ಸಿ.ಎಮ್.ಭಟ್
ಸಿ.ಎಮ್.ಭಟ್ | |
---|---|
Born | ೨೨-೦೫-೧೯೧೩ |
Died | ೦೨-೦೬-೧೯೮೮ |
Occupation(s) | ಸಂಸ್ಕೃತ ವಿದ್ವಾಂಸ, ಯೋಗ ಗುರು |
Known for | ಅಷ್ಟಾಂಗ ಯೋಗ, ಹಾಗೂ ಯೋಗ ಥಿರಪಿ, |
Spouse | ಹೊಳಲ್ಕೆರೆ ರಂಗಮ್ಮ |
Children | ೫ |
ಸಿ.ಎಮ್.ಭಟ್, [೧] ಎಂದೇ ಮುಂಬಯಿನ ಹಾಗೂ ರಾಷ್ಟ್ರದ ಯೋಗಶಿಕ್ಷಣಾರ್ಥಿಳಿಗೆ ಅಭಿಮಾನಿಗಳಿಗೆ, ಮತ್ತು ಸಂಸ್ಕೃತ ಭಾಷಾ ಪಂಡಿತರಿಗೆ ಸುಮಾರು ಆರು ದಶಕಗಳಿಗೂ ಹೆಚ್ಚು ಸಮಯ ಚಿರಪರಿಚಿತರಾಗಿದ್ದ ಚಿತ್ರದುರ್ಗ ಮಹದೇವ ಭಟ್, ಮೂಲತಃ ಮೈಸೂರು ಸಂಸ್ಥಾನದ ಚಿತ್ರದುರ್ಗನಗರದವರು. ತಮ್ಮ ಕಾರ್ಯಾವಧಿಯಲ್ಲಿ ಮೈಸೂರಿನಲ್ಲಿ ೧೪ ವರ್ಷಗಳಕಾಲ, ಸಂಸ್ಕೃತ ಭಾಷೆಯನ್ನು ಬೋಧಿಸುವ ಕಾರ್ಯದಲ್ಲಿ ಹಾಗೂ 'ಅಷ್ಠಾಂಗಯೋಗ'ವನ್ನು ಬಹಳ ವಿಸ್ತ್ರುತವಾಗಿ ಪ್ರಚಾರಮಾಡಿದರು. ಮುಂದೆ ೧೯೪೬ ರಲ್ಲಿ ಯಾವ ಪರಿಚಿತರಿಲ್ಲದ ಮುಂಬಯಿ ಮಹಾನಗರಕ್ಕೆ ತೆರಳುವ ಸಂದರ್ಭಬಂದಾಗ ಬಹಳ ಧರ್ಯದಿಂದ ಮುನ್ನುಗ್ಗಿದರು. ಮುಂಬಯಿನಗರದಲ್ಲಿ ಪ್ರಾರಂಭದಲ್ಲಿ ಭುಲೇಶ್ವರ್, ಜಿಲ್ಲೆಗಳಲ್ಲಿ ವಾಸ್ತವ್ಯಮಾಡಿ,ಯೋಗ ಶಿಕ್ಷಣಾರ್ಥಿಗಳ ನೆರವಿನಿಂದ 'ನೇಪಿಯನ್ಸಿ ರೋಡ್' ನ 'ರುಂಗ್ಟಾ ಹೌಸ್' ನಲ್ಲಿ ಮನೆಮಾಡಿದರು. ಹೀಗೆ ಮುಂದೆ, ಮುಂಬಯಿನಿಂದ ಬೆಂಗಳೂರಿಗೆ ಹೋಗುವವರೆವಿಗೂ 'ರುಂಗ್ಟಾ ಹೌಸ್ ನಲ್ಲೇ ವಾಸವಾಗಿದ್ದರು.
ಬಾಲ್ಯ ಹಾಗೂ ಪ್ರಾರಂಭಿಕ ವಿದ್ಯಾಭ್ಯಾಸ
[ಬದಲಾಯಿಸಿ]ಮಹದೇವ ಜೋಯಿಸ್, (ಭಟ್) ಚಿತ್ರದುರ್ಗದ ವೇದಪಾರಂಗತ,ಜ್ಯೋತಿಷಿ, ಪೌರೋಹಿತ್ಯದಲ್ಲಿ ಸುಪ್ರಸಿದ್ಧರಾಗಿದ್ದ ಗುಂಡಾಜೋಯಿಸರ ೬ ಮಕ್ಕಳಲ್ಲಿ ಒಬ್ಬರಾಗಿ, ಮೇ ತಿಂಗಳ, ೨೨ ರಂದು,೧೯೧೩ ನೇ ಇಸವಿಯಲ್ಲಿ ಜನಿಸಿದರು
- ಪುರುಷೋತ್ತಮ ಜೋಯಿಸ್,
- ಮಹದೇವ ಜೋಯಿಸ್ (ಅವರ ಹೆಸರಿನ ಮುಂದೆ ಭಟ್ ಸೇರಿದ್ದು ಅನಂತರ)
- ಶ್ರೀನಿವಾಸ ಜೋಯಿಸ್.
- ಶಾರದಮ್ಮ
- ಮೀನಾಕ್ಷಮ್ಮ,
- ರತ್ನಮ್ಮ,
ಗುಂಡಾಜೋಯಿಸರು,ತಮ್ಮ ಅದ್ವಿತೀಯ ಪಾಂಡಿತ್ಯದಿಂದ ಚಿತ್ರದುರ್ಗ,ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಬಹಳ ಜನಪ್ರಿಯತೆಯನ್ನುಗಳಿಸಿದ್ದರು. ಮೈಸೂರಿನಲ್ಲಿ ಯೋಗಾಭ್ಯಾಸ ಮಾಡುವ ಸಮಯದಲ್ಲಿ ಯುವಕ ಮಹದೇವನ ಕಾರ್ಯತತ್ಪರತೆ, ನಿಷ್ಠೆಗಳನ್ನು ಮನಸಾರೆ ಮೆಚ್ಚಿಕೊಂಡಿದ್ದ ಅವನ ಗುರುಗಳಾಗಿದ್ದ ಯೋಗಾಚಾರ್ಯ ಕೃಷ್ಣಮಚಾರ್ಯರು, ಪ್ರೀತಿಯಿಂದ 'ಮಹದೇವ ಭಟ್' ಎಂದು ಸಂಬೋಧಿಸಿ ಕರೆಯುತ್ತಿದ್ದರಿಂದ ಮುಂದೆಯೂ ಅದೇಹೆಸರಿನಿಂದ ಜನಪ್ರಿಯರಾದರು.
ಬಾಲಕ ಮಹದೇವನ ವ್ಯಕ್ತಿತ್ವ
[ಬದಲಾಯಿಸಿ]ಮಹದೇವ ಭಟ್ಟರು ಬಾಲ್ಯದಿಂದಲೇ ಅಸಾಧಾರಣ ಬುದ್ದಿಶಕ್ತಿ, ಮತ್ತು ಜ್ಞಾಪಕಶಕ್ತಿಗಳನ್ನು ಹೊಂದಿದ್ದರು. ಕನ್ನಡ ಹಾಗೂ ಸಂಸ್ಕೃತ ಭಾಷಾಭ್ಯಾಸಗಳಲ್ಲಿ ತಂದೆಯವರಿಗೆ ನೆರವಾಗುತ್ತಿದ್ದರು.ತಮ್ಮ ೧೨ ನೆಯವಯಸ್ಸಿನಲ್ಲೇ ಮೈಸೂರಿನ ಅರಮನೆಯ ಸಂಸ್ಕೃತ ಪಾಠಶಾಲೆಯಲ್ಲಿ ಋಗ್ವೇದದಲ್ಲಿ ಪರಿಣಿತಿಗಳಿಸಿದರು ಮುಂದೆ ಮಹದೇವ ಭಟ್ಟರು ಅಲ್ಲಿಯೇ ಅಧ್ಯಾಪಕರಾಗಿ ದುಡಿದರು. ಸಾಹಿತ್ಯ,ಪಾರಮಾರ್ಥ,ಅವರಹೃದಯಕ್ಕೆ ತಟ್ಟಿದವಿಷಯಗಳು. ಉತ್ತರ ಕಾಶಿಯಿಂದ ಮೈಸೂರರಮನೆಗೆ ಬಂದ ತಿರುಮಲೈ ಕೃಷ್ಣಮಚಾರ್ಯರೆಂಬ ಯೋಗಾಚಾರ್ಯರ ಬಳಿ ಯೋಗವನ್ನು ವಿಸ್ತೃತವಾಗಿ ಅಭ್ಯಾಸಮಾಡಿದರು.[೨] ಯೋಗಾಚಾರ್ಯ ಶ್ರೀ.ತಿರುಮಲೈ ಕೃಷ್ಣಮಚಾರ್ಯರು ಆರಿಸಿಕೊಂಡ ೩ ಜನಶಿಷ್ಯರಲ್ಲಿ
- ಮಹದೇವ ಭಟ್ಟರು ಮೊದಲಿಗರು. ಇನ್ನಿಬ್ಬರು,
- ಬಿ. ಕೆ. ಎಸ್. ಐಯ್ಯಂಗಾರ್,
- ಕೆ.ಪಟ್ಟಾಭಿಜೋಯಿಸ್.
ಮಹದೇವ್ ಭಟ್ಟರು, ಇಂಗ್ಲೀಷ್ ಭಾಷೆಯನ್ನೂ ಕಲಿತರು.
ಯೋಗಪ್ರಚಾರ
[ಬದಲಾಯಿಸಿ]- ಮಹಾರಾಜರ ಆದೇಶದ ಮೇರೆಗೆ ಉತ್ತರಭಾರತದ ಹಲವು ನಗರಗಳಲ್ಲಿ ಯೋಗಶಿಕ್ಷಣದ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.[೩]
- ನಾಲ್ಮಡಿ ಕೃಷ್ಣರಾಜ ಒಡೆಯರ ಸಮಯದಿಂದ ಜಯಚಾಮರಾಜ ಒಡೆಯರ್ ವರೆಗೆ ಬೋಧಿಸಿದರು.
- ಅರಸು ಪಾಠಶಾಲೆ,
- ರಾಮಕೃಷ್ಣ ಮಿಷನ್,ಮೈಸೂರು. ಮುಂದೆ ಮುಂಬಯಿ ಮಹಾನಗರಕ್ಕೆ ಹೋದಾಗ ಅಲ್ಲಿನ ಶಾಖೆಯಲ್ಲೂ ಯೋಗವಿದ್ಯೆಯನ್ನು ಬೋಧಿಸುತ್ತಿದ್ದರು.
- ಮೈಸೂರು ವಿಶ್ವವಿದ್ಯಾಲಯ
೧೯೩೮
[ಬದಲಾಯಿಸಿ]ಯೋಗಾಚಾರ್ಯ ಶ್ರೀ.ತಿರುಮಲೈ ಕೃಷ್ಣಮಚಾರ್ಯ ರ ಪ್ರಿಯ ಶಿಷ್ಯರಲ್ಲೊಬ್ಬರಾದ,ಶ್ರೀ. ಸಿ.ಎಮ್.ಭಟ್, [೪] ೬ ವರ್ಷಗಳ ಕಾಲ ಸತತವಾಗಿ ತಮ್ಮ ಗುರುಗಳಿಂದ ಸುಮಾರು ೩೦೦ ಆಸನಗಳನ್ನು ಕ್ರಮಬದ್ಧವಾಗಿ ಕಲಿತು, ೧೯೩೮ ನೇ ಇಸವಿಯಲ್ಲೇ ಮುಂಬಯಿ ಮಹಾನಗರದ ದಾದರ್ ಜಿಲ್ಲೆಗೆ ಹೋಗಿ, "ಕಿಂಗ್ ಜಾರ್ಜ್ ಹೈಸ್ಕೂಲ್" ನಲ್ಲಿ (ಈಗ ಅದನ್ನು 'ಛತ್ರಪತಿ ಶಿವಾಜಿ ಮಹಾರಾಜ್ ಹೈಸ್ಕೂಲ್'ಎಂದು ಹೆಸರಿದೆ) ಯೋಗ ಶಿಬಿರವನ್ನು ನಡೆಸಿಕೊಟ್ಟರು. ಈ ಕಾರ್ಯ ಕ್ಷಯರೋಗ ನಿವಾರಣೆಗಾಗಿ ಹಣ ಸಂಗ್ರಹಿಸುವ ಅಭಿಯಾನದಲ್ಲಿ ಮಹತ್ವದ ಒಂದು ಹೆಜ್ಜೆಯಾಗಿತ್ತು. ಇದರಿಂದ ಸಿ. ಮಹದೇವ ಭಟ್ಟರು, [೫] ಮುಂಬಯಿ ಮಹಾನಗರದ ಪ್ರಮುಖ ನಾಗರಿಕರಿಗೆ ಪರಿಚಿತರಾದರು. [೬]
ಮದುವೆ
[ಬದಲಾಯಿಸಿ]ಚಿತ್ರದುರ್ಗಜಿಲ್ಲೆಯ ಹೊಳಲ್ಕೆರೆ ಯ ಶ್ಯಾನುಭೋಗ ಶ್ರೀ ಗೋಪಾಲಯ್ಯನವರ ಮಗಳು ಶ್ರೀಮತಿ ರಂಗಮ್ಮನವರು [೭] (೨೧-೦೨-೧೯೨೧) ಮದುವೆಯ ೧೯೩೫ ರಲ್ಲಿ ಆಗ ೧೫ ತುಂಬಿ ೧೬ ವರ್ಷವಾದಾಗ ಲಗ್ನವಾದರು. [೮] ಬಳಿಕ ಒಂದು ವರ್ಷ ಹೊಳಲ್ಕೆರೆಯಲ್ಲಿ ಇದ್ದರು. ನಂತರ ಎಲ್ಲರೂ ಮೈಸೂರುನಗರಕ್ಕೆ ಹೊರಟರು. ಮೈಸೂರಿನಲ್ಲಿ ೧೪ ವರ್ಷ ಯೋಗ ಶಿಕ್ಷಣ ಪ್ರಸಾರಮಾಡಿದರು. ಆಸಮಯದಲ್ಲಿ ವರ್ಗವಾಗಿ ಬಂದ ಒಬ್ಬ ಯೂರೋಪಿಯನ್ ಆಫೀಸರ್, ಯೋಗ ಮುಂತಾದವು ಕೇವಲ ಬ್ರಾಹ್ಮಣ ಸಮಾಜದವರಿಗೆ ಮಾತ್ರ ಎಂದು ಭಾವಿಸಿದ್ದರು. ಯೋಗ, ರಾಮಾಯಣ, ಮಹಾಭಾರತ, ಗೀತಾಭ್ಯಾಸಕ್ಕೆ ಜಾತಿ ಭೇದವಿಲ್ಲವೆಂದು ಹೇಳಿದರೂ ಒಪ್ಪಲಿಲ್ಲ.ಮಹಾರಾಜರು ಮಧ್ಯೆ ರಾಜಿಮಾಡಲು ಬಂದಾಗಲೂ ಒಪ್ಪಲಿಲ್ಲ. ಯೋಗಾಚಾರ್ಯರಿಗೆ ಕಿರುಕುಳ ಕೊಡಲು ಆರಂಭವಾಯಿತು. ಈ ವಿದ್ಯಮಾನವನ್ನು ವೀಕ್ಷಿಸುತ್ತಿದ್ದ ಮೈಸೂರಿನ ರಾಮಕೃಷ್ಣಾಶ್ರಮದ ಶಾಖೆಯ ಸ್ವಾಮಿಗಳು, ಮಹದೇವ ಭಟ್ಟರಿಗೆ ಮುಂಬಯಿಗೆ ಹೋಗಲು ಸಲಹೆ ಇತ್ತರು. ತಕ್ಷಣ ಭಟ್ಟರು ಮುಂಬಯಿಗೆ ಹೋದರು. ಅಲ್ಲಿ ಒಂದು ಉಡುಪಿ ಹೋಟೆಲ್ ನಲ್ಲಿ ಮನೆಸಿಗುವವರೆಗೆ ವಾಸ್ತವ್ಯ ಹೂಡಿದರು. ಮುಂಬಯಿನ ಅವರ ಶಿಷ್ಯರು, ಗೆಳೆಯರು, ಹಿತೈಷಿಗಳು ಮನೆಯನ್ನು ಬಾಡಿಗೆಗೆ ಗೊತ್ತುಮಾಡಿಕೊಟ್ಟರು. ನಂತರ ಶ್ರೀಮತಿ. ರಂಗಮ್ಮನವರು ಹಾಗೂ ಮಕ್ಕಳು ಮುಂಬಯಿಗೆ ಆಗಮಿಸಿ ಮೊದಲು ವಾಲ್ಕೇಶ್ವರ್ ನಲ್ಲಿ, ಕೊನೆಗೆ 'ನೇಪಿಯನ್ ಸೀ ರೋಡ್' ನಲ್ಲಿ ಮನೆ ಮಾಡಿದರು. 'ಶೇಟ್ ರುಂಗ್ಟಾ'ರವರ ಪರಿಚಯ ಸ್ವಾಮಿಗಳಿಂದ ಆಯಿತು. ಮಹದೇವಭಟ್ಟರ ಶಿಷ್ಯರಲ್ಲೊಬ್ಬರಾದ ಯೂರೋಪಿಯನ್ ಆಫೀಸರ್, ಹೊಸ ಬಾಡಿಗೆ ಮನೆ ಗೊತ್ತುಮಾಡಿಕೊಟ್ಟರು. ಹೀಗೆ ಮುಂದುವರೆದ ಮಹದೇವ ಭಟ್ಟರು, ಕೊನೆಯವರೆಗೂ ನೇಪಿಯನ್ ಸೀ ರೋಡಿನ "ರುಂಗ್ಟಾ ಹೌಸ್" ನಲ್ಲೇ ವಾಸವಾಗಿದ್ದರು. ೧೯೮೫ ರಲ್ಲಿ ಮನೆಯನ್ನು ಮಾರಿ, ಬೆಂಗಳೂರಿಗೆ ಬಂದು ನೆಲೆಸಿದರು.
ಮಕ್ಕಳು
[ಬದಲಾಯಿಸಿ]ಮೈಸೂರು ನಗರದಲ್ಲಿದ್ದಾಗಲೇ ಮಹದೇವ್ ಭಟ್ಟರು, ಮತ್ತು ರಂಗಮ್ಮನವರಿಗೆ ನಾಲ್ಕು ಮಕ್ಕಳು. ಶಾರದಮ್ಮ, ಭಾನುದೇವಭಟ್, ಕಾತ್ಯಾಯಿನಿ, ಶಶಿಧರ್ ದೇವ್ ಭಟ್. ೧೯೪೬ ಮುಂಬೈನ, ಮಾಧವಬಾಗ್ ನಲ್ಲಿ ವಾಸ್ತವ್ಯ ಮಾಡಲು ಮಹದೇವ ಭಟ್ಟರು ಒಬ್ಬರೇ ಹೋದಾಗ, ಮೈಸೂರಿನಲ್ಲಿ ರಾಮಕೃಷ್ಣ ಮಠದ ಸ್ವಾಮೀಜಿಯವರು, ರಂಗಮ್ಮನವರ ಪರಿವಾರಕ್ಕೆ ಎಲ್ಲಾ ತರಹದ ನೆರವು ನೀಡಿದರು.
ಮುಂಬಯಿಗೆ ತೆರಳುವ ಮೊದಲು
[ಬದಲಾಯಿಸಿ]೧೯೪೦ ರಲ್ಲಿ ಶ್ರೀ ಕೃಷ್ಣರಾಜ ಒಡೆಯರು ಮರಣಿಸಿದ ನಂತರ ಮೈಸೂರರಮನೆಯಲ್ಲಿ ಯೋಗಕ್ಕೆ ಪ್ರೋತ್ಸಾಹ ಕಡಿಮೆಯಾಯಿತು. ಆಗ ಗುರು, ಶ್ರೀ.ಕೃಷ್ಣಮಾಚಾರ್ಯರು ಮದ್ರಾಸ್ ಗೆ ಹೋದರು. ಕೆ.ಪಟ್ಟಾಭಿರಾಮ ಜೋಯಿಸ್, ಮೈಸೂರಿನಲ್ಲೇ ಹೇಗೋ ಖಾಸಗಿಯಾಗಿ ಯೋಗಶಿಕ್ಷಣ ಮುಂದುವರೆಸುವ ನಿರ್ಧಾರ ಮಾಡಿದರು. ಶ್ರೀ.ಸಿ.ಎಮ್.ಭಟ್, ಹಾಗೂ ಮತ್ತೊಬ್ಬ ಸಹಪಾಠಿ,ಶ್ರೀ ಕೇಶವಮೂರ್ತಿ, ಜೊತೆಯಾಗಿ ಯೋಗ ಶಿಕ್ಷಣ ಕೊಡಲು ಆರಂಬಿಸಿದರು. ಅವರಿಬ್ಬರು ಇನ್ನೂ ಯಾವ ಧೃಢ ನಿರ್ಧಾರ ಕೈಗೊಂಡಿರಲಿಲ್ಲ.[೯]
ನಾಲ್ವಡಿ ಕೃಷ್ಣರಾಜ ಒಡೆಯರುರಿಗೆ ಯೋಗದಲ್ಲಿ ಪರಮಾಸಕ್ತಿ
[ಬದಲಾಯಿಸಿ]ನಾಲ್ವಡಿ ಕೃಷ್ಣರಾಜ ಒಡೆಯರು ಒಮ್ಮೆ,ಮಧ್ಯ ರಾತ್ರಿಯಲ್ಲಿ ಕೆಲವು ಯೋಗಾಸನಗಳನ್ನು ಮಾಡಿತೋರಿಸಲು, ಮಹದೇವ ಭಟ್ ಹಾಗೂ ಪಟ್ಟಾಭಿ ಜೋಯಿಸರಿಗೆ ಹೇಳಿಕಳಿಸಿದ್ದ ವಿಷಯವನ್ನು ಪಟ್ಟಾಭಿಯವರ ಮೊಮ್ಮಗ, ಶರತ್, "ಯೋಗಮಾಲಾ" [೧೦] ಪುಸ್ತಕದಲ್ಲಿ ದಾಕಲುಮಾಡಿದ್ದಾರೆ.
೧೯೪೬ ರಲ್ಲಿ
[ಬದಲಾಯಿಸಿ]ಹೀಗೆ ಅನಿಶ್ಚಿತತೆಯಿಂದ ಮುಂದುವರೆದ ಮೈಸೂರುನಗರದ ಯೋಗ ಶಿಕ್ಷಣ ಶಾಲೆ, ಹಾಗೂ ಸಂಸ್ಕೃತ ಪಾಠಶಾಲೆಗಳನ್ನು ಸಂಪೂರ್ಣವಾಗಿ ೧೯೪೬ ರಲ್ಲಿ ಮುಚ್ಚಲಾಯಿತು. ಆ ಪರಿಸ್ಥಿತಿಯನ್ನು ಶ್ರೀ. ಪಟ್ಟಾಭಿಯವರ ಲೇಖನದಲ್ಲಿ ವಿವರಿಸಲಾಗಿದೆ.
"The Maharajah died in 1940, bringing an end to Krishnamacharya’s long patronage. By the time the esteemed teacher left for Madras in 1954, he had only three remaining, very dedicated students: Guruji, (ಶ್ರೀ ಪಟ್ಟಾಭಿ)his friend C. Mahadev Bhatt, and Keshavamurthy. Guruji was the only one who considered teaching his life’s work, and carried on Krishnamacharya’s legacy in Mysore".
ರಾಮಕೃಷ್ಣ ಮಿಶನ್ ಸ್ವಾಮಿಗಳ ಆದೇಶ
[ಬದಲಾಯಿಸಿ]ಮೈಸೂರಿನ ರಾಮಕೃಷ್ಣ ಮಿಶನ್ ನ ಆಗಿನ ಸ್ವಾಮಿಗಳಾಗಿದ್ದ ಶ್ರೀ. ಶಾಂಭವಾನಂದಸ್ವಾಮಿಗಳು ಯೋಗಾಚಾರ್ಯ ಸಿ.ಎಂ.ಭಟ್ಟರಿಗೆ ಮುಂಬಯಿನಗರಕ್ಕೆ ಹೋಗಿ ಅಲ್ಲಿ ಯೋಗಪ್ರಸಾರ ಮಾಡಬೇಕೆಂಬ ಅಪ್ಪಣೆಯಂತೆ, ಅವರು ಮುಂಬಯಿನಗರಕ್ಕೆ ಒಬ್ಬರೇ ಹೊರಟರು. ಆಗ ಭಟ್ಟರ ಯೋಗ ವಿದ್ಯೆಯ ಅಪಾರ ಸಾಮರ್ಥ್ಯ,ಹಾಗೂ ಆಸಕ್ತಿಗಳನ್ನು ಗಮನಿಸಿದ 'ಟೈಮ್ಸ್ ಆಫ್ ಇಂಡಿಯ ನ್ಯೂಸ್ ಮೀಡಿಯದ ಸುಪ್ರಸಿದ್ಧ ವಾರ ಪತ್ರಿಕೆ', 'ಇಲ್ಲ್ಯುಸ್ಟ್ರೇಟೆಡ್ ವೀಕ್ಲಿಯ ಪತ್ರಿಕೆ'ಯಲ್ಲಿ ಪ್ರಕಟಗೊಂಡ ಭಟ್ಟರ ಬಗೆಗಿನ ಯೋಗ ಲೇಖನಗಳು, ಮುಂಬಯಿನ ನಾಗರಿಕರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದವು. ಮುಂಬಯಿನಲ್ಲಿ ಭಟ್ಟರು ತಮ್ಮ ಯೋಗವಿದ್ಯೆಯನ್ನು ಖಾಸಗಿಯಾಗಿ :
- ಟಾಟಾ,
- ಕವಾಸ್ಜಿ ಜೆಹಾಂಗೀರ್,
- ಲಾರ್ಸೆನ್,
- ಜೆ.ಸಿ.ಪಟೇಲ್,
- ಮಫತ್ಲಾಲ್,
- ಪೆಟಿಟ್,
- ಬಿರ್ಲ,
- ರುಂಗ್ಟಾ
ಮೊದಲಾದ ಹೆಸರಾಂತ ಉದ್ಯೋಗಪತಿಗಳಮನೆಗಳಿಗೆ ಭೇಟಿಕೊಟ್ಟು ಹೇಳಿಕೊಡುತ್ತಿದ್ದರು. ಸದಾ ಹಸನ್ಮುಖಿ, ಸರಳವ್ಯಕ್ತಿತ್ವದ ಧನಾಪೇಕ್ಷೆಯೇ ಪ್ರಮುಖ ಗುರಿಯಿಲ್ಲದೆ, ನಿರಂತರ ಶ್ರಮಿಸಿ ಯೋಗವನ್ನು ಮುಂಬಯಿನ ಸಾಮಾನ್ಯ ಜನರಿಗೂ ದೊರಕುವಂತೆಮಾಡಿ. ದೇಶದಾದ್ಯಂತ ಯೋಗ ಶಿಬಿರಗಳನ್ನು ಆಯೋಜಿಸಿ,ತಾವೇ ಆವುಗಳಲ್ಲಿ ಭಾಗವಹಿಸುತ್ತಿದ್ದ ಮಹದೇವ ಭಟ್ಟರು ಸ್ವಲ್ಪ ಸಮಯದಲ್ಲೇ ಮುಂಬಯಿ ನಗರದಲ್ಲಿ ಬಹಳ ಜನಪ್ರಿಯರಾದರು. 'ಹ್ಯೂಸ್ ರೋಡ್' ನಲ್ಲಿದ್ದಾಗ ಯೋಗ ಕಲಿಯಲು ಭಾರತೀಯರಲ್ಲದೆ ಯೂರೋಪಿಯನ್ನರೂ ಬರುತ್ತಿದ್ದರು. ಮಹದೇವ ಭಟ್ಟರಿಗೆ ಯೋರೋಪಿನಲ್ಲಿ ಹಲವಾರುಬಾರಿ ಆಹ್ವಾನ ಬಂದಾಗಲೂ ಹೋಗಲು ಒಪ್ಪಲಿಲ್ಲ. ಬ್ರಾಹ್ಮಣರ ಮನೆತನದವರು ಆಗಿನಕಾಲದಲ್ಲ ಸಮುದ್ರದಮೇಲೆ ಪ್ರಯಾಣಮಾಡುವುದು ನಿಶಿದ್ಧವೆಂದು ಪರಿಗಾಣಿಸಲಾಗಿತ್ತು. ಆದರೆ ಮುಂದೆ ತಮ್ಮ ಹಿರಿಯಮಗ 'ಭಾನುದೇವ್ ಭಟ್' ವಿದೇಶಕ್ಕೆ ಹೆಚ್ಚಿನ ವ್ಯಾಸಂಗಮಾಡಲು ತಮ್ಮ ತಂದೆಯವರನ್ನು ಕೇಳಿಕೊಂಡಾಗ, ಒಪ್ಪಿದರು. ಅವರಿಗೆ ಹೃದಯಾಘಾತವಾಗಿದ್ದ ಸಮಯದಲ್ಲೂ ತಮ್ಮ ಮಗಳು ಮತ್ತು ಸೊಸೆಯರನ್ನು ವಿದೇಶಕ್ಕೆ ಹೋಗಲು ಸಮ್ಮತಿಕೊಟ್ಟರು.
ಪ್ರಶಸ್ತಿಗಳು
[ಬದಲಾಯಿಸಿ]ಮೈಸೂರಿನ ಅರಮನೆಯ ರಾಜಾಸ್ಥಾನದಲ್ಲಿ ಆಹ್ವಾನಿತ ಸಂಸ್ಕೃತ ಪಂಡಿತರು, ಹಾಗೂ ವಿದ್ವನ್ಮಣಿಗಳ ಸಮ್ಮುಖದಲ್ಲಿ, ಯೋಗಾಚಾರ್ಯ, ಚಿತ್ರದುರ್ಗ ಮಹದೇವ ಭಟ್ಟರಿಗೆ ಶಾಲುಹೊದಿಸಿ ಕೆಳಗೆ ನಮೂದಿಸಿದ ಪ್ರಶಸ್ತಿ,ಗೌರವಗಳನ್ನು ಪ್ರದಾನಮಾಡಲಾಯಿತು :
- ಶರೀರ ನಾಡಿ ಆಧಾರ ಶಕ್ತಿಮಾನ್,
- ವೇದ ಬ್ರಹ್ಮ,
ಯೋಗಾಚಾರ್ಯ ಭಟ್ ಪರಿವಾರ
[ಬದಲಾಯಿಸಿ]ಮಹದೇವ ಭಟ್, ರಂಗಮ್ಮ ಮಹದೇವ ಭಟ್, ಹಾಗೂ ವಾರಿಜಾಕ್ಷಿ ಭಾನುದೇವ ಭಟ್ ಪರಿವಾರ ಯೋಗ ಪ್ರಸಾರ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಇಬ್ಬರೂ ಮಹಿಳೆಯರೂ, ಮಹದೇವ ಭಟ್ಟರಿಂದ ಸ್ಪೂರ್ಥಿಪಡೆದು,ತಮಗೆ ಅನುಕೂಲವಾದ ಸಮಯದಲ್ಲಿ ಯೋಗ ಥಿರಪಿಯನ್ನು ಭಾರತ ಹಾಗೂ ವಿದೇಶಗಳಲ್ಲಿಯೂ ಪ್ರಸಾರ ಮಾಡಿದ್ದಾರೆ. ಸಿ.ಎಮ್.ಭಟ್, ಶ್ರೀಮತಿ ರಂಗಮ್ಮ ಭಟ್, ಹಾಗೂ ವಾರಿಜಾಕ್ಷಿ ಭಾನುದೇವ ಭಟ್, ನಡೆಸಿದ 'ಯೋಗ ಥಿರಪಿಯ ವರದಿಗಳ ಒಂದು ನೋಟ' : [೧೧], [೧೨]
ನಿಧನ
[ಬದಲಾಯಿಸಿ]ಚಿತ್ರದುರ್ಗ ಮಹದೇವ ಭಟ್, ತಮ್ಮ ಜೀವನದ ಬಹುಪಾಲು ಯೋಗಶಿಕ್ಷಣ ಹಾಗೂ ಅದರ ವ್ಯಾಪಕ ಪ್ರಸಾರಕ್ಕಾಗಿ ಶ್ರಮಿಸಿದರು. ಯೋಗದ ಮಹತ್ವದ ಬಗ್ಗೆ ನಮ್ಮ ದೇಶದಲ್ಲಿ ಸಾಕಷ್ಟು ತಿಳುವಳಿಗೆ ಇಲ್ಲದಿದ್ದ ಸಮಯದಲ್ಲಿ, ಮುಂಬಯಿನಗರದ ನೂರಾರು ನಾಗರಿಕರಿಗೆ ಯೋಗವನ್ನು ಖಾಸಗಿಯಾಗಿ ಅವರ ಮನೆಗಳಿಗೆ ಭೇಟಿಕೊಟ್ಟು ಹೇಳಿಕೊಟ್ಟರು. ನೂರಾರು ವಿದೇಶೀಯರು, ಅವರ ಯೋಗಶಿಬಿರಗಳಲ್ಲಿ ಭಾಗವಹಿಸಿ ಅವರನ್ನು ತಮ್ಮ ದೇಶಗಳಿಗೆ ಆಹ್ವಾನಿಸಿದ್ದರು. ದೇಶದ ಎಲ್ಲಾ ಭಾಗಗಳಿಗೆ ಸಂಚರಿಸಿ, ನೂರಾರು ಯೋಗಶಿಕ್ಷಣ ಶಿಬಿರಗಳಲ್ಲಿ ಭಾಗವಹಿಸಿ ಪ್ರದರ್ಶನಗಳನ್ನು ಕೊಟ್ಟರು.ಮುಂಬಯಿನ ಹೆಸರಾಂತ ಇಂಜಿನಿಯರಿಂಗ್ ಕಂಪೆನಿಯ ಮಾಲಿಕರೊಬ್ಬರಾಗಿದ್ದ ಲಾರ್ಸೆನ್ ಭಟ್ಟರ ಪ್ರೀತಿಯ ಶಿಷ್ಯರಲ್ಲೊಬ್ಬರು. ಲಾರ್ಸೆನ್ ಪರಿವಾರದವರು, ಸುದೀರ್ಘಕಾಲ ಭಟ್ಟರ ನಿಕಟವರ್ತಿಗಳಲ್ಲೊಬ್ಬರಾಗಿದ್ದವರು. ಬೆಂಳೂರಿನಲ್ಲೂ ತಮ್ಮ ಕೈಲಾದಷ್ಟು ದಿನ, ನೂರಾರು ಜನರಿಗೆ, ಸಂಸ್ಥೆಗಳಿಗೆ ಯೋಗಶಿಕ್ಷಣದ ಮಹತ್ವಗಳನ್ನು ಬೋಧಿಸಿದರು. ಭಟ್ಟರ ಪತ್ನಿ, ಶ್ರೀಮತಿ ರಂಗಮ್ಮ, ಮತ್ತು ಅವರ ಸೊಸೆ/ಶಿಷ್ಯೆ, ಶ್ರೀಮತಿ ವಾರಿಜಾ ಭಟ್,[೧೩] ಅವರ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ, ಶ್ರೀ. ಸಿ.ಎಮ್.ಭಟ್ಟರು, ಸ್ವಲ್ಪಕಾಲದಿಂದ ಶ್ವಾಸಕೋಶದ ಕಾಹಿಲೆಯಿಂದ ನರಳುತ್ತಿದ್ದವರು, ೧೯೮೮ ರಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ 'Shri. C.M.Bhatt, Yogacharya of Mumbai'(1913-1988)'
- ↑ Yogic exercises for the body and mind. vidvan C.M.Bhatta,V.R.Annaswamy Rao,
- ↑ Yoga exercises are good for Mind & Spirit
- ↑ (೫೦-೭೦) ರ ದಶಕದ ಮುಂಬಯಿನ ಹೆಸರಾಂತ ಯೋಗಾಚಾರ್ಯ,ಶ್ರೀ.ಸಿ.ಎಂ.ಭಟ್ !
- ↑ swaỵ.com, ಚಿತ್ರದುರ್ಗ ಮಹದೇವ್ ಭಟ್, ಮೈಸೂರು
- ↑ Yoga Physical Culture In Mysore ! Asanas And Their Curative Qualities. By : S.R.S.Raghavan. BOMBAY CHRONICLE-SUNDAY EDITION, P.17, June, 19, 1938
- ↑ ಯೋಗಾಚಾರ್ಯ ಸಿ.ಎಮ್.ಭಟ್,ಮುಂಬಯಿ,
- ↑ Chi.Rangamma of Holalkere, later married Shri.C.M.Bhatt of Chitradurga !
- ↑ The Maharajah died in 1940, bringing an end to Krishnamacharya’s long patronage. By the time the esteemed teacher left for Madras in 1954, he had only three remaining, very dedicated students: Guruji, his friend C. Mahadev Bhatt, and Keshavamurthy. Guruji was the only one who considered teaching his life’s work, and carried on Krishnamacharya’s legacy in Mysore. aym,Ashtanga yoga,Mumbai
- ↑ Yoga Mala : The Seminal Treatise and Guide from the Living Master Of Ashtanga-By Sri.K.PattabhiJoi,"ಯೋಗಮಾಲಾ ಪುಸ್ತಕದ (sxvi-ಪುಟದ)ಲ್ಲಿ
- ↑ shaadows, 08-08-2017, Shri. C.M.Bhatt had several accolades and certificates from H.H.Maharaja of Mysore, and various organisations, from various parts of the country 1
- ↑ “Yoga in the family”- Mrs. Varijakshi B. Bhatt ! /
- ↑ Yogi Krishnamacharya & his disciple-Smt. Varija bhatt, A Yoga teacher,Shadows, www.Yoga and healthmag.co.UK