ವಿಷಯಕ್ಕೆ ಹೋಗು

ಜಗ್ಗೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಗ್ಗೇಶ್

ಜಗ್ಗೇಶ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1963-03-17) ೧೭ ಮಾರ್ಚ್ ೧೯೬೩ (ವಯಸ್ಸು ೬೧)
ಬೇರೆ ಹೆಸರುಗಳು ನವರಸ ನಾಯಕ ಮಾತಿನ ಮಲ್ಲ
ವೃತ್ತಿ ನಟ


ಜಗ್ಗೇಶ್ ಒಬ್ಬ ಭಾರತೀಯ ನಟ ಮುಖ್ಯವಾಗಿ ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾದವರು. ಇವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಊರಿನವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.

ಚಲನಚಿತ್ರ ಜೀವನ

[ಬದಲಾಯಿಸಿ]

ಜಗ್ಗೇಶ್ ಅವರು ಆರಂಭದಲ್ಲಿ ಕೆಲ ಸಿನಿಮಾಗಳಲ್ಲಿ ಖಳ ಹಾಗೂ ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಇವರ ಮೊದಲನೆಯ ಚಿತ್ರ - ಇಬ್ಬನಿ ಕರಗಿತು. ನೂರನೆಯ ಚಿತ್ರ ಮಠ. ಮೇಕಪ್ ಎಂಬ ಚಿತ್ರ ನಿರ್ಮಿಸಿ,ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ. ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ.

ರಾಜಕೀಯ ಕ್ಷೇತ್ರ

[ಬದಲಾಯಿಸಿ]

ಜಗ್ಗೇಶ್ ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಫೆ.೩, ೨೦೧೦ರಂದು ಕರ್ನಾಟಕ ವಿಧಾನ ಪರಿಷತ್ತಿಗೆ ಜಗ್ಗೇಶ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.[] [][]

ಜಗ್ಗೇಶ್ ಅಭಿನಯದ ಚಿತ್ರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Jaggesh quits Congress for BJP". The Hindu. 11 July 2008. Archived from the original on 2 ಸೆಪ್ಟೆಂಬರ್ 2010. Retrieved 8 December 2010.
  2. "Prof. PV Krishna Bhat and Jaggesh nominated as MLC | BJP Karnataka". bjpkarnataka.org. Archived from the original on 2016-12-21. Retrieved 2017-07-06.
  3. "Deccan Herald - JAGGESH IS KSRTC VICE-CHAIRMAN". archive.deccanherald.com. Archived from the original on 2016-12-20. Retrieved 2017-07-06.
  4. "Jaggesh Actor , Director , Writer". www.imdb.com ,6 July 2017.
"https://kn.wikipedia.org/w/index.php?title=ಜಗ್ಗೇಶ್&oldid=1212301" ಇಂದ ಪಡೆಯಲ್ಪಟ್ಟಿದೆ