವನ್ನು ಅಭಿವೃದ್ಧಿಪಡಿಸಿತು.
- ಜಿಮ್ಮಿ ಪೇಜ್ (ಜನನ 1944) ಎಂಬಾತ ತನ್ನ ಆರಂಭಿಕ ಜೀವನದ ಬಹುಭಾಗವನ್ನು ಎಪ್ಸಮ್‌ನಲ್ಲಿ ಕಳೆದ.
- ಜೆಫ್ ಬೆಕ್ (ಜನನ: 1944) ವ್ಯಾಲಿಂಗ್ಟನ್‌ನಲ್ಲಿ ಜನಿಸಿದ; ಇದು ಆಗ ಸರ್ರೆಯ ಒಂದು ಭಾಗವಾಗಿತ್ತು.
- ಎರಿಕ್ ಕ್ಲಾಪ್ಟನ್ (ಜನನ: 1945) ಎಂಬಾತ ರಿಪ್ಲೇಯಲ್ಲಿ ಜನಿಸಿದ ಮತ್ತು ಬೆಳೆದ.
- ಪಾಲ್ ವೆಲ್ಲರ್ (ಜನನ: 1958) ಎಂಬಾತ ವೋಕಿಂಗ್‌ನಲ್ಲಿ ಜನಿಸಿದ ಮತ್ತು ಬೆಳೆದ. ಟೌನ್ ಕಾಲ್ಡ್ ಮ್ಯಾಲೀಸ್ ಎಂಬ ಗೀತೆಗೆ ವೋಕಿಂಗ್ ಪ್ರೇರಣೆ ನೀಡಿತು.
- ಗ್ರೂವ್‌ರೈಡರ್ (ಜನನ: 1967) ಸರ್ರೆಯಲ್ಲಿ ವಾಸಿಸುತ್ತಿದ್ದಾನೆ
ಕ್ರೀಡೆ
[ಬದಲಾಯಿಸಿ]ಸರ್ರೆಯಲ್ಲಿ ಕ್ರಿಕೆಟ್ ಆಟವು ಬಹಳ ಹಿಂದೆಯೇ ಆಡಲ್ಪಡುತ್ತಿತ್ತು ಎಂಬುದಕ್ಕೆ ಕ್ರಿಕೆಟ್ ಇತಿಹಾಸದಲ್ಲಿ ಸರ್ರೆಯು ಒಂದು ರಂಗಸ್ಥಳವಾಗಿ ಪರಿಣಮಿಸಿದ್ದು ಸಾಕ್ಷಿಯಾಗಿ ನಿಲ್ಲುತ್ತದೆ; 16ನೇ ಶತಮಾನದಲ್ಲಿ ಗಿಲ್ಡ್‌ಫೋರ್ಡ್‌ನ ರಾಯಲ್ ಗ್ರಾಮರ್ ಸ್ಕೂಲ್‌ನಲ್ಲಿ ಇರುವ ಆಟಗಳಿಗೆ ಸಂಬಂಧಿಸಿದ ಒಂದು ಉಲ್ಲೇಖವು ಇದಕ್ಕೆ ಪುಷ್ಇ ನೀಡುತ್ತದೆ (ನೋಡಿ: 1696ಕ್ಕೆ ಕರೆದೊಯ್ಯುವ ಇಂಗ್ಲಿಷ್ ಕ್ರಿಕೆಟ್‌ನ ಇತಿಹಾಸ). 1685ರಲ್ಲಿ ರೂಪುಗೊಂಡ ಹಾಗೂ ಆಟದ ಇತಿಹಾಸದಲ್ಲಿ ದಾಖಲಿಸಲ್ಪಟ್ಟಿರುವ ಅತಿಹಳೆಯ ಕ್ಲಬ್ ಎನಿಸಿಕೊಂಡ ಮಿಟ್‌ಚಾಮ್ ಕ್ರಿಕೆಟ್ ಕ್ಲಬ್, 1965ರವರೆಗೂ ಸರ್ರೆಯ ಗಡಿಗಳ ವ್ಯಾಪ್ತಿಯೊಳಗಿತ್ತು.[೧೧] 1845ರಲ್ಲಿ ಸಂಸ್ಥಾಪಿಸಲ್ಪಟ್ಟ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಸರ್ರೆಯ ಐತಿಹಾಸಿಕ ಕೌಂಟಿಯನ್ನು ಪ್ರತಿನಿಧಿಸುತ್ತದೆಯಾದರೂ, ಕೆನ್ನಿಂಗ್‌ಟನ್‌ನಲ್ಲಿರುವ ಅದರ ಮುಖ್ಯ ಮೈದಾನವಾದ ದಿ ಓವಲ್ ಈಗ ವ್ಯಾಪಕವಾದ ಲಂಡನ್‌ನಲ್ಲಿದೆ. ಕೆಲವೊಂದು ಆಟಗಳಿಗಾಗಿ ಸೌತ್ ಕ್ರಾಯ್ಡನ್‌ನ ವಿಟ್‌ಗಿಫ್ಟ್ ಸ್ಕೂಲ್ ಮತ್ತು ಗಿಲ್ಡ್‌ಫೋರ್ಡ್‌ನ ವುಡ್‌ಬ್ರಿಜ್ ರೋಡ್‌ನ್ನೂ ಈ ಕ್ಲಬ್ ಬಳಸಿಕೊಳ್ಳುತ್ತದೆ. ಇದು ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿನ ಮೂಲ ಸಹಭಾಗಿಗಳ ಪೈಕಿ ಒಂದೆನಿಸಿತ್ತು ಹಾಗೂ ಯಾರ್ಕ್‌ಷೈರ್‌ನ್ನು ಹೊರತುಪಡಿಸಿ ಬೇರಾವುದೇ ಕೌಂಟಿಗಿಂತ ಹೆಚ್ಚಾಗಿ, ಸದರಿ ಸ್ಪರ್ಧೆಯನ್ನು 18 ಬಾರಿ ಗೆದ್ದುಕೊಂಡಿದೆ.
ಎಪ್ಸಮ್ ಡೌನ್ಸ್ ರೇಸ್‌ಕೋರ್ಸ್ ಎಂಬುದು ಬ್ರಿಟಿಷರು ನಡೆಸುವ ಸಮತಟ್ಟಿನಲ್ಲಿನ ಕುದುರೆ-ಓಟದ ಪಂದ್ಯವಾದ ಡರ್ಬಿಯಲ್ಲಿನ ಅತ್ಯಂತ ಪ್ರತಿಷ್ಠಿತ ಸ್ಪರ್ಧೆಗೆ ಸಂಬಂಧಿಸಿದ ತಾಣವೆನಿಸಿಕೊಂಡಿದ್ದು, ಸದರಿ ಪಂದ್ಯವನ್ನು ಈ ತಾಣದಲ್ಲಿ 1780ರಿಂದ ಮೊದಲ್ಗೊಂಡು ವಾರ್ಷಿಕವಾಗಿ ನಡೆಸಿಕೊಂಡು ಬರಲಾಗಿದೆ.
ವೋಕಿಂಗ್ ಸಮೀಪವಿರುವ ಬ್ರೂಕ್‌ಲ್ಯಾಂಡ್ಸ್ 1907ರಲ್ಲಿ ಪ್ರಾರಂಭವಾಯಿತು. ಇದು ಪ್ರಪಂಚದ ಮೊದಲ ಉದ್ದೇಶ-ನಿರ್ಮಿತ, ವಾಹನಕ್ರೀಡೆ ಓಟದ ಪಂದ್ಯದ ಮಂಡಲವೆನಿಸಿಕೊಂಡಿತ್ತು. ವೋಕಿಂಗ್ ಪ್ರಸಕ್ತವಾಗಿ ಮೆಕ್‌ಲ್ಯಾರೆನ್ ಫಾರ್ಮುಲಾ 1 ತಂಡದ ಕೇಂದ್ರ-ಕಾರ್ಯಾಲಯಗಳಿಗೆ ಅತಿಥೇಯನಾಗಿ ಪಾತ್ರ ವಹಿಸುತ್ತಿದ್ದು, ತನ್ಮೂಲಕ ಸ್ಥಳೀಯ F1 ತಂಡವೊಂದನ್ನು ಹೊಂದಿರುವುದರ ಅಪೂರ್ವತೆಯನ್ನು ಸರ್ರೆಗೆ ತಂದುಕೊಟ್ಟಿದೆ. 1976ರ ಫಾರ್ಮುಲಾ 1 ವರ್ಲ್ಡ್ ಡ್ರೈವರ್'ಸ್ ಚಾಂಪಿಯನ್ ಆದ ಜೇಮ್ಸ್ ಹಂಟ್, 1947ರಲ್ಲಿ ಬೆಲ್‌ಮಾಂಟ್‌ನಲ್ಲಿ ಜನಿಸಿದ. ಇದು ಆಗ ಸರ್ರೆಯ ಭಾಗವಾಗಿತ್ತು.
ಸರ್ರೆಯ ಅಗ್ರಗಣ್ಯ ರಗ್ಬಿ ಕ್ಲಬ್ ಎನಿಸಿರುವ ಎಷರ್, RFU ಚಾಂಪಿಯನ್‌ಷಿಪ್‌ನಲ್ಲಿ ಪ್ರಸಕ್ತವಾಗಿ ಸ್ಪರ್ಧಿಸುತ್ತಿದ್ದು, ಇದು ಇಂಗ್ಲಿಷ್ ರಗ್ಬಿಯ ಎರಡನೇ ಹಂತ ಎಂಬುದು ಗಮನಾರ್ಹ ಸಂಗತಿ. ಸದರಿ ಕೌಂಟಿಯು ಹಲವಾರು ಫುಟ್‌ಬಾಲ್ ತಂಡಗಳನ್ನು ಹೊಂದಿದೆಯಾದರೂ, ಫುಟ್‌ಬಾಲ್ ಲೀಗ್‌ನಲ್ಲಿ ಯಾವುದೂ ಇಲ್ಲ.
ಸ್ಥಳೀಯ ಸರ್ಕಾರ
[ಬದಲಾಯಿಸಿ]Surrey | |
---|---|
Population | |
- 1891 | 452,218[೧೨] |
- 1971 | 1,002,832[೧೩] |
History | |
- Created | c.825 |
- Abolished | N/A |
- Succeeded by | N/A |
Status | Administrative county |
- HQ | Newington 1889 - 1893 Kingston upon Thames from 1893 |
The arms granted to Surrey County Council in 1934 and used until 1974 | |
1888ರ ಸ್ಥಳೀಯ ಸರ್ಕಾರದ ಕಾಯಿದೆಯು ಇಂಗ್ಲೆಂಡ್ ಮತ್ತು ವೇಲ್ಸ್‌ನಾದ್ಯಂತ ಕೌಂಟಿ-ಮಟ್ಟದ ಸ್ಥಳೀಯ ಸರ್ಕಾರವನ್ನು ಮರುಸಂಘಟಿಸಿತು. ಅದರಂತೆಯೇ, ತಾತ್ಕಾಲಿಕವಾದ ಸರ್ರೆ ಕೌಂಟಿ ಪರಿಷತ್ತು ಮೊದಲ ಬಾರಿಗೆ ಸಭೆ ಸೇರಿದಾಗ 1889ರಲ್ಲಿ ಸರ್ರೆಯ ಆಡಳಿತಾತ್ಮಕ ಕೌಂಟಿಯು ರೂಪುಗೊಂಡಿತು. ಇದು 19 ಮಂದಿ ನಗರಸಭೆ ಸದಸ್ಯರು ಮತ್ತು 57 ಮಂದಿ ಪುರಸಭಾ ಸದಸ್ಯರನ್ನು ಒಳಗೊಂಡಿತ್ತು. ತ್ರೈಮಾಸಿಕ ಅಧಿವೇಶನಗಳಲ್ಲಿ ಕೌಂಟಿಯ ನ್ಯಾಯಮೂರ್ತಿಗಳು ಹಿಂದೆ ಚಲಾಯಿಸಿದ್ದ ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ಕೌಂಟಿ ಪರಿಷತ್ತು ವಹಿಸಿಕೊಂಡಿತು. ಗಡಿರೇಖೆಗಳನ್ನು ಕೌಂಟಿಯು ಪರಿಷ್ಕರಿಸಿದ್ದ ಪರಿಣಾಮವಾಗಿ, ಲಂಡನ್ ನಗರಕ್ಕೆ ಗಡಿಯಾಗಿ ಪರಿಣಮಿಸಿರುವ ಐತಿಹಾಸಿಕ ಕೌಂಟಿಯ ಈಶಾನ್ಯ ಭಾಗವು ಹೊಸದಾದ ಲಂಡನ್‌ನ ಕೌಂಟಿಯೊಂದರ ಭಾಗವಾಗುವಂತಾಯಿತು. ಈ ಪ್ರದೇಶಗಳು ಈಗ ಲ್ಯಾಂಬೆತ್, ಸೌತ್‌ವಾರ್ಕ್ ಮತ್ತು ವ್ಯಾಂಡ್ಸ್‌ವರ್ತ್ ಎಂಬ ಲಂಡನ್ ಆಡಳಿತ ಪ್ರದೇಶಗಳನ್ನು ಹಾಗೂ ಬ್ರೊಮ್ಲೆಯ ಲಂಡನ್ ಆಡಳಿತ ಪ್ರದೇಶದ ಪೆಂಗೆ ಪ್ರದೇಶವನ್ನು ರೂಪಿಸಿವೆ. ಅದೇ ವೇಳೆಗೆ, ಕ್ರಾಯ್ಡನ್‌ನ ಆಡಳಿತ ಪ್ರದೇಶವು, ಕೌಂಟಿ ಪರಿಷತ್ತಿನ ಅಧಿಕಾರ ವ್ಯಾಪ್ತಿಯ ಹೊರಗಡೆಯ ಒಂದು ಕೌಂಟಿ ಆಡಳಿತ ಪ್ರದೇಶವಾಗಿ ಹೊರಹೊಮ್ಮಿತು.
ಸ್ಥಳೀಯ ಸರ್ಕಾರವನ್ನು ಹೊರತುಪಡಿಸಿದ ಉದ್ದೇಶಗಳಿಗೆ ಸಂಬಂಧಿಸಿದಂತೆ, ಸರ್ರೆಯ ಆಡಳಿತಾತ್ಮಕ ಕೌಂಟಿ ಹಾಗೂ ಕ್ರಾಯ್ಡನ್‌ನ ಕೌಂಟಿ ಆಡಳಿತ ಪ್ರದೇಶಗಳು ಮುಂದುವರಿದು "ಸರ್ರೆಯ ಕೌಂಟಿ"ಯೊಂದನ್ನು ರೂಪಿಸಿದವು; ಇದಕ್ಕೆ ಓರ್ವ ಲಾರ್ಡ್ ಲೆಫ್ಟಿನೆಂಟ್ ಮತ್ತು ಕಸ್ಟೊಸ್ ರೋಟ್ಯುಲೋರಮ್ (ಮುಖ್ಯ ನ್ಯಾಯಾಧಿಪತಿ) ಹಾಗೂ ಓರ್ವ ಪ್ರಧಾನ ನ್ಯಾಯಮೂರ್ತಿ ಇವರುಗಳು ನೇಮಿಸಲ್ಪಟ್ಟರು.
1790ರ ದಶಕದಿಂದಲೂ ನೆವಿಂಗ್ಟನ್‌ನಿಂದ ಸರ್ರೆಯು ಆಡಳಿತ ನಡೆಸುತ್ತಾ ಬಂದಿತ್ತು, ಮತ್ತು ಅಲ್ಲಿನ ಅಧಿವೇಶನಗಳ ಸದನದಲ್ಲಿ ಕೌಂಟಿ ಪರಿಷತ್ತು ಆರಂಭದಲ್ಲಿ ನೆಲೆಗೊಂಡಿತ್ತು. ಲಂಡನ್‌ನ ಕೌಂಟಿಯಲ್ಲಿ ನೆವಿಂಗ್ಟನ್ ಸೇರಿಸಲ್ಪಟ್ಟಿದ್ದರಿಂದಾಗಿ, ಪರಿಷತ್ತಿನ ಆಡಳಿತವ್ಯಾಪ್ತಿಯ ಪ್ರದೇಶದ ಹೊರಗಡೆ ಅದು ಉಳಿದುಕೊಂಡಿತು, ಹಾಗೂ ಆಡಳಿತಾತ್ಮಕ ಕೌಂಟಿಯ ವ್ಯಾಪ್ತಿಯೊಳಗಿನ ಒಂದು ಹೊಸ ಕೌಂಟಿ ಭವನಕ್ಕೆ ಸಂಬಂಧಿಸಿದ ಒಂದು ತಾಣವಾಗಿ ಅದು ಆಶ್ರಯಿಸಲ್ಪಟ್ಟಿತು. 1890ರ ವೇಳೆಗೆ, ಆರು ಪಟ್ಟಣಗಳು ಪರಿಗಣನೆಗೆ ಒಳಗಾಗಿದ್ದವು. ಅವುಗಳೆಂದರೆ: ಎಪ್ಸಮ್, ಗಿಲ್ಡ್‌ಫೋರ್ಡ್, ಕಿಂಗ್ಸ್‌ಟನ್, ರೆಡ್‌ಹಿಲ್, ಸರ್ಬಿಟಾನ್ ಮತ್ತು ವಿಂಬಲ್ಡನ್.[೧೪] ಕಿಂಗ್ಸ್‌ಟನ್‌ನಲ್ಲಿ ಹೊಸ ಕೌಂಟಿ ಭವನವನ್ನು ನಿರ್ಮಿಸುವ ತೀರ್ಮಾನವೊಂದನ್ನು 1891ರಲ್ಲಿ ತಳೆಯಲಾಯಿತು (ಈ ಕಟ್ಟಡವು 1893ರಲ್ಲಿ[೧೫] ಪ್ರಾರಂಭವಾಯಿತು), ಆದರೆ ಈ ತಾಣವೂ ಸಹ ಬೆಳೆಯುತ್ತಲೇ ಇದ್ದ ಲಂಡನ್ ನಗರಕೂಟದಿಂದ ಅತಿಶಯಿಸಲ್ಪಟ್ಟಿತು. 1930ರ ದಶಕದ ವೇಳೆಗೆ, ಕೌಂಟಿಯ ಉತ್ತರ ಭಾಗದ ಬಹುತೇಕ ಪ್ರದೇಶಗಳು ನಿರ್ಮಿಸಲ್ಪಟ್ಟು, ಲಂಡನ್‌ನ ಹೊರವಲಯದ ಉಪನಗರಗಳಾಗಿ ಅವು ಹೊರಹೊಮ್ಮಿದ್ದವು. ಆದರೂ ಸಹ ಅವು ಆಡಳಿತಾತ್ಮಕವಾಗಿ ಸರ್ರೆಯ ಭಾಗವೆಂದು ಕರೆಸಿಕೊಳ್ಳುತ್ತಿದ್ದವು.
1960ರಲ್ಲಿ, ಹರ್ಬರ್ಟ್ ಆಯೋಗದ ವರದಿಯು ತನ್ನ ಶಿಫಾರಸುಗಳನ್ನು ನೀಡುತ್ತಾ, ಉತ್ತರದ ಸರ್ರೆಯ ಬಹುತೇಕ ಭಾಗವು (ಕಿಂಗ್ಸ್‌ಟನ್ ಮತ್ತು ಕ್ರಾಯ್ಡನ್ ಸೇರಿದಂತೆ) ಒಂದು ಹೊಸದಾದ "ವ್ಯಾಪಕವಾದ ಲಂಡನ್"ನಲ್ಲಿ ಸೇರ್ಪಡೆ ಮಾಡಬೇಕು ಎಂದು ತಿಳಿಸಿತು. ಸದರಿ ವರದಿಯ ಶಿಫಾರಸುಗಳನ್ನು 1963ರ ಲಂಡನ್ ಸರ್ಕಾರದ ಕಾಯಿದೆಯ ನೆರವಿನಿಂದ, ಅತೀವವಾಗಿ ಮಾರ್ಪಾಡುಗೊಂಡ ಸ್ವರೂಪದಲ್ಲಿ 1965ರಲ್ಲಿ ಶಾಸನವಾಗಿಸಲಾಯಿತು. ಈಗ ಕ್ರಾಯ್ಡನ್, ಕಿಂಗ್ಸ್‌ಟನ್, ಮೆರ್ಟಾನ್, ಸಟಾನ್‌ನಂಥ ಲಂಡನ್ ಆಡಳಿತ ಪ್ರದೇಶಗಳನ್ನು ರೂಪಿಸಿರುವ ಪ್ರದೇಶಗಳು ಮತ್ತು ಥೇಮ್ಸ್ ನದಿಯ ದಕ್ಷಿಣಕ್ಕಿರುವ ರಿಚ್ಮಂಡ್‌ನ ಭಾಗ ಇವುಗಳು ಸರ್ರೆಯಿಂದ ವ್ಯಾಪಕವಾದ ಲಂಡನ್‌ಗೆ ವರ್ಗಾಯಿಸಲ್ಪಟ್ಟವು. ಅದೇ ವೇಳೆಗೆ, ಹಿಂದೆ ಶಾಸನಗಳಿಂದ ರದ್ದುಮಾಡಲ್ಪಟ್ಟಿದ್ದ ಮಿಡ್ಲ್‌ಸೆಕ್ಸ್ ಕೌಂಟಿಯ ಭಾಗವು ಸರ್ರೆಗೆ ಸೇರಿಸಲ್ಪಟ್ಟಿತು. ಈ ಪ್ರದೇಶವು ಈಗ ಸ್ಪೆಲ್‌ಥಾರ್ನ್ ಆಡಳಿತ ಪ್ರದೇಶವಾಗಿ ರೂಪುಗೊಂಡಿದೆ.
ಸ್ಥಳೀಯ ಸರ್ಕಾರವು 1972ರ ಸ್ಥಳೀಯ ಸರ್ಕಾರದ ಕಾಯಿದೆಯ ಅಡಿಯಲ್ಲಿ ಮತ್ತಷ್ಟು ಸುಧಾರಣೆಯನ್ನು ಕೈಗೊಂಡಿತು. 1972ರ ಕಾಯಿದೆಯು ಆಡಳಿತಾತ್ಮಕ ಕೌಂಟಿಗಳನ್ನು ರದ್ದುಮಾಡಿತು ಮತ್ತು ಅವುಗಳ ಸ್ಥಳದಲ್ಲಿ ಮಹಾನಗರ ಪ್ರದೇಶದ್ದಲ್ಲದ ಕೌಂಟಿಗಳನ್ನು ಪರಿಚಯಿಸಿತು. ಸರ್ರೆ ಕೌಂಟಿಯ ಮಹಾನಗರ ಪ್ರದೇಶದ್ದಲ್ಲದ ಗಡಿರೇಖೆಗಳು ಆಡಳಿತಾತ್ಮಕ ಕೌಂಟಿಯ ಗಡಿರೇಖೆಗಳನ್ನು ಹೋಲುವಂತಿದ್ದರೂ ಅಲ್ಲೊಂದು ವಿನಾಯಿತಿಯಿತ್ತು. ಅದೆಂದರೆ, ಗ್ಯಾಟ್‌ವಿಕ್ ವಿಮಾನ ನಿಲ್ದಾಣ ಮತ್ತು ಸುತ್ತಮುತ್ತಲ ಒಂದಷ್ಟು ಜಮೀನು ಪಶ್ಚಿಮ ಸಸೆಕ್ಸ್‌ಗೆ ವರ್ಗಾಯಿಸಲ್ಪಟ್ಟಿತು. ಹೋರ್ಲೆ ಮತ್ತು ಚಾರ್ಲ್‌ವುಡ್ ಎಂಬ ಪಾದ್ರಿ ಹೋಬಳಿಗಳು ಪಶ್ಚಿಮ ಸಸೆಕ್ಸ್‌ನ ಭಾಗವಾಗಬೇಕು ಎಂಬುದಾಗಿ ಮೂಲತಃ ಉದ್ದೇಶಿಸಲಾಗಿತ್ತು; ಆದರೆ ಇದಕ್ಕೆ ಉಗ್ರಸ್ವರೂಪದ ಸ್ಥಳೀಯ ವಿರೋಧ ಕಂಡುಬಂದಿದ್ದರಿಂದ, 1974ರ ಚಾರ್ಲ್‌ವುಡ್ ಮತ್ತು ಹೋರ್ಲೆ ಕಾಯಿದೆಯ ಅಡಿಯಲ್ಲಿ ಇದು ರದ್ದುಗೊಳಿಸಲ್ಪಟ್ಟಿತು.
ಆರ್ಥಿಕ ಸ್ಥಿತಿ
[ಬದಲಾಯಿಸಿ]ಸರ್ರೆಯು ಒಂದು ಸಂಪದ್ಭರಿತ ಕೌಂಟಿಯಾಗಿದ್ದು, ಲಂಡನ್‌ನ ಆರ್ಥಿಕತೆಯೊಂದಿಗೆ ನಿಕಟವಾಗಿ ಗಂಟುಹಾಕಿಕೊಂಡಿರುವ ಒಂದು ಸೇವಾಧಾರಿತ ಆರ್ಥಿಕತೆಯನ್ನು ಇದು ಹೊಂದಿದೆ. UKಯಲ್ಲಿನ ಬೇರಾವುದೇ ಕೌಂಟಿಗಿಂತ ಮಿಗಿಲಾಗಿ ಪ್ರತಿ ವ್ಯಕ್ತಿಗೆ ಅತಿ ಹೆಚ್ಚಿನ GDPಯನ್ನು ಸರ್ರೆಯು ಹೊಂದಿದೆ. ಅಷ್ಟೇ ಅಲ್ಲ, UKಯಲ್ಲಿನ ರಾಜಧಾನಿಯ ಹೊರಗಿನ ಭಾಗದಲ್ಲಿರುವ ಅತಿ ಹೆಚ್ಚಿನ ಜೀವನವೆಚ್ಚವನ್ನು ಹೊಂದಿರುವ ಕೌಂಟಿಯೂ ಆಗಿದೆ. UKಯಲ್ಲಿನ ಅತಿಹೆಚ್ಚಿನ ಪ್ರಮಾಣದ ಲಕ್ಷಾಧಿಪತಿಗಳು ಈ ಕೌಂಟಿಯಲ್ಲಿ ನೆಲೆಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಹಣಕಾಸಿನ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅತಿಹೆಚ್ಚಿನ ಸಂಖ್ಯೆಯ ನಿವಾಸಿಗಳು ಸರ್ರೆಯಲ್ಲಿನ ಸರಾಸರಿ ವೇತನಕ್ಕೆ ಆಸರೆಯಾಗಿದ್ದಾರೆಂದು ಹೇಳಬಹುದು.[೧೬]
UKಯಲ್ಲಿನ ಬೇರಾವುದೇ ಕೌಂಟಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಗಳು ಮತ್ತು ಕಂಪನಿಗಳ ಕೇಂದ್ರ ಕಾರ್ಯಾಲಯಗಳನ್ನು ಸರ್ರೆಯು ಹೊಂದಿದೆ. ನಿಕಾನ್, ವರ್ಲ್‌ಪೂಲ್, ಕೆನನ್, ತೋಷಿಬಾ, ಸ್ಯಾಮ್‌ಸಂಗ್ ಮತ್ತು ಫಿಲಿಪ್ಸ್ ಇವೇ ಮೊದಲಾದ ವಿದ್ಯುನ್ಮಾನ ಕ್ಷೇತ್ರದ ದೈತ್ಯಕಂಪನಿಗಳು ಇಲ್ಲಿ ನೆಲೆಗೊಂಡಿವೆ. ಕಿಯಾ ಮೋಟರ್ಸ್ ಮತ್ತು ಟಯೋಟಾ UK ಕಂಪನಿಗಳೂ ಸಹ ಸರ್ರೆಯಲ್ಲಿ ಕೇಂದ್ರ-ಕಾರ್ಯಾಲಯಗಳನ್ನು (HQಗಳು) ಹೊಂದಿವೆ. ಅಷ್ಟೇ ಅಲ್ಲ, ಔಷಧ ಕಂಪನಿಗಳಾದ ಫೈಜರ್ ಮತ್ತು ಸನೋಫಿ-ಅವೆಂಟಿಸ್ ಹಾಗೂ ತೈಲಕ್ಷೇತ್ರದ ದೈತ್ಯ ಎಸ್ಸೊ ಕೂಡಾ ಇಲ್ಲಿ ನೆಲೆಗೊಂಡಿವೆ. ಪ್ರಪಂಚದಲ್ಲಿನ ಕೆಲವೊಂದು ಅತಿದೊಡ್ಡ ಬಹುರಾಷ್ಟ್ರೀಯ FMCG ಕಂಪನಿಗಳು ತಮ್ಮ UK ಮತ್ತು/ಅಥವಾ ಐರೋಪ್ಯ ಕೇಂದ್ರ-ಕಾರ್ಯಾಲಯಗಳನ್ನು ಇಲ್ಲಿ ಹೊಂದಿದ್ದು, ಅಂಥವುಗಳಲ್ಲಿ ಯುನಿಲಿವರ್, ಪ್ರಾಕ್ಟರ್ & ಗ್ಯಾಂಬಲ್, ಸೂಪರ್‌ಡ್ರಗ್, ನೆಸ್ಲೆ, SC ಜಾನ್ಸನ್, ಕಿಂಬರ್ಲಿ-ಕ್ಲಾರ್ಕ್ ಮತ್ತು ಕೋಲ್ಗೇಟ್-ಪಾಮೊಲಿವ್ ಸೇರಿವೆ. WWF UK ಮತ್ತು ಕಂಪ್ಯಾಷನ್ ಇನ್ ವರ್ಲ್ಡ್ ಫಾರ್ಮಿಂಗ್‌ಗಳನ್ನು ಒಳಗೊಂಡಂತೆ NGOಗಳೂ ಸಹ ಇಲ್ಲಿ ತಮ್ಮ ನೆಲೆಯನ್ನು ಹೊಂದಿವೆ. SEEDA, SEERA ಮತ್ತು GOSEನಂಥ ಸರ್ಕಾರದ ಅರೆ-ಸರ್ಕಾರಿ ಸಂಸ್ಥೆಗಳು ಗಿಲ್ಡ್‌ಫೋರ್ಡ್‌ನಲ್ಲಿ ತಮ್ಮ ಕೇಂದ್ರ-ಕಾರ್ಯಾಲಯವನ್ನು ಹೊಂದಿವೆ.
ಸಾರಿಗೆ
[ಬದಲಾಯಿಸಿ]ರಸ್ತೆ ಸಾರಿಗೆ
[ಬದಲಾಯಿಸಿ]ಮೂರು ಪ್ರಮುಖ ಮೋಟಾರುಮಾರ್ಗಗಳು ಸದರಿ ಕೌಂಟಿಯ ಮೂಲಕ ಹಾದುಹೋಗುತ್ತವೆ. ಅವುಗಳೆಂದರೆ: M25 (ಲಂಡನ್ ಆರ್ಬಿಟಲ್), M3 ಮತ್ತು M23. A3 ಹೆದ್ದಾರಿಯು ಮತ್ತೊಂದು ಮುಖ್ಯವಾದ ರಸ್ತೆಯಾಗಿದೆ ಮತ್ತು ಇದು ದಕ್ಷಿಣ ತೀರಪ್ರದೇಶ ಹಾಗೂ ಲಂಡನ್‌ಗಿರುವ ಒಂದು ಪ್ರಮುಖ ಮಾರ್ಗವಾಗಿದೆ.
ರೈಲು ಸಾರಿಗೆ
[ಬದಲಾಯಿಸಿ]ಸರ್ರೆಯಿಂದ ಲಂಡನ್‌ಗೆ ಉತ್ತಮವಾದ ರೈಲು ಸಂಪರ್ಕವಿದೆ. ಸರ್ರೆಯ ಕಡೆಗೆ ಲಭ್ಯವಿರುವ ಸೇವೆಗಳು ಲಂಡನ್‌ನ ವಾಟರ್‌ಲೂ, ವಿಕ್ಟೋರಿಯಾ ಅಥವಾ ಲಂಡನ್ ಸೇತುವೆ ನಿಲ್ದಾಣಗಳಿಂದ ಶುರುವಾಗುತ್ತವೆ. ದಕ್ಷಿಣದ, ನೈಋತ್ಯ ಟ್ರೇನುಗಳಿಂದ ಮತ್ತು ಫಸ್ಟ್ ಗ್ರೇಟ್ ವೆಸ್ಟರ್ನ್‌ನಿಂದ ಸದರಿ ಸೇವೆಗಳು ನಿರ್ವಹಿಸಲ್ಪಡುತ್ತವೆ. ಸರ್ರೆಯ ಮೂಲಕ ಮೂರು ಮುಖ್ಯ ಮಾರ್ಗಗಳು ಹಾದುಹೋಗುತ್ತವೆ. ಅವುಗಳೆಂದರೆ: ವಿಕ್ಟೋರಿಯಾ ಅಥವಾ ಲಂಡನ್ ಸೇತುವೆಯಿಂದ ಬರುವ ಬ್ರೈಟನ್ ಮುಖ್ಯ ಮಾರ್ಗ, ನೈಋತ್ಯದ ಮುಖ್ಯ ಮಾರ್ಗ ಹಾಗೂ ವಾಟರ್‌ಲೂನಿಂದ ಬರುವ ಪೋರ್ಟ್ಸ್‌ಮೌತ್ ನೇರ ಮಾರ್ಗ; ಇದೇ ವೇಳೆಗೆ, ಇತರ ಹಲವಾರು ಮಾರ್ಗಗಳು ಅವುಗಳಿಂದ ಕವಲೊಡೆಯುತ್ತವೆ. ಸರ್ರೆಯಲ್ಲಿನ ಮುಖ್ಯ ರೈಲ್ವೆ ನಿಲ್ದಾಣಗಳಲ್ಲಿ ವೋಕಿಂಗ್, ಗಿಲ್ಡ್‌ಫೋರ್ಡ್ ಮತ್ತು ರೆಡ್‌ಹಿಲ್ ಸೇರಿವೆ.
ವಾಯುಸಾರಿಗೆ
[ಬದಲಾಯಿಸಿ]ಹೀಥ್ರೊ (ಲಂಡನ್‌ನ ಹಿಲಿಂಗ್ಡನ್ ಆಡಳಿತ ಪ್ರದೇಶದಲ್ಲಿದೆ) ಮತ್ತು ಗ್ಯಾಟ್‌ವಿಕ್‌ಗಳೆರಡೂ (ಸಸೆಕ್ಸ್/ಸರ್ರೆ ಗಡಿಯ ಸಮೀಪವಿದೆ) ಸಹ ಹತ್ತಿರದಲ್ಲಿವೆ ಹಾಗೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಅವು M25ನಿಂದ ಸರ್ರೆಗೆ ಸಂಪರ್ಕಿಸಲ್ಪಟ್ಟಿವೆ. ವೋಕಿಂಗ್‌ನಿಂದ ಹೀಥ್ರೊ ವಿಮಾನ ನಿಲ್ದಾಣದವರೆಗೆ ಒಂದು ನ್ಯಾಷನಲ್ ಎಕ್ಸ್‌ಪ್ರೆಸ್ ಕೋಚ್ ಸಹ ಅಲ್ಲಿ ಲಭ್ಯವಿದೆ. ಚೊಬ್‌ಹ್ಯಾಂ ಮತ್ತು ಒಟರ್‌ಷಾದ ಅಂಚಿನಲ್ಲಿರುವ ಫೇರ್‌ಓಕ್ಸ್ ವಿಮಾನ ನಿಲ್ದಾಣವು ವೋಕಿಂಗ್ ಪಟ್ಟಣ ಕೇಂದ್ರದಿಂದ ಕೇವಲ 2.3 ಮೈಲುಗಳಷ್ಟು ಅಂತರದಲ್ಲಿದೆ. ಎರಡು ತರಬೇತಿ ಶಾಲೆಗಳನ್ನು ಹೊಂದಿರುವ ಈ ವಿಮಾನ ನಿಲ್ದಾಣವು ಒಂದು ಖಾಸಗಿ ವಿಮಾನ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಇತರ ವಾಯುಯಾನ ವ್ಯವಹಾರಗಳಿಗೆ ನೆಲೆಯಾಗಿದೆ.
ಶಿಕ್ಷಣ
[ಬದಲಾಯಿಸಿ]thumb|400px|right|ರಾಯಲ್ ಹಾಲೋವೇ ಕಾಲೇಜು, ಎಘಾಮ್
53 ಸಂಸ್ಥಾನ ಶಾಲೆಗಳನ್ನು ಹೊಂದುವುದರೊಂದಿಗೆ (ಆರನೇ ತರಗತಿಯ ಕಾಲೇಜುಗಳನ್ನು ಒಳಗೊಂಡಿಲ್ಲ) ಒಂದು ಸಮಗ್ರವಾದ ಪ್ರೌಢ ಶಿಕ್ಷಣ ವ್ಯವಸ್ಥೆಯನ್ನು ಸರ್ರೆಯು ಹೊಂದಿದೆ; ಅಷ್ಟೇ ಅಲ್ಲ, ಪೂರ್ವಸಿದ್ಧತಾ ಶಾಲೆಗಳು ಮತ್ತು ಹಿರಿಯ ಶಾಲೆಗಳನ್ನು ಒಳಗೊಂಡಂತೆ, ಅಲ್ಲಿ 41 ಸ್ವತಂತ್ರ ಶಾಲೆಗಳೂ ಇವೆ. ಬಹುತೇಕ ಶಾಲೆಗಳು ಆರನೇ ತರಗತಿಗಳನ್ನು ಹೊಂದಿವೆಯಾದರೂ, ರೀಗೇಟ್, ಎಷರ್, ಎಘಾಮ್, ಸ್ಪೆಲ್‌ಥಾರ್ನ್, ವೋಕಿಂಗ್ ಮತ್ತು ವೇವರ್ಲಿ ಜಿಲ್ಲೆಗಳು ಆರನೇ ತರಗತಿಯ ಪ್ರತ್ಯೇಕ ಕಾಲೇಜುಗಳನ್ನು ಹೊಂದುವೆಡೆಗೆ ಒಲವು ತೋರಿವೆ.
ಉನ್ನತ ಶಿಕ್ಷಣ
[ಬದಲಾಯಿಸಿ]- ಸರ್ರೆ ವಿಶ್ವವಿದ್ಯಾಲಯವು ಗಿಲ್ಡ್‌ಫೋರ್ಡ್‌ನಲ್ಲಿ ನೆಲೆಗೊಂಡಿದೆ ಮತ್ತು ಸೃಜನಶೀಲ ಕಲೆಗಳ ವಿಶ್ವವಿದ್ಯಾಲಯವು (ಯೂನಿವರ್ಸಿಟಿ ಆಫ್ ಕ್ರಿಯೇಟಿವ್ ಆರ್ಟ್ಸ್-UCA) ಫರ್ನ್‌ಹ್ಯಾಂ ಮತ್ತು ಎಪ್ಸಮ್‌ನಲ್ಲಿ ನೆಲೆಗೊಂಡಿದೆ.
- ಲಂಡನ್ ವಿಶ್ವವಿದ್ಯಾಲಯದ ರಾಯಲ್ ಹಾಲೋವೇ ಎಂಬುದು ಎಘಾಮ್‌ನಲ್ಲಿ ನೆಲೆಗೊಂಡಿದೆ.
ತುರ್ತು ಸೇವೆಗಳು
[ಬದಲಾಯಿಸಿ]ಈ ಕೆಳಕಂಡ ತುರ್ತು ಸೇವೆಗಳು ಸರ್ರೆಗೆ ಸೇವೆ ಸಲ್ಲಿಸುತ್ತವೆ.
- ಸರ್ರೆ ಪೊಲೀಸ್: ಸರ್ರೆಯಲ್ಲಿ ಇದು ಹನ್ನೆರಡು ಆರಕ್ಷಕ ಠಾಣೆಗಳೊಂದಿಗೆ ಸೇವೆ ಸಲ್ಲಿಸುತ್ತಿದೆ.
- ಸೌತ್ ಈಸ್ಟ್ ಕೋಸ್ಟ್ ಆಂಬ್ಯುಲೆನ್ಸ್ ಸರ್ವೀಸ್, 2006ರ ಜುಲೈ 1ರಿಂದ ಸೇವೆ ಸಲ್ಲಿಸುತ್ತಿದೆ. ಸರ್ರೆ ಆಂಬ್ಯುಲೆನ್ಸ್ ಸರ್ವೀಸ್ ಈ ಹಿಂದೆ ಸರ್ರೆಯ ವ್ಯಾಪ್ತಿಗೆ ಒಳಪಟ್ಟಿತ್ತು; 2006ರ ಜುಲೈ 1ರಂದು ಇದು ಸಸೆಕ್ಸ್ ಆಂಬ್ಯುಲೆನ್ಸ್ ಸರ್ವೀಸ್ ಮತ್ತು ಕೆಂಟ್ ಆಂಬ್ಯುಲೆನ್ಸ್ ಸರ್ವೀಸ್ ಜೊತೆಯಲ್ಲಿ ವಿಲೀನಗೊಂಡು, ಸೌತ್ ಈಸ್ಟ್ ಕೋಸ್ಟ್ ಆಂಬ್ಯುಲೆನ್ಸ್ ಸರ್ವೀಸ್ ಎಂಬ ಹೊಸ ಸೇವೆಯು ಅಸ್ತಿತ್ವಕ್ಕೆ ಬಂದಿತು. ಸರ್ರೆಯು ಇಪ್ಪತ್ತೊಂದು ಆಂಬ್ಯುಲೆನ್ಸ್ ಠಾಣೆಗಳನ್ನು ಹೊಂದಿದೆ.
- ಸರ್ರೆ ಫೈರ್ & ರೆಸ್ಕ್ಯೂ ಸರ್ವೀಸ್, ಇಪ್ಪತ್ನಾಲ್ಕು ಅಗ್ನಿಶಾಮಕ ಠಾಣೆಗಳೊಂದಿಗೆ ಸರ್ರೆಯಲ್ಲಿ ಸೇವೆ ಸಲ್ಲಿಸುತ್ತಿದೆ.
ಆಕರ್ಷಣೆಯ ಸ್ಥಳಗಳು
[ಬದಲಾಯಿಸಿ]ಸರ್ರೆಯಲ್ಲಿನ ಗಮನಾರ್ಹ ಭೂದೃಶ್ಯಗಳಲ್ಲಿ ಇವು ಸೇರಿವೆ: ಡೋರ್ಕಿಂಗ್‌ನ ಸ್ವಲ್ಪವೇ ಉತ್ತರಕ್ಕಿರುವ ಬಾಕ್ಸ್ ಬೆಟ್ಟ; ಹಿಂಡ್‌ಹೆಡ್ ಮತ್ತು ಫ್ರೆನ್‌ಶಾಮ್ ಕಾಮನ್‌ನಲ್ಲಿರುವ ಡೆವಿಲ್'ಸ್ ಪಂಚ್ ಬೌಲ್. ಡೋರ್ಕಿಂಗ್‌ನ ನೈಋತ್ಯ ಭಾಗಕ್ಕಿರುವ ಲೀತ್ ಬೆಟ್ಟವು ಆಗ್ನೇಯ ಇಂಗ್ಲೆಂಡ್‌ನಲ್ಲಿನ ಅತಿ ಎತ್ತರದ ತಾಣ ಎನಿಸಿದೆ. ವಿಟ್ಲೆ ಕಾಮನ್ ಮತ್ತು ಥರ್ಸ್‌ಲೆ ಕಾಮನ್ ಇವುಗಳು ಗೋದಲ್ಮಿಂಗ್‌ನ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ಹೀತ್‌ಭೂಮಿಯ ವ್ಯಾಪಿಸಿಕೊಂಡಿರುವ ಪ್ರದೇಶಗಳಾಗಿದ್ದು, ಇವುಗಳ ನಿರ್ವಹಣೆಯನ್ನು ರಾಷ್ಟ್ರೀಯ ದತ್ತಿ ಮತ್ತು ರಕ್ಷಣಾ ಖಾತೆಗಳು ನೋಡಿಕೊಳ್ಳುತ್ತಿವೆ. ಸರ್ರೆ ಬೆಟ್ಟಗಳು ಒಂದು ಮಹೋನ್ನತ ಸ್ವಾಭಾವಿಕ ಸೌಂದರ್ಯದ ಪ್ರದೇಶವಾಗಿವೆ (ಏರಿಯಾ ಆಫ್ ಔಟ್‌ಸ್ಟ್ಯಾಂಡಿಂಗ್ ನ್ಯಾಚುರಲ್ ಬ್ಯೂಟಿ-AONB).
ಹೆಚ್ಚು ಅಂದಗೊಳಿಸಲ್ಪಟ್ಟ ಭೂದೃಶ್ಯಗಳನ್ನು ಎಷರ್‌ನ ದಕ್ಷಿಣ ಭಾಗದಲ್ಲಿರುವ ಕ್ಲಾರೆಮಾಂಟ್ ಭೂದೃಶ್ಯ ತೋಟದಲ್ಲಿ ಕಾಣಬಹುದು (ಇದು 1715ರಿಂದಲೂ ಅಸ್ತಿತ್ವದಲ್ಲಿದೆ). ಗೋದಲ್ಮಿಂಗ್‌ನ ಆಗ್ನೇಯ ಭಾಗದಲ್ಲಿ ವಿಂಕ್‌ವರ್ತ್ ಸಸ್ಯಾಲಯವೂ ಇದೆ. ಇದು 20ನೇ ಶತಮಾನದಲ್ಲಿ ಸೃಷ್ಟಿಸಲ್ಪಟ್ಟಿತು. ವಿಸ್ಲೆಯು ರಾಯಲ್ ಹಾರ್ಟಿಕಲ್ಚರಲ್ ಸೊಸೈಟಿಯ ತೋಟಗಳಿಗೆ ನೆಲೆಯಾಗಿದೆ. ಐತಿಹಾಸಿಕವಾಗಿ ಸರ್ರೆಯ ಭಾಗವಾಗಿದ್ದು ಈಗ ವ್ಯಾಪಕವಾದ ಲಂಡನ್‌ನಲ್ಲಿರುವ ಕ್ಯೂ, ರಾಯಲ್ ಬಟಾನಿಕ್ ಗಾರ್ಡನ್ಸ್, ಕ್ಯೂವನ್ನು ಒಳಗೊಂಡಿದೆ. ಅಷ್ಟೇ ಅಲ್ಲ, ಇಂಗ್ಲೆಂಡ್ ಮತ್ತು ವೇಲ್ಸ್‌ಗೆ ಸಂಬಂಧಿಸಿದಂತೆ ದಿ ನ್ಯಾಷನಲ್ ಆರ್ಕೀವ್ಸ್‌ನ್ನೂ ಇದು ಹೊಂದಿದೆ.
ಸರ್ರೆಯ ಮುಖ್ಯವಾದ ಹಳ್ಳಿಗಾಡಿನ ಮನೆಗಳಲ್ಲಿ ಇವು ಸೇರಿವೆ: 1560ರ ದಶಕದಲ್ಲಿ ನಿರ್ಮಿಸಲ್ಪಟ್ಟ, ಲೊಸೆಲೆ ಪಾರ್ಕ್‌ನ ಟ್ಯುಡಾರ್ ಸೌಧ, ಹಾಗೂ ಗಿಲ್ಡ್‌ಫೋರ್ಡ್‌ನ ಪೂರ್ವ ಭಾಗಕ್ಕಿರುವ ಪಶ್ಚಿಮ ಕ್ಲಾಂಡನ್‌ನಲ್ಲಿರುವ 18ನೇ-ಶತಮಾನದ ಒಂದು ಪಲೇಡಿಯನ್ ಶೈಲಿಯ ಸೌಧವಾದ ಕ್ಲಾಂಡನ್ ಪಾರ್ಕ್. ಪೂರ್ವ ಕ್ಲಾಂಡನ್‌ನಲ್ಲಿರುವ ಸಮೀಪದ ಹ್ಯಾಚ್‌ಲ್ಯಾಂಡ್ಸ್ ಪಾರ್ಕ್, 1758ರಲ್ಲಿ ನಿರ್ಮಿಸಲ್ಪಟ್ಟಿತು; ಇದು ರಾಬರ್ಟ್ ಆಡಮ್ ಒಳಾಂಗಣಗಳು ಮತ್ತು ಕೀಬೋರ್ಡ್ ಉಪಕರಣಗಳ ಒಂದು ಸಂಗ್ರಹವನ್ನು ಒಳಗೊಂಡಿದೆ. ಗ್ರೇಟ್ ಬುಕ್‌ಹ್ಯಾಂನ ದಕ್ಷಿಣ ಭಾಗದಲ್ಲಿರುವ ಪೋಲ್ಸ್‌ಡನ್ ಲೇಸಿಯು ವ್ಯಾಪಕವಾದ ಮೈದಾನಗಳನ್ನು ಹೊಂದಿರುವ ಪ್ರಭುತ್ವದ ಒಂದು ಸ್ವತಂತ್ರಗೃಹವಾಗಿದೆ. ಒಂದು ಸಣ್ಣದಾದ ಪ್ರಮಾಣದಲ್ಲಿ, ಹ್ಯಾಂಬಲ್‌ಡನ್‌ನಲ್ಲಿ ಗೋದಲ್ಮಿಂಗ್ ಸಮೀಪ ನೆಲೆಗೊಂಡಿರುವ ಓಕ್‌ಹರ್ಸ್ಟ್ ಕಾಟೇಜ್, 16ನೇ-ಶತಮಾನಕ್ಕೆ ಸೇರಿದ್ದು ಜೀರ್ಣೋದ್ಧಾರ ಮಾಡಲ್ಪಟ್ಟಿರುವ ಒಂದು ಕೆಲಸಗಾರರ ನೆಲೆಯಾಗಿದೆ.
ವೇಯ್ ನದಿ ಮತ್ತು ವೇಯ್ ಅಂಡ್ ಗೋದಲ್ಮಿಂಗ್ ನ್ಯಾವಿಗೇಷನ್ಸ್ ದೆಸೆಯಿಂದಾಗಿ, ಸದರಿ ಕೌಂಟಿಯು ಸಮುದ್ರದೊಂದಿಗೆ ಸಂಪರ್ಕ ಸಾಧಿಸಲು ಸಾದ್ಯವಾಗಿದೆ. ಗಿಲ್ಡ್‌ಫೋರ್ಡ್‌ನಲ್ಲಿರುವ ಡ್ಯಾಪ್‌ಡ್ಯೂನ್ ವಾರ್ಫ್ ಎಂಬುದು ಕಾಲುವೆ ವ್ಯವಸ್ಥೆಯ ಕಾರ್ಯವನ್ನು ನೆನಪಿಗೆ ತರುತ್ತದೆ ಮತ್ತು ಇದು ರಿಲಯೆನ್ಸ್ ಎಂದು ಕರೆಯಲ್ಪಡುವ, ಜೀರ್ಣೋದ್ಧಾರ ಮಾಡಲ್ಪಟ್ಟ ವೇಯ್ ಸರಕುದೋಣಿಯೊಂದರ ನೆಲೆಯಾಗಿದೆ. ಇದರ ಜೊತೆಗೆ, ಟಿಲ್ಲಿಂಗ್‌ಬೌರ್ನ್ ನದಿಯ ದಂಡೆಯ ಮೇಲಿರುವ ಶಾಲ್‌ಫೋರ್ಡ್ ಮಿಲ್ ಎಂಬುದು 18ನೇ ಶತಮಾನಕ್ಕೆ ಸೇರಿದ ಒಂದು ನೀರಿನ-ಗಿರಣಿಯಾಗಿದೆ.
ಎಘಾಮ್‌ನಲ್ಲಿರುವ ರನ್ನಿಮೀಡ್ ಎಂಬುದು 1215ರಲ್ಲಿ ಮ್ಯಾಗ್ನ ಕಾರ್ಟದ ಮೊಹರು ಹಾಕುವ ತಾಣವಾಗಿತ್ತು.
ಗಿಲ್ಡ್‌ಫೋರ್ಡ್ ಕೆಥೆಡ್ರಲ್ ಎಂಬುದು ಯುದ್ಧಾನಂತರದ ಒಂದು ಕೆಥೆಡ್ರಲ್ ಆಗಿದ್ದು, ಅದು ನಿಂತಿರುವ ಜೇಡಿಯ ಬೆಟ್ಟದ ಮಣ್ಣಿನಿಂದ ಮಾಡಿದ ಇಟ್ಟಿಗೆಗಳನ್ನು ಬಳಸಿ ಅದನ್ನು ನಿರ್ಮಿಸಲಾಗಿದೆ.
ಬ್ರೂಕ್‌ಲ್ಯಾಂಡ್ಸ್ ವಸ್ತುಸಂಗ್ರಹಾಲಯವು ಸರ್ರೆಯ ಮೋಟಾರು-ಪಂದ್ಯಗಳ ಇತಿಹಾಸವನ್ನು ಗುರುತಿಸುತ್ತದೆ. ಥೋರ್ಪೆ ಪಾರ್ಕ್, ಮತ್ತು ಚೆಸ್ಸಿಂಗ್‌ಟನ್ ವರ್ಲ್ಡ್ ಆಫ್ ಅಡ್ವೆಂಚರ್ಸ್ ಎಂಬ ವಿಷಯೋದ್ಯಾನಗಳಿಗೂ ಈ ಕೌಂಟಿಯು ನೆಲೆಯಾಗಿದೆ.
ಚಲನಚಿತ್ರ ಮತ್ತು ಪುಸ್ತಕಗಳಲ್ಲಿ ಸರ್ರೆ
[ಬದಲಾಯಿಸಿ]1898ರಲ್ಲಿ ಬಂದ H. G. ವೆಲ್ಸ್‌ನ ದಿ ವಾರ್ ಆಫ್ ದಿ ವರ್ಲ್ಡ್ಸ್ ಎಂಬ ಕಿರು-ಕಾದಂಬರಿಯ ಬಹುತೇಕ ಭಾಗವು ಸರ್ರೆಯ ಪರಿಸರವನ್ನು ಒಳಗೊಂಡಿದ್ದು, ಸದರಿ ಕೃತಿಯಲ್ಲಿ ಇದರ ಅನೇಕ ನಿರ್ದಿಷ್ಟ ಪಟ್ಟಣಗಳು ಮತ್ತು ಹಳ್ಳಿಗಳು ಗುರುತಿಸಲ್ಪಟ್ಟಿವೆ. ಅಂಗಾರಕ ಗ್ರಹದ ನಿವಾಸಿಗಳು ಹಾರ್ಸೆಲ್ ಕಾಮನ್‌ನಲ್ಲಿ ಮೊದಲು ಇಳಿಯುತ್ತಾರೆ; ಇದು ವೋಕಿಂಗ್‌ನ ಉತ್ತರ ಭಾಗದಲ್ಲಿ, ಈಗ ಸ್ಯಾಂಡ್ಸ್ ಎಂದು ಕರೆಯಲ್ಪಡುವ ಬ್ಲೀಕ್ ಹೌಸ್ ಪಬ್‌ನ ಹೊರಭಾಗದಲ್ಲಿ ನೆಲೆಗೊಂಡಿದೆ. ಸದರಿ ಕಥೆಯಲ್ಲಿ ನಿರೂಪಕನು ಲಂಡನ್‌ನ ದಿಕ್ಕಿನಲ್ಲಿ ಪಲಾಯನ ಮಾಡುತ್ತಾನೆ. ಮೊದಲು ಬೈಫ್ಲೀಟ್‌ನ್ನು ಮತ್ತು ನಂತರದಲ್ಲಿ ವೇಬ್ರಿಜ್‌ನ್ನು ಹಾದುಹೋಗುವ ಈತ ಆಮೇಲೆ ಮುಂದುವರಿದು, ಥೇಮ್ಸ್ ನದಿಯ ಉತ್ತರ ದಡದ ಉದ್ದಕ್ಕೂ ಸಾಗುತ್ತಾ ಪೂರ್ವದೆಡೆಗೆ ಪ್ರಯಾಣಿಸುತ್ತಾನೆ. ಜೇನ್ ಆಸ್ಟೆನ್‌ಳ ಎಮ್ಮಾ ಕಾದಂಬರಿಯು ಸರ್ರೆಯಲ್ಲಿನ ಪರಿಸರವನ್ನು ಒಳಗೊಂಡಿದೆ ಮತ್ತು ಮಿಸ್ ಬೇಟ್ಸ್‌ಳನ್ನು ಎಮ್ಮಾ ಕಸಿವಿಸಿಗೊಳಿಸುವ ಸಂದರ್ಭವಾದ ಪ್ರಸಿದ್ಧ ವಿಹಾರ ಪ್ರವಾಸವು ಬಾಕ್ಸ್ ಬೆಟ್ಟದ ಮೇಲೆ ಸಂಭವಿಸುತ್ತದೆ. ದಿ ಹಿಚ್‌ಹೈಕರ್'ಸ್ ಗೈಡ್ ಟು ದಿ ಗ್ಯಾಲಕ್ಸಿ ಕೃತಿಯಲ್ಲಿನ ಫೋರ್ಡ್ ಪ್ರಿಫೆಕ್ಟ್ ಪಾತ್ರವು ಸರ್ರೆಯಲ್ಲಿನ ಗಿಲ್ಡ್‌ಫೋರ್ಡ್‌ಗೆ ಸೇರಿದೆ ಎಂಬುದಾಗಿ ಸಮರ್ಥಿಸಲಾಗುತ್ತದೆಯಾದರೂ, ವಾಸ್ತವತೆಯಲ್ಲಿ ಅವನು ಬೆಟೆಲ್‌ಗ್ಯೂಸ್‌ನ ಸುತ್ತಮುತ್ತಲ ಪ್ರದೇಶದಲ್ಲಿ ಎಲ್ಲೋ ಇರುವ ಒಂದು ಸಣ್ಣ ಗ್ರಹಕ್ಕೆ ಸೇರಿದವನಾಗಿರುತ್ತಾನೆ. ಜೂಲಿಯನ್ ಸ್ಟಾಕ್‌ವಿನ್‌ನಿಂದ ಬರೆಯಲ್ಪಟ್ಟ ನೌಕಾ ಸಾಹಸದ ಕಾದಂಬರಿಗಳ ಕಿಡ್ ಸರಣಿಯ ಕಥಾನಾಯಕನಾದ ಥಾಮಸ್ ಪೈನೆ ಕಿಡ್, ಗಿಲ್ಡ್‌ಫೋರ್ಡ್‌ಗೆ ಸೇರಿದ ಓರ್ವ ಕಿರಿಯ ವಿಗ್-ತಯಾರಕನಾಗಿ ಕೆಲಸವನ್ನು ಆರಂಭಿಸುತ್ತಾನೆ; ಅವನನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ ಮತ್ತು ಈ ರೀತಿಯಲ್ಲಿ ಅವನು ಸಮುದ್ರದಲ್ಲಿನ ಒಂದು ಜೀವನವನ್ನು ಆರಂಭಿಸುತ್ತಾನೆ. ಅಟೋನ್‌ಮೆಂಟ್ ಕೃತಿಯು ಸರ್ರೆಯ ಪರಿಸರವನ್ನು ಹೊಂದಿದೆ. ದಿವಂಗತನಾಗಿರುವ ಪ್ರಶಸ್ತಿ ವಿಜೇತ ಕವಿಯಾದ ಸರ್ ಜಾನ್ ಬೆಟ್ಜ್‌ಮನ್ ತನ್ನ "ಎ ಸಬ್‌ಆಲ್ಟರ್ನ್'ಸ್ ಲವ್‌ಸಾಂಗ್" ಎಂಬ ಕವಿತೆಯಲ್ಲಿ ಕೇಂಬರ್ಲಿಯನ್ನು ಉಲ್ಲೇಖಿಸುತ್ತಾನೆ; ಅದೇ ರೀತಿಯಲ್ಲಿ, ಜೇಮ್ಸ್ ಫರಾರ್ ರಚಿಸಿದ ಅನೇಕ ಕವಿತೆಗಳಿಗೆ ಕಾರ್‌ಶಾಲ್ಟನ್ ಸಾಹಿತ್ಯಿಕ ಹಿನ್ನೆಲೆಯಾಗಿ ಪರಿಣಮಿಸುತ್ತದೆ. J.K. ರೌಲಿಂಗ್‌ಳ "ಹ್ಯಾರಿ ಪಾಟರ್" ಸರಣಿ ಕೃತಿಯಲ್ಲಿ, ಹ್ಯಾರಿಯ ವಿನಾಶಕ ಸಂಬಂಧಿಕರಾದ ಡರ್ಸ್‌ಲೆ ಕುಟುಂಬದವರ ನೆಲೆಯನ್ನು ಸರ್ರೆಯ ಲಿಟ್ಲ್ ವಿಂಗಿಂಗ್ ಎಂಬ ಕಾಲ್ಪನಿಕ ಪಟ್ಟಣದಲ್ಲಿರುವಂತೆ ನಿರೂಪಿಸಲಾಗಿದೆ. ಸರ್ರೆಯಲ್ಲಿನ ಕರಾರುವಾಕ್ಕಾಗಿ ಸಾಧಾರಣವಾಗಿರುವ ಬೀದಿಯೊಂದರಲ್ಲಿರುವ ಕರಾರುವಾಕ್ಕಾಗಿ ಸಾಧಾರಣವಾಗಿರುವ ಮನೆಯೊಂದರಲ್ಲಿ ವಾಸಿಸುವ ಅವರ ಮನೆಯ ವಿಳಾಸವು, ಸಂಖ್ಯೆ ನಾಲ್ಕು ಪ್ರೈವೆಟ್ ಡ್ರೈವ್, ಲಿಟ್ಲ್ ವಿಂಗಿಂಗ್, ಸರ್ರೆ ಎಂಬ ರೀತಿಯಲ್ಲಿರುತ್ತದೆ.
ಸದರಿ ಕೌಂಟಿಯು ಒಂದು ಚಲನಚಿತ್ರ ತಾಣವಾಗಿಯೂ ಬಳಸಲ್ಪಟ್ಟಿದೆ. ದಿ ಹಾಲಿಡೆ ಚಲನಚಿತ್ರದ ಒಂದಷ್ಟು ಭಾಗವು ಗೋದಲ್ಮಿಂಗ್ ಮತ್ತು ಷೆರೆಯಲ್ಲಿ ಚಿತ್ರೀಕರಿಸಲ್ಪಟ್ಟಿತು: ಕೇಟ್ ವಿನ್ಸ್‌ಲೆಟ್‌ಳ ಪಾತ್ರವಾದ ಐರಿಸ್, ಷೆರೆಯಲ್ಲಿನ ಕುಟೀರವೊಂದರಲ್ಲಿ ವಾಸಿಸುತ್ತಾಳೆ ಮತ್ತು ಕೆಮೆರಾನ್ ಡಿಯಾಜ್‌ಳ ಪಾತ್ರವಾದ ಅಮಾಂದಾ, ಮನೆಯ ವಿನಿಮಯವೊಂದರ ಭಾಗವಾಗಿ ಅವಳೊಂದಿಗೆ ಮನೆಗಳನ್ನು ಬದಲಾಯಿಸಿಕೊಳ್ಳುತ್ತಾಳೆ. Bridget Jones: The Edge of Reason ಚಿತ್ರದ ಅಂತಿಮ ದೃಶ್ಯವು ಹಳ್ಳಿ ಚರ್ಚನ್ನು ಬಳಸಿಕೊಳ್ಳುತ್ತದೆ ಹಾಗೂ ಇದೂ ಸಹ ಷೆರೆಯಲ್ಲಿದೆ. ದಿ ವೆಡ್ಡಿಂಗ್ ಡೇಟ್ ಎಂಬ ಚಲನಚಿತ್ರದಲ್ಲಿಯೂ ಇದು ಕಂಡುಬರುತ್ತದೆ. 1976ರಲ್ಲಿ ಬಂದ ದಿ ಒಮೆನ್ ಎಂಬ ಚಲನಚಿತ್ರದಲ್ಲಿ, ಕೆಥೆಡ್ರಲ್‌ನಲ್ಲಿನ ದೃಶ್ಯಗಳನ್ನು ಗಿಲ್ಡ್‌ಫೋರ್ಡ್ ಕೆಥೆಡ್ರಲ್‌ನಲ್ಲಿ ಚಿತ್ರೀಕರಿಸಲಾಯಿತು.[೧೭] ಚಲನಚಿತ್ರಗಳಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಲೆದರ್‌ಹೆಡ್‌ಗೆ ಸೇರಿದ ಇಬ್ಬರು ಭರವಸೆಯ ಹುಡುಗರನ್ನು ಐ ವಾಂಟ್ ಕ್ಯಾಂಡಿ ಎಂಬ ಚಲನಚಿತ್ರವು ಅನುಸರಿಸುತ್ತದೆ. ರಸೆಲ್ ಕ್ರೋವ್ ಮುಖ್ಯಪಾತ್ರದಲ್ಲಿರುವ ಗ್ಲಾಡಿಯೇಟರ್ ಚಿತ್ರದ ಆರಂಭಿಕ ದೃಶ್ಯದಲ್ಲಿ ಸರ್ರೆಯ ಕಾಡುಪ್ರದೇಶವು ಜರ್ಮನಿಯನ್ನು ಪ್ರತಿನಿಧಿಸಿತು; ಇದು ಸರ್ರೆಯಲ್ಲಿನ ಫರ್ನ್‌ಹ್ಯಾಂ ಸಮೀಪದ ಬೌರ್ನ್ ಕಾಡುಗಳಲ್ಲಿ ಚಿತ್ರೀಕರಿಸಲ್ಪಟ್ಟಿತು. ರೊಮೊಲಾ ಗಾರೈ ಮತ್ತು ಮೈಕೇಲ್ ಗ್ಯಾಂಬನ್ ಮುಖ್ಯಪಾತ್ರಗಳಲ್ಲಿರುವ, ಜೇನ್ ಆಸ್ಟೆನ್‌ಳ ಎಮ್ಮಾ ಚಿತ್ರವನ್ನು 2009ರಲ್ಲಿ BBCಯು ನಿರ್ಮಾಣ ಮಾಡುವಾಗ, ಅದರ ದೃಶ್ಯಗಳನ್ನು ಗಿಲ್ಡ್‌ಫೋರ್ಡ್ ಸಮೀಪವಿರುವ ಸೆಂಡ್ ಎಂಬ ಸೇಂಟ್ ಮೇರಿ ಪವಿತ್ರ ಕನ್ಯೆಯ ಚರ್ಚಿನಲ್ಲಿ ಹಾಗೂ ಲೋಸ್ಲೆ ಹೌಸ್‌ನಲ್ಲಿ ಚಿತ್ರೀಕರಿಸಲಾಯಿತು.
ಇವನ್ನೂ ಗಮನಿಸಿ
[ಬದಲಾಯಿಸಿ]- ಸರ್ರೆ (ಸಾಗಣೆ)
ಉಲ್ಲೇಖಗಳು
[ಬದಲಾಯಿಸಿ]- ↑ "Medieval Guildford—"Henry III confirmed Guildford's status as the county town of Surrey in 1257"". Guildford Borough Council. Archived from the original on 2007-12-22. Retrieved 2007-02-12.
- ↑ "Surrey's woodlands". Surrey County Council. Archived from the original on 2007-09-30. Retrieved 2007-10-16.
- ↑ "Leith Hill". Infobritain.co.uk. Archived from the original on 2017-06-10. Retrieved 2010-07-27.
- ↑ "See for miles from Surrey's hills". BBC News. 2009-12-01. Retrieved 2010-05-24.
- ↑ "The Relative Hills of Britain - Chapter 4: The Marilyns by Height". Bubl.ac.uk. Archived from the original on 2010-08-22. Retrieved 2010-07-27.
- ↑ "2008 mid-year estimates of population". Surrey City Council. Archived from the original on 2010-04-04. Retrieved 2009-01-15.
- ↑ "2001 Census: Town/villages in Surrey with population more than 1000" (PDF). Surrey County Council. Archived from the original (PDF) on 2005-10-29. Retrieved 2007-10-16.
- ↑ "Relationships / unit history of Surrey". Vision of Britain. Archived from the original on 2007-10-14. Retrieved 2007-10-16.
- ↑ ಸರ್ರೆ ಕೌಂಟಿ ಪರಿಷತ್ತಿನ ಪತ್ರಿಕಾ ಪ್ರಕಟಣೆ ಜನವರಿ 17, 2006
- ↑ ಡೈಯರ್, ಜೇಮ್ಸ್. ಪೆಂಗ್ವಿನ್ ಗೈಡ್ ಟು ಪ್ರೀಹಿಸ್ಟಾರಿಕ್ ಇಂಗ್ಲೆಂಡ್ & ವೇಲ್ಸ್ , ಪುಟಗಳು 235-239.
- ↑ ಫಿಲ್ ಷಾ, ದಿ ಇಂಡಿಪೆಂಡೆಂಟ್, 13 ಜುಲೈ 2003, ಕ್ರಿಕೆಟ್: ಆಫ್ಟರ್ 400 ಇಯರ್ಸ್, ಹಿಸ್ಟರಿ ಈಸ್ ಮೇಡ್ ನೆಕ್ಸ್ಟ್ ಟು ದಿ A323. 2007ರ ಫೆಬ್ರುವರಿ 6ರಂದು ಮರುಸಂಪಾದಿಸಲಾಯಿತು. ಉಲ್ಲೇಖ: "ಮಿಚಾಮ್ ಗ್ರೀನ್ ನಿರಂತರವಾಗಿ 317 ವರ್ಷಗಳಿಂದ ಕ್ರಿಕೆಟ್ ಕ್ರೀಡಾಂಗಣವಾಗಿ ಬಳಕೆಯಲ್ಲಿದೆ".
- ↑ Census of England and Wales 1891, General Report, Table III: Administrative counties and county boroughs
- ↑ Surrey, Vision of Britain, accessed October 17, 2007
- ↑ ದಿ ಟೈಮ್ಸ್ , ಮಾರ್ಚ್ 27, 1890
- ↑ ಡೇವಿಡ್ ರಾಬಿನ್‌ಸನ್, ಹಿಸ್ಟರಿ ಆಫ್ ಕೌಂಟಿ ಹಾಲ್ , ಸರ್ರೆ ಕೌಂಟಿ ಪರಿಷತ್ತು
- ↑ Thornton, Philip (2003-09-27). "Surrey 'stockbroker belt' tops UK house-price list". The Independent. London. Archived from the original on 2009-09-23. Retrieved 2010-05-24.
- ↑ Sharp, Rob (4 June 2004). "Church fears return of Omen curse". The Observer. London. Retrieved 2007-08-31.
ಗ್ರಂಥಸೂಚಿ
[ಬದಲಾಯಿಸಿ]- Vladimir Moss. "Martyr-Prince Alfred Of England". Archived from the original on 2007-02-25. Retrieved 2007-10-16.
- "The Day the Cornish Invaded Guildford". The Surrey Advertiser. 2 June 1989. Archived from the original on 2007-06-21. Retrieved 2007-10-16.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸರ್ರೆ ಕೌಂಟಿ ಪರಿಷತ್ತು
- ಲಿವಿಂಗ್ ಇನ್ ಸರ್ರೆ - ಸ್ಥಳೀಯ ವ್ಯವಹಾರಗಳು ಮತ್ತು ಕಾರ್ಯಕ್ರಮಗಳನ್ನು ಸಮರ್ಥಿಸುವ ಒಂದು ವೆಬ್ಸೈಟ್. Archived 2019-07-31 ವೇಬ್ಯಾಕ್ ಮೆಷಿನ್ ನಲ್ಲಿ.
- ಸರ್ರೆ ಲೈಫ್ - ಸರ್ರೆಯನ್ನು ಆಧರಿಸಿದ ಒಂದು ಸಮುದಾಯದ ಮಾಸಿಕ ನಿಯತಕಾಲಿಕ. Archived 2020-12-17 ವೇಬ್ಯಾಕ್ ಮೆಷಿನ್ ನಲ್ಲಿ.
- ಸರ್ರೆ ಆನ್ಲೈನ್ ಫೋರಮ್ - ಸರ್ರೆಯ ಭವಿಷ್ಯದ ಕುರಿತಾಗಿ ಚರ್ಚಿಸುವ ಸ್ಥಳೀಯ ಒಳನೋಟಗಳು ಹಾಗೂ ವ್ಯವಹಾರ ಮಾಲೀಕರ ವೇದಿಕೆ. Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ.
- ಸರ್ರೆ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- ಪರಸ್ಪರ ಪ್ರಭಾವದ ಸರ್ರೆ ಭೂಪಟ Archived 2017-07-22 ವೇಬ್ಯಾಕ್ ಮೆಷಿನ್ ನಲ್ಲಿ.
- ಸರ್ರೆಯ ಗತವನ್ನು ಪರಿಶೋಧಿಸುವಿಕೆ
Berkshire | Berkshire, Greater London | Greater London | ||
Hampshire | Kent | |||
Surrey | ||||
Hampshire | West Sussex | East Sussex |
- Pages using the JsonConfig extension
- Pages using gadget WikiMiniAtlas
- Articles with hatnote templates targeting a nonexistent page
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages with plain IPA
- Commons category link is on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with Open Directory Project links
- Coordinates on Wikidata
- ಸರ್ರೆ
- ಮಹಾನಗರ ಪ್ರದೇಶದ್ದಲ್ಲದ ಕೌಂಟಿಗಳು
- ಆಗ್ನೇಯ ಇಂಗ್ಲೆಂಡ್
- ಯುನೈಟೆಡ್ ಕಿಂಗ್ಡಮ್