ವಿಷಯಕ್ಕೆ ಹೋಗು

ನಿರ್ಮಲ್ ವರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿರ್ಮಲ್ ವರ್ಮಾ
ಜನನ(೧೯೨೯-೦೪-೦೩)೩ ಏಪ್ರಿಲ್ ೧೯೨೯
ಶಿಮ್ಲಾ, ಪಂಜಾಬ್, ಬ್ರಿಟಿಷ್ ಭಾರತ
ಮರಣ25 October 2005(2005-10-25) (aged 76)
ನವದೆಹಲಿ, ಭಾರತ
ವೃತ್ತಿಕಾದಂಬರಿಕಾರ, ಬರಹಗಾರ, ಕಾರ್ಯಕರ್ತ, ಅನುವಾದಕ

ನಿರ್ಮಲ್ ವರ್ಮಾ (೩ ಏಪ್ರಿಲ್ ೧೯೨೯ - ೨೫ ಅಕ್ಟೋಬರ್ ೨೦೦೫) ಅವರು ಒಬ್ಬ ಹಿಂದಿ ಬರಹಗಾರ, ಕಾದಂಬರಿಕಾರ, ಕಾರ್ಯಕರ್ತ ಮತ್ತು ಅನುವಾದಕ. ಅವರು ಹಿಂದಿ ಸಾಹಿತ್ಯದ ನೈ ಕಹಾನಿ ಚಳವಳಿಯ ಪ್ರವರ್ತಕರಲ್ಲಿ ಒಬ್ಬರು.[೧] ಅವರ ಮೊದಲ ಕಥಾ ಸಂಗ್ರಹ 'ಪರಿಂದೆ' (ಹಕ್ಕಿಗಳು) ಅನ್ನು ಅವರ ಮೊದಲ ಸಹಿ ಎಂದು ಪರಿಗಣಿಸಲಾಗಿದೆ.[೨]

ಐದು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು ಸಾಹಿತ್ಯದ ವಿವಿಧ ಪ್ರಕಾರಗಳು, ಬರವಣಿಗೆ ಕಥೆ, ಪ್ರವಾಸ ಕಥನಗಳು ಮತ್ತು ಪ್ರಬಂಧಗಳನ್ನು, ಐದು ಕಾದಂಬರಿಗಳು, ಎಂಟು ಸಣ್ಣ-ಕಥೆಗಳ ಸಂಗ್ರಹಗಳು ಮತ್ತು ಪ್ರಬಂಧಗಳು ಮತ್ತು ಪ್ರವಾಸ ಕಥನಗಳು ಸೇರಿದಂತೆ ಒಂಬತ್ತು ಕಾಲ್ಪನಿಕವಲ್ಲದ ಪುಸ್ತಕಗಳನ್ನು ಬರೆದಿದ್ದಾರೆ.[೩]

ಜೀವನಚರಿತ್ರೆ[ಬದಲಾಯಿಸಿ]

ನಿರ್ಮಲ್ ವರ್ಮಾ ಅವರು ೩ ಏಪ್ರಿಲ್ ೧೯೨೯ ರಂದು ಶಿಮ್ಲಾದಲ್ಲಿ ಜನಿಸಿದರು. ಅಲ್ಲಿ ಅವರ ತಂದೆ ಬ್ರಿಟಿಷ್ ಭಾರತ ಸರ್ಕಾರದ ನಾಗರಿಕ ಮತ್ತು ಸೇವೆಗಳ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಎಂಟು ಒಡಹುಟ್ಟಿದವರಲ್ಲಿ ನಿರ್ಮಲ್ ವರ್ಮಾ ಅವರು ಏಳನೇ ಮಗು. ಅವರ ಸಹೋದರರಾದ ರಾಮ್ ಕುಮಾರ್ ಒಬ್ಬ ಭಾರತೀಯ ಕಲಾವಿದ ಮತ್ತು ಬರಹಗಾರರು.[೪] ಅವರು ಬರಹಗಾರ್ತಿಯಾಗಿರುವ ಗಗನ್ ಗಿಲ್ ಅವರನ್ನು ವಿವಾಹವಾದರು.[೫][೬]

ಅವರು ೧೯೫೦ ರ ದಶಕದ ಆರಂಭದಲ್ಲಿ ವಿದ್ಯಾರ್ಥಿಗಳ ಪತ್ರಿಕೆಗೆ ತಮ್ಮ ಮೊದಲ ಕಥೆಯನ್ನು ಬರೆದರು. ಅವರು ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಮಾಸ್ಟರ್ಸ್ ಆಫ್ ಆರ್ಟ್ಸ್ ಅನ್ನು ಪೂರ್ಣಗೊಳಿಸಿದರು. ನಂತರ ಅವರು ದೆಹಲಿಯಲ್ಲಿ ಬೋಧನೆ ಮಾಡಲು ಪ್ರಾರಂಭಿಸಿದರು. ವಿವಿಧ ಸಾಹಿತ್ಯ ನಿಯತಕಾಲಿಕೆಗಳಿಗೆ ಬರೆಯಲು ಪ್ರಾರಂಭಿಸಿದರು.

ಅವರ ವಿದ್ಯಾರ್ಥಿ ದಿನಗಳಲ್ಲಿಯೂ ಅವರ ಕ್ರಿಯಾಶೀಲತೆಯ ಹರಿವು ಗೋಚರಿಸಿತು. ೧೯೪೭-೪೮ ರಲ್ಲಿ, ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕಾರ್ಡ್ ಹೋಲ್ಡಿಂಗ್ ಸದಸ್ಯರಾಗಿದ್ದರು ಸಹ ಅವರು ದೆಹಲಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಬೆಳಗಿನ ಪ್ರಾರ್ಥನಾ ಸಭೆಗಳಿಗೆ ಹಾಜರಾಗುತ್ತಿದ್ದರು. ೧೯೫೬ ರಲ್ಲಿ ಹಂಗೇರಿಯ ಮೇಲೆ ಸೋವಿಯತ್ ಆಕ್ರಮಣದ ನಂತರ ಅವರು ರಾಜೀನಾಮೆಯನ್ನು ನೀಡಿದರು.

ಅವರು ೧೦ ವರ್ಷಗಳ ಕಾಲ ಪ್ರಾಗ್‌ನಲ್ಲಿ ಉಳಿದುಕೊಂಡರು. ಅಲ್ಲಿನ ಒರಿಯೆಂಟಲ್ ಇನ್ಸ್ಟಿಟ್ಯೂಟ್ ಅವರು ಕಾರೇಲ್ ಚಾಪೆಕ್, ಮಿಲಾನ್ ಕುಂಡೇರ, ಬೊಹುಮಿಲ್ ಹ್ರಬಲ್ ಹಾಗೂ ಇತರ ಆಧುನಿಕ ಚೆಕ್ ಬರಹಗಾರರ ಕೃತಿಗಳನ್ನು ಹಿಂದಿಯಲ್ಲಿ ಭಾಷಾಂತರಿಸುವ ಕಾರ್ಯಕ್ರಮವನ್ನು ಆರಂಭಿಸಲು ನಿರ್ಮಲ್ ವರ್ಮಾ ಅವರನ್ನು ಆಹ್ವಾನಿಸಿದರು. ಅವರು ಜೆಕ್ ಭಾಷೆಯನ್ನೂ ಸಹ ಕಲಿತರು.

ಅವರು ಪ್ರಾಗ್‌ನಲ್ಲಿದ್ದಾಗ ಯುರೋಪಿನಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದರು. ಚೀರೋನ್ ಪರ್ ಚಾಂದಿನಿ (೧೯೬೨), ಹರ್ ಬರಿಶ್ ಮೇ (೧೯೭೦) ಮತ್ತು ಧುಂಡ್ ಸೆ ಉತ್ತಿ ಧುನ್ ಸೇರಿದಂತೆ ಏಳು ಪ್ರವಾಸ ಕಥನಗಳು ಬರೆದರು. ಪ್ರೇಗ್‌ನಲ್ಲಿನ ಅವರ ವಿದ್ಯಾರ್ಥಿ ದಿನಗಳನ್ನು ಆಧರಿಸಿದ ಅವರ ಮೊದಲ ಕಾದಂಬರಿ ವೆ ದಿನ್ (ಆ ದಿನಗಳು) (೧೯೬೪) ಅನ್ನು ಬರೆದರು. ವರ್ಮಾ ಅವರ ಕೆಲಸದ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ರಾಮ್ ಪ್ರಕಾಶ್ ದ್ವಿವೇದಿಯವರು ಪ್ರಸ್ತುತಪಡಿಸಿದರು.[೭]

೧೯೮೦-೮೩ ರಿಂದ, ವರ್ಮಾ ಅವರು ಭೋಪಾಲ್‌ನ ಭಾರತ್ ಭವನದಲ್ಲಿ ನಿರಾಲಾ ಸೃಜನಶೀಲ ಬರವಣಿಗೆಯ ಪೀಠದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೮೮-೯೦ ರಲ್ಲಿ ಅವರು ಶಿಮ್ಲಾದಲ್ಲಿ ಯಶಪಾಲ್ ಕ್ರಿಯೇಟಿವ್ ರೈಟಿಂಗ್ ಚೇರ್‌ನ ನಿರ್ದೇಶಕರಾಗಿದ್ದರು.[೨] ಅವರ ಕಥೆಯನ್ನು ಆಧರಿಸಿದ ಕುಮಾರ್ ಶಹಾನಿ ನಿರ್ದೇಶಿಸಿದ ಮಾಯಾ ದರ್ಪಣ್ (೧೯೭೨) ಎಂಬ ಚಲನಚಿತ್ರಕ್ಕಾಗಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೮]

ನಿರ್ಮಲ್ ವರ್ಮಾ ಅವರು ೨೫ ಅಕ್ಟೋಬರ್ ೨೦೦೫ ರಂದು ನವದೆಹಲಿಯಲ್ಲಿ ನಿಧನರಾದರು.

ಪ್ರಶಸ್ತಿಗಳು[ಬದಲಾಯಿಸಿ]

  • ೧೯೯೯ ರಲ್ಲಿ ಜ್ಞಾನಪೀಠ ಪ್ರಶಸ್ತಿ, ಭಾರತೀಯ ಬರಹಗಾರರಿಗೆ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ.
  • ಏಳು ಸಣ್ಣ ಕಥೆಗಳ ಸಂಗ್ರಹವಾದ 'ಕವ್ವೆ ಔರ್ ಕಲಾ ಪಾನಿ' ೧೯೮೫ ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.[೯]
  • ೨೦೦೨ ರಲ್ಲಿ ಪದ್ಮಭೂಷಣ.[೧೦]
  • ಜ್ಞಾನಪೀಠ ಟ್ರಸ್ಟ್‌ನ "ಮೂರ್ತಿದೇವಿ ಪ್ರಶಸ್ತಿ" ಅವರ ಪ್ರಬಂಧಗಳ ಪುಸ್ತಕ, ಭಾರತ್ ಔರ್ ಯುರೋಪ್: ಪ್ರತಿಶ್ರುತಿ ಕೆ ಕ್ಷೇತ್ರ (೧೯೯೧).
  • ರಿಪೋರ್ಟೇಜ್ ಕಲೆಗಾಗಿ ಜ್ಯೂರಿ ಸದಸ್ಯ ಲೆಟ್ರೆ ಯುಲಿಸೆಸ್ ಪ್ರಶಸ್ತಿ -೨೦೦೩.[೨]
  • ಅವರು ಏಷ್ಯನ್ ಸ್ಟಡೀಸ್‌ಗಾಗಿ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್‌ನ ಸಹವರ್ತಿಯಾಗಿದ್ದರು.
  • ಲೈಬ್ರರಿ ಆಫ್ ಕಾಂಗ್ರೆಸ್ ತನ್ನ ಸಂಗ್ರಹದಲ್ಲಿರುವ ನಿರ್ಮಲ್ ವರ್ಮಾ ಅವರ ಹೆಚ್ಚಿನ ಕೃತಿಗಳನ್ನು ಪಟ್ಟಿಮಾಡಿದೆ.
  • ಜೀವಮಾನದ ಸಾಧನೆಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ, ೨೦೦೫ ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್.[೧೧]
  • ೧೯೮೮ ರಲ್ಲಿ ಲಂಡನ್‌ನಲ್ಲಿರುವ ರೀಡರ್ಸ್ ಇಂಟರ್‌ನ್ಯಾಶನಲ್‌ನಿಂದ ಅವರ ಪುಸ್ತಕ "ದಿ ವರ್ಲ್ಡ್ ಎಲ್ಸ್‌ವೇರ್" ಪ್ರಕಟಣೆಯ ಮೇಲೆ ಬಿಬಿಸಿ(BBC) ಚಾನೆಲ್ ಫೋರ್ ಅವರ ಜೀವನ ಮತ್ತು ಕೃತಿಗಳ ಮೇಲೆ ಚಲನಚಿತ್ರವನ್ನು ಪ್ರಸಾರ ಮಾಡಿತು.[೨]
  • ೨೦೦೫ ರಲ್ಲಿ ಚೆವಲಿಯರ್ ಡೆ ಎಲ್'ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟ್ರೆಸ್ (ಫ್ರಾನ್ಸ್)

ನೈ ಕಹಾನಿ ಚಳುವಳಿ[ಬದಲಾಯಿಸಿ]

ನಿರ್ಮಲ್ ವರ್ಮಾ, ಮೋಹನ್ ರಾಕೇಶ್, ಭಿಷಮ್ ಸಾಹ್ನಿ, ಕಮಲೇಶ್ವರ್, ಅಮರಕಾಂತ್, ರಾಜೇಂದ್ರ ಯಾದವ್ ಮತ್ತು ಇತರರೊಂದಿಗೆ ಸೇರಿ, ಹಿಂದಿ ಸಾಹಿತ್ಯದಲ್ಲಿ ನೈ ಕಹಾನಿಯ (ಹೊಸ ಸಣ್ಣ ಕಥೆ) ಸ್ಥಾಪಕರಾಗಿದ್ದಾರೆ.

ನಿರ್ಮಲ್ ವರ್ಮಾ ಅವರ ಸಣ್ಣ ಕಥೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಕಥೆಯಾದ 'ಪರಿಂಡೆ' (ಹಕ್ಕಿಗಳು) (೧೯೫೯) ಹಿಂದಿ ಸಾಹಿತ್ಯದಲ್ಲಿ ನೈ ಕಹಾನಿ ಚಳವಳಿಯ ಪ್ರವರ್ತಕ ಎಂದು ಭಾವಿಸಲಾಗಿದೆ.[೪] ಅಂಧೆರೆ ಮೇ, ದೇಧ್ ಇಂಚ್ ಉಪರ್ ಮತ್ತು ಕವ್ವೆ ಔರ್ ಕಾಲಾ ಪಾನಿ ಇವುಗಳು ನಿರ್ಮಲ್ ವರ್ಮಾ ಅವರ ಇತರ ಕಥೆಗಳು. ನಿರ್ಮಲ್ ವರ್ಮಾ ಅವರ ಕೊನೆಯ ಕಥೆಯು "ನಯ ಜ್ಞಾನೋದಯ" ಆಗಸ್ಟ್ ೨೦೦೫ ರ ಸಂಚಿಕೆಯಲ್ಲಿ "ಅಬ್ ಕುಛ್ ನಹಿನ್" ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಯಿತು.

ರಾಮಕುಮಾರ್ (ಪ್ರಸಿದ್ಧ ಕಲಾವಿದ ಮತ್ತು ವರ್ಮಾ ಅವರ ಸಹೋದರ) ಅವರಿಗೆ ಬರೆದ ಪತ್ರಗಳ ಸಂಗ್ರಹವನ್ನು ಭಾರತೀಯ ಜ್ಞಾನಪೀಠವು "ಪ್ರಿಯಾ ರಾಮ್" (ಡಿಯರ್ ರಾಮ್) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದೆ. ಅವರ ಪುಸ್ತಕಗಳನ್ನು ಇಂಗ್ಲಿಷ್, ರಷ್ಯನ್, ಜರ್ಮನ್, ಐಸ್ಲ್ಯಾಂಡಿಕ್, ಪೋಲಿಷ್, ಇಟಾಲಿಯನ್ ಮತ್ತು ಫ್ರೆಂಚ್ ಮುಂತಾದ ಹಲವಾರು ಯುರೋಪಿಯನ್ ಭಾಷೆಗಳಿಗೆ ಅನುವಾದಿಸಲಾಗಿದೆ.

ಪ್ರಮುಖ ಕೃತಿಗಳು[ಬದಲಾಯಿಸಿ]

ಕಾದಂಬರಿಗಳು

  • 'ವೆ ದಿನ್' - ಅವರ ಮೊದಲ ಕಾದಂಬರಿ, ಪ್ರೇಗ್, ಹಿಂದಿನ ಜೆಕೊಸ್ಲೊವಾಕಿಯಾ (೧೯೬೪),
  • ಅಂಟಿಮಾ ಅರಣ್ಯ (ದಿ ಲಾಸ್ಟ್ ವೈಲ್ಡರ್ನೆಸ್)
  • ಏಕ್ ಚಿತ್ತಾರ ಸುಖ (೧೯೭೯)
  • ಲಾಲ್ ತೀನ್ ಕಿ ಛತ್ (ಕೆಂಪು ತವರ ಛಾವಣಿ), (೧೯೭೪)
  • ರಾತ್ ಕಾ ರಿಪೋರ್ಟರ್ (೧೯೮೯)

ಕಥಾ ಸಂಕಲನಗಳು

  • 'ಪರಿಂಡೆ' (ಬರ್ಡ್ಸ್) (೧೯೫೯)
  • ಜಲತಿ ಜಾರಿ (೧೯೬೫)
  • ಲಂಡನ್ ಕಿ ರಾತ್
  • ಪಿಚ್ಲಿ ಗಾರ್ಮಿಯೋನ್ ಮೇ (೧೯೬೮)
  • ಅಕಾಲ ತ್ರಿಪಾಠಿ
  • ದೇಧ್ ಇಂಚ್ ಉಪಾರ್
  • ಬೀಚ್ ಬಹಾಸ್ ಮೇ (೧೯೭೩)
  • ಮೇರಿ ಪ್ರಿಯಾ ಕಹಾನಿಯನ್ (೧೯೭೩)
  • ಪ್ರತಿನಿಧಿ ಕಹಾನಿಯನ್ (೧೯೮೮)
  • ಕವ್ವೆ ಔರ್ ಕಾಲಾ ಪಾನಿ (೧೯೮೩)
  • ಸೂಖಾ ಔರ್ ಅನ್ಯಾ ಕಹಾನಿಯಾನ್ (೧೯೯೫).
  • ಧಗೆ (೨೦೦೩)

ವರದಿ ಮತ್ತು ಪ್ರವಾಸ ಕಥನಗಳು

  • ಚೀರೋನ್ ಪರ್ ಚಾಂದಿನಿ (೧೯೬೨)
  • ಹರ್ ಬಾರಿಶ್ ಮೇ (೧೯೮೯)(ಪ್ರತಿ ಮಳೆಯಲ್ಲಿ)

ನಾಟಕಗಳು

  • ಟೀನ್ ಏಕಾಂತ್ (೧೯೭೬)

ಪ್ರಬಂಧಗಳು ಮತ್ತು ಸಾಹಿತ್ಯ ವಿಮರ್ಶೆ

  • ಶಬ್ದ ಔರ್ ಸ್ಮೃತಿ (೧೯೭೬) – ಸಾಹಿತ್ಯ ಪ್ರಬಂಧ
  • ಕಲಾ ಕಾ ಜೋಖಿಮಾ (೧೯೮೧) – ೨೦ನೇ ಶತಮಾನದಲ್ಲಿ ಭಾರತೀಯ ಕಲೆಗಳ ತನಿಖೆ
  • ಧುಂಧಾ ಸೇ ಉತಾತಿ ಧುನ್ – ಹಿಂದಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಡೈರಿಯಂತೆ ಬರೆಯಲಾಗಿದೆ. – ಸಾಹಿತ್ಯ ವಿಮರ್ಶೆ
  • ಧಲನ್ ಸೆ ಉತಾರಾಟೆ ಹುಯೆ – ಸಾಹಿತ್ಯ ವಿಮರ್ಶೆ
  • ಭಾರತ್ ಔರ್ ಯುರೋಪ್: ಪ್ರತಿಶ್ರುತಿ ಕೆ ಕ್ಷೇತ್ರ (೧೯೯೧) – ಪ್ರಬಂಧ.

ಉಲ್ಲೇಖಗಳು[ಬದಲಾಯಿಸಿ]

  1. Ode to Nirmal Verma The Hindu, 6 November 2005.
  2. ೨.೦ ೨.೧ ೨.೨ ೨.೩ Nirmal Verma, India. Lettre-ulysses-award.org. Retrieved on 22 May 2016.
  3. AUTHOR SPEAKS:"I cater to several layers of sensibilities" The Tribune, 10 March 2002.
  4. ೪.೦ ೪.೧ 'He was the modern voice of Indian genius' Obituary, Rediff.com, 26 October 2005
  5. दुबे, प्रियंका (3 ಏಪ್ರಿಲ್ 2018). "निर्मल वर्मा ने इंदिरा को बताया था 'साक्षात बुराई'". BBC News हिंदी. Retrieved 4 ಏಪ್ರಿಲ್ 2018.
  6. "Gagan Gill | The Caravan".
  7. Dwivedi, Ram Prakash (16 ಅಕ್ಟೋಬರ್ 2020). "CCGS International Journal". journal.globalculturz.org. Retrieved 17 ಅಕ್ಟೋಬರ್ 2020.
  8. ನಿರ್ಮಲ್ ವರ್ಮ ಐ ಎಮ್ ಡಿ ಬಿನಲ್ಲಿ
  9. Sahitya Akademi Awards. sahitya-akademi.org
  10. "Padma Awards" (PDF). Ministry of Home Affairs, Government of India. 2015. Retrieved 21 ಜುಲೈ 2015.
  11. Fellowships Archived 30 June 2007 ವೇಬ್ಯಾಕ್ ಮೆಷಿನ್ ನಲ್ಲಿ. Sahitya Akademi Official website.

ಬಾಹ್ಯ ಕೊಂಡಿಗಳು[ಬದಲಾಯಿಸಿ]