ರಿಷಭಪ್ರಿಯ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ರಿಷಭಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೨ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ರತಿಪ್ರಿಯ ಎಂದು ಹೆಸರಿಸಿದ್ದಾರೆ.[೧][೨] .
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]ಇದು ಹನ್ನೊಂದನೆಯ ರುದ್ರ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಶ್ರೀ ನೆನಪಿನ ನುಡಿಕಟ್ಟು:ಸ ರಿ ಗು ಮಿ ಪ ಧ ನಿ [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೩ ಮ೨ ಪ ದ೧ ನಿ೨ ಸ
ಅವರೋಹಣ ಸ ನಿ೨ ದ೧ ಪ ಮ೨ ಗ೩ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೨೫ನೆಯ ಮೇಳಕರ್ತ ರಾಗವಾದ ಚಾರುಕೇಶಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ರಿಷಭಪ್ರಿಯ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು
- ಗಾನ ನಯ ದೇಶಿಕ- ಕೋಟೀಶ್ವರ ಐಯ್ಯರ್
- ಮಾರ ರತಿಪ್ರಿಯಮ್- ಮುತ್ತುಸ್ವಾಮಿ ದೀಕ್ಷಿತರು
- ನಂದೀಶಮ್ ವಂದೇ- ಎಂ. ಬಾಲಮುರಳಿ ಕೃಷ್ಣ
- ಇಂತಾ ಶೋಧನಮುಲಕು- ವೀಣೆ ಶೇಷಣ್ಣ
- ಮಾಹಿಮಾ ದಕ್ಕಿಂಚು- ತ್ಯಾಗರಾಜ
- ಪನ್ನೀರು ಕೈಯನೆ- ಡಿ.ಕೆ.ಪಟ್ಟಮ್ಮಾಳ್
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ರಿಷಭಪ್ರಿಯ ರಾಗಕ್ಕೆ ಅನ್ವಯಿಸಿದಾಗ ಕೋಕಿಲಪ್ರಿಯ ಎಂಬ ಒಂದು ರಾಗ ದೊರೆಯುತ್ತದೆ.
ಉಲ್ಲೇಖಗಳು
[ಬದಲಾಯಿಸಿ]