ಸಿಂಹೇಂದ್ರಮಧ್ಯಮ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಸಿಂಹೇಂದ್ರಮಧ್ಯಮ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೭ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಸುಮದ್ಯುತಿ ಎಂದು ಹೆಸರಿಸಿದ್ದಾರೆ.[೧][೨]
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]
ಇದು ಹತ್ತನೆಯ ದಿಸಿ ಚಕ್ರದ ಮೂರನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಗೊ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧ ನಿ [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೨ ಪ ದ೧ ನಿ೩ ಸ
ಅವರೋಹಣ ಸ ನಿ೩ ದ೧ ಪ ಮ೨ ಗ೨ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕಾಕಲಿ ನಿಷಾಧ.ಇದು ೨೧ನೆಯ ಮೇಳಕರ್ತ ರಾಗವಾದ ಕೀರ್ವಾಣಿ
ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಮುತ್ತಯ್ಯ ಭಾಗವತರ್ ಬಳಕೆಗೆ ತಂದ ರಾಗ ವಿಜಯಸರಸ್ವತಿ ಹೆಚ್ಚಾಗಿ ಕಛೇರಿಗಳಲ್ಲಿ ಹಾಡಲ್ಪಡುತ್ತದೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಸಿಂಹೇಂದ್ರಮಧ್ಯಮ ರಾಗದಲ್ಲಿ ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ.
- ನೀದು ಚರಣಮುಲೆ-ತ್ಯಾಗರಾಜ
- ಕಾಮಾಕ್ಷಿ ಕಾಮಕೋಟಿ ಪೀಠ ವಾಸಿನಿ - ಮುತ್ತುಸ್ವಾಮಿ ದೀಕ್ಷಿತ
- ಪಾಮರಜನಪಾಲಿನಿ- ಮುತ್ತುಸ್ವಾಮಿ ದೀಕ್ಷಿತ
- ಆಶೈಂಧದಮ್ ಮಾಯಿಲ್ ಒಂಡ್ರು - ಒಟ್ಟುಕ್ಕಾಡು ವೆಂಕಟ ಕವಿ
- ನಿನ್ನೇ ನಮ್ಮಿತಿ ನಯ್ಯ - ಮೈಸೂರು ವಾಸುದೇವಾಚಾರ್ಯ
- ಇನ್ನುಂ ಒರುತಾರಮ್- ಮುತ್ತು ತಾಂಡವರ್
- ಅಯ್ಯಪ್ಪ- ಕೆ.ಜೆ.ಜೇಸುದಾಸ್
- ಉಣ್ಣಯಲ್ಲಾಲ್ ವೀರೇ ಗತಿ- ಕೋಟೀಶ್ವರ ಅಯ್ಯರ್
- ರಾಮ ರಾಮ ಗುಣ ಸೀಮ - ಸ್ವಾತಿ ತಿರುನಾಳ್
- ಮರಕತ ಸಿಂಹಾಸನ- ಎಂ. ಬಾಲಮುರಳಿ ಕೃಷ್ಣ
- "ಇಹ ಪರಮ್ ಯೆನ್ನುಂ"- ಮಹಾ ವೈದ್ಯನಾಥ ಅಯ್ಯರ್
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ಸಿಂಹೇಂದ್ರಮಧ್ಯಮ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಅವುಗಳು ಮಾಯಮಾಳವಗೌಳ ಮತ್ತು ರಸಿಕಪ್ರಯ
ಉಲ್ಲೇಖಗಳು
[ಬದಲಾಯಿಸಿ]