ಧನಂಜಯ್ (ನಟ)
ಧನಂಜಯ್ Dhananjaya | |
---|---|
Born | 23 ಆಗಸ್ಟ್ 1986 |
Nationality | ಭಾರತೀಯ |
Alma mater | ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್, ಕರ್ನಾಟಕ, ಭಾರತ. |
Occupation | ನಟ |
Years active | 2013–ಪ್ರಸ್ತುತ |
ಧನಂಜಯ ಕನ್ನಡ ಚಲನಚಿತ್ರ ನಟ ಮತ್ತು ರಂಗಭೂಮಿ ಕಲಾವಿದ. ಮೊದಲು ರಂಗಭೂಮಿಯಲ್ಲಿ ಅಭಿನಯಿಸಿದ ನಂತರ, 2013 ರಲ್ಲಿ ಡೈರೆಕ್ಟರ್ಸ್ ಸ್ಪೆಷಲ್ ಮೊದಲ ಚಲನಚಿತ್ರದಲ್ಲಿ ಅಭಿನಯಿಸಿದರು . ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ SIIMA ಉದಯೋನ್ಮುಖ ಉತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ .
ಆರಂಭಿಕ ಜೀವನ ಮತ್ತು ಕುಟುಂಬ
[ಬದಲಾಯಿಸಿ]ಧನಂಜಯ ಅವರು ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಜನಿಸಿದರು. ಅಲ್ಲಿ ಅವರು ಸೇಂಟ್ ಮೇರಿಸ್ ಹೈಸ್ಕೂಲ್ನಲ್ಲಿ ತಮ್ಮ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದರು.ಅವರು ಬಾಲ್ಯದಲ್ಲಿ ತನ್ನ ತಂದೆಯೊಂದಿಗೆ ಹಳ್ಳಿಯಲ್ಲಿ ನಾಟಕಗಳನ್ನು ನೋಡುವುದರ ಜೊತೆಗೆ ನಟಿಸುತಿದ್ದರು.ಶ್ರೀ ಜಯಚಾಮರಾಜೇಂದ್ರ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಪದವಿಯನ್ನು ಪಡೆದ ನಂತರ ಮೈಸೂರು ಇನ್ಫೋಸಿಸ್ ನಲ್ಲಿ ಕೆಲಸಕ್ಕೆ ಸೇರಿದರು .ಆದಾಗ್ಯೂ, ಅವರ ಆಸಕ್ತಿ ನಟನೆಯಲ್ಲಿ ಇರುವ ಕಾರಣ ಮೈಸೂರುನಲ್ಲಿರುವ ಜನಪ್ರಿಯ ರಂಗಾಯಣ ರಂಗಭೂಮಿ ಗುಂಪನ್ನು ಆಗಾಗ ಭೇಟಿ ನೀಡುತ್ತಿದ್ದರು.ಅಂತಿಮವಾಗಿ, ಅವರು ಅದೇ ಥಿಯೇಟರ್ ಗುಂಪಿನಲ್ಲಿ ಅಭಿನಯಿಸಿದರು .ಜರ್ಮನಿಯಲ್ಲಿ ನಟನಾ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ಪಡೆದಿದ್ದಾರೆ . [೧]
ಚಲನಚಿತ್ರ ವೃತ್ತಿಜೀವನ
[ಬದಲಾಯಿಸಿ]ಧನಂಜಯ, ಮೈಸೂರು ರಂಗಾಯಣ ರಂಗಭೂಮಿಗೆ ಆಗಾಗ ಭೇಟಿನೀಡುತ್ತಿದ್ದರು , ಅವರು ಅಲ್ಲಿ ನಡೆಯುವ ನಾಟಕಗಳಲ್ಲಿ ಅನೇಕ ಸಾಮಾನ್ಯ ಪಾತ್ರಗಳಲ್ಲಿ ಅಭಿನಯಿಸಿದರು . ನಿರ್ದೇಶಕ ಗುರುಪ್ರಸಾದ್ ಅವರ ಅಭಿನಯ ಕೌಶಲ್ಯವನ್ನು ಗಮನಿಸಿ ಅವರ ಚಲನಚಿತ್ರ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಿದರು.ಈ ಚಲನಚಿತ್ರವು ಮೂರು ವರ್ಷಗಳ ತಯಾರಿಕೆಗೆ ತೆಗೆದುಕೊಂಡಿತು ಮತ್ತು ಅಂತಿಮವಾಗಿ 2013 ರಲ್ಲಿ ಬಾಕ್ಸ್ ಆಫೀಸ್ನಲ್ಲಿ ಮಿಶ್ರ ಮತ್ತು ಋಣಾತ್ಮಕ ಪ್ರತಿಕ್ರಿಯೆಯೊಂದಿಗೆ ಬಿಡುಗಡೆಯಾಯಿತು.ಆದಾಗ್ಯೂ ಅವರ ಅಭಿನಯವನ್ನು ಶ್ಲಾಘಿಸಲಾಯಿತು ಮತ್ತು ಅನೇಕ ಚಲನಚಿತ್ರ ತಯಾರಕರು ತಮ್ಮ ಚಿತ್ರಗಳಲ್ಲಿ ಪಾತ್ರಗಳಿಗಾಗಿ ಅವರನ್ನು ಸಂಪರ್ಕಿಸಿದರು.ನಂತರ ಅವರು ಎ. ಪಿ. ಅರ್ಜುನ್ ಅವರ ಚಲನಚಿತ್ರ ರಾಟೆ ಯಲ್ಲಿ ಶೃತಿ ಹರಿಹರನ್ ಜೊತೆ ನಟಿಸಿದರು. ನಂತರ ಪ್ರೀಥಮ್ ಗುಬ್ಬಿಯವರ ಚಲನಚಿತ್ರ ಬಾಕ್ಸರ್ ಅವರಿಗೆ ವ್ಯಾಪಕ ಮೆಚ್ಚುಗೆಯನ್ನು ತಂದಿತು. ನಂತರ 12 ನೇ ಶತಮಾನದ ಶರಣ ಅಲ್ಲಮ ಚಿತ್ರದಲ್ಲಿ ಅಭಿನಯಿಸಿದರು . ಶಿವರಾಜ್ಕುಮಾರ್ ಅಭಿನಯದ ಚಿತ್ರ ಟಗರು ನಲ್ಲಿ ಪ್ರಮುಖ ಖಳನಾಯಕನ ಪಾತ್ರವನ್ನು ಧನಂಜಯ ನಿರ್ವಹಿಸುತ್ತಿದ್ದಾರೆ, ಅವರು ಗುರುಪ್ರಸಾದ್ ರ ಚಿತ್ರ ಎರಡನೆ ಸಲ ಪೂರ್ಣಗೊಳಿಸಿದ್ದಾರೆ.ಮತ್ತು ಪನ್ನಾಗಾಭರಣ ರ ಚಿತ್ರ ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ
ಧನಂಜಯ್ ಅವರ ಅಭಿನಯದ ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]† | ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ |
ವರ್ಷ | ಶೀರ್ಷಿಕೆ | ಪಾತ್ರ | ನಾಯಕ ನಟ | ನಿರ್ದೇಶಕ | ಭಾಷೆ | ಟಿಪ್ಪಣಿಗಳು | ಉಲ್ಲೇಖಗಳು |
---|---|---|---|---|---|---|---|
೨೦೨೧ | ರತ್ನನ್ ಪ್ರಪಂಚ (ಚಲನಚಿತ್ರ) | ರತ್ನಾಕರ | ಧನಂಜಯ್ (ನಟ) | ರೋಹಿತ್ ಪದಕಿ | ಕನ್ನಡ | ಈ ಚಿತ್ರ ಅಮೇಜಾನ್ ಪ್ರೈಂ ಓಟಿಟಿ ಮೂಲಕ ಬಿಡುಗಡೆಯಾಗಿದೆ. | [೨]
|
Sandeep gowda
ಉಲ್ಲೇಖಗಳು
[ಬದಲಾಯಿಸಿ]- ↑ "ಜೆಸ್ಸಿ' ನಟ ಧನಂಜಯ್ ಗೆ ಸ್ಫೂರ್ತಿಯ ಸೆಲೆ ಯಾರು?". kannada.filmibeat.com 1 ಡಿಸೆಂಬರ್ 2018.
- ↑ ರತ್ನನ್ ಪ್ರಪಂಚದ ಬಗ್ಗೆ ಏಷಿಯಾನೆಟ್ ತಾಣದಲ್ಲಿನ ಮಾಹಿತಿ
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಧನಂಜಯ್ ಐ ಎಮ್ ಡಿ ಬಿನಲ್ಲಿ