ಖರಹರಪ್ರಿಯ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಖರಹರಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೨ನೇ ರಾಗ. ಅಸಂಪೂರ್ಣ ಮೇಳ ಪದ್ಧತಿಯ ಪ್ರಕಾರ ಶ್ರೀರಾಗವು ೨೨ನೇ ಮೇಳವಾಗಿತ್ತು. ಈ ಪದ್ಧತಿಯನ್ನು ಅನುಸರಿಸಿ ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು ಕೃತಿ ರಚಿಸಿರುವ ಕಾರಣ ಖರಹರಪ್ರಿಯ ರಾಗದಲ್ಲಿ ಇವರ ರಚನೆಗಳಿಲ್ಲ. ಈ ರಾಗಕ್ಕೆ ಮೊದಲು ಹರಪ್ರಿಯ ಎಂಬ ಹೆಸರಿತ್ತು. ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ ಖರ ಎಂಬ ಮುಂಪ್ರತ್ಯಯವನ್ನು ಸೇರಿಸಿ ಖರಹರಪ್ರಿಯ ಎಂಬ ಹೆಸರು ರೂಢಿಯಲ್ಲಿದೆ.ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಇದು ಕಾಫಿ ಥಾಟ್‍ಗೆ ಸಮಾನವಾಗಿದೆ.
ರಾಗ ಲಕ್ಷಣ ಮತ್ತು ಸ್ವರೂಪ
[ಬದಲಾಯಿಸಿ]ಇದು ನಾಲ್ಕನೆಯ ವೇದ ಚಕ್ರದ ನಾಲ್ಕನೆಯ ರಾಗವಾವಿದೆ.ಈ ರಾಗವನ್ನು ಎಲ್ಲ ಕಾಲದಲ್ಲಿಯೂ ಹಾಡಬಹುದಾಗಿದ್ದು, ರಂಜನಿಯ ರಾಗವಾಗಿದೆ.
ಇದರ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೧ ಪ ದ೨ ನಿ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೨ ರಿ೨ ಸ
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗದಲ್ಲಿ ಅತ್ಯಂತ ಜನಪ್ರಿಯ ರಾಗಗಳಾದ ಅಭೇರಿ, ಅಭೋಗಿ, ಕಾನಡ, ಕಾಪಿ, ಮಧ್ಯಮಾವತಿ, ರೀತಿಗೌಳ, ಶುದ್ಧ ಧನ್ಯಾಸಿ, ಶ್ರೀರಂಜನಿ ಮತ್ತು ಶಿವರಂಜನಿ ಜನ್ಯವಾಗಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಈ ರಾಗದಲ್ಲಿರುವ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ನೀ ಸಮಾನಮೆವರು | ತ್ಯಾಗರಾಜರು | ||
ಕೃತಿ | ಚಕ್ಕನಿ ರಾಜ ಮಾರ್ಗಮು | ತ್ಯಾಗರಾಜರು | ||
ಕೃತಿ | ಗಾನ ಸುಧಾ ರಸ | ಮೈಸೂರು ವಾಸುದೇವಾಚಾರ್ಯರು |
ಉಲ್ಲೇಖಗಳು
[ಬದಲಾಯಿಸಿ]1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.