ಚಿತ್ರಾಂಬರಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಚಿತ್ರಾಂಬರಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೬ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಚತುರಾಂಗಿಣಿ ಎಂದು ಹೆಸರಿಸಿದ್ದಾರೆ.[೧][೨] .
ಲಕ್ಷಣಗಳು
[ಬದಲಾಯಿಸಿ]ಇದು ಹನ್ನೊಂದನೆಯ ರುದ್ರ ಚಕ್ರದ ಆರನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಶಾ ನೆನಪಿನ ನುಡಿಕಟ್ಟು:ಸ ರ ಗು ಮಿ ಪ ಧು ನು [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೩ ಮ೨ ಪ ದ೩ ನಿ೩ ಸ
ಅವರೋಹಣ ಸ ನಿ೩ ದ೩ ಪ ಮ೨ ಗ೩ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಚತುಶೃತಿ ಧೈವತಮತ್ತು ಕಾಕಲಿ ನಿಷಾಧ.ಇದು ೩೦ ನೆಯ ಮೇಳಕರ್ತ ರಾಗವಾದ ನಾಗನಂದಿನಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇದರಲ್ಲಿ ಅಮೃತವರ್ಷಿಣಿ ಜನಪ್ರಿಯ ರಾಗವಾಗಿದೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಚಿತ್ರಾಂಬರಿ ರಾಗದಲ್ಲಿ ಹಲವಾರು ಜನಪ್ರಿಯ ರಚನೆಗಳಿದ್ದು, ಕೆಲವು
- ಶ್ರೀ ರಾಮ ನೆಲಮಿ-ಎಂ. ಬಾಲಮುರಳಿ ಕೃಷ್ಣ
- ಸಾಮಗಾನಲೋಲ- ಕೋಟೀಶ್ವರ ಐಯ್ಯರ್
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ಚಿತ್ರಾಂಬರಿ ರಾಗಕ್ಕೆ ಅನ್ವಯಿಸಿದಾಗ ಮೂರು ರಾಗಗಳು ದೊರೆಯುತ್ತದೆ.ಷಣ್ಮುಖಪ್ರಿಯ,ಶೂಲಿನಿ ಮತ್ತು ಧೇನುಕ.
ಉಲ್ಲೇಖಗಳು
[ಬದಲಾಯಿಸಿ]