ವಿಷಯಕ್ಕೆ ಹೋಗು

ಹನುಮತೋಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಹನುಮತೋಡಿ ಅಥವಾ ತೋಡಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಎಂಟನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಜನತೋಡಿ ಎಂದು ಹೆಸರಿಸಿದ್ದಾರೆ.[][] ಇದು ಒಂದು ಕ್ಲಿಷ್ಟಕರವಾದ ರಾಗವಾಗಿದ್ದು,ಕಛೇರಿಗಳಲ್ಲಿ ಹೆಚ್ಚಾಗಿ ಹಾಡಲ್ಪಡುತ್ತದೆ.
ಕರ್ನಾಟಕ ಸಂಗೀತ ಪದ್ಧತಿಯ ತೋಡಿ ರಾಗವು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ತೋಡಿ (ಥಾಟ್)ಗಿಂತ ಭಿನ್ನವಾಗಿದೆ.ಇದರ ಸಮಾನವಾದ ಹಿಂದುಸ್ತಾನಿ ರಾಗವೆಂದರೆ ಭೈರವಿ ಥಾಟ್.[] ಹಿಂದುಸ್ತಾನಿ ಪದ್ಧತಿಯ ತೋಡಿ ರಾಗದ ಸಮಾನ ಕರ್ನಾಟಕ ಸಂಗೀತ ಪದ್ಧತಿಯ ರಾಗ ಶುಭಪಂತುರಾವಳಿ ಆಗಿರುತ್ತದೆ.[][]

ರಾಗ ಲಕ್ಷಣ ಮತ್ತು ಸ್ವರೂಪ

[ಬದಲಾಯಿಸಿ]
Todi scale with shadjam at C

ಇದು ದ್ವಿತೀಯ "ನೇತ್ರ" ಚಕ್ರದ ಎರಡನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೨ ಮ೦ ಪ ದ೧ ನಿ೨ ಸ
ಅವರೋಹಣ ಸ ನಿ೨ ದ೧ ಪ ಮ೧ ಗ೨ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.

ಜನ್ಯ ರಾಗಗಳು

[ಬದಲಾಯಿಸಿ]

ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ಕೆಲವು ಅಸಾವರಿ,ಭೂಪಾಲಂ,ಧನ್ಯಾಸಿ ಮತ್ತು ಪುನ್ನಗವರಾಳಿ ಹೆಚ್ಚು ಜನಪ್ರಿಯವಾಗಿವೆ. 1 ಜನತೋಡಿ .ಸ ರಿ೧ ಗ೨ ಮ ಪ ದ೧ ನಿ೨ ಸ ಸ ನಿ೨ ದ೧ ಪ ಮ ಗ೨ ರಿ೧ ಸ 2 ಅಮೃತ ಧನ್ಯಾಸಿ .ಸ ರಿ೧ ಗ೨ ಮ೧ ಪ ನಿ೨ ಸ ಸ ನಿ೨ ಪ ಮ೧ ಗ೨ ರಿ೧ ಸ 3 ಅಸಾವೇರಿ. ಸ ರಿ೧ ಮ೧ ಪ ದ೧ ಸ ಸ ನಿ೨ ಸ ಪ ದ೧ ಮ೧ ಪ ರಿ೧ ಗ೨ ರಿ೧ ಸ 4 ಭಾನುಚಂದ್ರಿಕ ಸ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೧ ಸ 5 ಭದ್ರತೋಡಿ .ಸ ರಿ೧ ಗ೨ ಮ೧ ದ೧ ಸ ಸ ನಿ೨ ದ೧ ಪ ಗ೨ ಸ 6 ಭೂಪಾಳ ಸ ರಿ೧ ಗ೨ ಪ ದ೧ ಸ ಸ ದ೧ ಪ ಗ೨ ರಿ೧ ಸ 7 ಚಂದ್ರಿಕತೋಡಿ ಸ ಗ೨ ಮ೧ ಪ ದ೧ ಸ ಸ ದ೧ ಪ ಮ೧ ಗ೨ ಸ 8 ದೇಶಿಕತೋಡಿ. ಸ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ 9 ಧನ್ಯಾಸಿ. ಸ ಗ೨ ಮ೧ ಪ ನಿ೨ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ 10 ದಿವ್ಯಮಾಲತಿ. ಸ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ಸ 11 ಘಂಟ. ಸ ಗ೨ ರಿ೨ ಮ೧ ಪ ನಿ೨ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ 12 ಕಲಾಸಾವೇರಿ. ಸ ರಿ೧ ಗ೨ ಪ ನಿ೨ ಸ ಸ ನಿ೨ ಪ ಗ೨ ರಿ೧ ಸ 13 ಕನಕಸಾವೇರಿ. ಸ ರಿ೧ ಮ೧ ಪ ದ೧ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ 14 ನಾಗವರಾಳಿ. ಸ ರಿ೧ ಗ೨ ಮ೧ ಪ ಮ೧ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ 1 5 ಪ್ರಭುಪ್ರಿಯ. ಸ ಗ೨ ಮ೧ ಪ ದ೧ ಸ ಸ ದ೧ ಪ ಮ೧ ಗ೨ ಸ 16 ಪುನ್ನಾಗತೋಡಿ .ನಿ೧ ಸ ರಿ೧ ಗ೨ ಮ೧ ಪ ಪ ಮ೧ ಗ೨ ರಿ೧ ಸ ನಿ೨ ದ೧ 17 ಪುನ್ನಾಗವರಾಳಿ .ನಿ೨ , ಸ ರಿ೧ ಗ೨ ಮ೧ ಪ ದ೧ ನಿ೨ ನಿ೨ ದ೧ ಪ ಮ೧ ಗ೨ ರಿ೧ ಸ ನಿ೨ 18 ಶ್ರವಣಮಲ್ಲಿಕ. ಸ ಗ೨ ಮ೧ ಪ ದ೧ ನಿ೨ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ 19 ಸೌಜನ್ಯ. ಸ ರಿ೧ ಮ೧ ದ೧ ಸ ಸ ದ೧ ಮ೧ ರಿ೧ ಸ 20 ಶುದ್ಧ ಸೀಮಂತಿನಿ. ಸ ರಿ೧ ಗ೨ ಮ೧ ಪ ದ೧ ಸ ಸ ದ೧ ಪ ಮ೧ ಗ೨ ರಿ೧ ಸ 22 ಶುದ್ಧ ತೋಡಿ. ಸ ರಿ೧ ಗ೨ ಮ೧ ದ೧ ನಿ೨ ಸ ಸ ನಿ೨ ದ೧ ಮ೧ ಗ೨ ರಿ೧ ಸ 23 ಸ್ವರ್ಣಮಲ್ಲಿ. ಸ ಗ೨ ಮ೧ ಪ ದ೧ ನಿ೧ ಸ ಸ ನಿ೨ ದ೧ ಪ ಮ೧ ಗ೨ ರಿ೧ ಸ

ಜನಪ್ರಿಯ ರಚನೆಗಳು

[ಬದಲಾಯಿಸಿ]

ಈ ರಾಗದಲ್ಲಿ ಹಲವಾರು ಜನಪ್ರಿಯ ರಚನೆಗಳಿದ್ದು ಕಛೇರಿಗಳಲ್ಲಿ ಹಾಗೂ ಇತೆರೆಡೆ ಹಾಡಲ್ಪಡುತ್ತವೆ. ತಮಿಳು ಭಾಷೆಯ ತಾಯೇ ಯಶೋದಾ, ಪುರಂದರದಾಸ ಏನು ಧನ್ಯಳೋ ಲಕುಮಿ, ಮುತ್ತುಸ್ವಾಮಿ ದೀಕ್ಷಿತಶ್ರೀ ಕೃಷ್ಣ ಭಜ ಮಾನಸ ತ್ಯಾಗರಾಜನೀ ವಂಟಿ ಧೈವಮು ಹೆಚ್ಚು ಜನಪ್ರಿಯ ರಚನೆಗಳು. ಹೆಚ್ಚಿನ ಎಲ್ಲಾ ವಾಗ್ಗೇಯಕಾರರು ಈ ರಾಗದಲ್ಲಿ ಕೃತಿ ರಚನೆ ಮಾಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Ragas in Carnatic music by Dr. S. Bhagyalekshmy, Pub. 1990, CBH Publications
  2. ೨.೦ ೨.೧ Raganidhi by P. Subba Rao, Pub. 1964, The Music Academy of Madras

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಯೂ ಟ್ಯೂಬ್ ನಲ್ಲಿ ತೋಡಿರಾಗ,ಸುಬ್ಬು ಲಕ್ಶ್ಮಿಯವರ ಗಾಯನ